Subscribe to Updates
Get the latest creative news from FooBar about art, design and business.
Author: KNN IT TEAM
ಬೆಳಗಾವಿ: ಪ್ರೇಯಸಿಯನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಬಸವ ನಗರದಲ್ಲಿ ನಡೆದಿದೆ. ಯರಗಟ್ಟಿ ತಾಲೂಕಿನ ಮದ್ದೂರು ಗ್ರಾಮದ ನಿವಾಸಿ 28 ವರ್ಷದ ರೇಣುಕಾ ಪಶ್ಚನ್ನವರ್ ಮೃತ ದುರ್ದೈವಿ. ರಾಮಚಂದ್ರ ಎಂಬ ಪಾಗಲ್ ಪ್ರೇಮಿಯಿಂದ ಹತ್ಯೆಗೈದಿದ್ದಾನೆ. https://kannadanewsnow.com/kannada/parappana-agrahara-jail-not-standing-in-jail-inmates-smuggled-into-polices-hunt/ ಈಕೆ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು.ಎರಡು ವರ್ಷದಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು.ಕೆಲ ದಿನಗಳ ಹಿಂದೆ ರಾಮಚಂದ್ರನನ್ನ ಕಡೆಗಣಿಸುತ್ತಿದ್ದಳು ಎಂದು ಹೇಳಲಾಗಿದೆ. ನಿನ್ನೆ ಸಂಜೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಬಂದಿದ್ದ.ನಿನ್ನೆ ರಾತ್ರಿ ರೇಣುಕಾ ರೂಮ್ ಗೆ ಹೋಗಿ ಗಲಾಟೆ ಮಾಡಿ. ತಡರಾತ್ರಿ ಕುತ್ತಿಗೆ ಬಿಗಿದು ಕೊಂದು ಹತ್ಯೆ ಮಾಡಿ ನಂತರ ತಾನೂ ಆತ್ಮಹತ್ಯೆ ಶರಣಾಗಿದ್ದಾನೆ. ಈ ಘಟನೆ ಸಂಬಂಧ ಯರಗಟ್ಟಇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬೆಂಗಳೂರಿನಲ್ಲಿ ಮತ್ತೊಂದು ಬಲಿಯಾಗಿದೆ. ವಿದ್ಯುತ್ ಲೈನ್ ಕಟ್ ಆಗಿ ರಾಜಕಾಲುವೆಗೆ ಬಿದ್ದ ಸಂದರ್ಭದಲ್ಲಿ ಕಬ್ಬಿಣ ಆಯಲು ಹೋಗಿದ್ದಾಗ ಶಾಕ್ ಹೊಡೆದು 25 ವರ್ಷದ ಅಪ್ಪು ಎಂಬ ಬಾಲಕ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. https://kannadanewsnow.com/kannada/8-people-die-due-to-cholera-in-odishas-rayagada-district/ ಹಲಸೂರು ಠಾಣಾ ಪೊಲೀಸರು , ಬೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರೀಶಿಲನೆ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಪದೇ ಪದೇ ವಿದ್ಯುತ್ ಲೈನ್ ಕಟ್ ಆಗಿ ಒಂದಲ್ಲ ಒಂದು ಸಾವು ಸಂಭವಿಸುತ್ತಲೇ ಇದೆ. ಆದರೂ ಕೂಡಾ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ಹೆಚ್ಚಾಗುತ್ತಿದೆ. ಯಾರು ಗಮನಹರಿಸುತ್ತಿಲ್ಲವೆಂದು ಅಧಿಕಾರಿಗಳಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. https://kannadanewsnow.com/kannada/8-people-die-due-to-cholera-in-odishas-rayagada-district/ ಇದೇ ಜುಲೈ 13ನೇ ತಾರೀಕಿನಿಂದ ಇಂತಹದ್ದೇ ಒಂದು ಘಟನೆ ಬೆಳಕಿಗೆ ಬಂದಿತ್ತು. ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಇದೇ 17ರಂದು 12 ವರ್ಷದ ಬಾಲಕ ರುಕ್ಮಾನ್ ಸಾವನ್ನಪಿದ್ದಾನೆ. ಏಪ್ರಿಲ್ 15ರಂದು ಕಿಶೋರ್ ಎಂಬಾತ ಸಾವನ್ನಪ್ಪಿದ್ದಾನೆ. ಕಳೆದ ಮೂರು ತಿಂಗಳಲ್ಲಿ ಒಟ್ಟು ಮೂವರು ಸಾವನ್ನಪ್ಪಿದ್ದಾರೆ.
