Subscribe to Updates
Get the latest creative news from FooBar about art, design and business.
Author: KNN IT TEAM
ಚಿತ್ರದುರ್ಗ: ಸಿ.ಟಿ ರವಿ ( BJP CT Ravi ) ಅವರು 2007ರಲ್ಲಿ ಎಲ್ಲಿ ಬಂದು ಯಾರ ಬಳಿ ಮತ್ತು ಯಾವುದಕ್ಕಾಗಿ ಬಕೆಟ್ ಹಿಡಿದರು ಎಂಬುದನ್ನು ಮೊದಲು ನೆನಪಿಸಿಕೊಳ್ಳಲಿ. ಮತ್ತೊಬ್ಬರಿಗೆ ಬಕೆಟ್ ರಾಜಕಾರಣಿ ಎಂದು ಹೇಳುವ ನೈತಿಕತೆಯೇ ಅವರಿಗಿಲ್ಲ ಎಂದು ಚಾಮರಾಜಪೇಟೆ ಶಾಸಕರು ಮತ್ತು ಮಾಜಿ ಸಚಿವರಾದ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ( MLA Zameer Ahmad Khan ) ತಿರುಗೇಟು ನೀಡಿದ್ದಾರೆ. https://kannadanewsnow.com/kannada/do-you-like-photography-and-videography-heres-a-golden-opportunity-for-training/ ಚಿತ್ರದುರ್ಗದಲ್ಲಿ ಸಿದ್ದರಾಮಯ್ಯ ( Siddaramaiah ) ಅವರ ಕಾರ್ಯಕ್ರಮದ ಪ್ರಯುಕ್ತ ಪೂರ್ವ ಭಾವಿ ಸಭೆಯಲ್ಲಿ ಪಾಲ್ಗೊಂಡು, ಜಿಲ್ಲೆಯ ಕಾಂಗ್ರೆಸ್ ಕಛೇರಿಗೆ ಭೇಟಿ ನೀಡುವ ವೇಳೆ, ಅವರು ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಒಕ್ಕಲಿಗರ ಬಗ್ಗೆ ಏನಾದರೂ ತಪ್ಪಾಗಿ ಮಾತನಾಡಿದ್ದರೆ, ತೋರಿಸಲಿ. ತಪ್ಪಿದ್ದರೆ ಕ್ಷಮೆ ಕೇಳುತ್ತೇನೆ. ನಿನ್ನೆಯೇ ನಾನು ಬಿಡಿಸಿ ಹೇಳಿದ್ದೇನೆ. ಹೆಚ್ ಡಿ ದೇವೇಗೌಡರೇ ನನ್ನ ರಾಜಕೀಯ ಗುರುಗಳು. ನಾನು ಒಕ್ಕಲಿಗರ ನಡುವೆ ಬೆಳೆದಿರುವ ಹುಡುಗ. ಉಪ ಚುನಾವಣೆ ವೇಳೆ ದೇವೇಗೌಡರು…
ದೆಹಲಿ: ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯ ನಾಗರಿಕರು ಮತ್ತು ಕಂಪನಿಗಳು ಠೇವಣಿ ಇಟ್ಟಿರುವ ಹಣದ ನಿಖರ ಮೊತ್ತದ ಬಗ್ಗೆ ಯಾವುದೇ ಅಧಿಕೃತ ಅಂದಾಜು ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. https://kannadanewsnow.com/kannada/should-you-be-protected-from-the-dangerous-monkeypox-virus-follow-these-10-methods-without-missing-out-dont-be-afraid/ ಭಾರತೀಯರು ಸ್ವಿಸ್ ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವ ಹಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, “ಭಾರತೀಯ ನಾಗರಿಕರು ಮತ್ತು ಕಂಪನಿಗಳು ಸ್ವಿಸ್ ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವ ಹಣದ ಬಗ್ಗೆ ಯಾವುದೇ ಅಧಿಕೃತ ಅಂದಾಜು ಇಲ್ಲ” ಎಂದು ಹೇಳಿದರು. https://kannadanewsnow.com/kannada/bengals-one-rupee-doctor-sushovan-bandyopadhyay-passes-away-pm-modi-expresses-grief/ ಆದಾಗ್ಯೂ, ಇತ್ತೀಚಿನ ಕೆಲವು ಮಾಧ್ಯಮ ವರದಿಗಳು 2020 ಕ್ಕೆ ಹೋಲಿಸಿದರೆ 2021 ರಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರ ನಿಧಿ ಹೆಚ್ಚಾಗಿದೆ ಎಂದು ಹೇಳಿವೆ ಎಂದು ಅವರು ಹೇಳಿದರು. ಈ ಠೇವಣಿಗಳು ಸ್ವಿಟ್ಜರ್ಲ್ಯಾಂಡ್ನಲ್ಲಿ ಭಾರತೀಯರು ಹೊಂದಿದ್ದಾರೆಂದು ಹೇಳಲಾದ ಕಪ್ಪು ಹಣದ ಪ್ರಮಾಣವನ್ನು ಸೂಚಿಸುವುದಿಲ್ಲ ಎಂದು ಈ ಮಾಧ್ಯಮ ವರದಿಗಳು ಉಲ್ಲೇಖಿಸಿವೆ. https://kannadanewsnow.com/kannada/should-you-be-protected-from-the-dangerous-monkeypox-virus-follow-these-10-methods-without-missing-out-dont-be-afraid/ ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್ಎನ್ಬಿ) ವಾರ್ಷಿಕ…
ರಾಮನಗರ: ಬಹುತೇಕರು ಪೋಟೋಗ್ರಫಿ ಹಾಗೂ ವೀಡಿಯೋಗ್ರಫಿ ( photography and videography ) ಮೂಲಕ ತಮ್ಮ ಸ್ವಾವಲಂಭನೆಯ ಬದುಕು ಕಟ್ಟಿಕೊಳ್ಳೋದಕ್ಕೆ ಎದುರು ನೋಡುತ್ತಿರುತ್ತಾರೆ. ಅಂತಹ ಸ್ವ-ಉದ್ಯೋಗಾಕಾಂಕ್ಷಿಗಳಿಗೆ ಹಾರೋಹಳ್ಳಿಯ ಕೆನರಾ ಬ್ಯಾಂಗ್ ಗ್ರಾಮೀಣ ತರಬೇತಿ ಸಂಸ್ಥೆ ಸುವರ್ಣಾವಕಾಶ ಕಲ್ಪಿಸುತ್ತಿದೆ. https://kannadanewsnow.com/kannada/good-news-for-bescom-customers-free-consumer-friendly-digital-meter-to-be-installed/ ಹೌದು.. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹಾರೋಹಳ್ಳಿಯ ಸರ್ಕಾರಿ ಆಸ್ಪತ್ರೆಯ ಹತ್ತಿರವಿರುವಂತ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಉಚಿತವಾಗಿ ಪೋಟೋಗ್ರಫಿ ಮತ್ತು ವೀಡಿಯೋಗ್ರಫಿ ತರಬೇತಿ ನೀಡಲು ಅರ್ಜಿಯನ್ನು ಆಹ್ವಾನಿಸಿದೆ. https://kannadanewsnow.com/kannada/important-information-for-those-who-have-applied-for-state-level-best-teacher-award/ 30 ದಿನಗಳ ತರಬೇತಿ ಇದಾಗಿದ್ದು, ತರಬೇತಿಯ ಅವಧಿಯಲ್ಲಿ ಊಟ, ವಸತಿಯು ಸಂಪೂರ್ಣ ಉಚಿತವಾಗಿದೆ. ದಿನಾಂಕ 08-08-2022 ರಿಂದ 06-09-2022ರವರೆಗೆ ತರಬೇತಿ ನಡೆಯಲಿದ್ದು, ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳೋದಕ್ಕೆ ಸಂಪರ್ಕಿಸಿ 9972381707, 9901512638, 8105185202 https://kannadanewsnow.com/kannada/anybody-can-be-rich/
