Subscribe to Updates
Get the latest creative news from FooBar about art, design and business.
Author: KNN IT TEAM
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ದೇಶಗಳಲ್ಲಿ ಕರೋನ ಪ್ರಕರಣಗಳು ನಿರಂತರವಾಗಿ ಏರಿಕೆಯಾಗ್ತಿವೆ.ಇದರಿಂದ ಈಗಾಗಲೇ ಹಲವಾರು ಸಾವು-ನೋವುಗಳು ಸಂಭವಿಸುತ್ತಿವೆ.ಇದೀಗ ವಿಶ್ವದಾದ್ಯಂತ ಇನ್ನೂ ಮೂರು ವೈರಸ್‌ಗಳ ಅಪಾಯ ಹೆಚ್ಚುತ್ತಿದೆ. ಇವುಗಳಲ್ಲಿ ಮಂಕಿಪಾಕ್ಸ್, ಮಾರ್ಬರ್ಗ್ ವೈರಸ್ ಮತ್ತು ಎಬೋಲಾ ವೈರಸ್ ಸೇರಿವೆ. ಈ ಮೂರು ವೈರಸ್ ಗಳು ಹಳೆಯದಾಗಿದ್ದರೂ, ಅವು ಮತ್ತೆ ಸಕ್ರಿಯವಾಗಿರುವ ಮತ್ತು ಹರಡುತ್ತಿರುವ ವಿಧಾನಕ್ಕೆ ಅನುಗುಣವಾಗಿ, ಇದು ದೊಡ್ಡ ಅಪಾಯವನ್ನು ಸೃಷ್ಟಿಸಿದೆ. ಈ ಎಲ್ಲಾ ವೈರಸ್ಗಳು ಕರೋನಾದಷ್ಟು ಮಾರಣಾಂತಿಕವಲ್ಲ, ಆದರೆ ಅವು ಸಾವಿಗೆ ಕಾರಣವಾಗುತ್ತವೆ. ಇಲ್ಲಿಯವರೆಗೆ ಮಂಕಿಪಾಕ್ಸ್ ಮತ್ತು ಮಾರ್ಬರ್ಗ್ ವೈರಸ್ಗೆ ಯಾವುದೇ ಲಸಿಕೆ ಇಲ್ಲ. https://kannadanewsnow.com/kannada/watch-video-shows-agra-man-beating-up-wife-tied-to-electric-pole/ ಕೊರೊನಾ ನಂತರ, ಮಂಕಿಪಾಕ್ಸ್ ವೈರಸ್ ಸಹ ವೇಗವಾಗಿ ಹರಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಪ್ರಕಾರ, ವಿಶ್ವದಾದ್ಯಂತ 71 ಕ್ಕೂ ಹೆಚ್ಚು ದೇಶಗಳಲ್ಲಿ ಈ ವೈರಸ್ನ 9 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ವಿಶ್ವ ಆರೋಗ್ಯ ಸಂಸ್ಥೆಯೂ ಸಾಂಕ್ರಾಮಿಕ ರೋಗವೆಂದು ಘೋಷಿಸಿದೆ. ಮಂಕಿಪಾಕ್ಸ್ನಲ್ಲಿನ ಸಾವಿನ ಪ್ರಮಾಣವು ಕರೋನಾಗಿಂತ ಹೆಚ್ಚಾಗಿದೆ ಮತ್ತು ಇದು ಎಲ್ಲಾ ವಯಸ್ಸಿನ…
ಹಾವೇರಿ: ದೇಶಕ್ಕೆ ಅನ್ನ ಕೊಡುವ ರೈತನಿಗೆ ಹೊಸ ಹೊಸ ಕಾರ್ಯಕ್ರಮ ಅನುಷ್ಠಾನದ ಮೂಲಕ ನಮ್ಮ ಸರ್ಕಾರ ದೇಶದಲ್ಲೇ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರ ಬದಲಾವಣೆ ತಂದಿದೆ. ಈ ಕ್ಷೇತ್ರದಲ್ಲಿ ದುಡಿಯುವ ಕೃಷಿಕಾರ್ಮಿಕರಿಗೂ ಕಾರ್ಮಿಕ ಇಲಾಖೆ ವತಿಯಿಂದ ಕಾರ್ಡ್‍ಗಳನ್ನು ವಿತರಿಸಿ ಸೌಲಭ್ಯಗಳನ್ನು ನೀಡುವ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ಮಿಕ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಅರಬೈಲ್ ಶಿವರಾಮ ಹೆಬ್ಬಾರ್ ಅವರು ಹೇಳಿದರು. https://kannadanewsnow.com/kannada/gautam-adani-overtakes-bill-gates-to-become-4th-richest-person-in-the-world/ ಹಿರೇಕೆರೂರು ತಾಲೂಕು ಕೋಡ ಹಾಗೂ ರಟ್ಟಿಹಳ್ಳಿಯಲ್ಲಿ ತಲಾ ರೂ.10ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುವ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಶಂಕುಸ್ಥಾಪನೆ, ಕೃಷಿ ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ ಹಾಗೂ ಅಮೃತ ಸ್ವಸಹಾಯ ಕಿರು ಉದ್ಯಮಿ ಯೋಜನೆಯಡಿ ಸ್ತ್ರೀ ಶಕ್ತಿ ಸಂಘಗಳಿಗೆ ತಲಾ ರೂ. ಒಂದು ಲಕ್ಷ ಮೊತ್ತದ ಚೆಕ್ ವಿತರಿಸುವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. https://kannadanewsnow.com/kannada/person-who-hasnt-physically-attended-classes-cant-be-called-engineer-punjab-haryana-hc/ ತಲಾ ರೂ.10 ಲಕ್ಷ ವೆಚ್ಚದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 13 ಕೋಲ್ಡ್‍ಸ್ಟೋರೇಜ್ ನಿರ್ಮಾಣ ಮಾಡಲಾಗುತ್ತ. ಹಾವೇರಿ ಜಿಲ್ಲೆಯಲ್ಲಿ ಶಿಗ್ಗಾಂವ,ಕೋಡ, ಹಿರೇಕೆರೂರಿನಲ್ಲಿ…
ನವದೆಹಲಿ : ಭಾರತೀಯ ಉದ್ಯಮಿ ಗೌತಮ್ ಅದಾನಿಯವರು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕುವ ಮೂಲಕ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಈ ಕುರಿತಂತೆ ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿ ಬಿಡುಗಡೆ ಮಾಡಿದೆ. ಗೌತಮ್ ಅದಾನಿಯವರ ನಿವ್ವಳ ಮೌಲ್ಯವು ಗುರುವಾರ $ 115.5 ಶತಕೋಟಿಯನ್ನು ತಲುಪಿದ್ದು, ಅವರ ಸಂಪತ್ತು $ 104.6 ಶತಕೋಟಿಯಷ್ಟಿದೆ. ಇತ್ತ $90 ಶತಕೋಟಿ ಮೌಲ್ಯದೊಂದಿಗೆ ಮುಖೇಶ್ ಅಂಬಾನಿ 10 ನೇ ಸ್ಥಾನದಲ್ಲಿದ್ದಾರೆ. ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಂಸ್ಥಾಪಕ ಎಲೋನ್ ಮಸ್ಕ್ ಅವರು ಟ್ವಿಟರ್ ಅನ್ನು ಖರೀದಿಸಲು ಬಿಡ್ ಮಾಡಿ ನಂತರ ಹಿಂಪಡೆದ ಬಳಿಕ ಸುಮಾರು $235.8 ಶತಕೋಟಿಯೊಂದಿಗೆ ಬಿಲಿಯನೇರ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅದಾನಿ ಸಮೂಹದ ಅಧ್ಯಕ್ಷರು ಸಣ್ಣ ಸರಕುಗಳ ವ್ಯಾಪಾರ ವ್ಯವಹಾರವನ್ನು ಬಂದರುಗಳು, ಗಣಿಗಳು ಮತ್ತು ಹಸಿರು ಇಂಧನವನ್ನು ವ್ಯಾಪಿಸಿರುವ ಸಂಘಟಿತವಾಗಿ ಪರಿವರ್ತಿಸಲು ಪ್ರಸಿದ್ಧರಾಗಿದ್ದಾರೆ. ಅದಾನಿ ಗ್ರೂಪ್‌ನ ಕೆಲವು ಪಟ್ಟಿಮಾಡಿದ ಷೇರುಗಳು ಕಳೆದ ಎರಡು ವರ್ಷಗಳಲ್ಲಿ 600% ಕ್ಕಿಂತ ಹೆಚ್ಚು ಏರಿಕೆ ಕಂಡಿವೆ. …
