Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು: ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಲಂಚ ಪಡೆಯುತ್ತಿದ್ದಾಗಲೇ ಸಿಕ್ಕಿಬಿದ್ದಂತ ಪ್ರಕರಣ ಸಂಬಂಧ 60 ದಿನಗಳೇ ಕಳೆದರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಎಸಿಬಿ ಚಾರ್ಜ್ ಶೀಟ್ ಸಲ್ಲಿಸದೇ ಇರೋ ಸಂಬಂಧ, ಇಂದು ಹೈಕೋರ್ಟ್ ಗರಂ ಆಗಿದೆ. ಅಲ್ಲದೇ ಎಸಿಬಿ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. https://kannadanewsnow.com/kannada/pagal-premi-to-be-brought-to-police-station-for-refusing-to-agree-to-marriage/ ಇಂದು ಈ ಪ್ರಕರಣ ಸಂಬಂಧ ವಿಚಾರಣೆ ಕೈಗೆತ್ತಿಕೊಂಡಂತ ಹೈಕೋರ್ಟ್ ನ ನ್ಯಾಯಮೂರ್ತಿ ಹೆಚ್ ಪಿ ಸಂದೇಶ್ ಅವರನ್ನೊಳಗೊಂಡ ನ್ಯಾಯಪೀಠವು, 60 ದಿನಗಳೇ ಕಳೆದರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿಲ್ಲವೇಕೆ ಎಂಬುದಾಗಿ ಪ್ರಶ್ನಿಸಿತು. ಈ ವೇಳೆ ಎಸಿಬಿ ಪರ ವಕೀಲರು ಎಫ್ಎಸ್ಎಲ್ ವರದಿಗಾಗಿ ಕಾಯುತ್ತಿದ್ದೇವೆ ಎಂಬುದಾಗಿ ಸಮಜಾಯಿಸಿ ನೀಡಿದರು. ಈ ಸಮಜಾಯಿಸಿಗೆ ಒಪ್ಪದಂತ ನ್ಯಾಯಮೂರ್ತಿಗಳು, ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಅವಕಾಶವಿದೆ ಎಂಬುದಾಗಿ ಗರಂ ಆದ್ರು. https://kannadanewsnow.com/kannada/good-news-for-contractual-employees-of-the-states-health-department-weekly-off-granted/ ನಮ್ಮದು ಸಮಗ್ರತೆಯುಳ್ಳ ಸಂಸ್ಥೆಯಾಗಿದೆ ಎಂಬುದಾಗಿ ಹೇಳಿಕೊಳ್ಳುತ್ತೀರಿ. ಹಾಗಿದ್ದೂ 60 ದಿನಗಳೇ ಕಳೆದರು ಪ್ರಕರಣ ಸಂಬಂಧ ಆರೋಪಿಗಳ ಬಗ್ಗೆ ಚಾರ್ಜ್ ಶೀಟ್ ಯಾಕೆ…
ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ಗಾಯಕ ಸಿಧು ಮೂಸೆವಾಲಾ ಅವ್ರ ತಂದೆಗೆ ಕೊಲೆ ಬೆದರಿಕೆ ಬಂದಿದ್ದು, ಮುಂದಿನ ಟಾರ್ಗೆಟ್ ನೀವೇ ಎಂದು ಹೇಳಲಾಗಿದೆ. ಸಿಧು ಮೂಸೆವಾಲಾ ಅವರ ತಂದೆಗೆ ಪೋಸ್ಟ್ ಮೂಲಕ ಬೆದರಿಕೆ ಹಾಕಲಾಗಿದ್ದು, ಆ ಬೆದರಿಕೆಯಲ್ಲಿ “ಮುಂದಿನ ಸಂಖ್ಯೆ ಬಾಪು ಅವರಿಗೆ ಸೇರಿದೆ” ಎಂದಿದೆ. ಸಿಧು ಮೂಸ್ವಾಲಾ ಅವರ ತಂದೆಯ ಪ್ರಕಾರ, ಗಾಯಕನ ಕೆಲವು ಸ್ನೇಹಿತರು ಇನ್ಸ್ಟಾಗ್ರಾಮ್‌ನಲ್ಲಿ ಪಾಕಿಸ್ತಾನದಿಂದ ಪೋಸ್ಟ್ ಮಾಡಲಾಗಿದೆ ಎಂದಿದ್ದು, ಇದೇ ಪೋಸ್ಟ್ʼನಲ್ಲಿ ಈ ಬೆದರಿಕೆ ಹಾಕಲಾಗಿದೆ. ಇನ್ನು ಈ ಬಗ್ಗೆ ಮುಸೆವಾಲಾ ತಂದೆ ಬೆದರಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (Board of Control of Cricket in India -BCCI) ಆಡಳಿತಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹಿರಿಯ ವಕೀಲ ಮತ್ತು ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಣಿಂದರ್ ಸಿಂಗ್ ( Senior Advocate and former Additional Solicitor General Maninder Singh ) ಅವರನ್ನು ಸುಪ್ರೀಂ ಕೋರ್ಟ್ ( Supreme Court ) ಗುರುವಾರ ಅಮಿಕಸ್ ಕ್ಯೂರಿಯಾಗಿ ನೇಮಿಸಿದೆ. https://kannadanewsnow.com/kannada/pagal-premi-to-be-brought-to-police-station-for-refusing-to-agree-to-marriage/ ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ( Chief Justice of India NV Ramana, Justices Krishna Murari, Hima Kohli ) ಅವರ ಪೀಠವು ಹಿರಿಯ ವಕೀಲ ಮಣಿಂದರ್ ಸಿಂಗ್ ಅವರನ್ನು ಈ ಹಿಂದೆ ಅಮಿಕಸ್ ಆಗಿ ನೇಮಿಸಿತು. ಹಿರಿಯ ವಕೀಲ ಪಿ.ಎಸ್.ನರಸಿಂಹ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ನೀಡಲಾಗಿದೆ. ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೋರಿ ಬಿಸಿಸಿಐ ಸಲ್ಲಿಸಿದ್ದ ಅರ್ಜಿಯನ್ನು ಆಗಸ್ಟ್ 28ಕ್ಕೆ…
ಹಾಸನ: ರಾಷ್ಟ್ರೀಯ ಹೆದ್ದಾರಿ 75 ದೋಣಿಗಾಲ್ ಶಿರಾಡಿಘಾಟ್ ಮಾರ್ಗದಲ್ಲಿ ಲಾರಿ ಮತ್ತು ಬಸ್ ಸೇರಿದಂತೆ ಎಲ್ಲಾ ವಾಹನ ಸಂಚಾರಕ್ಕೆ ಅನುಮತಿ ಸಿಕ್ಕಿದೆ. https://kannadanewsnow.com/kannada/more-than-80-children-fall-ill-after-consuming-mid-day-meal-in-chitradurga-anxiety-for-parents/ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ವರದಿ ಮೆರೆಗೆ ಎಲ್ಲಾ ರೀತಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಕಳೆದ ಒಂದು ವಾರ ಹಿಂದೆ ಭಾರಿ ಮಳೆಯಿಂದಾಗಿ ರಸ್ತೆ ಕುಸಿತವಾಗಿತ್ತು. ಹೀಗಾಗಿ ಬಸ್ ಮತ್ತು ಲಾರಿ ಸಂಚಾರಕ್ಕೆ ಜಿಲ್ಲಾಧಿಕಾರಿ ಬ್ರೇಕ್ ಹಾಕಿದ್ದರು. ಇದೀಗ ಎಲ್ಲ ವಾಹನ ಸಂಚಾರಕ್ಕೂ ಅನುಮತಿ ನೀಡಲಾಗಿದೆ ಎಂದು ತಹಸೀಲ್ದಾರ್ ಜಯಕುಮಾರ್ ಹೇಳಿದ್ದಾರೆ.
