Author: KNN IT TEAM

ದೆಹಲಿ: ಹೆಸರಾಂತ ಮಾಜಿ ಒಲಿಂಪಿಕ್ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಪಿಟಿ ಉಷಾ ಅವರು ಇಂದು ರಾಜ್ಯಸಭಾ ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಖ್ಯಾತ ಸಂಯೋಜಕ ಇಳಯರಾಜ, ಚಿತ್ರಕಥೆಗಾರ ವಿ ವಿಜಯೇಂದ್ರ ಪ್ರಸಾದ್ ಮತ್ತು ಆಧ್ಯಾತ್ಮಿಕ ನಾಯಕ ವೀರೇಂದ್ರ ಹೆಗ್ಗಡೆ ಅವರೊಂದಿಗೆ ಉಷಾ ಅವರನ್ನು ಸರ್ಕಾರವು ಸಂಸತ್ತಿನ ಮೇಲ್ಮನೆಗೆ ನಾಮನಿರ್ದೇಶನ ಮಾಡಿದ್ದು, ದಕ್ಷಿಣ ಭಾರತಕ್ಕೆ ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಭಾವದ ಭಾಗವಾಗಿ ಕಂಡುಬಂದಿದೆ. ಉಷಾ ಅವರನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ ಉಷಾ ಭಾರತದ ಅಪ್ರತಿಮ ಕ್ರೀಡಾ ಪಟುಗಳಲ್ಲಿ ಒಬ್ಬರು. https://kannadanewsnow.com/kannada/nagpur-businessman-dies-after-setting-car-with-family-inside-on-fire/ https://kannadanewsnow.com/kannada/monkeypox-detected-in-kerala-high-alert-sounded-at-mangaluru-airport/

Read More

ಮೈಸೂರು : ರಾಜ್ಯ ಕಾಂಗ್ರೆಸ್ ನಲ್ಲಿ ಈಗಾಗಲೇ ಮುಖ್ಯಮಂತ್ರಿ ಕುರ್ಚಿಗೆ ಪೈಪೂಟಿ ಶುರುವಾಗಿದ್ದು, ಈ ನಡುವೆ ಕಾಂಗ್ರೆಸ್ ನ ಮತ್ತೊಬ್ಬ ನಾಯಕರು ನಾನೂ ಮುಖ್ಯಮಂತ್ರಿ ಆಗ್ತೀನಿ ಎಂದು ಹೇಳಿಕೆ ನೀಡಿದ್ದಾರೆ. https://kannadanewsnow.com/kannada/good-news-good-news-for-job-seekers-kpsc-invites-applications-for-the-recruitment-of-assistant-electrical-inspectors/ ಸಿದ್ದರಾಮಯ್ಯ ಅವರ 75 ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವದ ಪೂರ್ವಭಾವಿ ಸಭೆಯ ಭಾಷಣದಲ್ಲಿ ಕಾಂಗ್ರೆಸ್ ನಾಯಕ ಹೆಚ್.ಸಿ.ಮಹಾದೇವಪ್ಪ ಅವರು ಬಾಯಿತಪ್ಪಿ ನಾನೂ ಮುಖ್ಯಮಂತ್ರಿ ಪದ ಬಳಕೆ ಮಾಡಿದ್ದಾರೆ. ನಾನೇ ಮುಂದಿನ ಸಿಎಂ ಎನ್ನುತ್ತ ಭಾಷಣ ಆರಂಭಿಸಿದ್ದಾರೆ. ನಾನೂ ಮುಖ್ಯಮಂತ್ರಿ ಆಗ್ತೇನೆ ಎಂದು ಹೇಳಿದ್ದಾರೆ. ಬಳಿಕ ಎಲ್ಲರೂ ಇದನ್ನೇ ಹೇಳುತ್ತಿದ್ದಾರೆ. ಹೀಗಾಗಿ ನನ್ನ ತಲೆಗೂ ಬಂತು. ಬಾಯಿ ತಪ್ಪಿ ನಾನು ಅದನ್ನು ಹೇಳಿದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

Read More

ಕತಾರ್‌: ಇಲ್ಲಿ ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ಎಂಬಂತಾಗಿದೆ. ಯಾವುದೋ ಒಂದು ನಾಯಿ ಮಗುವನ್ನು ಕಚ್ಚಿತು ಎಂಬ ಕಾರಣಕ್ಕೆ ಸುಮಾರು 29 ನಾಯಿಗಳನ್ನು ಕೊಂದಿದ್ದು, ಇನ್ನಿತರ ನಾಯಿಗಳನ್ನೂ ಗಾಯಗೊಳಿಸಿರುವ ಆಘಾತಕಾರಿ ಘಟನೆ ಕತಾರ್‌ನಲ್ಲಿ ನಡೆದಿದೆ. ಕತಾರ್‌ನ ದೋಹಾದಲ್ಲಿ ವಾಸಿಸುವ ವ್ಯಕ್ತಿಯ ಮಗನ ಮೇಲೆ ನಾಯಿ ದಾಳಿ ಮಾಡಿ ಗಾಯಗೊಳಿಸಿದೆ. ನಂತರ ಎಲ್ಲಾ ನಾಯಿಗಳು ಹತ್ತಿರದ ಆರೈಕೆ ಕೇಂದ್ರಕ್ಕೆ ಪ್ರವೇಶಿಸಿದವು. ಅಷ್ಟರಲ್ಲಿ ಆಯುಧಗಳೊಂದಿಗೆ ಕೇಂದ್ರದೊಳಗೆ ನುಗ್ಗಿದ ಇಬ್ಬರು ವ್ಯಕ್ತಿಗಳು ತಮ್ಮ ಆಯುಧಗಳಿಂದ ಭದ್ರತಾ ಸಿಬ್ಬಂದಿಯನ್ನು ಬೆದರಿಸಿ, ನುಗ್ಗಿ ಅಲ್ಲಿದ್ದ ನಾಯಿಗಳಿಗೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ 29 ಬೀದಿ ನಾಯಿಗಳು ಸಾವನ್ನಪ್ಪಿದ್ದು, ಇತರೆ ನಾಯಿಗಳು ಗಂಭೀರವಾಗಿ ಗಾಯಗೊಂಡಿವೆ. ವಾಸ್ತವವಾಗಿ ಇದು ನಾಯಿ ಆರೈಕೆ ಕೇಂದ್ರವಾಗಿದೆ. ಅಲ್ಲಿ ವಾಸಿಸುವ ಶ್ವಾನಗಳು ಯಾರಿಗೂ ತೊಂದರೆ ಕೊಡುವುದಿಲ್ಲ, ತುಂಬಾ ಸ್ನೇಹಮಯಿಯಾಗಿದ್ದು, ಎಲ್ಲರಿಗೂ ಇಷ್ಟವಾಗುತ್ತಿವೆ ಎಂದು ನೆಟ್ಟಿಗರು ಹಾಗೂ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹೃದಯವಿದ್ರಾವಕ ಘಟನೆಯ ಕುರಿತು ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕೆಂದು…

Read More

ಬೆಂಗಳೂರು:ಉದ್ಯೋಗಾಕಾಂಕ್ಷಿಗಳಿಗೆ ಕೆಪಿಎಸ್ ಸಿ ಸಿಹಿಸುದ್ದಿ ನೀಡಿದ್ದು,  ಮುಖ್ಯ ವಿದ್ಯುತ್ ಪರಿವೀಕ್ಷಣಾಲಯದಲ್ಲಿ ಸಹಾಯಕ ವಿದ್ಯುತ್ ಪರಿವೀಕ್ಷಕರು ಗ್ರೂಪ್ – ‘ಬಿ’ ಹುದ್ದೆಯ ಅಧಿಸೂಚನೆ ಪ್ರಕಟಿಸಲಾಗಿದೆ.  ಮುಖ್ಯ ವಿದ್ಯುತ್ ಪರಿವೀಕ್ಷಣಾಲಯದಲ್ಲಿ ಒಟ್ಟು  30 ಸಹಾಯಕ ವಿದ್ಯುತ್ ಪರಿವೀಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಜುಲೈ 27 2022 ಪ್ರಾರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 23 ಕೊನೆಯ ದಿನವಾಗಿದೆ. ಒಟ್ಟು ಹುದ್ದೆಗಳ ಸಂಖ್ಯೆ : 30 ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ದಿನಾಂಕ: 25/7/2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23/08/2022 ಶುಲ್ಕ ಪಾವತಿಗೆ ಕೊನೆಯ ದಿನಾಂಕ: 24/08/2022 ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: https://kpsc.kar.nic.in/Notification%2018-7-22%20Asst%20Electrical%20Inspector%20in%20CEI.pdf

Read More

ದೆಹಲಿ :   ಬರ್ಮಿಂಗ್ಹ್ಯಾಮ್ ನಗರದಲ್ಲಿ ಸ್ಪರ್ಧಿಸುವ ಮೊದಲು ಭಾರತೀಯ ತಂಡಕ್ಕೆ ಸ್ಫೂರ್ತಿ ನೀಡಲು ಪ್ರಧಾನಿ ನರೇಂದ್ರ ಮೋದಿ ಬುಧವಾರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ತೆರಳುವ ಕ್ರೀಡಾಪಟುಗಳೊಂದಿಗೆ ವರ್ಚುವಲ್ ಆಗಿ ಮಾತನಾಡಿದರು. “ನಿಮ್ಮ ಎಲ್ಲಾ ಸಾಮರ್ಥ್ಯಗಳೊಂದಿಗೆ, ಒತ್ತಡವಿಲ್ಲದೆ ಚೆನ್ನಾಗಿ ಆಟವಾಡಿ. ‘ಕೋಯಿ ನಹಿ ಹೈ ಟಕ್ಕರ್ ಮೇ, ಕ್ಯೂನ್ ಪಡೇ ಹೋ ಚಕ್ಕರ್ ಮೇ’ ಎಂಬ ಮಾತನ್ನು ನೀವು ಕೇಳಿರಬಹುದು, ಆದ್ದರಿಂದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅದೇ ಮನೋಭಾವದಿಂದ ಆಡಿ” ಎಂದು ಪ್ರಧಾನಿ ಮೋದಿ ಭಾರತದ ಕಾಮನ್ವೆಲ್ತ್ ಗೇಮ್ಸ್ 2022 ರ (Commonwealth Games 2022)  ಸಿಡಬ್ಲ್ಯೂಜಿ ತಂಡಕ್ಕೆ ತಿಳಿಸಿದರು. https://twitter.com/ANI/status/1549616487291564034?ref_src=twsrc%5Etfw%7Ctwcamp%5Etweetembed%7Ctwterm%5E1549616487291564034%7Ctwgr%5E%7Ctwcon%5Es1_c10&ref_url=https%3A%2F%2Fwww.indiatoday.in%2Fsports%2Fcommonwealth-games-2022%2Fstory%2Fcommonwealth-games-2022-pm-modi-interacts-with-cwg-bound-indian-contingent-1977674-2022-07-20 ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟದ ಮುಂಬರುವ ಆವೃತ್ತಿಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) 322 ಸದಸ್ಯರ ಬಲಿಷ್ಠ ತಂಡವನ್ನು ಹೆಸರಿಸಿತ್ತು. ಈ ತಂಡದಲ್ಲಿ 315 ಕ್ರೀಡಾಪಟುಗಳು ಮತ್ತು 107 ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿ ಇದ್ದಾರೆ. ಜುಲೈ ೨೮ ರಿಂದ ಆಗಸ್ಟ್ 8 ರವರೆಗೆ ಬ್ರಿಟಿಷ್ ನಗರದಲ್ಲಿ ಕ್ರೀಡಾಕೂಟ ನಡೆಯಲಿದೆ. ಗೋಲ್ಡ್ ಕೋಸ್ಟ್ನಲ್ಲಿ…

Read More

ಕೊಲಂಬೊ : ಶ್ರೀಲಂಕಾ ಸಂಸತ್ ನಲ್ಲಿ ನಡೆದ ಚುನಾವಣೆಯಲ್ಲಿ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರನಿಲ್ ವಿಕ್ರಮ ಸಿಂಘೆ ಆಯ್ಕೆಯಾಗಿದ್ದಾರೆ. ಶ್ರೀಲಂಕಾದ ತೀವ್ರ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಗೋಟಬಯ ರಾಜಪಕ್ಸೆ ರಾಜೀನಾಮೆ ನೀಡಿದ ಬಳಿಕ ಇಂದು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ರನಿಲ್ ವಿಕ್ರಮಸಿಂಘೆ, ದೇಶವು ತುಂಬಾ ಕಠಿಣ ಪರಿಸ್ಥಿತಿಯಲ್ಲಿದೆ, ನಮ್ಮ ಮುಂದೆ ದೊಡ್ಡ ಸವಾಲುಗಳಿವೆ ಎಂದು ಶ್ರೀಲಂಕಾದ ಹೊಸದಾಗಿ ನೇಮಕಗೊಂಡ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಹೇಳಿದ್ದಾರೆ. https://twitter.com/ANI/status/1549654087750152193 https://twitter.com/ANI/status/1549654930092199941

