Author: KNN IT TEAM

ರಾಯಚೂರು : ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಪ್ರವರ್ಗ-3ಎ ವಿವಿಧ ಅರ್ಹ ಸಮುದಾಯದ ಜನರ ಆರ್ಥಿಕ ಅಭಿವೃದ್ದಿಗಾಗಿ 2022-23ನೇ ಸಾಲಿನಲ್ಲಿ ವಿವಿಧ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯಲು ಬಯಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗಮ ಹಳ್ಳಿಕಾರ್, ಒಕ್ಕಲಿಗ, ನಾಮದಾರಿ ಒಕ್ಕಲಿಗ, ಗಂಗಡ್‌ಕಾರ್ ಒಕ್ಕಲಿಗ, ದಾಸ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಗೌಡ, (Gouda), ಗೌಡ, (Gowda) ಹಳ್ಳಿಕಾರ್, ಕುಂಚಿಟಿಗ, ಗೌಡ, ಕಾಪು, ಹೆಗ್ಗಡೆ, ಕಮ್ಮಾ, ರೆಡ್ಡಿ, ಗೌಡರ್, ನಾಮದಾರಿಗೌಡ, ಉಪ್ಪಿನ ಕೊಳಗ ಅಥವಾ ಉತ್ತಮ ಕೊಳಗ, ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿಬೇಕು. ಸ್ವಯಂ ಉದ್ಯೋಗ ಸಾಲ ಯೋಜನೆ: ಒಕ್ಕಲಿಗ ಸಮುದಾಯದವರು ಸ್ವಯಂ ಉದ್ಯೋಗಕ್ಕೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಘಟಕ ವೆಚ್ಚ 50,000/- ರೂ.ಗಳವರೆಗೆ ಶೇ.20ರಷ್ಟು ಸಹಾಯಧನ (ಗರಿಷ್ಠ 10,000/- ರೂ.) ಶೇಕಡ 80ರಷ್ಟು ಸಾಲವನ್ನು ಶೇ.4ರಷ್ಟು ಬಡ್ಡಿದರದಲ್ಲಿ ಒದಗಿಸಲಾಗುವುದು. ಘಟಕ ವೆಚ್ಚ 50,001/-ರಿಂದ 1,00,000/-ರೂ.ಗಳವರೆಗೆ ಶೇ.20ರಷ್ಟು ಸಹಾಯಧನ (ಗರಿಷ್ಠ.20,000/-ರೂ) ಶೇಕಡ 80ರಷ್ಟು ಸಾಲವನ್ನು…

Read More

ಉಡುಪಿ : ಹಿರಿಯ ಚಿಂತಕ, ಸಾಹಿತಿ, ಹೋರಾಟಗಾರ ಜಿ. ರಾಜಶೇಖರ್ (75) ಅನಾರೋಗ್ಯದಿಂದ ರಾತ್ರಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ  ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ರಾಜಶೇಖರ್‌  ಅವರು ರಾತ್ರಿ 11 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ರಾಜಶೇಖರ ಅವರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಕಾಗೋಡು ಸತ್ಯಾಗ್ರಹ, ಪರಿಸರ ಮತ್ತು ಸಮಾಜವಾದ, ಕೋಮುವಾದದ ಕರಾಳ ಮುಖಗಳು, ಹರ್ಷಮಂದರ್ ಬರಹಗಳು (ಸಹಲೇಖಕ: ಕೆ. ಫಣಿರಾಜ್), ಬಹುವಚನ ಭಾರತ, ಬರ್ಟೊಲ್ಟ್ ಬ್ರೆಕ್ಟ್ ಪರಿಚಯ, ದಾರು ಪ್ರತಿಮ ನ ಪೂಜಿವೇ (ಅನುವಾದ)ಮುಂತಾದ ಕೃತಿಗಳನ್ನು ಬರೆದಿದ್ದಾರೆ. ಪಾರ್ಥಿವ ಶರೀರವನ್ನು ಉಡುಪಿಯ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಬೆಳಗ್ಗೆ 8 ಗಂಟೆಗೆ ನಗರದ ಅಮ್ಮಣ್ಣಿ ರಾಮಣ್ಣ ಸಭಾಂಗಣದ ಸಮೀಪದಲ್ಲಿರುವ ಸಂಬಂಧಿಕರ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Read More

ನವದೆಹಲಿ : ದೇಶದಲ್ಲಿ ಮಾದಕ ವ್ಯಸನದ ದುರಾಭ್ಯಾಸ ಮಕ್ಕಳ ಮೇಲೂ ಪರಿಣಾಮ ಬೀರುತ್ತಿದ್ದು, ದೇಶದಲ್ಲಿ 10 ರಿಂದ 17 ವರ್ಷದೊಳಗಿನ ಸುಮಾರು 62 ಲಕ್ಷ ಮಕ್ಕಳು ಗಾಂಜಾ, ಓಪಿಯಾಡ್ ಮತ್ತು ಕೊಕೇನ್ ಬಳಸುತ್ತಿದ್ದಾರೆ. ಇದಲ್ಲದೆ, 18 ರಿಂದ 75 ವರ್ಷ ವಯಸ್ಸಿನ ಸುಮಾರು ನಾಲ್ಕು ಕೋಟಿ ಜನರು ಸಹ ಇಂತಹ ಮಾದಕವಸ್ತುಗಳ ಬಲೆಯಲ್ಲಿ ಸಿಲುಕಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇನ್ನು ಕೇಂದ್ರ ಸರ್ಕಾರವು 8,000ಕ್ಕೂ ಹೆಚ್ಚು ಯುವ ಸ್ವಯಂಸೇವಕರನ್ನ ಒಳಗೊಂಡ ಬೃಹತ್ ಸಮುದಾಯ ಪ್ರಚಾರ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ, ದೇಶದ 272 ಅತ್ಯಂತ ಸೂಕ್ಷ್ಮ ಜಿಲ್ಲೆಗಳಲ್ಲಿ ‘ಡ್ರಗ್ ಫ್ರೀ ಇಂಡಿಯಾ ಅಭಿಯಾನ’ವನ್ನು ಪ್ರಾರಂಭಿಸಲಾಗಿದೆ. ಕೊಕೇನ್ʼಗೆ ವ್ಯಸನಿಯಾಗಿದ್ದಾರೆ ಎರಡು ಮಿಲಿಯನ್ ಮಕ್ಕಳು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2018ರಲ್ಲಿ ದೆಹಲಿಯ ಏಮ್ಸ್‌ನ ರಾಷ್ಟ್ರೀಯ ಔಷಧ ಅವಲಂಬನೆ ಚಿಕಿತ್ಸಾ ಕೇಂದ್ರದ ಮೂಲಕ ಭಾರತದಲ್ಲಿ ಮಾದಕವಸ್ತು ಬಳಕೆಯ ವ್ಯಾಪ್ತಿ ಮತ್ತು ಸ್ವರೂಪದ ಬಗ್ಗೆ ಸಮಗ್ರ ರಾಷ್ಟ್ರೀಯ ಸಮೀಕ್ಷೆಯನ್ನ ನಡೆಸಿದೆ. ಈ…

