Author: KNN IT TEAM

ನವದೆಹಲಿ: ನೀವು ಆಗಸ್ಟ್ ತಿಂಗಳಲ್ಲಿ ಕೆಲವು ಬ್ಯಾಂಕ್ ಸಂಬಂಧಿತ ಕೆಲಸಗಳನ್ನು ಮಾಡಲು ಬಯಸಿದರೆ, ನಿಮ್ಮ ಬ್ಯಾಂಕ್ ರಜಾದಿನಗಳು ಯಾವ ದಿನದಂದು ಮುಚ್ಚಲ್ಪಡುತ್ತವೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ ಕೂಡ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಆಗಸ್ಟ್ 2022 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆರ್ಬಿಐ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯ ಪ್ರಕಾರ, ಆಗಸ್ಟ್ 2022 ರಲ್ಲಿ 13 ದಿನಗಳ ಕಾಲ ಬ್ಯಾಂಕ್ ಮುಚ್ಚಲಿದೆ. ಆರ್ಬಿಐನ ಅಧಿಕೃತ ವೆಬ್ಸೈಟ್ನಲ್ಲಿನ ರಜಾದಿನಗಳ ಪಟ್ಟಿಯ ಪ್ರಕಾರ, ಆಗಸ್ಟ್ ತಿಂಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ವಿವಿಧ ಹಬ್ಬಗಳನ್ನು ಆಚರಿಸಲಾಗುತ್ತದೆ. ಇದು ಸ್ವಾತಂತ್ರ್ಯ ದಿನಾಚರಣೆ, ರಕ್ಷಾಬಂಧನ, ಜನ್ಮಾಷ್ಟಮಿಯಂತಹ ಹಬ್ಬಗಳನ್ನು ಒಳಗೊಂಡಿದೆ. ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಸಾಪ್ತಾಹಿಕ ರಜಾದಿನಗಳಾಗಿರುತ್ತವೆ. ಮುಂದಿನ ತಿಂಗಳಲ್ಲಿ 13  ದಿನಗಳವರೆಗೆ ಬ್ಯಾಂಕುಗಳಲ್ಲಿ ಯಾವುದೇ ಕೆಲಸ ಇರುವುದಿಲ್ಲ. ಈ ಅವಧಿಯಲ್ಲಿ, ಗ್ರಾಹಕರು ಎಟಿಎಂ, ಇಂಟರ್ನೆಟ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಮತ್ತು ಇತರ ಸೇವೆಗಳನ್ನು…

Read More

ನವದೆಹಲಿ: ಇಡಿ ವಿಚಾರಣೆ ಎದುರಿಸಿ ಸೋನಿಯಾ ಗಾಂಧಿಯವರು ಸದ್ಯ ಅವರು ಮನೆಯತ್ತ ತೆರಳಿದ್ದಾರೆ ಎನ್ನಲಾಗಿದೆ. ಕೋವಿಡ್‌ ಕಾರಣದಿಂದ ಅವರು ತಮಗೆ ಈ ಹಿಂದೆ ನೀಡಿದ್ದ ಇಡಿ ವಿಚಾರಣೆಗೆ ಅವರು ಮುಂದೂಡುವಂತೆ ಮನವಿ ಮಾಡಿದ್ದರು. ಅದರಂತೆ ಸೋನಿಯಾ ಗಾಂಧಿಯವರು ಸದ್ಯ ಕೋವಿಡ್‌ನಿಂದ ಗುಣಮುಖರಾಗಿದ್ದು, ಇಂದು ಇಡಿ ಮುಂದೆ ವಿಚಾರಣೆಗೆ ಹಾಜರಗಿದ್ದರು. ಸೋನಿಯಾ ಗಾಂಧಿ ಅವರ ವಿಚಾರಣೆಯನ್ನು ಮಹಿಳಾ ಹೆಚ್ಚುವರಿ ನಿರ್ದೇಶಕಿ ನೇತೃತ್ವದ ಐವರು ಅಧಿಕಾರಿಗಳು ನಡೆಸಿದ್ದಾರೆ ಎನ್ನಲಾಗಿದೆ. ವಿಚಾರಣೆಯ ಸಮಯದಲ್ಲಿ ಕಾಂಗ್ರೆಸ್ ಮುಖ್ಯಸ್ಥರು ಆಯಾಸಗೊಂಡರೆ ಅವರಿಗೆ ವಿಶ್ರಾಂತಿ ಪಡೆಯಲು ಅವಕಾಶ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ಕ್ರಿಮಿನಲ್ ಸೆಕ್ಷನ್ಗಳ ಅಡಿಯಲ್ಲಿ ಇಡಿ ಹೊಸ ಪ್ರಕರಣವನ್ನು ದಾಖಲಿಸಿದ ನಂತರ ಕಳೆದ ವರ್ಷದ ಕೊನೆಯಲ್ಲಿ ಸೋನಿಯಾ ಮತ್ತು ರಾಹುಲ್ ವಿರುದ್ಧ ವಿಚಾರಣೆ ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಅವರ ಪುತ್ರ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಇಡಿ…

Read More

ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಇಡಿ ಕಿರುಕುಳ ಹಾಗೂ ವಿಚಾರಣೆ ವಿರೋಧಿಸಿ ಇಂದು ಕಾಂಗ್ರೆಸ್ ನಾಯಕರಿಂದ ಬೃಹತ್ ಪ್ರತಿಭಟನೆ ನಡೆಸಿದರು. ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದಂತ ನಾಯಕರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಫ್ರೀಡಂ ಪಾರ್ಕ್ ನಲ್ಲಿ ಪೊಲೀಸರು ಹಾಕಿದ್ದಂತ ಬ್ಯಾರಿಗೇಡ್ ಹತ್ತಿ ಪ್ರತಿಭಟನೆ ಮುಂದುವರೆಸಲು ಯತ್ನಿಸಿದಾಗ ವಿಪಕ್ಷ ನಾಯಕ ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಹಲವು ಘಟಾನುಘಟಿ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. https://kannadanewsnow.com/kannada/nalin-kumar-kateel-congratulates-dr-veerendra-heggade/ ಇಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರ ರೋಷಾಗ್ನಿಯೇ ಸ್ಪೋಟಗೊಂಡಿತು. ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಇಡಿ ಕಿರುಕುಳ ವಿರೋಧಿಸಿ ಇಂದು ನಡೆಸಿದಂತ ಪ್ರತಿಭಟನೆಯಲ್ಲಿ ಹಾದಿಯುದ್ಧಕ್ಕೂ ಬಿಜೆಪಿಯ ವಿರುದ್ಧ ದಳ್ಳುರಿಯೇ ಕಾರಲಾಯಿತು. ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದಂತ ಕಾಂಗ್ರೆಸ್ ನಾಯಕರು, ಫ್ರೀಡಂ ಪಾರ್ಕ್ ಗೆ ತರೆಳೋದನ್ನು ಪೊಲೀಸರು ಅರ್ಧಕ್ಕೆ ತಡೆದರು. https://kannadanewsnow.com/kannada/good-news-for-contractual-employees-of-the-states-health-department-weekly-off-granted/ ಈ ವೇಳೆ ಪೊಲೀಸರು ಹಾಕಿದ್ದಂತ ಬ್ಯಾರಿಗೇಡ್ ಹಾರಿದಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್…

Read More

ಕೆಎನ್​ಎನ್​ ಡಿಜಿಟಲ್​ ಡೆಸ್ಕ್​ : ಪ್ರತಿಯೊಬ್ಬ ಯುವತಿ ಅಥವಾ ಮಹಿಳೆ ತನ್ನ ಚರ್ಮದ ಕಾಂತಿಯ ಬಗ್ಗೆ ಹೆಚ್ಚ ಕಾಳಜಿ ವಹಿಸುತ್ತಾರೆ. ಆದರೆ ಕೆಲಸದ ಒತ್ತಡದಿಂದಾಗಿ ಸರಿಯಾಗಿ ನಿರ್ವಹಿಸವುದಿಲ್ಲ. ಇದರಿಂದ ಚರ್ಮವು ಶುಷ್ಕ, ನಿರ್ಜೀವ ಮತ್ತು ಕಲೆಯುಕ್ತವಾಗುತ್ತದೆ. https://kannadanewsnow.com/kannada/karnataka-manipur-chandigarh-top-niti-aayogs/ ತ್ವಚೆಗೆ ವಾರಕ್ಕೊಮ್ಮೆಯಾದರೂ ಅಗತ್ಯ ಆರೈಕೆ ನೀಡಬೇಕು. ಇದರಿಂದ ಮುಖವು ಮೃದು ಮತ್ತು ಹೊಳೆಯುವಂತಾಗುತ್ತದೆ. ಇದಕ್ಕೆ ಮೊಸರು ಪ್ರಯೋಜನಕಾರಿಯಾಗಿದೆ. ಇದು ಚರ್ಮಕ್ಕೆ ತುಂಬಾ ಪರಿಣಾಮಕಾರಿ ಎಂದು ಸಾಬೀತಾಗಿದೆ. ಮೊಸರು ತ್ವಚೆಗೆ ಹೊಳಪನ್ನು ನೀಡುವ ಅಗತ್ಯ ವಿಟಮಿನ್‌ಗಳು ಮತ್ತು ಖನಿಜಗಳನ್ನು ಹೊಂದಿದೆ. ಮೊಸರು ಕ್ಯಾಲ್ಸಿಯಂ, ವಿಟಮಿನ್ ಸಿ, ವಿಟಮಿನ್ ಡಿ ಮತ್ತು ವಿಟಮಿನ್ ಎ ಯ ಅತ್ಯುತ್ತಮ ಮೂಲವಾಗಿದೆ. ಮೊಸರು ಮುಖವನ್ನು ಮೊಡವೆ, ಕಲೆಗಳಿಂದ ರಕ್ಷಿಸಲು ಮತ್ತು ಮುಖದ ಮೇಲೆ ಶಾಶ್ವತ ಹೊಳಪನ್ನು ತರಲು ಸಹಾಯ ಮಾಡುತ್ತದೆ. ಹಾಗಾದರೆ ಮೊಸರನ್ನು ಯಾವ ರೀತಿಯಾಗಿ ಬಸಳಬೇಕು ಎಂಬುದನ್ನು ತಿಳಿಯುವುದು ಅಗತ್ಯವಾಗಿದೆ. ಮೊಸರು ಮತ್ತು ನಿಂಬೆ ಬಳಕೆ ಮುಖದ ಕಪ್ಪನ್ನು ಹೋಗಲಾಡಿಸಲು ಮತ್ತು ಕಾಂತಿ ಪಡೆಯಲು ನಿಂಬೆಯನ್ನು ಮೊಸರಿನ…

Read More

ನವದೆಹಲಿ: 24 ವಾರಗಳ ಗರ್ಭಿಣಿ ಅವಿವಾಹಿತ ಮಹಿಳೆಯನ್ನು ಏಮ್ಸ್ ವೈದ್ಯಕೀಯ ಮಂಡಳಿಯು ಆಕೆಯ ಜೀವಕ್ಕೆ ಅಪಾಯವಾಗದಂತೆ ಸುರಕ್ಷಿತವಾಗಿ ಗರ್ಭಪಾತ ಮಾಡಬಹುದೇ ಎಂದು ನಿರ್ಧರಿಸಲು ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ನಿರ್ಧಾರವೊಂದನ್ನು ನೀಡಿದೆ. ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಅವಿವಾಹಿತ ಮಹಿಳೆಗೆ ಅನಗತ್ಯ ಗರ್ಭಧಾರಣೆಗೆ ಅವಕಾಶ ನೀಡುವುದು ವೈದ್ಯಕೀಯ ಗರ್ಭಪಾತ (ಎಂಟಿಪಿ) ಕಾಯ್ದೆಯ ಉದ್ದೇಶ ಮತ್ತು ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ. 2021 ರ ತಿದ್ದುಪಡಿಯ ನಂತರ, ಗರ್ಭಧಾರಣೆಯ ವೈದ್ಯಕೀಯ ಮುಕ್ತಾಯ ಕಾಯ್ದೆಯು ಸೆಕ್ಷನ್ 3 ರ ವಿವರಣೆಯಲ್ಲಿ “ಪತಿ” ಎಂಬ ಪದದ ಬದಲು “ಪಾಲುದಾರ” ಎಂಬ ಪದವನ್ನು ಬಳಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಕಾಯ್ದೆಯಡಿಯಲ್ಲಿ ಅವಿವಾಹಿತ ಮಹಿಳೆಯರನ್ನು ಒಳಗೊಳ್ಳುವ ಶಾಸನಾತ್ಮಕ ಉದ್ದೇಶವನ್ನು ಇದು ತೋರಿಸುತ್ತದೆ ಎಂದು ಅದು ಹೇಳಿದೆ. ಎಂಟಿಪಿ ಕಾಯ್ದೆಯ ನಿಬಂಧನೆಗಳಿಗೆ ಅನುಗುಣವಾಗಿ ವೈದ್ಯಕೀಯ ಮಂಡಳಿಯನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಹೇಳಿದ್ದು, ಅರ್ಜಿದಾರರ ಜೀವಕ್ಕೆ ಯಾವುದೇ ಅಪಾಯವಿಲ್ಲದೆ ಭ್ರೂಣವನ್ನು ಗರ್ಭಪಾತ ಮಾಡಬಹುದು ಎಂದು ಮಂಡಳಿಯು ತೀರ್ಮಾನಿಸಿದರೆ, ಏಮ್ಸ್…

