Author: KNN IT TEAM

ನವದೆಹಲಿ : ನಾಲ್ವರು ಕಾಂಗ್ರೆಸ್ ಲೋಕಸಭಾ ಸಂಸದರ ವಿರುದ್ಧ ಅದೇ ಕ್ರಮವನ್ನ ತೆಗೆದುಕೊಂಡ ಒಂದು ದಿನದ ನಂತರ, ಕಲಾಪ ಅಡ್ಡಿಪಡಿಸಿದ್ದಕ್ಕಾಗಿ ರಾಜ್ಯಸಭೆಯ ಹತ್ತೊಂಬತ್ತು ವಿರೋಧ ಪಕ್ಷದ ಸಂಸತ್ ಸದಸ್ಯರನ್ನ ಮಂಗಳವಾರ ವಾರದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ.‌ ಹಣದುಬ್ಬರದ ಬಗ್ಗೆ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ 20ಕ್ಕೂ ಹೆಚ್ಚು ಸಂಸದರನ್ನ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಭಾಗವಹಿಸಲು ಈಗ ನಿರ್ಬಂಧಿಸಲಾಗಿದೆ. ತೃಣಮೂಲ ಕಾಂಗ್ರೆಸ್‌ನ ಏಳು ಸಂಸದರು ಮಂಗಳವಾರ ಅವರ ವಿರುದ್ಧ ಕ್ರಮ ಕೈಗೊಂಡವರಲ್ಲಿ ಸೇರಿದ್ದಾರೆ. ಅಮಾನತುಗೊಂಡ ಸಂಸದರು ಅಶಿಸ್ತಿನ ವರ್ತನೆಯ ಆರೋಪ ಎದುರಿಸುತ್ತಿದ್ದಾರೆ. ಸುಶ್ಮಿತಾ ದೇವ್, ಮೌಸಮ್ ನೂರ್, ಡಾ.ಶಂತನು ಸೇನ್, ಡೋಲಾ ಸೇನ್, ಶಂತನು ಸೇನ್, ನಾಡಿಮಲ್ ಹಕ್, ಅಭಿ ರಂಜನ್ ಬಿಸ್ವಾಸ್ ಮತ್ತು ಶಾಂತಾ ಛೆಟ್ರಿ ಅವರನ್ನು ಅಮಾನತುಗೊಳಿಸಲಾಗಿದೆ. ಸಿಪಿಐ(ಎಂ)ನ ಎ.ಎ.ರಹೀಂ, ಎಡಪಂಥದ ಮೊಹಮ್ಮದ್ ಅಬ್ದುಲ್ಲಾ ಮತ್ತು ಡಿಎಂಕೆಯ ಕನಿಮೋಳಿ ಕೂಡ ನಿಷೇಧಕ್ಕೊಳಗಾದವರಲ್ಲಿ ಸೇರಿದ್ದಾರೆ.

