Subscribe to Updates
Get the latest creative news from FooBar about art, design and business.
Author: KNN IT TEAM
ಹೈದರಾಬಾದ್: ಬಾಲಕನೊಬ್ಬ ತಾನು ಸಾಯುವ ದಿನಾಂಕವನ್ನು ನಿಗಧಿಪಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಇಲ್ಲಂಡು ಪಟ್ಟಣದಲ್ಲಿ ನಡೆದಿದೆ. ಇಲ್ಲಂಡು ಪಟ್ಟಣದ 9ನೇ ವಾರ್ಡ್‌ನ ಶಿವಲೋಕೇಶ್ (14) ಅಲಿಯಾಸ್ ಸೋನು ಸಾವಿಗೆ ಶರಣಾಗುದ್ದಾನೆ. ಈತ 10ನೇ ತರಗತಿ ವಿದ್ಯಾರ್ಥಿ. ತಂದೆ ರವಿ ಸ್ಥಳೀಯವಾಗಿ ಟೆಂಟ್ ಹೌಸ್ ನಡೆಸುತ್ತಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣುಬಿಗಿದುಕೊಂಡಿದ್ದಾನೆ. ಇದನ್ನು ಕಂಡ ಅಜ್ಜ ಕೂಡಲೇ ಶಿವಲೋಕೇಶ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವದನ್ನು ಕೂಡಲೇ ಸ್ಥಳೀಯರ ನೆರವಿನಿಂದ ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ, ಬಾಲಕ ಈಗಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯನಾಗಿದ್ದ ಲೋಕೇಶ್ ಆತ್ಮಹತ್ಯೆಗೂ ಮುನ್ನ ಗೆಳೆಯ ಗೌತಮ್‌ಗೆ ಇನ್‌ಸ್ಟಾಗ್ರಾಂನಲ್ಲಿ ಹುಟ್ಟು ಹಬ್ಬಕ್ಕೆ ವಿಶ್ ಮಾಡಿದ್ದಾನೆ. ಸ್ವಲ್ಪ ಸಮಯದ ನಂತರ ಶಿವಲೋಕೇಶ್ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ಕೇಳಿದ ಸ್ನೇಹಿತರಿಗೆ ಆಘಾತವುಂಟಾಗಿದೆ. ಶಿವಲೋಕೇಶ್ ಕಳಿಸಿದ ಮೆಸೇಜ್ ನೋಡುತ್ತಾ ಅಳುತ್ತಿದ್ದ ಸ್ನೇಹಿತರಿಗೆ ಶಾಕ್ ಕಾದಿತ್ತು. ಹೌದು, ಶಿವಲೋಕೇಶ್ ಮೊದಲೇ Instagram ಬಯೋದಲ್ಲಿ ಅವನ ಸಾವಿನ ದಿನಾಂಕ…
ಕೇರಳ : ನೀಟ್ ಪರೀಕ್ಷೆ ವೇಳೆ ಕಿರುಕುಳ ನೀಡಿದ ವಿವಾದ ಸಂಬಂಧ ಇಂದು ಪರೀಕ್ಷೆ ನಡೆಸವ ಉಸ್ತುವಾರಿ ಹೊತ್ತಿದ್ದ ಇಬ್ಬರು ಶಿಕ್ಷಕರನ್ನು ಬಂಧಿಸಲಾಗಿದ್ದು, ಪ್ರಕರಣದಲ್ಲಿ ಬಂಧಿತರಾಗಿರುವ ಒಟ್ಟು ಶಂಕಿತರ ಸಂಖ್ಯೆ ಏಳಕ್ಕೆ ತಪುಪಿದೆ. ಪ್ರೊ.ಪ್ರಿಜಿ ಕುರಿಯನ್ ಮತ್ತು ಡಾ.ಶ್ಮನಾದ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಇವರು ವಿವಾದಾತ್ಮಕ ತಪಾಸಣೆಗಾಗಿ ಕಾಲೇಜಿನ ಅಧಿಕಾರಿಗಳು/ಸಿಬ್ಬಂದಿಗೆ ನಿರ್ದೇಶನ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಜುಲೈ 17 ರಂದು ಕೇರಳದ ಕೊಲ್ಲಂನಲ್ಲಿ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ (NEET) ಹಾಜರಾಗುವ ಮೊದಲು ವಿದ್ಯಾರ್ಥಿನಿಯರಿಗೆ ಒಳಉಡುಪುಗಳನ್ನು ತೆಗೆಯುವಂತೆ ಒತ್ತಾಯಿಸಿದ ಆರೋಪದ ಮೇಲೆ ಇಬ್ಬರು ಕಾಲೇಜು ಸಿಬ್ಬಂದಿ ಸೇರಿದಂತೆ ಐವರನ್ನು ಮಂಗಳವಾರ ಬಂಧಿಸಲಾಯಿತು. ಬಂಧಿತರಲ್ಲಿ ಮೂವರು ಸಂಸ್ಥೆಗೆ ಸೇರಿದವರಾಗಿದ್ದಾರೆ ಎನ್ನಲಾಗುತ್ತಿದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಪದವಿಪೂರ್ವ (NEET UG)ಪರೀಕ್ಷೆಯನ್ನು ನಡೆಸಲು ನಿಯೋಜಿಸಲಾದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇರಳದ ಉನ್ನತ ಶಿಕ್ಷಣ ಸಚಿವ ಆರ್ ಬಿಂದು ಅವರು ಕೇಂದ್ರವನ್ನು ಒತ್ತಾಯಿಸಿದ್ದಾರೆ.
ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಂದು ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 21,566 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ 21,566 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿನಿಂದ 18,294 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. #COVID19 | ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 21,566 ಹೊಸ ಪ್ರಕರಣಗಳು ಮತ್ತು 18,294 ಚೇತರಿಕೆ ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳು 1,48,881 ದೈನಂದಿನ ಪಾಸಿಟಿವಿಟಿ ದರ 4.25% https://twitter.com/ANI/status/1549963495902367745
ಬೆಂಗಳೂರು : ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿರುವ ಕುರಿತಂತೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿ, ಪೊಲೀಸರು ಸಲ್ಲಿಸಿರುವ ‘ಬಿ ರಿಪೋರ್ಟ್’ ನ್ಯಾಯ ಸಿಗಬಹುದೆಂಬ ಭರವಸೆಯಿಂದ ಕಾಯುತ್ತಿದ್ದ ಮೃತನ ಕುಟುಂಬದ ನೋವನ್ನು ಇನ್ನಷ್ಟು ಹೆಚ್ಚಿಸಿದೆ. ಇದೇ ಕಾರಣಕ್ಕಾಗಿ ನಾನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದು ಎಂದು ಹೇಳಿದ್ದಾರೆ. https://twitter.com/siddaramaiah/status/1549808719096999937 ತನಿಖೆಗೆ ಮೊದಲೇ ಮುಖ್ಯಮಂತ್ರಿಗಳಾದಿಯಾಗಿ ಸಚಿವರು, ಬಿಜೆಪಿ ಶಾಸಕರು, ಆರೋಪಿ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು. ಇದನ್ನೇ ಪೊಲೀಸ್ ಇಲಾಖೆ ಸ್ವಲ್ಪ ತಡವಾಗಿ ‘ಬಿ ರಿಪೋರ್ಟ್’ ರೂಪದಲ್ಲಿ ನೀಡಿದೆ. ಇದರಲ್ಲಿ ಆಶ್ಚರ್ಯಪಡುವಂತದ್ದು ಏನಿಲ್ಲ ಎಂದಿದ್ದಾರೆ. https://twitter.com/siddaramaiah/status/1549808933933527040 ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಮುನ್ನ ತನ್ನ ಸಾವಿಗೆ ಈಶ್ವರಪ್ಪ ಅವರೇ ನೇರಕಾರಣ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದರೂ, ಆರೋಪಿ ಸ್ಥಾನದಲ್ಲಿರುವ…
ಬೆಳಗಾವಿ: ಚನ್ನಪಟ್ಟಣದ ಸಾಮಾಜಿಕ ಕಾರ್ಯಕರ್ತೆ ನವ್ಯಾಶ್ರೀ ವಿರುದ್ಧ FIR ವಿಚಾರಕ್ಕೆ ಸಂಬಂದಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನವ್ಯಾಶ್ರೀಗೆ ನೋಟಿಸ್ ನೀಡಲು ಎಪಿಎಂಸಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಬೆಳಗಾವಿ ಎಪಿಎಂಸಿ ಪೊಲೀಸರಿಂದ ಇಂದು ನೋಟಿಸ್ ರವಾನೆ ಸಾಧ್ಯತೆ ಇದೆ. https://kannadanewsnow.com/kannada/yellow-alert-for-rajasthan-districts-heavy-rainfall/ ಅಂಚೆ ಮತ್ತು ಮೊಬೈಲ್ ಮೆಸೇಜ್ ಮೂಲಕ ನೋಟಿಸ್ ರವಾನೆಗೆ ಸಿದ್ಧತೆ ನಡೆಸಲಾಗಿದೆ. ನವ್ಯಶ್ರೀ ವಿರುದ್ಧ ಬೆಳಗಾವಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ದೂರು ನೀಡಿದ್ದರು. ಅವರ ಮೇಲೆ ಸುಲಿಗೆ, ಜೀವ ಬೆದರಿಕೆ, ಸುಳ್ಳು ಅತ್ಯಾಚಾರ ಕೇಸ್ ದಾಖಲಿಸುವ ಬೆದರಿಕೆ ಆರೋಪಿಸಿದ್ದಾರೆ. ನವ್ಯಶ್ರೀ ಆರ್ ರಾವ್ ಮತ್ತು ಆಕೆಯ ಸ್ನೇಹಿತ ತಿಲಕರಾಜ್ ಡಿ.