Subscribe to Updates
Get the latest creative news from FooBar about art, design and business.
Author: KNN IT TEAM
ಮಡಿಕೇರಿ : ರಾಜ್ಯದಲ್ಲಿ ಕೃಷಿ ಉತ್ಪಾದಕತೆ ಹೆಚ್ಚಿಸುವಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆ ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪ್ರತಿ ಎಕರೆಗೆ 250 ರೂ ಗಳಂತೆ ಗರಿಷ್ಟ ಐದು ಎಕರೆಗೆ ಡಿ.ಬಿ.ಟಿ ಮೂಲಕ ಡೀಸೆಲ್‍ಗೆ ಸಹಾಯಧನವನ್ನು ನೀಡಲು “ರೈತ ಶಕ್ತಿ” ಎಂಬ ಹೊಸ ಯೋಜನೆಯನ್ನು ಅನುಷ್ಟಾನಗೊಳಿಸಲಾಗಿದೆ. https://kannadanewsnow.com/kannada/bigg-breaking-news-bjp-leader-praveen-bettaru-murder-case-miscreants-pelt-stones-at-government-bus-in-puttur/ ರೈತ ಶಕ್ತಿ ಯೋಜನೆಗೆ ಒಳಪಡುವ ಅಂಶಗಳು: ಪ್ರೂಟ್ಸ್ ಪೋರ್ಟಲ್‍ನಲ್ಲಿ ನೋಂದಣಿಗೊಂಡ ಎಲ್ಲಾ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಈ ಯೋಜನೆಯು ಅರ್ಹತಾಧಾರಿತ ಯೋಜನೆ ಆಗಿರುವುದರಿಂದ ಯಾವುದೇ ರೈತರು ಪ್ರತ್ಯೇಕವಾಗಿ ವೈಯಕ್ತಿಕ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ, ದಾಖಲೆಗಳ ಪರಿಶೀಲನೆಯನ್ನು ಸರ್ಕಾರದ ಪ್ರೂಟ್ಸ್ ಪೋರ್ಟಲ್‍ನಲ್ಲಿ ಲಭ್ಯವಿರುವ ದತ್ತಾಂಶಗಳ ಆಧಾರದ ಮೇಲೆ ಮಾಡಲಾಗುವುದು. ಸಂಘ ಸಂಸ್ಥೆ/ ಸ್ವಸಹಾಯ ಗುಂಪುಗಳು/ ಟ್ರಸ್ಟ್ ಗಳು/ ಸಂಸ್ಥೆಗಳ ಹೆಸರಿನಲ್ಲಿರುವ ಭೂ ಒಡೆತನಗಳಿಗೆ ಸಹಾಯಧನ ಒದಗಿಸಲು ಅವಕಾಶವಿರುವುದಿಲ್ಲ. https://kannadanewsnow.com/kannada/good-news-good-news-for-the-scheduled-caste-community-dr-b-r-ambedkar-development-corporation-invites-applications-under-various-schemes/ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಾವಣಿಗೊಂಡ ರೈತರು ಹೊಂದಿರುವ ಭೂಹಿಡುವಳಿಯ ಆಧಾರದ ಮೇಲೆ ಪ್ರತಿಯೊಬ್ಬ…
ಮಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರುರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಹಿನ್ನೆಲೆಯಲ್ಲಿ ಪಮಂಗಳೂರಿನಲ್ಲಿ ಉದ್ರಿಕ್ತರು ಸರ್ಕಾರಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. https://kannadanewsnow.com/kannada/good-news-good-news-for-the-scheduled-caste-community-dr-b-r-ambedkar-development-corporation-invites-applications-under-various-schemes/ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಬೆಳ್ಳಾರೆ, ಪುತ್ತೂರು, ಸುಳ್ಯ, ಕಡಬದಲ್ಲಿ ಸ್ವಯಂಘೋಷಿತ ಬಂದ್ ಗೆ ಹಿಂದು ಸಂಘಟನೆಗಳು ಕರೆ ನೀಡಿದ್ದು, ಮಂಗಳೂರಿನಲ್ಲಿ ಸರ್ಕಾರಿ ಬಸ್ ಮೇಲೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದಾರೆ. ಮಂಗಳೂರಿನ ಪುತ್ತೂರಿನ ಬೊಲ್ವರಿ ಬಳಿ ಉದ್ರಿಕ್ತರಿಂದ ಕಲ್ಲು ತೂರಾಟ ನಡದಿದೆ. https://kannadanewsnow.com/kannada/7-1-magnitude-earthquake-hits-northern-philippines-report/ ಬೆಳ್ಳಾರೆಯ ಮೇಲಿನ ಪೇಟೆಯಲ್ಲಿ ಚಿಕನ್ ಅಂಗಡಿ ನಡೆಸುತ್ತಿದ್ದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರುನನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಶಿವಮೊಗ್ಗ : ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ಅರ್ಹ ರೈತ ಫಲಾನುಭವಿಗಳು ಇ-ಕೆವೈಸಿಯನ್ನು ಈ ಕೂಡಲೇ ಮಾಡಿಸಬೇಕು. ಈಗಾಗಲೇ ಈ ಯೋಜನೆಯಡಿ ರೈತರು ಆರ್ಥಿಕ ಸಹಾಯಧನ ಪಡೆಯುತ್ತಿದ್ದು, ಮುಂದಿನ ಆರ್ಥಿಕ ನೆರವು ಪಡೆಯಲು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಇ-ಕೆವೈಸಿ ಮಾಡದಿದ್ದಲ್ಲಿ ಆರ್ಥಿಕ ನೆರವು ಸ್ಥಗಿತಗೊಳ್ಳಲಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ರೈತ ಫಲಾನುಭವಿಗಳು ಇ-ಕೆವೈಸಿಯನ್ನು ತಮ್ಮ ತಾಲ್ಲೂಕಿನ ಹತ್ತಿರದ ಸಿಎಸ್‍ಸಿ(ನಾಗರಿಕ ಸೇವಾ ಕೇಂದ್ರ) ಅಥವಾ http://pmkisan.gov.in ಪೋರ್ಟಲ್‍ನ ಫಾರ್ಮರ್ಸ್ ಕಾರ್ನರ್‍ನ ಇ-ಕೆವೈಸಿ ಅವಕಾಶದಡಿ ಮಾಡಿಕೊಳ್ಳಬೇಕು ಎಂದು ಶಿವಮೊಗ್ಗ ಕೃಷಿ ಸಹಾಯಕ ನಿರ್ದೇಶಕ ಶಿವರಾಜ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರು: ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ ನಿಯಮಿತದ ವತಿಯಿಂದ 2022-23ನೇ ಸಾಲಿಗೆ ಪರಿಶಿಷ್ಟ ಜಾತಿಯ ಜನರ ಆರ್ಥಿಕ ಅಭಿವೃದ್ಧಿಗಾಗಿ ಸ್ವಯಂ ಉದ್ಯೋಗ-ನೇರಸಾಲ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. https://kannadanewsnow.com/kannada/bigg-news-heres-the-important-information-for-candidates-who-have-applied-for-cet/ ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ-1(ಇ.ವಿ ಮತ್ತುಇತರೆ ದ್ವಿಚಕ್ರ ವಾಹನ ಖರೀದಿಗೆ ಸಹಾಯಧನ ಗರಿಷ್ಠ ರೂ.0.50 ಲಕ್ಷ), ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ-2(ಸಹಾಯಧನ ಗರಿಷ್ಠ ರೂ. 2.00 ಲಕ್ಷ), ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ-3(ಸರಕು ವಾಹನಗಳಿಗೆ ಸಹಾಯಧನ ಗರಿಷ್ಠ ರೂ. 