Read More

ಉಡುಪಿ: ಪಿಎಸ್ ಐ ಹಗರಣದ ಕುರಿತು ನನಗೆ ಮೊದಲೇ ವಾಸನೆ ಇತ್ತು.ನಾನು ಬೆಂಗಳೂರು ಸಿಟಿ ಪೊಲೀಸ್ ಕಮಿಷನರ್ ಆಗಿರುವಾಗ ಅಮೃತ್ ಪೌಲ್ ಮುಂದಿನ ಕಮಿಷನರ್ ಆಗುತ್ತಾರೆ ಎಂಬ ಸುದ್ದಿ ಆಗಲೇ ಇತ್ತು.ಆಗ್ಗಾಗೆ ಮುಖ್ಯಮಂತ್ರಿ ಮನೆಗೆ ಬರುವಾಗ ಕೂಡಾ ನಾನು ಪ್ರಶ್ನೆ ಮಾಡಿದ್ದೆ. ಇದು ಹಗರಣ ಎಂಬುವುದಾಗಿ ನನಗೆ ಮೊದಲೇ ಗೊತ್ತಿತ್ತು ಎಂದು ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದ್ದಾರೆ. https://kannadanewsnow.com/kannada/struggling-actor-who-threatened-to-kill-katrina-kaif-sent-to-two-day-police-custody/ ನಗರದಲ್ಲಿ ಮಾತನಾಡಿದ ಅವರು,ಆಪ್ ಗವರ್ನರ್ ಬಳಿ ಈ ವಿಷಯ ಕೊಂಡೊಯ್ದ ಮೊದಲ ರಾಜಕೀಯ ಪಕ್ಷ.ತನಿಖೆ ಆಗುವವರೆಗೂ ಪರೀಕ್ಷೆ ಮಾಡುವುದಿಲ್ಲ ಎನ್ನುವುದು ತಪ್ಪು ನೀತಿ ಆಗಿದೆ. ನೀವು ಯುವಜನರಿಗೆ ಮೋಸ ಮಾಡುತ್ತಿದ್ದೀರಿ. ಇಡೀ ಪರೀಕ್ಷೆಯನ್ನೇ ರದ್ದುಗೊಳಿಸಿ ಹೊಸದಾಗಿ ಪರೀಕ್ಷೆಯನ್ನು ನಡೆಸಿ. ಸಿಐಡಿ ಒಳಗೆ ಹೋದ ಮೇಲೆ ಹೋಂ ಮಿನಿಸ್ಟರ್ ಮತ್ತು ಸಿಎಂ ಇನ್ವೆಸ್ಟಿಗೇಶನ್ ಆಫೀಸರ್ ಆಗುತ್ತಾರೆ. ಇದು ನ್ಯಾಯಾಂಗದಲ್ಲಿ ತನಿಖೆ ಆಗಬೇಕು ಎಂದು ನಾನು ಮೊದಲೇ ಆಗ್ರಹ ಮಾಡಿದ್ದೆ ಎಂದು ಹೇಳಿದ್ದಾರೆ. ನ್ಯಾಯಾಂಗ ತನಿಖೆ ಆರಂಭ ಆದ 24…

Read More

ಬೆಂಗಳೂರು : ಇಂದು ಕಾಂಗ್ರೆಸ್‌ ಪಕ್ಷದ ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಚಿತ್ರನಟಿ ಭಾವನಾ ಅವರನ್ನು ಕಾಂಗ್ರೆಸ್ ನ ಹಿರಿಯ ಮುಖಂಡರ ಮುಂದೆಯೇ ಕೈ ಕಾರ್ಯಕರ್ತೆಯೊಬ್ಬರು ʻ ನೀವು ಬಿಜೆಪಿಗೆ ಹೋಗಿದ್ದೀರಿ ಮತ್ಯಾಕೆ ಕಾಂಗ್ರೆಸ್‌ಗೆ ಇಲ್ಲಿಗೆ ಬಂದಿದ್ದೀರಿ ʼ ಎಂದು ಪ್ರಶ್ನಿಸಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪ್ರಸಂಗ ಪಡೆಯಿತು. https://kannadanewsnow.com/kannada/struggling-actor-who-threatened-to-kill-katrina-kaif-sent-to-two-day-police-custody/ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್, ಸಲೀಂ ಅಹಮದ್ ಅವರು ಕುಳಿತಿದ್ದ ವೇದಿಕೆಯತ್ತ ತೆರಳಿದ ನಟಿ ಭಾವನಾ ಅವರನ್ನು ಮಹಿಳಾ ಕಾರ್ಯಕರ್ತೆಯೊಬ್ಬರು ತಡೆಹಿಡಿದು ‘ವೇದಿಕೆಯ ಬಿಟ್ಟು ಬದಿಗೆ ಬನ್ನಿ’ ಎಂದು ಅಡ್ಡಿಪಡಿಸಿದರು. ನೀವು ಬಿಜೆಪಿಗೆ ಹೋಗಿದ್ದೀರಿ ಮತ್ಯಾಕೆ ಇಲ್ಲಿಗೆ ಬಂದಿದ್ದೀರಿ ಎಂದು ಪ್ರಶ್ನಿಸಿದರು. ಬಳಿಕ ವೇದಿಕೆಯಲ್ಲಿ ಇದ್ದ ನಾಯಕರು ಸಮಾಧಾನ ಪಡಿಸಿದರು. ಆ ಹಿನ್ನೆಲೆಯಲ್ಲಿ ನಟಿ ಭಾವನಾ ಕಾರ್ಯಕರ್ತರು ಕುಳಿತಿದ್ದ ಬದಿಯಲ್ಲೇ ನಿಂತು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡರು. https://kannadanewsnow.com/kannada/struggling-actor-who-threatened-to-kill-katrina-kaif-sent-to-two-day-police-custody/ ಈ ವೇಳೆ ಮಾತನಾಡಿದ ನಟಿ ಭಾವನಾ, ಈ ಹಿಂದೆ ನಾನು ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿದ್ದೆ. ಅದು ಆತುರದ ನಡೆ ಎಂದು ಅನಿಸಿತು.…