Read More

ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ವಾರದ ರಜೆ ( Weekly Off ) ಮಂಜೂರು ಮಾಡಿ, ಆರೋಗ್ಯ ಇಲಾಖೆ ಆದೇಶಿಸಿದೆ. ಈ ಮೂಲಕ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ನೀಡಿದೆ. https://kannadanewsnow.com/kannada/nalin-kumar-kateel-congratulates-dr-veerendra-heggade/ ಈ ಕುರಿತಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಭಿಯಾನ ನಿರ್ದೇಶಕರಾದಂತ ಅರುಂಧತಿ ಅವರು ಸುತ್ತೋಲೆ ಹೊರಡಿಸಿದ್ದು, ರಾಷ್ಟ್ರೀಯ ಆರೋಗ್ಯ ಭಿಯಾನದಡಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ವಾರ್ಷಿಕ 10 ದಿನಗಳ ಸಾಂದರ್ಭಿಕ ರಜೆ ಮತ್ತು 10 ದಿನಗಳ ವೈದ್ಯಕೀಯ ರಜೆ ಪಡೆಯಲು ಹಾಗೂ ಗುತ್ತಿಗೆ ಸಿಬ್ಬಂದಿಗಳಿಗೆ 180 ದಿನಗಳ ಮಾತೃತ್ವ ರಜೆ, 15 ದಿನಗಳ ಪಿತೃತ್ವ ರಜೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. https://kannadanewsnow.com/kannada/bigg-news-modi-govt-misusing-ed-to-scare-congress-leaders-former-cm-siddaramaiah/ ದಿನಾಂಕ 24-02-2022 ಮತ್ತು 07-07-2022ರಂದು ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿದಂತೆ, ಖಾಯಂ ನೌಕರರಂತೆಯೇ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ವಾರಕ್ಕೊಮ್ಮೆ ಒಂದು ದಿನ ( Weekly Off ) ರಜೆ ಪಡೆಯಬೇಕಾಗಿರುತ್ತದೆ. ಆದ್ದರಿಂದ…

