Subscribe to Updates
Get the latest creative news from FooBar about art, design and business.
Author: KNN IT TEAM
ಕೆಎನ್ಎನ್ ಡಿಜಿಟಲ್ ಡೆಸ್ಕ್ : ತಂಪು ಪಾನೀಯಗಳು ದೇಹವನ್ನು ರಿಫ್ರೆಶ್ ಮಾಡಿ ಶಕ್ತಿಯ ಮಟ್ಟವನ್ನು ಹೆಚ್ಚಿಸಬಹುದು. ಕೆಲವರಿಗೆ ಊಟದ ಬಳಿಕ ತಣ್ಣೀರನ್ನು ಕುಡಿಯುವ ಅಭ್ಯಾಸ ಇರುತ್ತದೆ. ಇದು ದೇಹದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಊಟದ ನಂತರ ತಣ್ಣೀರನ್ನು ಸೇವಿಸುವುದರಿಂದ ಉಂಟಾಗುವ ಅಪಾಯಗಳನ್ನು ತಿಳಿಯುವುದು ಅಗತ್ಯ. https://kannadanewsnow.com/kannada/governor-declares-emergency-over-wildfire-near-yosemite/ ಹೊಟ್ಟೆಯಲ್ಲಿ ಕೊಬ್ಬು ಅಭಿವೃದ್ಧಿ ತಣ್ಣೀರು ದೇಹದಲ್ಲಿ ಕೊಬ್ಬಿನಂಶವನ್ನು ಉಳಿಸಿಕೊಳ್ಳುತ್ತದೆ. ಊಟದ ನಂತರ ತಣ್ಣೀರು ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಕೊಬ್ಬನ್ನು ಬೆಚ್ಚಗಾಗಿಸುತ್ತದೆ ಮತ್ತು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಹೊಟ್ಟೆ ಉಬ್ಬುವುದನ್ನು ತಡೆಯಲು ಸಾಕಷ್ಟು ವ್ಯಾಯಾಮದ ಮೂಲಕ ಕೊಬ್ಬನ್ನು ತೆಗೆದುಹಾಕಬೇಕು. ಅಜೀರ್ಣ ಸಮಸ್ಯೆಗಳಿಗೆ ಕಾರಣ ತಣ್ಣೀರು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ತಡೆಯುತ್ತದೆ. ಇದು ತಣ್ಣೀರಿನೊಂದಿಗೆ ಬೆರೆಸಿದಾಗ ಆಹಾರದಲ್ಲಿರುವ ಕೊಬ್ಬಿನಂಶವನ್ನು ಗಟ್ಟಿಗೊಳಿಸುತ್ತದೆ. ಜೀರ್ಣಿಸಿಕೊಳ್ಳಲು ಹೆಣಗಾಡುತ್ತದೆ. ತಣ್ಣನೆಯ ಪದಾರ್ಥಗಳು ನಿಮ್ಮ ಆಹಾರವನ್ನು ಜೀರ್ಣಕ್ರಿಯೆಗೆ ತುಂಬಾ ಕಠಿಣಗೊಳಿಸುತ್ತದೆ. ತಲೆತಿರುಗುವಿಕೆಗೆ ಕಾರಣ ದೇಹದ ಅಂಗಗಳಿಗೆ ಆಮ್ಲಜನಕದ ಪೂರೈಕೆಯು ವಿಶೇಷವಾಗಿ ಮೆದುಳಿಗೆ ಕಡಿಮೆಯಾದಾಗ, ನೀವು ತಲೆತಿರುಗುವಿಕೆಯನ್ನು ಅನುಭವಿಸುತ್ತೀರಿ. ತಣ್ಣೀರು ದೇಹದ ಚಯಾಪಚಯವನ್ನು ಅಡ್ಡಿಪಡಿಸುತ್ತದೆ ಮತ್ತು ತಾಪಮಾನದ ಹಠಾತ್ ಬದಲಾವಣೆಯು…
ಬಾಗಲಕೋಟೆ: ಸೋಷಿಯಲ್ ಮೀಡಿಯಾದಲ್ಲಿ ತಂದೆಯ ಕಾಲಂ ನಲ್ಲಿ ವಿಜಯಾನಂದ ಕಾಶಪ್ಪನವರ್ ಎಂಬುದಾಗಿ ಉಲ್ಲೇಖಿಸಿರುವಂತ ಜನನ ಪ್ರಮಾಣ ಪತ್ರವೊಂದು ವೈರಲ್ ಆಗಿದೆ. ಅಲ್ಲದೇ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಎರಡನೇ ಮದುವೆಯನ್ನು ನಟಿ ಪೂಜಾಶ್ರೀ ಎಂಬುವರೊಂದಿಗೆ ಆಗಿದ್ದಾರೆ ಎಂಬುದಾಗಿ ಗುಸುಗುಸು ಸದ್ದು ಹರಿದಾಡುತ್ತಿದೆ. ಆ ಬಗ್ಗೆ ಸ್ವತಹ ಮಾಜಿ ಶಾಸಕರು ಏನ್ ಹೇಳಿದ್ರು ಅಂತ ಮುಂದೆ ಓದಿ. https://kannadanewsnow.com/kannada/multi-speciality-hospital-to-be-set-up-in-uttara-kannada-district-soon-health-minister-sudhakar/ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದಂತ ಅವರು, ನನಗೆ ಆ ಸರ್ಟಿಫಿಕೇಷ್ ತಂದು ತೋರಿಸಿದ್ರೇ ಮಾತನಾಡುತ್ತೇನೆ. ನನಗೆ ಯಾವುದೇ ಮಾಹಿತಿ ಇಲ್ಲದೇ ಎರಡನೇ ಮದುವೆ ಬಗ್ಗೆ ಪ್ರತಿಕ್ರಿಯಿಸೋದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ. ಯಾರೂ ವೈಯಕ್ತಿಕ ಜೀವನಕ್ಕೆ ಹೋಗಬಾರದು. ರಾಜಕೀಯವೇ ಬೇರೆಯಾಗಿದೆ, ವೈಯಕ್ತಿಕ ಬದುಕೇ ಬೇರೆಯಾಗಿದೆ. ನಾನು ದಾಖಲೆಯಿಲ್ಲದೇ ಯಾವುದೇ ಮಾತನಾಡೋದಿಲ್ಲ. ನನಗೆ ದಾಖಲೆ ಸಿಗಲಿ ಆಗ ಮಾತನಾಡುತ್ತೇನೆ ಎಂಬುದಾಗಿ ತಿಳಿಸಿದರು. https://kannadanewsnow.com/kannada/bigg-news-farmers-note-how-to-get-diesel-subsidy-under-rythu-shakti-yojana-heres-the-information/
ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸಿಹಿಸುದ್ದಿಯೊಂದನ್ನು ನೀಡಿದ್ದು, ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಪ್ರಯತ್ನ ನಡೆಸುತ್ತೇನೆ ಎಂದು ಹೇಳಿದ್ದಾರೆ. https://kannadanewsnow.com/kannada/a-horse-kicked-a-dancing-man/ ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಕುರಿತಂತೆ ಆರೋಗ್ಯ ಸಚಿವ ಡಾ.ಸುಧಾಕರ್ ಜೊತೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಚಿವ ಸುಧಾಕರ್. ಆಸ್ಪತ್ರೆ ನಿರ್ಮಾಣದ ಕುರಿತು. ‘ಉತ್ತರ ಕನ್ನಡ ಜನರ ಅಗತ್ಯಗಳ ಬಗ್ಗೆ ಮಾಹಿತಿಯಿದೆ. ಈ ಕುರಿತು ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ, ಇದನ್ನು ವಿಶೇಷ ಮತ್ತು ಅತ್ಯಗತ್ಯ ಪ್ರಕರಣವೆಂದು ಪರಿಗಣಿಸಿ ಆಸ್ಪತ್ರೆ ನಿರ್ಮಿಸಲು ಪ್ರಯತ್ನ ನಡೆಸುತ್ತೇನೆ ಎಂದು ಭರವಸೆ ನೀಡಿದರು. https://kannadanewsnow.com/kannada/bigg-news-farmers-note-how-to-get-diesel-subsidy-under-rythu-shakti-yojana-heres-the-information/
