Subscribe to Updates
Get the latest creative news from FooBar about art, design and business.
Author: KNN IT TEAM
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಓರೆಗಾನ್‌ನ ಯುಜೀನ್‌ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್(World Athletics Championships)ನಲ್ಲಿ ಭಾರತದ ನೀರಜ್ ಚೋಪ್ರಾ (Neeraj Chopra) ಪುರುಷರ ಜಾವೆಲಿನ್ ಥ್ರೋ(Javelin Throw)ನಲ್ಲಿ 88.39 ಮೀಟರ್ ದೂರ ಜಾವೆಲಿನ್ ಎಸೆತದೊಂದಿಗೆ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. As the commentator predicted, “he wants one & done” #NeerajChopra does it pretty quickly & with ease before admin’s laptop could wake up 🤣 With 88.39m, Olympic Champion from 🇮🇳 #India enters his first #WorldAthleticsChamps final in some style 🫡 at #Oregon2022 pic.twitter.com/y4Ez0Mllw6 — Athletics Federation of India (@afiindia) July 22, 2022 ನೀರಜ್ ಚೋಪ್ರಾ ಅರ್ಹತಾ ಸುತ್ತಿನಲ್ಲಿ ತನ್ನ ಮೊದಲ ಎಸೆತದೊಂದಿಗೆ ಫೈನಲ್‌ನಲ್ಲಿ ಲಗ್ಗೆ ಇಟ್ಟಿದ್ದು, ಭಾನುವಾರ ಮುಂಜಾನೆ (ಐಎಸ್‌ಟಿ) ನಡೆಯಲಿರುವ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಕಳೆದ ತಿಂಗಳು ಸ್ಟಾಕ್‌ಹೋಮ್‌ನಲ್ಲಿ…
ಹೊಸಪೇಟೆ : ಹಿಂದೂ ಧಾರ್ಮಿಕ ಧರ್ಮಾದಾಯ ದತ್ತಿಗಳ ಇಲಾಖೆಯ ವತಿಯಿಂದ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕುರುವತ್ತಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನ, ಕೊಟ್ಟೂರಿನ ಶ್ರೀ ಗುರುಬಸವೇಶ್ವರಸ್ವಾಮಿ ದೇವಸ್ಥಾನ ಹಾಗೂ ಮೈಲಾರ ಕ್ಷೇತ್ರದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಪ್ತಪದಿ ಸಾಮೂಹಿಕ ಸರಳ ವಿವಾಹವನ್ನು ವಿವಿಧ ದಿನಾಂಕಗಳಂದು ನಡೆಸಲಾಗುತ್ತಿದೆ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಎಂ.ಹೆಚ್.ಪ್ರಕಾಶ್‍ರಾವ್ ಆವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 100 ಜನರನ್ನೊಳಗೊಂಡಂತೆ ಕಡ್ಡಾಯವಾಗಿ ಕೋವಿಡ್-19 ಮಾರ್ಗಸೂಚಿಯನ್ನು ಪಾಲನೆ ಮಾಡಿ ನಡೆಯುವ ಈ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾಗಬಯಸುವ ವಧು-ವರರು ನೋಂದಾಯಿಸಿಕೊಳ್ಳಬಹುದು. *ಕುರುವತ್ತಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಶ್ರೀ ದೊಡ್ಡಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹವು ಆ.14ರಂದು ಬೆಳಗ್ಗೆ 09ರಿಂದ 10.30ರ ಕಟಕ ಲಗ್ನದಲ್ಲಿ ಜರುಗುವುದು. ವಧು-ವರರು ನೋಂದಾಯಿಸಿಕೊಳ್ಳಲು ಕಡೆಯ ದಿನಾಂಕ ಆ.02, ನೊಂದಾಯಿಸಿಕೊಂಡಿರುವ ವಧು-ವರರ ವಿವರಗಳನ್ನು ದೇವಾಲಯದಲ್ಲಿ ಪ್ರಕಟಿಸುವ…
ವಾಷಿಂಗ್ಟನ್ (ಯುಎಸ್): ವೈದ್ಯಕೀಯ ವಿಧಾನದ ಬಗ್ಗೆ ತಪ್ಪು ಮಾಹಿತಿಯ ವಿರುದ್ಧದ ಕಠಿಣ ಕ್ರಮದಲ್ಲಿ ಗರ್ಭಪಾತ(abortion)ದ ಬಗ್ಗೆ ಸುಳ್ಳು ಮಾಹಿತಿಯನ್ನು ಹೊಂದಿರುವ ವೀಡಿಯೊಗಳನ್ನು ತೆಗೆದುಹಾಕಲು ನಿರ್ಧರಿಸಿರುವುದಾಗಿ YouTube ಗುರುವಾರ (ಸ್ಥಳೀಯ ಸಮಯ) ಹೇಳಿದೆ. ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಅನೇಕ ಪ್ರದೇಶಗಳಲ್ಲಿ ಗರ್ಭಪಾತದ ಹಕ್ಕನ್ನು ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಮಹಿಳೆಯರು ಆನ್‌ಲೈನ್‌ನಲ್ಲಿ ವಿಶ್ವಾಸಾರ್ಹ ಗರ್ಭಧಾರಣೆಯ ಸಂಬಂಧಿತ ಮಾಹಿತಿಯನ್ನು ಹುಡುಕುತ್ತಿರುವುದರಿಂದ ಈ ಕ್ರಮವು ಬಂದಿದೆ. “ಆರೋಗ್ಯ ವಿಷಯಗಳಿಗೆ ಸಂಬಂಧಿಸಿದಂತೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ ಎಂದು ನಾವು ನಂಬುತ್ತೇವೆ. ನಮ್ಮ ನೀತಿಗಳು ಮತ್ತು ಉತ್ಪನ್ನಗಳನ್ನು ನಿರಂತರವಾಗಿ ಪರಿಶೀಲಿಸುತ್ತೇವೆ” ಎಂದು ಯೂಟ್ಯೂಬ್ ವಕ್ತಾರ ಎಲೆನಾ ಹೆರ್ನಾಂಡೆಜ್ ಸಿಎನ್‌ಎನ್ ಉಲ್ಲೇಖಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. YouTube ಪ್ರಕಟಣೆಯ ಪ್ರಕಾರ, “ಇಂದಿನಿಂದ ಪ್ರಾರಂಭಿಸಿ ಮುಂದಿನ ಕೆಲವು ವಾರಗಳಲ್ಲಿ ರಾಂಪಿಂಗ್ ಮಾಡಲಾಗುವುದು. ಅಸುರಕ್ಷಿತ ಗರ್ಭಪಾತ ವಿಧಾನಗಳಿಗೆ ಸೂಚನೆಗಳನ್ನು ಒದಗಿಸುವ ಅಥವಾ ನಮ್ಮ ವೈದ್ಯಕೀಯ ತಪ್ಪು ಮಾಹಿತಿ ನೀತಿಗಳ ಅಡಿಯಲ್ಲಿ ಗರ್ಭಪಾತ ಸುರಕ್ಷತೆಯ ಬಗ್ಗೆ ಸುಳ್ಳು ಹಕ್ಕುಗಳನ್ನು ಉತ್ತೇಜಿಸುವ ವಿಷಯವನ್ನು ನಾವು ತೆಗೆದುಹಾಕುತ್ತೇವೆ” ಎಂದು ತಿಳಿಸಿದೆ. 1/ Starting…
ಬೆಂಗಳೂರು : ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಗೌರವಾರ್ಥ ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿರುವ ಬೀಳ್ಕೊಡುಗೆ ಔತಣಕೂಟದಲ್ಲಿ ಭಾಗಿಯಾಗಲು ಇಂದು ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಲಿದ್ದಾರೆ. https://kannadanewsnow.com/kannada/bigg-news-monkeypox-disease-state-health-department-issues-guidelines-it-is-mandatory-to-follow-these-rules/ ಸಿಎಂ ಬವರಾಜ ಬೊಮ್ಮಾಯಿ ಅವರು ಇಂದು ಬೆಳಗ್ಗೆ ನಿಗದಿಯಾಗಿರುವ ಸಂಪುಟ ಸಭೆ ಮುಗಿಸಿಕೊಂಡು ನವದೆಹಲಿಗೆ ತೆರಳಲಿದ್ದಾರೆ. ಇಂದು ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದು, ಶನಿವಾರ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಜುಲೈ 24 ರಂದು ಮೂರು ದಿನಗಳ ಅಧಿಕೃತ ಭೇಟಿಗಾಗಿ ಮತ್ತೆ ದೆಹಲಿಗೆ ತೆರಳಲಿದ್ದಾರೆ. ಜುಲೈ 24 ರಂದು ನೂತನ ರಾಷ್ಟ್ರಪತಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. https://kannadanewsnow.com/kannada/bigg-news-upgradation-of-7-engineering-colleges-in-the-state-state-government-orders-formation-of-task-force-to-implement-the-scheme-2/
ಬೆಂಗಳೂರು: ಕೇರಳದಲ್ಲಿ ಮಂಕಿಪಾಕ್ಸ್ ಕಾಯಿಲೆ ( monkeypox virus ) ಕಾಣಿಸಿಕೊಂಡ ಕಾರಣ, ರಾಜ್ಯದಲ್ಲೂ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ, ಕಾಯಿಲೆಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾಗಿರುವಂತ ಅಗತ್ಯ ಕ್ರಮಗಳ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಆ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದೆ. https://kannadanewsnow.com/kannada/bigg-news-upgradation-of-7-engineering-colleges-in-the-state-state-government-orders-formation-of-task-force-to-implement-the-scheme-2/ ಈ ಸಂಬಂಧ ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಕೇರಳದ ಕಣ್ಣೂರು ಜಿಲ್ಲೆಯಿಂದ ಮಂಕಿಪಾಕ್ಸ್ ಪ್ರಕರಣದೊಂದೆಗ ಸಂಪರ್ಕದ ಹಿನ್ನಲೆ ಇರುವ ಎರಡನೇ ಪ್ರಕರಣವು ಖಚಿತ ಪಟ್ಟ ಹಿನ್ನಲೆಯಲ್ಲಿ ರಾಜ್ಯವು ಕಣ್ಗಾವಲು ಚಟುವಟಿಕೆಗಳ ಬಗ್ಗೆ ನಿಗಾವಹಿಸಲು ಚುರುಕುಗೊಳಿಸುವ ಅಗತ್ಯವಿರುತ್ತದೆ ಎಂದು ಹೇಳಿದೆ. https://kannadanewsnow.com/kannada/good-news-good-news-for-ration-card-holders-from-now-on-you-will-get-enriched-rice/ ರಾಜ್ಯದ ಎಲ್ಲಾ ಜಿಲ್ಲೆಗಳು ಪರಿಣಾಮಕಾರಿಯಾದ ಪೂರ್ವಸಿದ್ಧತೆಗಳನ್ನು ಖಚಿತಪಡಿಸಿಕೊಳ್ಳಲು ಹಾಗೂ ಭಾರತ ಸರ್ಕಾರದ ಮಾರ್ಗಸೂಚಿಗಳು ಮತ್ತು ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳ ಪ್ರಕಾರಣ, ಈ ಕೆಳಗಿನ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.