3.50 ಲಕ್ಷ), ಮೈಕ್ರೋ ಕ್ರೆಡಿಟ್(ಪ್ರೇರಣಾ) (ಮಹಿಳಾ ಸ್ವ ಸಹಾಯ ಗುಂಪುಗಳಿಗೆ), ಭೂ ಒಡೆತನ ಯೋಜನೆಯಡಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಹಾಗೂ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಯುವ ಸಲುವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. https://kannadanewsnow.com/kannada/price-rise-effect-kalyana-karnataka-school-students-to-be-distributed-groundnut-chikki-instead-of-banana/ ಅರ್ಹ ಫಲಾಪೇಕ್ಷಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 2022ರ ಆಗಸ್ಟ್ 20 ಕೊನೆಯ ದಿನವಾಗಿದೆ. ನಿಗಮದಿಂದ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಇರಬೇಕಾದ ಸಾಮಾನ್ಯ…
ಮನಿಲಾ: ಉತ್ತರ ಫಿಲಿಪೈನ್ಸ್‌ನಲ್ಲಿ ಇಂದು ಮುಂಜಾನೆ 7.1 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ರಾಜಧಾನಿ ಮನಿಲಾದಲ್ಲಿ 300 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಲ್ಲಿರುವ ಎತ್ತರದ ಗೋಪುರಗಳನ್ನು ಅಲುಗಾಡಿಸಿದ ಭೂಕಂಪವು 8:43 am (0043 GMT) ಲುಜಾನ್‌ನ ಮುಖ್ಯ ದ್ವೀಪದಲ್ಲಿರುವ ಪರ್ವತ ಪ್ರಾಂತ್ಯದ ಅಬ್ರಾವನ್ನು ಅಪ್ಪಳಿಸಿತು ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಭೂಕಂಪದ ಅನುಭವದಿಂದ ಡೊಲೊರೆಸ್‌ನಲ್ಲಿ ಭಯಭೀತರಾದ ಜನರು ತಮ್ಮ ಕಟ್ಟಡದಿಂದ ಹೊರಗೆ ಓಡಿ ಹೋಗಿದ್ದಾರೆ ಎಂದು ವರದಿಯಾಗಿದೆ. ಭೂಕಂಪವು ತುಂಬಾ ಪ್ರಬಲವಾಗಿದೆ. ಇಲ್ಲಿಯವರೆಗೆ ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. https://kannadanewsnow.com/kannada/karnataka-weather-today-heavy-rains-to-lash-coastal-south-interior-karnataka-from-today/ https://kannadanewsnow.com/kannada/price-rise-effect-kalyana-karnataka-school-students-to-be-distributed-groundnut-chikki-instead-of-banana/ https://kannadanewsnow.com/kannada/national-herald-case-sonia-gandhis-3rd-round-of-questioning-today/
ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಇಟಿ -2022 ಅರ್ಜಿಯಲ್ಲಿ ತಪ್ಪಾದ ಮಾಹಿತಿ ತಿದ್ದುಪಡಿ ಮಾಡಲು ಜುಲೈ 27 ರ ಸಂಜೆ 5 ಗಂಟೆವರೆಗೆ ಅಂತಿಮ ಅವಕಾಶ ನೀಡಿದೆ. https://kannadanewsnow.com/kannada/monkeypox-case-detected-in-telangana/ ಯುಜಿ-ಸಿಇಟಿ 2022 ರ ದಾಖಲಾತಿ ಪರಿಶೀಲನಾ ಕಾರ್ಯವನ್ನು ಆನ್ ಲೈನ್ ಮೂಲಕ ನಡೆಸಲಾಗುತ್ತಿದೆ. ಅರ್ಜಿ ಸಲ್ಲಿಸುವ ಸಮಯದಲ್ಲಿ ವಿದ್ಯಾರ್ಥಿಗಳು ತಪ್ಪಾಗಿ ಮಾಹಿತಿ ನಮೂದಿಸಿದ್ದರೆ ಅರ್ಜಿ ತಿದ್ದುಪಡಿ ಮಾಡಿದ ನಂತ ಅರ್ಜಿಯ ಪ್ರಿಂಟ್ ತೆಗೆದುಕೊಂಡು ಮಾಹಿತಿ ಸರಿ ಮಾಡಿ ನಂತರ ಡಿಕ್ಲೇರ್ ಬಟನ್ ಕ್ಲಿಕ್ ಮಾಡಬೇಕು. ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ http:/kea.kar.nic.in ನೋಡಬಹುದು. https://kannadanewsnow.com/kannada/price-rise-effect-kalyana-karnataka-school-students-to-be-distributed-groundnut-chikki-instead-of-banana/