BREAKING NEWS : ‘ಒಂದು ರೂಪಾಯಿ ಡಾಕ್ಟರ್’ ಖ್ಯಾತಿಯ ‘ಡಾ. ಸುಶೋವನ್ ಬಂಡೋಪಾಧ್ಯಾಯ’ ವಿಧಿವಶ ; ಪ್ರಧಾನಿ ಮೋದಿ ಸಂತಾಪ
ನವದೆಹಲಿ : ಪಶ್ಚಿಮ ಬಂಗಾಳದ “ಒಂದು ರೂಪಾಯಿ-ವೈದ್ಯ” ಖ್ಯಾತಿಯ ಬಿರ್ಭುಮ್ ಸುಶೋವನ್ ಬಂಡೋಪಾಧ್ಯಾಯ ಅವರ ವಿಧಿವಶರಾಗಿದ್ದು, ಅವ್ರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಮಂಗಳವಾರ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನಲ್ಲಿ, “ಡಾ. ಸುಶೋವನ್ ಬಂಡೋಪಾಧ್ಯಾಯ ಅವರು ಮಾನವ ಚೈತನ್ಯದ ಅತ್ಯುತ್ತಮತೆಯನ್ನ ಪ್ರತಿಬಿಂಬಿಸಿದ್ದಾರೆ. ಅನೇಕ ಜನರನ್ನ ಗುಣಪಡಿಸಿದ ದಯಾಪರ ಮತ್ತು ವಿಶಾಲ ಹೃದಯದ ವ್ಯಕ್ತಿಯಾಗಿ ಅವ್ರನ್ನ ನೆನಪಿಸಿಕೊಳ್ಳಲಾಗುವುದು. ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರೊಂದಿಗೆ ನಾನು ನಡೆಸಿದ ಸಂವಾದ ನೆನಪಿಸಿಕೊಳ್ಳುತ್ತಿದ್ದೇನೆ. ಇನ್ನು ಅವ್ರ ನಿಧನದಿಂದ ದುಃಖಿತನಾಗಿದ್ದು, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ” ಎಂದಿದ್ದಾರೆ. https://twitter.com/narendramodi/status/1551868284009873408?s=20&t=MWY6tUeko1TQhTl0myCCvA “ಏಕ್ ತಕಾರ್ ದಕ್ತಾರ್” ಎಂದು ಪ್ರೀತಿಯಿಂದ ಕರೆಯಲ್ಪಡುವ ಸುಶೋವನ್, ಬಿರ್ಭುಮ್‌ನ ಬೋಲ್ಪುರದಲ್ಲಿ ರೋಗಿಗಳಿಗೆ ಕೇವಲ 1 ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದರು. ಸುಶೋವನ್ ಒಮ್ಮೆ ಬೋಲ್ಪುರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದರು. ಇನ್ನು ತೃಣಮೂಲ ಕಾಂಗ್ರೆಸ್ ರಚನೆಯಾದ ನಂತರ, ಅವರು ಬಿರ್ಭೂಮ್‌ನಲ್ಲಿ ತೃಣಮೂಲದ ಮೊದಲ ಜಿಲ್ಲಾ ಅಧ್ಯಕ್ಷರಾಗಿದ್ರು. ಡಾ. ಸುಶೋವನ್ ಅವ್ರಿಗೆ 2020ರಲ್ಲಿ ಅತ್ಯುನ್ನತ…
ನೀವು ʻಅಪಾಯಕಾರಿ ಮಂಕಿಪಾಕ್ಸ್ ವೈರಸ್ ʼನಿಂದ ರಕ್ಷಿಸಬೇಕೆ?ಈ 10 ಎಚ್ಚರಿಕೆಯ ವಿಧಾನಗಳನ್ನು ಪಾಲಿಸಿ | Monkeypox Virus
