Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು: ನಗರದ ಮತ್ತೊರ್ವ ಶಂಕಿತ ಉಗ್ರನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಅರೆಸ್ಟ್ ಆಗಿರೋ ಅಖ್ತರ್ ಸಂಪರ್ಕದಲ್ಲಿದ್ದ ಶಂಕಿತ ಉಗ್ರ ಎಂದು ಹೇಳಲಾಗಿದೆ. https://kannadanewsnow.com/kannada/janotsava-programme-to-be-held-at-doddaballapura-on-july-28-instead-of-pm-modi-j-p-cm-bommai-arrives-on-naddas-arrival/ ಪ್ರಕರಣ ಸಂಬಂಧ ಈತನ ಕಾಂಟ್ಯಾಕ್ಟ್ ನಲ್ಲಿರೋರ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಖಚಿತ ಮಾಹಿತಿ ಮೇರೆಗೆ ಮತ್ತೋರ್ವ ಶಂಕಿತ ಉಗ್ರನನ್ನ ವಶಕ್ಕೆ ಪಡೆದದಿದ್ದಾರೆ. ಆತನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಕೆಎನ್ಎನ್ ಡಿಜಿಟಲ್ ಡೆಸ್ಕ್ : ದೇಹದ ಉತ್ತಮ ಆರೋಗ್ಯಕ್ಕಾಗಿ ಜನರು ವ್ಯಾಯಾಮ, ಡಯಟ್, ಯೋಗ ಮಾಡುತ್ತಾರೆ. ಇದರ ಜೊತೆಗೆ ಫಿಟ್ ಆಗಿ ಆರೋಗ್ಯವಾಗಿರಲು ಅನೇಕರು ದಿನನಿತ್ಯ ಖಾಲಿ ಹೊಟ್ಟೆಯಲ್ಲಿ ಬಾದಾಮಿ ತಿನ್ನುತ್ತಾರೆ. ಇನ್ನು ಕೆಲವರು ಸಂಜೆ ತಿಂಡಿಯಾಗಿ ಶೇಂಗಾ ತಿನ್ನಲು ಇಷ್ಟಪಡುತ್ತಾರೆ. https://kannadanewsnow.com/kannada/three-dead-2-year-old-critical-as-car-rams-into-bus-in-delhis-nangli-poona/ ಹೆಚ್ಚಿನ ಜನರು ಶೇಂಗಾ ಮತ್ತು ಬಾದಾಮಿ ಎರಡನ್ನೂ ತಿನ್ನುವುದರಿಂದ ದೇಹಕ್ಕೆ ಒಂದೇ ರೀತಿಯ ಪೋಷಕಾಂಶಗಳು ಸಿಗುತ್ತದೆ ಎಂದು ನಂಬಿದ್ದಾರೆ. ಇದು ನೂರಕ್ಕೆ ನೂರ ನಿಜವಲ್ಲ.ಕಡಲೆಕಾಯಿ ಮತ್ತು ಬಾದಾಮಿಗಳ ಪೌಷ್ಟಿಕಾಂಶದ ಮೌಲ್ಯದಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಇವೆರಲ್ಲಿ ಯಾವುದು ಹೆಚ್ಚು ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದನ್ನು ತಿಳಿಯಬೇಕು ಬಾದಾಮಿಯಲ್ಲಿ ಫೈಬರ್, ಪ್ರೋಟೀನ್, ವಿಟಮಿನ್ ಇ, ಮೆಗ್ನೀಸಿಯಮ್, ಮ್ಯಾಂಗನೀಸ್, ತಾಮ್ರ, ರಂಜಕ ಸಮೃದ್ಧವಾಗಿದೆ. ಇದನ್ನು ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಬಳಸಲಾಗುತ್ತದೆ. ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಬಾದಾಮಿ ಪ್ರಯೋಜನಗಳು -ಬಾದಾಮಿಯನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕ ನಷ್ಟ ಮತ್ತು ತೂಕ ಹೆಚ್ಚಾಗುವುದು, ಮೂಡ್ ಸುಧಾರಣೆ, ಕ್ಯಾನ್ಸರ್, ಹೃದಯ ಸಮಸ್ಯೆಗಳು ಮತ್ತು ಮಧುಮೇಹದ ಅಪಾಯವನ್ನು ಕಡಿಮೆ…
