Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು: ಕೇರಳದಲ್ಲಿ ಮಂಕಿಪಾಕ್ಸ್ ಕಾಯಿಲೆ ( monkeypox virus ) ಕಾಣಿಸಿಕೊಂಡ ಕಾರಣ, ರಾಜ್ಯದಲ್ಲೂ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ, ಕಾಯಿಲೆಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾಗಿರುವಂತ ಅಗತ್ಯ ಕ್ರಮಗಳ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಆ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದೆ. https://kannadanewsnow.com/kannada/raichur-contractor-hacked-to-death-in-broad-daylight/ ಈ ಸಂಬಂಧ ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಕೇರಳದ ಕಣ್ಣೂರು ಜಿಲ್ಲೆಯಿಂದ ಮಂಕಿಪಾಕ್ಸ್ ಪ್ರಕರಣದೊಂದೆಗ ಸಂಪರ್ಕದ ಹಿನ್ನಲೆ ಇರುವ ಎರಡನೇ ಪ್ರಕರಣವು ಖಚಿತ ಪಟ್ಟ ಹಿನ್ನಲೆಯಲ್ಲಿ ರಾಜ್ಯವು ಕಣ್ಗಾವಲು ಚಟುವಟಿಕೆಗಳ ಬಗ್ಗೆ ನಿಗಾವಹಿಸಲು ಚುರುಕುಗೊಳಿಸುವ ಅಗತ್ಯವಿರುತ್ತದೆ ಎಂದು ಹೇಳಿದೆ. https://kannadanewsnow.com/kannada/murmu-sweeps-2nd-round-of-counting-leading-by-huge-margin-against-yashwant-sinha/ ರಾಜ್ಯದ ಎಲ್ಲಾ ಜಿಲ್ಲೆಗಳು ಪರಿಣಾಮಕಾರಿಯಾದ ಪೂರ್ವಸಿದ್ಧತೆಗಳನ್ನು ಖಚಿತಪಡಿಸಿಕೊಳ್ಳಲು ಹಾಗೂ ಭಾರತ ಸರ್ಕಾರದ ಮಾರ್ಗಸೂಚಿಗಳು ಮತ್ತು ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳ ಪ್ರಕಾರಣ, ಈ ಕೆಳಗಿನ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.
ಕೊಲೋಂಬೋ: ಶ್ರೀಲಂಕಾದ ಹೊಸ ಅಧ್ಯಕ್ಷರು ಹಿರಿಯ ಶಾಸಕ ದಿನೇಶ್ ಗುಣವರ್ದನಾ ಅವರನ್ನು ಅರ್ಥಿಕ ಬಿಕ್ಕಟ್ಟಿನ ಪೀಡಿತ ದೇಶದ ಮುಂದಿನ ಪ್ರಧಾನಿಯಾಗಿ ನೇಮಿಸಲಿದ್ದಾರೆ ಎಂದು ನಾಲ್ಕು ರಾಜಕೀಯ ಮೂಲಗಳು ಗುರುವಾರ ತಿಳಿಸಿವೆ. ಹೌದು, ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ಶಾಲಾ ಸಹಪಾಠಿ ಮತ್ತು ಮಾಜಿ ಸಾರ್ವಜನಿಕ ಆಡಳಿತ ಸಚಿವ ದಿನೇಶ್ ಗುಣವರ್ಧನಾ ಅವರನ್ನು ಸರ್ಕಾರದಲ್ಲಿ ಪ್ರಧಾನಿಯಾಗಿ ನೇಮಿಸಲಾಗುವುದು ಎಂದು ಖಾಸಗಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಈ ನಡುವೆ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಶ್ರೀಲಂಕಾದ ಅತ್ಯುನ್ನತ ಕಚೇರಿಗೆ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ ಶುಕ್ರವಾರ ತಮ್ಮ ಹೊಸ ಕ್ಯಾಬಿನೆಟ್ ಅನ್ನು ನೇಮಿಸಲಿದ್ದಾರೆ ಎನ್ನಲಾಗಿದೆ.
