Author: KNN IT TEAM

ಬೆಳಗಾವಿ: ರಾಜ್ಯ ಸರ್ಕಾರದ ಸರ್ಕಾರಿ ಅಧಿಕಾರಿಯಾಗಿರುವಂತ ರಾಜಕುಮಾರ ಟಾಕಳೆ ವಿರುದ್ಧ, ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ಅತ್ಯಾಚಾರ, ಗರ್ಭಪಾತ, ಮೋಸದ ಆರೋಪ ಹೊರಿಸಿ, ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. https://kannadanewsnow.com/kannada/another-suspected-terrorist-arrested-in-bengaluru/ ನವ್ಯಶ್ರೀ ತನ್ನ ಕೈಬರಹದಲ್ಲೇ 12 ಪುಟಗಳ ದೂರನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ. ಪೊಲೀಸರಿಗೆ ನೀಡಿದಂತ ದೂರಿನಲ್ಲಿ ಟಾಕಳೆ ವಿರುದ್ಧ ಅತ್ಯಾಚಾರ, ಅಪಹರಣ, ಗರ್ಭಪಾತ, ಮೋಸ, ಮಹಿಳೆ ಮೇಲೆ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆ, ಗೌರವಕ್ಕೆ ಧಕ್ಕೆ ತರುವುದು ಹಾಗೂ ಖಾಸಗಿ ತನಕ್ಕೆ ಧಕ್ಕೆ ಆರೋಪ, ಲೈಂಗಿಕ ಪ್ರಚೋದನಕಾರಿ ವಿಡಿಯೋ ಹರಿಬಿಟ್ಟಿರುವ ಆರೋಪ ಮಾಡಲಾಗಿದೆ. https://kannadanewsnow.com/kannada/cricketer-karuna-jain-announces-retirement-from-all-forms-of-cricket/ ಕಾಂಗ್ರೆಸ್ ಯುವ ಮುಖಂಡೆ ನವ್ಯಶ್ರೀ ನೀಡಿರುವಂತ ದೂರಿನ ಆಧಾರದ ಮೇಲೆ ಬೆಳಗಾವಿಯ ಎಂಪಿಎಸಿ ಠಾಣೆಯ ಪೊಲೀಸರು ರಾಜಕುಮಾರ ಟಾಕಳೆ ವಿರುದ್ಧ ದೂರು ದಾಖಲಿಸಿಕೊಂಡು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.

Read More

ಬೆಂಗಳೂರು: ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ತನ್ನ ಚಿಕ್ಕಪ್ಪನ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದು, ಇದೀಗ ಈ ಇಬ್ಬರೂ ಪೊಲೀಸರ ಅತಿಥಿಯಾಗಿದ್ದಾರೆ. ಬಿಕಾಂ ವಿದ್ಯಾರ್ಥಿನಿ ದೀಕ್ಷಿತಾ ಮತ್ತು ವೈದ್ಯಕೀಯ ಓದುತ್ತಿರುವ ಮಧು ಅವರಿಗೆ ದೈನಂದಿನ ಖರ್ಚಿಗೆ ಹಣದ ಅಗತ್ಯವಿತ್ತು. ದೀಕ್ಷಿತಾ, ಪೀಣ್ಯ ಸಮೀಪದ ನೆಲಗದರನಹಳ್ಳಿಯಲ್ಲಿರುವ ತನ್ನ ಚಿಕ್ಕಪ್ಪ ತಿಮ್ಮೇಗೌಡನ ಮನೆಗೆ ಮಾಟಮಂತ್ರದ ಸಾಮಾಗ್ರಿಗಳಿಂದ ಹೆದರಿಸಿ ಕಳ್ಳತನ ಮಾಡುವ ಪ್ಲ್ಯಾನ್‌ ಮಾಡಿದ್ದಾಳೆ. ಅದರಂತೆಯೇ, ಜುಲೈ 6 ರಂದು ದೀಕ್ಷಿತಾ ಮತ್ತು ಮಧು ಪಿಪಿಇ ಕಿಟ್‌ಗಳನ್ನು ಹಾಕಿಕೊಂಡು ತಿಮ್ಮೇಗೌಡನ ಮನೆಗೆ ತೆರಳಿ ಮಾಟಮಂತ್ರ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ಎಸೆದಿದ್ದರು. ಇದನ್ನು ಕಂಡ ತಿಮ್ಮೇಗೌಡ ಗಾಬರಿಗೊಂಡು ಮನೆಯಿಂದ ಹೊರಗೆ ಓಡಿ ಸಂಬಂಧಿಕರನ್ನು ಭೇಟಿಯಾಗಲು ಹೊರಟುಹೋದರು. ಆತ ಮನೆಯಿಂದ ಹೊರ ಹೋದ ಸಮಯವನ್ನು ಲಾಭ ಪಡೆದ ಇವರು, ಮನೆಗೆ ನುಗ್ಗಿ ನುಗ್ಗಿ 200 ಗ್ರಾಂ ಚಿನ್ನಾಭರಣ ಹಾಗೂ 90 ಸಾವಿರ ನಗದು ದೋಚಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿದಾಗ, ಆರೋಪಿಗಳು ಪೊಲೀಸರ ಬಲೆಗೆ ಸಿಲಿದ್ದು,…

