Author: KNN IT TEAM

ನವದೆಹಲಿ: ಜುಲೈ 18 ರವರೆಗೆ ಸುಮಾರು 4 ಕೋಟಿ ಅರ್ಹ ವ್ಯಕ್ತಿಗಳು ಕೋವಿಡ್ -19 ಲಸಿಕೆಯ ಒಂದೇ ಒಂದು ಡೋಸ್ ಅನ್ನು ಸಹ ತೆಗೆದುಕೊಂಡಿಲ್ಲ ಎಂದು ಆರೋಗ್ಯ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಶುಕ್ರವಾರ ಲೋಕಸಭೆಗೆ ತಿಳಿಸಿದರು. ಜುಲೈ 18 ರವರೆಗೆ ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ (ಸಿವಿಸಿ) ಒಟ್ಟು 1,78,38,52,566 ಲಸಿಕೆ ಡೋಸ್ಗಳನ್ನು (ಶೇಕಡಾ 97.34) ಉಚಿತವಾಗಿ ನೀಡಲಾಗಿದೆ ಎಂದು ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಒಂದೇ ಒಂದು ಡೋಸ್ ತೆಗೆದುಕೊಳ್ಳದ ಜನರ ಸಂಖ್ಯೆ ಮತ್ತು ಶೇಕಡಾವಾರು ಕುರಿತ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು, “ಜುಲೈ 18 ರವರೆಗೆ, ಅಂದಾಜು 4 ಕೋಟಿ ಅರ್ಹ ಫಲಾನುಭವಿಗಳು ಕೋವಿಡ್ ಲಸಿಕೆಯ ಒಂದು ಡೋಸ್ ಅನ್ನು ಸಹ ತೆಗೆದುಕೊಂಡಿಲ್ಲ” ಎಂದು ಹೇಳಿದರು. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಭಾರತದ ಶೇಕಡಾ 98 ರಷ್ಟು ಹದಿಹರೆಯದವರಿಗೆ ಕನಿಷ್ಠ ಮೊದಲ ಡೋಸ್ ಕೋವಿಡ್ -19 ಲಸಿಕೆಯನ್ನು ನೀಡಲಾಗಿದೆ ಮತ್ತು ಶೇಕಡಾ 90 ರಷ್ಟು ಜನರು…

Read More

ನವದೆಹಲಿ : ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವ್ರ ಬೀಳ್ಕೊಡುಗೆ ಸಮಾರಂಭವು ಸಂಸತ್ತಿನಲ್ಲಿ ಶನಿವಾರ ನಡೆಸಲಾಯ್ತು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವ್ರು ರಾಜ್ಯಸಭೆ ಮತ್ತು ಲೋಕಸಭಾ ಸಂಸದರು ಜಂಟಿಯಾಗಿ ಕೋವಿಂದ್ ಅವರಿಗೆ ವಿದಾಯ ಹೇಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದರು. ವರದಿಗಳ ಪ್ರಕಾರ, ಸ್ಪೀಕರ್ ಓಂ ಬಿರ್ಲಾ ಅವ್ರು ನಿರ್ಗಮಿತ ರಾಷ್ಟ್ರಪತಿ ಕೋವಿಂದ್ ಅವರಿಗೆ ಸಂಸದರ ಪರವಾಗಿ ಪ್ರಶಸ್ತಿ ಪತ್ರವನ್ನು ನೀಡಲಿದ್ದಾರೆ. ಎಲ್ಲಾ ಸಂಸದರು ಸಹಿ ಮಾಡಿದ ಸ್ಮರಣಿಕೆ ಮತ್ತು ಸಹಿ ಪುಸ್ತಕವನ್ನು ಸಹ ಅವರಿಗೆ ಪ್ರಸ್ತುತಪಡಿಸಲಾಗುವುದು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ಗಮಿತ ಅಧ್ಯಕ್ಷರು, “ಐದು ವರ್ಷಗಳ ಹಿಂದೆ ನಾನು ಇಲ್ಲಿನ ಸೆಂಟ್ರಲ್ ಹಾಲ್‌ನಲ್ಲಿ ಭಾರತದ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೆ. ಎಲ್ಲ ಸಂಸದರಿಗೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ” ಎಂದರು. “ಸಂಸತ್ತು ಪ್ರಜಾಪ್ರಭುತ್ವದ ದೇವಾಲಯವಾಗಿದೆ ಮತ್ತು ಸಂಸತ್ತಿನಲ್ಲಿ ಚರ್ಚೆ ಮತ್ತು ಭಿನ್ನಾಭಿಪ್ರಾಯದ ಹಕ್ಕುಗಳನ್ನು ಚಲಾಯಿಸುವಾಗ ಸಂಸದರು ಯಾವಾಗಲೂ ಗಾಂಧಿ ತತ್ವವನ್ನು ಅನುಸರಿಸಬೇಕು” ಎಂದು…

