Author: KNN IT TEAM

ಬೆಂಗಳೂರು: ಭಾರತೀಯ ಯುದ್ಧ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ಇಂದು ಕರ್ನಾಟಕ ಕರಾವಳಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿತ್ತು. ನಂತ್ರ, ಅಲ್ಲಿದ್ದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಭಾರತೀಯ ನೌಕಾಪಡೆ ಟ್ವೀಟ್‌ ಮಾಡಿದೆ. ಘಟನೆಯ ಕುರಿತು ತನಿಖೆ ನಡೆಸಲು ತನಿಖಾ ಮಂಡಳಿಗೆ ಆದೇಶಿಸಲಾಗಿದೆ ಎಂದು ಭಾರತೀಯ ನೌಕಾಪಡೆಯ ಟ್ವೀಟ್ ತಿಳಿಸಿದೆ. #Flash During a planned sortie for conduct of sea trials off Karwar, an incident of fire was reported onboard INS Vikramaditya today 20 Jul 22. The fire was brought under control by the ship’s crew using onboard systems. No casualties have been reported (1/2) — SpokespersonNavy (@indiannavy) July 20, 2022 ನೌಕೆ INS ವಿಕ್ರಮಾದಿತ್ಯ ಜನವರಿ 2014 ರಲ್ಲಿ ರಷ್ಯಾದಿಂದ ಭಾರತಕ್ಕೆ ಬಂದಿತು. ಇದನ್ನು ನವೆಂಬರ್…

Read More

ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಪುಂಡರ ಹಾವಳಿ ನಿಲ್ಲುತ್ತಿಲ್ಲ. ನಡು ರಸ್ತೆಯಲ್ಲಿ ದೊಣ್ಣೆ ಹಿಡಿದು ಪುಂಡರ ಬಡಿದಾಟ ಶುರುವಾಗಿದೆ. ನಗರದಲ್ಲಿ ತಡರಾತ್ರಿ ಕೋರಮಂಗಲ 100 ಅಡಿ ರಸ್ತೆಯಲ್ಲಿ ಘಟನೆ ನಡೆದಿದೆ. ನಡು ರಸ್ತೆಯಲ್ಲಿ ಭೀತಿ ಹುಟ್ಟಿಸುವ ರೀತಿಯಲ್ಲಿ ಯುವಕರ ಬಡಿದಾಟ ಮಾಡಿಕೊಂಡಿದ್ದಾರೆ. https://kannadanewsnow.com/kannada/the-madness-of-pu-college-students-omg-student-kisses-student-after-tying-a-match/ ಯುವಕರ ಬಡಿದಾಟ ಸ್ಥಳೀಯರು ಕಂಡು ಬೆಚ್ಚಿ ಬಿದ್ದರು. ಯುವಕರ ಮಾರಾಮಾರಿ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಪುಂಡರ ಉಪಟಳ ಬಗ್ಗೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಘಟನೆ ಸಂಬಂಧ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಶ್ರೀಲಂಕಾ : ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಅವರು ಗುರುವಾರ ದೇಶದ ಮುಖ್ಯ ನ್ಯಾಯಾಧೀಶರಿಂದ ಪ್ರಮಾಣ ವಚನ ಸ್ವೀಕರಿಸಿದರು ಎಂದು ಅಧ್ಯಕ್ಷರ ಮಾಧ್ಯಮ ಕಚೇರಿ ತಿಳಿಸಿದೆ. ವಿಕ್ರಮಸಿಂಘೆ ಅವರು 225 ಸದಸ್ಯರ ಸಂಸತ್ತಿನಲ್ಲಿ ಬುಧವಾರ ನಡೆದ ಮತ ಎಣಿಕೆಯಲ್ಲಿ 134 ಮತಗಳನ್ನು ಗಳಿಸಿದ್ದರು. ಅವರ ಹಿಂದಿನ ಗೊಟಬಯ ರಾಜಪಕ್ಸೆ ಅವರು ದೇಶದಿಂದ ಓಡಿಹೋದ ನಂತರ ಮತ್ತು ಕಳೆದ ವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನೂತನ ಅಧ್ಯಕ್ಷರನ್ನು ಬುಧವಾರ ಶಾಸಕರು ಶ್ರೀಲಂಕಾ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದರು. 225 ಸದಸ್ಯ ಬಲದ ಸದನದಲ್ಲಿ ವಿಕ್ರಮಸಿಂಘೆ 134 ಮತಗಳನ್ನು ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಮತ್ತು ಭಿನ್ನಮತೀಯ ಆಡಳಿತ ಪಕ್ಷದ ನಾಯಕ ಡಲ್ಲಾಸ್ ಅಲಹಪ್ಪೆರುಮ 82 ಮತಗಳನ್ನು ಪಡೆದಿದ್ದರು. ಎಡಪಕ್ಷ ಜನತಾ ವಿಮುಕ್ತಿ ಪೆರಮುನ ನಾಯಕ ಅನುರ ಕುಮಾರ ಡಿಸಾನಾಯಕ ಅವರು ಸಂಸತ್ತಿನಲ್ಲಿ ಬಿಗಿ ಭದ್ರತೆಯ ನಡುವೆ ನಡೆದ ಮತದಾನದಲ್ಲಿ ಕೇವಲ ಮೂರು ಮತಗಳನ್ನು ಪಡೆದ್ದರು. ತಮ್ಮ ವಿಜಯ ಭಾಷಣದಲ್ಲಿ, ರಾನಿಲ್ ವಿಕ್ರಮಸಿಂಘೆ…

