Author: KNN IT TEAM

ನವದೆಹಲಿ : ಆಗಸ್ಟ್ 1 ರಿಂದ ನಿಮಗೆ ಸಂಬಂಧಿಸಿದ ಅನೇಕ ನಿಯಮಗಳು ಬದಲಾಗಲಿವೆ. ಈ ನಿಯಮಗಳಲ್ಲಿನ ಬದಲಾವಣೆಗಳು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತವೆ. ಪ್ರತಿ ಬಾರಿಯಂತೆ, ಈ ಬಾರಿಯೂ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆಯ ಜೊತೆಗೆ, ಚೆಕ್ ಮೂಲಕ ಪಾವತಿಸುವ ವ್ಯವಸ್ಥೆಯೂ ಬದಲಾಗಲಿದೆ. https://kannadanewsnow.com/kannada/madhya-pradesh-man-receives-%e2%82%b9-3419-crore-electricity-bill-hospitalised/ ಆಗಸ್ಟ್ 1 ರ ಮೊದಲ ದಿನ, ಪ್ರತಿ ತಿಂಗಳಂತೆ, ಈ ಬಾರಿಯೂ ಕೆಲವು ಬದಲಾವಣೆಗಳು ಸಂಭವಿಸಲಿವೆ. ಅನಿಲದ ಬೆಲೆಯನ್ನು ಹೊರತುಪಡಿಸಿ, ಇದು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಬಂಧಿಸಿದ ಕೆಲವು ನವೀಕರಣಗಳನ್ನು ಸಹ ಒಳಗೊಂಡಿದೆ. ನಿಯಮಗಳಲ್ಲಿನ ಬದಲಾವಣೆಗಳು ನಿಮ್ಮ ಮೇಲೆ ನೇರ ಪರಿಣಾಮ ಬೀರುತ್ತವೆ. ಇದಲ್ಲದೆ, ಬ್ಯಾಂಕುಗಳು ಪ್ರತಿ ತಿಂಗಳುಗಳಿಗಿಂತ ಈ ತಿಂಗಳು ