Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು: 2022-23ನೇ ಸಾಲಿನ ಅಯವ್ಯಯ ಭಾಷಣದ ಕಂಡಿಕೆಯಲ್ಲಿ ಘೋಷಿಸಿದಂತೆ, ರಾಜ್ಯ ಸರ್ಕಾರದಿಂದ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ, ರೈತರಿಗೆ ಘೋಷಿಸಿದ್ದಂತ ಡಿಸೇಲ್ ಸಹಾಯಧವನ್ನು ವಿತರಿಸೋ ಸಂಬಂಧದ ರೈತ ಶಕ್ತಿ ಯೋಜನೆಯ ವಿಧಾನ, ಮಾರ್ಗಸೂಚಿಗೆ ಸರ್ಕಾರ ಅನುಮೋದನೆ ನೀಡಿದೆ. ಈ ಮೂಲಕ ರಾಜ್ಯದ ರೈಜರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. https://kannadanewsnow.com/kannada/cbse-result-2022-class-10th-12th-results-likely-today/ ಈ ಸಂಬಂಧ ಕೃಷಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಗಳನ್ನು ಹೊರಡಿಸಿದ್ದು, 2022-23ನೇ ಸಾಲಿನ ಅಯವ್ಯಯ ಭಾಷಣದ ಕಂಡಿಕೆ-20ರಲ್ಲಿನ ಕಾರ್ಯಕ್ರಮವಾದ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು ಪ್ರತಿ ಎಕರೆಗೆ ರೂ.250ರಂತೆ ಗರಿಷ್ಟ ಐದು ಎಕರೆಗೆ ಡಿಸೇಲ್ ಸಹಾಯಧವನ್ನು ನೀಡಲು, ರೈತ ಶಕ್ತಿ ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಲು ಘೋಷಿಸಲಾಗಿತ್ತು ಎಂದು ತಿಳಿಸಿದ್ದಾರೆ. https://kannadanewsnow.com/kannada/do-you-want-to-take-a-day-trip-in-the-lap-of-nature-heres-the-golden-opportunity-from-ksrtc/ ಸರ್ಕಾರ ಘೋಷಿಸಿದಂತೆ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪ್ರತಿ ಎಕರೆಗೆ ರೂ.250ಗಳಂತೆ…
ಮೈಸೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ( Siddaramaiah ) ಮತ್ತು ಡಿ.ಕೆ.ಶಿವಕುಮಾರ್ ( DK Shivakumar ) ಅವರು ನಾನೊಂದು ತೀರ, ನೀನೊಂದು ತೀರ ವಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. https://kannadanewsnow.com/kannada/invitation-for-works-for-panju-kathasamkalana-puraskaram-rs-10000-cash-prize/ ಮೈಸೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ ‘ಮೊದಲು ಅವರ ತಟ್ಟೆಯಲ್ಲಿ ಏನಿದೆ ಎಂದು ಮೊದಲು ನೋಡಿಕೊಳ್ಳಲಿ. ಆಮೇಲೆ ಮತ್ತೊಬ್ಬರ ತಟ್ಟೆಯಲ್ಲಿ ಇರುವುದನ್ನು ಗಮನಿಸಿ’ ಎಂದರು. https://kannadanewsnow.com/kannada/good-news-for-school-students-in-the-state-govt-orders-distribution-of-eggs-or-bananas-chikki/ ಡಿ.ಕೆ.ಶಿವಕುಮಾರ್ ಅವರಿಗೆ ತಾವು ಮುಖ್ಯಮಂತ್ರಿಯಾಗಬೇಕೆಂಬದು ಬಹಳ ವರ್ಷಗಳ ಕನಸು. ಕೆಪಿಸಿಸಿ ಅಧ್ಯಕ್ಷರಾಗಿಯೇ ಸರಿಯಾಗಿ ಕೆಲಸ ಮಾಡಲು ಕಾಂಗ್ರೆಸ್ ಬಿಡುತ್ತಿಲ್ಲ. ಏನು ನಡೆಯುತ್ತಿದೆ ಎಂದು ನಾವು ಪ್ರತಿದಿನ ನೋಡುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಬೆಂಗಳೂರು: ಹಲವು ವರ್ಷಗಳಿಂದ ಉತ್ಸಾಹಿ ಯುವ ಲೇಖಕರನ್ನು ಬರಹದ ಮೂಲಕ ಪ್ರೋತ್ಸಾಹಿಸುವಂತ ಕೆಲಸವನ್ನು ಪಂಜು ಆನ್ ಲೈನ್ ಪತ್ರಿಕೆ ಮಾಡುತ್ತಿದೆ. ಇದೀಗ ಯುವ ಲೇಖಕರನ್ನು ಗುರ್ತಿಸಿ, ಹುರುಪು ತುಂಬುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇರಿಸಿದೆ. ಅದೇ ಪಂಜು ಕಥಾಸಂಕಲನ ಪ್ರಶಸ್ತಿಯನ್ನು ನೀಡೋದಕ್ಕೆ ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಲೇಖಕರಿಂದ ಕಥಾಸಂಕಲನವನ್ನು ಆಹ್ವಾನಿಸಿದೆ. https://kannadanewsnow.com/kannada/minister-sudhakar-khadak-warns-health-department-employees-of-pay-cut-if-biometric-attendance-is-not-recorded/ ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿರುವಂತ ಪಂಜು ಬಳಗವು ( https://panjumagazine.com/ ), ಪಂಜು 2023 ರ ಜನವರಿಯಲ್ಲಿ ಹತ್ತು ವರ್ಷ ಪೂರೈಸುತ್ತದೆ. ದಶಕದ ಮೈಲಿಗಲ್ಲು ತುಳಿದ ಬೆರಳೆಣಿಕೆಯ ಕನ್ನಡದ ಅಂತರ್ಜಾಲ ಪತ್ರಿಕೆಗಳಲ್ಲಿ ಪಂಜು ಕೂಡ ಒಂದು. ದಶಕದ ಈ ಸಂಭ್ರಮವನ್ನು ಆಚರಿಸಲು ಪಂಜು ಮೊದಲ ಹೆಜ್ಜೆಯಾಗಿ ಕಥಾಸಂಕಲನ ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸುತ್ತಿದೆ ಎಂದು ತಿಳಿಸಿದೆ. https://kannadanewsnow.com/kannada/supreme-court-orders-release-of-mohammed-zubair-forthwith-on-interim-bail-in-all-up-police-firs/ 2021 ರ ಸಾಲಿನಲ್ಲಿ ಅಂದರೆ ಜನವರಿ 2021 ರಿಂದ ಡಿಸೆಂಬರ್ 2021 ರವರೆಗೆ ಪ್ರಕಟವಾಗಿರುವ ಮೊದಲ ಮುದ್ರಣದ ಕಥಾಸಂಕಲನಗಳನ್ನು ಪಂಜುವಿಗಾಗಿ ಕಳುಹಿಸಿಕೊಡಿ. ನಮಗೆ ಬಂದ ಕೃತಿಗಳಲ್ಲಿನ ಅತ್ಯುತ್ತಮವಾದ…
ಪಶ್ಚಿಮ ಬಂಗಾಳ : ಅಕ್ರಮವಾಗಿ ಬಾರ್‌ನಲ್ಲಿ ಆಲ್ಕೋಹಾಲ್ ಸೇವಿಸಿ, 7 ಜನರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದ ಘಟನೆ ಬೆಳಕಿಗೆ ಬಂದಿದೆ. ಪಶ್ಚಿಮ ಬಂಗಾಳದ ಹೌರಾದಲ್ಲಿ ಕಳ್ಳಭಟ್ಟಿ (country liquor) ಸೇವಿಸಿ 7 ಮಂದಿ ಮೃತಪಟ್ಟಿರುವ ಘಟನೆ ಇಂದು (ಬುಧವಾರ) ಬೆಳಗ್ಗೆ ನಡೆದಿದೆ. ಈ ದುರಂತದಲ್ಲಿ 20 ಜನರು ಅಸ್ವಸ್ಥರಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರೆಲ್ಲರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಮಂಗಳವಾರ ರಾತ್ರಿ ಅಕ್ರಮ ಬಾರ್‌ನಲ್ಲಿ ಇವರೆಲ್ಲರೂ ಆಲ್ಕೋಹಾಲ್ ಸೇವಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅದಾದ ಬಳಿಕ ಅನೇಕರು ಅಸ್ವಸ್ಥಗೊಂಡಿದ್ದರು. ಇಂದು ಬೆಳಿಗ್ಗೆ 7 ಜನರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿನ ಕಾರಣವನ್ನು ಕಂಡುಹಿಡಿಯಬಹುದು ಎಂದು ಹೌರಾ ಪೊಲೀಸ್ ಆಯುಕ್ತ ಪ್ರವೀಣ್ ಕುಮಾರ್ ತ್ರಿಪಾಠಿ ಹೇಳಿದ್ದಾರೆ. https://twitter.com/ANI/status/1549649927944695808?s=20&t=9QfeYRfCyOkcZ_ah6NoPxw
ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ಜಸ್ಟಿನ್ ಬೈಬರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಜಸ್ಟಿನ್ ಬೈಬರ್ ತಮ್ಮ ವಿಶ್ವ ಪ್ರವಾಸವನ್ನ ಮಾಡುವುದಾಗಿ ಘೋಷಿಸಿದ್ದಾರೆ. ಅಂದ್ಹಾಗೆ, ಪಾಪ್ ತಾರೆ ಜಸ್ಟಿನ್ ಬೈಬರ್, ರಾಮ್ಸೇ ಹಂಟ್ ಸಿಂಡ್ರೋಮ್‌ನಿಂದ ಬಳಲುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಅವರ ಮುಖದ ಒಂದು ಭಾಗವೂ ಪಾರ್ಶ್ವವಾಯುವಿಗೆ ಒಳಗಾಗಿತ್ತು. ಇದರಿಂದಾಗಿ ಜಸ್ಟಿನ್ ಬೈಬರ್ ತನ್ನ ವಿಶ್ವ ಪ್ರವಾಸವನ್ನ ರದ್ದುಗೊಳಿಸಬೇಕಾಯಿತು. ಆದ್ರೆ, ಈಗ ಮತ್ತೊಮ್ಮೆ ವಿಶ್ವ ಪ್ರವಾಸ ಮಾಡುವುದಾಗಿ ಪಾಪ್ ತಾರೆ ಘೋಷಿಸಿದ್ದಾರೆ. ಅದ್ರಂತೆ, ವಿಶ್ವ ಪ್ರವಾಸದಲ್ಲಿ ಭಾರತವೂ ಸೇರಿದೆ. ಈಗ ಈ ಘೋಷಣೆಯ ನಂತರ, ಜಸ್ಟಿನ್ ಬೈಬರ್ ಭಾರತದಲ್ಲೂ ಪ್ರದರ್ಶನ ನೀಡಲಿದ್ದಾರೆ. ‘ಜಸ್ಟೀಸ್ ವರ್ಲ್ಡ್ ಟೂರ್’ ಪ್ರಾರಂಭ ಪಾಪ್ ಗಾಯಕ ಜಸ್ಟಿನ್ ಬೈಬರ್ ಅವ್ರ ವಿಶ್ವ ಪ್ರವಾಸ ‘ಜಸ್ಟೀಸ್ ವರ್ಲ್ಡ್ ಟೂರ್’ ಮತ್ತೊಮ್ಮೆ ಪ್ರಾರಂಭವಾಗಲಿದೆ. ಈ ಬಗ್ಗೆ ಸ್ವತಃ ಜಸ್ಟಿನ್ ಬೈಬರ್ ಮಾಹಿತಿ ನೀಡಿದ್ದಾರೆ. ಅದ್ರಂತೆ, ಅಕ್ಟೋಬರ್ 18 ರಂದು ನವದೆಹಲಿಯಲ್ಲಿ ಜಸ್ಟಿನ್ ಬೈಬರ್ ಕಾರ್ಯಕ್ರಮ ನಡೆಯಲಿದೆ. ಅದ್ರಂತೆ, ಜಸ್ಟಿನ್ ಪ್ರದರ್ಶನವು JLN…
ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಬವಳಾಡಿಯಲ್ಲಿ ಚಾಕ್ಲೆಟ್ ಕವರ್ ನುಂಗಿದ ಪರಿಣಾಮ ಬಾಲಕಿ ಸಾವನ್ನಪ್ಪಿದ್ದಾಳೆ. 6 ಸಮನ್ವಿ ಮೃತ ದುರ್ದೈವಿ. https://kannadanewsnow.com/kannada/supreme-court-to-take-up-tns-mekedatu-case-on-wednesday/ ಈಕೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬವಳಾಡಿ ಮೂಲದ ನಿವಾಸಿ. ಸಮನ್ವಿ ಉಪ್ಪುಂದದ ಆಂಗ್ಲ ಮಾಧ್ಯಮ ಸ್ಕೂಲ್ ವಿದ್ಯಾರ್ಥಿನಿಯಾಗಿದ್ದಾಳೆ. ಶಾಲೆಯ ಬಸ್ಸಿಗೆ ಕಾಯುತ್ತಿರುವ ಸಮಯದಲ್ಲಿ ಸಮನ್ವಿ ಪ್ಲಾಸ್ಟಿಕ್ ಕವರ್ ಸಮೇತ ಚಾಕ್ಲೆಟ್ ತಿಂದಿದ್ದಾಳೆ. ಸದ್ಯ ಬಾಲಕಿಯ ಮೃತದೇಹವನ್ನು ಮಣಿಪಾಲ್ ಕೆ.ಎಂ.ಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವದೆಹಲಿ : ರೈಲ್ವೆಯೂ ಇದೇ ಮೊದಲ ಬಾರಿಗೆ ಆಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಗಳನ್ನ ಹಂಚಲು ಗೂಗಲ್ ಮ್ಯಾಪ್ ಬಳಸುತ್ತದೆ. ಅಭ್ಯರ್ಥಿಗಳು ಪ್ರಯಾಣದಲ್ಲಿ ಕಳೆಯುವ ಸಮಯ ತಗ್ಗಿಸುವುದು ಈ ಪ್ರಕ್ರಿಯೆಯ ಉದ್ದೇಶವಾಗಿದೆ. ರೈಲ್ವೆ ನೇಮಕಾತಿ ಮಂಡಳಿ (RRB) ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ದೂರುಗಳೆಂದ್ರೆ, ಪರೀಕ್ಷಾ ಕೇಂದ್ರವನ್ನ ಅವರ ವಾಸಸ್ಥಳದಿಂದ ದೂರ ಮಾಡಲಾಗುತ್ತೆ ಅನ್ನೋದು. ಇದರಿಂದಾಗಿ ಅವರು ದೂರದ ಪ್ರಯಾಣ ಮಾಡಬೇಕಾಗಿರುವುದು ಮಾತ್ರವಲ್ಲ, ವಸತಿ ಮತ್ತು ಆಹಾರಕ್ಕಾಗಿ ಹೆಚ್ಚುವರಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಹಿರಿಯ ರೈಲ್ವೇ ಅಧಿಕಾರಿಯೊಬ್ಬರು, “ನಾವು ಪ್ರತಿ ಅಭ್ಯರ್ಥಿಯು ನೀಡಿದ ಪಿನ್ ಕೋಡ್ʼನ್ನ ಗೂಗಲ್ ಮ್ಯಾಪ್ ಮೂಲಕ ಅವರ ವಾಸಸ್ಥಳದಿಂದ 300 ಕಿಮೀ ವ್ಯಾಪ್ತಿಯಲ್ಲಿರುವ ಪರೀಕ್ಷಾ ಕೇಂದ್ರದೊಂದಿಗೆ ಲಿಂಕ್ ಮಾಡುತ್ತಿದ್ದೇವೆ. ಬಸ್ ಮತ್ತು ರೈಲಿನಂತಹ ವಿವಿಧ ಸಾರಿಗೆ ವಿಧಾನಗಳ ಮೂಲಕ ಕೇಂದ್ರವನ್ನ ಪ್ರವೇಶಿಸಬಹುದು ಎಂದು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಇದು ವರ್ಕ್ ಆದ್ರೆ, ಅಭ್ಯರ್ಥಿಗಳ ಸಾಮಾನ್ಯ ಮತ್ತು ಶಾಶ್ವತ ಸಮಸ್ಯೆಯನ್ನ ಪರಿಹರಿಸಲು ಸಾಧ್ಯವಾದಂತಾಗುತ್ತೆ” ಎಂದರು. ಪ್ರಸ್ತುತ 300 ಕಿ.ಮೀ ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳಲ್ಲಿ ಶೇ.99ರಷ್ಟು…