Read More

ನವದೆಹಲಿ : ತರಬೇತುದಾರರ ಅನುಪಸ್ಥಿತಿಯಿಂದಾಗಿ ತನಗೆ ಮಾನಸಿಕ ಕಿರುಕುಳವಾಗಿದೆ ಎಂದು ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಟ್ವಿಟ್ಟರ್‌ನಲ್ಲಿ ತಮ್ಮ ಹತಾಶೆಯನ್ನ ವ್ಯಕ್ತಪಡಿಸಿದ ನಂತ್ರ ಅವ್ರ ಕೋಚ್‌ಗಳಲ್ಲಿ ಒಬ್ಬರಾದ ಸಂಧ್ಯಾ ಗುರುಂಗ್ ಅವ್ರು ಮಂಗಳವಾರ ಅಂತಿಮವಾಗಿ ಸಿಡಬ್ಲ್ಯುಜಿಗೆ ಮಾನ್ಯತೆ ಪಡೆದ್ದಾರೆ. ಈ ಕುರಿತು ಸ್ವತಃ ಸಂಧ್ಯಾ ಗುರುಂಗ್‌ ಮಾಹಿತಿ ನೀಡಿದ್ದು,  “ನಾನು 2022ರ ಕಾಮನ್ವೆಲ್ತ್ ಗೇಮ್ಸ್‌ಗೆ ಮಾನ್ಯತೆ ಪಡೆದಿದ್ದೇನೆ” ಎಂದು ತಿಳಿಸಿದರು. ಅಂದ್ಹಾಗೆ, ಸೋಮವಾರ ಲವ್ಲಿನಾ ಅವರ ಟ್ವೀಟ್ ಹೆಚ್ಚು ಪರಿಣಾಮ ಬೀರಿದ್ದು, ಕ್ರೀಡಾ ಇಲಾಖೆ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಅವರ ಟ್ವೀಟ್ ಮತ್ತು ಪೋಸ್ಟ್ ಹಂಚಿಕೊಂಡಿದೆ. https://twitter.com/ANI/status/1551848161353732096?s=20&t=l1ceorRYzz98Gbvifx7HhA

