Author: KNN IT TEAM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಬೆವರು ಎಂದಾಕ್ಷಣ ಸಾಮಾನ್ಯವಾಗಿ ಎಲ್ಲರೂ ಮೂಗು ಮುಚ್ಚಿಕೊಳ್ಳುತ್ತೇವೆ ಅಲ್ವಾ? ಆದ್ರೆ ಇಲೊಬ್ಬ ರೂಪದರ್ಶಿ ಬೆವರನ್ನು ಮಾರಿ ಹಣ ಗಳಿಸುತ್ತಿದ್ದಾಳೆ ಅಂದ್ರೆ ನೀವು ಖಂಡಿತ ಶಾಕ್‌ ಆಗ್ತೀರಾ….  ಐದು ವರ್ಷಗಳ ಹಿಂದೆ ನನ್ನ ಕಂಕುಳ ಕೂದಲನ್ನು ಬೆಳೆಸಲು ಪ್ರಾರಂಭಿಸಿದಾಗ ನಾನು ಡಿಯೋಡ್ರೆಂಟ್ ಅನ್ನು ತ್ಯಜಿಸಿದ್ದೇನೆ ಎಂದು ಯುಕೆಯ ವೋರ್ಸೆಸ್ಟರ್ನ ಓನ್ಲಿಫಾನ್ಸ್ ರೂಪದರ್ಶಿ ಫೆನೆಲ್ಲಾ ಫಾಕ್ಸ್ ಹೇಳಿದ್ದಾರೆ. ಇದೇ ವೇಳೆ ನನ್ನ ಕಂಕುಳುಗಳ ನೈಸರ್ಗಿಕ ವಾಸನೆಯನ್ನು ನಾನು ಪ್ರೀತಿಸುತ್ತೇನೆ ಅಂತ ಆಕೆ ಹೇಳಿದ್ದಾಳೆ. ಪುರುಷರ ನಿರೀಕ್ಷೆಗಳನ್ನು ವಿರೋಧಿಸಿ ಫೆನೆಲ್ಲಾ 2017 ರಲ್ಲಿ ತನ್ನ ಕಂಕುಳನ್ನು ಕ್ಷೌರ ಮಾಡುವುದನ್ನು ನಿಲ್ಲಿಸಿದ್ದಾಳೆ, ಬರೋಬ್ಬರಿ 300,000 ಡಾಲರ್​. ಅಂದ್ರೆ ಭಾರತದ ರೂಪಾಯಿಗೆ ಹೋಲಿಕೆ ಮಾಡಿದ್ರೆ 2.88 ಕೋಟಿ ರೂಪಾಯಿ ದುಡ್ಡು ದುಡಿಯುತ್ತಿದ್ದಾಳೆ. “ನನ್ನ ಕಂಕುಳ ಕೂದಲು ಉದ್ದ ಮತ್ತು ಬೆವರನ್ನು ನನ್ನ ಬಹಳಷ್ಟು ಅಭಿಮಾನಿಗಳು ಇಷ್ಟಪಡುತ್ತಾರೆ. ಅವರು ನಾನು ಬೆವರುವುದನ್ನು ನೋಡಲು ಇಷ್ಟಪಡುತ್ತಾರೆ ಎನ್ನುತ್ತಾಳೆ. “ನನ್ನ ಕಂಕುಳ ಕೂದಲನ್ನು ತೆಗೆದುಹಾಕಿದರೆ ನನ್ನ ಬಹಳಷ್ಟು ಅಭಿಮಾನಿಗಳು ನನ್ನ ಮೇಲೆ…