ನವದೆಹಲಿ : ಮೂರು ದಿನಗಳ ಉತ್ತಮ ರ್ಯಾಲಿಯ ನಂತ್ರ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಇಂದು ಕುಸಿದಿದೆ. ಭಾರತೀಯ ಕಾಲಮಾನ ಬೆಳಿಗ್ಗೆ 9:40ರ ವೇಳೆಗೆ, ಜಾಗತಿಕ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಕ್ಯಾಪ್ ಶೇಕಡಾ 3.46ರಷ್ಟು ಕುಸಿದು 1.02 ಟ್ರಿಲಿಯನ್ ಡಾಲರ್‌ಗೆ ತಲುಪಿದೆ. ಬಿಟ್ ಕಾಯಿನ್ ಮತ್ತು ಎಥೆರಿಯಮ್ ಸೇರಿದಂತೆ ಬಹುತೇಕ ಎಲ್ಲಾ ದೊಡ್ಡ ಕ್ರಿಪ್ಟೋಕರೆನ್ಸಿಗಳು ಇಂದು ಕೆಂಪು ಬಣ್ಣದಲ್ಲಿ ವಹಿವಾಟು ನಡೆಸುತ್ತಿವೆ. ಕಾಯಿನ್ಮಾರ್ಕೆಟ್ಕ್ಯಾಪ್ ಡೇಟಾದ ಪ್ರಕಾರ, ಬಿಟ್ಕಾಯಿನ್ ಬೆಲೆ ಬರೆಯುವ ಸಮಯದಲ್ಲಿ 3.11% ಕುಸಿದು 22,728.98 ಡಾಲರ್ಗೆ ತಲುಪಿದೆ. ಬಿಟ್ ಕಾಯಿನ್ ಒಂದು ವಾರದಲ್ಲಿ 12.42%ರಷ್ಟು ಹೆಚ್ಚಾಗಿದೆ. ಎರಡನೇ ಅತಿದೊಡ್ಡ ನಾಣ್ಯ ಎಥೆರಿಯಮ್ ಬೆಲೆ ಇಂದು ಕಳೆದ 24 ಗಂಟೆಗಳಲ್ಲಿ ಶೇಕಡಾ 5.86 ರಷ್ಟು ಕುಸಿದು 1,472.18 ಡಾಲರ್ಗೆ ತಲುಪಿದೆ. ಇದು ಒಂದು ವಾರದಲ್ಲಿ 32.35% ರಷ್ಟು ಬಲಗೊಂಡಿದೆ. ಮಾರುಕಟ್ಟೆಯಲ್ಲಿ ಬಿಟ್ ಕಾಯಿನ್ ನ ಪ್ರಾಬಲ್ಯವು 42.7% ರಷ್ಟಿದ್ದರೆ, ಎಥೆರಿಯಮ್ʼನ ಪ್ರಾಬಲ್ಯವು 17.7% ಆಗಿದೆ. ಯಾವ ಕ್ರಿಪ್ಟೋಕರೆನ್ಸಿ ಎಷ್ಟು ಕುಸಿತ? -ಬಹುಭುಜಾಕೃತಿ – ಮ್ಯಾಟಿಕ್ -…
ಬೆಂಗಳೂರು: ಬೆಂಗಳೂರಿನ ಹಲಸೂರು ಪೊಲೀಸರು ನಟ ಮತ್ತು ನಿರ್ದೇಶಕ ಸಿದ್ದಾಂತ್ ಕಪೂರ್ ವಿರುದ್ಧ ದಾಖಲಾಗಿರುವ ಮಾದಕ ದ್ರವ್ಯ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರದೊಳಗೆ ನಗರಕ್ಕೆ ಕರೆಸಿಕೊಂಡಿದ್ದಾರೆ. ಸಿದ್ಧಾಂತ್ ಕಪೂರ್ ಅವರನ್ನು ಜೂನ್ 13 ರಂದು ಎಂಜಿ ರಸ್ತೆಯ ಹೋಟೆಲ್‌ನಲ್ಲಿ ಬಂಧಿಸಲಾಗಿತ್ತು. ಅಲ್ಲಿ ರಕ್ತ ಪರೀಕ್ಷೆಯಲ್ಲಿ ಡೆಸಿದಾಗ ಡ್ರಗ್ಸ್ ಸೇವಿಸಿದ್ದು ದೃಢಪಟ್ಟಿತ್ತು. ಇವರು ನಟ ಶ್ರದ್ಧಾ ಕಪೂರ್ ಅವರ ಸಹೋದರ ಮತ್ತು ಶಕ್ತಿ ಕಪೂರ್ ಅವರ ಮಗ. ರಾತ್ರಿ ಸಿಸಿಟಿವಿ ವಿಡಿಯೋವನ್ನು ಪರಿಶೀಲಿಸಿದ ಬಳಿಕ ಪೊಲೀಸರು ನಟನಿಗೆ ಸಮನ್ಸ್ ಜಾರಿ ಮಾಡಿದೆ. ಪಾರ್ಟಿ ನಡೆಯುತ್ತಿದ್ದ ವೇಳೆ ಸಿದ್ಧಾಂತ್ ನಾಲ್ವರು ಸ್ನೇಹಿತರೊಂದಿಗೆ ಸಿಕ್ಕಿಬಿದ್ದಿದ್ದರು. ಈ ಹಿಂದೆ ಸಿದ್ದಾರ್ಥ್ ವಿಚಾರಣೆ ವೇಳೆ ಪಾರ್ಟಿಯಲ್ಲಿದ್ದ ಸ್ನೇಹಿತರು ನೀರಿನಲ್ಲಿ ಅಥವಾ ಸಿಗರೇಟ್ನಲ್ಲಿ ಡ್ರಗ್ಸ್ ಮಿಶ್ರಣ ಮಾಡಿ ನನಗೆ ಕೊಟ್ಟಿದ್ದಾರೆ. ಇದನ್ನು ಅರಿಯದೇ ನೀರು ಕುಡಿದು, ಸಿಗರೇಟ್ ಸೇವನೆ ಮಾಡಿದ್ದೆ ಅಷ್ಟೇ. ಡ್ರಗ್ಸ್ ವಿಚಾರ ನನಗೆ ಗೊತ್ತಿಲ್ಲ ಎಂದು ಹೇಳಿದ್ದರು. ಪಾರ್ಟಿಯಲ್ಲಿ ಹಾಜರಿದ್ದ ಸುಮಾರು 35 ಜನರನ್ನು ರಕ್ತ…
ವಿಜಯನಗರ: ಕೆಲ ವರ್ಷಗಳಿಂದ ಆ ಇಬ್ಬರು ಪ್ರೀತಿಸಿದ್ದರು. ಅವರು ಮದುವೆಗೂ ಸಿದ್ಧರಾಗಿದ್ದರು. ಆದ್ರೇ ಹುಡುಗಿಯ ಮನೆಯವರು ಮದುವೆ ಮಾಡಿಕೊಡಿ ಎಂದಾಗ ಬಿಲ್ ಖಲ್ ನೋ ಎಂದಿದ್ದರು. ಇದೇ ಸಿಟ್ಟಿನಲ್ಲಿದ್ದಂತ ಆ ಪಾಗಲ್ ಪ್ರೇಮಿ ಮಾತ್ರ, ಮದುವೆಗೆ ಒಪ್ಪದಿದ್ದಕ್ಕೆ ಆಕೆಯ ರುಂಡವನ್ನೇ ಕಡಿದು, ಪೊಲೀಸ್ ಠಾಣೆಗೆ ತೆರಳಿ, ಶರಣಾಗಿರೋ ಘಟನೆ ಕೂಡ್ಲಿಗಿ ತಾಲೂಕಿನಲ್ಲಿ ನಡೆದಿದೆ. ಈ ಮೂಲಕ ರಾಜ್ಯದ ಪ್ರೇಮಿಗಳೇ ಬೆಚ್ಚಿ ಬೀಳುವಂತೆ ಮಾಡಿದೆ. https://kannadanewsnow.com/kannada/nalin-kumar-kateel-congratulates-dr-veerendra-heggade/ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕನ್ನಬೋರಯ್ಯನ ಹಟ್ಟಿಯ ಭೋಜರಾಜ ಹಾಗೂ ನಿರ್ಮಲಾ ಎಂಬುವರು ಪರಸ್ಪರ ಪ್ರೀತಿಸುತ್ತಿದ್ದರು. ಬಿಎಸ್ಸಿ ನರ್ಸಿಂಗ್ ಮಾಡುತ್ತಿದ್ದಂತ ನಿರ್ಮಲಾಳನ್ನು ತಾನು ಮದುವೆಯಾಗೋದಾಗಿಯೂ ಭೋಜರಾಜ ಹುಡುಗಿಯ ಮನೆಗೆ ತೆರಳಿ ಪೋಷಕರನ್ನು ಕೇಳಿದ್ದನು. ಆದ್ರೇ ಅವರು ಒಪ್ಪಿರಲಿಲ್ಲ. ಈ ಬಳಿಕ ಪ್ರೇಮಿಗಳು ದೂರಾಗಿದ್ದರು. ಹೀಗಾಗಿ ಮತ್ತೊಬ್ಬ ಯುವತಿಯನ್ನು ಎರಡು ತಿಂಗಳ ಹಿಂದಷ್ಟೇ ಭೋಜರಾಜ ಮದುವೆ ಆಗಿದ್ದನು. ಆದ್ರೇ ನಿರ್ಮಲಾ ತನ್ನನ್ನು ಮದುವೆಯಾಗಲಿಲ್ಲ ಎಂಬ ಸಿಟ್ಟು ಮಾತ್ರ ಮನಸ್ಸಿನಲ್ಲಿ ಹೊಂದಿದ್ದಂತ ಆತ, ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದನು. https://kannadanewsnow.com/kannada/siddaramaiah-dk-shivakumar-and-others-detained-for-protesting-against-ed-probe/…