Read More

ಬೆಂಗಳೂರು :  ನ್ಯಾಷನಲ್ ಹೆರಾಲ್ಡ್​ (National Herald Case)​​ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಇಡಿ ವಿಚಾರಣೆ ವಿರೋಧಿಸಿ ದೆಹಲಿ ಮಾತ್ರವಲ್ಲ ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆಗೆ ಮಾಡಲು ಕಾಂಗ್ರೆಸ್‌ ಮುಂದಾಗಿದೆ. https://kannadanewsnow.com/kannada/lucknow-bans-sale-of-pork-amid-spread-of-african-swine-fever-among-pigs/ ಕೇಂದ್ರ ಸರ್ಕಾರ ಇಡಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಅರೋಪಡಡಿ ಸಿಲಿಕಾನ್‌ ಸಿಟಿಯ ಫ್ರೀಡಂ ಪಾರ್ಕ್  ಪಾರ್ಕ್ನನಿಂದ ರಾಜಭವನಕ್ಕೆ ತೆರಳಿ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಸಿಲಿಕಾನ್‌ ಸಿಟಿ ಟ್ರಾಫಿಕ್‌ ಜಾಮ್‌ ಸಂಭವಿಸೋದು ಬಹುತೇಕ ಖಚಿತವಾಗಿದೆ ಈಗಾಗಲೇ ಫ್ರೀಡಂ ಪಾರ್ಕ್‌ ಸುತ್ತಮುತ್ತ ಪೊಲೀಸರ ನಿಯೋಜನೆ  30 ಇನ್ಪೆಕ್ಟರ್‌ ನೇತೃತ್ವದಲ್ಲಿ90 ಟ್ರಾಫಿಕ್‌ ಪೊಲೀಸರ ನಿಯೋಜನೆ ಮಾಡಲಾಗಿದೆ. ವಿಧಾನಸೌಧ , ಮಹಾರಾಣಿ ಕಾಲೇಜು ಸುತ್ತಮುತ್ತ ಟ್ರಾಫಿಕ್‌ ಜಾಮ್‌ ಸಂಭವಿಸಲಿದೆ. ಇಂದು 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ. https://kannadanewsnow.com/kannada/lucknow-bans-sale-of-pork-amid-spread-of-african-swine-fever-among-pigs/ ಏನಿದು ನ್ಯಾಷನಲ್ ಹೆರಾಲ್ಡ್ ಕೇಸ್?: 2012ರಲ್ಲಿ ಬಿಜೆಪಿ ನಾಯಕ ಮತ್ತು ವಕೀಲರಾಗಿರುವ ಸುಬ್ರಮಣ್ಯನ್ ಸ್ವಾಮಿ ಅವರು ಯಂಗ್ ಇಂಡಿಯನ್ ಲಿಮಿಟೆಡ್ (ವೈಐಎಲ್) ನಿಂದ…