Read More

ನವದೆಹಲಿ: ರಾಷ್ಟ್ರಪತಿ ಚುನಾವಣೆಯ ಮತಗಳ ಎಣಿಕೆ ನಡೆಯುತ್ತಿದೆ, ಎಲ್ಲರ ಚಿತ್ತ ದೇಶದ ಸಂಸತ್ತಿನ ಕಡೆಗೆ ನೆಟ್ಟಿದೆ. ಈ ನಡುವೆ ಮತ ಪತ್ರಗಳ ಏಣಿಕೆ ಕಾರ್ಯ ಸುಗಮವಾಗಿ ಸಾಗಿದೆ. ಸಂಸದರ ಮತಗಳನ್ನು ಮೊದಲು ಎಣಿಕೆ ಮಾಡಿದ್ದರಿಂದ ಎನ್ಡಿಎಯ ದ್ರೌಪದಿ ಮುರ್ಮು ಗಮನಾರ್ಹ ಮುನ್ನಡೆಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟು 748 ಮತಗಳಲ್ಲಿ ದ್ರೌಪದಿ ಮುರ್ಮು 540 ಮತಗಳನ್ನು ಪಡೆದರೆ, ಯಶವಂತ್ ಸಿನ್ಹಾ 204 ಮತಗಳನ್ನು ಪಡೆದಿದ್ದರು. ಮಧ್ಯಾಹ್ನ 1.30ರ ಸುಮಾರಿಗೆ ಸಂಸತ್ ಭವನದಲ್ಲಿ ಮತ ಎಣಿಕೆ ಪ್ರಾರಂಭವಾಯಿತು. ಸಂಜೆ 4ಗಂಟೆ ಸುಮಾರಿಗೆ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಪ್ರಕ್ರಿಯೆ ಪ್ರಾರಂಭವಾಯಿತು, ಮತ್ತು ಎಣಿಕೆಯನ್ನು ಪ್ರಾರಂಭಿಸುವ ಮೊದಲು ಎಲ್ಲಾ ರಾಜ್ಯಗಳ ಮತಪೆಟ್ಟಿಗೆಗಳನ್ನು ತೆರೆಯಲಾಯಿತು. ದ್ರೌಪದಿ ಮುರ್ಮು 3,78,000 ಮೌಲ್ಯದ 540 ಮತಗಳನ್ನು ಗಳಿಸಿದ್ದಾರೆ ಮತ್ತು ಯಶವಂತ್ ಸಿನ್ಹಾ 1,45,600 ಮೌಲ್ಯದ 208 ಮತಗಳನ್ನು ಪಡೆದಿದ್ದಾರೆ. ಒಟ್ಟು ೧೫ ಮತಗಳು ಅಸಿಂಧುವಾಗಿದ್ದವು. ಇವು ಸಂಸತ್ತಿನ ಅಂಕಿಅಂಶಗಳು ಆಗಿದ್ದು (ಮತಗಳು), ದಯವಿಟ್ಟು ಮುಂದಿನ ಘೋಷಣೆಗಾಗಿ ಕಾಯಿರಿ…

Read More

ಬೆಂಗಳೂರು: ದೆಹಲಿಯಲ್ಲಿ ಇಂದು ರಾಜ್ಯಸಭಾ ಸದಸ್ಯರಾಗಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪ್ರಧಾನಿ ನರೇಂದ್ರ ಮೋದಿಜಿ ಅವರ ಸಮ್ಮುಖದಲ್ಲಿ ಅಭಿನಂದಿಸಿದರು ಮತ್ತು ಶುಭ ಕೋರಿದರು. https://kannadanewsnow.com/kannada/good-news-for-ration-cardholders-in-the-state-concentrated-rice-to-be-distributed/ ಅಲ್ಲದೆ ಇದೇವೇಳೆ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಆಯ್ಕೆ ಮಾಡಿದ್ದಕ್ಕಾಗಿ ನಳಿನ್ ಕುಮಾರ್ ಕಟೀಲ್ ಅವರು ಪ್ರಧಾನಿ ನರೇಂದ್ರ ಮೋದಿಜಿ ಅವರಿಗೆ ಹಾರಾರ್ಪಣೆ ಮಾಡಿ ಗೌರವಿಸಿದರು. https://kannadanewsnow.com/kannada/bigg-news-modi-govt-misusing-ed-to-scare-congress-leaders-former-cm-siddaramaiah/ ಶಿಕ್ಷಣ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳು ಸೇರಿದಂತೆ ವಿವಿಧ ರಂಗಗಳಲ್ಲಿ ಅಸಾಧಾರಣ ಸೇವೆ ಮಾಡುತ್ತಿರುವ ಹಾಗೂ ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾದ ಡಾ. ವೀರೇಂದ್ರ ಹೆಗ್ಗಡೆ ಅವರ ಆಯ್ಕೆಯಿಂದ ಕನ್ನಡನಾಡಿಗೆ ಮಾತ್ರವಲ್ಲದೆ ಇಡೀ ದೇಶಕ್ಕೆ ಗೌರವ ಲಭಿಸಿದೆ ಎಂದು ಅವರು ಮೆಚ್ಚುಗೆ ಸೂಚಿಸಿದರು.