ಚಿತ್ರದುರ್ಗ : ಬಿಸಿಯೂಟ ಸೇವಿಸಿ 80 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಇಸಾಮುದ್ರ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ. https://kannadanewsnow.com/kannada/karnataka-manipur-chandigarh-top-niti-aayogs/ ಮಧ್ಯಾಹ್ನದ ಬಿಸಿಯೂಟಕ್ಕಾಗಿ ಅನ್ನ ಸಂಬಾರು ಮಾಡಲಾಗಿತ್ತು. ಇದನ್ನು ಮಕ್ಕಳು ತಿಂದ ಮೇಲೆ ಮೊದಲು ನಾಲ್ಕ ಮಕ್ಕಳು ಅಸ್ವಸ್ಥರಾಗಿದ್ದರು. ಸ್ವಲ್ಪ ಸಮಯದ ನಂತರ ಶಾಲೆಯಲ್ಲಿನ 80 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾದರು. ಸದ್ಯ ಅಸ್ವಸ್ಥ ಮಕ್ಕಳು ಭರಮಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದಾಗಿ ಪೋಷಕರಲ್ಲಿ ಆತಂಕ ಸೃಷ್ಟಿಯಾಗಿದೆ.
ಬೆಂಗಳೂರು : ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧಿಸಿ ಸೋನಿಯಾ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ವೇಳೆ ʻ ಕಾರಿಗೆ ಬೆಂಕಿ ಹಚ್ಚಿದ 11 ಮಂದಿಯ ಅರೆಸ್ಟ್ ಮಾಡಲಾಗಿದೆ. https://kannadanewsnow.com/kannada/siddaramaiah-dk-shivakumar-and-others-detained-for-protesting-against-ed-probe/?utm_medium=push ಯೂತ್ಸ್ ಕಾಂಗ್ರೆಸ್ ನಾಯಕರೇ ತಮ್ಮ ಹಳೆಕಾರನ್ನು ತಂದು ರಸ್ತೆಯಲ್ಲಿ ನಿಲ್ಲಿಸಿ, ಬೆಂಕಿ ಹಚ್ಚಿ ಪ್ರತಿಭಟನೆ ತೀವ್ರಗೊಳಿಸಲು ಈ ಕೃತ್ಯ ಮಾಡಿದ್ದಾರೆ. ಯೂತ್ಸ್ ಕಾಂಗ್ರೆಸ್ ಕಾರು ನಿಲ್ಲಿಸಿದ ಬಳಿಕ ಅವ್ರು ಹೋಂಡಾ ಬೈಕ್‌ನಲ್ಲಿ ತೆರಳಿರುವುದು ಇದೀಗ ಸಿಸಿಟಿವಿಯಲ್ಲಿ ವಿಡಿಯೋ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಪ್ರತಾಪ್ ರೆಡ್ಡಿ ಭೇಟಿ, ಪರಿಶೀಲನೆ ನಡೆಸಿದ್ದಾರೆ. ದುಷ್ಕೃತ್ಯ ವೆಸಗಿದ 11 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾಗ ಯೂತ್ಸ್ ಕಾಂಗ್ರೆಸ್ ನಾಯಕರೇ ಮಾಡಿದ್ದಾರೆಂಬ ಮಾಹಿತಿ ಬೆಳಕಿಗೆ ಬಂದಿದೆ. https://kannadanewsnow.com/kannada/siddaramaiah-dk-shivakumar-and-others-detained-for-protesting-against-ed-probe/?utm_medium=push ಕಾರಿನ ನಂಬರ್ ತೆಗೆದುಕೊಂಡು ಯಾರ ಯಾರೆಂದು ವಿಚಾರಣೆ ಮಾಡಲಾಗುತ್ತಿದೆ. ವಿಲ್ಸನ್ ಗಾರ್ಡನ್ ಬಳಿ ಕಾರಿಗೆ ಬೆಂಕಿ ಬಗ್ಗೆ ಈಗಾಗಲೇ ವಿಲ್ಸನ್ ಗಾರ್ಡ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಲಾಗುತ್ತಿದೆ.
