Author: KNN IT TEAM

ಬೆಂಗಳೂರು : ದಕ್ಷಿಣ ಕರ್ನಾಟಕದ 14 ಜಿಲ್ಲೆಗಳ ಯುವಜನರಿಗೆ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ಆಗಿ ಕಾರ್ಯನಿರ್ವಹಿಸಲು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಸೇನಾ ನೇಮಕಾತಿ ರ್ಯಾಲಿಯೂ 2022ರ ಆಗಸ್ಟ್ 10 ರಿಂದ 22 ರವರೆಗೆ ಹಾಸನ ಜಿಲ್ಲೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. https://kannadanewsnow.com/kannada/2-karnataka-cops-among-3-killed-in-road-accident-in-andhra-pradeshs-chittoor/ ಅಗ್ನಿವೀರ್(ಸಾಮಾನ್ಯ ಕರ್ತವ್ಯ) (ಎಲ್ಲಾ ಶಸ್ತ್ರಾಸ್ತ್ರಗಳು)ಗೆ 10ನೇ ತರಗತಿ ಅಥವಾ ಮೆಟ್ರಿಕ್ ಒಟ್ಟು 45% ಅಂಕಗಳೊಂದಿಗೆ ಮತ್ತು ಪ್ರತಿ ವಿಷಯದಲ್ಲಿ 33% ಅಂಕಗಳನ್ನು ಪಡೆದಿರಬೇಕು, ಅಗ್ನಿವೀರ್(ತಾಂತ್ರಿಕ) (ಎಲ್ಲಾ ಶಸ್ತ್ರಾಸ್ತ್ರಗಳು)ಗೆ 10+2/ ಮಧ್ಯಂತರ ಪಾಸ್ ವಿಜ್ಞಾನದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್‌ನಲ್ಲಿ ಒಟ್ಟು 50% ಅಂಕಗಳೊಂದಿಗೆ ಮತ್ತು ಪ್ರತಿ ವಿಷಯದಲ್ಲಿ 40% ಅಂಕಗಳನ್ನು ಪಡೆದಿರಬೇಕು ಅಥವಾ 10+2/ NIOS ಯಾವುದೇ ಮಾನ್ಯತೆ ಪಡೆದ ರಾಜ್ಯ ಶಿಕ್ಷಣ ಮಂಡಳಿ ಅಥವಾ ಕೇಂದ್ರ ಶಿಕ್ಷಣ ಮಂಡಳಿಯಿಂದ ಮಧ್ಯಂತರ ಪರೀಕ್ಷೆ ಪಾಸ್ ಮತ್ತು NSQF ಮಟ್ಟ 4 ಅಥವಾ ಅದಕ್ಕಿಂತ ಹೆಚ್ಚಿನ ಅಗತ್ಯವಿರುವ ಕ್ಷೇತ್ರದಲ್ಲಿ ಕನಿಷ್ಠ ಒಂದು…

Read More

ಆಂಧ್ರಪ್ರದೇಶ : ಇಂದು ಮುಂಜಾನೆ ಆಂಧ್ರಪ್ರದೇಶದ ಚಿತ್ತೂರು ಪಟ್ಟಣದ ಹೊರವಲಯದಲ್ಲಿ ಕಾರು ನಿಯಂತ್ರಣ ತಪ್ಪಿ ಕಬ್ಬಿಣದ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕರ್ನಾಟಕದ ಇಬ್ಬರು ಪೊಲೀಸರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. https://kannadanewsnow.com/kannada/meghalaya-bjp-leaders-resort-raided-cops-call-it-brothel-73-arrested/ ಚಿತ್ತೂರು ಜಿಲ್ಲೆಯ ಪುತಲಪಟ್ಟು ಮಂಡಲಕ್ಕೆ ಕಾರು ತೆರಳುತತಿದ್ದ ವೇಳೆ ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಅಂಡರ್ ಪಾಸ್ ಸೇತುವೆ ಬಳಿ ಕಬ್ಬಿಣದ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ರಸ್ತೆಯ ಇನ್ನೊಂದು ಬದಿಯಲ್ಲಿ ಕಾರು ಪಲ್ಟಿಯಾಗಿದೆ ಎನ್ನಲಾಗುತ್ತಿದೆ. ಪೊಲೀಸರ ಪ್ರಕಾರ, ಕಾರಿನಲ್ಲಿ ಇಬ್ಬರು ಸಬ್‌ಇನ್‌ಸ್ಪೆಕ್ಟರ್‌ಗಳು ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳಿದ್ದರು. ಇವರಲ್ಲಿ ಇಬ್ಬರು ಕರ್ನಾಟಕದ ಕೋಲಾರ ಜಿಲ್ಲೆಯ ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರೆಲ್ಲ ಮುಳಬಾಗಲಿನಿಂದ ತಿರುಪತಿಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಮೃತ ಪೊಲೀಸರನ್ನು ಎಸ್‌ಐ ಅವಿನಾಶ್ ಮತ್ತು ಕಾನ್‌ಸ್ಟೆಬಲ್ ಅನಿಲ್ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟ ಮೂರನೇ ವ್ಯಕ್ತಿ ಕಾರು ಚಾಲಕನಾಗಿದ್ದಾನೆ. ಉಳಿದಂತೆ ಗಾಯಾಳುಗಳನ್ನು ವೆಲ್ಲೂರು ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. https://kannadanewsnow.com/kannada/governor-declares-emergency-over-wildfire-near-yosemite/