Read More

ಬೆಂಗಳೂರು : ಮುಖ್ಯಮಂತ್ರಿ ಅಭ್ಯರ್ಥಿಗಾಗಿ  ಕಾಂಗ್ರೆಸ್​ನಲ್ಲಿ ಫೈಟ್ ವಿಚಾರದ ಕುರಿತಂತೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ನಲ್ಲಿ ಸದ್ಯ ಕೂಸು ಹುಟ್ಟುವ ಮೊದಲೇ‌ ಕುಲಾವಿ ಹೊಲಿಸಿದ ರೀತಿಯಲ್ಲಿ ಪರಿಸ್ಥಿತಿ ಇದೆ ಎಂದು ಲೇವಡಿ ಮಾಡಿದ್ದಾರೆ. https://kannadanewsnow.com/kannada/the-madness-of-pu-college-students-omg-student-kisses-student-after-tying-a-match/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನ ಕೆಲವರು ಸಿಎಂ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್​ನವರ ಕನಸು ನನಸು ಆಗುವುದಿಲ್ಲ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ರಾಜ್ಯದಲ್ಲಿ ಮತ್ತೆ ನೂರಕ್ಕೆ ನೂರರಷ್ಟು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ನಾವು ಬಿಡುವುದಿಲ್ಲ. ಯಾವ ಕಾರಣಕ್ಕೂ ಅವರು ಮುಖ್ಯಮಂತ್ರಿ ಆಗಲು ನಾವು ಬಿಡುವುದಿಲ್ಲ. ಬಿಜೆಪಿಯವರೇ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದಾರೆ. https://kannadanewsnow.com/kannada/philanthropist-d-veerendra-heggade-to-take-oath-as-rajya-sabha-member-today/

Read More

ಮಂಗಳೂರು: ನಗರದ ಪ್ರತಿಷ್ಠಿತ ಪಿಯು ಕಾಲೇಜಿನ ವಿದ್ಯಾರ್ಥಿಗಳು ಹುಚ್ಚಾಟ ನಡೆಸಿದ್ದಾರೆ. ಪಂದ್ಯ ಕಟ್ಟಿ ನಿಯಮದಂತೆ ವಿದ್ಯಾರ್ಥಿನಿಯನ್ನು ವಿದ್ಯಾರ್ಥಿ ಚುಂಬಿಸಿದ ಘಟನೆ ನಡೆದಿದೆ. https://kannadanewsnow.com/kannada/irritability-to-riders-from-school-vehicles-traffic-police-issues-notice-to-private-schools/ ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.ತನ್ನ ಸಹಪಾಟಿಗಳ ಎದುರು ಖುಲ್ಲಂ ಖುಲ್ಲಾ ವಿದ್ಯಾರ್ಥಿ ಚುಂಬಿಸಿದ್ದಾನೆ.ಮಂಗಳೂರಿನ ಕಾಲೇಜು ವಿದ್ಯಾರ್ಥಿಗಳು ದಾರಿ ತಪ್ಪುತ್ತಿದ್ದು, ದೃಶ್ಯ ವೈರಲ್ ಆಗುತಿದ್ದಂತೆ ಪೊಲೀಸರು ಎಚ್ಚೇತ್ತುಕೊಂಡಿದ್ದಾರೆ. ಇದೀಗ ಪೊಲೀಸರು ತನಿಖೆ ನಡೆಸಿದ್ದಾರೆ. ವಿದ್ಯಾರ್ಥಿಗಳು ಖಾಸಗಿ ಕೊಠಡಿಯಲ್ಲಿ ಕಿಸ್ಸಿಂಗ್ ನಲ್ಲಿ ತೊಡಗಿದ್ದಲ್ಲದೇ ಅದನ್ನ ವಿಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದ ವಿದ್ಯಾರ್ಥಿಯನ್ನ ಮಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Read More

ನವದೆಹಲಿ: ಖ್ಯಾತ ಲೋಕೋಪಕಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆ( D Veerendra Heggade) ಅವರು ಇಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಜನಪ್ರಿಯ ಸಂಗೀತ ಸಂಯೋಜಕ ಇಳಯರಾಜಾ ಮತ್ತು ಮಾಜಿ ಒಲಿಂಪಿಕ್ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಪಿ.ಟಿ.ಉಷಾ, ಧರ್ಮಸ್ಧಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆ ಸೇರಿದಂತೆ ನಾಲ್ವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆ ಮತ್ತು ರತ್ನಮ್ಮ ಹೆಗ್ಗಡೆ ದಂಪತಿಯ ಹಿರಿಯ ಪುತ್ರ ವೀರೇಂದ್ರ ಹೆಗ್ಡೆ ಅವರು ನವೆಂಬರ್ 23, 1948 ರಂದು ಜನಿಸಿದರು. ಅವರು ತುಳು ಪರಂಪರೆಯ ಪೆರ್ಗಡೆ ರಾಜವಂಶದಿಂದ ಬಂದವರು. 73 ವರ್ಷ ವಯಸ್ಸಿನ ಹೆಗ್ಗಡೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ಆನುವಂಶಿಕ ಧರ್ಮದರ್ಶಿಯಾಗಿದ್ದಾರೆ. https://kannadanewsnow.com/kannada/tenth-class-boy-commits-suicide-everyone-is-shocked-after-seeing-his-instagram-bio/ https://kannadanewsnow.com/kannada/lucknow-bans-sale-of-pork-amid-spread-of-african-swine-fever-among-pigs/