Read More

ಮಂಗಳೂರು:ಕೇರಳದ ಯುವಕನಲ್ಲಿ ಮಂಕಿಪಾಕ್ಸ್ ವೈರಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಮಂಕಿಪಾಕ್ಸ್ ಹೈ ಅಲರ್ಟ್ ಘೋಷಿಸಲಾಗಿದೆ. ಯುವಕ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದು ಕೇರಳದ ಕಣ್ಣೂರಿಗೆ ತೆರಳಿದ್ದನು. https://kannadanewsnow.com/kannada/athiya-shetty-kl-rahuls-wedding-comes-back-will-tie-the-knot-in-january-or-february-next-year/ ಕೇರಳದ ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಸೋಂಕಿತನಿಗೆ ಚಿಕಿತ್ಸೆ ನೀಡಲಾಗಿದೆ. ಸೋಂಕಿತನ ಸಂಪರ್ಕದಲ್ಲಿದ್ದ 34 ಜನರನ್ನು ಜಿಲ್ಲಾಡಳಿತ ಐಸೋಲೇಷನ್ ನಲ್ಲಿ ಇಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ 11 ಹಾಗೂ ಉಡುಪಿಯ 7 ಮಂದಿಯನ್ನು ಐಸೋಲೇಷನ್ ನಲ್ಲಿ ಇಟ್ಟಿದ್ದಾರೆ. ಮಂಗಳೂರು ನಗರದಲ್ಲಿ 10 ಮಂದಿ ಹಾಗೂ ಪುತ್ತೂರಿನ ಒಬ್ಬ ಪ್ರಯಾಣಿಕನನ್ನು ಐಸೋಲೇಷನ್ ನಲ್ಲಿ ಇಟ್ಟಿರುವ ಆರೋಗ್ಯ ಇಲಾಖೆ. ಯುವಕನ ಸಂಪರ್ಕದಲ್ಲಿದ್ದ 16 ಮಂದಿ ಕೇರಳ ಪ್ರಯಾಣಿಕರನ್ನು ಐಸೋಲೇಷನ್ ನಲ್ಲಿ ಇದ್ದಾರೆ. ಐಸೋಲೇಷನ್ ನಲ್ಲಿ ಇದ್ದವರ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಲಾಗಿದೆ. https://kannadanewsnow.com/kannada/athiya-shetty-kl-rahuls-wedding-comes-back-will-tie-the-knot-in-january-or-february-next-year/ ಪ್ರೊಟೊಕಾಲ್ ಪ್ರಕಾರ ಆರೋಗ್ಯ ಇಲಾಖೆ ಅವರು 21 ದಿನ ಐಸೋಲೇಷನ್ ನಲ್ಲಿ ಇಟ್ಟಿದ್ದಾರೆ. ಎಲ್ಲರನ್ನೂ ಅವರ ಮನೆಯಲ್ಲೇ ಐಸೋಲೇಷನ್ ಮಾಡಿದ್ದಾರೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ…

Read More

ಬೆಂಗಳೂರು : ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಹುದ್ದೆ ವಿಚಾರದ ಕುರಿತು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಇನ್ನೂ ಮಗು ಹುಟ್ಟಿಲ್ಲ ಈಗಲೇ ಅಧಿಕಾರಕ್ಕಾಗಿ ಕಿತ್ತಾಟ ಶುರುವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. https://kannadanewsnow.com/kannada/sc-directs-states-to-give-compensation-to-families-of-covid-19-victims-without-wasting-time/ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ಮಾತನಾಡಿದ ಅವರು, ಇನ್ನೂ ಮಗು ಹುಟ್ಟಿಲ್ಲ. ಈಗಲೇ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ಶುರುವಾಗಿದೆ. ಕಾಂಗ್ರೆಸ್ ನವರಿಗೆ ಯಾವ ಶಾಸ್ತ್ರದವರು ಹೇಳಿದ್ದಾರೋ ಗೊತ್ತಿಲ್ಲ. ಅವರಪ್ಪನಾಣೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೆ ಟಾಂಗ್ ಕೊಟ್ಟಿದ್ದಾರೆ. https://kannadanewsnow.com/kannada/athiya-shetty-kl-rahuls-wedding-comes-back-will-tie-the-knot-in-january-or-february-next-year/

