Subscribe to Updates
Get the latest creative news from FooBar about art, design and business.
Author: KNN IT TEAM
ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಮದುವೆ ನಿರಾಕರಿಸಿದ ಪ್ರೀತಿಸಿದ ಯುವತಿಯನ್ನು ಕೊಂದು ಬಳಿಕ ಪ್ರಿಯಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. https://kannadanewsnow.com/kannada/why-do-japanese-people-live-longer-the-explosive-secret-of-the-5-main-causes-has-been-revealed/ ಬೆಳಗಾವಿಯ ಬಸವಕಾಲೋನಿಯಲ್ಲಿ ಪ್ರೀತಿಸಿದ ಯುವತಿ ರೇಣುಕಾ ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಕೋಪಗೊಂಡ ಪ್ರಿಯಕರ ರಾಮಚಂದ್ರ ಬಸವಂತಪ್ಪ ತೆಣಗಿ ರೇಣುಕಾಳನ್ನು ಕೊಲೆ ಮಾಡಿ ಬಳಿಕ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಲೆಯಾದ ಯುವತಿ ರೇಣುಕಾ ಬೆಳಗಾವಿಯಲ್ಲಿ ನರ್ಸಿಂಗ್ ಮಾಡುತ್ತಿದ್ದಳು. ಸವದತ್ತಿಯ ಮೂಲದವನಾದ ಬಸವಂತಪ್ಪ ಮದುವೆಗೆ ಒಪ್ಪದ ಕಾರಣಕ್ಕೆ ರೇಣುಕಾಳನ್ನು ಕೊಲೆಮಾಡಿ ಡೆತ್ ನೋಟ್ ಬರೆದಿಟ್ಟು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ. ಬೆಳಗಾವಿಯು ಎಪಿಎಂಸಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/bigg-news-b-s-yediyurappa-should-contest-elections-this-time-renukacharya/
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರು ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಅದೇ ಸಮಯದಲ್ಲಿ ಕೆಲವರು ತೂಕವನ್ನು ಹೆಚ್ಚಿಸಿಕೊಳ್ಳಲು ಹರಸಾಹಸ ಪಡೆತ್ತಾರೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವಂತಹ ಉತ್ಪನ್ನಗಳನ್ನು ಬಳಸತ್ತಾರೆ. ಆದರೆ ಮನೆಯಲ್ಲಿಯೇ ಸಿಗುವ ಕೆಲವ ಪದಾರ್ಥಗಳನ್ನು ಸೇವಿಸುವ ಮೂಲಕ ತೂಕವನ್ನು ಹೆಚ್ಚಿಸಿಕೊಳ್ಳಬಹುದು. https://kannadanewsnow.com/kannada/world-athletics-championships-sydney-mclaughlin-smashes-world-record/ ಜಂಕ್ ಫುಡ್ ಅಥವಾ ಪೇಸ್ಟ್ರಿ, ಐಸ್ ಕ್ರೀಂನಂತಹ ಆಹಾರಗಳು ಸೇವಿಸುವುದರಿಂದ ತ್ವರಿತವಾಗಿ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕ್ಯಾಲೋರಿ, ದಟ್ಟವಾದ ಆಹಾರಗಳು ನಿಸ್ಸಂದೇಹವಾಗಿ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಅವುಗಳು ಪೋಷಕಾಂಶಗಳು, ಉತ್ತಮ ಕೊಬ್ಬುಗಳು ಮತ್ತು ಸಕ್ಕರೆಯ ಕೊರತೆಯನ್ನು ಹೊಂದಿರುತ್ತವೆ. ಇದು ನಿಮ್ಮ ದೇಹಕ್ಕೆ ಹಾನಿಕಾರಕವಾಗಬಹುದು. ಸ್ನಾಯು ನಿರ್ಮಾಣ ಅಥವಾ ತೂಕ ಹೆಚ್ಚಾಗುವುದು ಅಂದುಕೊಂಡಷ್ಟು ಸರಳವಲ್ಲ. ಆದಾಗ್ಯೂ, ತೂಕವನ್ನು ಕಳೆದುಕೊಳ್ಳುವ ಆಹಾರ ಯೋಜನೆಗಳಂತೆಯೇ, ತೂಕವನ್ನು ಹೆಚ್ಚಿಸುವ ಆಹಾರ ಯೋಜನೆಗಳಿವೆ. ಕಾರ್ಬೋಹೈಡ್ರೇಟ್‌ಗಳು ತೂಕ ಹೆಚ್ಚಾಗಲು ಕಾರಣವಾಗುತ್ತವೆ ಎಂಬುದು ಒಂದು ಸಾಮಾನ್ಯ ತಪ್ಪು ಕಲ್ಪನೆ. ಸತ್ಯವೆಂದರೆ ತೂಕ ಹೆಚ್ಚಾಗುವುದನ್ನು ಸೇವಿಸುವ ಕ್ಯಾಲೊರಿಗಳ ಸಂಖ್ಯೆಯಿಂದ…
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಜಪಾನಿನ ಜನರ ಜೀವನಶೈಲಿಯು ತುಂಬಾ ಆರೋಗ್ಯಕರವಾಗಿದೆ, ಇದರಿಂದಾಗಿ ಜಪಾನಿನ ಜನರ ಜೀವನವು ತುಂಬಾ ದೀರ್ಘವಾಗಿದೆ. ವರ್ಲ್ಡೋಮೀಟರ್ ಪ್ರಕಾರ, ಜಪಾನಿನ ಸರಾಸರಿ ವಯಸ್ಸು 85.03 ವರ್ಷಗಳು ಮತ್ತು ಅವುಗಳ ಮರಣ ಪ್ರಮಾಣವು ಸಹ ಕಡಿಮೆ. https://kannadanewsnow.com/kannada/swine-flu-symptoms-treatment-prevention-tips-here/ ಆದರೆ ಜಪಾನಿನ ಜನರ ದೀರ್ಘಾಯುಷ್ಯದ ರಹಸ್ಯವೇನು? ವಾಸ್ತವವಾಗಿ, ಇದರ ಹಿಂದೆ ಜಪಾನಿನ ಜೀವನಶೈಲಿ ಇದೆ, ಅದು ಜನರನ್ನು ದೀರ್ಘಕಾಲದವರೆಗೆ ಆರೋಗ್ಯಕರವಾಗಿರಿಸುತ್ತದೆ. ಜಪಾನಿನ ಜನರು ದೀರ್ಘಾಯುಷ್ಯವನ್ನು ಪಡೆಯಲು ಏನು ಮಾಡುತ್ತಾರೆಂದು ನಾವು ತಿಳಿದುಕೊಳ್ಳೋಣ. https://kannadanewsnow.com/kannada/swine-flu-symptoms-treatment-prevention-tips-here/ ಜಪಾನಿನ ಆರೋಗ್ಯ ಸಲಹೆಗಳು: ಜಪಾನೀಯರು ದೀರ್ಘಾಯುಷ್ಯವನ್ನು ಪಡೆಯಲು ಈ ಕೆಲಸಗಳನ್ನು ಮಾಡುತ್ತಾರೆ ಬಿಎಂಜೆಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಜಪಾನ್ನ ಅಧಿಕೃತ ಆಹಾರಕ್ರಮವನ್ನು ಅನುಸರಿಸುವ ಜನರು 15 ಪ್ರತಿಶತದಷ್ಟು ಕಡಿಮೆ ಮರಣ ಪ್ರಮಾಣವನ್ನು ಹೊಂದಿರುತ್ತಾರೆ. ಈ ಆಹಾರವು ಸ್ಯಾಚುರೇಟೆಡ್ ಕೊಬ್ಬು ಮತ್ತು ಸಕ್ಕರೆಯಲ್ಲಿ ಕಡಿಮೆ ಇರುತ್ತದೆ ಮತ್ತು ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದರಿಂದಾಗಿ ಗಂಭೀರ ಕಾಯಿಲೆಗಳು ದೂರ ಉಳಿಯುತ್ತವೆ ಮತ್ತು ವ್ಯಕ್ತಿಯು ದೀರ್ಘಕಾಲದವರೆಗೆ ಆರೋಗ್ಯವಾಗಿ ಉಳಿಯುತ್ತಾನೆ.…