Read More

ಬೆಂಗಳೂರು: ನಗರದಲ್ಲಿ ದಿನೇ ದಿನೇ ಶಂಕಿತ ಉಗ್ರಹ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಹಲವು ಉಗ್ರರರನ್ನು ಬಂಧಿಸಿದ್ದಂತ ಪೊಲೀಸರು, ಇದೀಗ ನಗರದಲ್ಲಿ ನೆಲೆಸಿದ್ದಂತ ಮತ್ತೊಬ್ಬ ಉಗ್ರನನ್ನು ಎಡೆಮುರಿ ಕಟ್ಟಿ ಬಂಧಿಸಿದ್ದಾರೆ. https://kannadanewsnow.com/kannada/on-an-average-70-people-in-bengaluru-are-bitten-by-stray-dogs-every-day/ ಕಳೆದ ರಾತ್ರಿ 8 ಗಂಟೆಯ ಸುಮಾರಿಗೆ ಖಚಿತ ಮಾಹಿತಿಯ ಮೇರೆಗೆ ಸಿಸಿಬಿಯ 30ಕ್ಕೂ ಹೆಚ್ಚು ಪೊಲೀಸರು ಲಷ್ಕರ್ ಶಂಕಿತ ಉಗ್ರ ಇದ್ದಂತ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಪುಡ್ ಡಿಲವರಿ ಮಾಡುವಂತ ಯುವಕರ ಜೊತೆಗೆ ನೆಲೆಸಿದ್ದಂತ ಅಸ್ಸಾಂ ಮೂಲಕ ಶಂಕಿತ ಉಗ್ರ ಅಖ್ತರ್ ಹುಸೇನ್ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. https://kannadanewsnow.com/kannada/cricketer-karuna-jain-announces-retirement-from-all-forms-of-cricket/ ಈ ಸಂಬಂಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಶಂಕಿತ ಉಗ್ರನ ವಿಚಾರಣೆ ನಡೆಯುತ್ತಿದೆ. ಈ ಸಂಬಂಧ ಮತ್ತಷ್ಟು ಮಾಹಿತಿ ತಿಳಿದು ಬರಬೇಕಿದೆ.