ಮುಂಬೈ : ಬಾಲಿವುಡ್ ನಟ ರಣವೀರ್ ಸಿಂಗ್ ಇತ್ತೀಚಿನ ಫೋಟೋಶೂಟ್ʼನಿಂದಾಗಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಆ ಫೋಟೋಶೂಟ್‌ನಲ್ಲಿ ರಣವೀರ್ ಬಟ್ಟೆ ಇಲ್ಲದೇ ಕಾಣಿಸಿಕೊಂಡಿದ್ದು, ಇದರಿಂದಾಗಿ ಸಾಕಷ್ಟು ಟ್ರೋಲ್‌ಗೂ ಒಳಗಾಗಿದ್ದಾರೆ. ಸಧ್ಯ ಈ ಫೋಟೋಶೂಟ್ʼನಿಂದಾಗಿ ನಟ ರಣವೀರ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು, ರಣವೀರ್ ಕಪೂರ್ ವಿರುದ್ಧ ದೂರು ದಾಖಲಾಗಿದೆ. ನಗ್ನ ಫೋಟೋಶೂಟ್ ಮಾಡುವ ವಿಷಯದಲ್ಲಿ ಭಾರತೀಯ ಸಂಸ್ಕೃತಿಯನ್ನ ಉಲ್ಲೇಖಿಸಿ, ಎನ್‌ಜಿಒವೊಂದು ಮುಂಬೈನ ಚೆಂಬೂರ್ ಪೊಲೀಸ್ ಠಾಣೆಯಲ್ಲಿ ರಣವೀರ್ ಸಿಂಗ್ ವಿರುದ್ಧ ದೂರು ದಾಖಲಿಸಿದೆ.
ದೆಹಲಿ : ನಂಗ್ಲಿ ಪೂನಾ ಬಳಿಯ ಹೆದ್ದಾರಿಯ ಬಸ್ ನಿಲ್ದಾಣದಲ್ಲಿ ಸೋಮವಾರ ಐದು ಜನರಿದ್ದ ಕಾರು ದೆಹಲಿ ಸಾರಿಗೆ ನಿಗಮದ (ಡಿಟಿಸಿ) ಬಸ್ಸಿಗೆ ಡಿಕ್ಕಿ ಹೊಡೆದಿದ್ದು, ಮೂವರು ಸಾವನ್ನಪ್ಪಿದ್ದಾರೆ ಮತ್ತು ಇತರ ಇಬ್ಬರು ಗಾಯಗೊಂಡಿದ್ದಾರೆ. https://kannadanewsnow.com/kannada/indore-woman-inflicts-burns-on-adopted-daughter-for-bedwetting/ ಕಾರಿನಲ್ಲಿದ್ದ ಐದು ಜನರೊಂದಿಗೆ ಒಂದು ಮಗುವೂ ಪ್ರಯಾಣಿಸುತ್ತಿತ್ತು. ಗಾಯಗೊಂಡವರನ್ನು ಬಾಬು ಜಗಜೀವನ್ ರಾಮ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಮೂವರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಕಾರಿನಲ್ಲಿದ್ದ ಕುಟುಂಬವು ಹಿಮಾಚಲ ಪ್ರದೇಶದಿಂದ ಹಿಂದಿರುಗುತ್ತಿತ್ತು ಎಂದು ವರದಿಯಾಗಿದೆ. https://kannadanewsnow.com/kannada/indore-woman-inflicts-burns-on-adopted-daughter-for-bedwetting/ ಅಥರ್ವ್ ಎಂದು ಗುರುತಿಸಲಾದ ಎರಡು ವರ್ಷದ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಚಿಕಿತ್ಸೆಗಾಗಿ ಬಾಬು ಜಗಜೀವನ್ ರಾಮ್ ಆಸ್ಪತ್ರೆಯಿಂದ ಫೋರ್ಟಿಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. https://kannadanewsnow.com/kannada/indore-woman-inflicts-burns-on-adopted-daughter-for-bedwetting/ ಮಾಹಿತಿಯ ಪ್ರಕಾರ, ಇಬ್ಬರು ಆಗಸ್ಟ್ 3 ರಂದು ಹಾಂಗ್ ಕಾಂಗ್ ಗೆ ಮರಳಬೇಕಾಯಿತು. ಅವರಿಬ್ಬರೂ ಹಾಂಗ್ ಕಾಂಗ್ ನಲ್ಲಿ ಹೋಟೆಲ್ ನಡೆಸುತ್ತಿದ್ದರು ಮತ್ತು ಕುಟುಂಬವನ್ನು ಭೇಟಿಯಾಗಲು ಭಾರತಕ್ಕೆ ಬಂದಿದ್ದರು. ಹಿಮಾಚಲದಿಂದ ಹಿಂದಿರುಗುತ್ತಿದ್ದಾಗ, ದುರದೃಷ್ಟಕರ ಅಪಘಾತವೊಂದು ಸಂಭವಿಸಿದ್ದು, ಅದರಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಇಂದೋರ್ : ಮಧ್ಯಪ್ರದೇಶದ ಇಂದೋರ್‌ನಲ್ಲಿ ಮಹಿಳೆಯೊಬ್ಬರು ತಮ್ಮ ಒಂಬತ್ತು ವರ್ಷದ ದತ್ತು ಮಗಳ ಖಾಸಗಿ ಅಂಗಗಳಿಗೆ ಸುಟ್ಟಗಾಯಗಳನ್ನು ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. https://kannadanewsnow.com/kannada/congress-to-get-3rd-place-in-upcoming-elections-minister-r-ashokas-predictions/ 40 ವರ್ಷದ ಮಹಿಳೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 294 (ದುರುಪಯೋಗ), 323 (ಮ್ಯಾನ್ ಹ್ಯಾಂಡಲಿಂಗ್) ಮತ್ತು 324 (ಅಪಾಯಕಾರಿ ಶಸ್ತ್ರಾಸ್ತ್ರಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು) ಮತ್ತು 506 (ಬೆದರಿಕೆ) ಅಡಿಯಲ್ಲಿ ಅಪರಾಧವನ್ನು ದಾಖಲಿಸಲಾಗಿದೆ ಎಂದು ಮಿಗ್ ಪೊಲೀಸ್ ಠಾಣೆ ಪ್ರಭಾರಿ ಅಜಯ್ ವರ್ಮಾ ತಿಳಿಸಿದ್ದಾರೆ. ಆರೋಪಿ ಸಂತ್ರಸ್ತೆಯ ಹತ್ತಿರದ ಸಂಬಂಧಿಯಾಗಿದ್ದು, ಆಕೆಯನ್ನು ಮಹಿಳೆ ದತ್ತು ಪಡೆದಿದ್ದ ಎಂದು ಅವರು ಹೇಳಿದ್ದಾರೆ. ರಾತ್ರಿಯಲ್ಲಿ ಹಾಸಿಗೆ ಒದ್ದೆ ಮಾಡಿದ್ದಕ್ಕೆ ಶಿಕ್ಷೆಯಾಗಿ ಮಹಿಳೆ ಮಗುವಿನ ಖಾಸಗಿ ಭಾಗಗಳಿಗೆ ಸುಟ್ಟಗಾಯಗಳನ್ನು ಮಾಡಿದ್ದಾಳೆ ಎನ್ನಲಾಗುತ್ತಿದ್ದು, ಈ ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. https://kannadanewsnow.com/kannada/it-could-be-the-same-for-you-when-you-were-driving-what-is-that-how-to-protect-read-this-news-about-it/ ಇತ್ತ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಅಧ್ಯಕ್ಷೆ ಪಲ್ಲವಿ ಪೋರ್ವಾಲ್ ಮಾತನಾಡಿದ್ದು ಬಾಲಕಿಯ ಖಾಸಗಿ ಭಾಗಗಳಲ್ಲಿ ಗಂಭೀರವಾದ ಸುಟ್ಟ…
ಬೆಂಗಳೂರು: ಸರ್ಕಾರದ ಮೂರು ವರ್ಷ ಪೂರೈಸಿದ ಆಡಳಿತ ಬಗ್ಗೆ ಜನರಿಗೆ ತಿಳಿಸುವ ಸಲುವಾಗಿ ಬಿಜೆಪಿ ಜನೋತ್ಸವ ಕಾರ್ಯಕ್ರಮ ಬೆಂಗಳೂರು ಗ್ರಾಮಾಂತರ ದೊಡಬಳ್ಳಾಪರದಲ್ಲಿ ಏರ್ಪಡಿಸಿದೆ. ಇದೇ ತಿಂಗಳು 28ರಂದು ಕಾರ್ಯಕ್ರಮ ನಡೆಯಲಿದೆ. https://kannadanewsnow.com/kannada/ed-raids-csi-premises-over-black-money-scam-at-karakonam-medical-college/ ಈಗಾಗಲೇ ಕಾರ್ಯಕ್ರಮಕ್ಕೆ ಸಿದ್ಧತೆ ಭರದಿಂದ ಸಾಗುತ್ತಿದೆ. ಸದ್ಯ ಕಾರ್ಯಕ್ರಮ ಕುರಿತು ಬಿಜೆಪಿ ನಾಯಕರು ಸಭೆ ನಡೆಸಿ, ಚರ್ಚೆಗಳನ್ನ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಬರುತ್ತಾರೆ ಎಂದು ಹೇಳಲಾಗಿತ್ತು. ಇದೀಗ ಈ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಈ ಬಗ್ಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಈ ಕಾರ್ಯಕ್ರಮಕ್ಕೆ ಪಿಎಂ ನರೇಂದ್ರ ಮೋದಿ ಬರುವುದಿಲ್ಲ, ಜೆ.ಪಿ. ನಡ್ಡಾ ಅವರು ಬರುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಯಚೂರು : ಕಾಲೇಜಿಗೆ ಹೋಗುವುದಾಗಿ ತೆರಳಿದ್ದ ನಾಲ್ವರು ವಿದ್ಯಾರ್ಥಿನಿಗಳು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಾಲ್ವರ ಪೈಕಿ ಇಬ್ಬರು ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾರೆ. ಇನ್ನಿಬ್ಬರು ಗೋವಾಕ್ಕೆ ತೆರಳಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. https://kannadanewsnow.com/kannada/four-girls-who-went-to-college-go-missing-increased-anxiety-among-parents/ ಕಾಲೇಜಿಗೆ ಹೋಗುವುದಾಗಿ ತೆರಳಿದ್ದ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನಾಲ್ವರು ವಿದ್ಯಾರ್ಥಿನಿಯರು ಕಾಣೆಯಾಗಿದ್ದಾರೆ. ಸ್ಟೇಷನ್ ರಸ್ತೆಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಎಂದು ತಿಳಿದುಬಂದಿದೆ. ಇಬ್ಬರು ಶಕ್ತಿನಗರ ಮತ್ತು ಇನ್ನಿಬ್ಬರು ರಾಯಚೂರು ನಗರದ ವಿದ್ಯಾರ್ಥಿನಿಯರು ಆಗಿದ್ದಾರೆ. ನಾಲ್ಕು ವಿದ್ಯಾರ್ಥಿನಿಯರ ಪೋಷಕರಲ್ಲಿ ಒಬ್ಬರಿಂದ ಮಹಿಳಾ ಠಾಣೆಗೆ ದೂರು ಪ್ರಕರಣ ದಾಖಲಿಸಲಾಗಿದೆ. https://kannadanewsnow.com/kannada/four-girls-who-went-to-college-go-missing-increased-anxiety-among-parents/ ಮಾಹಿತಿ ಮೇರೆಗೆ ಸದರಬಜಾರ ಠಾಣೆ ಪಿಎಸ್ ಐ ಹಾಗೂ ಮಹಿಳಾ ಠಾಣಾ ಪಿಎಸ್ಐ ನೇತೃತ್ವದಲ್ಲಿ ಎರಡು ತಂಡ ರಚನೆ ಮಾಡಿದ್ದಾರೆ. ತೀವ್ರ ಹುಡುಕಾಟ ನಡೆಸಲಾಗಿದೆ ಬಳಿಕ ಇಬ್ಬರು ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾರೆ. ಉಳಿದ ಇಬ್ಬರಿಗಾಗು ಮುಂದುವರಿದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅವರು ಗೋವಾಕ್ಕೆ ತೆರಳಿರುವ ಅನುಮಾನದ ಶಂಕೆ ವ್ಯಕ್ತಪಡಿಸಲಾಗುತ್ತಿದೆ. ಪೋಷಕರು ಕೂಡ ಚಿಂತಿಸುವಂತಾಗಿದೆ.