ಇತ್ತೀಚೆಗಂತೂ ಸೋಷಿಯಲ್ ಮೀಡಿಯಾದಲ್ಲಿ ತಮಾಷೆಯ ವಿಡಿಯೋಗಳು ಬರ್ತಾನೇ ಇರ್ತವೆ. ಅಂತದ್ದೇ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ. ಹೌದು, ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಮದುವೆಯ ಮೆರವಣಿಗೆಯೊಂದರಲ್ಲಿ ವಿಶಿಷ್ಟ ರೀತಿಯಲ್ಲಿ ಕುಣಿಯುತ್ತಿರುವುದನ್ನು ಕಾಣಬಹುದು. ಹೀಗೆ ಕುಣಿಯುವಾಗ ಕುದುರೆಯೊಂದು ಕಿಕ್ ಕೊಟ್ಟಿದೆ. ಈ ಒಂದು ಕಿಕ್‌ಗೆ ಆತ ಅಲ್ಲೇ ಬಿದ್ದು ನೋವಿನಿಂದ ಒದ್ದಾಡಿದ್ದಾನೆ. View this post on Instagram A post shared by ✌️ i am a dreamer ✌️ (@iam_a_dreamer_5) ಈ ವೀಡಿಯೊವನ್ನು Instagram ನಲ್ಲಿ im_a_dreamer_5 ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ಜುಲೈ 8 ರಂದು ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದನ್ನು ನೋಡಿದವರು ತಮಾಷೆಯ ಕಾಮೆಂಟ್ ಮಾಡುತ್ತಿದ್ದಾರೆ. https://kannadanewsnow.com/kannada/bigg-news-farmers-note-how-to-get-diesel-subsidy-under-rythu-shakti-yojana-heres-the-information/ https://kannadanewsnow.com/kannada/breaking-news-first-monkeypox-case-detected-in-new-delhi-records-4th-case-in-the-country-fourth-moneybox-case-in-kerala/ https://kannadanewsnow.com/kannada/up-govt-transfers-hathras-sp-after-6-kanwar-devotees-mowed-down-by-truck/
ಬೆಂಗಳೂರು : 2022-23ರ ರಾಜ್ಯ ಬಜೆಟ್‌ನಲ್ಲಿ ರಾಜ್ಯದಲ್ಲಿ ಕೃಷಿ ಉತ್ಪಾದತೆಯನ್ನು ಹೆಚ್ಚಿಸಲು, ಕೃಷಿ ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು ಪ್ರತಿ ಎಕರೆಗೆ ರೂ. 250/- ಗಳಂತೆ ಗರಿಷ್ಟ 5 ಎಕರೆಗೆ ರೂ. 1250/- ರವರೆಗೆ ಡಿ.ಬಿ.ಟಿ (ನೇರ ನಗದು ವರ್ಗಾವಣೆ) ಮೂಲಕ ಡೀಸಲ್‌ಗೆ ಸಹಾಯಧನಕ್ಕಾಗಿ ಕೃಷಿ ಇಲಾಖೆ ವತಿಯಿಂದ “ರೈತ ಶಕ್ತಿ” ಯೋಜನೆಯಡಿ ಸೌಲಭ್ಯ ಪಡೆಯಲು ರೈತರು ಫ್ರೂಟ್ಸ್ ಪೋರ್ಟಲ್‌ನಲ್ಲಿ ನೋಂದಾಯಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. https://kannadanewsnow.com/kannada/breaking-news-first-monkeypox-case-detected-in-new-delhi-records-4th-case-in-the-country-fourth-moneybox-case-in-kerala/ ಈ ಯೋಜನೆಯಡಿ ಸೌಲಭ್ಯ ಪಡೆಯುವ ಯಾವುದೇ ರೈತರು ಪ್ರತ್ಯೇಕವಾಗಿ ವೈಯಕ್ತಿಕ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ, ಫ್ರೂಟ್ಸ್/FRUITS (Farmers Registration and Unified Beneficiary information System-ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) portal ನಲ್ಲಿನ ನೋಂದಣಿಯಂತೆ ರೈತರ ಹಿಡುವಳಿಯ ಆಧಾರದ ಮೇಲೆ ಪ್ರತಿಯೊಬ್ಬ ರೈತರಿಗೆ ಪ್ರತಿ ಎಕರೆಗೆ ರೂ. 250/- ರಂತೆ ಗರಿಷ್ಟ 5 ಎಕರೆಗೆ ರೂ. 1250/- ರವರೆಗೆ ಡೀಸೆಲ್…