Read More

ಬೆಂಗಳೂರು: ನಿನ್ನೆ ಶಿಕಾರಿಪುರ ಕ್ಷೇತ್ರವನ್ನು ತಾನು ಖಾಲಿ ಮಾಡುತ್ತಿದ್ದೇನೆ. ಈ ಕ್ಷೇತ್ರದಿಂದ ಪುತ್ರ ಬಿ.ವೈ ವಿಜಯೇಂದ್ರ ( BY Vijayendra ) ಮುಂಬರುವಂತ ವಿಧಾನಸಭಾ ಚುನಾವಣೆಯಲ್ಲಿ ( Karnataka Assembly Election 2022 ) ಸ್ಪರ್ಧಿಸಲಿದ್ದಾರೆ. ಅವನನ್ನು ತನ್ನ ಗೆಲ್ಲಿಸುವಂತೆ ಗೆಲ್ಲಿಸಿ ಎಂಬುದಾಗಿ ಕ್ಷೇತ್ರದ ಜನತೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ( Farmer CM BS Yediyurappa ) ಮನವಿ ಮಾಡಿದ್ದರು. ಆದ್ರೇ.. ಇಂದು ಆ ಮಾತನ್ನೇ ಉಲ್ಟಾ ಹೊಡೆದಿದ್ದಾರೆ. https://kannadanewsnow.com/kannada/good-news-for-minority-students-applications-invited-for-m-phil-ph-d-fellowships/ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ನಿನ್ನೆ ತಾನು ಮುಂಬರುವ ವಿಧಾನಸಭಾ ಚುನಾವಣೆಗೆ ಕ್ಷೇತ್ರ ಖಾಲಿ ಮಾಡುತ್ತಿದ್ದೇನೆ. ಪುತ್ರ ಶಿಕಾರಿಪುರದಿಂದ ಸ್ಪರ್ಧಿಸಲಿದ್ದಾರೆ ಎಂಬುದಾಗಿ ಹೇಳಿದ್ದಂತ ಹೇಳಿಕೆ, ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ತಲ್ಲಣವನ್ನೇ ಸೃಷ್ಠಿಸಿತ್ತು. ಈ ಸಂಬಂಧ ಯಡಿಯೂರಪ್ಪ ಅವರನ್ನು ಸಾಲು ಸಾಲು ನಾಯಕರೇ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. https://kannadanewsnow.com/kannada/google-meet-can-be-live-on-youtube-now-this-is-what-will-be-new/ ಈ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಿನ್ನೆ ಕ್ಷೇತ್ರದ ಜನತೆಯ ಒತ್ತಾಯಕ್ಕಾಗಿ ಹಾಗೆ ಹೇಳಿದ್ದೇನೆ. ಇದರಿಂದ ಸಾಕಷ್ಟು…

Read More

ನವದೆಹಲಿ : ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿದ್ದು, ಶನಿವಾರ ಸಂಸತ್ತನ್ನುದ್ದೇಶಿಸಿ ಭಾಷಣ ಮಾಡಿದರು. ದೇಶಕ್ಕಾಗಿ ಸೇವೆ ಸಲ್ಲಿಸುವಾಗ ತಮ್ಮ ಐದು ವರ್ಷಗಳ ಅಧಿಕಾರಾವಧಿಯ ಪ್ರಮುಖ ಕ್ಷಣಗಳನ್ನು ಮತ್ತು ಸಾಂಕ್ರಾಮಿಕ ರೋಗದ ಸಮಯದಲ್ಲಿ ಎದುರಿಸಿದ ಹೋರಾಟವನ್ನ ಅವರು ನೆನಪಿಸಿಕೊಂಡರು. https://twitter.com/MIB_India/status/1550815174654717953?s=20&t=sgrbkevN4zuWuApGWQf4iQ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವ್ರಿಗೆ ಸಂಸತ್ತಿನ ಸೆಂಟ್ರಲ್ ಹಾಲ್ʼನಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಸಧ್ಯ ಈ ಬೀಳ್ಕೊಡುಗೆ ಸಮಾರಂಭವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡಿದರು. ನಿರ್ಗಮಿತ ರಾಷ್ಟ್ರಪತಿಗಳಿಗೆ ಪ್ರಧಾನಿ ನರೇಂದ್ರ ಮೋದಿ ವಿದಾಯದ ಔತಣಕೂಟವನ್ನು ನಡೆಸಿದ ಒಂದು ದಿನದ ನಂತರ ಈ ಭಾಷಣ ಬಂದಿದೆ. ಭಾರತದ 14ನೇ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು 2017ರಲ್ಲಿ ಅಧಿಕಾರ ವಹಿಸಿಕೊಂಡರು. ಭಾರತದ 15ನೇ ಅಧ್ಯಕ್ಷರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Read More

ಬೆಂಗಳೂರು: ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಸಮುದಾಯದ ವಿದ್ಯಾರ್ಥಿಗಳಿಗೆ ಎಂ.ಫಿಲ್ ಮತ್ತು ಪಿ ಹೆಚ್ ಡಿ ಫೆಲೋಶಿಫ್ ಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. https://kannadanewsnow.com/kannada/mla-srinivasa-gowda-gedre-i-will-be-a-watchman-in-front-of-his-house-mlc-govindaraju-sawal/ ಈ ಬಗ್ಗೆ ಅಲ್ಪಸಂಖ್ಯಾತ ನಿರ್ದೇಶನಲಾಯದ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2021-22 ಮತ್ತು 2022-23ನೇ ವರ್ಷದ ಅವಧಿಯಲ್ಲಿ ಎಂ ಫಿಲ್ ಮತ್ತು ಪಿ ಹೆಚ್ ಡಿಗೆ ನೋಂದಣಿ ಮಾಡಿಸಿರುವ ವಿದ್ಯಾರ್ಥಿಗಳು ಮಾತ್ರ ಫೆಲೋಶಿಫ್ ಗೆ ಅರ್ಹರಾಗಿರುವವರು ಎಂದು ಹೇಳಿದೆ. https://kannadanewsnow.com/kannada/bbmp-orders-ban-on-signboards-on-vehicles/ ಎಂ.ಫಿಲ್, ಪಿ.ಹೆಚ್ ಡಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳು ವಿದ್ಯಾರ್ಥಿಗಳು ಕರ್ನಾಟಕದವರಾಗಿರಬೇಕು. ಜೈನ, ಪಾರ್ಸಿ, ಬೌದ್ಧ, ಸಿಖ್, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯದವರಾಗಿರಬೇಕು. ಪೂರ್ಣಾವಧಿಯ ಕೋರ್ಸ್ ಗೆ ನೊಂದಣಿಯಾಗಿರಬೇಕು. ಪೋಷಕರ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಹೆಚ್ಚಿರಬಾರದು. 35 ವರ್ಷ ಗರಿಷ್ಠ ವಯೋಮಿತಿ ಕಡ್ಡಾಯ ಅರ್ಜಿ ಸಲ್ಲಿಕೆಯ ಬಗ್ಗೆ ಮುಖ್ಯ ಮಾಹಿತಿ ಅರ್ಹ ವಿದ್ಯಾರ್ಥಿಗಳು https://sevsindhuservices.karnataka.gov.in ಜಾಲತಾಣಕ್ಕೆ ಭೇಟಿಯಾಗಿ ಅರ್ಜಿಯನ್ನು ಸಲ್ಲಿಸುವುದು ಅರ್ಜಿಯ ಕಾಗಗದ ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಮೀಪದ ಜಿಲ್ಲಾ ಅಲ್ಪಸಂಖ್ಯಾತರ ಕಚೇರಿಗೆ ಸಲ್ಲಿಸಬೇಕು. ಈ ಸಂಬಂಧ…