ಮಂಡ್ಯ: ಎರಡುಬಾರಿ ಕೆ.ಆರ್.ಪೇಟೆಗೆ ಬಂದಿದ್ದೇನೆ, ಸಿಎಂ ಆದ ಬಳಿಕ ಇದು ಮೊದಲ ಭೇಟಿ ಮಾಡುತ್ತಿದ್ದೇನೆ. ಜಲಸಂಪನ್ಮೂಲ ಸಚಿವನಾಗಿದ್ದಾಗ ಇಲ್ಲಿಯ ಹೇಮಗಿರಿ, ಮಂದಗಿರಿ ನಾಲೆ ಆಧುನೀಕರಣ ಮಾಡಿದ್ದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. https://kannadanewsnow.com/kannada/when-you-are-a-minister-can-you-do-as-much-work-as-siddaramaiah-g-t-deve-gowda-hits-back-at-siddaramaiah-over-his-remarks/ ನಿಗಮ ಮಂಡಳಿ ವಿಚಾರವಾಗಿ ಮಾತನಾಡಿದ ಅವರು, ಶೀಘ್ರದಲ್ಲೇ ದೆಹಲಿ ಭೇಟಿ ನೀಡಲಿದ್ದೇನೆ. ದೆಹಲಿ ಭೇಟಿ ನಂತರ ನಿಗಮ ಮಂಡಳಿ ನೇಮಕ ಮಾಡಲಾಗಿದೆ. ಈಶ್ವರಪ್ಪ ಮತ್ತೆ ಸಂಪುಟ ಸೇರ್ಪಡೆ ವಿಚಾರವಾಗಿ ಪ್ರಕರಣ ಫೈನಲ್ ಆಗಲಿ ನೋಡೋಣ ಎಂದಿದ್ದಾರೆ. ಒಕ್ಕಲಿಗ ಸಿಎಂ ಚರ್ಚೆ ಕುರಿತು, ಈಗಾಗಲೇ ಆ ಕುರಿತು ಮಾತನಾಡಿದ್ದೇನೆ.ಮತ್ತೆ ಮತ್ತೆ ಅದರ ಬಗ್ಗೆ ಮಾತನಾಡುವುದು ಬೇಡ. ಅದು ಅವರ ಪಕ್ಷದ ಆಂತರಿಕ ವಿಚಾರ. ಮುಖ್ಯಮಂತ್ರಿ ಆಗುವುದು ಜನ ತೀರ್ಮಾನ ಮಾಡ್ತಾರೆ. ಅವರವರೇ ತೀರ್ಮಾನ ಮಾಡುವುದಿಲ್ಲ. ಸಿಎಂ ಕುರ್ಚಿಗಾಗಿ ಅವರಿಬ್ಬರ ಪೈಪೋಟಿ ಜಗಜ್ಜಾಹೀರ. ಅದರ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ. https://kannadanewsnow.com/kannada/when-you-are-a-minister-can-you-do-as-much-work-as-siddaramaiah-g-t-deve-gowda-hits-back-at-siddaramaiah-over-his-remarks/ ಕುಮಾರಸ್ವಾಮಿ ಮೊದಲನಿಂದಲೂ ಸಿಎಂ ಆಗಲು ಅವಕಾಶ ಕೊಡಿ ಅಂತಿದ್ದಾರೆ. ಈಗ ಡಿಕೆ…
ಪಂಜಾಬ್ : ʻದೈಹಿಕವಾಗಿ ತರಗತಿಗಳಿಗೆ ಹಾಜರಾಗದ ವ್ಯಕ್ತಿಯನ್ನು ಎಂಜಿನಿಯರ್ ಎಂದು ಕರೆಯಲಾಗುವುದಿಲ್ಲʼ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ದೂರ ಶಿಕ್ಷಣ ಕ್ರಮದಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದ ಉದ್ಯೋಗಿಯನ್ನು ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗೆ ಬಡ್ತಿ ನೀಡಿದ ಹರಿಯಾಣ ಪೊಲೀಸ್ ವಸತಿ ನಿಗಮದ (ಎಚ್‌ಪಿಎಚ್‌ಸಿ) ಆದೇಶವನ್ನು ತಳ್ಳಿಹಾಕಿರುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ʻಒಬ್ಬ ವ್ಯಕ್ತಿ ದೈಹಿಕವಾಗಿ ತರಗತಿಗಳಿಗೆ/ಕೋರ್ಸ್‌ಗೆ ಹಾಜರಾಗಿಲ್ಲ ಮತ್ತು ಪ್ರಾಯೋಗಿಕ ತರಬೇತಿಯನ್ನು ಕೈಗೊಳ್ಳದವರನ್ನು ಇಂಜಿನಿಯರ್ ಎಂದು ಹೇಳಲಾಗುವುದಿಲ್ಲʼ ಎಂದಿದೆ. ನ್ಯಾಯಮೂರ್ತಿ ಅನುಪಿಂದರ್ ಸಿಂಗ್ ಗ್ರೆವಾಲ್ ಅವರ ಪೀಠವು, “ದೂರ ಶಿಕ್ಷಣದ ಮೂಲಕ ಎಂಜಿನಿಯರಿಂಗ್ ಪದವಿ ಭೌತಿಕ ಕ್ರಮದಲ್ಲಿ ಕೈಗೊಳ್ಳುವ ಕೋರ್ಸ್‌ಗೆ ಸಮನಾಗಿರುತ್ತದೆ ಎಂದು ಒಪ್ಪಿಕೊಳ್ಳುವುದು ಕಷ್ಟ. ಎಂಜಿನಿಯರಿಂಗ್ ಅಧ್ಯಯನದಲ್ಲಿ, ಸೈದ್ಧಾಂತಿಕ ಪರಿಕಲ್ಪನೆಗಳನ್ನು ಕಲಿಸಲಾಗುತ್ತದೆ. ನಂತರ, ಅದನ್ನು ಪ್ರಾಯೋಗಿಕ ತರಬೇತಿಯ ಮೂಲಕ ಆಚರಣೆಗೆ ತರಲಾಗುತ್ತದೆ. ದೈಹಿಕವಾಗಿ ತರಗತಿಗಳಿಗೆ/ಕೋರ್ಸಿಗೆ ಹಾಜರಾಗದ ಮತ್ತು ಪ್ರಾಯೋಗಿಕ ತರಬೇತಿಯನ್ನು ಕೈಗೊಳ್ಳದ ವ್ಯಕ್ತಿಯನ್ನು ಇಂಜಿನಿಯರ್ ಎಂದು ಹೇಳಲಾಗುವುದಿಲ್ಲ. ದೂರದ ಕಲಿಕೆಯ ಮೂಲಕ ಪಡೆದ…
ಆಗ್ರಾ (ಉತ್ತರ ಪ್ರದೇಶ): ಮಹಿಳೆಯೊಬ್ಬಳನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ವ್ಯಕ್ತಿಯೊಬ್ಬನಿಂದ ಥಳಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. https://kannadanewsnow.com/kannada/dr-virendra-hegde-taking-oath-as-rajya-sabha-member/ 22 ಸೆಕೆಂಡಿನ ಈ ವಿಡಿಯೋ ಕ್ಲಿಪ್ನಲ್ಲಿ ಕುಸುಮಾ ದೇವಿಯ ಪತಿ ಶಾಯಂಬಿಹಾರಿ, ಆಕೆಯನ್ನು ಕಂಬಕ್ಕೆ ಕಟ್ಟಿಹಾಕಿ ನಂತರ ತನ್ನ ಹಿಂದೆ ಎಳೆದುಕೊಂಡು ಹೋಗುವುದನ್ನು ತೋರಿಸಲಾಗಿದೆ. ಪೊಲೀಸರ ಪ್ರಕಾರ, ಆಗ್ರಾದ ಸಿಕಂದ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಅರ್ಸೆನಾ ಗ್ರಾಮದಲ್ಲಿ ಜುಲೈ 14 ರಂದು ಈ ಘಟನೆ ನಡೆದಿದೆ. https://twitter.com/AHindinews/status/1549858532786606080?ref_src=twsrc%5Etfw%7Ctwcamp%5Etweetembed%7Ctwterm%5E1549858532786606080%7Ctwgr%5E%7Ctwcon%5Es1_c10&ref_url=https%3A%2F%2Fwww.ndtv.com%2Findia-news%2Fwatch-video-shows-agra-man-beating-up-wife-tied-to-electric-pole-3179099 ಅದೇ ದಿನ ವ್ಯಕ್ತಿ ಮತ್ತು ಆತನ ತಾಯಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಂದಿನಿಂದ ಇಬ್ಬರೂ ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗ್ರಾದ ಸಿಕಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಅರ್ಸೆನಾ ಗ್ರಾಮದಲ್ಲಿ ಜುಲೈ 14 ರಂದು ಈ ಘಟನೆ ನಡೆದಿದೆ. ಘಟನೆಯ ವೀಡಿಯೊ ಬುಧವಾರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಾಣಿಸಿಕೊಂಡಿದೆ” ಎಂದು ಸಿಕಂದ್ರಾ ಪೊಲೀಸ್ ಠಾಣೆಯ ಉಸ್ತುವಾರಿ ಆನಂದ್ ಕುಮಾರ್ ಶಾಹಿ ಪಿಟಿಐಗೆ ತಿಳಿಸಿದ್ದಾರೆ. ವಿಡಿಯೋದಲ್ಲಿರುವ ವ್ಯಕ್ತಿಯನ್ನು ಶ್ಯಾಂಬಿಹಾರಿ ಎಂದು ಗುರುತಿಸಲಾಗಿದ್ದು,…