ಟಿ. ವಿರುದ್ಧ ಎಫ್ಐಆರ್ ದಾಖಲಾಗಿತ್ತು. ನವ್ಯಾಶ್ರೀ ಅಶ್ಲೀಲ ವಿಡಿಯೋ ವೈರಲ್ ಬೆನ್ನಲ್ಲೇ ದೂರು ನೀಡಿದ್ದ ರಾಜಕುಮಾರ ಟಾಕಳೆ. ಈ ದೂರಿನಲ್ಲಿ ಹಣಕಾಸಿನ ವ್ಯವಹಾರ, 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಉಲ್ಲೇಖಿಸಿದ್ದರು. ನವ್ಯಶ್ರೀ ವಿರುದ್ಧ ಐಪಿಸಿ ಕೇಸ್ ದಾಖಲಾಗಿತ್ತು. https://kannadanewsnow.com/kannada/yellow-alert-for-rajasthan-districts-heavy-rainfall/ ಕೇಸ್ ದಾಖಲಾಗುತ್ತಿದ್ದಂತೆ ಬೆಳಗಾವಿಯಿಂದ…
ರಾಜಸ್ಥಾನ: ಕಳೆದ 24 ಗಂಟೆಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ನಗರದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಅಲ್ವಾರ್, ಭರತ್ಪುರ್, ದೌಸಾ, ಧೋಲ್ಪುರ್, ಕರೌಲಿ, ಬಿಕಾನೇರ್ ಮತ್ತು ಹನುಮಾನ್ಗಢಕ್ಕೆ ಯೆಲ್ಲೋ ಅಲರ್ಟ್ ನೀಡಲಾಗಿದೆ. https://kannadanewsnow.com/kannada/turkish-strikes-kill-at-least-8-tourists-in-northern-iraq/ ಗುಜರಾತ್ ನ ವಿವಿಧ ಭಾಗಗಳಲ್ಲಿ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳಲ್ಲಿನ ಸಾವಿರಾರು ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ತಾಪಿ ಜಿಲ್ಲೆಯ ತಾಪಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಉಕೈ ಅಣೆಕಟ್ಟಿನಿಂದ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಯಿತು.
ಕಲಬುರಗಿ : ವೇತನ ಹೆಚ್ಚಳದ ನಿರೀಕ್ಷೆಯಲ್ಲಿರುವ ಸಾರಿಗೆ ನೌಕರರಿಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ. https://kannadanewsnow.com/kannada/global-heatwave-nasa-reveals-image-showing-alarming-rise-in-temperature-in-europe-asia-africa/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರ ಬಹುದಿನಗಳ ಬೇಡಿಕೆಯಾದ ವೇತನ ಪರಿಷ್ಕರಣೆ ಸಂಬಂಧ ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ಮಾತನಾಡಿದ್ದು, ಅವರು ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. https://kannadanewsnow.com/kannada/bigg-breaking-news-four-labourers-killed-as-apartment-wall-collapses-in-hoskote/ ಇನ್ನು ಸಾರಿಗೆ ಇಲಾಖೆಯಲ್ಲಿ 635 ಹುದ್ದೆಗಳ ಪೈಕಿ 165 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದುಉ, ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿನ ಸಾರಿಗೆ ವ್ಯವಸ್ಥೆ ಉತ್ತಮಪಡಿಸಲು ಎಲೆಕ್ಟ್ರಿಕ್ ಬಸ್ ಸೇರಿ 1,500 ಕ್ಕೂ ಹೆಚ್ಚು ಬಸ್ ಗಳನ್ನು ಖರೀದಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಕೆಎನ್ ಎನ್ ನ್ಯೂಸ್ ಡೆಸ್ಕ್ : 2022 ರ ಜೂನ್ ಮತ್ತು ಜುಲೈನಲ್ಲಿ ಯುರೋಪ್, ಉತ್ತರ ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಏಷ್ಯಾದ ವಿವಿಧ ಭಾಗಗಳಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ (104 ಡಿಗ್ರಿ ಫ್ಯಾರನ್‌ಹೀಟ್) ಗಿಂತ ಹೆಚ್ಚಾದ ಕಾರಣ, ಇವು ಹಲವಾರು ದೀರ್ಘಕಾಲದ ದಾಖಲೆಗಳನ್ನು ಮುರಿದಿವೆ. ತಾಪಮಾನ ಏರಿಕೆಯನ್ನು ತೋರಿಸುವ ಚಿತ್ರವನ್ನು NASA ಬಿಡುಗಡೆ ಮಾಡಿದೆ. On July 13, 2022, Earth satellites captured temperatures rising above 40 degrees Celsius (104 degrees Fahrenheit) due to extreme, record-breaking heatwaves across much of Europe, Africa, and Asia: https://t.co/tD6DmpXMyz pic.twitter.com/cb3P1F699Y — NASA (@NASA) July 18, 2022 ವಿವಿಧ ಸ್ಥಳಗಳಲ್ಲಿ ಪರ್ಯಾಯ ಬೆಚ್ಚಗಿನ (ಕೆಂಪು) ಮತ್ತು ತಂಪಾದ (ನೀಲಿ) ಬಣ್ಣದ ಮೌಲ್ಯಗಳೊಂದಿಗೆ ವಾತಾವರಣದ ತರಂಗದ ಸ್ಪಷ್ಟ ಮಾದರಿಯಿದ್ದರೂ, ಪ್ರದೇಶದ ತೀವ್ರವಾದ (ದಾಖಲೆ ಮುರಿಯುವ) ಶಾಖವು ಹಸಿರುಮನೆ ಅನಿಲಗಳ ಹೊರಸೂಸುವಿಕೆಗೆ ಮತ್ತೊಂದು ಸ್ಪಷ್ಟ…
ಬೆಂಗಳೂರು : ನಿರ್ಮಾಣ ಹಂತದ ಅಪಾರ್ಟ್ ಮೆಂಟ್ ಗೋಡೆ ಕುಸಿದು ಘೋರ ದುರಂತವೊಂದು ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿ ಬಳಿ ನಡೆದಿದೆ. https://kannadanewsnow.com/kannada/bigg-news-former-minister-k-s-santhoshs-suicide-case-clean-chit-to-eshwarappa-do-you-know-what-santhoshs-wife-said/ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿ ಬಳಿ ನಿರ್ಮಾಣ ಹಂತದ ಅಪಾರ್ಟ್ ಮೆಂಟ್ ಗೋಡೆ ಕುಸಿದ ಪರಿಣಾಮ ಅಪಾರ್ಟ್ ಮೆಂಟ್ ಪಕ್ಕದಲ್ಲಿ ನಿರ್ಮಿಸಿದ್ದ ಶೆಡ್ ನಲ್ಲಿದ್ದ ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/turkish-strikes-kill-at-least-8-tourists-in-northern-iraq/
ಬೆಳಗಾವಿ : ಕಳೆದ ಏಪ್ರಿಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಿವಿಲ್ ವರ್ಕ್ಸ್ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಪತ್ನಿ ರೇಣುಕಾ ಪಾಟೀಲ್ ಅವರು ತಮ್ಮ ಪತಿಯ ಸಾವಿನ ಬಗ್ಗೆ ಯಾವುದೇ ನ್ಯಾಯಸಮ್ಮತ ತನಿಖೆ ನಡೆದಿಲ್ಲ ಎಂದು ಹೇಳಿದ್ದಾರೆ. ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರಿಗೆ ಕ್ಲೀನ್ ಚಿಟ್ ಸಿಕ್ಕ ಕುರಿತು ಪ್ರತಿ ಕ್ರಿಯೆ ನೀಡಿದ ಅವರು, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಅವರು ಆರೋಪಿಸಿದರು. ಸತ್ಯ ಹೊರಬರಲು ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಸಂತೋಷ್ ಅವರ ವಾಟ್ಸ್ಆ್ಯಪ್ ಸಂದೇಶಗಳು ಡೆತ್ ನೋಟ್ಗಳಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿರುವ ಅವರ ಸೆಲ್ ಫೋನ್ನಲ್ಲಿ ಸಾಕ್ಷ್ಯಾಧಾರಗಳಿವೆ. ‘ನನ್ನ ಪತಿ ಈಶ್ವರಪ್ಪ ಅವರು ತಮ್ಮ ಸಹಚರರ ಮೂಲಕ ಶೇ.40ರಷ್ಟು ಕಮಿಷನ್ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದರು ಮತ್ತು ಸುಮಾರು 10 ಲಕ್ಷ ರೂ.ಗಳನ್ನು ಪಾವತಿಸಿದ್ದರು…