ದಾವಣಗೆರೆ : ಮಾಜಿ ಸಿಎಂ ಯಡಿಯೂರಪ್ಪ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಹೇಳಿದ್ದಾರೆ. ಆದರೆ ಪಕ್ಷ ಸಂಘಟನೆ ಮಾಡಲ್ಲ ಎಂದಿಲ್ಲ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ. https://kannadanewsnow.com/kannada/world-athletics-championships-sydney-mclaughlin-smashes-world-record/ ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಎಂ.ಪಿ. ರೇಣುಕಾಚಾರ್ಯ ಮನೆಗೆ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಶಾಸಕ ಎಂ.ಪಿ. ರೇಣುಕಾಚಾರ್ಯ, ಯಡಿಯೂರಪ್ಪ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಹೇಳಿದ್ದಾರೆ. ಆದರೆ ಪಕ್ಷ ಸಂಘಟನೆ ಮಾಡಲ್ಲ ಎಂದಿಲ್ಲ. ಇದೊಂದು ಬಾರಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬುದು ಎಲ್ಲಾ ಶಾಸಕರ ಕೋರಿಕೆ ಎಂದು ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲ್ಲ, ಇನ್ನು ಸಿಎಂ ಆಗಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. https://kannadanewsnow.com/kannada/swine-flu-symptoms-treatment-prevention-tips-here/
ಕೆಎನ್ ಎನ್ ನ್ಯೂಸ್ ಡೆಸ್ಕ್ : ಯೂಜೀನ್ ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಅಮೆರಿಕದ ಸಿಡ್ನಿ ಮೆಕ್ಲಾಫ್ಲಿನ್ 400 ಮೀಟರ್ ಹರ್ಡಲ್ಸ್ ವಿಶ್ವ ದಾಖಲೆಯನ್ನು ಬರೆದಿದ್ದಾರೆ. https://kannadanewsnow.com/kannada/bsf-troops-open-fire-at-suspected-pakistani-drone/ ಪುರುಷರ ವಿಭಾಗದಲ್ಲಿ 400 ಮೀಟರ್ಸ್ ಕಿರೀಟವನ್ನು ಮೈಕೇಲ್ ನಾರ್ಮನ್ , ಮಹಿಳೆಯ ವಿಭಾಗದಲ್ಲಿ ಬಹಮಿಯನ್ ಶೌನೆ ಮಿಲ್ಲರ್-ಉಯಿಬೊ ಗೆದಿದ್ದಾರೆ. ಮೆಕ್ಲಾಫ್ಲಿನ್ 50.68 ಸೆಕೆಂಡುಗಳಲ್ಲಿ ಗುರಿ ತಲುಪಿ, ಈ ವರ್ಷದ ಚಾಂಪಿಯನ್ ಶಿಪ್ ನಲ್ಲಿ ಮೊದಲ ವಿಶ್ವದಾಖಲೆ ಬರೆದಿದ್ದಾರೆ. ನೆದರ್ ಲ್ಯಾಂಡ್ ನ ಬೆಳ್ಳಿ ಪದಕ ವಿಜೇತ ಫೆಮ್ಕೆ ಬೋಲ್ ಅವರನ್ನು ಹಿಂದಿಕ್ಕಿದರು. ಹಾಲಿ ಚಾಂಪಿಯನ್ ದಲೀಲಾ ಮುಹಮ್ಮದ್ ಮೂರನೇ ಸ್ಥಾನ ಪಡೆದಿದ್ದಾರೆ.