Read More

ನವದೆಹಲಿ: ನೀತಿ ಆಯೋಗದ ʼಇಂಡಿಯಾ ಇನ್ನೋವೇಶನ್ ಇಂಡೆಕ್ಸ್ʼ ನ ಮೂರನೇ ಮತ್ತು ಇತ್ತೀಚಿನ ಆವೃತ್ತಿಯಲ್ಲಿ ಕರ್ನಾಟಕ, ಮಣಿಪುರ ಮತ್ತು ಚಂಡೀಗಢ ಅಗ್ರಸ್ಥಾನ ಪಡೆದಿವೆ. https://kannadanewsnow.com/kannada/eat-one-medium-size-guava-fruits-everyday-to-control-high-blood-pressure-naturally/ ಪ್ರಮುಖ ರಾಜ್ಯಗಳು ವಿಭಾಗದಲ್ಲಿ ಕರ್ನಾಟಕವು ಮತ್ತೆ ಅಗ್ರಸ್ಥಾನದಲ್ಲಿದ್ದರೆ, ಮಣಿಪುರವು ‘ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳು’ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದರೆ, ಚಂಡೀಗಢವು ‘ಕೇಂದ್ರಾಡಳಿತ ಪ್ರದೇಶಗಳು ಮತ್ತು ನಗರ ರಾಜ್ಯಗಳು’ ವಿಭಾಗದಲ್ಲಿ ಅಗ್ರ ಸ್ಥಾನದಲ್ಲಿದೆ ಎಂದು ನೀತಿ ಆಯೋಗದ ತಿಳಿಸಿದೆ. ಆವಿಷ್ಕಾರ ಸೂಚ್ಯಂಕದ ಮೂರನೇ ಆವೃತ್ತಿಯನ್ನು ನೀತಿ ಆಯೋಗದ ಉಪಾಧ್ಯಕ್ಷ ಸುಮನ್ ಬೆರಿ ಅವರು ಸದಸ್ಯ ವಿ.ಕೆ.ಸಾರಸ್ವತ್, ಸಿಇಒ ಪರಮೇಶ್ವರನ್ ಅಯ್ಯರ್ ಮತ್ತು ಹಿರಿಯ ಸಲಹೆಗಾರ ನೀರಜ್ ಸಿನ್ಹಾ ಮತ್ತು ಇನ್ಸ್ಟಿಟ್ಯೂಟ್ ಫಾರ್ ಕಾಂಪಿಟಿಟಿವ್ನೆಸ್ ಅಧ್ಯಕ್ಷ ಅಮಿತ್ ಕಪೂರ್ ಅವರ ಉಪಸ್ಥಿತಿಯಲ್ಲಿ ದಾಖಲೆಗನಳನ್ನು ಬಿಡುಗಡೆ ಮಾಡಿದರು.

Read More

ಶಿವಮೊಗ್ಗ : ಆಹಾರ ಭದ್ರತೆಯೊಂದಿಗೆ ಪೋಷಣೆಯ ಭದ್ರತೆಯನ್ನೂ ನೀಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ( Central Government ) ತೆದುಕೊಂಡಿದ್ದು ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಸಾರವರ್ಧಿತ ಅಕ್ಕಿ ವಿತರಣೆ ಮಾಡಲು ಕ್ರಮ ಕೈಗೊಂಡಿದೆ ಎಂದು ಭಾರತ ಆಹಾರ ನಿಗಮದ ಶಿವಮೊಗ್ಗ ಡಿವಿಷನಲ್ ಮ್ಯಾನೇಜರ್ ಭಗವಾನ್ ಸಿಂಗ್ ತಿಳಿಸಿದರು. ಇಂದು ಗಾಡಿಕೊಪ್ಪದ ಭಾರತ ಆಹಾರ ನಿಗಮ(ಎಫ್‍ಸಿಐ)ದ ವಿಭಾಗೀಯ ಕಚೇರಿಯಲ್ಲಿ ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಸಾರವರ್ಧಿತ ಅಕ್ಕಿ ವಿತರಣೆ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತಾಡಿದ ಅವರು, ಕೋವಿಡ್ ಸಮಯದಲ್ಲಿ ಯಾರೊಬ್ಬರೂ ಆಹಾರದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಪಿಎಂಜಿಕೆವೈ ಯೋಜನೆ ಜಾರಿಗೊಳಿಸಿ ದುರ್ಬಲ ವರ್ಗದವರಿಗೆ ಉಚಿತ ಪಡಿತರ ವಿತರಿಸುತ್ತಿದೆ. ದೇಶದಲ್ಲಿ ಬಹುತೇಕರಲ್ಲಿ ಪೋಷಕಾಂಶದ ಕೊರತೆ ಇರುವುದನ್ನು ಸರ್ಕಾರ ಮನಗಂಡು ಸಾರವರ್ಧಿತ ಅಕ್ಕಿಯನ್ನು ಪಡಿತರ ವ್ಯವಸ್ಥೆ ಮತ್ತು ಮಧ್ಯಾಹ್ನದ ಬಿಸಿಯೂಟದಲ್ಲಿ ನೀಡಲು ಮುಂದಾಗಿದೆ. ಇದರಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲರಿಗೂ ಅನುಕೂಲವಾಗಲಿದೆ. ಪ್ರಸ್ತುತ ಅತಿ ಹೆಚ್ಚು ಪೋಷಕಾಂಶ ಕೊರತೆ ಇರುವ ಅಧಿಸೂಚಿತ…