Read More

ಮೈಸೂರು : ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದೆಕೊಂಡಿರುವ ಮಾಜಿ ಸಚಿವರಾದ ಜಿ.ಟಿ.ದೇವೇಗೌಡರನ್ನು  ಸಾ.ರಾ. ಮಹೇಶ್ ಅವರು ಇಂದು ಭೇಟಿಯಾಗಿ ಮಾತುಕತೆ ನಡೆಸಿದ್ದು, ತೀವ್ರ ಕುತೂಹಲ ಮೂಡಿಸಿದೆ. https://kannadanewsnow.com/kannada/delhi-government-to-develop-two-food-hubs-generate-20-lakh-jobs-in-next-5-years-cm-arvind-kejriwal/ ಇಂದು ಜಿ.ಟಿ.ದೇವೇಗೌಡರನ್ನು ಭೇಟಿಯಾಗಿರುವ ಸಾ.ರಾ.ಮಹೇಶ್ ಸುಮಾರು 2 ಗಂಟೆಗಳ ಮಾತುಕತೆ ನಡೆಸಿದ್ದಾರೆ. ಈ ವೇಳೆ ಜೆಡಿಎಸ್ ಪಕ್ಷವನ್ನು ಬಿಡದಂತೆ ಸಾ.ರಾ.ಮಹೇಶ್ ಜಿ.ಟಿ. ದೇವೇಗೌಡರಿಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. https://kannadanewsnow.com/kannada/bigg-news-b-s-yediyurappa-should-withdraw-his-retirement-statement-mla-sr-yediyurappa-vishwanath/ ಜಿ.ಟಿ. ದೇವೇಗೌಡರು ಸದ್ಯ ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಕೆಲ ದಿನಗಳಲ್ಲಿ ತಮ್ಮ ರಾಜಕೀಯ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದರು. ಈ ಬೆನ್ನಲ್ಲೇ ಸಾ.ರಾ.ಮಹೇಶ್ ಜಿ.ಟಿ.ದೇವೇಗೌಡರನ್ನು ಭೇಟಿಯಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Read More

ನವದೆಹಲಿ: ಎಎಪಿ ನೇತೃತ್ವದ ದೆಹಲಿ ಸರ್ಕಾರವು ಮುಂದಿನ 5 ವರ್ಷಗಳಲ್ಲಿ ಯುವಕರಿಗೆ 20 ಲಕ್ಷ ಉದ್ಯೋಗಗಳನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರವು ರಾಷ್ಟ್ರ ರಾಜಧಾನಿಯ ಮಜ್ನು ಕೆ ತಿಲಾ ಪ್ರದೇಶ ಮತ್ತು ಚಾಂದಿನಿ ಚೌಕ್ ಪ್ರದೇಶದಲ್ಲಿ ಎರಡು ಆಹಾರ ಕೇಂದ್ರಗಳನ್ನು ಸ್ಥಾಪಿಸುತ್ತಿದೆ ಎಂದರು. https://kannadanewsnow.com/kannada/governor-declares-emergency-over-wildfire-near-yosemite/ ಮುಂದಿನ 5 ವರ್ಷಗಳಲ್ಲಿ ಉದ್ಯೋಗ ಸೃಷ್ಟಿಸಲು ನಾವು ನಿರ್ಧರಿಸಿದ್ದೇವೆ. ಹೀಗಾಗಿ ಭಾರತದ ಆಹಾರ ರಾಜಧಾನಿ ಎಂದು ಕರೆಯಲ್ಪಡುವ ದೆಹಲಿಯು ಪರಿಷ್ಕೃತ ಆಹಾರ ಕೇಂದ್ರಗಳನ್ನು ಪಡೆಯಲಿದೆ. ದೆಹಲಿಯು ಟಿಬೆಟಿಯನ್, ಪಂಜಾಬಿ ಆಹಾರದ ವಿವಿಧ ಮಾರುಕಟ್ಟೆಗಳನ್ನು ಹೊಂದಿದೆ. ನಾವು ಅವರ ಭೌತಿಕ ಮೂಲಸೌಕರ್ಯ, ರಸ್ತೆಗಳು, ವಿದ್ಯುತ್, ನೈರ್ಮಲ್ಯವನ್ನು ಸುಧಾರಿಸುತ್ತೇವೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. https://twitter.com/ANI/status/1551095709507928064 ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳು ಈ ಮಾರುಕಟ್ಟೆಗಳಿಗೆ ಭೇಟಿ ನೀಡಿ ದಿನನಿತ್ಯದ ಲೆಕ್ಕಾಚಾರವನ್ನು ಪತ್ತೆಹಚ್ಚಿದ್ದಾರೆ ಮತ್ತು ಈ ಎರಡು ಮಾರುಕಟ್ಟೆಗಳನ್ನು ಆಯ್ಕೆ ಮಾಡಿದ್ದಾರೆ ಎಂದು ಸಿಎಂ…