ನವದೆಹಲಿ: ದೆಹಲಿಯಲ್ಲಿ ವರದಿಯಾದ ಮೊದಲ ಮಂಕಿಪಾಕ್ಸ್ ಪ್ರಕರಣ, ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ದೃಢಪಡಿಸಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ 31 ವರ್ಷದ ವ್ಯಕ್ತಿಯಾಗಿದ್ದು, ಜ್ವರ ಮತ್ತು ಚರ್ಮದ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ದೇಶದಲ್ಲಿ 4ನೇ ಕೇಸ್ ದಾಖಲು ದಾಖಲಾಗಿದೆ. ಪ್ರಸ್ತುತ ವ್ಯಕ್ತಿಯನ್ನು ದೆಹಲಿಯ ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ದಿನಗಳ ಹಿಂದೆ ಜ್ವರ ಮತ್ತು ದದ್ದುಗಳು ದೇಹದ ಮೇಲೆ ಬಂದವು, ನಂತರ ಅವರನ್ನು ದಾಖಲಿಸಲಾಯಿತು. ಕಳೆದ ಕೆಲವು ದಿನಗಳಲ್ಲಿ, ಆ ವ್ಯಕ್ತಿ ಹಿಮಾಚಲ ಪ್ರದೇಶದಿಂದ ಹಿಂದಿರುಗಿದ್ದಾನೆ. ಆದಾಗ್ಯೂ, ಅವರ ವಿದೇಶ ಪ್ರಯಾಣದ ಯಾವುದೇ ಇತಿಹಾಸವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಮಂಕಿಪಾಕ್ಸ್ ಒಂದು ವೈರಲ್ ಜೂನೋಟಿಕ್ ಕಾಯಿಲೆಯಾಗಿದ್ದು, ಕಡಿಮೆ ಕ್ಲಿನಿಕಲ್ ತೀವ್ರತೆಯನ್ನು ಹೊಂದಿದ್ದರೂ ಸಿಡುಬಿಗೆ ಹೋಲುವ ರೋಗಲಕ್ಷಣಗಳನ್ನು ಹೊಂದಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಇದು ಸಾಮಾನ್ಯವಾಗಿ ಎರಡು-ನಾಲ್ಕು ವಾರಗಳವರೆಗೆ ರೋಗಲಕ್ಷಣಗಳೊಂದಿಗೆ ಸ್ವಯಂ-ಸೀಮಿತ ಕಾಯಿಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ, ಸಾವಿನ ಅನುಪಾತವು ಮೂರು-ಆರು ಪ್ರತಿಶತದಷ್ಟು ಇದೆ…
ನವದೆಹಲಿ : ದೆಹಲಿಯಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದ್ದು, ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನಲ್ಲಿ ವ್ಯಕ್ತಿ ದಾಖಲಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ದೃಢಪಡಿಸಿದೆ. https://twitter.com/ANI/status/1551084248245104641 ಯಾವುದೇ ಪ್ರಯಾಣದ ಈಸ್ಟರಿ ಹೊಂದಿರದ 31 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಪತ್ತೆಯಾಗಿದೆ. ಇವರಿಗೆ ಜ್ವರ ಮತ್ತು ಚರ್ಮದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗುತ್ತಿದೆ.