Read More

ಬೆಂಗಳೂರು :   ಸೋನಿಯಾಗಾಂಧಿ ಇಡಿ ವಿಚಾರಣೆ ಖಂಡಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್‌ ನಾಯಕರಿಂದ ಭಾರೀ ಪ್ರತಿಭಟನೆ ನಡೆಸಲಾಗುತ್ತಿದೆ. ರಾಜಭವನಕ್ಕೆ ಮುತ್ತಿಗೆ ಹಾಕಲು ಕಾಂಗ್ರೆಸ್‌ ಪ್ರತಿಭಟನಾಕಾರರು ಮುಂದಾಗಿದ್ದಾರೆ.  ಪ್ರತಿಭಟನೆಯಲ್ಲಿ ಭಾಗಿಯಾದ  ಈ ಮಾಜಿ ಸಿಎಂ  ಸಿದ್ದರಾಮಯ್ಯ,  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಬಂಧಿಸಲಾಗಿದೆ. ಶಾಂತಿನಗರದ ಇಡಿ ಕಚೇರಿ ಬಳಿ ಎರಡು ಕಾರಿಗೆ ಬೆಂಕಿ ಹಚ್ಚಲಾಗಿದೆ. ಕಾರಿಗೆ ಬೆಂಕಿ ಹಚ್ಚಿದ 11 ಜನರನ್ನು ವಶಕ್ಕೆ ಪಡೆಯಲಾಗಿದೆ. ಈ ಹಿನ್ನೆಲೆ ಕಾಂಗ್ರೆಸ್‌ ನಾಯಕರಿಂದ ರಾಜಭವನ ಚಲೋ ನಡೆಸಿದ್ದು, ಹಿಂಸಾಚಾರಕ್ಕೆ ತಿರುಗುತ್ತಿದೆ. ಡಿಕೆಶಿ ಬ್ಯಾರಿಕೇಟ್‌ ಮೇಲೆ ಹತ್ತಿ ಘೋರವಾಗಿ ಪ್ರತಿಭಟನೆ ನಡೆಸಿದ್ದಾರೆ. ಬಳಿಕ  ಸಿದ್ದರಾಮಯ್ಯ, ಡಿಕೆಶಿ ವಶಕ್ಕೆ ಪಡೆದು ಪೊಲೀಸರಿಂದ  ಅರೆಸ್ಟ್‌ ಮಾಡಲಾಗಿದೆ.  ಶೇಷಾದ್ರಿಪುರಂ, ಶಾಂತಿನಗರದ ಸಂಪೂರ್ಣ ಟ್ರಾಫಿಕ್‌ ಜಾಮ್‌ ಸಂಭವಿಸಿದೆ.

Read More

ನವದೆಹಲಿ: ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಜಾರಿ ನಿರ್ದೇಶನಾಲಯದ (ಇ.ಡಿ) ಮುಂದೆ ಹಾಜರಾಗುವ ಮುನ್ನ ಸಂಸತ್ತಿನಲ್ಲಿ ಕೆಲವು ವಿರೋಧ ಪಕ್ಷಗಳ ನಾಯಕರು ಗಲಾಟೆ ನಡುವೆಯೇ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಗುರುವಾರ ಲೋಕಸಭೆಯಲ್ಲಿ ಪ್ರತಿಭಟನಾಕಾರರನ್ನು ತರಾಟೆಗೆ ತೆಗೆದುಕೊಂಡರು ಇದೇ ವೇಳೆ ಅವರು ಕಾನೂನಿಗಿಂತ ಮಿಗಿಲಾದವರು ಎಂದು ಕಾಂಗ್ರೆಸ್ ಭಾವಿಸಿದೆ ಎಂದು ಹೇಳಿದರು. ಸಂಸತ್ತಿನಲ್ಲಿ ಪ್ರಲ್ಹಾದ್​ ಜೋಶಿ “ಕಾನೂನಿನ ಮುಂದೆ ಎಲ್ಲರೂ ಸಮಾನರು ಅಲ್ಲವೇ? ಕಾಂಗ್ರೆಸ್ ಅಧ್ಯಕ್ಷೆ (ಸೋನಿಯಾ ಗಾಂಧಿ) ಅತಿಮಾನುಷ ವ್ಯಕ್ತಿಯೇ? ಅವರು (ಕಾಂಗ್ರೆಸ್) ತಾವು ಕಾನೂನಿಗಿಂತ ಮೇಲಿನವರು ಎಂದು ಭಾವಿಸುತ್ತಾರೆ… “ಎಂದು ಜೋಶಿ ಲೋಕಸಭೆಯಲ್ಲಿ ಹೇಳಿದರು. ಏತನ್ಮಧ್ಯೆ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಇಡಿ ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ಸಂಸದರು ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದರು. ಜಾರಿ ನಿರ್ದೇಶನಾಲಯದ (ಇಡಿ) ದುರುಪಯೋಗದ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ಸಚೇತಕ ಮಾಣಿಕ್ಕಂ ಠಾಗೋರ್ ಗುರುವಾರ ನಿಲುವಳಿ ಸೂಚನೆ ನೋಟಿಸ್…