ಮೂಲ ಕೊಳ್ಳೇಗಾಲದ ವಂಶಪಾರಂಪರಿಕ ಜ್ಯೋತಿಷ್ಯರು, ಶ್ರೀ ಚೌಡೇಶ್ವರಿ ದೇವಿ,ರಕ್ತೇಶ್ವರಿ, ಸ್ಮಶಾನಕಾಳಿ, ಅಘೋರಿ ಸ್ಮಶಾನತಾರ ದೇವತೆ, ಕಾಡುದೇವರ ಆರಾಧಕರು, ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಕೊಳ್ಳೇಗಾಲದ ಮಹಾಕಾಳಿ ಮಂತ್ರ ಶಕ್ತಿಯಿಂದ ಕೇವಲ 4 ದಿನದಲ್ಲಿ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ. Call/WhatsApp Ph:- 9480512091 ಪ್ರಧಾನ ಗುರುಗಳು ಪಂಡಿತ್: ಶ್ರೀ ವಿನಯ್ ಕುಮಾರ್ ಶಾಸ್ತ್ರಿ ಗಳು ರಾಜ್ಯ ಹಾಗೂ ಹೊರರಾಜ್ಯದ ಜನರ ಸಮಸ್ಯೆಗಳಿಗೆ ಪರಿಹಾರ ನೀಡಿರುವ ಏಕೈಕ ಮಾಂತ್ರಿಕರು ನಿಮ್ಮ ಸಮಸ್ಯೆಗಳನ್ನು ಅಷ್ಟಮಂಗಲ ಪ್ರಶ್ನೆ, ಆರೂಢ ಪ್ರಶ್ನೆ, ತಾಂಬೂಲ ಪ್ರಶ್ನೆ, ದೈವ ಪ್ರಶ್ನೆ, ಕವಡೆ ಪ್ರಶ್ನೆ ಮುಖಲಕ್ಷಣ, ಜನ್ಮ ದಿನಾಂಕ, ಹಸ್ತರೇಖೆ, ಪಂಚಪಕ್ಷಿ, ರಮಲ ಶಾಸ್ತ್ರ ಮೂಲಕ ಪರಿಶೋದಿಸಿ ನೋಡುತ್ತಾರೆ. ನಿಮ್ಮ ಜೀವನದ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವಿವಾಹ ವಿಳಂಬ , ಮಾಟ ಮಂತ್ರ, ಶತ್ರುಕಾಟ , ಸ್ತ್ರೀ-ವಶೀಕರಣ, ಪುರುಷ-ವಶೀಕರಣ,ಅತ್ತೆ-ಸೊಸೆ ಕಿರಿಕಿರಿ, ಸಂತಾನ ಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಸಾಲ ಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ,…
ಪಶ್ಚಿಮ ಬಂಗಾಳ : ಶಾಲಾ ಸೇವಾ ಆಯೋಗದ (ಎಸ್‌ಎಸ್‌ಸಿ) ನೇಮಕಾತಿ ಹಗರಣ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವ ಮತ್ತು ಟಿಎಂಸಿ ನಾಯಕ ಪಾರ್ಥ ಚಟರ್ಜಿ ಅವರಿಗೆ ಸೇರಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯವು ಶೋಧ ನಡೆಸುತ್ತಿದೆ. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಕೇಂದ್ರೀಯ ಪಡೆಗಳ ಯೋಧರೊಂದಿಗೆ ಎಂಟು ಇಡಿ ಅಧಿಕಾರಿಗಳು ಪಾರ್ಥ ಚಟರ್ಜಿ ಅವರ ನಿವಾಸಕ್ಕೆ ತೆರಳಿದೆ. ಇಡಿ ಅಧಿಕಾರಿಗಳು ಕೂಚ್ ಬೆಹಾರ್ ಜಿಲ್ಲೆಯ ಶಿಕ್ಷಣ ಸಚಿವ ಪರೇಶ್ ಅಧಿಕಾರಿ ಅವರ ನಿವಾಸದ ಮೇಲೂ ದಾಳಿ ನಡೆಸಿದ್ದಾರೆ. ಎಸ್‌ಎಸ್‌ಸಿ ನೇಮಕಾತಿ ಹಗರಣ ಪ್ರಕರಣದಲ್ಲಿ ಇಬ್ಬರೂ ಸಚಿವರನ್ನು ಸಿಬಿಐ ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಜೂನ್ 29 ರಂದು, ರಾಜ್ಯ ಅನುದಾನಿತ ಶಾಲೆಗಳಿಗೆ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ ಹಣ ವರ್ಗಾವಣೆಯ ಕುರಿತು ಇಡಿ ತನಿಖೆಯನ್ನು ಪ್ರಾರಂಭಿಸಿತು. ಈ ಕುರಿತಂತೆ ಫೆಡರಲ್ ತನಿಖಾ ಸಂಸ್ಥೆಯು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದೆ. ಎಸ್ಸೆಸ್ಸೆಲ್ಸಿ ಮೂಲಕ ನೇಮಕಗೊಂಡ ಶಿಕ್ಷಕರ ನೇಮಕಾತಿಯಲ್ಲಿ ಕೋಟ್ಯಂತರ…