Read More

ಕೆಎನ್‌ಎನ್‌ಡಿಜಿಟಲ್ ಡೆಸ್ಕ್‌ : ಇಂಡೋನೇಷ್ಯಾದ ಪೂರ್ವ ನುಸಾ ಟೆಂಗರಾ ಪ್ರಾಂತ್ಯದಲ್ಲಿ ಶನಿವಾರ 5.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ದೇಶದ ಹವಾಮಾನ, ಹವಾಮಾನಶಾಸ್ತ್ರ ಮತ್ತು ಭೂಭೌತಶಾಸ್ತ್ರ ಸಂಸ್ಥೆ ತಿಳಿಸಿದೆ. ಕ್ಸಿನ್ಹುವಾ ನ್ಯೂಸ್ ಏಜೆನ್ಸಿಯ ಪ್ರಕಾರ, ಭೂಕಂಪವು ಸ್ಥಳೀಯ ಸಮಯ 14:35 ಕ್ಕೆ (0735 ಜಿಎಂಟಿ) ಅಪ್ಪಳಿಸಿದೆ, ಫ್ಲೋರೆಸ್ ತೈಮೂರ್ ಜಿಲ್ಲೆಯ ಲಾರಂಟುಕಾ ಉಪ-ಜಿಲ್ಲೆಯಿಂದ ವಾಯವ್ಯಕ್ಕೆ 100 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರಬಿಂದು ಮತ್ತು ಸಮುದ್ರದ ತಳದ ಅಡಿಯಲ್ಲಿ 13 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಇನ್ನು ಭೂಕಂಪವು ಸುನಾಮಿಯನ್ನು ಪ್ರಚೋದಿಸುವ ಸಾಧ್ಯತೆಯಿಲ್ಲ ಎಂದು ಏಜೆನ್ಸಿ ತಿಳಿಸಿದೆ. ಇದಕ್ಕೂ ಮೊದಲು ಜುಲೈ 20 ರಂದು, 5.4 ತೀವ್ರತೆಯ ಭೂಕಂಪವು ಇಂಡೋನೇಷ್ಯಾದ ಬೆಂಗ್ಕುಲುವಿನ ನೈರುತ್ಯಕ್ಕೆ 46 ಕಿ.ಮೀ. ಸಂಭವಿಸಿತ್ತು. ಇನ್ನು 2346 ಜಿಎಂಟಿಯಲ್ಲಿ ಕಂಪನದ ಅನುಭವವಾಗಿದ್ದು, 57.17 ಕಿ.ಮೀ ಆಳದ ಭೂಕಂಪದ ಕೇಂದ್ರಬಿಂದುವನ್ನು ಆರಂಭದಲ್ಲಿ 4.1899 ಡಿಗ್ರಿ ದಕ್ಷಿಣ ಅಕ್ಷಾಂಶ ಮತ್ತು 102.1095 ಡಿಗ್ರಿ ಪೂರ್ವ ರೇಖಾಂಶದಲ್ಲಿ ಗುರುತಿಸಲಾಗಿದೆ.

Read More

ಬಾಗಲಕೋಟೆ:  ಮುಸ್ಲಿಮರು ಕ್ಷೌರ ಅಂಗಡಿಗಳನ್ನ ನಾವೇ ಉಡಿಸ್ ಮಾಡುತ್ತೇವೆ‌ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ ಎಚ್ಚರಿಕೆ ನೀಡಿದ್ದಾರೆ. https://kannadanewsnow.com/kannada/pm-modi-shares-a-lighting-video-of-digital-lights-installed-in-central-park-watch/ ದೇಶದೆಲ್ಲೆಡೆ ಕ್ಷೌರಿಕ ಸಮಾಜ ಇದೆ. ಅವರಿಗೆ ಕ್ಷೌರ ಬಿಟ್ರೆ ಬೇರೆ ಏನೂ ಗೊತ್ತಿಲ್ಲ.ಅವರ ಜೀವನ, ಹೆಂಡತಿ ಮಕ್ಕಳು ಅದರ ಕ್ಷೌರ ಉದ್ಯೋಗದ ಮೇಲೆ ಇದ್ದಾರೆ. ಕ್ಷೌರಕ್ಕೆ ಅಂತಲೇ ಬಾಂಗ್ಲಾದೇಶದಿಂದ ಮುಸ್ಲಿಮರು ಬಂದು ಅವರ ಹೊಟ್ಟೆಗೆ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ.ವ್ಯವಸ್ಥಿತ ಷಡ್ಯಂತ್ರ, ಕುತಂತ್ರ ನಡೀತಿದೆ. ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿದೆ ಎಂದರು. https://kannadanewsnow.com/kannada/pm-modi-shares-a-lighting-video-of-digital-lights-installed-in-central-park-watch/ ಮುತಾಲಿಕ್,ಆದರೆ ಯಾವುದೇ ಕ್ರಮ ಆಗಿಲ್ಲ .ಇದು ಬಹಳ ಡೇಂಜರ್ಸ್ ,ಎಲ್ಲಿಂದಲೋ ಬಂದು ದಾಖಲೆ ಇಲ್ಲದೆ ಇವರು ಅಂಗಡಿ ಹೇಗೆ ಹಾಕ್ತಾರೆ.ಅವರಿಗೆ ಯಾರು ಹಾಕಿಕೊಡ್ತಾರೆ, ಅವರಿಗೆ ಬಂಡವಾಳ ಹೇಗೆ ಸಿಗುತ್ತಿದೆ‌ ಆರು ಅಂಗಡಿ ಆಗಿವೆ ಅಂತ ಹೇಳ್ತಿದ್ದಾರೆ.ಒಂದು ವಾರದಲ್ಲಿ ಅವರು ಬಂದ್ ಮಾಡದಿದ್ರೆ ಉಡಾಯಿಸಿ ಬಿಸಾಕ್ತಿವಿ ಎಂದು ಹೇಳಿದ್ದಾರೆ. https://kannadanewsnow.com/kannada/pm-modi-shares-a-lighting-video-of-digital-lights-installed-in-central-park-watch/ ಎಸ್ಪಿಯವರೇ, ಡಿಸಿಯವರೇ ಇದು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು. ಬಾಂಗ್ಲಾದೇಶದಿಂದ ಇಲ್ಲಿ ಯಾಕೆ ಬಂದಿದ್ದಾರೆ. ಅವರು ಇಲ್ಲೇನು…

