Subscribe to Updates
Get the latest creative news from FooBar about art, design and business.
Author: KNN IT TEAM
ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ram Nath Kovind) ಅವರ ಅಧಿಕಾರಾವಧಿ ಜು. 24ಕ್ಕೆ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಹೊಸ ರಾಷ್ಟ್ರಪತಿ ಆಯ್ಕೆಗೆ ಜು. 18ರಂದು ಮತದಾನ ನಡೆದಿತ್ತು. ಇಂದು ಅದರ ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ. ಸಂಸತ್ ಭವನದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಭಾರತದ 15 ನೇ ರಾಷ್ಟ್ರಪತಿ ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು(Draupadi Murmu) ಮತ್ತು ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ(Yashwant Sinha) ನಡುವೆ ಸ್ಪರ್ಧೆ ಏರ್ಪಟ್ಟಿದೆ. ಎನ್‌ಡಿಎ ಅಭ್ಯರ್ಥಿಗೆ ಸ್ಪರ್ಧೆಯಲ್ಲಿ ಸ್ಪಷ್ಟವಾದ ಬಲವಿದೆ ಎನ್ನಲಾಗಿದೆ. ಬುಡಕಟ್ಟು ಜನಾಂಗದ ನಾಯಕಿ ಹಾಗೂ ಜಾರ್ಖಂಡ್ನ ಮಾಜಿ ರಾಜ್ಯಪಾಲರಾಗಿದ್ದ ದ್ರೌಪದಿ ಮುರ್ಮು ಅವರು ಆಯ್ಕೆಯಾದರೆ ರಾಷ್ಟ್ರಪತಿ ಹುದ್ದೆ ಅಲಂಕರಿಸುವ ಎರಡನೇ ಮಹಿಳೆ ಮತ್ತು ಬುಡಕಟ್ಟು ಜನಾಂಗದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ. ಸೋಮವಾರ ಸಂಸತ್ ಭವನ, ಪುದುಚೇರಿ ಮತ್ತು ದೆಹಲಿಯ…
ಹಾವೇರಿ: ಅತಿವೃಷ್ಟಿ ಹಾನಿ ಸರ್ವೇ ಕಾರ್ಯ ಪ್ರಗತಿಯಲ್ಲಿದ್ದು,ಶೀಘ್ರವೇ ಸರ್ವೇ ಕಾರ್ಯ ಪೂರ್ಣಗೊಳ್ಳಲಿದೆ. ಹಾನಿಯಾದವರಿಗೆ ಎನ್.ಡಿ.ಆರ್.ಎಫ್.ಮಾರ್ಗಸೂಚಿಗಿಂತ ದ್ವಿಗುಣ ಮೊತ್ತದ ಪರಿಹಾರ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರ ನಿರ್ಧರಿಸಿದೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ ಅವರು ಹೇಳಿದರು. https://kannadanewsnow.com/kannada/bigg-news-spoken-english-class-in-government-schools-of-classes-1-to-8-in-the-state-this-year-itself/ ಹಿರೇಕೆರೂರು ತಾಲೂಕು ಕೋಡ ಗ್ರಾಮದಲ್ಲಿ ಮಾಧ್ಯಮದವರಿಂದಿಗೆ ಮಾತನಾಡಿದ ಅವರು, ಸತತವಾಗಿ ಮಳೆಯ ಕಾರಣ ಬೆಳೆಹಾನಿ ಸರ್ವೇ ಕಾರ್ಯ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಕಂದಾಯ, ಕೃಷಿ ಇಲಾಖೆ ಜಂಟಿಯಾಗಿ ಸರ್ವೇಕಾರ್ಯದಲ್ಲಿ ನಿರತವಾಗಿದೆ. ಶೀಘ್ರದಲ್ಲೇ ಸರ್ವೇ ಕಾರ್ಯಪೂರ್ಣಗೊಳ್ಳಲಿದೆ. ಧಾರಳವಾಗಿ ಸರ್ವೇ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದರು. https://kannadanewsnow.com/kannada/bigg-news-good-news-for-farmers-who-have-suffered-crop-losses-due-to-rains-in-the-state-seeds-fertilisers-distributed-once-again/ ರೈತರ ಅನುಕೂಲಕ್ಕಾಗಿ ರಾಜ್ಯದ 13 ಸ್ಥಳಗಳಲ್ಲಿ ಅಂದಾಜು ರೂ.10ಕೋಟಿ ವೆಚ್ಚದಲ್ಲಿ ಕೋಲ್ಡ್‍ಸ್ಟೋರೇಜ್ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. ಜಿಲ್ಲೆಯ ಶಿಗ್ಗಾಂವ, ಹಿರೇಕೆರೂರು, ರಟ್ಟಿಹಳ್ಳಿಯಲ್ಲಿ ತಲಾ ರೂ.9.86 ಕೋಟಿ ವೆಚ್ಚದಲ್ಲಿ ಕೋಲ್ಡ್‍ಸ್ಟೋರೇಜ್ ಘಟಕ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಇಂದು ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು. https://kannadanewsnow.com/kannada/bigg-news-sslc-supplementary-exam-result-declared-will-be-available-today-at-12-noon-on-website/ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿನದ…
ಬೆಂಗಳೂರು : ಕನ್ನಡ ಮಾಧ್ಯಮ ಶಾಲೆಗಳನ್ನು ( Kannada Medium School ) ಉಳಿಸಿ, ಬೆಳೆಸಲು ಕನ್ನಡ ಮಾಧ್ಯಮದ ಜೊತೆಗೆ ಉದ್ದೇಶಿತ ‘ಸರ್ಕಾರಿ ಮಾದರಿ ಶಾಲೆ’ಗಳಲ್ಲಿ ಪ್ರಾಥಮಿಕ ಶಾಲಾ ಹಂತದಿಂದಲೇ ‘ಸ್ಪೋಕನ್ ಇಂಗ್ಲೀಷ್’ ( Spoken English ) ಕಲಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. https://kannadanewsnow.com/kannada/bigg-news-good-news-for-farmers-who-have-suffered-crop-losses-due-to-rains-in-the-state-seeds-fertilisers-distributed-once-again/ ಪ್ರಸಕ್ತ ವರ್ಷದಿಂದಲೇ ರಾಜ್ಯದ 1 ರಿಂದ 8 ನೇ ತರಗತಿ ಶಾಲಾ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ತರಗತಿ ಆರಂಭಿಸಲು ತಯಾರಿ ಮಾಡಲಾಗುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಂವಹನ ಹಾಗು ಶಿಕ್ಷಣ ಪಡೆಯುವ ಉದ್ದೇಶದಿಂದ ಪ್ರಸಕ್ತ ವರ್ಷದಿಂದಲೇ ಇಂಗ್ಲೀಷ್ ಸ್ಪೋಕನ್ ಕ್ಲಾಸ್ ಶುರು ಮಾಡಲು ಮುಂದಾಗಿದೆ. ಸರ್ಕಾರಿ ಶಾಲೆಗಳಲ್ಲಿರುವ ಇಂಗ್ಲೀಷ್ ಶಿಕ್ಷಕರಿಗೆ ಈ ಬಗ್ಗೆ ವಿಶೇಷ ತರಬೇತಿ ಹಾಗು ಕೌಶಲ್ಯ ಹೆಚ್ಚಿಸಲು ಸಿದ್ಧತೆ ಮಾಡಲಾಗುತ್ತಿದೆ. https://kannadanewsnow.com/kannada/bigg-news-cm-bommai-to-visit-delhi-for-3-days-from-july-24-discuss-cabinet-expansion/ ಖಾಸಗಿ ಶಾಲೆಗಳು ಮತ್ತು ಇಂಗ್ಲೀಷ್ ಮಾಧ್ಯಮ ಶಿಕ್ಷಣದ ವ್ಯಾಮೋಹ ಬಹಳಷ್ಟು ಜನರಲ್ಲಿದೆ. ಗುಣಮಟ್ಟ ಹೇಗಾದರೂ ಇರಲಿ ಮಕ್ಕಳಿಗೆ ಇಂಗ್ಲೀಷ್ ಕಲಿಸಬೇಕು ಎನ್ನುವ ಆಸೆ ಪಾಲಕರಲ್ಲಿ ಇದೆ. ರಾಜ್ಯದಲ್ಲಿನ ಕೆಪಿಎಸ್…
ಮೈಸೂರು : ಮಳೆಯಿಂದ ಬೆಳೆ ನಷ್ಟವಾದ ರೈತರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ರಾಜ್ಯದಲ್ಲಿ ನೆರೆಯಿಂದ ಬೆಳೆ ನಷ್ಟವಾದ ರೈತರಿಗೆ ಮತ್ತೊಮ್ಮೆ ಬೀಜ, ಗೊಬ್ಬರ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. https://kannadanewsnow.com/kannada/bigg-news-cm-bommai-to-visit-delhi-for-3-days-from-july-24-discuss-cabinet-expansion/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನೆರೆಯಿಂದಾಗಿ ಬೆಳೆ ನಷ್ಟದ ವರದಿ ಇನ್ನೂ ಕೇಂದ್ರದ ಕೈಸೇರಿಲ್ಲ. ಅದು ಬಂದೊಡಣನೆ ಮತ್ತೊಮ್ಮೆ ರೈತರಿಗೆ ಬೀಜ, ರಸಗೊಬ್ಬರ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ. ಪ್ರವಾಹ ತಗ್ಗುವವರೆಗೂ ಬೆಳೆ ನಷ್ಟದ ಅಂದಾಜು ಕಷ್ಟ, ಈಗ ಕೇವಲ ರಸ್ತೆ, ಸೇತುವೆ ನಾಶವಾಗಿರುವ ಬಗ್ಗೆ ಮಾತ್ರ ವರದಿ ತಯಾರಾಗುತ್ತಿದೆ. ಬಳಿಕ ಬೆಳೆ ನಷ್ಟದ ವರದಿ ಬರಲಿದ್ದು, ಆಗ ಮತ್ತೊಮ್ಮೆ ಬೀಜ, ರಸಗೊಬ್ಬರ ವಿತರಿಸಲಾಗುವುದು ಎಂದು ಹೇಳಿದ್ದಾರೆ. https://kannadanewsnow.com/kannada/bigg-news-sslc-supplementary-exam-result-declared-will-be-available-today-at-12-noon-on-website/
ಬೆಂಗಳೂರು: ನೂತನ ರಾಷ್ಟ್ರಪತಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಜು. 24 ರಂದು ನವದೆಹಲಿಗೆ ತೆರಳಿತ್ತಿದ್ದೇನೆ. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಪ್ರಸ್ತಾಪಿಸಿದರೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಮಲೋಚನೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ್ ತಿಳಿಸಿದರು. https://kannadanewsnow.com/kannada/bigg-news-sslc-supplementary-exam-result-declared-will-be-available-today-at-12-noon-on-website/ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ಕಾರದ ಪ್ರಧಾನಕಾರ್ಶಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ವಿವಿಧ ಇಲಾಖೆಗಳ ನಿಯೋಗದೊಂದಿಗೆ ಜುಲೈ 24 ರಂದು ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. https://kannadanewsnow.com/kannada/bigg-news-state-government-cancels-appointment-of-12-city-authority-chairpersons/ ರಾಷ್ಟ್ರದ ನೂತನ ರಾಷ್ಟ್ರಪತಿಗಳ ಪ್ರಮಾಣವಚನ ಕಾರ್ಯಕ್ರಮ, ವಿವಿಧ ಇಲಾಖೆಗಳು ಮತ್ತು ಕಸ್ತೂರಿ ರಂಗನ್ ಯೋಜನೆ ವಿಚಾರವಾಗಿ ನಿಯೋಗವನ್ನು ಬೆಂಗಳೂರಿನಿಂದ ದೆಹಲಿಗೆ ಕರೆದೊಯ್ಯಿರುವುದಾಗಿ ಸಿಎಂ ಬೊಮ್ಮಾಯಿ ಅವರು ತಿಳಿಸಿದರು. ಜುಲೈ 25 ಮತ್ತು 26 ರಂದು ದೆಹಲಿಯಲ್ಲಿರುತ್ತೇನೆ. ಆ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಮೇಲಿನವರು ಪ್ರಸ್ತಾಪ ಮಾಡಿದರೆ, ನಾನು ಮಾತುಕತೆ ನಡೆಸುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಬೆಂಗಳೂರು: ಕಳೆದ ಜೂನ್ ನಲ್ಲಿ ನಡೆದಿದ್ದಂತ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ( SSLC Supplementary Exam Result 2022 ) ಇಂದು ಪ್ರಕಟಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಇಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತ ವೆಬ್ ಸೈಟ್ https://karresults.nic.in/ ನಲ್ಲಿ ಫಲಿತಾಂಶ ಲಭ್ಯ ವೀಕ್ಷಿಸಬಹುದಾಗಿದೆ. https://kannadanewsnow.com/kannada/good-news-good-news-for-poor-students-in-the-state-morarji-school-to-be-extended-up-to-puc/ ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Minister BC Nagesh ) ಮಾಹಿತಿ ಬಿಡುಗಡೆ ಮಾಡಿದ್ದು, 2022ರ ಜೂನ್ 27ರಿಂದ ಜುಲೈ 4ರ ವರೆಗೆ ನಡೆದ ಎಸ್‌ಎಸ್ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ನಾಳೆ ಪ್ರಕಟಲಾಗಲಿದೆ. ಪೂರಕ ಪರೀಕ್ಷೆಯಲ್ಲಿ 37,479 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದ್ದಾರೆ. ಪೂರಕ ಪರೀಕ್ಷೆಗೆ 94,669 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಉತ್ತೀರ್ಣ ಪ್ರಮಾಣ ಶೇ.39.59 ಇದೆ ಎಂದು ಸಚಿವರು ಮಾಹಿತಿ ನೀಡಿದರು. ನಾಳೆ ಮಧ್ಯಾಹ್ನ 12 ಗಂಟೆ ನಂತರ ಈ ವೆಬ್‌ಸೈಟ್‌ನಲ್ಲಿ https://karresults.nic.in/ ಫಲಿತಾಂಶ ವೀಕ್ಷಿಸಬಹುದು. ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ ಎಸ್ಎಂಎಸ್ ಮೂಲಕವೂ ಫಲಿತಾಂಶ ಕಳುಹಿಸಲಾಗುತ್ತದೆ…
ಶಿರಸಿ : ರಾಜ್ಯದ ಬಡ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಮೊರಾರ್ಜಿ ವಸತಿ ನಿಲಯ ಸೇರಿದಂತೆ ಹಲವು ವಸತಿ ನಿಲಯಗಳನ್ನು ಪಿಯುಸಿವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. https://kannadanewsnow.com/kannada/bigg-news-state-government-cancels-appointment-of-12-city-authority-chairpersons/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡ ವಿದ್ಯಾರ್ಥಿಗಳು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೊರಾರ್ಜಿ ಶಾಲೆಗಳು ಉತ್ತಮ ವೇದಿಕೆಯಾಗಿವೆ. 6 ನೇ ತರಗತಿಯಿಂದ ಪಿಯುಸಿವರೆಗೂ ಒಂದೇ ಸ್ಥಳದಲ್ಲಿ ವಿದ್ಯಾಭ್ಯಾಸ ದೊರೆಯುವಂತಾಗಬೇಕು ಎಂಬುದು ನಮ್ಮ ಆಶಯವಾಗಿದೆ. ಹೀಗಾಗಿ ಮೊರಾರ್ಜಿ ಶಾಲೆಗಳನ್ನು ಪಿಯುಸಿವರೆಗೆ ವಿಸ್ತರಿಸುವ ಕುರಿತಂತೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. https://kannadanewsnow.com/kannada/bigg-news-azadi-ka-amrit-mahotsav-govt-issues-circular-to-all-schools-colleges-in-the-state-to-organize-these-competitions/
ಬೆಂಗಳೂರು : ಇತ್ತೀಚೆಗಷ್ಟೇ ಕೆಲವು ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿಯನ್ನು ರದ್ದುಪಡಿಸಿದ್ದ ರಾಜ್ಯ ಸರ್ಕಾರ ಇದೀಗ 12 ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನಾಮನಿರ್ದೇಶನವನ್ನು ರದ್ದುಪಡಿಸಿದೆ. https://kannadanewsnow.com/kannada/bigg-news-azadi-ka-amrit-mahotsav-govt-issues-circular-to-all-schools-colleges-in-the-state-to-organize-these-competitions/ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಲತಾ.ಕೆ ಅವರು ಅಧಿಸೂಚನೆ ಹೊರಡಿಸಿದ್ದು, ಇಂದು ಒಟ್ಟು 12 ನಗರಾಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರ ನಾಮನಿರ್ದೇಶನವನ್ನು ರದ್ದುಪಡಿಸಿದ್ದಾರೆ.
ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಹಿನ್ನೆಲೆ ಆಗಸ್ಟ್ 11 ರಿಂದ 17 ರವರೆಗೆ ರಾಜ್ಯದ ಎಲ್ಲಾ ಶಾಲಾ, ಕಾಲೇಜು, ಮದರಸಾಗಳ ಮೇಲೆ ಕಡ್ಡಾಯವಾಗಿ ರಾಷ್ಟ್ರ ಧ್ವಜ ಹಾರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ಆದೇಶದ ಪ್ರಕಾರ, ಭಾರತ ಸ್ವಾತಂತ್ರ್ಯದ ಅಮೃ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳು ಹಾಗೂ ಮದರಸಾಗಳಲ್ಲಿ ಧ್ವಜಾರೋಹಣದ ಅಭಿಯಾನದ ಜೊತೆಗೆ ರಾಷ್ಟ್ರಭಕ್ತಿ ಮೂಡಿಸುವ ಸ್ವಾತಂತ್ರ್ಯದ ತ್ಯಾಗ, ಬಲಿದಾನ, ಸ್ಮರಣೆಯ ಗೀತೆ, ಗಾಯನ, ಕ್ವಿಚ್, ಪ್ರಬಂಧ ಸ್ಪರ್ಧೆ, ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಬೇಕೆಂದು ತಿಳಿಸಲಾಗಿದೆ. ಸರ್ಕಾರದ ಸೌಲಭ್ಯ ಪಡೆಯುವವರು ಸರ್ಕಾರದ ನಿಯಮ ಪಾಲಿಸೋದು ಕಡ್ಡಾಯವಾಗಿದೆ. ಎಲ್ಲಾ ಮದರಾಸಗಳಲ್ಲಿ ಕಡ್ಡಾಯವಾಗಿ ರಾಷ್ಟ್ರ ಧ್ವಜ ಹಾರಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ. ಸರ್ಕಾರಿ, ಖಾಸಗಿ, ಅನುದಾನಿತ, ಅನುದಾನ ರಹಿತ ಶಾಲಾ ಕಾಲೇಜು, ಮದರಸಾಗಳಿಗೂ ಈ ನಿಯಮ ಅನ್ವಯವಾಗಲಿದ್ದು, ಎಲ್ಲಾ ಶಿಕ್ಷಣ ಸಿಬ್ಬಂದಿಗಳು ತಮ್ಮ ಮನೆಯ ಮೇಲೆ ರಾಷ್ಟ್ರ…
ಬೆಂಗಳೂರು : ವಿದ್ಯುಚ್ಛಕ್ತಿ ಸಂಪರ್ಕ ಕೋರಿ ಅರ್ಜಿ ಸಲ್ಲಿಸುವ ಪ್ರತಿ ಬಡವ ಕಟ್ಟುವ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾನೂನನ್ನು ರೂಪಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. https://kannadanewsnow.com/kannada/sweet-news-for-okkaliga-community-application-invitation-under-various-scheme-from-development-corporation-here-is-the-information/ ಬುಧವಾರ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ವತಿಯಿಂದ ‘ನಿಗಮದ 53ನೇ ಸಂಸ್ಥಾಪನಾ ದಿನಾಚರಣೆ-2022’ ರ ಉದ್ಘಾಟಿಸಿ ಮಾತನಾಡಿದರು. ವಿದ್ಯುತ್ ಸರಬರಾಜು ಅಗತ್ಯ ಸೇವೆಗಳಲ್ಲಿ ಒಂದು. ಈಗಿನ ಕಾಲದಲ್ಲಿ ವಿದ್ಯುತ್ ಇಲ್ಲದೇ ಯಾರೂ ಬದುಕುವುದು ಸಾಧ್ಯವಿಲ್ಲ. ಕುಡಿಯುವ ನೀರು ಕೊಟ್ಟಂತೆಯೇ ವಿದ್ಯುತ್ ನೀಡುವುದು ಸರ್ಕಾರದ ಜವಾಬ್ದಾರಿ. ಜನರು ದೈನಂದಿನ ಬದುಕಿಗೆ ಅಗತ್ಯವಾಗಿ ಬೇಕಾದ ಕನಿಷ್ಟ ವಿದ್ಯುತ್ಛಕ್ತಿಯಿಂದ ವಂಚಿತರಾಗಬಾರದೆಂಬುದು ಸರ್ಕಾರದ ಮಾನವೀಯ ಕಳಕಳಿ. ವಿದ್ಯುತ್ ಪೂರೈಕೆ ಎನ್ನುವುದು ಅಗತ್ಯ ಸೇವೆಗಳಲ್ಲೊಂದಾಗಿದ್ದು, ಅದು ಜನರ ಹಕ್ಕಾಗಿದೆ. ಕಾರ್ಖಾನೆಗಳಿಗೆ ಅವಶ್ಯವಾಗಿ ಸರಬರಾಜಾಗುವಂತೆ ಜನರಿಗೂ ವಿದ್ಯುತ್ ಸೌಲಭ್ಯ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಸೂಕ್ತ ಆದೇಶವನ್ನು ಹೊರಡಿಸಲು ಸೂಚಿಸಲಾಗಿದೆ. ಕಾನೂನುಗಳು ಜನರ ಸುಗಮ ಜೀವನಕ್ಕೆ ಅನುವಾಗುವಂತೆ ಇರಬೇಕು. ರಾಜ್ಯದ.ವೈಜ್ಞಾನಿಕ…