Read More

ಬೆಂಗಳೂರು : ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಚುನಾವಣಾ ನಿವೃತ್ತಿ ಹೇಳಿಕೆ ವಾಪಸ್ ಪಡೆಯಬೇಕು ಎಂದು ಶಾಸಕ ಎಸ್. ಅರ್. ವಿಶ್ವನಾಥ್ ಹೇಳಿದ್ದಾರೆ. https://kannadanewsnow.com/kannada/bigg-news-bjp-will-come-back-to-power-after-winning-150-seats-in-the-state-former-cm-bs-yediyurappa/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಚುನಾವಣಾ ನಿವೃತ್ತಿ ಹೇಳಿಕೆ ವಾಪಸ್ ಪಡೆಯಬೇಕು. ಪುತ್ರ ಬಿ.ವೈ. ವಿಜಯೇಂದ್ರರಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟರೂ ಸಮಸ್ಯೆಯಿಲ್ಲ.  ಬಿ.ಎಸ್. ಯಡಿಯುರಪ್ಪ ಯಾವುದೇ ಕ್ಷೇತ್ರವನ್ನು ಕೊಡಲು ಸಿದ್ಧರಿದ್ದೇವೆ. ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರು ನಿಂತರೂ ಗೆಲ್ಲಿಸುತ್ತೇವೆ ಎಂದು ಹೇಳಿದ್ದಾರೆ. https://kannadanewsnow.com/kannada/multi-speciality-hospital-to-be-set-up-in-uttara-kannada-district-soon-health-minister-sudhakar/ ಬಿ.ಎಸ್. ಯಡಿಯೂರಪ್ಪ ಚುನಾವಣಾ ನಿವೃತ್ತಿ ವಿಚಾರ ನನ್ನಲ್ಲಿ ಉತ್ಸಹ ಕಡಿಮೆ ಮಾಡಿದೆ. ಯಡಿಯೂರಪ್ಪ ಶ್ರೀಕೃಷ್ಣ, ಭೀಷ್ಮಾ ರೀತಿ ನಮ್ಮ ಜೊತೆಗೆ ಇರಬೇಕು. ಚುನಾವಣಾ ನಿವೃತ್ತಿ ಹೇಳಿಕೆ ಹಿಂಪಡೆದರೆ ಅದೇ ನನಗೆ ಬರ್ತಡೇ ಗಿಫ್ಟ್ ನೀಡಿದಂತಾಗುತ್ತದೆ ಎಂದರು.