Read More

ಬೆಂಗಳೂರು: ನಗರದ ಕೋರಮಂಗಲದಲ್ಲಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್ ಒ) ಪ್ರಾದೇಶಿಕ ಕಚೇರಿಯು ಜುಲೈ 22 ರವರೆಗೆ ವಿಕಲಚೇತನರು ಮತ್ತು ಹಾಸಿಗೆ ಹಿಡಿದ ಪಿಂಚಣಿದಾರರು ತಮ್ಮ ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು ವಿಶೇಷ ವ್ಯವಸ್ಥೆಗಳನ್ನು ಮಾಡಿದೆ. https://kannadanewsnow.com/kannada/when-you-are-a-minister-can-you-do-as-much-work-as-siddaramaiah-g-t-deve-gowda-hits-back-at-siddaramaiah-over-his-remarks/ ಪಿಂಚಣಿದಾರರು ಮತ್ತು ಅವರ ಕುಟುಂಬ ಸದಸ್ಯರು ಇಪಿಎಫ್ಒ ಅಧಿಕಾರಿಗಳೊಂದಿಗೆ ಮಾಹಿತಿ ಪಡೆಯಬಹುದು. ಅವರ ಫೋನ್‌ ನಂಬರ್‌ – 080-29770597/29770590 ಹಾಗೂ ಇಮೇಲ್: ro.koramangala@epfindia.gov.in ಮೂಲಕ ಸಂಪರ್ಕಿಸಬಹುದು.

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಅನೇಕ ಪ್ರಮುಖ ಮೈತ್ರಿ ಪಕ್ಷಗಳು ಮಾರಿಯೋ ದ್ರಾಘಿ ಅವರಿಗೆ ತಮ್ಮ ಬೆಂಬಲವನ್ನು ವಾಪಸ್ಸು ತೆಗೆದುಕೊಂಡ ನಂತರ, ಇಟಲಿಯ ಪ್ರಧಾನಿ ತಮ್ಮ ರಾಜೀನಾಮೆಯನ್ನು ಅಧ್ಯಕ್ಷ ಸರ್ಗಿಯೊ ಮಟ್ಟರೆಲ್ಲಾ ಅವರಿಗೆ ಸಲ್ಲಿಸಿದ್ದಾರೆ. ಕರೋನವೈರಸ್ ಸಾಂಕ್ರಾಮಿಕ ರೋಗ ಮತ್ತು 2021 ರಿಂದ ಕುಸಿಯುತ್ತಿರುವ ಆರ್ಥಿಕತೆಯೊಂದಿಗೆ ಇಟಲಿ ಹೆಣಗಾಡುತ್ತಿದೆ. ರಾಜೀನಾಮೆಯಿಂದಾಗಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಮುಂಚಿತವಾಗಿ ಚುನಾವಣೆಗಳು ನಡೆಯಬಹುದು ಎನ್ನಲಾಗಿದೆ. ಅಧ್ಯಕ್ಷರ ಆಡಳಿತವು ಮಟ್ಟರೆಲ್ಲಾ ಶಾಸಕಾಂಗವನ್ನು ವಿಸರ್ಜಿಸುತ್ತದೆಯೇ ಅಥವಾ ಮುಂಚಿತವಾಗಿ ಚುನಾವಣೆಗೆ ಕರೆ ನೀಡುತ್ತದೆಯೇ ಎಂದು ಸೂಚಿಸಲಿಲ್ಲ ಎಂದು ಎಎಲ್ ಜಜೀರಾ ವರದಿ ಮಾಡಿದೆ.