Read More

ಬೆಂಗಳೂರು :   ಸಿಲಿಕಾನ್‌ ಸಿಟಿಯಲ್ಲಿ‌ ಬೆಳ್ಳಂಬೆಳಗ್ಗೆ‌ ಖಾಸಗಿ ಸಂಸ್ಥೆಯ ನಿರ್ಮಾಣ ಹಂತದ ಅಪಾರ್ಟ್ಮೆಂಟ್ ಗೋಡೆ ಕುಸಿದು ನಾಲ್ವರು ದುರ್ಮರಣಗೊಂಡ  ಘನಘೋರ ಘಟನೆ ಬೆಂಗಳೂರಿನ ಗ್ರಾಮಾಂತರದ ಹೊಸಕೋಟೆಯ  ತಿರುಮಲಶೆಟ್ಟಿಯಲ್ಲಿ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.  https://kannadanewsnow.com/kannada/irritability-to-riders-from-school-vehicles-traffic-police-issues-notice-to-private-schools/ ಮನೋಜ್‌ ಕುಮಾರ್‌(35), ರಾಮ್‌ ಕುಮಾರ್‌ ಸದಯ್‌(25), ನಿತೀಶ್‌ಕುಮಾರ್‌ ಸದಯ(22) ಸಾವು, ಸುನಿಲ್‌ ವುಂಡಲ್, ಶಂಭುಮಂಡಲ, ದಿಲೀಷ್‌, ದುಗೇಶ್‌ಗೆ ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. https://kannadanewsnow.com/kannada/irritability-to-riders-from-school-vehicles-traffic-police-issues-notice-to-private-schools/ ಮೃತ ಕಾರ್ಮಿಕರು ಉತ್ತರಭಾರತದ ಮೂಲದವರು ಎಂದು ಗುರುತಿಸಲಾಗಿದೆ. ಶೆಡ್‌ ನಲ್ಲಿ ಮಲಗಿದ್ದವರ ಮೇಲೆ ಗೋಡೆ ಕುಸಿತಗೊಂಡಿದ್ದು, ಸ್ಥಳೀಯರಿಂದ  ನಾಲ್ವರನ್ನು ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.