ನವದೆಹಲಿ : ರಾಷ್ಟ್ರಪತಿ ಪದಗ್ರಹಣ ಕಾರ್ಯಕ್ರಮದಲ್ಲಿ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವ್ರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ರಾಜ್ಯಸಭಾ ಸಭಾಪತಿಗೆ ಕಾಂಗ್ರೆಸ್ ಸಂಸದರು ಪತ್ರ ಬರೆದಿದ್ದಾರೆ. ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವ್ರಿಗೆ ರಾಷ್ಟ್ರಪತಿ ಪದಗ್ರಹಣ ಕಾರ್ಯಕ್ರಮದಲ್ಲಿ ಅಪಮಾನ ಮಾಡಲಾಗಿದೆ. ಅವ್ರಿಗೆ ಸರಿಯಾದ ಆಸನ ವ್ಯವಸ್ಥೆಯೂ ಮಾಡಿಲ್ಲ. ಈ ಮೂಲಕ ಸರ್ಕಾರ, ಶಿಷ್ಟಾಚಾರ ಉಲ್ಲಂಘಿಸಿದೆ” ಎಂದು ಕಾಂಗ್ರೆಸ್ ಸಂಸದರು ಆರೋಪಿಸಿ ರಾಜ್ಯಸಭಾ ಸಭಾಪತಿಗೆ ಪತ್ರ ಬರೆದಿದ್ದಾರೆ. https://twitter.com/ANI/status/1551491438566707200?s=20&t=5Zhli7Q2Ah1blv89sgBW_A
ಬೆಂಗಳೂರು : ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಜೈಲು ಸೇರಿರುವ ಪ್ರಮುಖ ಆರೋಪಿ ಎಡಿಜಿಪಿ ಅಮೃತ್ ಪಾಲ್ ಜಾಮೀನು ಅರ್ಜಿ ವಜಾಗೊಳಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್‌ನಿಂದ ಆದೇಶ ಹೊರ ಬಿದ್ದಿದ್ದು, “ಎಡಿಜಿಪಿ ಅಮೃತ್ ಪಾಲ್ ಪರೀಕ್ಷೆಯ ನೇತೃತ್ವ ವಹಿಸಿದ್ದರು. ಉತ್ತರ ಪತ್ರಿಕೆಗಳಿದ್ದ ಸ್ಟ್ರಾಂಗ್ ರೂಮ್ ಕೀ ಪಾಲ್ ಬಳಿಯಿತ್ತು. ಅವ್ರು ಅದನ್ನ ಇತರೆ ಆರೋಪಿಗಳಿಗೆ ನೀಡಿದ್ದರು. ಇನ್ನು ಒಎಂಆರ್ ಶೀಟ್ ತಿದ್ದಿರುವುದು ಪಿಎಸ್‌ಎ ವರದಿಯಲ್ಲಿ ದೃಢಪಟ್ಟಿದೆ. ಹೀಗಾಗಿ ಅಮೃತ್ ಪಾಲ್‌ಗೆ ಜಾಮೀನು ನೀಡದಂತೆ ಸಿಐಡಿ ಪರ ಎಸ್‌ಪಿಪಿ ಪ್ರಸನ್ನ ವಾದ ಮಂಡಿಸಿದ್ರು. ಸಧ್ಯ ಸಿಐಡಿ ಪರ ವಕೀಲರ ವಾದಕ್ಕೆ ಸ್ಪಂದಿಸಿದ ನ್ಯಾಯಾಲಯ ಎಡಿಜಿಪಿ ಅಮೃತ್ ಪಾಲ್ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.
ನವದೆಹಲಿ : ಸಭೆಯಲ್ಲಿ ಗದ್ದವೆಬ್ಬಿಸಿದ ಆರೋಪದ ಮೇಲೆ ನಾಲ್ವರು ಕಾಂಗ್ರೆಸ್ ಸಂಸದರನ್ನ ಇಡೀ ಅಧಿವೇಶನಕ್ಕೆ ಅಮಾನತ್ತುಗೊಳಿಸಿ ಸಭಾಪತಿ ಆದೇಶ ಹೊರಡಿಸಿದ್ದಾರೆ. ಇನ್ನು ಲೋಕಸಭೆಯಲ್ಲಿ ಗದ್ದಲ ಮುಂದುವರೆದ ಪರಿಣಾಮ ಕಲಾಪವನ್ನ ನಾಳೆಗೆ ಮುಂದೂಡಲಾಗಿದೆ. ಹೌದು, ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆಗಳು ಮತ್ತು ಘೋಷಣೆಗಳ ನಂತ್ರ ನಾಲ್ವರು ಕಾಂಗ್ರೆಸ್ ಸಂಸದರನ್ನ ಸೋಮವಾರ ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ. ಅದ್ರಂತೆ, ಮಾಣಿಕಮ್ ಟ್ಯಾಗೋರ್, ರಮ್ಯಾ ಹರಿದಾಸ್, ಜ್ಯೋತಿಮಣಿ ಮತ್ತು ಟಿ.ಎನ್.ಪ್ರತಾಪನ್ ಈ ನಾಲ್ವರು ಕಾಂಗ್ರೆಸ್ ಸಂಸದರು ಎಂದು ಎಎನ್ಐ ವರದಿ ಮಾಡಿದೆ. https://twitter.com/ANI/status/1551514875087978496?s=20&t=5Zhli7Q2Ah1blv89sgBW_A ಅಂದ್ಹಾಗೆ, ಬೆಲೆ ಏರಿಕೆ ಮತ್ತು ಜಿಎಸ್ಟಿ ದರ ಏರಿಕೆಯ ವಿಷಯಗಳು ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದ ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಹಲವಾರು ಮುಂದೂಡಿಕೆಗಳಿಗೆ ಕಾರಣವಾಗಿದೆ.