ಬೆಂಗಳೂರು : ಜೂನ್/ಜುಲೈ ತಿಂಗಳಲ್ಲಿ ನಡೆದ ಎಸ್ ಎಸ್ಎಲ್ ಸಿ (SSLC) ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಪೂರಕ ಪರೀಕ್ಷೆಯ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ, ಮರುಎಣಿಕೆ ಹಾಗೂ ಮರುಮೌಲ್ಯಪಾನಕ್ಕಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. https://kannadanewsnow.com/kannada/upset-over-love-marriage-with-her-son-telangana-woman-sets-pregnant-daughter-in-law-ablaze-kills-foetus/ ಎಸ್ಎಸ್ ಎಲ್ ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ವಿದ್ಯಾರ್ಥಿಗಳು ತಮ್ಮ ವೈಯಕ್ತಿ ಫಲಿತಾಂಶವನ್ನು https://karresults.nic.in ಹಾಗೂ https://kseeb.karnataka.gov.in/sslcsuppexamresults2022 ನಲ್ಲಿ ಪಡೆಯಬಹುದಾಗಿದೆ. ಇನ್ನು ಪೂರಕ ಪರೀಕ್ಷೆಯ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ, ಮರುಎಣಿಕೆ ಹಾಗೂ ಮರುಮೌಲ್ಯಪಾನಕ್ಕಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. https://kannadanewsnow.com/kannada/upset-over-love-marriage-with-her-son-telangana-woman-sets-pregnant-daughter-in-law-ablaze-kills-foetus/ ವೇಳಾಪಟ್ಟಿ ಈ ಕೆಳಗಿನಂತಿದೆ.
ತೆಲಂಗಾಣ : ಮಗನೊಂದಿಗೆ ಪ್ರೇಮ ವಿವಾಹ ಮಾಡಿಕೊಂಡಿದ್ದಕ್ಕೆ ಮನನೊಂದ ಮಹಿಳೆಯೋರ್ವರು ತನ್ನ ಗರ್ಭಿಣಿ ಸೊಸೆಗೆ ಬೆಂಕಿ ಹಚ್ಚಿದ ಅಮಾನವೀಯ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಭ್ರೂಣ ಸಾವನ್ನಪ್ಪಿದ್ದು,ಸಂತ್ರಸ್ತೆಗೆ ಶೇ.50ರಷ್ಟು ಗಾಯಗಳಾಗಿದ್ದು, ನಿಜಾಮಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ ಆರೋಪಿಗಳಾದ ಅತ್ತೆ ಮತ್ತು ಆಕೆಯ ಮಗನನ್ನು (ಸಂತ್ರಸ್ತೆಯ ಪತಿ) ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಜುಲೈ 17ರಂದು ಕುರಟಿ ಎಂಬಾತ ಸಂತ್ರಸ್ತೆಯೊಂದಿಗೆ ಜಗಳವಾಡಿದ್ದು, ಜಗಳ ತಾರಕಕ್ಕೇರಿ ಅತ್ತೆ ಸೊಸೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೈಸೂರು: ಪ್ರಸಿದ್ಧ ಚಾಮುಂಡೇಶ್ವರಿ ದೇವಿಗೆ ಶಾಸಕ ಏನು ಕಡೆದು ಕಟ್ಟೆ ಹಾಕಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಜಿ.ಟಿ ದೇವೇಗೌಡ ಸಿದ್ದರಾಮಯ್ಯಗೆ ಸಾಫ್ಟ್ ಆಗಿಯೇ ತಿರುಗೇಟು ಕೊಟ್ಟಿದ್ದಾರೆ. https://kannadanewsnow.com/kannada/silicon-city-growing-hooliganism-youth-fight-in-the-middle-of-the-street-concern-for-locals/ ಮೈಸೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಶಾಸಕ, ಸಚಿವ ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಎಲ್ಲಾ ಆದವರು.