Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು: ಕಳೆದ ಜೂನ್ ನಲ್ಲಿ ನಡೆದಿದ್ದಂತ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ( SSLC Supplementary Exam Result 2022 ) ಪ್ರಕಟಗೊಂಡಿದೆ. ವಿದ್ಯಾರ್ಥಿಗಳಿಗೆ ನಾಳೆ ಮಧ್ಯಾಹ್ನ 12 ಗಂಟೆಗೆ ಅಧಿಕೃತ ವೆಬ್ ಸೈಟ್ https://karresults.nic.in/ ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Minister BC Nagesh ) ಮಾಹಿತಿ ಬಿಡುಗಡೆ ಮಾಡಿದ್ದು, 2022ರ ಜೂನ್ 27ರಿಂದ ಜುಲೈ 4ರ ವರೆಗೆ ನಡೆದ ಎಸ್‌ಎಸ್ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, 37,479 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದ್ದಾರೆ. https://kannadanewsnow.com/kannada/udupi-three-killed-one-injured-as-ambulance-collides-with-toll-pole/ ಪೂರಕ ಪರೀಕ್ಷೆಗೆ 94,669 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಉತ್ತೀರ್ಣ ಪ್ರಮಾಣ ಶೇ.39.59 ಇದೆ ಎಂದು ಸಚಿವರು ಮಾಹಿತಿ ನೀಡಿದರು. ನಾಳೆ ಮಧ್ಯಾಹ್ನ 12 ಗಂಟೆ ನಂತರ ಈ ವೆಬ್‌ಸೈಟ್‌ನಲ್ಲಿ https://karresults.nic.in/ ಫಲಿತಾಂಶ ವೀಕ್ಷಿಸಬಹುದು. ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ ಎಸ್ಎಂಎಸ್ ಮೂಲಕವೂ ಫಲಿತಾಂಶ ಕಳುಹಿಸಲಾಗುತ್ತದೆ. ವರದಿ : ವಸಂತ ಬಿ ಈಶ್ವರಗೆರೆ https://kannadanewsnow.com/kannada/cm-bommais-cabinet-to-be-expanded-soon-do-you-know-who-all-will-be-inducted-into-the-cabinet/
ಬೆಂಗಳೂರು: ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ( BJP Government ) ಸಚಿವ ಸಂಪುಟ ವಿಸ್ತರಣೆ ( Karnataka Cabinet Expansion ) ಆಗಲಿದೆ ಎಂಬುದಾಗಿ ಹೇಳಲಾಗುತ್ತಿತ್ತು. ಆದ್ರೇ ಶೀಘ್ರವೇ ಮಿನಿ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎನ್ನಲಾಗುತ್ತಿದೆ. ಒಂದು ವೇಳೆ ಸಚಿವ ಸಂಪುಟ ವಿಸ್ತರಣೆಯಾದ್ರೇ ಯಾರೆಲ್ಲಾ ಸಂಪುಟಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಬಗ್ಗೆ ಮುಂದೆ ಓದಿ.. https://kannadanewsnow.com/kannada/sslc-supplementary-exam-result-declared-available-on-website-tomorrow/ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ( KS Eshwarappa ) ಬಗ್ಗೆ ನ್ಯಾಯಾಲಯಕ್ಕೆ ಆತ್ಮಹತ್ಯೆ ಪ್ರಚೋಜನೆ ಸಂಬಂಧ ಯಾವುದೇ ಸಾಕ್ಷಾಯಾಧಾರಗಳಿಲ್ಲ ಎಂಬುದಾಗಿ ಉಲ್ಲೇಖಿಸಿ ಬಿ ರಿಪೋರ್ಟ್ ಸಲ್ಲಿಸಲಾಗಿದೆ. ಹೀಗಾಗಿ ಅವರಿಗೆ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮತ್ತೆ ಸಂಪುಟ ಸೇರೋದಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. https://kannadanewsnow.com/kannada/clean-chit-to-eshwarappa-in-contractor-santosh-patils-suicide-case-do-you-know-what-he-said/ ಆದರೆ ಅವರ ಸಂಪುಟ ಪ್ರವೇಶಕ್ಕೆ ಇರುವುದೊಂದೇ ಅಡ್ಡಿ, ಅದೇ ಈ ಹಿಂದೆ ಲೈಂಗಿಕ ಹಗರಣಕ್ಕೆ ಸಿಲುಕಿ ರಾಜೀನಾಮೆ…
ಬೆಂಗಳೂರು : ಐವರು ನ್ಯಾಯಾಂಗ ಅಧಿಕಾರಿಗಳನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಪದೋನ್ನತಿಗೊಳಿಸುವಂತೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ. ಜುಲೈ 19, 2022ರಂದು ನಡೆದ ಕೊಲಿಜಿಯಂ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶಿಫಾರಸು ಮಾಡಲಾದ ನ್ಯಾಯಾಂಗ ಅಧಿಕಾರಿಗಳೆಂದರೆ, 1. ಅನಿಲ್ ಭೀಮಸೇನ ಕತ್ತಿ 2. ಗುರುಸಿದ್ದಯ್ಯ ಬಸವರಾಜ 3. ಚಂದ್ರಶೇಖರ ಮೃತ್ಯುಂಜಯ ಜೋಶಿ 4. ಉಮೇಶ್ ಮಂಜುನಾಥ ಭಟ್ ಅಡಿಗ 5. ತಾಲ್ಕಡ್ ಗಿರಿಗೌಡ ಶಿವಶಂಕರೇಗೌಡ. ಅಂದ್ಹಾಗೆ, ಜುಲೈ 1, 2022ರಂತೆ ಕರ್ನಾಟಕ ಹೈಕೋರ್ಟ್ 45 ಸದಸ್ಯರ ಬಲದಲ್ಲಿ ಕಾರ್ಯನಿರ್ವಹಿಸುತ್ತಿದ್ದು, 17 ಹುದ್ದೆಗಳು ಖಾಲಿ ಇವೆ.
ಬೆಂಗಳೂರು: ಕಳೆದ ಜೂನ್ ನಲ್ಲಿ ನಡೆದಿದ್ದಂತ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ( SSLC Supplementary Exam Result 2022 ) ಪ್ರಕಟಗೊಂಡಿದೆ. ವಿದ್ಯಾರ್ಥಿಗಳಿಗೆ ನಾಳೆ ಮಧ್ಯಾಹ್ನ 12 ಗಂಟೆಗೆ ಅಧಿಕೃತ ವೆಬ್ ಸೈಟ್ https://karresults.nic.in/ ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾಹಿತಿ ಬಿಡುಗಡೆ ಮಾಡಿದ್ದು, 2022ರ ಜೂನ್ 27ರಿಂದ ಜುಲೈ 4ರ ವರೆಗೆ ನಡೆದ ಎಸ್‌ಎಸ್ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, 37,479 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದ್ದಾರೆ. https://kannadanewsnow.com/kannada/udupi-three-killed-one-injured-as-ambulance-collides-with-toll-pole/ ಪೂರಕ ಪರೀಕ್ಷೆಗೆ 94,669 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಉತ್ತೀರ್ಣ ಪ್ರಮಾಣ ಶೇ.39.59 ಇದೆ ಎಂದು ಸಚಿವರು ಮಾಹಿತಿ ನೀಡಿದರು. ನಾಳೆ ಮಧ್ಯಾಹ್ನ 12 ಗಂಟೆ ನಂತರ ಈ ವೆಬ್‌ಸೈಟ್‌ನಲ್ಲಿ https://karresults.nic.in/ ಫಲಿತಾಂಶ ವೀಕ್ಷಿಸಬಹುದು. ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ ಎಸ್ಎಂಎಸ್ ಮೂಲಕವೂ ಫಲಿತಾಂಶ ಕಳುಹಿಸಲಾಗುತ್ತದೆ. ವರದಿ : ವಸಂತ ಬಿ ಈಶ್ವರಗೆರೆ
ಉಡುಪಿ: ರೋಗಿಯನ್ನು ಕರೆದೊಯ್ಯುತ್ತಿದ್ದಂತ ಆ್ಯಂಬುಲೆನ್ಸ್ ಟೋಲ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ, ಭೀಕರ ಅಪಘಾತ ( Accident ) ಸಂಭವಿಸಿ ಮೂವರು ಸಾವನ್ನಪ್ಪಿ, ಮತ್ತೋರ್ವ ಗಾಯಗೊಂಡಿರುವ ಘಟನೆ ಉಡುಪಿಯ ಬೈಂದೂರು ತಾಲೂಕಿನಲ್ಲಿ ನಡೆದಿದೆ. https://kannadanewsnow.com/kannada/kichcha-sudeep-is-not-corona-its-just-viral-fever-producer-jack-manju/ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್ ಬಳಿಯಲ್ಲಿ ಹೊನ್ನಾವರದಿಂದ ಕುಂದಾಪುರಕ್ಕೆ ರೋಗಿಯನ್ನು ಸಾಗಿಸುತ್ತಿದ್ದಂತ ಆ್ಯಂಬುಲೆನ್ಸ್ ಟೋಲ್ ಕಂಬಕ್ಕೆ ಡಿಕ್ಕಿಯಾಗಿದೆ. https://kannadanewsnow.com/kannada/clean-chit-to-eshwarappa-in-contractor-santosh-patils-suicide-case-do-you-know-what-he-said/ ಆ್ಯಂಬುಲೆನ್ಸ್ ಟೋಲ್ ಕಂಬಕ್ಕೆ ಡಿಕ್ಕಿಯಾಗುತ್ತಿದ್ದಂತೆ ಅದರಲ್ಲಿದ್ದಂತ ರೋಗಿ, ರೋಗಿಯ ಪತ್ನಿ ಹಾಗೂ ಆ್ಯಂಬುಲೆನ್ಸ್ ಸಿಬ್ಬಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. https://kannadanewsnow.com/kannada/clean-chit-in-contractor-santosh-patils-suicide-case-former-minister-eshwarappa-celebrates-sweets-at-his-residence/ ಇನ್ನೂ ಟೋಲ್ ಬಳಿಯಲ್ಲಿದ್ದಂತ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ನೀವು ಯಾರೊಬ್ಬರ ಸ್ಥಳವನ್ನ ಅವರ ಫೋನ್ ಸಂಖ್ಯೆಯ ಮೂಲಕ ಟ್ರ್ಯಾಕ್ ಮಾಡಲು ಬಯಸುವಿರಾ? ಅನೇಕ ಜನರು ಇದೇ ಕಲ್ಪನೆಯಲ್ಲಿಯೇ ವಾಸಿಸುತ್ತಾರೆ. ಗೆಳತಿ / ಗೆಳೆಯನ ಸ್ಥಳವನ್ನ ಟ್ರ್ಯಾಕ್ ಮಾಡಲು ಅಥವಾ ವ್ಯಕ್ತಿಯ ಲೈವ್ ಸ್ಥಳವನ್ನ ತಿಳಿದುಕೊಳ್ಳಲು ಬಯಸುತ್ತಾರೆ. ಅದ್ರಂತೆ, ಅಂತಹ ವಿಧಾನಗಳಿಗಾಗಿ ಅನೇಕ ಜನರು Googleನಲ್ಲಿ ಹುಡುಕುತ್ತಲೇ ಇರುತ್ತಾರೆ. ಅಂತಹ ದಾರಿ ಹುಡುಕುತ್ತಾ ಹೊರಟರೆ, ನೀವು ಜಟಿಲವಾಗಿ ಚಲಿಸುತ್ತಲೇ ಇರ್ಬೇಕಾಗುತ್ತೆ. ಯಾವುದೇ ಸಮಂಜಸವಾದ ಮಾರ್ಗವನ್ನ ನೀವು ಕಾಣುವುದಿಲ್ಲ. ಹಾಗಾದ್ರೆ, ಫೋನ್ ನಂಬರ್ ಮೂಲಕ ಸ್ಥಳ ಪರಿಶೀಲಿಸಲು ಸಾಧ್ಯವಿಲ್ಲವೇ? ಇಲ್ಲ, ಹಲವು ವಿಧಾನಗಳಿವೆ. ಆದ್ರೆ, ನೀವು ಅವುಗಳನ್ನ ಪ್ರವೇಶಿಸೋಕೆ ಕಷ್ಟ. ಹಾಗಾದ್ರೆ, ಪೊಲೀಸರು ಮಾಡೋದೇನು? ಮೊಬೈಲ್ ಸಂಖ್ಯೆಯಿಂದ ಇನ್ನೊಬ್ಬರ ಫೋನ್ ಹೇಗೆ ಟ್ರ್ಯಾಪ್ ಮಾಡುವುದು? ಮುಂದೆ ಓದಿ. ಪತ್ತೇದಾರಿ ತಂತ್ರಾಂಶ ನೀವು ಪೆಗಾಸಸ್ ಹೆಸರನ್ನ ಕೇಳಿರಬೇಕು. ಇದು ಸ್ಪೈವೇರ್ ಆಗಿದೆ, ಇದರ ಸಹಾಯದಿಂದ ಯಾರನ್ನಾದರೂ ಸರಿ, ಆತನಿಗೆ ಅರಿವಿಲ್ಲದೇ ಬೇಹುಗಾರಿಕೆ ಮಾಡಬಹುದು. ಆದರೆ ಇದು ಯಾವುದೇ 100 ಅಥವಾ…
ಬೆಂಗಳೂರು: ನಟ ಕಿಚ್ಚ ಸುದೀಪ್ ( Actor Kiccha Sudeep ) ಅವರಿಗೆ 2ನೇ ಬಾರಿ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ಹೇಳಲಾಗುತ್ತಿತ್ತು. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು. ಆದ್ರೇ ಅವರಿಗೆ ಕೋವಿಡ್ ಪಾಸಿಟಿವ್ ಆಗಿಲ್ಲ. ಹೊಸ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದರಿಂದಾಗಿ ವೈರಲ್ ಫೀವರ್ ( Viral Fever ) ಆಗಿದೆ ಎಂಬುದಾಗಿ ನಿರ್ಮಾಪಕ ಜಾಕ್ ಮಂಜು ( Producer Jack Manju ) ಸ್ಪಷ್ಟಪಡಿಸಿದ್ದಾರೆ. https://kannadanewsnow.com/kannada/actor-kiccha-sudeep-tests-positive-for-covid-19-for-the-second-time/ ಈ ಬಗ್ಗೆ ಮಾಹಿತಿ ನೀಡಿರುವಂತ ಅವರು, ನಟ ಕಿಚ್ಚ ಸುದೀಪ್ ಅವರಿಗೆ ಕೊರೋನಾ ಎಂಬುದು ಕೇವಲ ವದಂತಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ( Social Media ) ವೈರಲ್ ಆಗಿರುವಂತ ಸುದ್ದಿ ಸುಳ್ಳು. ಅವರಿಗೆ ನೂತನ ಚಿತ್ರದ ಪ್ರಚಾರ ಕಾರ್ಯಗಳಿಂದ ವೈರಲ್ ಫೀವರ್ ಆಗಿದೆ. ಇಂದು ನಾಳೆ ವಿಶ್ರಾಂತಿ ಪಡೆದು, ಶುಕ್ರವಾರ ಪ್ರಮೋಷನ್ ಮಾಡಲಿದ್ದಾರೆ. ನಟ ಕಿಚ್ಚ ಸುದೀಪ್ ಅಭಿಮಾನಿಗಳು, ಹಿತೈಷಿಗಳು ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ…
ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ಭಾರತದಲ್ಲಿನ ಪ್ರತಿ ರಾಜ್ಯದ ಪೊಲೀಸ್ ಇಲಾಖೆಗಳು ತಮ್ಮ ಸಾಮಾಜಿಕ ಮಾಧ್ಯಮ ತಾಣವನ್ನ ಬಲಪಡಿಸಲು ಪ್ರತಿದಿನ ಕೆಲಸ ಮಾಡುತ್ತವೆ. ಪೊಲೀಸ್ ಇಲಾಖೆಯು ಭದ್ರತಾ ಸಲಹೆಗಳು, ಸಂಚಾರ ನವೀಕರಣಗಳು ಮತ್ತು ಸೂಚನೆಗಳನ್ನ ನೀಡುವುದರ ಹೊರತಾಗಿ ಅಧಿಕೃತ ಪೋಲೀಸ್ ಟ್ವಿಟರ್ ಹ್ಯಾಂಡಲ್‌ನಲ್ಲಿ ಸ್ವೀಕರಿಸಿದ ದೂರುಗಳನ್ನ ಆಲಿಸುತ್ತಿವೆ ಮತ್ತು ಪರಿಹರಿಸುತ್ತಿವೆ. ಮುಂಬೈ ಪೊಲೀಸ್ ಮತ್ತು ದೆಹಲಿ ಪೊಲೀಸರ ಟ್ವಿಟರ್ ಹ್ಯಾಂಡಲ್‌ಗಳು ಇತ್ತೀಚಿನ ಟ್ರೆಂಡ್‌ಗಳೊಂದಿಗೆ ನವೀಕರಿಸಲ್ಪಟ್ಟಿವೆ. ಈ ಸಂದರ್ಭದಲ್ಲಿ ಪಂಜಾಬ್, ಅಸ್ಸಾಂ ಮತ್ತು ರಾಜಸ್ಥಾನ ಪೊಲೀಸ್ ಇಲಾಖೆ ಕೂಡ ಹಿಂದೆ ಉಳಿದಿಲ್ಲ. ಆದ್ರೆ, ಪೊಲೀಸ್ ಇಲಾಖೆಯ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿರುವ ವಿಚಿತ್ರ ಟ್ವೀಟ್‌ಗಳು ಮತ್ತು ತಮಾಷೆಯ ಉತ್ತರಗಳು ಹಲವು ಬಾರಿ ವೈರಲ್ ಆಗಿವೆ. ಪಂಜಾಬ್ ಪೊಲೀಸರು ಮತ್ತೊಮ್ಮೆ ಸಾಮಾಜಿಕ ಮಾಧ್ಯಮದ ಈ ರೇಸ್‌ಗೆ ಸೇರಿಕೊಂಡಿದ್ದಾರೆ. ವಾಸ್ತವವಾಗಿ, ಒಬ್ಬ ಮಹಿಳೆಗೆ ನಾನು ನಿನ್ನನ್ನು ಇಷ್ಟಪಡುತ್ತೇನೆ ಎಂಬ ಸಂದೇಶವನ್ನು ಕಳುಹಿಸಿದ್ದೇನೆ ಎಂದು ಒಬ್ಬ ಯುವಕ ಹೇಳಿಕೊಂಡಿದ್ದಾನೆ. ನಂತ್ರ ಆಕೆಯ ಪತಿ ಆತನನ್ನ ಥಳಿಸಿದ್ದಾನೆ ಎಂದು ಆರೋಪಿಸಿದ್ದಾನೆ. ಇನ್ನು…
ಬೆಂಗಳೂರು: ಈಗಾಗಲೇ ಒಮ್ಮೆ ಕೋವಿಡ್ ಪಾಸಿಟ್ ಗೆ ಒಳಗಾಗಿದ್ದಂತ ನಟ ಕಿಚ್ಚ ಸುದೀಪ್ ಗೆ ( Actor Kiccha Sudeep tests positive for covid-19 ) ಈ 2ನೇ ಬಾರಿ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿರೋದಾಗಿ ತಿಳಿದು ಬಂದಿದೆ. https://kannadanewsnow.com/kannada/7-govt-engineering-colleges-to-be-upgraded-to-kit-grade-task-force-set-up-minister-ashwathnarayan/ ಈ ಮೊದಲು ಕೋವಿಡ್ ಆರ್ಭಟದ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಆಗ ವೈದ್ಯರ ಸಲಹೆಯ ಮೇರೆಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆದಿದ್ದರು. https://kannadanewsnow.com/kannada/3rd-threat-letter-to-writer-b-l-venu-do-you-know-what-he-said-on-this/ ಇದೀಗ ಮತ್ತೆ ಎರಡನೇ ಬಾರಿ ಅವರಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂಬುದಾಗಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ವೈದ್ಯರ ಸಲಹೆಯ ಮೇರೆಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. https://kannadanewsnow.com/kannada/clean-chit-in-contractor-santosh-patils-suicide-case-former-minister-eshwarappa-celebrates-sweets-at-his-residence/
ಬೆಂಗಳೂರು: ರಾಜ್ಯದಲ್ಲಿರುವ 14 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳ ಪೈಕಿ 7 ಕಾಲೇಜುಗಳನ್ನು ‘ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ (ಕೆಐಟಿ) ಆಗಿ ಉನ್ನತೀಕರಿಸುವ ನಿಟ್ಟಿನಲ್ಲಿ ಪ್ರೊ.ಶಡಗೋಪನ್ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ಬುಧವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಯೋಜನೆಯ ಅಡಿಯಲ್ಲಿ ಹಾಸನ, ಹಾವೇರಿ, ಕೆ.ಆರ್. ಪೇಟೆ, ಕಾರವಾರ, ರಾಮನಗರ ಮತ್ತು ತಳಕಲ್ ನಲ್ಲಿರುವ ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಬೆಂಗಳೂರಿನ ಎಸ್.ಕೆ.ಎಸ್.ಜೆ.ಐ.ಟಿ. ಕಾಲೇಜನ್ನು ಕೆಐಟಿ ಆಗಿ ಉನ್ನತೀಕರಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. https://kannadanewsnow.com/kannada/3rd-threat-letter-to-writer-b-l-venu-do-you-know-what-he-said-on-this/ ಈ ಕಾಲೇಜುಗಳಲ್ಲಿ ಮೊದಲ ಹಂತದಲ್ಲಿ ಹೆಚ್ಚಿನ ಬೇಡಿಕೆ ಮತ್ತು ಉದ್ಯೋಗಾವಕಾಶ ಇರುವ ತಲಾ 2 ವಿಭಾಗಗಳನ್ನು ಐಐಟಿ ಮಾದರಿಯಲ್ಲಿ ಕೆಐಟಿ ಆಗಿ ಬೆಳೆಸಲಾಗುವುದು ಎಂದು ಅವರು ವಿವರಿಸಿದ್ದಾರೆ. ಸಂಶೋಧನೆ, ನಾವೀನ್ಯತೆ ಮತ್ತು ಅತ್ಯುನ್ನತ ಗುಣಮಟ್ಟದ ಶಿಕ್ಷಣಕ್ಕೆ ಸರಕಾರ ಉತ್ತೇಜನ ನೀಡುತ್ತಿದೆ. ಇದಕ್ಕಾಗಿ ವಿದೇಶದ ಶ್ರೇಷ್ಠ ವಿಶ್ವವಿದ್ಯಾಲಯಗಳೊಂದಿಗೆ ಸಹಭಾಗಿತ್ವ…