ಕೊಪ್ಪಳ : ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಾನಾಪುರ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ ಎಂದು ಸಚಿವ ಹಾಲಪ್ಪ ಆಚಾರ್ ಮಾಹಿತಿ ನೀಡಿದ್ದಾರೆ. https://kannadanewsnow.com/kannada/chhattisgarh-cop-finds-%e2%82%b9-45-lakh-on-road-hands-it-over-at-police-station/ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಹಾಲಪ್ಪ ಅಚಾರ್, ಬಾನಾಪುರ ಗ್ರಾಮದಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ದೇವಪ್ಪ, ಗಿರಿಜಮ್ಮ, ಪಾರವ್ವ, ಶಾಂತವ್ವ, ಗಿರಿಜಮ್ಮ ಮೃತಪಟ್ಟಿದ್ದಾರೆ. ಮೃತಪಟ್ಟ ಕುಟುಂಬಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ಕುಕನೂರು ತಾಲೂಕಿನ ಬಾನಾಪುರ ಗ್ರಾಮದ ಬಳಿ ತಡರಾತ್ರಿ ಅಪಘಾತ ಸಂಭವಿಸಿದೆ. ಸ್ಕಾರ್ಪಿಯೋ ಕಾರಿನಲ್ಲಿದ್ದ ಐವರು ಸಾವನ್ನಪ್ಪಿದ್ದು, ನಾಲ್ವರಿಗೆ ಗಾಯವಾಗಿದೆ.
ಉತ್ತರ ಪ್ರದೇಶ: ಯುಪಿಯ ಹತ್ರಾಸ್ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಆರು ಕನ್ವರ್ ಯಾತ್ರಿಕರು ಸಾವನ್ನಪ್ಪಿದ ಘಟನೆ ಬಳಿಕ ಹತ್ರಾಸ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ)ಯನ್ನು ಉತ್ತರಪ್ರದೇಶ ಸರ್ಕಾರ ವರ್ಗಾವಣೆ ಮಾಡಿದೆ. https://kannadanewsnow.com/kannada/bigg-news-siddaramaiah-invited-to-contest-from-bagepalli-constituency/ ಅಲ್ಲಿನ ಎಸ್ಪಿ ವಿಕಾಸ್ ವೈದ್ಯ ಬದಲಿಗೆ ದೇವೇಶ್ ಪಾಂಡೆ ಅವರು ಹತ್ರಾಸ್ನ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಸದ್ಯ ವಿಕಾಸ್ ವೈದ್ಯ ಅವರನ್ನು ಪಿಎಸಿ ಮಿರ್ಜಾಪುರಕ್ಕೆ ಕಮಾಂಡೆಂಟ್ ಆಗಿ ವರ್ಗಾಯಿಸಲಾಗಿದೆ. ಕನ್ವರ್ ಭಕ್ತರು ಹೋಗುವ ದಾರಿಯಲ್ಲಿ ಯಾವುದೇ ಭಾರೀ ವಾಹನಗಳನ್ನು ಅನುಮತಿಸದಂತೆ ಸರ್ಕಾರ ಸೂಚನೆ ನೀಡಿತ್ತು. ಇದನ್ನು ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ವಿಕಾಸ್ ವೈದ್ಯ ವಿರುದ್ಧ ಕ್ರಮ ಕೈಗೊಂಡಿದೆ ಎನ್ನಲಾಗುತ್ತಿದೆ. ಶನಿವಾರ (ಜುಲೈ 23) ಬೆಳಗಿನ ಜಾವ ಹತ್ರಾಸ್ ಆಗ್ರಾ ರಸ್ತೆಯ ಬಧರ್ ಗ್ರಾಮದ ಬಳಿ ಎನ್ಹೆಚ್-93 ರ ಹತ್ರಾಸ್‌ನಲ್ಲಿರುವ ಸದಾಬಾದ್ ಪಿಎಸ್‌ನಲ್ಲಿ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಆರು ಕನ್ವರ್ ಯಾತ್ರಿಕರು ಸಾವನ್ನಪ್ಪಿದ್ದರು. ಮೃತಪಟ್ಟವರೆಲ್ಲ ಮಧ್ಯಪ್ರದೇಶದ ಗ್ವಾಲಿಯರ್‌ಗೆ ಮೂಲದವರು ಎಂದು ತಿಳಿದು ಬಂದಿದೆ. https://kannadanewsnow.com/kannada/bigg-breaking-news-covid-19-cases-rise-again-in-india-20279-cases-detected-in-24-hours/
ರಾಯ್‌ಪುರ(ಛತ್ತೀಸ್‌ಗಢ): 45 ಲಕ್ಷ ರೂ. ಹಣವಿರುವ ಇರುವ ಬ್ಯಾಗೊಂದು ಶನಿವಾರ ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಸಿಕ್ಕಿದ್ದು, ಆ ಬ್ಯಾಗನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿರುವ ಘಟನೆ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ನಡೆದಿದೆ. ನವ ರಾಯ್‌ಪುರದ ಕಯಾಬಂಧ ಪೋಸ್ಟ್‌ಗೆ ನೀಮಿಸಲಾದ ಟ್ರಾಫಿಕ್ ಕಾನ್‌ಸ್ಟೆಬಲ್ ನಿಲಂಬರ್ ಸಿನ್ಹಾ ಅವರು ನಿನ್ನೆ ಬೆಳಿಗ್ಗೆ ಮಾನಾ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಯೊಂದರಲ್ಲಿ ಬ್ಯಾಗ್ಅನ್ನು ಕಂಡುಕೊಂಡಿದ್ದಾರೆ. ನಂತ್ರ ಬ್ಯಾಗ್ಅನ್ನು ಪರಿಶೀಲಿಸಿದಾಗ ಅದರೊಳಗೆ ಸುಮಾರು 2000 ಮತ್ತು 500 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿವೆ. ಈ ವೇಳೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಿವಿಲ್ ಲೈನ್ಸ್ ಠಾಣೆಗೆ ಬ್ಯಾಗ್‌ಅನ್ನು ನೀಡಿದ್ದಾರೆ. ಅಲ್ಲಿ ಬ್ಯಾಗ್‌ಅಲ್ಲಿದ ಹಣವನ್ನು ಲೆಕ್ಕ ಹಾಕಿದಾಗ ಬರೋಬ್ಬರಿ 45 ಲಕ್ಷ ರೂ. ಹಣವಿತ್ತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಖನಂದನ್ ರಾಥೋರ್ ಹೇಳಿದ್ದಾರೆ. ಈ ಪ್ರಾಮಾಣಿಕತೆಗಾಗಿ ಸಿನ್ಹಾ ಅವರಿಗೆ ಹಿರಿಯ ಅಧಿಕಾರಿಗಳು ಬಹುಮಾನವನ್ನು ಘೋಷಿಸಿದ್ದಾರೆ. ಇನ್ನೂ, ನಗದು ಮೂಲವನ್ನು ಕಂಡುಹಿಡಿಯಲು ಸಿವಿಲ್ ಲೈನ್ಸ್ ಪೊಲೀಸರು…