Read More

ಕಾಶಿ : ಉತ್ತರ ಪ್ರದೇಶದ ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ವಿವಾದಿತ ಜ್ಞಾನವಾಪಿ ಸ್ಥಳದಲ್ಲಿ ‘ಶಿವಲಿಂಗ’ವನ್ನ ಪೂಜಿಸುವ ಹಕ್ಕನ್ನ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನ ಸ್ವೀಕರಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಅಂದ್ಹಾಗೆ, ಸುಪ್ರೀಂಕೋರ್ಟ್ ಈ ವಿಷಯವನ್ನು ಅಕ್ಟೋಬರ್ ಮೊದಲ ವಾರದಲ್ಲಿ ವಿಚಾರಣೆಗೆ ಮುಂದೂಡಿತು. ವಾರಣಾಸಿಯ ಜ್ಞಾನವಾಪಿ-ಶೃಂಗಾರ್ ಗೌರಿ ಕಾಂಪ್ಲೆಕ್ಸ್ʼನ ಸಮೀಕ್ಷೆಯನ್ನ ಪ್ರಶ್ನಿಸಿ ಅಂಜುಮನ್ ಇಂಟೆಜೆಮಿಯಾ ಮಸೀದಿ ಸಮಿತಿ ಸಲ್ಲಿಸಿರುವ ಪ್ರಕರಣದ ಫಲಿತಾಂಶಕ್ಕಾಗಿ ಕಾಯುತ್ತಿರುವುದಾಗಿ ಅದು ಹೇಳಿದೆ. ಜ್ಞಾನ್ವಾಪಿ ಮಸೀದಿಯಲ್ಲಿ ಪತ್ತೆಯಾಗಿರುವ ‘ಶಿವಲಿಂಗ’ದ ಪೂಜೆಗೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನ ಸ್ವೀಕರಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಮೇ 17ರಂದು, ಉನ್ನತ ನ್ಯಾಯಾಲಯವು ಜ್ಞಾನ್ವಾಪಿ-ಶೃಂಗರ್ ಗೌರಿ ಸಂಕೀರ್ಣದೊಳಗಿನ ಪ್ರದೇಶವನ್ನು ರಕ್ಷಿಸುವುದನ್ನ ಖಚಿತಪಡಿಸಿಕೊಳ್ಳಲು ವಾರಣಾಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ನಿರ್ದೇಶನ ನೀಡಿತ್ತು. ಇನ್ನು ಅಲ್ಲಿ ಮುಸ್ಲಿಮರು ‘ನಮಾಜ್’ ಮಾಡಲು ಮತ್ತು ಧಾರ್ಮಿಕ ಆಚರಣೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಿತ್ತು.

Read More

ಬೆಂಗಳೂರು :  ಸೋನಿಯಾ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್‌ ಪ್ರತಿಭಟನೆ ವೇಳೆ ಕಾರಿ ಬೆಂಕಿ ಹಚ್ಚಿದ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ ʻ ಕಾಂಗ್ರೆಸ್ಸಿಗರು ಯಾರು ಕಾರಿಗೆ ಬೆಂಕಿ ಹಚ್ಚಿಲ್ಲʼ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಕಿ ಹಾಕಿದವರು ದುಷ್ಕರ್ಮಿಗಳು. ಯಾರು ಕಾಂಗ್ರೆಸ್ಸಿನವರು ಯಾರು  ಬೆಂಕಿ ಹಾಕಲ್ಲ.  ಗಾಂಧಿ ತತ್ವದ ಬಗ್ಗೆ ಕಾಂಗ್ರೆಸ್‌ನವರಿಗೆ ನಂಬಿಕೆಯಿದೆ. ಅವರ್ಯಾರು ಕಾಂಗ್ರೆಸ್ಸಿಗರಲ್ಲ ಎಂದು ಮಾಧ್ಯಮಗಳಿಗೆ ಸಿದ್ದರಾಮಯ್ಯ ತಿಳಿಸಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಇಡಿ ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ದ್ವೇಷದ ರಾಜಕಾರಣ ಮಾಡುತ್ತಿದ್ದೇವೆ ಹೊರತು, ಕಾನೂನಿಗೆ ಅಗೌರವ ತರಬೇಕೆಂದು ಪ್ರತಿಭಟನೆ ಮಾಡುತ್ತಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್‌ ಪ್ರತಿಭಟನೆ ಸಂದರ್ಭದಲ್ಲಿ ಶಾಂತಿನಗರದ ಬಳಿ ನಿಲ್ಲಿಸಿದ್ದ 2 ಕಾರಿಗೆ ಬೆಂಕಿ ಹಚ್ಚಲಾಗಿದೆ . ಈಗಾಗಲೇ ಕಾರಿಗೆ ಬೆಂಕಿ ಹಚ್ಚಿದ 11 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

Read More