Subscribe to Updates
Get the latest creative news from FooBar about art, design and business.
Author: KNN IT TEAM
ಜಮ್ಮು: ಗಡಿ ಭದ್ರತಾ ಪಡೆ (BSF) ಸಬ್ ಇನ್‌ಸ್ಪೆಕ್ಟರ್ ಇಂದು ಇಲ್ಲಿನ ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿನ ಪೋಸ್ಟ್‌ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಿಗ್ಗೆ 6.35 ರ ಸುಮಾರಿಗೆ ಕಿರಿಯ ಶ್ರೇಣಿಯ ಸೈನಿಕನೊಬ್ಬ ತನ್ನ ಕೋಣೆಗೆ ಹೋದಾಗ ರಾಮ್‌ದೇವ್ ಸಿಂಗ್ ಸತ್ತು ಬಿದ್ದಿರುವುದು ಕಂಡುಬಂದಿದೆ. ಅದೇ ಸ್ಥಳದಲ್ಲಿ ಆತ್ಮಹತ್ಯೆಗೆ ಬಳಸಿದ ಆಯುಧ ಪತ್ತೆಯಾಗಿದೆ. ಅರಾಮ್‌ದೇವ್ ಸಿಂಗ್ ರಾಜಸ್ಥಾನದ ಸಿಕರ್ ಜಿಲ್ಲೆಯವರು. ಇವರು 12 ನೇ ಬೆಟಾಲಿಯನ್‌ಗೆ ಸೇರಿದವರು ಮತ್ತು ಬಿಎಸ್‌ಎಫ್‌ನ ತುಕಡಿಗೆ ಕಮಾಂಡರ್ ಆಗಿದ್ದರು. ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. https://kannadanewsnow.com/kannada/india-reports-16866-fresh-covid-cases-41-deaths-in-24-hours/ https://kannadanewsnow.com/kannada/4-1-magnitude-earthquake-jolts-nepal/ https://kannadanewsnow.com/kannada/rashmika-mandanna-to-bid-adieu-to-film-industry-soon-entry-into-politics-famous-astrologer-predicts-surprise/
ಮೂಲ ಕೊಳ್ಳೇಗಾಲದ ವಂಶಪಾರಂಪರಿಕ ಜ್ಯೋತಿಷ್ಯರು, ಶ್ರೀ ಚೌಡೇಶ್ವರಿ ದೇವಿ,ರಕ್ತೇಶ್ವರಿ, ಸ್ಮಶಾನಕಾಳಿ, ಅಘೋರಿ ಸ್ಮಶಾನತಾರ ದೇವತೆ, ಕಾಡುದೇವರ ಆರಾಧಕರು, ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಕೊಳ್ಳೇಗಾಲದ ಮಹಾಕಾಳಿ ಮಂತ್ರ ಶಕ್ತಿಯಿಂದ ಕೇವಲ 4 ದಿನದಲ್ಲಿ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ. Call/WhatsApp Ph:- 9480512091 ಪ್ರಧಾನ ಗುರುಗಳು ಪಂಡಿತ್: ಶ್ರೀ ವಿನಯ್ ಕುಮಾರ್ ಶಾಸ್ತ್ರಿ ಗಳು ರಾಜ್ಯ ಹಾಗೂ ಹೊರರಾಜ್ಯದ ಜನರ ಸಮಸ್ಯೆಗಳಿಗೆ ಪರಿಹಾರ ನೀಡಿರುವ ಏಕೈಕ ಮಾಂತ್ರಿಕರು ನಿಮ್ಮ ಸಮಸ್ಯೆಗಳನ್ನು ಅಷ್ಟಮಂಗಲ ಪ್ರಶ್ನೆ, ಆರೂಢ ಪ್ರಶ್ನೆ, ತಾಂಬೂಲ ಪ್ರಶ್ನೆ, ದೈವ ಪ್ರಶ್ನೆ, ಕವಡೆ ಪ್ರಶ್ನೆ ಮುಖಲಕ್ಷಣ, ಜನ್ಮ ದಿನಾಂಕ, ಹಸ್ತರೇಖೆ, ಪಂಚಪಕ್ಷಿ, ರಮಲ ಶಾಸ್ತ್ರ ಮೂಲಕ ಪರಿಶೋದಿಸಿ ನೋಡುತ್ತಾರೆ. ನಿಮ್ಮ ಜೀವನದ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವಿವಾಹ ವಿಳಂಬ , ಮಾಟ ಮಂತ್ರ, ಶತ್ರುಕಾಟ , ಸ್ತ್ರೀ-ವಶೀಕರಣ, ಪುರುಷ-ವಶೀಕರಣ,ಅತ್ತೆ-ಸೊಸೆ ಕಿರಿಕಿರಿ, ಸಂತಾನ ಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಸಾಲ ಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ,…