Read More

ಶ್ರೀಲಂಕಾ : ಉತ್ತರ ಶ್ರೀಲಂಕಾದ ಮನ್ನಾರ್ ಸಮುದ್ರದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಭಾರತೀಯ ಮೀನುಗಾರಿಕಾ ಟ್ರಾಲರ್ ಮತ್ತು ಆರು ಮೀನುಗಾರರನ್ನು ಶ್ರೀಲಂಕಾದ ಉತ್ತರ ನೇವಲ್ ಕಮಾಂಡ್‌ನ ಫಾಸ್ಟ್ ಅಟ್ಯಾಕ್ ಕ್ರಾಫ್ಟ್ ಫೋರ್ಸ್ ಬಂಧಿಸಿದೆ. ಇದು ಈ ತಿಂಗಳಿನಲ್ಲಿ ನಡೆದಿರುವ 4ನೇ ಘಟನೆಯಾಗಿದೆ. ಬಂಧಿತ ಭಾರತೀಯ ಮೀನುಗಾರರನ್ನು ಮತ್ತು ಅವರ ಟ್ರಾಲರ್ ಅನ್ನು ತಲೈಮನ್ನಾರ್‌ಗೆ ಕರೆ ತರಲಾಗಿದ್ದು, ಪ್ರಸ್ತುತ ಅವರನ್ನು ಮನ್ನಾರ್‌ನ ಮೀನುಗಾರಿಕಾ ನಿರೀಕ್ಷಕರಿಗೆ ಹಸ್ತಾಂತರಿಸುವ ವ್ಯವಸ್ಥೆ ನಡೆಯುತ್ತಿದೆ ಎಂದು ಲಂಕಾ ನೌಕಾಪಡೆಯ ಹೇಳಿಕೆಯಲ್ಲಿ ತಿಳಿಸಿದೆ. ಶ್ರೀಲಂಕಾ ನೌಕಾಪಡೆಯು ಜುಲೈ 2022 ರಲ್ಲಿ ನಾಲ್ಕು ಭಾರತೀಯ ಬೇಟೆಯಾಡುವ ಟ್ರಾಲರ್‌ಗಳನ್ನು ಮತ್ತು 29 ಭಾರತೀಯ ಮೀನುಗಾರರನ್ನು ಕಾನೂನು ಪ್ರಕ್ರಿಯೆಗಳಿಗಾಗಿ ವಶಪಡಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ. ಶ್ರೀಲಂಕಾ ನೌಕಾಪಡೆಯು ನಿಯಮಿತವಾಗಿ ಶ್ರೀಲಂಕಾದ ನೀರಿನಲ್ಲಿ ಗಸ್ತು ಮತ್ತು ಕಾರ್ಯಾಚರಣೆಗಳನ್ನು ನಡೆಸುತ್ತದೆ. ವಿದೇಶಿ ಮೀನುಗಾರರು ದೇಶದ ನೀರಿನಲ್ಲಿ ನಡೆಸುವ ಅಕ್ರಮ ಮೀನುಗಾರಿಕೆ ಚಟುವಟಿಕೆಗಳನ್ನು ತಡೆಯುತ್ತದೆ. ತನ್ನದೇ ಆದ ಸ್ಥಳೀಯ ಮೀನುಗಾರರ ಜೀವನೋಪಾಯವನ್ನು ಮತ್ತು ದ್ವೀಪ ರಾಷ್ಟ್ರದ ಸಮುದ್ರ ಜೀವವೈವಿಧ್ಯವನ್ನು…