ಹೈದರಾಬಾದ್: ಭಾರತದಲ್ಲಿ ಮತ್ತೊಂದು ಮಂಕಿಪಾಕ್ಸ್(Monkeypox) ಪ್ರಕರಣ ಪತ್ತೆಯಾಗಿದೆ. ತೆಲಂಗಾಣದ ವ್ಯಕ್ತಿಯಲ್ಲಿ ಈ ಶಂಕಿತ ಮಂಕಿಪಾಕ್ಸ್ ಪತ್ತೆಯಾಗಿದೆ. ಮಂಕಿಪಾಕ್ಸ್ ದೇಶದಲ್ಲಿ ಒಂದೊಂದೇ ರಾಜ್ಯಕ್ಕೆ ನಿಧಾನವಾಗಿ ಕಾಲಿಡುತ್ತಿದೆ. ಇದೀಗ ತೆಲಂಗಾಣದ ವ್ಯಕ್ತಿಯೋರ್ವನಲ್ಲಿ ಶಂಕಿತ ಮಂಕಿಪಾಕ್ಸ್ ಲಕ್ಷಣ ಪತ್ತೆಯಾಗಿದೆ ಎಂದು ವರದಿಯಾಗಿದೆ. ಈ ಹಿಂದೆ, ಕಾಮರೆಡ್ಡಿ ಜಿಲ್ಲೆಯ ಇಂದಿರಾನಗರ ಕಾಲೋನಿಯ 40 ವರ್ಷದ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಿತ್ತು. ಇವರು ಜುಲೈ 6 ರಂದು ಕುವೈತ್‌ನಿಂದ ಹಿಂತಿರುಗಿದ್ದರು. ಇವರಲ್ಲಿ ಮಂಗನ ಕಾಯಿಲೆ ಲಕ್ಷಣಗಳು ಕಾಣಿಸಿಕೊಂಡ ಪರಿಣಾಮ ಚಿಕಿತ್ಸೆ ಮುಂದುವರೆಸಲಾಗಿತ್ತು. ಈ ಬೆನ್ನಲ್ಲೇ, ಮತ್ತೊಂದು ಪ್ರಕರಣ ಪತ್ತೆಯಾಗಿದೆ. https://kannadanewsnow.com/kannada/price-rise-effect-kalyana-karnataka-school-students-to-be-distributed-groundnut-chikki-instead-of-banana/ https://kannadanewsnow.com/kannada/national-herald-case-sonia-gandhis-3rd-round-of-questioning-today/ https://kannadanewsnow.com/kannada/
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ದೇವರುಗಳಿಗೆ ಎಷ್ಟೇ ವಿಜೃಂಭಣೆಯಿಂದ ಚಿನ್ನಾಭರಣಗಳನ್ನು ಹಾಕಿ ಹೂವು ಇಲ್ಲದೆ ಪೂಜೆ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಅದಕ್ಕಾಗಿಯೇ ಹಿರಿಯರು ಹೇಳುವುದು ಹೂವಿಲ್ಲದ ಪೂಜೆ ಪೂಜೆಯೇ ಅಲ್ಲ ಎಂದು. ಹಲವಾರು ರೀತಿಯ ಹೂಗಳು ಸಿಗುತ್ತವೆ ಅದರಲ್ಲಿ 8 ಹೂವುಗಳನ್ನು ಕಂಡರೆ ದೇವಾನುದೇವತೆಗಳಿಗೆ ಬಲು ಪ್ರಿಯವಾಗಿದೆ. ಹಾಗಾದರೆ ದೇವಾನುದೇವತೆಗಳಿಗೆ ಪ್ರಿಯವಾದ ಆ 8 ಹೂವುಗಳು ಯಾವುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಹಿಂದೂ ಧರ್ಮದ ಪ್ರಕಾರ ದೇವರಿಗೆ ಹೂಗಳೆಂದರೆ ಬಹಳ ಪ್ರಿಯ. ಒಂದೊಂದು ದೇವರುಗಳಿಗೂ ಒಂದೊಂದು ಪ್ರಿಯವಾದ ಹೂವುಗಳು ಇವೆ. ಯಾರು ಭಗವಂತನ ಚರಣ ಕಮಲಗಳಿಗೆ ಹೂವನ್ನು ಅರ್ಪಿಸುತ್ತಾರೋ ಅಂಥವರ ಬಾಳಲ್ಲಿ ಸಮೃದ್ಧಿ ಎಂಬುದು ತೇಲಾಡುತ್ತದೆ. ಹಿಂದೂ ಧರ್ಮದ ಪ್ರಕಾರ ಪುರಾಣಗಳಲ್ಲಿ ಉಲ್ಲೇಖವಾಗಿರುವಂತೆ ದತ್ತೂರ ಅಥವಾ ಉಮ್ಮತ್ತಿ ಹೂವು ಶಿವನಿಗೆ ಬಹಳ ಶ್ರೇಷ್ಠವಾಗಿದೆ. ದೇವತೆಗಳ ಪೂಜೆಯಲ್ಲಿ ಕೆಂಪು ದಾಸವಾಳಕ್ಕೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ಈ…