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಮಂಕಿಫಾಕ್ಸ್ ವೈರಸ್ ದೇಶಾದ್ಯಂತ ಹೆಚ್ಚಾಗುತ್ತಿದ್ದಂತೆ ಜನರಲ್ಲಿ ಭಯ ಶುರುವಾಗಿದೆ. ಅದಕ್ಕಾಗಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಮುಖ್ಯವಾಗಿದೆ. https://kannadanewsnow.com/kannada/can-mankipax-infection-be-transmitted-through-sex-do-you-know-what-the-experts-said-about-this-read-here/ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್ಸ್ಟಿಟ್ಯೂಟ್ನ ಆಂತರಿಕ ಔಷಧ ವಿಭಾಗದ ನಿರ್ದೇಶಕ ಡಾ. ಸತೀಶ್ ಕೌಲ್, ಸೋಂಕಿತ ರೋಗಿಯ ಸಂಪರ್ಕದಿಂದ ಮಂಕಿಪಾಕ್ಸ್ ವೈರಸ್ ಹರಡುತ್ತದೆ ಎಂದು ಹೇಳುತ್ತಾರೆ. ಈ ವೈರಸ್ ಚರ್ಮದಿಂದ ಚರ್ಮದ ಸ್ಪರ್ಶ, ದೈಹಿಕ ಸಂಪರ್ಕ ಮತ್ತು ಹನಿಗಳ ಮೂಲಕ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹರಡುತ್ತದೆ. ಇದು ಒಂದು ಝೂನೋಟಿಕ್ ರೋಗವಾಗಿದೆ. ಇದು ಮೂರರಿಂದ ನಾಲ್ಕು ವಾರಗಳವರೆಗೆ ದೇಹದಲ್ಲಿ ಉಳಿಯಬಹುದು. ಮಂಕಿಪಾಕ್ಸ್ ಉಂಟಾದಾಗ ಜ್ವರವು ಮೊದಲು ಸಂಭವಿಸುತ್ತದೆ. ಇದರೊಂದಿಗೆ ದೇಹ ಮತ್ತು ಸ್ನಾಯುಗಳಲ್ಲಿ ನೋವು, ತಲೆನೋವು ಮತ್ತು ಊದಿಕೊಂಡ ದುಗ್ಧರಸ ಗ್ರಂಥಿಗಳು ಬರುತ್ತವೆ. ಮುಖದ ಮೇಲೆ ದದ್ದು ಕಾಣಿಸಿಕೊಳ್ಳುತ್ತದೆ, ಅದು ಕ್ರಮೇಣ ದೇಹದಲ್ಲಿ ಹರಡಲು ಪ್ರಾರಂಭಿಸುತ್ತದೆ. ಸೋಂಕಿತ ರೋಗಿಯ ಸಂಪರ್ಕಕ್ಕೆ ಬಂದ ಮೂರರಿಂದ ನಾಲ್ಕು ದಿನಗಳ ನಂತರ ಈ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇದು 21…
ಬೆಂಗಳೂರು: 2022-23ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ( State Level Best Teacher Award ) ಆನ್ ಲೈನ್ ( Online ) ಮೂಲಕ ನಿಗದಿತ ಕಲಾವಧಿಯಲ್ಲಿ ಅರ್ಜಿ ಸಲ್ಲಿಸುವ ( Application ) ಅರ್ಜಿದಾರರಿಗೆ ಬಿಟ್ಟುಹೋಗಿರುವ, ಹೆಚ್ಚುವರಿ ಅಂಶಗಳನ್ನು ಸಲ್ಲಿಸಲು ಶಿಕ್ಷಣ ಇಲಾಖೆ ( Education Department ) ಅವಕಾಶ ನೀಡಿ ಆದೇಶಿಸಿದೆ. https://kannadanewsnow.com/kannada/good-news-for-bescom-customers-free-consumer-friendly-digital-meter-to-be-installed/ ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, 2022-23ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಹ ಶಿಕ್ಷಕರಿಂದ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಕೆಗೆ ದಿನಾಂಕ 25-07-2022ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು ಎಂದಿದ್ದಾರೆ. https://kannadanewsnow.com/kannada/anybody-can-be-rich/ ಇನ್ನೂ ಅರ್ಜಿ ಸಲ್ಲಿಕೆಯ ಸಂದರ್ಭದಲ್ಲಿ ಯಾವುದಾದರೂ ಅಗತ್ಯ ಅಂಶಗಳನ್ನು ಸಲ್ಲಿಸುವುದು ಬಿಟ್ಟು ಹೋಗಿದ್ದಲ್ಲಿ, ಬಾಕಿ ಇದ್ದಲ್ಲಿ, ಹೆಚ್ಚುವರಿಯಾಗಿ ಸಲ್ಲಿಸಬೇಕಾಗಿದ್ದಲ್ಲಿ, ಅವುಗಳನ್ನು ಸಲ್ಲಿಸಲು ದಿನಾಂಕ 26-07-2022 ರಿಂದ 27-07-2022ರವರೆಗೆ ಮತ್ತೊಂದು ಅವಕಾಶವನ್ನು ನೀಡಿದೆ. https://kannadanewsnow.com/kannada/reply-to-those-who-say-bjp-has-no-strength-in-janotsava-sammelan-to-be-held-from-july-28-minister-sudhakar/
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಏಲಕ್ಕಿಯು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹೆಚ್ಚಿನ ಜನರು ಇದನ್ನು ಮೌತ್ ಫ್ರೆಶ್ನರ್ ಆಗಿ ಬಳಸುತ್ತಾರೆ. ಇದಲ್ಲದೆ, ಚಹಾದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸಲು ಏಲಕ್ಕಿಯನ್ನು ಸಹ ಬಳಸಲಾಗುತ್ತದೆ. ಇದರ ಜೊತೆಗೆ ಹಾಲಿನೊಂದಿಗೆ ಏಲಕ್ಕಿ ಮಿಶ್ರಣ ಮಾಡಿ ಕುಡಿಯುವುದರಿಂದ ಅನೇಕ ಪ್ರಯೋಜನಗಳು ಸಿಗಲಿವೆ. ಹೌದು, ರಾತ್ರಿ ಮಲಗುವ ಮುನ್ನ ಏಲಕ್ಕಿ ಹಾಲನ್ನು ಕುಡಿದರೆ ಅದರಿಂದ ಹಲವಾರು ಪರಿಣಾಮಕಾರಿ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಹಾಲು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಏಲಕ್ಕಿಯು ಸರಿಯಾದ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. https://kannadanewsnow.com/kannada/struggling-actor-who-threatened-to-kill-katrina-kaif-sent-to-two-day-police-custody/ ಏಲಕ್ಕಿ ಹಾಲು ಕುಡಿಯುವುದರಿಂದಾಗುವ ಪ್ರಯೋಜನಗಳು ಉತ್ತಮ ಜೀರ್ಣಕ್ರಿಯೆ ಏಲಕ್ಕಿ ಹಾಲು ಆರೋಗ್ಯಕ್ಕೆ ಒಳ್ಳೆಯದು, ಹಾಗೆಯೇ ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಕೆಲಸ ಮಾಡುತ್ತದೆ. ಮಲಗುವ ಮುನ್ನ ಏಲಕ್ಕಿ ಹಾಲನ್ನು ಕುಡಿಯುವುದರಿಂದ ಬೆಳಿಗ್ಗೆ ಹೊಟ್ಟೆ ಶುಚಿಯಾಗುತ್ತದೆ. ಇದು ಮಲಬದ್ಧತೆ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಏಲಕ್ಕಿ ಕೂಡ ಅಸಿಡಿಟಿಯನ್ನು ಕಡಿಮೆ ಮಾಡಲು ತುಂಬಾ ಸಹಕಾರಿಯಾಗಿದೆ. ಏಲಕ್ಕಿ ಹಾಲಿನ ಸೇವನೆಯಿಂದ ಅಜೀರ್ಣ, ವಾತದಂತಹ ಸಮಸ್ಯೆಗಳೂ…
ಬೆಂಗಳೂರು: ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬಿಜೆಪಿಗೆ ಶಕ್ತಿ ಇಲ್ಲ ಎಂದು ಹೇಳುವ ಬೇರೆ ಪಕ್ಷದ ನಾಯಕರಿಗೆ, ಜುಲೈ 28 ರಂದು ನಡೆಯಲಿರುವ ಜನೋತ್ಸವ ಸಮಾವೇಶದಲ್ಲಿ ಉತ್ತರ ಸಿಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ( Minister Dr K Sudhakar ) ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಬಿಜೆಪಿ ಜನರಿಂದ ಮೇಲೆ ಬಂದಿರುವ ಪಕ್ಷ. ಜನರಿಗೋಸ್ಕರ ಕೆಲಸ ಮಾಡುತ್ತಿದೆ. ಆಡಳಿತಕ್ಕೆ ಬಂದು 3 ವರ್ಷವಾಗಿದೆ. ಕೋವಿಡ್ ಕಾರಣದಿಂದ ಕಳೆದ 2 ವರ್ಷಗಳಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಸಾಧ್ಯವಾಗಿಲ್ಲ. ಈಗ ಬಸವರಾಜ ಬೊಮ್ಮಾಯಿಯವರು ಸಿಎಂ ಆಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ನೆರವು ಪಡೆದ ಲಕ್ಷಾಂತರ ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಲಕ್ಷಾಂತರ ಕಾರ್ಯಕರ್ತರು ಪಕ್ಷ ಹಾಗೂ ಸರ್ಕಾರದ ಕಾರ್ಯ ವೈಖರಿಯನ್ನು ಮೆಚ್ಚಿ ಸಂದೇಶ ಕಳುಹಿಸಲಿದ್ದಾರೆ ಎಂದು ತಿಳಿಸಿದರು. https://kannadanewsnow.com/kannada/good-news-for-bescom-customers-free-consumer-friendly-digital-meter-to-be-installed/ ಯಾವುದೇ ಒಂದು ಸಮುದಾಯದಿಂದ…
ಕೋಲಾರ: ಜಿ.ಟಿ.ದೇವೇಗೌಡ ನಮ್ಮ ಪಕ್ಷದ ಹಿರಿಯ ಮುಖಂಡರು. ಹೀಗಾಗಿ ಅವರು ಬೇರೆ ಯಾವುದೆ ಪಕ್ಷಕ್ಕೆ ಹೋಗುವ ಮಾತೇ ಇಲ್ಲ. ನಾನು ಈಗಾಗಲೆ ಹಲವು ಬಾರಿ, ಭೇಟಿ ಮಾಡಿ ಮಾತನಾಡಿದ್ದೇನೆ ಎಂದು ಜೆಡಿಎಸ್ ಹಿರಿಯ ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ. https://kannadanewsnow.com/kannada/minister-umesh-katti-raises-issue-of-separate-state-of-north-karnataka/ ನಗರದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಅವರ ನೇತೃತ್ವದಲ್ಲಿ ಜೆಡಿಎಸ್ ಸಭೆ ಮಾಡಿದ್ದೇವೆ. ಮೊನ್ನೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಮತದಾನ ಮಾಡಿದ್ದಾರೆ. ಪಕ್ಷ ಬಿಡುವ ವಿಚಾರ ಯಾವತ್ತು ಹೇಳಿಲ್ಲ. ಎಲ್ಲರೂ ಸೇರಿ ಪಕ್ಷ ಸಂಘಟನೆ ಮಾಡುವ ಕುರಿತು ಮಾತನಾಡಿದ್ದೇವೆ.