Read More

ಬೆಂಗಳೂರು : ವಿದ್ಯುಚ್ಛಕ್ತಿ ಸಂಪರ್ಕ ಕೋರಿ ಅರ್ಜಿ ಸಲ್ಲಿಸುವ ಪ್ರತಿ ಬಡವ ಕಟ್ಟುವ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾನೂನನ್ನು ರೂಪಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ವತಿಯಿಂದ ‘ನಿಗಮದ 53ನೇ ಸಂಸ್ಥಾಪನಾ ದಿನಾಚರಣೆ-2022’ ರ ಉದ್ಘಾಟಿಸಿ ಮಾತನಾಡಿದ ಸಿಎಂ, ಈ ವೇಳೆ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾನೂನನ್ನ ರೂಪಿಸಲು ತೀರ್ಮಾನಿಸಲಾಗಿದೆ ಎಂದರು. ಕನಿಷ್ಠ ವಿದ್ಯುಚ್ಛಕ್ತಿಯ ಸೌಲಭ್ಯದಿಂದ ಯಾರೂ ವಂಚಿತರಾಗಬಾರದು ವಿದ್ಯುತ್ ಸರಬರಾಜು ಅಗತ್ಯ ಸೇವೆಗಳಲ್ಲಿ ಒಂದು. ಈಗಿನ ಕಾಲದಲ್ಲಿ ವಿದ್ಯುತ್ ಇಲ್ಲದೇ ಯಾರೂ ಬದುಕುವುದು ಸಾಧ್ಯವಿಲ್ಲ. ಕುಡಿಯುವ ನೀರು ಕೊಟ್ಟಂತೆಯೇ ವಿದ್ಯುತ್ ನೀಡುವುದು ಸರ್ಕಾರದ ಜವಾಬ್ದಾರಿ. ಜನರು ದೈನಂದಿನ ಬದುಕಿಗೆ ಅಗತ್ಯವಾಗಿ ಬೇಕಾದ ಕನಿಷ್ಟ ವಿದ್ಯುತ್ಛಕ್ತಿಯಿಂದ ವಂಚಿತರಾಗಬಾರದೆಂಬುದು ಸರ್ಕಾರದ ಮಾನವೀಯ ಕಳಕಳಿ. ವಿದ್ಯುತ್ ಪೂರೈಕೆ ಎನ್ನುವುದು ಅಗತ್ಯ ಸೇವೆಗಳಲ್ಲೊಂದಾಗಿದ್ದು, ಅದು ಜನರ ಹಕ್ಕಾಗಿದೆ. ಕಾರ್ಖಾನೆಗಳಿಗೆ ಅವಶ್ಯವಾಗಿ ಸರಬರಾಜಾಗುವಂತೆ ಜನರಿಗೂ ವಿದ್ಯುತ್ ಸೌಲಭ್ಯ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ.…

Read More

ಕೋಲ್ಕತಾ : ಪೊಲೀಸರು ಚಾಲನಾ ಪರವಾನಗಿಗಳನ್ನ ಮುಟ್ಟುಗೋಲು ಹಾಕಿಕೊಳ್ಳಬಹುದು ಮತ್ತು ಅಮಾನತುಗೊಳಿಸಲು ಶಿಫಾರಸು ಮಾಡಬಹುದು. ಆದ್ರೆ, ಮೋಟಾರು ವಾಹನ ಕಾಯ್ದೆ, 1988ರ ಅಡಿಯಲ್ಲಿ ಸ್ವಂತವಾಗಿ ಪರವಾನಗಿಗಳನ್ನ ಅಮಾನತುಗೊಳಿಸುವಂತಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಅಂದ್ಹಾಗೆ, ಮೇ 19ರಂದು ಲೇಕ್ ಗಾರ್ಡನ್ಸ್-ಸದರ್ನ್ ಅವೆನ್ಯೂ ಕ್ರಾಸಿಂಗ್‌ನಲ್ಲಿ ಗಂಟೆಗೆ 61.1 ಕಿ.ಮೀ/ಗಂ ವೇಗದಲ್ಲಿ ವಾಹನ ಚಲಾಯಿಸಿದ ಆರೋಪದ ಮೇಲೆ ಹೊಸ ಅಲಿಪೋರ್ ನಿವಾಸಿಯ ಡ್ರೈವಿಂಗ್‌ ಲೈಸನ್ಸ್‌ ಅಮಾನತುಗೊಳಿಸಲಾಗಿತ್ತು. ಸಧ್ಯ ಅಮಾನತುಗೊಂಡ ಪರವಾನಗಿಯನ್ನ ಹಿಂದಿರುಗಿಸುವಂತೆ ಸಹಾಯಕ ಪೊಲೀಸ್ ಆಯುಕ್ತರಿಗೆ ಸೂಚಿಸಿದ ನ್ಯಾಯಮೂರ್ತಿ ಮೌಶುಮಿ ಭಟ್ಟಾಚಾರ್ಯ ಅವ್ರು ತಮ್ಮ ಏಳು ಪುಟಗಳ ಆದೇಶ ಹೊರಡಿಸಿದ್ದಾರೆ. 1988 ರ ಮೋಟಾರು ವಾಹನ ಕಾಯ್ದೆಯ ನಿಬಂಧನೆಗಳು ಪರವಾನಗಿ ಪ್ರಾಧಿಕಾರ (ಈ ಸಂದರ್ಭದಲ್ಲಿ ರಾಜ್ಯ ಸಾರಿಗೆ ಇಲಾಖೆ) ಮಾತ್ರ ಪರವಾನಗಿ ಹೊಂದಿರುವವರಿಗೆ ವಿಚಾರಣೆ ನೀಡಿದ ನಂತರ ಚಾಲನಾ ಪರವಾನಗಿಯನ್ನು ಅನರ್ಹಗೊಳಿಸಬಹುದು ಅಥವಾ ರದ್ದುಗೊಳಿಸಬಹುದು ಎಂದು ಸೂಚಿಸುತ್ತದೆ ಎಂದು ನ್ಯಾಯಮೂರ್ತಿ ಭಟ್ಟಾಚಾರ್ಯ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಪ್ರಸ್ತುತ ನಿಯಮಗಳು ಪೊಲೀಸ್ ಅಧಿಕಾರಿಯ…

Read More

ನವದೆಹಲಿ : ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವ್ರು ಜಾರಿ ನಿರ್ದೇಶನಾಲಯದ (ಇ.ಡಿ) ಮುಂದೆ ವಿಚಾರಣೆಗೆ ಹಾಜರಾಗಲಿರುವ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಜುಲೈ 21ರ ಗುರುವಾರ ದೇಶಾದ್ಯಂತ ಪ್ರತಿಭಟನೆಗಳನ್ನ ನಡೆಸಲಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, “ಮೋದಿ-ಶಾ ಜೋಡಿ ನಮ್ಮ ಉನ್ನತ ನಾಯಕತ್ವದ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳುತ್ತಿರುವ ವಿಧಾನದ ವಿರುದ್ಧ ಕಾಂಗ್ರೆಸ್ ಪಕ್ಷವು ತನ್ನ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಅವರೊಂದಿಗೆ ಸಾಮೂಹಿಕ ಒಗ್ಗಟ್ಟನ್ನ ವ್ಯಕ್ತಪಡಿಸಿ, ನಾಳೆ ದೇಶಾದ್ಯಂತ ಪ್ರತಿಭಟನೆಗಳನ್ನ ನಡೆಸಲಿದೆ” ಎಂದು ಹೇಳಿದ್ದಾರೆ. https://twitter.com/Jairam_Ramesh/status/1549749133543493632?s=20&t=-GdlHaPI6JfaPHVS1jOohA ಅಂದ್ಹಾಗೆ, ಜೂನ್ 8ರಂದು ಹಾಜರಾಗುವಂತೆ ಕಾಂಗ್ರೆಸ್ ಮುಖ್ಯಸ್ಥರಿಗೆ ಇಡಿ ಮೊದಲು ನೋಟಿಸ್ ನೀಡಿತ್ತು. ಆದ್ರೆ, ಕೋವಿಡ್ -19ಗೆ ಧನಾತ್ಮಕ ಪರೀಕ್ಷೆ ನಡೆಸಿದ ನಂತ್ರ, ರಾಯ್ಬರೇಲಿ ಸಂಸದೆಗೆ ಜೂನ್ 23ಕ್ಕೆ ಎರಡನೇ ಸಮನ್ಸ್ ಜಾರಿ ಮಾಡಲಾಯಿತು. ಯಾಕಂದ್ರೆ, ಅವರು “ಕೋವಿಡ್ -19 ಮತ್ತು…