ಕೊಪ್ಪಳ : ಬಾಳೆಹಣ್ಣಿನ ದರ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಕಲ್ಯಾಣ ಕರ್ನಾಟಕ ಶಾಲಾ ವಿದ್ಯಾರ್ಥಿಗಳಿಗೆ ಬಾಳೆಹಣ್ಣಿನ ಬದಲು ಶೇಂಗಾ ಚಿಕ್ಕಿ ನೀಡಲು ಸೂಚನೆ ನೀಡಲಾಗಿದೆ. https://kannadanewsnow.com/kannada/national-herald-case-sonia-gandhis-3rd-round-of-questioning-today/ ಕಲ್ಯಾಣ ಕರ್ನಾಟಕದ ಶಾಲಾ ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶ ಹೆಚ್ಚಳಕ್ಕಾಗಿ ಬಾಳೆಹಣ್ಣು ನೀಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಲಾಗಿದೆ. ಆದರೆ ಸದ್ಯ ಮಾರುಕಟ್ಟೆಯಲ್ಲಿ ಬಾಳೆಹಣ್ಣು ದರ ಭಾರೀ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಬಾಳೆಹಣ್ಣು ಬದಲು ಶೇಂಗಾ ಚಿಕ್ಕಿ ನೀಡಲು ನಿರ್ಧರಿಸಲಾಗಿದೆ. https://kannadanewsnow.com/kannada/bigg-newsdakshina-kannada-bjp-leaders-gruesome-murder-cm-bommai-says-culprits-will-be-arrested-soon-and-punished/ ಬಾಳೆಹಣ್ಣು ದರ ವಿಪರೀತವಾಗಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಹೀಗಾಗಿ ಕಲ್ಯಾಣ ಕರ್ನಾಟಕದ ಶಾಲಾ ಮಕ್ಕಳಿಗೆ ಶೇಂಗಾ ಚಿಕ್ಕಿಯನ್ನು ನೀಡುವಂತೆ ಸೂಚಿಸಲಾಗಿದೆ ಎಂದು ಕೊಪ್ಪಳದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಮುಖ್ಯಸ್ಥರಾದ ಅನಿತಾ ಹೇಳಿದ್ದಾರೆ.
ನವದೆಹಲಿ: ನ್ಯಾಷನಲ್ ಹೆರಾಲ್ಡ್(National Herald) ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ಅವರಿಗೆ ಇಂದು ಮತ್ತೆ ಇಡಿ ವಿಚಾರಣೆ ನಡೆಸಲಿದೆ. ನಿನ್ನೆ (ಮಂಗಳವಾರ) ನಡೆದ 2ನೇ ಸುತ್ತಿನ ವಿಚಾರಣೆಯಲ್ಲಿ ಇಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಸುಮಾರು ಆರು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ನಂತ್ರ, ಮತ್ತೆ ನಾಳೆ(ಜುಲೈ 27, ಇಂದು) ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಹೀಗಾಗಿ ಇಂದೂ ಕೂಡ ಸೋನಿಯಾ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ. ನಿನ್ನೆ ಸೋನಿಯಾ ಗಾಂಧಿಗೆ ಇಡಿ ಅಧಿಕಾರಿಗಳು ಸುಮಾರು 30 ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. https://kannadanewsnow.com/kannada/11-school-children-killed-in-road-accident-in-tanzania/ https://kannadanewsnow.com/kannada/man-washed-away-while-crossing-flooded-road-in-andhra-pradesh/ https://kannadanewsnow.com/kannada/biig-news-two-bsf-personnel-on-un-peacekeeping-duty-in-congo-killed/