ಬೆಂಗಳೂರು : ರಾಜ್ಯದ ಏಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಕೆಐಟಿ (Karnataka Institute of Technology) ಯನ್ನಾಗಿ ಉನ್ನತೀಕರಿಸಲು ಹಾಗೂ ಯೋಜನಾ ಅನುಷ್ಠಾನಕ್ಕೆ ಕಾರ್ಯಪಡೆಯನ್ನು ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. https://kannadanewsnow.com/kannada/good-news-good-news-for-ration-card-holders-from-now-on-you-will-get-enriched-rice/ ರಾಜ್ಯ ಸರ್ಕಾರವು ಪ್ರಸ್ತುತ ಮೊದಲ ಹಂತವಾಗಿ ರಾಜ್ಯದಲ್ಲಿನ ಹಾಲಿ ಏಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು Karnataka Institute of Technology ಗಳನ್ನಾಗಿ ಉನ್ನತೀಕರಿಸಲು ಆದೇಶಿಸಿದೆ. ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು 2.ಬೆಂಗಳೂರಿನ ಎಸ್ಕೆಎಸ್ಜೆಐಟಿ (SKSJIT) ಹಾವೇರಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು 4.ಕೆ.ಆರ್.ಪೇಟೆಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ತಳಕಲ್ ಕೊಪ್ಪಳದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಾರವಾರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಉನ್ನತೀಕರಣಕ್ಕಾಗಿ ಗುರುತಿಸಿದೆ. https://kannadanewsnow.com/kannada/good-news-good-news-for-coffee-growers-in-the-state-state-govt-orders-reimbursement-of-pump-set-electricity-charges/
ಶಿವಮೊಗ್ಗ: ಆಹಾರ ಭದ್ರತೆಯೊಂದಿಗೆ ಪೋಷಣೆಯ ಭದ್ರತೆಯನ್ನೂ ನೀಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆದುಕೊಂಡಿದ್ದು ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಸಾರವರ್ಧಿತ ಅಕ್ಕಿ ವಿತರಣೆ ಮಾಡಲು ಕ್ರಮ ಕೈಗೊಂಡಿದೆ ಎಂದು ಭಾರತ ಆಹಾರ ನಿಗಮದ ಶಿವಮೊಗ್ಗ ಡಿವಿಷನಲ್ ಮ್ಯಾನೇಜರ್ ಭಗವಾನ್ ಸಿಂಗ್ ತಿಳಿಸಿದರು. ಇಂದು ಗಾಡಿಕೊಪ್ಪದ ಭಾರತ ಆಹಾರ ನಿಗಮ(ಎಫ್‍ಸಿಐ)ದ ವಿಭಾಗೀಯ ಕಚೇರಿಯಲ್ಲಿ ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಸಾರವರ್ಧಿತ ಅಕ್ಕಿ ವಿತರಣೆ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತಾಡಿದರು. ಕೋವಿಡ್ ಸಮಯದಲ್ಲಿ ಯಾರೊಬ್ಬರೂ ಆಹಾರದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಪಿಎಂಜಿಕೆವೈ ಯೋಜನೆ ಜಾರಿಗೊಳಿಸಿ ದುರ್ಬಲ ವರ್ಗದವರಿಗೆ ಉಚಿತ ಪಡಿತರ ವಿತರಿಸುತ್ತಿದೆ. ದೇಶದಲ್ಲಿ ಬಹುತೇಕರಲ್ಲಿ ಪೋಷಕಾಂಶದ ಕೊರತೆ ಇರುವುದನ್ನು ಸರ್ಕಾರ ಮನಗಂಡು ಸಾರವರ್ಧಿತ ಅಕ್ಕಿಯನ್ನು ಪಡಿತರ ವ್ಯವಸ್ಥೆ ಮತ್ತು ಮಧ್ಯಾಹ್ನದ ಬಿಸಿಯೂಟದಲ್ಲಿ ನೀಡಲು ಮುಂದಾಗಿದೆ. ಇದರಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲರಿಗೂ ಅನುಕೂಲವಾಗಲಿದೆ. ಪ್ರಸ್ತುತ ಅತಿ ಹೆಚ್ಚು ಪೋಷಕಾಂಶ ಕೊರತೆ ಇರುವ ಅಧಿಸೂಚಿತ ಜಿಲ್ಲೆಗಳಲ್ಲಿ ಸಾರವರ್ಧಿತ ಅಕ್ಕಿ ಪೂರೈಕೆಯಾಗುತ್ತಿದ್ದು, 2024…
ಬೆಂಗಳೂರು: ರಾಜ್ಯದಲ್ಲಿನ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ 10 ಹೆಚ್ ಪಿ ವರೆಗಿನ ನೀರಾವರಿ ವಿದ್ಯುತ್ ಪಂಪ್ ಸೆಟ್ ಸ್ಥಾವರಗಳ ವಿದ್ಯುತ್ ಶುಲ್ಕವನ್ನು ಮರು ಪಾವತಿಸಲು ಸರ್ಕಾರ ಆದೇಶಿಸಿದೆ. ಈ ಮೂಲಕ ಕಾಫಿ ಬೆಳೆಗಾರರಿಗೆ ಗುಡ್ ನ್ಯೂಸ್ ನೀಡಿದೆ. https://kannadanewsnow.com/kannada/heres-a-list-of-bank-holidays-for-the-month-of-august-august-2022-bank-holidays-list/ ಈ ಸಂಬಂಧ ರಾಜ್ಯ ಸರ್ಕಾರ ನಡವಳಿಯನ್ನು ಹೊರಡಿಸಿದ್ದು, ರಾಜ್ಯದಲ್ಲಿನ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ 10 ಹೆಚ್ ಪಿ ವರೆಗಿನ ನೀರಾವರಿ ವಿದ್ಯುತ್ ಪಂಪ್ ಸೆಟ್ ಸ್ಥಾವರಗಳ ವಿದ್ಯುತ್ ಶುಲ್ಕವನ್ನು ಹಲವು ಷರತ್ತು, ನಿಬಂಧನಗಳಿಗೊಳಪಟ್ಟು ಫಲಾನುಭವಿಗಳಿಗೆ ಡಿಬಿಟಿ ಯೋಜನೆಯ ವ್ಯಸ್ಥೆಯಡಿ ಸರ್ಕಾರದಿಂದ ಮರುಪಾವತಿಸಲು ಆದೇಶಿಸಿದೆ. https://kannadanewsnow.com/kannada/big-news-good-news-for-contractual-employees-of-health-department-weekly-off-granted/ ದಿನಾಂಕ 01-07-2022ರಿಂದ ಬಳಕೆಯಾಗುವ ವಿದ್ಯುತ್ ಬಳಕೆಗೆ ಅನ್ವಯವಾಗುವಂತೆ ಗ್ರಾಹಕರುಗಳಿಗೆ ಮರುಪಾವತಿಸಲಾಗುವುದು. ಈ ಪ್ರವರ್ಗದ ಫಲಾನುಭವಿ, ಗ್ರಾಹಕರು ಸಂಬಂಧಪಟ್ಟ ಇಲಾಖೆಯಿಂದ ದೃಢೀಕರಣ ಪ್ರತ್ರವನ್ನು ಒದಗಿಸಬೇಕು. ಸಣ್ಣ, ಮಧ್ಯಮ ಕಾಫಿ ಬೆಳೆಗಾರರು ಈ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ಸಂಖ್ಯೆ ಹಾಗೂ ಇತರೆ ಮಾಹಿತಿಗಳ ದೃಢೀಕೃತ ದಾಖಲೆಯನ್ನು ಒದಗಿಸುವುದು ಕಡ್ಡಾಯವಾಗಿದೆ.…
ನವದೆಹಲಿ: ನೀವು ಆಗಸ್ಟ್ ತಿಂಗಳಲ್ಲಿ ಕೆಲವು ಬ್ಯಾಂಕ್ ಸಂಬಂಧಿತ ಕೆಲಸಗಳನ್ನು ಮಾಡಲು ಬಯಸಿದರೆ, ನಿಮ್ಮ ಬ್ಯಾಂಕ್ ರಜಾದಿನಗಳು ಯಾವ ದಿನದಂದು ಮುಚ್ಚಲ್ಪಡುತ್ತವೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ ಕೂಡ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಆಗಸ್ಟ್ 2022 