ಹೊಸಪೇಟೆ : ಹಿಂದೂ ಧಾರ್ಮಿಕ ಧರ್ಮಾದಾಯ ದತ್ತಿಗಳ ಇಲಾಖೆಯ ವತಿಯಿಂದ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕುರುವತ್ತಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನ, ಕೊಟ್ಟೂರಿನ ಶ್ರೀ ಗುರುಬಸವೇಶ್ವರಸ್ವಾಮಿ ದೇವಸ್ಥಾನ ಹಾಗೂ ಮೈಲಾರ ಕ್ಷೇತ್ರದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಪ್ತಪದಿ ಸಾಮೂಹಿಕ ಸರಳ ವಿವಾಹವನ್ನು ವಿವಿಧ ದಿನಾಂಕಗಳಂದು ನಡೆಸಲಾಗುತ್ತಿದೆ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಎಂ.ಹೆಚ್.ಪ್ರಕಾಶ್‍ರಾವ್ ಆವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 100 ಜನರನ್ನೊಳಗೊಂಡಂತೆ ಕಡ್ಡಾಯವಾಗಿ ಕೋವಿಡ್-19 ಮಾರ್ಗಸೂಚಿಯನ್ನು ಪಾಲನೆ ಮಾಡಿ ನಡೆಯುವ ಈ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾಗಬಯಸುವ ವಧು-ವರರು ನೋಂದಾಯಿಸಿಕೊಳ್ಳಬಹುದು. *ಕುರುವತ್ತಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಶ್ರೀ ದೊಡ್ಡಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹವು ಆ.14ರಂದು ಬೆಳಗ್ಗೆ 09ರಿಂದ 10.30ರ ಕಟಕ ಲಗ್ನದಲ್ಲಿ ಜರುಗುವುದು. ವಧು-ವರರು ನೋಂದಾಯಿಸಿಕೊಳ್ಳಲು ಕಡೆಯ ದಿನಾಂಕ ಆ.02, ನೊಂದಾಯಿಸಿಕೊಂಡಿರುವ ವಧು-ವರರ ವಿವರಗಳನ್ನು ದೇವಾಲಯದಲ್ಲಿ ಪ್ರಕಟಿಸುವ…
ನವದೆಹಲಿ: ಕಳೆದೆರಡು ವರ್ಷಗಳಿಂದ ಸಾಂಕ್ರಮಿಕ ಕರೋನಾ ವೈರಸ್ ಜನರನ್ನು ಕಾಡುತ್ತಿದೆ. ಇದರ ನಡುವೆ ಮಂಕಿಪಾಕ್ಸ್ ಇದೀಗ ಹಂದಿ ಜ್ವರ ಪ್ರಕರಣಗಳು ಕೆಲವು ರಾಜ್ಯಗಳಲ್ಲಿ ಹೆಚ್ಚಳವಾಗುತ್ತಿವೆ. ಮಹಾರಾಷ್ಟ್ರ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಹೆಚ್1ಎನ್1 ಕೇಸ್ಗಳು ಏರಿಕೆಯಾಗುತ್ತಿದ್ದು, ಜನರಲ್ಲಿ ಆತಂಕ ಉಂಟು ಮಾಡಿದೆ. ಪಿಟಿಐ ವರದಿಯ ಪ್ರಕಾರ, ಜನವರಿ 1 ಮತ್ತು ಜುಲೈ 21 ರ ನಡುವೆ ಮಹಾರಾಷ್ಟ್ರದಲ್ಲಿ 142 ಹಂದಿ ಜ್ವರದ ಪ್ರಕರಣಗಳು ವರದಿಯಾಗಿದ್ದು, 7 ಸಾವುಗಳು ಸಂಭವಿಸಿವೆ. ಒಟ್ಟು ಪ್ರಕರಣಗಳಲ್ಲಿ, ಮುಂಬೈ 43, ಪುಣೆಯಲ್ಲಿ 23, ಪಾಲ್ಘರ್ನಲ್ಲಿ 22 , ನಾಸಿಕ್‌ನಲ್ಲಿ 17, ನಾಗ್‌ಪುರ ನಗರ ಮತ್ತು ಕೊಲ್ಲಾಪುರದಲ್ಲಿ ತಲಾ 14, ಥಾಣೆ ನಗರದಲ್ಲಿ ಏಳು ಮತ್ತು ಕಲ್ಯಾಣ್‌ನಲ್ಲಿ ಎರಡು ಪ್ರಕರಣಗಳಿವೆ.ರಾಜ್ಯದಲ್ಲಿ ಹಂದಿ ಜ್ವರ ಪ್ರಕರಣಗಳು ಹೆಚ್ಚುತ್ತಿವೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆಯ ವರದಿ ಹೇಳಿದೆ. ಹಾಗಾದರೆ ಹಂದಿ ಜ್ವರ ಎಂದರೇನು? ಈ ರೋಗದ ಲಕ್ಷಣಗಳೇನು? ತಡೆಗಟ್ಟುವ ಕ್ರಮಗಳೇನು? ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಹಂದಿ ಜ್ವರ ಎಂದರೇನು? ವೈಜ್ಞಾನಿಕವಾಗಿ H1N1 ಫ್ಲೂ…
ಉತ್ತರ ಪ್ರದೇಶ : ಇಂದು ಮುಂಜಾನೆ ಕನ್ವರ್ ಯಾತ್ರೆಗೆ ತೆರಳುತ್ತಿದ್ದ ವೇಗವಾಗಿ ಬಂದ ಟ್ರಕ್ ಹರಿದ ಪರಿಣಾಮ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬರು ಸಾವನ್ನಪ್ಪಿದ್ದು, ಇದೀಗ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. https://twitter.com/ANINewsUP/status/1550669745879257088?s=20&t=L7wigfYUfBiP02mm5MrfwA ಕನ್ವರ್ ಯಾತ್ರೆಗೆ ತೆರಳಿದ ಒಟ್ಟು 7 ಜನರಲ್ಲಿ ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ವಾಲಿಯರ್‍ನಿಂದ ಬಂದ ಕನ್ವರಿಯಾಗಳು(ಭಕ್ತರು) ಹರಿದ್ವಾರದಿಂದ ಹಿಂತಿರುಗುತ್ತಿದ್ದಾಗ ಬೆಳಗಿನ ಜಾವ 2.15ರ ಸುಮಾರಿಗೆ ಟ್ರಕ್ ಇವರ ಮೇಲೆ ಹರಿದು ಈ ದುರ್ಘಟನೆ ಸಂಭವಿಸಿದೆ. ಘಟನೆಯ ಕುರಿತು ತನಿಖೆ ನಡೆಯುತ್ತಿದ್ದು, ಟ್ರಕ್ ಚಾಲಕನ ಬಗ್ಗೆ ಮಾಹಿತಿ ಸಿಕ್ಕಿದೆ ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಆಗ್ರಾ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರಾಜೀವ್ ಕೃಷ್ಣ ತಿಳಿಸಿದ್ದಾರೆ. https://twitter.com/ANINewsUP/status/1550649742178549760?ref_src=twsrc%5Etfw%7Ctwcamp%5Etweetembed%7Ctwterm%5E1550649742178549760%7Ctwgr%5E%7Ctwcon%5Es1_c10&ref_url=https%3A%2F%2Fwww.indiatvnews.com%2Fnews%2Findia%2Fkanwar-yatra-devotees-killed-hatras-uttar-pradesh-mowed-down-by-truck-police-investigation-gwalior-latest-updates-2022-07-23-794226 ಈ ವಾರದ ಆರಂಭದಲ್ಲಿ ಹರಿದ್ವಾರದಲ್ಲಿ ಸ್ನಾನ ಮಾಡುವಾಗ ಗಂಗಾ ನದಿಯ ಪ್ರವಾಹಕ್ಕೆ ಏಳು ಕನ್ವಾರಿಯಾಗಳು ಕೊಚ್ಚಿಹೋಗಿದ್ದರು. ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಲಾಗಿತ್ತು. ಗಂಗಾಘಾಟ್‍ಗಳಲ್ಲಿರುವ ಭಕ್ತರು ನದಿಯ ಬಲವಾದ…