Read More

ಕೇರಳ : ಕೇರಳದ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆದ ನೀಟ್ ಪರೀಕ್ಷೆಯ ಮೇಲ್ವಿಚಾರಣೆ ನಡೆಸುತ್ತಿದ್ದ ಮತ್ತಿಬ್ಬರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. https://kannadanewsnow.com/kannada/no-entry-video-of-pregnant-woman-giving-birth-to-baby-on-the-road-in-front-of-hospital/ ನೀಟ್ ವೀಕ್ಷಕ ಮತ್ತು ಪರೀಕ್ಷಾ ಸಂಯೋಜಕರೊಬ್ಬರ ಬಂಧನವನ್ನು ಪೊಲೀಸರು ಗುರುವಾರ ವಿಚಾರಣೆ ನಡೆಸಿದ ನಂತರ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರೊಂದಿಗೆ, ಘಟನೆಗೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ಏಳಕ್ಕೆ ಏರಿದೆ. ನೀಟ್ ಪರೀಕ್ಷೆ ಕರ್ತವ್ಯದಲ್ಲಿದ್ದ ಐವರು ಮಹಿಳೆಯರನ್ನು ಮಂಗಳವಾರ ಬಂಧಿಸಲಾಗಿದೆ. ಅವರಲ್ಲಿ ಮೂವರು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಯಿಂದ ನೇಮಕಗೊಂಡ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರೆ, ಇಬ್ಬರು ಘಟನೆ ನಡೆದ ಆಯುರ್ನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. https://kannadanewsnow.com/kannada/no-entry-video-of-pregnant-woman-giving-birth-to-baby-on-the-road-in-front-of-hospital/ ಕೇರಳದ ಕೊಲ್ಲಂ ಜಿಲ್ಲೆಯ ಆಯುರ್ನಲ್ಲಿರುವ ನೀಟ್ (ಯುಜಿ) -2022 ರ ಕೇಂದ್ರವೊಂದರಲ್ಲಿ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ಕೊಲ್ಲಂಗೆ ಭೇಟಿ ನೀಡಲು ಎನ್ಟಿಎ ಸತ್ಯಶೋಧನಾ ಸಮಿತಿಯನ್ನು ರಚಿಸಿದೆ. ಸಮಿತಿಯು ನಾಲ್ಕು ವಾರಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read More

ಧಾರವಾಡ : ಕರ್ನಾಟಕ ಮರಾಠ ಸಮುದಾಯಗಳ ಅಭಿವೃಧ್ಧಿ ನಿಗಮದಿಂದ ಪ್ರವರ್ಗ-3ಬಿ ಅಡಿಯಲ್ಲಿ 2(ಎ) ಯಿಂದ 2(ಎಫ್)ವರೆಗೆ ಬರುವ ಮರಾಠ, ಅರೆಕ್ಷತ್ರಿ, ಅರೆ ಮರಾಠ, ಆರ್ಯ ಮರಾಠ, ಆರ್ಯ, ಆರ್ಯರು, ಕೊಂಕಣ ಮರಾಠ, ಕ್ಷತ್ರಿಯ ಮರಾಠ,ಕ್ಷತ್ರಿಯ ಮರಾಠ, ಕುಳವಾಡಿ ಜನರ ಆರ್ಥಿಕ ಅಭಿವೃಧ್ಧಿಗಾಗಿ ಸಾಲ ಸೌಲಭ್ಯಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. https://kannadanewsnow.com/kannada/bigg-breaking-news-congress-workers-set-fire-to-car-during-protest-flee/ ಸ್ವಯಂ ಉದ್ಯೋಗಕ್ಕಾಗಿ ಆರ್ಥಿಕ ಚಟುವಟಿಕೆ ಕೈಗೊಳ್ಳಲು 50 ಸಾವಿರ ರೂ.ಗಳ ವರೆಗೆ ಆರ್ಥಿಕ ನೆರವು. ಶೇ.20ರಷ್ಟು ಸಹಾಯಧನ, ಉಳಿಕೆ ಮೊತ್ತ ಶೇ.4ರಷ್ಟು ಬಡ್ಡಿದರದಲ್ಲಿ ಸಾಲ ಸೌಲಭ್ಯ ಪಡೆಯಬಹುದು. ಅರ್ಜಿದಾರರ ವಯಸ್ಸು ಕನಿಷ್ಠ 18 ರಿಂದ 25 ವರ್ಷದೊಳಗಿನ ಆಸಕ್ತರು ಸುವಿಧಾ https://suvidha.karnataka.gov.in ಪೋರ್ಟಲ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಮರಾಠ ಯುವಜನತೆಯನ್ನು ಉದ್ಯೋಗ ಮುಖಿಗಳನ್ನಾಗಿಸಲು ಸರ್ಕಾರದ ಸಂಸ್ಥೆಗಳಾದ ಐ.ಟಿ.ಐ.ಎಸ್, ಜಿ.ಟಿ.ಟಿ.ಸಿ ಮತ್ತು ಕೆ.ಜಿ.ಟಿ.ಟಿ.ಐ ಅಲ್ಪಾವಧಿ ಕೋರ್ಸುಗಳಿಗೆ ಆನ್‍ಲೈನ್ ಮೂಲಕ ಕೌಶಲ್ಯ ಕರ್ನಾಟಕ ಪೋರ್ಟಲ್ https://www.kaushalkar.com ನಲ್ಲಿ ಅಗಸ್ಟ್ 19 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಎಂದು ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ…

Read More