Read More

ಹುಬ್ಬಳ್ಳಿ : ನಗರದ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ ಮದ್ದಿನ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಈ ಫ್ಯಾಕ್ಟರಿಯಲ್ಲಿ 4-5 ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತಿವಾಗಿದೆ. ಹುಬ್ಬಳ್ಳಿ ಹೊರವಲಯದಲ್ಲಿರುವ ತಾರಿಹಾಳ ಕೈಗಾರಿಕಾ ಪ್ರದೇಶದ ಫ್ಯಾಕ್ಟರಿಯಲ್ಲಿ ಈ ದುರ್ಘಟನೆ ನಡೆಸಿದ್ದು, 4-5 ಕಾರ್ಮಿಕರು ಸಿಲುಕಿರುವ ಶಂಕೆಯಿದೆ. ಇನ್ನು ಈ ದುರ್ಘಟನೆಯಲ್ಲಿ ಒಂದು ಬೈಕ್‌ ಭಸ್ಮವಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ದೌಡಾಯಿಸಿದ್ದಾರೆ.

Read More

ಬೆಂಗಳೂರು: ವಾಹನಗಳ ಮೇಲೆ ಬಿಬಿಎಂಪಿ ( BBMP ) ಎಂದು ನಾಮಫಲಕ ( Name Board ) ಅಳವಡಿಸುವುದನ್ನು ನಿಷೇಧಿಸಿ, ಬಿಬಿಎಂಪಿ ಆದೇಶಿಸಿದೆ. ಈ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು, ನೌಕರರು ತಮ್ಮ ವಾಹನಗಳ ಮೇಲೆ ಅಳವಡಿಸುತ್ತಿದ್ದಂತ ನಾಮಫಲಕ ನಿಷೇಧಿಸಿ ಆದೇಶಿಸಿದೆ. https://kannadanewsnow.com/kannada/mla-srinivasa-gowda-gedre-i-will-be-a-watchman-in-front-of-his-house-mlc-govindaraju-sawal/ ಈ ಸಂಬಂಧ ಬಿಬಿಎಂಪಿಯ ಮುಖ್ಯ ಆಯುಕ್ತರ ನಿರ್ದೇಶನದ ಮೇರೆಗೆ ಘನತ್ಯಾಜ್ಯ ವಿಭಾಗ ಹಾಗೂ ಯೋಜನಾ ವಿಭಾಗದ ವಿಶೇಷ ಆಯುಕ್ತರು ರವರು ಸುತ್ತೋಲೆ  ಹೊರಡಿಸಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಗ್ರಹಣೆ, ಸಾಗಾಣೆ ಮತ್ತು ವಿಲೇವಾರಿಯಲ್ಲಿ ಗುತ್ತಿಗೆದಾರರ ಕಾರ್ಯನಿರ್ವಹಿಸುತ್ತಿರುವ ವಾಹನಗಳ ಮೇಲೆ ಗುತ್ತಿಗೆದಾರರು “ಪಾಲಿಕೆಯ ಮೂಲಕ ಸೇವೆಯಲ್ಲಿ/ ಬಿಬಿಎಂಪಿ/ಬಿಬಿಎಂಪಿ ಸೇವೆಯಲ್ಲಿ/ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ” ಎಂದು ನಮೂದಿಸಿಕೊಂಡು/ ನಾಮಫಲಕಗಳನ್ನು ಅನಧಿಕೃತವಾಗಿ ಹಾಕಿಕೊಂಡು ಕಾರ್ಯನಿರ್ವಹಿಸುತ್ತಿರುವುದು ಗಮನಿಸಲಾಗಿರುತ್ತದೆ ಎಂದಿದ್ದಾರೆ. https://kannadanewsnow.com/kannada/yediyurappa-has-said-that-he-will-not-contest-elections-not-retired-from-politics-sm-krishna/ ಮುಂದುವರಿದು, ಪಾಲಿಕೆ ವತಿಯಿಂದ ಕಾರ್ಯನಿರ್ವಹಿಸುವ ಕಾಮಗಾರಿಗಳಿಗೆ ಅವಶ್ಯವಿರುವ ನಿರ್ಮಾಣ ಸಾಮಗ್ರಿಗಳ ಸಾಗಾಣೆ ಮಾಡುವ ವಾಹನಗಳ‌ ಮೇಲೆ ಪಾಲಿಕೆಯ ಸೇವೆಯಲ್ಲಿ ಎಂದು ನಮೂದಿಸಿಕೊಂಡು/ನಾಮಫಲಕಗಳನ್ನು ಅನಧಿಕೃತವಾಗಿ ಹಾಕಿಕೊಂಡು…