ನವದೆಹಲಿ: ರಾಷ್ಟ್ರಪತಿ ಭವನಕ್ಕೆ ದ್ರೌಪದಿ ಮುರ್ಮು ಆಗಮಿಸಿದ್ದು, ನಿರ್ಗಮಿತ ರಾಮನಾಥ್ ಕೋವಿಂದ್ ಭೇಟಿಯಾಗಿ, ನೂತನವಾಗಿ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರಿಗೆ ಶುಭ ಕೋರಿದರು. https://twitter.com/ANI/status/1551416595268141056?s=20&t=uoP_hS1Q3XV6Kte-YOprng ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಅವರ ಪತ್ನಿ ಸವಿತಾ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರಿಗೆ ಶುಭ ಕೋರಿದರು. https://twitter.com/ANI/status/1551416009441296384?s=20&t=uoP_hS1Q3XV6Kte-YOprng
ಯುನೈಟೆಡ್ ಸ್ಟೇಟ್ಸ್ : ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚಿನಿಂದಾಗಿ ಸಾವಿರಾರು ಎಕರೆಗಳಷ್ಟು ಅರಣ್ಯ ಸುಟ್ಟು ಭಸ್ಮವಾಗಿದೆ. ಇನ್ನು ಅಲ್ಲಿದ್ದಂತಹ ಜನರನ್ನು ಸ್ಥಳಾಂತರ ಮಾಡಲಾಗಿದೆ. ಅಮೆರಿಕಾದಲ್ಲಿ ಈಗಾಗಲೇ ದಾಖಲೆಯ ತಾಪಮಾನ ಏರಿಕೆಯಾಗುತ್ತಿದೆ. ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನದ ಬಳಿ ಶುಕ್ರವಾರ ಸಂಭವಿಸಿದ ಬೆಂಕಿಯನ್ನು ನಂದಿಸಲು 17 ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡಿಕೊಳ್ಳಲಾಗಿದ್ದು, ಸುಮಾರು 2,000 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಕ್ಯಾಲಿಫೋರ್ನಿಯಾ ಅರಣ್ಯ ಮತ್ತು ಅಗ್ನಿಶಾಮಕ ಸಂರಕ್ಷಣಾ ಇಲಾಖೆ (CAL FIRE) ವರದಿಯಲ್ಲಿ ತಿಳಿಸಿದೆ. ಸತತ ಎರಡು ದಿನಗಳಿಂದ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಇದರ ಬೆಂಕಿಯ ಜ್ವಾಲೆಗೆ ಈಗಾಗಲೇ 14,200 ಎಕರೆ (5,750 ಹೆಕ್ಟೇರ್) ಗಿಂತ ಹೆಚ್ಚು ನಾಶವಾಗಿದೆ.ಘಟನೆಯಲ್ಲಿ ಅನೇಕ ವಾಹನಗಳು ನಾಶವಾಗಿವೆ. ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ. ಇನ್ನು ಸಮೀಪದಲ್ಲಿದ್ದಂತಹ ಸುಮಾರು 6,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು CAL FIRE ಅಧಿಕಾರಿ ಹೆಕ್ಟರ್ ವಾಸ್ಕ್ವೆಜ್ ಹೇಳಿದ್ದಾರೆ. ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್ ಶನಿವಾರ ಮಾರಿಪೋಸಾ ಕೌಂಟಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ಕ್ಯಾಲಿಫೋರ್ನಿಯಾ…