ಅಣ್ಣ ತಮ್ಮಂದಿರಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತೆ.ಆದ್ರೆ ಪಕ್ಷ ಬಿಡುವ ವಿಚಾರ ಎಲ್ಲೂ ಮಾತನಾಡಿಲ್ಲ ಎಂದರು.ಇಡೀ ಜಿಲ್ಲೆಯ ನಾಯಕರು ದೇವೇಗೌಡ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ. ಕುಮಾರಸ್ವಾಮಿ ಅವರನ್ನ ಮತ್ತೆ ಮುಖ್ಯಮಂತ್ರಿ ಮಾಡುವುದು ನಮ್ಮ ಗುರಿ ಆಗಿದೆ. ವಿಧಾನಸಭೆ ಚುನಾವಣೆ ಇನ್ನೂ 11 ತಿಂಗಳ ಬಳಿಕ ಬರಲಿದೆ. ಅದಕ್ಕಾಗಿಯೆ ನಿನ್ನೆ ಹೊಸದಾಗಿ ಬೋರ್ಡ್ ಜೇರ್ಮನ್ ಮಾಡಿದ್ದಾರೆ. https://kannadanewsnow.com/kannada/minister-umesh-katti-raises-issue-of-separate-state-of-north-karnataka/ ಸಿದ್ದರಾಮೋತ್ಸವ,…
ಬೆಂಗಳೂರು: ಬೆಸ್ಕಾಂನ ( BESCOM ) ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ವಲದಯದಲ್ಲಿನ (BMAZ) ಗ್ರಾಹಕರಿಗೆ ತಾವು ಬಳಸುವ ವಿದ್ಯುತ್ ಪ್ರಮಾಣದ ನಿಖರ ಮಾಹಿತಿ ತಿಳಿದುಕೊಳ್ಳಲು ಅನುಕುಲವಾಗುವ ಡಿಎಲ್ಎಮ್ಎಸ್ ಸ್ಟ್ಯಾಟಿಕ್ (ಡಿವೈಸ್ ಲ್ಯಾಂಗ್ವೇಜ್ ಮೆಸೇಜ್ ಸ್ಪೆಸಿಫಿಕೇಷನ್) ಡಿಜಿಟಲ್ ಮಾಪನಗಳನ್ನು ನೀಡಲಾಗುತ್ತಿದೆ. ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ವ್ಯಾಪ್ತಿಯಲ್ಲಿರುವ (BMAZ) 17,68,000 ಇಲೆಕ್ಟ್ರೊ ಮೆಕಾನಿಕಲ್ ಮೀಟರ್ ಗಳನ್ನು ಡಿಎಲ್ಎಮ್ಎಸ್ ಸ್ಟ್ಯಾಟಿಕ್ ಡಿಜಿಟಲ್ ಮೀಟರ್ ಗೆ ಬದಲಾವಣೆ ಮಾಡುವ ಕಾರ್ಯ ಜುಲೈ ತಿಂಗಳಲ್ಲಿ ಆರಂಭಗೊಂಡಿದೆ. https://kannadanewsnow.com/kannada/chargesheet-filed-against-farooq-abdullah-in-money-laundering-case/ ರಾಜಾಜಿನಗರ, ರಾಜರಾಜೇಶ್ವರಿನಗರ, ಇಂದಿರಾನಗರ ಮತ್ತು ವೈಟ್ ಫೀಲ್ಡ್ ವಿಭಾಗಗಳಲ್ಲಿ ಈಗಾಗಲೇ 16,000 ಸಿಂಗಲ್ ಫೇಸ್ ಮತ್ತು 3 ಫೇಸ್ ಡಿಜಿಟಲ್ ಮಾಪನಗಳನ್ನು ಅಳವಡಿಸಲಾಗಿದೆ. ಡಿಜಿಟಲ್ ಮೀಟರ್ ಬದಲಾವಣೆ ಕಾರ್ಯ ಭರದಿಂದ ಸಾಗಿದ್ದು ಪ್ರತಿನಿತ್ಯ 700 ರಿಂದ 900 ಮೀಟರ್ ಗಳನ್ನು ಅಳವಡಿಸಲಾಗುತ್ತಿದೆ. ಬೆಸ್ಕಾಂ ಒಂದು ವಿಭಾಗದಲ್ಲಿ ಮೀಟರ್ ಅಳವಡಿಕೆ ಕಾರ್ಯ ಪೂರ್ಣಗೊಂಡ ನಂತರವೇ ಇನ್ನೊಂದು ವಿಭಾಗದಲ್ಲಿ ಅಳವಡಿಕೆ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಬೆಸ್ಕಾಂ ತಿಳಿಸಿದೆ. 2024ರ ವೇಳೆಗೆ 17,68,000 ಇಲೆಕ್ಟ್ರೋ…