Read More

ಕೆಎನ್​ಎನ್​ ಡಿಜಿಟಲ್​ ಡೆಸ್ಕ್​ : ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಸಾಮಾನ್ಯವಾಗಿದೆ. ದಿನದಿಂದ ದಿನಕ್ಕೆ ಮಧುಮೇಹ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ಉತ್ತಮವಾದ ಆಹಾರ ಕ್ರಮಗಳ ಪಾಲನೆಯಿಂದಲೂ ನಿಯಂತ್ರಿಸಬಹುದು. ಕೆಲವು ಜ್ಯೂಸ್​ಗಳನ್ನು ಸೇವಿಸಬಹುದು. ಆದರೆ ಅದರಲ್ಲೂ ದಾಳಿಂಬೆ ಜ್ಯೂಸ್​ ಸೇವನೆಯೂ ಮಧುಮೇಹಿಗಳಿಗೆ ಪ್ರಯೋಜನಕಾರಿಯೇ ಎಂಬುದುನ್ನು ತಿಳಿಯುವುದು ಅಗತ್ಯವಾಗಿದೆ. https://kannadanewsnow.com/kannada/bigg-news-tragic-tragedy-in-belagavi-lover-commits-suicide-after-killing-his-girlfriend-for-not-agreeing-to-marriage/ ದಾಳಿಂಬೆ ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸಿಗುತ್ತವೆ. ದಾಳಿಂಬೆ ಬೀಜಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದಾಗಿ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ನಿಯಂತ್ರಣದಲ್ಲಿರುತ್ತದೆ. ದಾಳಿಂಬೆಯಲ್ಲಿ ಫೈಬರ್ ಇದ್ದು, ಇದು ಹಸಿವನ್ನು ನಿಯಂತ್ರಣದಲ್ಲಿಟ್ಟು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತದೆ. ಸಕ್ಕರೆ ಕಾಯಿಲೆ ಇರುವವರು ದಾಳಿಂಬೆಯನ್ನು ಸೇವಿಸಬಹುದು. ಆದರೆ ದಾಳಿಂಬೆ ಜ್ಯೂಸ್ ಮಾಡುವಾಗ ಬೀಜಗಳು ಮತ್ತು ನಾರಿನಂಶ ಎರಡೂ ಹೊರಬರುತ್ತವೆ. ಆದ್ದರಿಂದ ಇದು ಮಧುಮೇಹಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗುವುದಿಲ್ಲ. ಆದಾಗ್ಯೂ, ನೀವು ಸ್ವಲ್ಪ ಪ್ರಮಾಣದ ದಾಳಿಂಬೆ ರಸವನ್ನು ಸೇವಿಸಿದರೆ ಯಾವುದೇ ಹಾನಿಯಿಲ್ಲ. ಆದರೆ ಅತಿಯಾದ ಸೇವನೆ ಯೋಗ್ಯವಲ್ಲ. ಇದು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸಬಹುದು. ನೀವು ದಾಳಿಂಬೆ…

Read More