ಡೆಹ್ರಾಡೂನ್: ನಾವು ಸಾಮಾನ್ಯವಾಗಿ ಕಾಮನಬಿಲ್ಲನ್ನು ನೋಡಿರುತ್ತೇವೆ. ಆದ್ರೆ, ಸೂರ್ಯನ ಸುತ್ತ ಕಾಮನಬಿಲ್ಲು ಮೂಡಿರುವುದನ್ನು ಎಂದಾದರೂ ನೋಡಿಲ್ಲದಿದ್ದರೆ ಅಂತಹ ಅದ್ಬುತ ದೃಶ್ಯದ ಚಿತ್ರಗಳು ಇಲ್ಲಿವೆ ನೋಡಿ… ಡೆಹ್ರಾಡೂನ್‌ನಲ್ಲಿ ಭಾನುವಾರ ಮಧ್ಯಾಹ್ನ ಈ ಅದ್ಭುತ ಗೋಚರವಾಗಿದೆ. ಸೂರ್ಯನ ಸುತ್ತ ಕಾಮನಬಿಲ್ಲಿನ ಆಕಾರದ ಮಾದರಿ ಸೃಷ್ಟಿಯಾಗಿತ್ತು. ಇದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಅಲ್ಲಿಯ ಜನ ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. Sun halos are generally considered rare and are formed by hexagonal ice crystals refracting light in the sky — 22 degrees from the sun. This is also commonly called a 22 degree halo. Today #SunHalo in #Dehradun pic.twitter.com/5W5EktXS55 — Jyotsana Pradhan Khatri (@jyotsana_khatri) July 24, 2022 ಅಪರೂಪದ ಆಪ್ಟಿಕ್ ವಿದ್ಯಮಾನ, ಸೂರ್ಯನ ಪ್ರಭಾವಲಯ 22 ಡಿಗ್ರಿ ತ್ರಿಜ್ಯದಲ್ಲಿ ಈ ಬೆಳಕು ಮೂಡಿದೆ. ಇದು ನೋಡಲು ಮಳೆಬಿಲ್ಲಿನಂತೆ…
ಬೆಂಗಳೂರು: ರಾಜ್ಯ ಸರ್ಕಾರದಿಂದ ಡಿಜಿಟಲ್ ಕ್ರಾಂತಿ ಉಂಟುಮಾಡುವ ಸಲುವಾಗಿ ಅನೇಕ ಇಲಾಖೆಯನ್ನು ಡಿಜಿಟಲೀಕರಣ ಮಾಡಲಾಗಿದೆ. ಇದೀಗ ಗ್ರಾಮ ಪಂಚಾಯ್ತಿಯ ಅನೇಕ ಸೇವೆಗಳನ್ನು ಇದೇ ಮಾದರಿಯಲ್ಲಿ ಮಾಡಿದೆ. ಹೀಗಾಗಿ ಪಿಡಿಓಗಳ ಡಿಜಿಟಲ್ ಸಹಿ ಇಲ್ಲದ ಯಾವುದೇ ಪ್ರಮಾಣ ಪತ್ರಗಳು ಇನ್ಮುಂದೆ ಅಮಾನಲ್ಯ ಎಂಬುದಾಗಿ ಸರ್ಕಾರ ಆದೇಶ ಹೊರಡಿಸಿದೆ. https://kannadanewsnow.com/kannada/india-reports-16866-fresh-covid-cases-41-deaths-in-24-hours/ ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಆಡಳಿತದಲ್ಲಿ ಪಾರದರ್ಶಕತೆ ತರೋ ನಿಟ್ಟಿನಲ್ಲಿ ನಾಗರೀಕ ಸೇವೆಗಳನ್ನು ಹೊಸದಾಗಿ ಅಭಿವೃದ್ಧಿ ಪಡಿಸಿದಂತ ಪಂಚತಂತ್ರ-2.2 ತಂತ್ರಾಂಶದ ಮೂಲಕವೇ ಗ್ರಾಮ ಪಂಚಾಯ್ತಿಗಳು ನಡೆಸಬೇಕು ಎಂದು ತಿಳಿಸಿದೆ. ಜುಲೈ.6ರಿಂದಲೇ ಪಂಚತಂತ್ರ ತಂತ್ರಾಂಶವನ್ನು ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಪಂಚತಂತ್ರ 2.0 ಮೂಲಕವೇ ನಾಗರೀಕ ಸೇವೆಗಳನ್ನು ಡಿಜಿಟೀಕರಣಗೊಳಿಸಲಾಗಿದೆ. https://kannadanewsnow.com/kannada/good-news-for-rural-people-of-the-state-yashaswini-yojana-to-be-re-launched-on-october-2/ ಗ್ರಾಮ ಪಂಚಾಯ್ತಿ ನೀಡುವಂತ ನಾನಾ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಪಂಚತಂತ್ರ ತಂತ್ರಾಂಶದ ಮೂಲಕವೇ ಸಂಸ್ಕರಿಸಿ, ವಿಲೇವಾರಿ ಮಾಡಬೇಕು. ರಸೀದಿಗಳ ಮೇಲೆ ಪಿಡಿಓ ಡಿಜಿಟಲ್ ಸಹಿ, ವಿತರಣೆ ಸಂಖ್ಯೆ, ಇನ್ನಿತರ ಪೂರಕ ಮಾಹಿತಿಯನ್ನು ಹೊಂದಿಲ್ಲದೇ ಇದ್ದರೇ,…
ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ ಹೊಸದಾಗಿ 16,866 ಮಂದಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. https://kannadanewsnow.com/kannada/big-shock-for-four-wheeler-holders-bpl-card-holders-to-be-fined/ ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಇಂದು ದೇಶದಲ್ಲಿ ಹೊಸದಾಗಿ 16,866 ಜನರಿಗೆ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟಿದೆ. ಅಲ್ಲದೇ ಸೋಂಕಿನಿಂದಾಗಿ 41 ಜನರು ಸಾವನ್ನಪ್ಪಿರೋದಾಗಿ ತಿಳಿಸಿದೆ. https://kannadanewsnow.com/kannada/good-news-for-rural-people-of-the-state-yashaswini-yojana-to-be-re-launched-on-october-2/ ಅಂದಹಾಗೇ ಕರ್ನಾಟಕದಲ್ಲಿ ಭಾನುವಾರ ಬಿಡುಗಡೆಯಾದಂತ ಕೋವಿಡ್ ರಿಪೋರ್ಟ್ ನುಸಾರ ಹೊಸದಾಗಿ 1,151 ಮಂದಿಗೆ ಕೊರೋನಾ ದೃಢಪಟ್ಟಿತ್ತು. ಹೀಗಾಗಿ ಪಾಸಿಟಿವಿಟಿ ದರ ಶೇ.4.51ಕ್ಕೆ ಏರಿಕೆಯಾಗಿದೆ.
ಕಠ್ಮಂಡು (ನೇಪಾಳ): ಇಂದು ಮುಂಜಾನೆ ನೇಪಾಳದಲ್ಲಿ 4.1 ತೀವ್ರತೆಯ ಭೂಕಂಪ(earthquake) ಸಂಭವಿಸಿದೆ. ಇಂದು ಮುಂಜಾನೆ 5:52 ಕ್ಕೆ ನೇಪಾಳದ ನಾಗರ್‌ಕೋಟ್‌ನ 21 ಕಿಮೀ ದೂರದಲ್ಲಿ ಮತ್ತು 10.0 ಕಿಮೀ ಆಳದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ತಿಳಿಸಿದೆ. ಇನ್ನೂ, ಭೂಕಂಪದಿಂದಾದ ಹಾನಿ ಬಗ್ಗೆ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ. https://kannadanewsnow.com/kannada/16-year-old-girl-stabs-differently-abled-man-to-death-in-chhattisgarh-in-road-rage-incident/ https://kannadanewsnow.com/kannada/boat-carrying-haitian-migrants-sinks-off-bahamas-killing-17-25-rescued/ https://kannadanewsnow.com/kannada/big-shock-for-four-wheeler-holders-bpl-card-holders-to-be-fined/
ಬೆಂಗಳೂರು: ಬಿಪಿಎಲ್ ಕಾರ್ಡ್ ಅಕ್ರಮವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದೀಗ ನಾಲ್ಕು ಚಕ್ರ ವಾಹನಗಳನ್ನು ಹೊಂದಿರುವಂತ ಬಿಪಿಎಲ್ ಪಡಿತರ ಚೀಟಿದಾರರ ಮಾಹಿತಿಯನ್ನು ಕಲೆ ಹಾಕುತ್ತಿದ್ದು, ಅಂತಹ ವ್ಯಕ್ತಿಗಳಿಗೆ ದಂಡವನ್ನು ಹಾಕೋದಕ್ಕಾಗಿ ಪಟ್ಟಿಯನ್ನು ತಯಾರಿಸುತ್ತಿದೆ ಎಂಬುದಾಗಿ ಹೇಳಲಾಗುತ್ತಿದೆ. ಈ ಮೂಲಕ ನಾಲ್ಕು ಚಕ್ರಗಳ ವಾಹನ ಹೊಂದಿ, ಅಂತ್ಯೋದಯ ಆಹಾರ ಪಡಿತರ ಕಾರ್ಡ್ ಹೊಂದಿರೋರಿಗೆ ಶಾಕ್ ನೀಡೋದಕ್ಕೆ ಮುಂದಾಗಿದೆ. ನಾಲ್ಕು ಚಕ್ರ ಹೊಂದಿರುವಂತ ರಾಜ್ಯದ 12,584 ಪಡಿತರ ಚೀಟಿದಾರರಿಗೆ ಸರ್ಕಾರ ದಂಡ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಈ ಹಿಂದೆ ನಾಲ್ಕು ಚಕ್ರದ ವಾಹನ ಹೊಂದಿದ್ದಂತ ಈ ಪಡಿತರಚೀಟಿದಾರರಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಹಿಂದಿರುಗಿಸದ ಕಾರಣ, ಇದೀಗ ಸರ್ಕಾರ ದಂಡದ ಅಸ್ತ್ರವನ್ನು ಪ್ರಯೋಗಿಸಿದೆ ಎನ್ನಲಾಗುತ್ತಿದೆ. https://kannadanewsnow.com/kannada/rashmika-mandanna-to-bid-adieu-to-film-industry-soon-entry-into-politics-famous-astrologer-predicts-surprise/ ಅಂದಹಾಗೇ ರಾಜ್ಯ ಸರ್ಕಾರವು ಸೆಪ್ಟೆಂಬರ್ 3, 2019ರೊಳಗೆ ನಾಲ್ಕು ಚಕ್ರಗಳ ವಾಹನ ಹೊಂದಿರುವವರು ಅಂತ್ಯೋದಯ, ಬಿಪಿಎಲ್ ಚೀಟಿ ಹೊಂದಿದ್ದರೇ ವಾಪಾಸ್ ನೀಡುವಂತೆ ಸೂಚಿಸಲಾಗಿತ್ತು. ಆ ಬಳಿಕ ಅವಧಿಯನ್ನು ವಿಸ್ತರಣೆ ಕೂಡ…
ಬೆಂಗಳೂರು: ಕಿರಿಕ್ ಪಾರ್ಟಿ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು, ಇದೀಗ ಪ್ರಖ್ಯಾತ ನಟಿಯಾಗಿ ರಶ್ಮಿಕಾ ಮಂದಣ್ಣ ( Rashmika Mandanna ) ಮಿಂಚುತ್ತಿದ್ದಾರೆ. ಇಂತಹ ಅವರು ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ, ರಾಜಕೀಯ ರಂಗಕ್ಕೆ ಪ್ರವೇಶಿಸಲಿದ್ದಾರೆ. ಕರ್ನಾಟಕದಿಂದಲೇ ಚುನಾವಣೆಗೆ ನಿಂತು, ಸಂಸದರು ಆಗಲಿದ್ದಾರೆ ಎಂಬುದಾಗಿ ಖ್ಯಾತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ತೆಲುಗಿನ ಖ್ಯಾತ ಜ್ಯೋತಿಷಿ ಎಂಬುದಾಗಿ ಗುರ್ತಿಸಿಕೊಂಡಿರುವಂತ ವೇಣುಸ್ವಾಮಿ ಎನ್ನುವಂತ ಜ್ಯೋತಿಷಿಯೊಬ್ಬರು, ಹೀಗೊಂದು ಸ್ಪೋಟಕ ಭವಿಷ್ಯವನ್ನು ನಟಿ ರಶ್ಮಿಕಾ ಮಂದಣ್ಣ ( Actress Rashmika Mandanna ) ಬಗ್ಗೆ ನುಡಿದಿದ್ದಾರೆ. https://kannadanewsnow.com/kannada/draupadi-murmu-taking-sworn-in-as-15th-president-of-india-today/ ಯೂಟ್ಯೂಬ್ ನಲ್ಲಿನ ಸಂದರ್ಶನವೊಂದರಲ್ಲಿ ಮಾತನಾಡಿರುವಂತ ಅವರು, ರಕ್ಷಿತ್ ಶೆಟ್ಟಿಯೊಂದಿಗೆ ರಶ್ಮೀಕಾ ಮಂದಣ್ಣ ಎಂಗೇಜ್ಮೆಂಟ್ ಮಾಡಿಕೊಂಡ ಸಂದರ್ಭದಲ್ಲಿ ನಿಮ್ಮಬ್ಬಿರ ಜಾತಕದ ಪ್ರಕಾರ ಸರಿಯಿಲ್ಲ. ಈ ವಿವಾಹ ಬೇಡ ಎಂಬುದಾಗಿ ಸಲಹೆ ನೀಡಿದ್ದೆನು. ಆಗ ಅವರಿಬ್ಬರು ಬೇರೆ ಬೇರೆಯಾಗಿದ್ದರು ಎಂದರು. ನೀವು ಈಗ ನೋಡಿದ್ದೀರಿ ರಶ್ಮೀಕಾ ಮಂದಣ್ಣ ಈಗ ನ್ಯಾಷನಲ್ ಕ್ರಷ್ ಆಗಿದ್ದಾರೆ. ಅವರ ಜಾತಕದ ಪ್ರಕಾರ ಅವರು ರಾಜಕೀಯಕ್ಕೆ ಎಂಟ್ರಿ…