Read More

ದೆಹಲಿ: ಶುಕ್ರವಾರ ಭಾರತದ 15 ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ʻದ್ರೌಪದಿ ಮುರ್ಮು(Droupadi Murmu)ʼ ಅವರಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin) ಅಭಿನಂದಿಸಿದ್ದಾರೆ. ʻನಿಮ್ಮ ನಾಯಕತ್ವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ರಷ್ಯಾ-ಭಾರತೀಯ ರಾಜಕೀಯ ಮಾತುಕತೆ ಮತ್ತು ಉತ್ಪಾದಕ ಸಹಕಾರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವಂತೆ ಆಶಿಸಿದ್ದಾರೆʼ. #Russia’n President Vladimir #Putin congratulated Draupadi Murmu on her election to the post of President of the Republic of #India ➡️ https://t.co/Py8ZGE7TTV pic.twitter.com/fISXGAmNcr — Russia in India 🇷🇺 (@RusEmbIndia) July 23, 2022 ʻನಾವು ಭಾರತದೊಂದಿಗೆ ವಿಶೇಷ ಸವಲತ್ತು ಹೊಂದಿರುವ ಕಾರ್ಯತಂತ್ರದ ಪಾಲುದಾರಿಕೆಯ ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ. ರಾಷ್ಟ್ರದ ಮುಖ್ಯಸ್ಥರಾಗಿ ನಿಮ್ಮ ಚಟುವಟಿಕೆಗಳು ನಮ್ಮ ಸ್ನೇಹಪರ ರಾಷ್ಟ್ರಗಳ ಪ್ರಯೋಜನಕ್ಕಾಗಿ ಮತ್ತು ಬಲವಾದ ಅಂತರಾಷ್ಟ್ರೀಯ ಸ್ಥಿರತೆ ಮತ್ತು ಭದ್ರತೆಯ ಹಿತಾಸಕ್ತಿಗಳಿಗಾಗಿ ವಿವಿಧ ಕ್ಷೇತ್ರಗಳಲ್ಲಿ ರಷ್ಯಾದ-ಭಾರತದ ರಾಜಕೀಯ ಮಾತುಕತೆ ಮತ್ತು ಉತ್ಪಾದಕ ಸಹಕಾರದ ಮತ್ತಷ್ಟು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದು…

Read More

ಬೆಂಗಳೂರು : ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. https://kannadanewsnow.com/kannada/1-dead-3-injured-after-3-storey-building-collapses-in-delhis-mustafabad/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಈಗಾಗಲೇ ಸಿಎಂ ಹುದ್ದೆಗಾಗಿ ಕಚ್ಚಾಟ ಶುರುವಾಗಿದೆ. ಯಾವುದೇ ಕಾರಣಕ್ಕೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಬಿಡಲ್ಲ. ರಾಜ್ಯದಲ್ಲಿ ಮತ್ತೆ ಭಾರತೀಯ ಜನಾತ ಪಾರ್ಟಿ 150 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. https://kannadanewsnow.com/kannada/meghalaya-bjp-leaders-resort-raided-cops-call-it-brothel-73-arrested/ ಇನ್ನು ಎಂಎಲ್ ಸಿ ಎಸ್.ಆರ್. ವಿಶ್ವನಾಥ್ ಅವರಿಗೆ ಮುಂದೆ ಒಳ್ಳೆಯ ಕಾಲ ಬರಲಿದೆ. ಎಸ್. ಆರ್. ವಿಶ್ವನಾಥ್ ಗೆ ಸಚಿವ ಸಂಪುಟ ಸೇರಬೇಕು. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯ ಮಾಡುತ್ತೇನೆ ಎಂದು ಹೇಳಿದ್ದಾರೆ. https://kannadanewsnow.com/kannada/bigg-news-sandalwood-actress-along-with-congress-leaders-lovey-dvvi-photos-go-viral-on-social-media/

Read More

ನವದೆಹಲಿ: ಇಲ್ಲಿನ ಮುಸ್ತಫಾಬಾದ್ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. https://twitter.com/ANI/status/1551059544436281345 ಈಗಾಗಲೇ ನಾಲ್ವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವವರಿಗಾಗಿ ನಡೆಯುತ್ತಿದ್ದ ಶೋಧ ಕಾರ್ಯಾಚರಣೆ ಮುಕ್ತಾಯಗೊಂಡಿದೆ ಎಂದು ದೆಹಲಿ ಅಗ್ನಿಶಾಮಕ ಸೇವಾ ನಿರ್ದೇಶಕ ಅತುಲ್ ಗರ್ಗ್ ತಿಳಿಸಿದ್ದಾರೆ. ಮುಂಜಾನೆ 5 ಗಂಟೆಗೆ ಈ ಘಟನೆ ವರದಿಯಾಗಿದ್ದು, ಮೂರು ಅಂತಸ್ತಿನ ಕಟ್ಟಡದ ಮೊದಲ ಮತ್ತು ಎರಡನೇ ಮಹಡಿ ಕುಸಿದಿದೆ. ಮುಸ್ತಫಾಬಾದ್‌ನ ಬಾಬು ನಗರ ಚಾನೆ ವಾಲಿ ಗಲಿ ಬಳಿ ಈ ಘಟನೆ ನಡೆದಿದೆ. https://kannadanewsnow.com/kannada/breaking-news-first-monkeypox-case-detected-in-new-delhi-records-4th-case-in-the-country-fourth-moneybox-case-in-kerala/