Read More

ಬೆಂಗಳೂರು: ದಿನೇ ದಿನೇ ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ( Street Dog ) ಹಾವಳಿ ಹೆಚ್ಚಾಗುವಂತೆ ಆಗಿದೆ. ಪಾಲಿಕೆ ಮೂಲಕಗಳ ಪ್ರಕಾರ ನಿತ್ಯ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 70ಕ್ಕೂ ಹೆಚ್ಚು ಮಂದಿ ಮೇಲೆ ಬೀದಿ ನಾಯಿಗಳು ದಾಳಿ ಮಾಡುತ್ತಿವೆ ಎನ್ನಲಾಗಿದೆ. ಈ ಮೂಲಕ ಬೆಂಗಳೂರಿಗರೇ ಬೆಚ್ಚಿ ಬೀಳುವಂತೆ ಮಾಡಿದೆ. https://kannadanewsnow.com/kannada/cricketer-karuna-jain-announces-retirement-from-all-forms-of-cricket/ ಪಾಲಿಕೆಯ ಮೂಲಗಳ ಪ್ರಕಾರ 2020ರ ಜನವರಿಯಿಂದ ಈವರೆಗೆ ಸುಮಾರು 52 ಸಾವಿರಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಇನ್ನೂ 2020ರ ಫೆಬ್ರವರಿಯಲ್ಲಿ ನಾಯಿಯ ಕಡಿತಕ್ಕೆ ಒಳಗಾದಂತ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. https://kannadanewsnow.com/kannada/for-the-first-time-in-the-country-punyakoti-adoption-scheme-will-be-launched-in-the-state-on-july-28/ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳಲ್ಲಿ 15 ಸಾವಿರಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಇದರಿಂದ ವೃದ್ಧರು, ಮಕ್ಕಳು ಮನೆಯಿಂದ ಹೊರ ಬರಲು ಆತಂಕ ಪಡುವಂತ ಪರಿಸ್ಥಿತಿ ಇದೆ. ಇದೇ ಕಾರಣದಿಂದಾಗಿ ನಾಯಿಗಳ ಶಸ್ತ್ರಚಿಕಿತ್ಸೆ ಕಾರ್ಯ ಜೋರಾಗಿ ನಡೆಯುತ್ತಿದ್ದು 8 ವಲಯಗಳಲ್ಲಿ ನಿತ್ಯ 800 ನಾಯಿಗಳಿಗೆ ಶಸ್ತ್ರ ಚಿಕಿತ್ಸೆ…

Read More

ಚುರು (ರಾಜಸ್ಥಾನ): ಇಲ್ಲಿನ ಸಿದ್ಧಮುಖ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಅಕ್ರಮ ಮದ್ಯವನ್ನು ಮಾರಾಟ ಮಾಡದಂತೆ ಹೇಳಿದಕ್ಕೆ 34 ವರ್ಷದ ವ್ಯಕ್ತಿಯೊಬ್ಬನನ್ನು ಥಳಿಸಿ, ಆತನ ಖಾಸಗಿ ಭಾಗಕ್ಕೆ ಬರೆ ಹಾಕಿ ದುಷ್ಕೃತ್ಯ ಮೆರೆದಿರುವ ಘಟನೆ ನಡೆದಿದೆ. ಗ್ರಾಮದ ಧಾರ್ಮಿಕ ಸ್ಥಳದ ಬಳಿ ಕೆಲವರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಈ ವ್ಯಕ್ತಿ ಮದ್ಯ ಮಾರಾಟ ಮಾಡದಂತೆ ತಿಳಿಸಿದ್ದಾರೆ. ಇದರಿಂದ ಕೋಪಗಂಡ ಅವರು ವ್ಯಕ್ತಿಗೆ ಥಳಿಸಿದ್ದಲ್ಲದೇ, ಅವನನ್ನು ವಿವಸ್ತ್ರಗೊಳಿಸಿ, ಆತನ ಖಾಸಗಿ ಭಾಗಕ್ಕೆ ಬರೆ ಹಾಕಿದ್ದಾರೆ. ಈ ವೇಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವನನ್ನು ಸ್ಥಳೀಯರು ಆಂಬ್ಯುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಯ ತುರ್ತು ವಿಭಾಗಕ್ಕೆ ದಾಖಲಿಸಿದರು. ಇದೀಗ ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ವ್ಯಕ್ತಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ ಘಟನೆ ಬಯಲಿಗೆ ಬಂದ ಬಳಿಕವೂ ಆರೋಪಿಗಳು ಪೊಲೀಸ್ ಕಸ್ಟಡಿಯಿಂದ ದೂರವಾಗಿದ್ದಾರೆ. ಘಟನೆಯ ನಂತರ ಹೆದರಿದ ವ್ಯಕ್ತಿ ಕುಟುಂಬ ಸಮೇತ ಇಲ್ಲಿಂದ ದೂರ ಹೋಗುವುದಾಗಿ ಹೇಳಿದ್ದಾನೆ.…

Read More

ಬೆಂಗಳೂರು: ಭಾರತ ಮಹಿಳೆಯ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪ್ ಕರುಣಾ ಜೈನ್ ( former Indian women’s team wicketkeeper, Karuna Jain ) ಅವರು, ಕ್ರಿಕೆಟ್ ನ ಎಲ್ಲಾ ಮಾದರಿಗಳಿಗೆ ಭಾನುವಾರ ನಿವೃತ್ತಿಯನ್ನು ಘೋಷಿಸಿದ್ದಾರೆ. https://kannadanewsnow.com/kannada/heavy-to-very-heavy-rainfall-in-these-districts-of-the-state-today-tomorrow-weather-department-forecast/ ಈ ಕುರಿತಂತೆ ಮಾಹಿತಿ ನೀಡಿರುವಂತ ಅವರು, ತುಂಬಾ ಸಂತಸ ಮತ್ತು ತೃಪ್ತಿಯ ಭಾವನೆಯೊಂದಿಗೆ ಕ್ರಿಕೆಟ್ ನ ಎಲ್ಲಾ ಪ್ರಕಾರಗಳಿಂದ ನಿವೃತ್ತಿ ಪ್ರಕಟಿಸುತ್ತಿದ್ದೇನೆ. ಅಲ್ಲದೇ ಆಟಕ್ಕೆ ಮರಳಿ ಕೊಡುಗೆ ನೀಡಲು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. https://kannadanewsnow.com/kannada/for-the-first-time-in-the-country-punyakoti-adoption-scheme-will-be-launched-in-the-state-on-july-28/ ಅಂದಹಾಗೇ ಬೆಂಗಳೂರು ಮೂಲಕ ಕರುಣಾ ಜೈನ್ ವೃತ್ತಿ ಬದುಕಿನಲ್ಲಿ ಭಾರತ, ಕರ್ನಾಟಕ, ಪುದುಚೇರಿ ಮತ್ತು ದಕ್ಷಿಣ ವಲಯ ತಂಡಗಳನ್ನು ಪ್ರತಿನಿಧಿಸಿದ್ದಾರೆ. 2005ರ ನವೆಂಬರ್ ನಲ್ಲಿ ದಿಲ್ಲಿಯಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಅವರು, 5 ಟೆಸ್ಟ್ ಪಂದ್ಯಗಳನ್ನಾಡಿದ್ದು 195 ರನ್ ಗಳಿಸಿದ್ದಾರೆ. 44 ಏಕದಿನ ಪಂದ್ಯಗಳಲ್ಲಿ 987 ರನ್ ಕಲೆ ಹಾಕಿದ್ದಾರೆ.

Read More

ಬೆಂಗಳೂರು: ಇಂದು ಮತ್ತು ನಾಳೆ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ ( Heavy Rain ) ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ( Weather department forecast ) ನೀಡಿದೆ. https://kannadanewsnow.com/kannada/medicines-needed-to-treat-cancer-and-diabetes-are-70-per-cent-cheaper/ ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ್ದು, ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮುಂಗಾರು ತುಸು ದುರ್ಬಲಗೊಂಡಿದ್ದು, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಚುರುಕುಗೊಂಡಿದೆ ಎಂದು ತಿಳಿಸಿದೆ. https://kannadanewsnow.com/kannada/for-the-first-time-in-the-country-punyakoti-adoption-scheme-will-be-launched-in-the-state-on-july-28/ ಜುಲೈ.25 ಮತ್ತು 26ರಂದು ಕರಾವಳಿ ಜಿಲ್ಲೆಗಳಾದಂತ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಾದಂತ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