ಹೊಸಕೋಟೆ : ನಡವಟ್ಟಿ ಗ್ರಾಮದ ಕೌಟುಂಬಿಕ ಕಲಹದಿಂದ ಪತ್ನಿ ಹತ್ಯೆಗೆ ನಡೆಸಲು ಹೋಗಿ ಯಡವಟ್ಟು ಮಾಡಿಕೊಂಡು ಪತ್ನಿ ಬದಲು ಅತ್ತೆಯನ್ನೆ ದೊಣ್ಣೆಯಿಂದ ಹೊಡೆದು ಕೊಂದ ಅಳಿಯ ಎಂಬ ಘಟನೆ ಬೆಳಕಿಗೆ ಬಂದಿದೆ. https://kannadanewsnow.com/kannada/minister-sudhakar-khadak-warns-health-department-employees-of-pay-cut-if-biometric-attendance-is-not-recorded/ ನಡವಟ್ಟಿ ಗ್ರಾಮದನಿವಾಸಿ ನಾಗರಾಜು(35 ಬಂಧಿತ ಆರೋಪಿ, ಸೌಭ್ಯಾಗ್ಯ(45) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಈತ ಕುಡಿದ ಮತ್ತಿನಲ್ಲಿ ಪತ್ನಿಯನ್ನು ಹತ್ಯೆ ಮಾಡಲು ಹೋಗಿ ತನ್ನ ಅತ್ತೆಯನ್ನೇ ಕೊಂದ ಘಟನೆ ಬೆಳಕಿಗೆ ಬಂದಿದೆ. ಜು.13ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕ್ಯಾಬ್ ಚಾಲಕನಾಗಿದ್ದ ನಾಗರಾಜು ಎಂದು ತಿಳಿದುಬಂದಿದೆ. ಈತನಿಗೆ 5ವರ್ಷದ ಮಗಳು ಇದ್ದಾಳೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. https://kannadanewsnow.com/kannada/minister-sudhakar-khadak-warns-health-department-employees-of-pay-cut-if-biometric-attendance-is-not-recorded/
ಬೆಂಗಳೂರು: ದೇವನಹಳ್ಳಿಯ ಸಾರ್ವಜನಿಕ ಆಸ್ಪತ್ರೆಗೆ ಇಂದು ದಿಢೀರನೆ ಭೇಟಿ ನೀಡಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್( Minister Dr K Sudhakar ), 20 ಐಸಿಯು ಹಾಸಿಗೆಗಳನ್ನು ಇನ್ನೂ ಸೇವೆಗೆ ನೀಡದ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಅಲ್ಲದೇ ರಾಜ್ಯದಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ದಾಖಲಿಸದೇ ಇದ್ದರೇ, ವೇತನವನ್ನು ಕಡಿತ ಮಾಡೋದಾಗಿ ಆರೋಗ್ಯ ಇಲಾಖೆಯ ನೌಕರರಿಗೆ ( Health Department Employees ) ಖಡಕ್ ಎಚ್ಚರಿಕೆ ನೀಡಿದ್ದಾರೆ. https://kannadanewsnow.com/kannada/cm-basavaraj-bommai-dedicates-to-krs-reservoir/ ಆಸ್ಪತ್ರೆಯಲ್ಲಿ 100 ಹಾಸಿಗೆಗಳಿದ್ದು, 80 ಹಾಸಿಗೆಗಳು ಬಳಕೆಯಲ್ಲಿವೆ. ಇನ್ನೂ 20 ಹಾಸಿಗೆಗಳನ್ನು ಐಸಿಯುಗೆ ಮೀಸಲಿಡಲಾಗಿದೆ. ಆದರೆ ಈ ಹಾಸಿಗೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ನೀಡುವುದು ಸೇರಿದಂತೆ ಹಲವು ಎಲೆಕ್ಟ್ರಿಕ್ ಕಾರ್ಯ ಪ್ರಗತಿಯಲ್ಲಿದೆ. ಇದು ಏಕೆ ವಿಳಂಬವಾಗಿದೆ ಎಂದು ಪ್ರಶ್ನಿಸಿದ ಸಚಿವರು, ಶೀಘ್ರದಲ್ಲಿ ರೋಗಿಗಳ ಸೇವೆಗೆ ಈ ಹಾಸಿಗೆಗಳನ್ನು ಸಿದ್ಧಪಡಿಸಿಕೊಡಬೇಕು ಎಂದು ಖಡಕ್ ಸೂಚನೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದೇವನಹಳ್ಳಿ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಸದ್ಯ 80 ಹಾಸಿಗೆಗಳು ಬಳಕೆಯಲ್ಲಿವೆ. ಇನ್ನೂ…
ನವದೆಹಲಿ: ಎಲ್ಲಾ ಯುಪಿ ಪೊಲೀಸ್ ಎಫ್ಐಆರ್ಗಳಲ್ಲಿ ಮಧ್ಯಂತರ ಜಾಮೀನಿನ ಮೇಲೆ ಮೊಹಮ್ಮದ್ ಜುಬೈರ್ ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ. ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ಪೀಠವು ಬಂಧನದ ಅಧಿಕಾರದ ಅಸ್ತಿತ್ವವನ್ನು ಪೊಲೀಸರು ಮಿತವಾಗಿ ಅನುಸರಿಸಬೇಕು ಎಂದು ಅಭಿಪ್ರಾಯಪಟ್ಟಿದೆ. https://kannadanewsnow.com/kannada/good-news-for-school-students-in-the-state-govt-orders-distribution-of-eggs-or-bananas-chikki/ ದೆಹಲಿ ಪೊಲೀಸರ ತನಿಖೆಯ ಭಾಗವಾಗಿರುವ ಟ್ವೀಟ್ಗಳಿಂದ ಆರೋಪಗಳ ಗ್ರವಮೆನ್ಗಳು ಉದ್ಭವಿಸಿದಾಗ ಜುಬೈರ್ ಅವರನ್ನು ಇನ್ನೂ ಹೆಚ್ಚಿನ ಕಸ್ಟಡಿಯಲ್ಲಿರಿಸಲು ಮತ್ತು ಅವರನ್ನು ವಿವಿಧ ಪ್ರಕ್ರಿಯೆಗಳಿಗೆ ಒಳಪಡಿಸಲು “ಯಾವುದೇ ಸಮರ್ಥನೆ” ಇಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ನ್ಯಾಯಪೀಠವು ಅಭಿಪ್ರಾಯಪಟ್ಟಿತು. https://kannadanewsnow.com/kannada/cm-basavaraj-bommai-dedicates-to-krs-reservoir/ ಸಮಗ್ರ ತನಿಖೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ, ಏಕೆಂದರೆ ಅದು ಜುಬೈರ್ ವಿರುದ್ಧದ ಎಲ್ಲಾ ಎಫ್ಐಆರ್ಗಳನ್ನು ಒಟ್ಟುಗೂಡಿಸಿದೆ ಮತ್ತು ಎಲ್ಲಾ ಪ್ರಕರಣಗಳನ್ನು ಯುಪಿಯಿಂದ ದೆಹಲಿಗೆ ವರ್ಗಾಯಿಸುತ್ತದೆ.