Read More

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ( KSRTC ) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿರುವಂತ ಶ್ರೀಮತಿ ಡಾ.ಲತಾ ಟಿಎಸ್ ( Dr Latha TS ) ಅವರಿಗೆ, ಸೆಂಟ್ ಪಾಲ್ಸ್ ನ್ಯಾಷಮನಲ್ ಮೀಡಿಯಾ ಪ್ರಶಸ್ತಿಯ ಭಾಗವಾಗಿ ನೀಡುವಂತ ಎಕ್ಸಲೆನ್ಸ್ ಪಬ್ಲಿಕ್ ರಿಲೇಶನ್ ಪ್ರಶಸ್ತಿಯನ್ನು ( Excellence Public Relation Award ) ನೀಡಿ ಗೌರವಿಸಲಾಗಿದೆ. https://kannadanewsnow.com/kannada/ambulance-crashes-into-a-toll-booth-the-horrific-accident-took-place-at-shirur-toll-plaza-in-udupi/ ನಗರದ ಸೇಂಟ್ ಪಾಲ್ಸ್ ಕಾಲೇಜು SPNMA (ST PAULS NATIONAL MEDIA AWARDS) -ದೇಶದಾದ್ಯಂತ ಮಾಧ್ಯಮ ಕ್ಷೇತ್ರದಲ್ಲಿನ ಸಮರ್ಪಣಾ ಮತ್ತು ಶ್ಲಾಘನೀಯ ಸೇವೆಯನ್ನು ಗುರುತಿಸಲಾಗುತ್ತಿದೆ. ಇದರ ಭಾಗವಾಗಿ ಮಾಧ್ಯಮ ವ್ಯಕ್ತಿಗಳನ್ನು ಗೌರವಿಸುವ ಪ್ರಥಮ ಆವೃತ್ತಿಯ ಪ್ರಶಸ್ತಿ ಸಮಾರಂಭ ನಡೆಸಲಾಗಿಯಿತು. https://kannadanewsnow.com/kannada/is-there-this-mark-on-the-rs-500-note-beware-its-a-fake-note-dont-be-fooled-without-checking/  ಈ ಬಾರಿಯ ಸೇಂಟ್ ಪಾಲ್ ಸಂಸ್ಥೆಯು ಮಾಧ್ಯಮ‌ ಕ್ಷೇತ್ರಕ್ಕೆ ಸಂಬಂಧಪಟ್ಟಂತ ಪ್ರಶಸ್ತಿಯನ್ನು ನೀಡಿದ್ದು, ಡಾ.ಲತಾ ಟಿ.ಎಸ್, ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ಕೆಎಸ್‌ಆರ್‌ಟಿಸಿರವರು “ಎಕ್ಸಲೆನ್ಸ್ ಪಬ್ಲಿಕ್ ರಿಲೇಶನ್‌ನಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇವರಲ್ಲದೇ ವಿವಿಧ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವಂತ ಇತರೆ ಸಾಧಕರಿಗೂ ಇದೇ…

Read More

ನವದೆಹಲಿ : ಉತ್ತರ ಪ್ರದೇಶದಲ್ಲಿ ದಾಖಲಾದ ಎಲ್ಲಾ ಪ್ರಕರಣಗಳಲ್ಲಿ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್‌ಗೆ ಸುಪ್ರೀಂಕೋರ್ಟ್ ಬುಧವಾರ ಜಾಮೀನು ನೀಡಿದೆ. ಇದಾದ ಬಳಿಕ ರಾತ್ರಿ ಎಂಟು ಗಂಟೆ ಸುಮಾರಿಗೆ ತಿಹಾರ್ ಜೈಲಿನಿಂದ ಜುಬೇರ್ ಬಿಡುಗಡೆಯಾಗಿದ್ದಾರೆ. ಅಂದ್ಹಾಗೆ, ಜೂನ್ 27ರಂದು ದೆಹಲಿ ಪೊಲೀಸರು ಜುಬೈರ್‌ ಬಂಧಿಸಿದ್ದರು. ಇಂದು ಜುಬೈರ್ ಅವರ ಮನವಿಯ ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್, ದೆಹಲಿ ಪೊಲೀಸರು ದಾಖಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯವು ಜುಬೈರ್‌ಗೆ ಜಾಮೀನು ನೀಡಿದ ನಂತ್ರ ಕಸ್ಟಡಿಯಲ್ಲಿಡಲು ಯಾವುದೇ ಸೂಕ್ತ ಸಮರ್ಥನೆ ಇಲ್ಲ ಎಂದು ಹೇಳಿದೆ. ಇದೇ ರೀತಿಯ ಕ್ರಮಕ್ಕಾಗಿ ಅವರ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಿಸಿದರೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಮೊಹಮ್ಮದ್ ಜುಬೈರ್ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡವನ್ನು (SIT) ವಿಸರ್ಜಿಸುವಂತೆ ಪೀಠವು ಸೂಚಿಸಿದೆ. ಇನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ನಲ್ಲಿ 20,000 ರೂ.ಗಳ ಶ್ಯೂರಿಟಿ (ಜಾಮೀನು…

Read More

ಉಡುಪಿ: ಟೋಲ್ ಬಳಿಯ ರಸ್ತೆಯಲ್ಲಿಯೇ ಮಲಗಿದ್ದಂತ ಧನವನ್ನು ಓಡಿಸಲು ಹೋಗಿದ್ದಂತ ಟೋಲ್ ಸಿಬ್ಬಂದಿಯನ್ನು ರಕ್ಷಿಸಲು ಹೋಗಿ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಗೆ ಡಿಕ್ಕಿಯಾಗಿ ಭೀಕರ ಅಪಘಾತ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66ರ ಟೋಲ್ ಬಳಿಯಲ್ಲಿ ಇಂದು ನಡೆದಿದೆ. ಈ ಭೀಕರ ಅಪಘಾತದ ದೃಶ್ಯಾವಳಿ ಟೋಲ್ ನಲ್ಲಿದ್ದಂತ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ಭಯ ಹುಟ್ಟಿಸುವಂತೆ ಅಪಘಾತದ ವೀಡಿಯೋ ಮುಂದಿದೆ ನೋಡಿ.. https://kannadanewsnow.com/kannada/shimoga-talaguppa-mysuru-passenger-train-services-to-resume-from-july-24/ ಹೊನ್ನಾವರದಿಂದ ಕುಂದಾಪುರಕ್ಕೆ ಆ್ಯಂಬುಲೆನ್ಸ್ ನಲ್ಲಿ ರೋಗಿಯಾಗಿದ್ದಂತ ಲೋಕೇಶ ಮಾಧವ ನಾಯ್ಕ್ ಎಂಬುವರನ್ನು ಶ್ರೀದೇವಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಆ್ಯಂಬುಲೆನ್ಸ್ ಮೂಲಕ ಕರೆದೊಯ್ಯಲಾಗುತ್ತಿತ್ತು. ಬೈದೂರು ತಾಲೂಕಿನ ಶಿರೂರು ಟೋಲ್ ಗೇಟ್ ಬಳಿಯಲ್ಲಿ ಬಂದಾಗ, ಟೋಲ್ ಸಿಬ್ಬಂದಿಗಳು ಆ್ಯಂಬುಲೆನ್ಸ್ ಬಂದಿದ್ದನ್ನು ಗಮನಿಸಿ ರಸ್ತೆಗೆ ಅಡ್ಡವಾಗಿಟ್ಟಿದ್ದಂತ ಬ್ಯಾರಿಗೇಡ್ ತೆಗೆದಿದ್ದಾರೆ. ಮತ್ತೊಬ್ಬ ಸಿಬ್ಬಂದಿ ಅದೇ ರಸ್ತೆಯಲ್ಲಿ ಮಲಗಿದ್ದಂತ ಧನವನ್ನು ಓಡಿಸಿದ್ದಾರೆ. https://kannadanewsnow.com/kannada/covaxin-booster-dose-shows-immunity-works-against-new-variants-bharat-biotech/ ಟೋಲ್ ಸಿಬ್ಬಂದಿ ಬ್ಯಾರಿಗೇಡ್, ಧನ ಓಡಿಸುತ್ತಿದ್ದನ್ನು ಕಂಡಂತ ಆ್ಯಂಬುಲೆನ್ಸ್ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡು…