Read More

ಬೆಂಗಳೂರು: ರಾಜ್ಯದ ಗೋಶಾಲೆಗಳಲ್ಲಿರುವ ಜಾನುವಾರುಗಳನ್ನು ಸಾರ್ವಜನಿಕರು ಮತ್ತು ಖಾಸಗಿ ಸಂಸ್ಥೆಗಳು ದತ್ತು ತೆಗೆದುಕೊಳ್ಳುವದನ್ನು ಪ್ರೋತ್ಸಾಹಿಸಲು ರಾಷ್ಟ್ರದಲ್ಲೇ ಮೊದಲ ಬಾರಿಗೆ ಪುಣ್ಯಕೋಟಿ ದತ್ತು ಯೋಜನೆಗೆ ಜುಲೈ.28ಕ್ಕೆ ಚಾಲನೆ ನೀಡಲಾಗುತ್ತದೆ. https://kannadanewsnow.com/kannada/president-ram-nath-kovind-to-address-the-nation/ ಈ ಕುರಿತಂತೆ ಮಾಹಿತಿ ನೀಡಿದಂತ ಪಶು ಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಣ್ಯಕೋಟಿ ದತ್ತು ಯೋಜನೆ ( ಅಡಾಪ್ಟ್) ಪೋರ್ಟಲ್ ಅನ್ನು ಜುಲೈ.28ಕ್ಕೆ ಉದ್ಘಾಟಿಸಲಿದ್ದಾರೆ. ಈ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಸರ್ಕಾರಿ ಅಥವಾ ಖಾಸಗಿ ಸಾರ್ವಜನಿಕರು ಗೋಶಾಲೆಗಳಲ್ಲಿರುವ ಜಾನುವಾರುಗಳನ್ನು ವಾರ್ಷಿಕ ತಲಾ 11 ಸಾವಿರ ರೂ ದೇಣಿಗೆ ನೀಡುವ ಮೂಲಕ ದತ್ತು ಪಡೆಯಬಹುದಾಗಿ ಎಂದರು. https://kannadanewsnow.com/kannada/there-is-a-heated-debate-on-retirement-in-state-politics-former-minister-says-there-will-be-no-retirement-even-in-92/ ಅಂದಹಾಗೇ ರಾಜ್ಯದಲ್ಲೇ ಮೊದಲ ಬಾರಿಗೆ ವಿಶಿಷ್ಟ ರೀತಿಯ ಗೋ ದತ್ತು ಯೋಜನೆ ಇದಾಗಿದೆ. ಪ್ರತಿ ಒಂದು ಲಕ್ಷ ಜಾನುವಾರುಗಳಿಗೆ ಒಂದು ಸಂಚಾರಿ ಚಿಕಿತ್ಸಾ ವಾಹನ ವ್ಯವಸ್ಥೆಯಿದೆ. ವಾರ್ಷಿಕ 11 ಸಾವಿರ ರೂಪಾಯಿ ಪಾವತಿಸಿ, ಸಾರ್ವಜನಿಕರು, ಖಾಸಗಿಯವರು ಗೋವನ್ನು ದತ್ತು ಪಡೆಯಬಹುದಾಗಿದೆ.