ನಾನು ಕೇವಲ ಶಾಸಕ ಕೆಲವು ತಿಂಗಳ ಮಾತ್ರ ಮಂತ್ರಿಯಾಗಿದ್ದೆ. ನಾನು ಸಿದ್ದರಾಮಯ್ಯನವರಷ್ಟು ಕೆಲಸ ಮಾಡಲು ಸಾಧ್ಯನಾ? ಎಂದು ಸಿದ್ದರಾಮಯ್ಯಗೆ ಪ್ರಶ್ನೆ ಮಾಡಿದ್ದಾರೆ.ನಾನು ಯಾವತ್ತು ನಾನೇ ಅಭಿವೃದ್ಧಿ ಮಾಡಿದ್ದೇನೆಂದು ಎಲ್ಲೂ ಹೇಳಿಲ್ಲಾ. ಸಿದ್ದರಾಮಯ್ಯ ಅಭಿವೃದ್ಧಿ ಮಾಡಿದ್ದಾರೆ ಎಂದು ಕ್ರೆಡಿಟ್ ಕೊಟ್ಟಿದ್ದೇನೆ.ನಾನು ಏನು ಅಭಿವೃದ್ಧಿ ಕಾರ್ಯ ಮಾಡಿದ್ದೇನೆಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ ಎಂದಿದ್ದಾರೆ.
ದೆಹಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ತೆರಳುತ್ತಿದ್ದು, ಸೋನಿಯಾ ಗಾಂಧಿಗೆ ರಾಹುಲ್ ಗಾಂಧಿ ಸಾಥ್ ನೀಡಿದ್ದಾರೆ. https://kannadanewsnow.com/kannada/breaking-news-cm-basavaraj-bommai-makes-important-statement-on-expansion-of-state-cabinet/ ದೆಹಲಿಯಲ್ಲಿ ಸೋನಿಯಾ ವಿರುದ್ಧ ಷಡ್ಯಂತ್ರ್ಯ ವಿರೋಧಿ ಯೂತ್ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ರಾಹುಲ್ ಗಾಂಧಿ 50 ಗಂಟೆಗಳ ಕಾಲ ವಿಚಾರಣೆಗೆ ಹಾಜಾರಾಗಿದ್ದರು , ಇದೀಗ ಸೋನಿಯಾ ಗಾಂಧಿ ಹಾಜರಾಗಿದ್ದಾರೆ. ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆದು, ಬಸ್ ತಡೆದು, ಪಂಚರ್ ಮಾಡಿ, ಪ್ರತಿಭಟನೆ ನಡೆಸಲಾಗುತ್ತಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. https://kannadanewsnow.com/kannada/breaking-news-cm-basavaraj-bommai-makes-important-statement-on-expansion-of-state-cabinet/ ಇದು ದ್ವೇಷದ ರಾಜಕಾರಣ ವೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂದು ದೆಹಲಿ ಬಹತೇಕ ರಸ್ತೆಗಳು ಬಂದ್ ಮಾಡಲಾಗಿದೆ. ಪೊಲೀಸರು ಮನವೋಲಿಕೆ ಮುಂದಾಗುತ್ತಿದ್ದರೂ ಪ್ರತಿಭಟನಾಕಾರರು ಮನವೋಲಿಕೆ ಬಗ್ಗುತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತ ಬಿ.ವಿ ಶ್ರೀನಿವಾಸ್ ಸೇರಿದಂತೆ ಭಾಗಿಯಾಗಿದ್ದಾರೆ. https://twitter.com/ANI/status/1549997968878895105?s=20&t=ZW4TXWDh0LheUu-Di9ZxzQ https://twitter.com/ANI/status/1550000404255363072?s=20&t=ZW4TXWDh0LheUu-Di9ZxzQ