ನವದೆಹಲಿ: ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ವಾಟ್ಸಾಪ್ ಬಳಸದೇ ಇರುವವರು ಇರುವುದಿಲ್ಲ. ವಾಟ್ಸಾಪ್ ಅನ್ನು ಇತ್ತೀಚಿನ ದಿನಗಳಲ್ಲಿ ಅನೇಕ ವಿಷಯಗಳಿಗೆ ಬಳಸಲಾಗುತ್ತದೆ. ಇತ್ತೀಚಿಗೆ ಕೆಲವು ಬ್ಯಾಂಕುಗಳು ವಾಟ್ಸಾಪ್ ಮೂಲಕ ಬ್ಯಾಂಕಿಂಗ್ ಸೇವೆಗಳನ್ನು ಸಹ ಒದಗಿಸುತ್ತವೆ. ಏತನ್ಮಧ್ಯೆ, ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ವಾಟ್ಸಾಪ್ ಬ್ಯಾಂಕಿಂಗ್ ಸೌಲಭ್ಯವನ್ನು ಪ್ರಾರಂಭಿಸಿದೆ. ಈಗ ಎಸ್‌ಬಿಐ ಗ್ರಾಹಕರು ಚಾಟ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್, ಮಿನಿ ಸ್ಟೇಟ್‌ಮೆಂಟ್ ಸೇರಿದಂತೆ ವಿವಿಧ ಬ್ಯಾಂಕಿಂಗ್ ಸೌಲಭ್ಯಗಳನ್ನು ಪಡೆಯಬಹುದು. ಈ ಬಗ್ಗೆ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. WhatsApp ಬ್ಯಾಂಕಿಂಗ್ ಮೂಲಕ ಸೇವೆಯನ್ನು ಪಡೆಯಲು, ನೀವು ಮೊದಲು ನೋಂದಾಯಿಸಿಕೊಳ್ಳಬೇಕು. ಇದಕ್ಕಾಗಿ ನೀವು WAREG ಎಂದು ಟೈಪ್ ಮಾಡಬೇಕು. ಅದರ ನಂತರ ನೀವು ಖಾತೆ ಸಂಖ್ಯೆಯನ್ನು ಬರೆಯಬೇಕು. ಇದರ ನಂತರ ಈ ಸಂದೇಶವನ್ನು 7208933148 ಗೆ ಕಳುಹಿಸಿ. ಆದರೆ ನೀವು ಈ ಸಂದೇಶವನ್ನು ಬ್ಯಾಂಕಿನಲ್ಲಿ ನೋಂದಾಯಿಸಿದ ಮೊಬೈಲ್ ಸಂಖ್ಯೆಯ ಮೂಲಕ ಮಾತ್ರ ಕಳುಹಿಸಬೇಕು. ನೋಂದಣಿಯ…
ನವದೆಹಲಿ : ಉಪರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿಗೆ ಭಾರಿ ಹಿನ್ನಡೆಯಾಗಿದ್ದು, ಉಪರಾಷ್ಟ್ರಪತಿ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಭಾಗವಹಿಸುವುದಿಲ್ಲ ಎಂದಿದೆ. ಪಕ್ಷದ ನಾಯಕ ಮತ್ತು ಸಂಸದ ಅಭಿಷೇಕ್ ಬ್ಯಾನರ್ಜಿ ಈ ಕುರಿತು ಮಾಹಿತಿ ನೀಡಿದ್ದು, ಟಿಎಂಸಿ ಉಪರಾಷ್ಟ್ರಪತಿ ಚುನಾವಣೆಯಿಂದ ದೂರ ಉಳಿಯಲಿದೆ ಎಂದು ಖಚಿತ ಪಡೆಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಅಭಿಷೇಕ್ ಬ್ಯಾನರ್ಜಿ, “ಟಿಎಂಸಿ ಉಪರಾಷ್ಟ್ರಪತಿ ಚುನಾವಣೆಯಿಂದ ದೂರ ಉಳಿಯಲಿದೆ. ಹಾಗಂತ, ಎನ್ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ಜಗದೀಪ್ ಧಂಕರ್ ಅವರನ್ನ ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಎರಡೂ ಸದನಗಳ 35 ಸಂಸದರೊಂದಿಗೆ ಪಕ್ಷದೊಂದಿಗೆ ಸೂಕ್ತ ಸಮಾಲೋಚನೆಯಿಲ್ಲದೇ ವಿರೋಧ ಪಕ್ಷದ ಅಭ್ಯರ್ಥಿಯನ್ನು ನಿರ್ಧರಿಸಿದ ರೀತಿ, ನಾವು ಮತದಾನ ಪ್ರಕ್ರಿಯೆಯಿಂದ ದೂರವಿರಲು ಸರ್ವಾನುಮತದಿಂದ ನಿರ್ಧರಿಸಿದ್ದೇವೆ” ಎಂದರು. ಶರದ್ ಪವಾರ್ ತಮ್ಮ ಉಮೇದುವಾರಿಕೆಯನ್ನ ಘೋಷಿಸಿದ್ದರು ಕಳೆದ ಭಾನುವಾರ ನಡೆದ 17 ವಿರೋಧ ಪಕ್ಷಗಳ ಸಭೆಯ ನಂತ್ರ ಕಾಂಗ್ರೆಸ್ ನಾಯಕಿ ಮಾರ್ಗರೆಟ್ ಆಳ್ವ ಅವರ ಉಮೇದುವಾರಿಕೆಯನ್ನ ಘೋಷಿಸಿದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಎಎಪಿ ಮತ್ತು ತೃಣಮೂಲ…
ರಾಯಚೂರು: ಜಿಲ್ಲೆಯ ಜನತೆ ಇಂದು ಬೆಚ್ಚಿ ಬೀಳಿಸೋ ಘಟನೆ ನಡೆದಿದೆ. ಹಾಡ ಹಗಲೇ ಗುತ್ತಿಗೆದಾರನ ಮೇಲೆ ಅಟ್ಯಾಕ್ ಮಾಡಿದಂತ ಹಂತಕರು, ನಡು ರಸ್ತೆಯಲ್ಲಿಯೇ ಮಚ್ಚಿನಿಂದ ಗುತ್ತಿಗೆದಾರನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ರಾಯಚೂರಿನ ಬಿಎಸ್ ಎನ್ ಎಲ್ ಕಚೇರಿಯ ಬಳಿಯಲ್ಲಿ ನಡೆದಿದೆ. https://kannadanewsnow.com/kannada/minister-to-be-responsible-for-independence-day-flag-hoisting-on-august-15-who-knows-which-district-heres-the-list/ ರಾಯಚೂರಿನ ಬಿಎಸ್ ಎನ್ ಎಲ್ ಕಚೇರಿಯ ಬಳಿಯಲ್ಲಿ ಇಂದು ಹಾಡಹಗಲೇ ಗುತ್ತಿಗೆದಾರ ಮೆಹಬೂಬ್ ಆಲಿ (30) ಎಂಬುವರನ್ನು ಹಂತಕರು ಮಚ್ಚಿನಿಂದ ಕೊಲೆ ಮಾಡಿ ಪರಾರಿಯಾಗಿದ್ದಾರೆ. ನಡು ರಸ್ತೆಯಲ್ಲಿಯೇ ನಡೆದಂತ ಈ ಘಟನೆ ಕಂಡು ರಾಯಚೂರಿನ ಜನತೆ ಬೆಚ್ಚಿ ಬೀಳುವಂತೆ ಆಗಿದೆ. https://kannadanewsnow.com/kannada/murmu-sweeps-2nd-round-of-counting-leading-by-huge-margin-against-yashwant-sinha/ ಈ ಹತ್ಯೆಯ ವಿಷಯ ತಿಳಿದು ಸ್ಥಳಕ್ಕೆ ರಾಯಚೂರಿನ ಸದರ್ ಬಜಾರ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಈ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡು ಗುತ್ತಿಗೆದಾರನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವಂತ ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ. https://kannadanewsnow.com/kannada/good-news-for-contractual-employees-of-the-states-health-department-weekly-off-granted/