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಕಳ್ಳಾಟ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಜೈಲ್ ನಲ್ಲಿ ನಿಷೇಧಿತ ಮೊಬೈಲ್ ಪೋನ್ ಗಳನ್ನು ಕೈದಿಗಳು ಬಳಕೆ ಮಾಡುತ್ತಿದ್ದರು. ಜೈಲಿನ ಟವರ್ ಒಂದು ಹಾಗೂ ಟವರ್ ಎರಡರ ಮೇಲೆ ಪೊಲೀಸರ ದಾಳಿ ನಡೆಸಿದ್ದಾರೆ. https://kannadanewsnow.com/kannada/truck-carrying-huge-logs-of-timber-overturns/ ಈ ವೇಳೆ 33 ಮೊಬೈಲ್ ಪೋನ್ ಗಳು ಕೈದಿಗಳಿಗೆ ಸಿಕ್ಕಿದೆ.ಜೈಲಿನ ಕೈದಿಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಪೊಲೀಸರ ಶತಪ್ರಯತ್ನ ಮಾಡುತ್ತಿದ್ದಾರೆ. ಎಷ್ಟೇ ಕ್ರಮ ಕೈಗೊಂಡ್ರು ಕೈದಿಗಳ ಐಷಾರಾಮಿ ಆಟಕ್ಕೆ ಬ್ರೇಕ್ ಬೀಳುತ್ತಿಲ್ಲ. ಮೂವತ್ತು ಮಂದಿ ಪೊಲೀಸರಿಂದ ಜೈಲ್ ಬ್ಯಾರಕ್ ಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಶೌಚಾಲಯ ಹಾಗೂ ಮುಂಭಾಗದಲ್ಲಿ ಸಿಕ್ತು ರಾಶಿ ರಾಶಿ ಪೋನ್ ಗಳು.ಬೇಸಿಕ್ ಮೊಬೈಲ್, ಸ್ಮಾರ್ಟ್ ಪೋನ್ ಗಳು, ಸಿಮ್ ಗಳನ್ನ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲಂಬೊ: ಹಿರಿಯ ರಾಜಕಾರಣಿ ದಿನೇಶ್ ಗುಣವರ್ಧನ ಅವರು ಶುಕ್ರವಾರ ಶ್ರೀಲಂಕಾದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ತಮ್ಮ ನೂತನ ಸಚಿವ ಸಂಪುಟದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ https://kannadanewsnow.com/kannada/8-people-die-due-to-cholera-in-odishas-rayagada-district/ ಶ್ರೀಲಂಕಾದ ರಾಜಕೀಯದ ಧೀಮಂತ ನಾಯಕ ಗುಣವರ್ಧನ ಈ ಹಿಂದೆ ವಿದೇಶಾಂಗ ಸಚಿವರಾಗಿ ಮತ್ತು ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಏಪ್ರಿಲ್ ನಲ್ಲಿ ಅಂದಿನ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರನ್ನು ಗೃಹ ಸಚಿವರಾಗಿ ನೇಮಿಸಿದರು. ಗೊಟಬಯಾ ರಾಜಪಕ್ಸೆ ಅವರು ದೇಶದಿಂದ ಪಲಾಯನ ಮಾಡಿದ ನಂತರ 73 ವರ್ಷದ ವಿಕ್ರಮಸಿಂಘೆ ಅವರು ಗುರುವಾರ ದೇಶದ ಎಂಟನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪ್ರಧಾನಿ ಹುದ್ದೆ ಖಾಲಿಯಾಯಿತು. ದೇಶವು ಎದುರಿಸುತ್ತಿರುವ ಅಭೂತಪೂರ್ವ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ದ್ವಿಪಕ್ಷೀಯತೆಗೆ ಅವರು ಕರೆ ನೀಡಿದ್ದಾರೆ. https://kannadanewsnow.com/kannada/8-people-die-due-to-cholera-in-odishas-rayagada-district/ ರನಿಲ್ ವಿಕ್ರಮಸಿಂಘೆ ಅವರು ಗುರುವಾರ ಶ್ರೀಲಂಕಾದ ಎಂಟನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು ಮತ್ತು ದೇಶವನ್ನು ಅದರ ಆರ್ಥಿಕ ಬಿಕ್ಕಟ್ಟಿನಿಂದ ಹೊರತರುವ ಮತ್ತು ತಿಂಗಳುಗಳ ಸಾಮೂಹಿಕ ಪ್ರತಿಭಟನೆಗಳ…