Read More

ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಶಾಲಾ ವಾಹನಗಳಿಂದ ಸಂಚಾರ ದಟ್ಟಣೆ ಆಗಿದೆ. ಇದರಿಂದ ವಾಹನ ಸವಾರರಿಗೆ ಕಿರಿಕಿರಿ ಶುರುವಾಗಿದೆ.ಶಾಲಾ ವಾಹನ ಸೇರಿದಂತೆ ಮಕ್ಕಳನ್ನು ಬಿಡಲು ಬರುವ ಪೋಷಕರಿಂದ ಟ್ರಾಫಿಕ್ ಜಾಮ್‌ ಆಗುತ್ತಿದೆ. https://kannadanewsnow.com/kannada/fir-against-navyashree-apmc-police-issues-notice-to-appear-for-questioning/ ಮುಖ್ಯರಸ್ತೆಗಳಲ್ಲಿಯೇ ವಾಹನ ಪಾರ್ಕ್ ಮಾಡೋದರಿಂದ ಬೇರೆವರಿಗೆ ತೊಂದರೆ ಆಗುತ್ತಿದೆ. ಇದೇ ಕಾರಣಕ್ಕೆ ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ಖಾಸಗಿ ಶಾಲೆಗಳಿಗೆ ಎಚ್ಚರಿಕೆ ನೀಡಿದೆ. ಶಾಲಾ ಕಾಲೇಜುಗಳು ಮಾರ್ಗಸೂಚಿ ಫಾಲೊ ಮಾಡುವಂತೆ ನೋಟಿಸ್ ಜಾರಿಮಾಡಿದ್ದಾರೆ.ಎಲ್ಲಾ ಶಾಲೆಗಳಿಗೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ಟ್ರಾಫಿಕ್ ನಿಯಂತ್ರಣಕ್ಕೆ ಶಾಲೆಗಳೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು. ಸೆಕ್ಯೂರಿಟಿ ಗಾರ್ಡ್ ಗಳನ್ನೇ ಟ್ರಾಫಿಕ್ ಕಂಟ್ರೋಲ್ ಮಾಡಲು ನೇಮಿಸಬೇಕು. ಅದರ ತರಬೇತಿ ನೀಡಲು ಟ್ರಾಫಿಕ್‌ ಪೊಲೀಸರು ಸಿದ್ದರಿದ್ದಾರೆ. https://kannadanewsnow.com/kannada/fir-against-navyashree-apmc-police-issues-notice-to-appear-for-questioning/ ಅದಕ್ಕೆ ಬೇಕಾಗುವ ತರಬೇತಿಯನ್ನೂ ನೀಡುತ್ತಾರೆ. ಸೆಕ್ಯೂರಿಟಿ ಗಾರ್ಡ್ ಗಳಿಗೆ ಟ್ರಾಫಿಕ್ ಕಂಟ್ರೋಲ್ ತರಬೇತಿ ನೀಡಲಾಗಿದೆ. ಎಲ್ಲಾ ಶಾಲೆಗಳು ಈ ನಿಯಮಗಳನ್ನು ಪಾಲಿಸಲೇಬೇಕು. ಶಾಲಾ ವಾಹನಗಳನ್ನು ಆಯಾ ಶಾಲೆಯ ಪಾರ್ಕಿಂಗ್ ಜಾಗದಲ್ಲೇ ಪಾರ್ಕ್…

Read More

ಲಕ್ನೋ : ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಹರಡಿದ ಹಿನ್ನೆಲೆಯಲ್ಲಿ ಲಕ್ನೋದಲ್ಲಿ ಹಂದಿ ಮಾಂಸ ಮತ್ತು ಸಂಬಂಧಿತ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ. ಆಫ್ರಿಕನ್ ಹಂದಿ ಜ್ವರದಿಂದಾಗಿ 100 ಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿದ್ದು, ಇದರಿಂದ ಆತಂಕಗೊಂಡು ಜಿಲ್ಲಾ ಮ್ಯಾಜಿಸ್ಟ್ರೇಟ್ ಸೂರ್ಯಪಾಲ್ ಗಂಗ್ವಾರ್ ನಿಷೇಧ ಹೇರಿದ್ದು, ಜಿಲ್ಲಾ ಮ್ಯಾಜಿಸ್ಟ್ರೇಟ್ ಲಕ್ನೋ ಮುನ್ಸಿಪಲ್ ಕಾರ್ಪೊರೇಷನ್ (ಎಲ್‌ಎಂಸಿ) ಮತ್ತು ಪಶುಸಂಗೋಪನೆ ಇಲಾಖೆಗೆ ಹಂದಿಗಳಲ್ಲಿ ಈ ರೋಗ ಹರಡುವುದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಇದಲ್ಲದೆ ಸೋಂಕು ಹರಡುತ್ತಿರುವ ಪ್ರದೇಶಗಳಲ್ಲಿ ಶುಚಿಗೊಳಿಸುವಿಕೆ ಮತ್ತು ನೈರ್ಮಲ್ಯ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಹಂದಿ ಮಾಂಸವನ್ನು ನಿಷೇಧಿಸಲಾಗಿದ್ದು, ರೋಗ ಪೀಡಿತ ಪ್ರದೇಶಗಳಲ್ಲಿ ಹಂದಿಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಇದರ ಜೊತೆಗೆ ಆಫ್ರಿಕನ್ ಹಂದಿ ಜ್ವರದ ಬಗ್ಗೆ ಅರಿವು ಮೂಡಿಸಲು ಹಂದಿ ಸಾಕಣೆದಾರರಿಗೆ ಜಾಗೃತಿ ಅಭಿಯಾನ ಪ್ರಾರಂಭಿಸಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಎಲ್‌ಎಂಸಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಸೋಂಕಿತ ಹಂದಿಗಳಿಗೆ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಹಂದಿಗಳು ಬಯಲಿನಲ್ಲಿ ಓಡಾಡದಂತೆ ರೈತರು ಅವುಗಳನ್ನು ಆವರಣದಲ್ಲೇ ಇಡುವಂತೆ…

Read More