Read More

ನವದೆಹಲಿ: ಕೋವಿಡ್ -19ಗೆ ಬಲಿಯಾದವರ ಕುಟುಂಬಗಳಿಗೆ  ಸಮಯ ವ್ಯರ್ಥ ಮಾಡದೆ ಪರಿಹಾರ ನೀಡುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೋಮವಾರ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ. https://kannadanewsnow.com/kannada/bigg-breaking-news-mekedatu-dam-project-sc-adjourns-hearing-to-july-26/ ನ್ಯಾಯಮೂರ್ತಿಗಳಾದ ಎಂ.ಆರ್.ಷಾ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ಪೀಠವು, ಪರಿಹಾರವನ್ನು ಪಡೆಯದ ಹಕ್ಕುದಾರನಿದ್ದರೆ ಅಥವಾ ಅವರ ಮನವಿಯನ್ನು ತಿರಸ್ಕರಿಸಿದ್ದರೆ, ಅವರು ಈ ವಿಷಯಕ್ಕೆ ಸಂಬಂಧಿಸಿದ ಕುಂದುಕೊರತೆ ನಿವಾರಣಾ ಸಮಿತಿಗೆ ದೂರು ಸಲ್ಲಿಸಬಹುದು ಎಂದು ತಿಳಿಸಿದೆ. ಕುಂದುಕೊರತೆ ನಿವಾರಣಾ ಸಮಿತಿಗೆ ಸುಪ್ರೀಂ ಕೋರ್ಟ್ ನ ಕಟ್ಟುನಿಟ್ಟಿನ ಆದೇಶ – ನಾಲ್ಕು ವಾರಗಳಲ್ಲಿ ಪರಿಹಾರವನ್ನು ಮಾಡಬೇಕು ನಾಲ್ಕು ವಾರಗಳಲ್ಲಿ ದೂರನ್ನು ಆಲಿಸಬೇಕು ಎಂದು ನ್ಯಾಯಾಲಯವು ಸಮಿತಿಗೆ ಈ ಮೂಲಕ  ಆದೇಶ ನೀಡಿದೆ. ಆಂಧ್ರಪ್ರದೇಶ ಸರ್ಕಾರವು ರಾಜ್ಯ ವಿಪತ್ತು ನಿರ್ವಹಣಾ ಪಡೆಯಿಂದ ತನ್ನ ವೈಯಕ್ತಿಕ ಖಾತೆಗೆ ಹಣವನ್ನು ವರ್ಗಾಯಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. ಎರಡು ದಿನಗಳಲ್ಲಿ ಹಣವನ್ನು ಎಸ್ಡಿಆರ್ಎಫ್ ಖಾತೆಗೆ ಮರಳಿ ಜಮಾ ಮಾಡುವಂತೆ ನ್ಯಾಯಪೀಠ ಆದೇಶಿಸಿದೆ. “ಹಿಂದಿನ ಆದೇಶದ ಅಡಿಯಲ್ಲಿ ಅರ್ಹ ಜನರಿಗೆ ಒಂದು…

Read More

ನಾಗ್ಪುರ: ಹಣಕಾಸಿನ ತೊಂದರೆಯಿಂದ ನಾಗ್ಪುರದಲ್ಲಿ ಉದ್ಯಮಿಯೊಬ್ಬರು ತನ್ನ ಕುಟುಂಬ ಸಮೇತ ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಈ ವೇಳೆ ಉದ್ಯಮಿ ಸಾವನಪ್ಪಿದರೆ, ಅದೃಷ್ಟವಶಾತ್‌ ಆತನ ಪತ್ನಿ ಮತ್ತು ಮಗ ಕಾರಿನಿಂದ ಹೊರಬಂದು ತೀವ್ರ ಸುಟ್ಟಗಾಯಗಳಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ನಾಗ್ಪುರದಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮೃತ ಉದ್ಯಮಿಯನ್ನು 58 ವರ್ಷದ ರಾಮರಾಜ್ ಭಟ್ ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿ ಮತ್ತು ಮಗನಿಗೆ ಹೋಟೆಲ್‌ಗೆ ಊಟಕ್ಕೆ ಹೋಗುವುದಾಗಿ ಕರೆದುಕೊಂಡು ಬಂದಿದ್ದಾರೆ. ದಾರಿ ಮಧ್ಯೆ ಕಾರನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದಾರೆ. ನಂತ್ರ, ಇದ್ದಕ್ಕಿದ್ದಂತೆ ರಾಮರಾಜ್ ತನ್ನ ಹಾಗೂ ಪತ್ನಿ, ಮಗನ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಈ ವೇಳೆ ತೀವ್ರ ಸುಟ್ಟಗಾಯಗಳಿಂದ ರಾಮರಾಜ್ ಭಟ್ ಮೃತಪಟ್ಟಿದ್ದಾರೆ. ಅವರ ಪತ್ನಿ ಸಂಗೀತಾ ಭಟ್ ಮತ್ತು ಮಗ ನಂದನ್ ಹೇಗೋ ಕಾರಿನ ಬಾಗಿಲು ತೆರೆದು ಹೊರಗೆ ಜಿಗಿದಿದ್ದಾರೆ. ಆದ್ರೆ, ಅವರು ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. मौत…

Read More