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆರ್ಬಿಐ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯ ಪ್ರಕಾರ, ಆಗಸ್ಟ್ 2022 ರಲ್ಲಿ 13 ದಿನಗಳ ಕಾಲ ಬ್ಯಾಂಕ್ ಮುಚ್ಚಲಿದೆ. ಆರ್ಬಿಐನ ಅಧಿಕೃತ ವೆಬ್ಸೈಟ್ನಲ್ಲಿನ ರಜಾದಿನಗಳ ಪಟ್ಟಿಯ ಪ್ರಕಾರ, ಆಗಸ್ಟ್ ತಿಂಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ವಿವಿಧ ಹಬ್ಬಗಳನ್ನು ಆಚರಿಸಲಾಗುತ್ತದೆ. ಇದು ಸ್ವಾತಂತ್ರ್ಯ ದಿನಾಚರಣೆ, ರಕ್ಷಾಬಂಧನ, ಜನ್ಮಾಷ್ಟಮಿಯಂತಹ ಹಬ್ಬಗಳನ್ನು ಒಳಗೊಂಡಿದೆ. ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಸಾಪ್ತಾಹಿಕ ರಜಾದಿನಗಳಾಗಿರುತ್ತವೆ. ಮುಂದಿನ ತಿಂಗಳಲ್ಲಿ 13 ದಿನಗಳವರೆಗೆ ಬ್ಯಾಂಕುಗಳಲ್ಲಿ ಯಾವುದೇ ಕೆಲಸ ಇರುವುದಿಲ್ಲ. ಈ ಅವಧಿಯಲ್ಲಿ, ಗ್ರಾಹಕರು ಎಟಿಎಂ, ಇಂಟರ್ನೆಟ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಮತ್ತು ಇತರ ಸೇವೆಗಳನ್ನು…
ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ವಾರದ ರಜೆ ( Weekly Off ) ಮಂಜೂರು ಮಾಡಿ, ಆರೋಗ್ಯ ಇಲಾಖೆ ಆದೇಶಿಸಿದೆ. ಈ ಮೂಲಕ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ನೀಡಿದೆ. https://kannadanewsnow.com/kannada/bigg-news-niti-aayogs-innovation-index-released-karnataka-ranks-no-1-for-3rd-year/ ಈ ಕುರಿತಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಭಿಯಾನ ನಿರ್ದೇಶಕರಾದಂತ ಅರುಂಧತಿ ಅವರು ಸುತ್ತೋಲೆ ಹೊರಡಿಸಿದ್ದು, ರಾಷ್ಟ್ರೀಯ ಆರೋಗ್ಯ ಭಿಯಾನದಡಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ವಾರ್ಷಿಕ 10 ದಿನಗಳ ಸಾಂದರ್ಭಿಕ ರಜೆ ಮತ್ತು 10 ದಿನಗಳ ವೈದ್ಯಕೀಯ ರಜೆ ಪಡೆಯಲು ಹಾಗೂ ಗುತ್ತಿಗೆ ಸಿಬ್ಬಂದಿಗಳಿಗೆ 180 ದಿನಗಳ ಮಾತೃತ್ವ ರಜೆ, 15 ದಿನಗಳ ಪಿತೃತ್ವ ರಜೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. https://kannadanewsnow.com/kannada/bigg-news-ministers-responsible-for-independence-day-flag-hoisting-on-august-15-who-knows-which-district-heres-the-list/ ದಿನಾಂಕ 24-02-2022 ಮತ್ತು 07-07-2022ರಂದು ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿದಂತೆ, ಖಾಯಂ ನೌಕರರಂತೆಯೇ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ವಾರಕ್ಕೊಮ್ಮೆ ಒಂದು ದಿನ ( Weekly Off ) ರಜೆ ಪಡೆಯಬೇಕಾಗಿರುತ್ತದೆ. ಆದ್ದರಿಂದ…