BIGG NEWS : ಡಿಕೆಶಿ-ಸಿದ್ದರಾಮಯ್ಯರಿಂದ ಕಾಂಗ್ರೆಸ್ ಪಕ್ಷ ಜಾತಿಯ ಕೆಸರಿಗೆ ಬಿದ್ದಿದೆ :ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ
ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯರಿಂದ ಕಾಂಗ್ರೆಸ್ ಪಕ್ಷವು ಜಾತಿಯ ಕೆಸರಿಗೆ ಬಿದ್ದಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಟೀಕಿಸಿದ್ದಾರೆ. https://kannadanewsnow.com/kannada/8-people-die-due-to-cholera-in-odishas-rayagada-district/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ಸೇರಿ ಕಾಂಗ್ರೆಸ್‌ಗೆ ಜಾತಿ ಪಟ್ಟ ಅಂಟಿಸಿದ್ದಾರೆ. ಶಿವಕುಮಾರ್ ಒಳ್ಳೆಯ ನಾಯಕ ಎಂದುಕೊಂಡಿದ್ದೆ. ನಾನು ಮುಖ್ಯಮಂತ್ರಿಯಾಗಲು ಒಕ್ಕಲಿಗ ಸಮುದಾಯ ಬೆನ್ನಿಗೆ ನಿಲ್ಲಬೇಕು ಎಂದು ಹೇಳುವ ಮೂಲಕ ಜಾತಿವಾದಿ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನು ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಮುಕ್ತನಾಗಿದ್ದೇನೆ. ನನ್ನನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದು, ಬಿಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ. https://kannadanewsnow.com/kannada/6-killed-7-injured-due-to-lightning-in-banda-administration-announced-compensation/
ಒಡಿಶಾ : ರಾಯಗಡ ಜಿಲ್ಲೆಯ ಕಾಶಿಪುರ ಬ್ಲಾಕ್‌ನಲ್ಲಿ ಎಂಟು ಜನರು ಕಾಲರಾದಿಂದ ಸಾವನ್ನಪ್ಪಿದ್ದಾರೆ ಮತ್ತು ಹಲವರು ನೀರಿನಿಂದ ಹರಡುವ ರೋಗದಿಂದ ಸೋಂಕಿಗೆ ಒಳಗಾಗಿದ್ದಾರೆ. ಕಾಶಿಪುರದ 8 ಪಂಚಾಯಿತಿಗಳ ಪೈಕಿ ಆರರಲ್ಲಿ ಕಾಲರಾ ಪ್ರಕರಣಗಳು ವರದಿಯಾಗಿವೆ. https://kannadanewsnow.com/kannada/6-killed-7-injured-due-to-lightning-in-banda-administration-announced-compensation/ ಸಾವಿನ ಸಂಖ್ಯೆ 8ಕ್ಕೇರಿದ್ದು, 120 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ದುಡುಕಬಹಲ್ ಪಂಚಾಯತ್ನಲ್ಲಿ ಸುಮಾರು 65 ಜನರು ನೀರಿನಿಂದ ಹರಡುವ ರೋಗದಿಂದ ಬಳಲುತ್ತಿದ್ದರೆ, ಟಿಕ್ರಿ ಪಂಚಾಯತ್ನಲ್ಲಿ 48 ಜನರು ಸೋಂಕಿಗೆ ಒಳಗಾಗಿದ್ದಾರೆ. ನಾಕಾಟಿಗುಡ ಪಂಚಾಯತ್ನ ಸನಮತಿಕಾನಾ ಗ್ರಾಮದ ದಾಲ್ಮಿ ಮಝಿ ಎಂಬ 60 ವರ್ಷದ ಮಹಿಳೆ ಇತ್ತೀಚೆಗೆ ಕಾಲರಾದಿಂದ ಬಳಲುತ್ತಿದ್ದರು. ಸೋಮವಾರ ರಾತ್ರಿ, ಅವಳು ಹೊಟ್ಟೆ ನೋವುಬಗ್ಗೆ ದೂರು ನೀಡಿದಳು. ಕುಟುಂಬ ಸದಸ್ಯರು ಅವಳನ್ನು ಆಸ್ಪತ್ರೆಗೆ ಕರೆದೊಯ್ದರು ಆದರೆ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. https://kannadanewsnow.com/kannada/6-killed-7-injured-due-to-lightning-in-banda-administration-announced-compensation/ ನೀರಿನಲ್ಲಿ ಕಂಡುಬರುವ ಬ್ಯಾಕ್ಟೀರಿಯಾ ರಾಯಗಡ ಜಿಲ್ಲಾಧಿಕಾರಿ ಸ್ವಾಧಾ ದೇವ್ ಸಿಂಗ್ ಮತ್ತು ಭುವನೇಶ್ವರದ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದ (RMRC) ವೈದ್ಯರ ತಂಡದ ಮುಖ್ಯಸ್ಥ ಡಾ.ಬಿಭೂತಿ ಭೂಷಣ್ ಪಾಲ್ ಅವರು…