ನವದೆಹಲಿ : ಏರ್ಪೋರ್ಟ್ ಚೆಕ್-ಇನ್ ಕೌಂಟರ್ಗಳಲ್ಲಿ ಬೋರ್ಡಿಂಗ್ ಪಾಸ್‌ಗಳನ್ನ ವಿತರಿಸಲು ವಿಮಾನಯಾನ ಸಂಸ್ಥೆಗಳು ಹೆಚ್ಚುವರಿ ಮೊತ್ತವನ್ನ ವಿಧಿಸುವಂತಿಲ್ಲ ಎಂದು ವಿಮಾನಯಾನ ಸಚಿವಾಲಯ ಜುಲೈ 21ರಂದು ಘೋಷಿಸಿತು. ಪ್ರಸ್ತುತ, ವೆಬ್ ಚೆಕ್-ಇನ್ ಮಾಡದಿದ್ದರೆ ಬೋರ್ಡಿಂಗ್ ಪಾಸ್ ನೀಡಲು ವಿಮಾನಯಾನ ಸಂಸ್ಥೆಗಳು ಹೆಚ್ಚುವರಿಯಾಗಿ ₹200 ಶುಲ್ಕ ವಿಧಿಸುತ್ತವೆ. “ಪ್ರಯಾಣಿಕರಿಂದ ಬೋರ್ಡಿಂಗ್ ಪಾಸ್ಗಳನ್ನು ವಿತರಿಸಲು ವಿಮಾನಯಾನ ಸಂಸ್ಥೆಗಳು ಹೆಚ್ಚುವರಿ ಮೊತ್ತವನ್ನು ವಿಧಿಸುತ್ತಿರುವುದು ಎಂಒಸಿಎ ಗಮನಕ್ಕೆ ಬಂದಿದೆ. ಈ ಹೆಚ್ಚುವರಿ ಮೊತ್ತವು ಮೇಲೆ ಹೇಳಿದ ಆದೇಶದಲ್ಲಿ ನೀಡಲಾದ ಸೂಚನೆಗಳಿಗೆ ಅನುಗುಣವಾಗಿಲ್ಲ ಅಥವಾ ವಿಮಾನ ನಿಯಮಗಳು, 1937 ರ ಅಸ್ತಿತ್ವದಲ್ಲಿರುವ ನಿಬಂಧನೆಗಳ ಪ್ರಕಾರವಲ್ಲ” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ವಿಮಾನ ನಿಲ್ದಾಣದ ಚೆಕ್-ಇನ್ ಕೌಂಟರ್ಗಳಲ್ಲಿ ಬೋರ್ಡಿಂಗ್ ಪಾಸ್ಗಳನ್ನು ವಿತರಿಸಲು ಯಾವುದೇ ಹೆಚ್ಚುವರಿ ಮೊತ್ತವನ್ನು ವಿಧಿಸದಂತೆ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಯಾಕಂದ್ರೆ, ಇದನ್ನು ವಿಮಾನ ನಿಯಮಗಳ ನಿಯಮ 135ರ ಅಡಿಯಲ್ಲಿ ಒದಗಿಸಲಾದ ಸುಂಕದ ಒಳಗೆ ಪರಿಗಣಿಸಲಾಗುವುದಿಲ್ಲ ಎಂದು ಅದು ಹೇಳಿದೆ. https://twitter.com/MoCA_GoI/status/1550083907730563075?s=20&t=qCW4nWqFd5o09R5Vtapq1Q
ಬೆಂಗಳೂರು: ಆಗಸ್ಟ್ 15, 2022ರಂದು ಸ್ವಾತಂತ್ರ್ಯ ದಿನಾಚರಣೆಯಂದು ( Independence Day 2022 ) ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರನ್ನು ನೇಮಿಸಿ, ರಾಜ್ಯ ಸರ್ಕಾರ ಆದೇಶಿಸಿದೆ. https://kannadanewsnow.com/kannada/now-i-get-love-letters-on-a-daily-basis-dk-shivakumar/ ಈ ಸಂಬಂಧ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 15ನೇ ಆಗಸ್ಟ್ 2022ರ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಬೆಂಗಳೂರು ನಗರ ಹೊರತುಪಡಿಸಿ, ಈ ಕೆಳಗೆ ಸೂಚಿಸಿದಂತೆ ಸಚಿವರುಗಳು ಹಾಗೂ ಜಿಲ್ಲಾಧಿಕಾರಿಗಳನ್ನು ಧ್ವಜಾರೋಹಣ ಮಾಡಲು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ. https://kannadanewsnow.com/kannada/murmu-sweeps-2nd-round-of-counting-leading-by-huge-margin-against-yashwant-sinha/ ಹೀಗಿದೆ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲಿರುವಂತ ಸಚಿವರ ಪಟ್ಟಿ ಗೋವಿಂದ ಎಂ ಕಾರಜೋಳ – ಬೆಳಗಾವಿ ಬಿ ಶ್ರೀರಾಮುಲು – ಬಳ್ಳಾರಿ ವಿ ಸೋಮಣ್ಣ – ಚಾಮರಾಜನಗರ ಉಮೇಶ್ ಕತ್ತಿ – ವಿಜಯಪುರ ಎಸ್ ಅಂಗಾರ – ಉಡುಪಿ ಅರಗ ಜ್ಞಾನೇಂದ್ರ – ತುಮಕೂರು ಡಾ.