Read More

ಮುಂಬೈ : ನಟಿ ಕತ್ರಿನಾ ಕೈಫ್ ಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ನಟ ಮನ್ವಿಂದರ್ ಸಿಂಗ್ ಅವರನ್ನು ಮುಂಬೈ ನ್ಯಾಯಾಲಯವು  ಜುಲೈ 28 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.  https://kannadanewsnow.com/kannada/july-tumakuru-vv-honorary-doctorate-conferred-on-yadugiri-yatiraja-sri-on-30th/ 25 ವರ್ಷದ ಸಿಂಗ್ ಅವರು ಕತ್ರಿನಾ ಕೈಫ್ ಅವರ ದೊಡ್ಡ ಅಭಿಮಾನಿ ಎಂದು ಹೇಳಲಾಗುತ್ತದೆ. ಅವರು ನಟಿಯನ್ನು ಮದುವೆಯಾಗಲು ಬಯಸಿದ್ದರು. ನಟಿಯೊಂದಿಗೆ ಎಡಿಟ್ ಮಾಡಿದ ವೀಡಿಯೊಗಳು ಮತ್ತು ಚಿತ್ರಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುತ್ತಿದ್ದರು. ಕಳೆದ ಕೆಲವು ತಿಂಗಳುಗಳಿಂದ, ಅವರು ಅವಳನ್ನು ಹಿಂಬಾಲಿಸುತ್ತಿದ್ದರು. ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. https://kannadanewsnow.com/kannada/delhi-airport-to-send-passengers-with-monkeypox-symptoms-to-lnjp/ ಸಿಂಗ್ ನಂತರ ಕೈಫ್ ಮತ್ತು ಅವರ ಪತಿ ವಿಕ್ಕಿ ಕೌಶಲ್ ಗೆ ಕೊಲೆ ಬೆದರಿಕೆಗಳನ್ನು ಹಾಕುತ್ತಿದ್ದರು. ವಿಕ್ಕಿ ಕೌಶಲ್ ಸಿಂಗ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದು, ಇನ್ಸ್ಟಾಗ್ರಾಮ್ನಲ್ಲಿ ಸಿಂಗ್ ತನಗೆ ಮತ್ತು ತನ್ನ ಪತ್ನಿಗೆ ಬೆದರಿಕೆ ಹಾಕಿದ್ದಾನೆ ಎಂದು ಹೇಳಿದ್ದಾರೆ.

Read More

ಬೆಂಗಳೂರು: ನಮ್ಮ ನಗರ ಪ್ರದೇಶಗಳಲ್ಲಿ ಸಂಕೀರ್ಣ ಸಮಸ್ಯೆ ಮತ್ತು ಸವಾಲುಗಳಿವೆ. ಇವುಗಳ ಬಗ್ಗೆ ಸುಮ್ಮನೆ ಚರ್ಚಿಸುವುದಕ್ಕಿಂತ ಸಮರ್ಥ ಪರಿಹಾರ ಕಂಡುಹಿಡಿಯುವುದು ಮುಖ್ಯ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅಭಿಪ್ರಾಯ ಪಟ್ಟಿದ್ದಾರೆ. ಭಾರತೀಯ ಮಾನವ ವಸಾಹತುಗಳ ಸಂಸ್ಥೆಯು ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದ ಅವರು, ನಗರ ಪ್ರದೇಶಗಳ ಅಭಿವೃದ್ಧಿ ಒಮ್ಮುಖವಾಗಬಾರದು. ಇಲ್ಲಿ ಪ್ರಗತಿಯ ಜತೆಗೆ ಸುಸ್ಥಿರತೆಯನ್ನು ಸಾಧಿಸಬೇಕಾದ ಅಗತ್ಯವೂ ಇದೆ ಎಂದು ಅವರು ಹೇಳಿದರು. https://kannadanewsnow.com/kannada/11-rajya-sabha-members-suspended-for-one-week-over-display-of-signboards-in-front-of-speakers-chair/ ನಗರ ಪ್ರದೇಶಗಳಲ್ಲಿ ಕೃಷಿ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇದೆ. ಆದ್ದರಿಂದ ಈ ನಿಟ್ಟಿನಲ್ಲಿ ಕೃಷಿ ಸಂಸ್ಕೃತಿಯ ಹೊಸ ರೂಪ ಮತ್ತು ವಿಧಾನಗಳನ್ನು ಕಂಡುಹಿಡಿಯಬೇಕಾಗಿದೆ ಎಂದು ಅವರು ನುಡಿದರು. ನಗರಗಳು ಕೇವಲ ಉದ್ಯೋಗ ಸೃಷ್ಟಿಯ ಅಗತ್ಯ ಪೂರೈಸಿದರೆ ಸಾಲದು. ಇವು ಬದುಕಲು ಉತ್ತಮ ತಾಣಗಳಾಗಿಯೂ ಇರಬೇಕು. ಆದ್ದರಿಂದ ನಮ್ಮ ನಗರಗಳು ಸುಧಾರಣೆ ಕಾಣಬೇಕಾದ ತುರ್ತಿದೆ ಎಂದು ಅವರು ಪ್ರತಿಪಾದಿಸಿದರು. https://kannadanewsnow.com/kannada/anybody-can-be-rich/ ರಾಜ್ಯದಲ್ಲಿ ಶಾಲಾ ಹಂತದಲ್ಲೇ ಮಕ್ಕಳಿಗೆ ಹಣ್ಣು ಮತ್ತು ತರಕಾರಿ ಬೆಳೆಯುವುದನ್ನು…