ಮೈಸೂರು : ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರದ ಕುರಿತಂತೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಮುಖ್ಯಮಂತ್ರಿ ಯಾರೆಂದು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ. https://kannadanewsnow.com/kannada/13-students-fall-ill-after-consuming-food-at-holalkere-hostel/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಫಲಿತಾಂಶಕ್ಕೂ ಮುನ್ನ ಸಿಎಂ ಅಭ್ಯರ್ಥಿ ಯಾರೆಂದು ಹೇಳುವುದಿಲ್ಲ. ನಾನು ಸಿಎಂ, ನಾನು ಸಿಎಂ ಅಂತಾ ಹೇಳುವುದು ಸರಿಯಲ್ಲ. ಸಿಎಂ ಯಾರಗಬೇಕೆಂದು ಮೈಸೂರು, ಬೆಂಗಳೂರು, ಕಲಬುರಗಿಯಲ್ಲಿ ತೀರ್ಮಾನಿಸುವುದಿಲ್ಲ. ಸಿಎಂ ಯಾರಗಬೇಕೆಂದು ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಹೇಳಿದ್ದಾರೆ. https://kannadanewsnow.com/kannada/man-heroically-catches-2-yr-old-girl-after-she-falls-from-fifth-floor-window/ ಅವತ್ತಿನ ರಾಜಕೀಯ ಪರಿಸ್ಥಿತಿ ಆಧಾರದ ಮೇಲೆ ಸಿಎಂ ಯಾರೆಂಬುದ ನಿರ್ಧಾರ ಮಾಡಲಾಗುತ್ತದೆ.ಯಾರಿಗೆ ನಾಯಕತ್ವ ಕೊಡಬೇಕು ಎಂದು ತೀರ್ಮಾನಿಸಲಾಗುತ್ತದೆ. ನಾವು ಸಾಮೂಹಿಕ ನಾಯಕತ್ವದಲ್ಲ ಚುನಾವಣೆಗೆ ಹೋಗುತ್ತದೆ. ಮೊದಲು ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಉದ್ದೇಶ ಎಂದರು. ಇನ್ನು ಬಿ.ಎಸ್. ಯಡಿಯೂರಪ್ಪ ರಾಜಕೀಯ ನಿವೃತ್ತಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಖರ್ಗೆ, ಅದು ಯಡಿಯೂರಪ್ಪ ಅವರ ವೈಯಕ್ತಿಕ ನಿರ್ಧಾರ,ಎಲ್ಲರಿಗೂ ತೀರ್ಮಾನ ತೆಗೆದುಕೊಳ್ಳುವ ಸ್ವಾತಂತ್ರ್ಯವಿದೆ.ನಾವು ಯಾರೇ ಇರಲಿ, ಬಿಡಲಿ…
ಚಿತ್ರದುರ್ಗ: ಹಾಸ್ಟೆಲ್ ನಲ್ಲಿ ಊಟ ಸೇವಿಸಿದ ಬಳಿಕ ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ ಸೇರುತ್ತಿರುವ ಪ್ರಕರಣಗಳು ಇತ್ತೀಚಿಗೆ ದಿನದಿಂದ ದಿನಕ್ಕೆ ಹೆಚ್ಚುಗುತ್ತಲೇ ಇವೆ. https://kannadanewsnow.com/kannada/world-athletics-championships-annu-rani-finishes-7th-in-womens-javelin-final/ ಚಿತ್ರದುರ್ಗದ ಹೊಳಲ್ಕೆರೆ ಮೆಟ್ರಿಕ್-ಪೂರ್ವ (pre-matric) ಹಾಸ್ಟೆಲ್ ನ 13 ವಿದ್ಯಾರ್ಥಿನಿಯರು ಶುಕ್ರವಾರ ರಾತ್ರಿ ಊಟ ಮಾಡಿದ ಬಳಿಕ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. 2-3 ದಿನಗಳ ಹಿಂದಷ್ಟೇ ನಾವು ಹಳಿಯಾಳದ ಹಾಸ್ಟೆಲೊಂದರಲ್ಲಿ ಈ ಸಮಸ್ಯೆ ಎದುರಾಗಿತ್ತು. https://kannadanewsnow.com/kannada/world-athletics-championships-annu-rani-finishes-7th-in-womens-javelin-final/