ಸಿಎನ್ ಅಶ್ವತ್ಥನಾರಾಯಣ – ರಾಮನಗರ ಸಿಸಿ ಪಾಟೀಲ್ – ಬಾಗಲಕೋಟೆ ಆನಂದ್ ಸಿಂಗ್ – ಕೊಪ್ಪಳ ಕೋಟಾ ಶ್ರೀನಿವಾಸಪೂಜಾರಿ…
ಬೆಂಗಳೂರು: ನನ್ನ ವಿರುದ್ಧ ಪ್ರಕರಣ ದಾಖಲಾಗಿ 5 ವರ್ಷ ಆಯಿತು. ಜೈಲಿಗೆ ಹೋಗಿ 3 ವರ್ಷ ಆಯಿತು. ಈಗ ನನಗೆ ನಿತ್ಯ ಪ್ರೇಮ ಪತ್ರಗಳು ಬರುತ್ತಿವೆ. ಚುನಾವಣೆ ಸಂದರ್ಭದಲ್ಲಿ ಒಂದು ವರ್ಷ ನನಗೆ ವಿರಾಮ ನೀಡಿ ನಂತರ ನಾನು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಪತ್ರ ಬರೆದಿದ್ದೇನೆ. ಮೂರು ವರ್ಷದಿಂದ ಆರೋಪ ಪಟ್ಟಿ ದಾಖಲಿಸದೇ ಈಗ ಸಲ್ಲಿಕೆ ಮಾಡಿ ವಿಚಾರಣೆಗೆ ಕರೆಯುತ್ತಿದ್ದಾರೆ. ನನ್ನ ಜತೆ ಇರುವವರಿಗೆಲ್ಲ ವಿಚಾರಣೆಗೆ ಕರೆದು ಕಿರುಕುಳ ನೀಡುತ್ತಿದ್ದಾರೆ. ಅದೇ ರೀತಿ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಅವರಿಗೂ ಕಿರುಕುಳ ನೀಡಲು ಹೊರಟಿದ್ದಾರೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar ) ಹೇಳಿದ್ದಾರೆ. https://kannadanewsnow.com/kannada/bengaluru-city-dcs-office-bribery-case-deputy-tahsildar-p-s-mahesh-granted-bail/ ಇಂದು ಪ್ರತಿಭಟನೆ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾವೆಲ್ಲರೂ ಕಾಂಗ್ರೆಸ್ ಕುಟುಂಬದ ( Congress Leader ) ಮಕ್ಕಳು. ನನಗೆ ಇಡಿ, ತಿಹಾರ್ ಜೈಲು, ಐಟಿ, ಸಿಬಿಐನ ಸ್ವಲ್ಪ ಅನುಭವವಿದೆ. ನಾನು ರಾಹುಲ್ ಗಾಂಧಿ ಅವರಿಗೆ ಒಂದು ಸಣ್ಣ ಸಂದೇಶ…
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಜಂಕ್ ಫುಡ್ ತುಂಬಾ ರುಚಿಕರವಾದ ವಿಷವಾಗಿದೆ. ಯಾರಾದರೂ ಅದಕ್ಕೆ ವ್ಯಸನಿಯಾದರೆ, ಅದನ್ನು ತೊಡೆದುಹಾಕುವುದು ಕಷ್ಟವಾಗುತ್ತದೆ. ಜಂಕ್ ಫುಡ್ ನ ವರ್ಗವು ಎಲ್ಲಾ ರೀತಿಯ ಸಂಸ್ಕರಿಸಿದ ಆಹಾರವನ್ನು ಒಳಗೊಂಡಿದೆ, ಪ್ಯಾಕ್ ಮಾಡಿದ ಚಿಪ್ಸ್, ಮತ್ತು ಕ್ಯಾಂಡಿ, ಮತ್ತು ಕಾರ್ಬೊನೇಟೆಡ್ ಪಾನೀಯಗಳಿಂದ ಹಿಡಿದು ಎಲ್ಲಾ ಜಂಕ್ ಫುಡ್ ಆಗಿರುತ್ತದೆ. https://kannadanewsnow.com/kannada/pm-modi-takes-oath-as-new-rajya-sabha-member-meets-pm-modi-veerendra-heggade/ ಈ ವಸ್ತುಗಳನ್ನು ಯಾವ ರೀತಿಯಲ್ಲಿ ತಯಾರಿಸಲಾಗುತ್ತದೆಯೆಂದರೆ ಅವುಗಳನ್ನು ನೋಡಿದ ನಂತರ ಬಾಯಲ್ಲಿ ನೀರೂರಿಸುತ್ತದೆ ಮತ್ತು ಅವುಗಳನ್ನು ತಿನ್ನುವ ಬಯಕೆ ಇರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಜಂಕ್ ಫುಡ್ನಲ್ಲಿ ಉಪ್ಪು, ಸುಗಾ, ಆರ್, ಕಾರ್ಬೋಹೈಡ್ರೇಟ್ಗಳು ಮತ್ತು ಕೊಬ್ಬು ಅಧಿಕವಾಗಿದೆ. ಜೊತೆಗೆ ಸಂರಕ್ಷಕಗಳನ್ನು ಹೊರತುಪಡಿಸಿ ಅಂತಹ ಕೆಲವು ವಸ್ತುಗಳು, ಈ ಕಾರಣದಿಂದಾಗಿ ನಿಮ್ಮ ಮನಸ್ಸು ಅವುಗಳನ್ನು ಮತ್ತೆ ಮತ್ತೆ ತಿನ್ನುವ ಬಯಕೆಯನ್ನು ವ್ಯಕ್ತಪಡಿಸುತ್ತದೆ. ನೀವು ಈ ಬಯಕೆಯನ್ನು ಹೆಚ್ಚು ಹೆಚ್ಚು ಪೂರೈಸಿದಷ್ಟೂ, ಜಂಕ್ ಫುಡ್ ಗಾಗಿ ನಿಮ್ಮ ಬಯಕೆಯು ಹೆಚ್ಚಾಗುತ್ತದೆ ಮತ್ತು ನೀವು ಅದನ್ನು ಯಾವಾಗ ತಿನ್ನಲು ಅಭ್ಯಾಸ ಮಾಡಿಕೊಳ್ಳುತ್ತೀರಿ…
ಬೆಂಗಳೂರು: ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವಂತ ಉಪ ತಹಶೀಲ್ದಾರ್ ಪಿ.ಎಸ್ ಮಹೇಶ್ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. https://kannadanewsnow.com/kannada/good-news-for-coffee-growers-in-the-state-govt-orders-reimbursement-of-pump-set-electricity-charges/ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಸಂಬಂಧ ಎಸಿಬಿ ವಿಶೇಷ ಕೋರ್ಟ್ ನಲ್ಲಿ ಉಪ ತಹಶೀಲ್ದಾರ್ ಪಿ.ಎಸ್ ಮಹೇಶ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆ ನಡೆಸಿತು. https://kannadanewsnow.com/kannada/murmu-sweeps-2nd-round-of-counting-leading-by-huge-margin-against-yashwant-sinha/ ಎಸಿಬಿಯಿಂದ 60 ದಿನಗಳೇ ಕಳೆದರು ಚಾರ್ಜ್ ಶೀಟ್ ಸಲ್ಲಿಸಿರಲಿಲ್ಲ. ಈ ನಡುವೆಯೂ ಪ್ರಕರಣ ಸಂಬಂಧ ವಿಚಾರಣೆ ನಡೆಸಿದಂತ ಎಸಿಬಿ ವಿಶೇಷ ಕೋರ್ಟ್ ಉಪ ತಹಶೀಲ್ದಾರ್ ಪಿಎಸ್ ಮಹೇಶ್ ಗೆ ಕಡ್ಡಾಯ ಜಾಮೀನು ಮಂಜೂರು ಮಾಡಿದೆ. ಈ ಹಿನ್ನಲೆಯಲ್ಲಿ ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದಂತ ಜಾಮೀನು ಅರ್ಜಿಯನ್ನು ಮಹೇಶ್ ಪರ ವಕೀಲರು ಹಿಂಪಡೆದಿದ್ದಾರೆ.