Read More

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಬ್ರಿಟನ್ ಪ್ರಧಾನಿ ರೇಸ್‌ನಲ್ಲಿ ಭಾರತೀಯ ಮೂಲದ ರಿಷಿ ಸುನಕ್ ಐದನೇ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದು, 137 ಮತಗಳನ್ನು ಪಡೆದಿದ್ದಾರೆ. ಇನ್ನು ಐದನೇ ಸುತ್ತಿನ ಮತದಾನದಲ್ಲಿ 105 ಮತಗಳನ್ನ ಪಡೆದ ವ್ಯಾಪಾರ ಸಚಿವ ಪೆನ್ನಿ ಮೊರ್ಡಾಂಟ್ ಪ್ರಧಾನಿ ರೇಸ್‌ನಿಂದ ಹೊರಗುಳಿದಿದ್ದಾರೆ.ಈಗ ಸುನಕ್, ಲಿಜ್ ಟ್ರಸ್ ಅವರನ್ನ ಎದುರಿಸಲಿದ್ದು, ಅವ್ರು 113 ಮತಗಳನ್ನ ಪಡೆದಿದ್ದಾರೆ. https://twitter.com/ANI/status/1549774623558221824?s=20&t=ffKADP3tTElcnMZIQ3p1iw ಅಂದ್ಹಾಗೆ, ಎಲ್ಲಾ ಐದು ಹಂತಗಳಲ್ಲಿ ರಿಷಿ ಸುನಕ್ ಅತಿ ಹೆಚ್ಚು ಮತಗಳನ್ನ ಪಡೆದಿದ್ದಾರೆ. ನಾಲ್ಕನೇ ಸುತ್ತಿನ ಮತದಾನದಲ್ಲಿ 118 ಮತಗಳನ್ನ ಪಡೆದಿದ್ರೆ, ಸೋಮವಾರ ನಡೆದ ಮೂರನೇ ಸುತ್ತಿನ ಮತದಾನದಲ್ಲಿ 115 ಮತಗಳನ್ನ ಪಡೆದಿದ್ದರು. ಇನ್ನು ಇದೇ ವೇಳೆ ಎರಡನೇ ಸುತ್ತಿನಲ್ಲಿ 101 ಮತಗಳು ಹಾಗೂ ಮೊದಲ ಸುತ್ತಿನಲ್ಲಿ 88 ಮತಗಳು ಚಲಾವಣೆಯಾದವು. ಸುನಕ್ ಎಲ್ಲಾ ಹಂತಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದರ ನಂತರ, ಟೋರಿ ಪಕ್ಷದ ಸದಸ್ಯತ್ವ ಬೇಸ್‌ಗೆ ಒಲವು ತೋರುವತ್ತ ಗಮನ ಹರಿಸಲಾಗುವುದು. ಈ ಸದಸ್ಯರ ಸಂಖ್ಯೆ ಸುಮಾರು 160,000 ಎಂದು ಅಂದಾಜಿಸಲಾಗಿದೆ, ಅವರು…

Read More