Read More

ನವದೆಹಲಿ: ಕ್ಯಾನ್ಸರ್, ಮಧುಮೇಹ ಮತ್ತು ಹೃದ್ರೋಗಗಳಂತಹ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳ ಬೆಲೆಯಲ್ಲಿ ( Medicine Price ) ಕಡಿತವನ್ನು ಕೇಂದ್ರ ಸರ್ಕಾರ ಘೋಷಿಸುವ ಸಾಧ್ಯತೆಯಿದೆ. ಇದಕ್ಕಾಗಿ ಸರ್ಕಾರ ಕೆಲವು ಪ್ರಸ್ತಾಪಗಳನ್ನು ಸಿದ್ಧಪಡಿಸಿದೆ, ಆದರೆ ಘೋಷಣೆಯ ಬಗ್ಗೆ ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಮೂಲಗಳು ತಿಳಿಸಿವೆ. https://kannadanewsnow.com/kannada/sslc-exam-question-paper-format-changed-exam-to-be-tough/ ಕೆಲ ಮಾಧ್ಯಮಗಳ ಪ್ರಕಾರ ವರದಿಯ ಪ್ರಕಾರ, “ನಿರ್ಣಯವನ್ನು ಅಂಗೀಕರಿಸಿದ ನಂತರ ಬೆಲೆಗಳನ್ನು ಶೇಕಡಾ 70 ರಷ್ಟು ಕಡಿತಗೊಳಿಸಲಾಗುವುದು. ಪ್ರಸ್ತುತ ವ್ಯಾಪಕ ಚಲಾವಣೆಯಲ್ಲಿರುವ ಔಷಧಿಗಳನ್ನು ಸೇರಿಸಲು ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿ (ಎನ್ಎಲ್ಇಎಂ), 2015 ಅನ್ನು ಪರಿಷ್ಕರಿಸಲು ಕೇಂದ್ರವು ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ರೋಗಿಗಳು ದೀರ್ಘಕಾಲದವರೆಗೆ ಬಳಸುವ ಔಷಧಗಳ ಮೇಲಿನ ಹೆಚ್ಚಿನ ವ್ಯಾಪಾರದ ಮಾರ್ಜಿನ್ ಅನ್ನು ಮಿತಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಜುಲೈ 26 ರಂದು ಫಾರ್ಮಾ ಉದ್ಯಮದ ಪ್ರತಿನಿಧಿಗಳೊಂದಿಗೆ ಅಂತಿಮ ಪ್ರಸ್ತಾಪದ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದಾರೆ. https://kannadanewsnow.com/kannada/rashmika-mandanna-becomes-mp-from-karnataka-says-noted-astrologer-venuswamy/

Read More

ಬೆಂಗಳೂರು: 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷಾ ( SSLC Exam 2022 ) ಪ್ರಶ್ನೆ ಪತ್ರಿಕೆ ಸ್ವರೂಪವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದ್ದು, ಕೊರೋನಾ ವೇಳೆ ಇದ್ದ ಸರಳತೆಯ ಪ್ರಮಾಣ ಕೈಬಿಟ್ಟು, ಕಠಿಣ ಪ್ರಮಾಣದ ಪ್ರಶ್ನೆಗಳನ್ನು ಹೆಚ್ಚಿಸಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಕಠಿಣವಾಗಿರಲಿದೆ. https://kannadanewsnow.com/kannada/do-you-know-what-the-leader-of-the-opposition-said-at-the-book-release-function-of-siddaramaiahs-governance-policy-decisions/ ಈ ಸಂಬಂಧ ಪ್ರಶ್ನೆ ಪತ್ರಿಕೆ ಸ್ವರೂಪ ಬದಲಿಸಿದ ಮಾಹಿತಿ ಬಿಡುಗಡೆ ಮಾಡಿದೆ. ಅದರಂತೆ ಈ ಬಾರಿ ಸುಲಭ ಪ್ರಶ್ನೆ ಶೇ.30, ಸಾಧಾರಣ ಪ್ರಶ್ನೆ ಶೇ.50, ಕಠಿಣ ಪ್ರಶ್ನೆ ಶೇ.20 ಸೇರಿದಂತೆ ಒಟ್ಟು 100 ಅಂಕಗಳಿಗೆ ಸರಿಸಮವಾಗಿ ಪ್ರಶ್ನೆ ಪತ್ರಿಕೆ ರೂಪಿಸಿದೆ. https://kannadanewsnow.com/kannada/isc-class-12th-results-declared/ ಕಳೆದ ಎರಡು ವರ್ಷ ಕೊರೋನಾ ಕಾರಣಕ್ಕೆ ಸರಳವಾದ ಪ್ರಶ್ನೆ ಪತ್ರಿಕೆ ಜತೆಗೆ ಬಹುಆಯ್ಕೆ ಮಾದರಿಯ ಪ್ರಶ್ನೆಗಳನ್ನು ನೀಡಿತ್ತು. ಆದ್ರೇ ಮುಂದಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಈ ರೀತಿ ಪ್ರಶ್ನೆ ಪತ್ರಿಕೆ ಸುಲಭವಾಗಿರುವುದಿಲ್ಲ.…

Read More