ಉತ್ತರ ಪ್ರದೇಶ : ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ನಿನ್ನೆಯಿಂದ ಭಾರೀ ಮಳೆಯಾಗುತ್ತಿದ್ದು, ಸಿಡಿಲು ಬಡಿದು ವಿವಿಧೆಡೆ 6 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, 7 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. https://kannadanewsnow.com/kannada/big-breaking-news-cbse-12th-result-finally-declared-today-heres-how-to-check-the-result/ ಬಂದಾ ಜಿಲ್ಲೆಯಲ್ಲಿ ನಿನ್ನೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರೊಂದಿಗೆ ಜಿಲ್ಲೆಯ ಹಲವೆಡೆ ಅಪಾರ ಹಾನಿ ಸಂಭವಿಸಿದೆ. ಇನ್ನು ಸಿಡಿಲು ಬಡಿದು ಗಾಯಗೊಂಡವರೆಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೃತರ ಕುಟುಂಬಕ್ಕೆ ದಿವ್ಯ ವಿಪತ್ತು ಪರಿಹಾರ ನಿಧಿಯಡಿ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಲು ಆಡಳಿತ ಮಂಡಳಿ ತಿಳಿಸಿದೆ. ಸಿಡಿಲು ಬಡಿದು ಬಂದಾ ಸದರ್ ತಹಸಿಲ್ ಪ್ರದೇಶದಲ್ಲಿ 4 ಜನರು ಮತ್ತು ನರೈನಿ ಪ್ರದೇಶದಲ್ಲಿ 2 ಜನರು ಸಾವನ್ನಪ್ಪಿದ್ದಾರೆ. ಹೊಲಗಳಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಭಾರೀ ಮಳೆಯೊಂದಿಗೆ ಸಿಡಿಲು ಬಿದ್ದು ಹೆಚ್ಚಿನವರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಬಂದಾ ಹೆಚ್ಚುವರಿ ಜಿಲ್ಲಾಧಿಕಾರಿ ಉಮಾಕಾಂತ್ ತಿವಾರಿ ಮಾತನಾಡಿ, ಬಂದಾದಲ್ಲಿ ಭಾರೀ ಮಳೆಗೆ ಜಿಲ್ಲೆಯ ವಿವಿಧೆಡೆ ಸಿಡಿಲು ಬಡಿದು 6 ಮಂದಿ ಸಾವನ್ನಪ್ಪಿದ್ದು, 7 ಮಂದಿ…
ಬೆಂಗಳೂರು: ಬೃಹತ್ ಮರದ ದಿಮ್ಮಿಗಳ ಸಾಗಿಸುತ್ತಿದ್ದ ಲಾರಿ ಮತ್ತು ಬೈಕ್ ಗಳ ನಡುವೆ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯವಾಗಿರುವ ಘಟನೆ ನಾಗರಬಾವಿಯ ನಮ್ಮೂರ ದಿಣ್ಣೆ ಸಮೀಪದ ರಸ್ತೆಯಲ್ಲಿ ನಡೆದಿದೆ. https://kannadanewsnow.com/kannada/man-tests-positive-for-swine-flu-in-uttar-pradesh/ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಲಾರಿ ಮಗುಚಿಬಿದ್ದಿದೆ. ಪರಿಣಾಮ ಪ್ರತ್ಯೇಕ ದ್ವಿಚಕ್ರ ವಾಹನಗಳಲ್ಲಿ ಬರ್ತಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದೆ. ಕೂಡಲೇ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಸಂಬಂಧ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.