Read More

ನವದೆಹಲಿ: ಸಂಸತ್ ಕಲಾಪದಲ್ಲಿ ಭಿತ್ತಿ ಪ್ರತ್ರಗಳು ಸೇರಿದಂತೆ ವಿವಿಧ ತರದ ಪ್ರದರ್ಶನ ಫಲಕಗಳನ್ನು ನಿಷೇಧಿಸಲಾಗಿತ್ತು. ಈ ನಡುವೆಯು ಇಂದು ರಾಜ್ಯಸಭೆಯಲ್ಲಿ ಸಭಾಪತಿ ಪೀಠದ ಮುಂದೆ ನಾಮಫಲಕ ಹಿಡಿದು ಪ್ರತಿಭಟನೆ ನಡೆಸಿದಂತ 11 ಸದಸ್ಯರನ್ನು 1 ವಾರಗಳ ಕಾಲ ಕಲಾಪದಿಂದ ಅಮಾನತುಗೊಳಿಸಲಾಗಿದೆ. ಇಂದು ರಾಜ್ಯಸಭೆಯ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧ ವಿವಿಧ ವಿಷಯಗೊಂದಿಗೆ ಸದಸ್ಯರು ಪ್ರತಿಭಟನೆಗೆ ಇಳಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸ್ಪೀಕರ್ ತಮ್ಮ ಸ್ಥಾನಕ್ಕೆ ತೆರಳುವಂತೆ ಸೂಚಿಸಿದರೂ ಕೇಳಲಿಲ್ಲ. https://kannadanewsnow.com/kannada/tamil-nadu-10-injured-as-violent-clashes-break-out-in-madurai-temple/ ಇದಲ್ಲದೇ ಸಭಾಪತಿ ಪೀಠದ ಮುಂದೆಯೇ ನಾಮಫಲಕ ಹಿಡಿದು ಪ್ರತಿಭಟನೆಯನ್ನು ತೃಣಮೂಲ ಕಾಂಗ್ರೆಸ್ ಪಕ್ಷದ ಸದಸ್ಯೆ ಸುಶ್ಮಿತಾ ದೇವ್, ಡಿಎಂಕೆ ಸದಸ್ಯೆ ಕನಿಮೋಳಿ ಸೇರಿದಂತೆ ಹಲವರು ಪ್ರತಿಭಟನೆ ನಡೆಸಿದರು. ಈ ಹಿನ್ನಲೆಯಲ್ಲಿ 11 ಮಂದಿ ರಾಜ್ಯಸಭಾ ಸದಸ್ಯರನ್ನು ಸಭಾಪತಿಗಳು 1 ವಾರದಿಂದ ಕಲಾಪದಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಅಂದಾಹೇ ನಿನ್ನೆಯಷ್ಟೇ ಸ್ಪೀಕರ್ ಲೋಕಸಭೆಯಲ್ಲಿ ಕಲಾಪದ ವೇಳೆಯಲ್ಲಿ ಪ್ರತಿಭಟನೆ ನಡೆಸಿದ್ದಂತ ನಾಲ್ವರು ಸದಸ್ಯರನ್ನು ಅಮಾನತುಗೊಳಿಸಿದ್ದರು. ಈ ಬೆನ್ನಲ್ಲೇ ಇಂದು ರಾಜ್ಯಸಭೆಯ…