ನವದೆಹಲಿ : ಯುಪಿಎಸ್ಸಿ 2021-22ರಲ್ಲಿ 4,119 ಅಭ್ಯರ್ಥಿಗಳನ್ನ ಕೇಂದ್ರ ಉದ್ಯೋಗಗಳಿಗೆ ಆಯ್ಕೆ ಮಾಡಿದ್ದು, ಇದು 10 ವರ್ಷಗಳಲ್ಲಿ ಅತ್ಯಂತ ಕಡಿಮೆಯಾಗಿದೆ. ಮಾರ್ಚ್ 1, 2021ರವರೆಗೆ ಸುಮಾರು 9.79 ಲಕ್ಷ ಹುದ್ದೆಗಳು ಖಾಲಿ ಇದ್ದು, ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ ಯುಪಿಎಸ್ಸಿ ಅಧಿಸೂಚಿತ ಹುದ್ದೆಗಳಿಗೆ ಪರೀಕ್ಷೆಗಳನ್ನ ನಡೆಸುತ್ತದೆ ಎಂದು ಸಿಬ್ಬಂದಿ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಬುಧವಾರ ಲೋಕಸಭೆಯಲ್ಲಿ ಹೇಳಿದರು. ಇನ್ನು 2021-22ನೇ ಸಾಲಿಗೆ 5,153 ಹುದ್ದೆಗಳನ್ನ ಭರ್ತಿ ಮಾಡಲಾಗಿದ್ದು, ಇದಕ್ಕಾಗಿ ಆಯೋಗವು 4,119 ಅಭ್ಯರ್ಥಿಗಳನ್ನು ಶಿಫಾರಸು ಮಾಡಿದೆ. ಅದ್ರಂತೆ, ಈ ಹಿಂದೆ 2020-21ರಲ್ಲಿ 4,214 ಅಭ್ಯರ್ಥಿಗಳು ಮತ್ತು 2019-20ರಲ್ಲಿ 5,230 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ನೀವು ಅಂಕಿ-ಅಂಶಗಳನ್ನ ನೋಡಿದ್ರೆ, 2013-14ರಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳನ್ನ ನೇಮಕ ಮಾಡಿದ 2013-14 ರಲ್ಲಿ, ಕಳೆದ ವರ್ಷ ಕಡಿಮೆ ಆಯ್ಕೆಯನ್ನ ಮಾಡಲಾಯಿತು. ನಾಗರಿಕ ಸೇವೆಗಳಿಗೆ ವಯಸ್ಸಿನ ಸಡಿಲಿಕೆ ಸಾಧ್ಯವಿಲ್ಲ “ನಾಗರಿಕ ಸೇವಾ ಪರೀಕ್ಷೆಯಲ್ಲಿ, ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ಮತ್ತು ಹೆಚ್ಚುವರಿ ಅವಕಾಶಗಳನ್ನು ನೀಡಬಾರದು. “ಕರೋನಾ ಸಾಂಕ್ರಾಮಿಕ ರೋಗದ…