Read More

ಗುವಾಹಟಿ(ಮೇಘಾಲಯ): ಮೇಘಾಲಯದ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮತ್ತು ಮಾಜಿ ಉಗ್ರಗಾಮಿ ನಾಯಕ ಬರ್ನಾಡ್ ಎನ್ ಮರಕ್ ಅಲಿಯಾಸ್ ರಿಂಪು ವಿರುದ್ಧ ‘ಮಾನವ ಕಳ್ಳಸಾಗಾಣಿಕೆ’ ಪ್ರಕರಣ ದಾಖಲಾಗಿದ್ದು, ಪಶ್ಚಿಮ ಗರೋ ಹಿಲ್ ಜಿಲ್ಲೆಗಳ ತುರಾದಲ್ಲಿ ಮೇಘಾಲಯ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ʻತಾನು ಪರಾರಿಯಾಗಿಲ್ಲ. ಪೊಲೀಸ್ ತನಿಖೆಗೆ ಯಾವಾಗಲೂ ಸಹಕರಿಸುತ್ತೇನೆ ಎಂದು ಹೇಳಿಕೊಂಡಿರುವ ರಿಂಪು, ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ನನ್ನ ವಿರುದ್ಧ ಪೊಲೀಸ್ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ರಿಂಪು ಆರೋಪಿಸಿದ್ದಾರೆ. ನಿನ್ನೆಯ ದಾಳಿಯನ್ನು ಫೆಬ್ರವರಿಯಲ್ಲಿ ನಡೆದ ಕೆಲವು ಪೋಕ್ಸೊ ಪ್ರಕರಣಗಳೊಂದಿಗೆ ಜೋಡಿಸಲು ಯತ್ನಿಸುತ್ತಿದ್ದಾರೆ. ಹೀಗಾಗಿ ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಸಂಗ್ಮಾ ಅವರು ರಾಜಕೀಯವಾಗಿ ನೆಲೆಯನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ರಾಜಕೀಯ ಕಾರಣಗಳಿಂದ ನನ್ನನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ಹಳೆಯ ಪೋಕ್ಸೊ ಪ್ರಕರಣದಲ್ಲಿ ಆರೋಪಿಯೂ ಅಲ್ಲ ಎಂದು ಹೇಳಿಕೊಂಡಿದ್ದಾರೆ. https://kannadanewsnow.com/kannada/bigg-news-farmers-note-how-to-get-diesel-subsidy-under-rythu-shakti-yojana-heres-the-information/ ಈ ಬಗ್ಗೆ ಬಿಜೆಪಿಯ ಮೇಘಾಲಯ ಘಟಕವು ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಶುಕ್ರವಾರ ಮತ್ತು ಶನಿವಾರದ…

Read More

ಹರಪನಹಳ್ಳಿ : ಡೀಸೆಲ್ ಟ್ಯಾಂಕರ್ ವೊಂದು ಹೊತ್ತಿ ಉರಿದು ಬೈಕ್ ಸವಾರ ಸಜೀವ ದಹನವಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ರೈಲ್ವೆಗೇಟ್ ಬಳಿ ನಡದಿದೆ. https://kannadanewsnow.com/kannada/9-most-dangerous-effects-of-drinking-cold-water-immediately-after-food/ ಹರಪನಹಳ್ಳಿ ರೈಲ್ವೆ ಗೇಟ್ ಬಳಿ ಡೀಸೆಲ್ ಟ್ಯಾಂಕರ್ ಬೈಕ್ ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದಿದೆ. ಈ ವೇಳೆ ಬೆಂಕಿಯಿಂದಾಗಿ ಬೈಕ್ ಸವಾರ ಸಜೀವ ದಹನವಾಗಿದ್ದಾರೆ. ಟ್ಯಾಂಕರ್ ಚಾಲಕ ಲಾರಿಯಿಂದ ಹಾರಿ ಬಚಾವ್ ಆಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. 4 ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡುತ್ತಿದ್ದಾರೆ. ಘಟನಾ ಸ್ಥಳಕ್ಕೆ ಹರಪನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. https://kannadanewsnow.com/kannada/multi-speciality-hospital-to-be-set-up-in-uttara-kannada-district-soon-health-minister-sudhakar/

Read More