Read More

ನವದೆಹಲಿ : ಸಭಾಪತಿ ಪೀಠದ ಎದುರು ನಾಮಫಲ ಪ್ರದರ್ಶನ ಮತ್ತು ಘೋಷಣೆಗಳನ್ನ ಕೂಗಿದ ಹಿನ್ನೆಲೆ ರಾಜ್ಯಸಭೆ ಕಲಾಪದಿಂದ 11 ಸದಸ್ಯರು 1 ವಾರ ಅಮಾನತುಗೊಳಿಸಿ ಸಭಾಪತಿ ಆದೇಶಿಸಿದ್ದಾರೆ. ಅದ್ರಂತೆ, ಟಿಎಂಸಿ ಸಂಸದರಾದ ಸುಶ್ಮಿತಾ ದೇವ್, ಡಾ. ಶಂತನು ಸೇನ್ ಮತ್ತು ಡೋಲಾ ಸೇನ್ ಸೇರಿದಂತೆ ಇತರ ರಾಜ್ಯಸಭಾ ಸಂಸದರು ಸದನದ ಬಾವಿಗೆ ಪ್ರವೇಶಿಸುವ ಮೂಲಕ ಘೋಷಣೆಗಳನ್ನ ಕೂಗಿದ್ದು, “ದುರ್ನಡತೆ ಆಧಾರದ ಮೇಲೆ ವಾರದ ಉಳಿದ ಭಾಗಕ್ಕಾಗಿ ಅಮಾನತುಗೊಳಿಸಲಾಗಿದೆ. ಇನ್ನು ಸಭೆಯಲ್ಲಿ ಗದ್ದಲ ಉಂಟಾದ ಹಿನ್ನೆಲೆ ಮುಂದಿನ 20 ನಿಮಿಷಗಳ ಕಾಲ ಸದನ ಮುಂದೂಡಿಕೆ ಮಾಡಲಾಗಿದೆ. https://twitter.com/ANI/status/1551854287441240064?s=20&t=P7HS03chYxWinAKuwZk_XQ

Read More

ಚೆನ್ನೈ: ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ 12ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಳೆದೆರಡು ವಾರಗಳಲ್ಲಿ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳ ಸಂಖ್ಯೆ ಮೂರಾಗಿದೆ. ತಾಯಿ ಗದರಿಸಿದ್ದರಿಂದ ಬಾಲಕಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ ಎನ್ನಲಾಗುತ್ತಿದೆ. ಹದಿಹರೆಯದ ವಿದ್ಯಾರ್ಥಿಗಳ ಸಾವಿನಿಂದ ಕಳವಳ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಆತ್ಮಹತ್ಯೆಯ ಆಲೋಚನೆಗಳಿಂದ ದೂರವಿಡುವಂತೆ ಯುವಜನತೆಯಲ್ಲಿ ಮನವಿ ಮಾಡಿದ್ದಾರೆ.

Read More

ಕಾಬೂಲ್ (ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ಝಬುಲ್ ಪ್ರಾಂತ್ಯದಲ್ಲಿ ಇಂದು ಮುಂಜಾನೆ ಟ್ರಾವೆಲರ್ ಬಸ್ ಪಲ್ಟಿಯಾದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 48 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಶಹರ್-ಎ-ಸಫಾ ಜಿಲ್ಲೆಯಲ್ಲಿ ಇಂದು ಮುಂಜಾನೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. 48 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಾಂತೀಯ ಸಾರ್ವಜನಿಕ ಆರೋಗ್ಯ ಇಲಾಖೆಯ ನಿರ್ದೇಶಕ ಅಬ್ದುಲ್ ಹಕೀಮ್ ಹಕಿಮಿ ತಿಳಿಸಿದ್ದಾರೆ. ಅಜಾಗರೂಕ ಚಾಲನೆ ಮತ್ತು ದಟ್ಟಣೆಯ ರಸ್ತೆಗಳಿಂದಾಗಿ ಅಫ್ಘಾನಿಸ್ತಾನದಲ್ಲಿ ಆಗಾಗ್ಗೆ ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸುತ್ತವೆ ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. https://kannadanewsnow.com/kannada/lakhimpur-kheri-violence-case-ashish-mishras-bail-rejected/ https://kannadanewsnow.com/kannada/tamil-nadu-man-kills-newly-wed-daughter-husband-surrenders-police-2/ https://kannadanewsnow.com/kannada/tamil-nadu-10-injured-as-violent-clashes-break-out-in-madurai-temple/

Read More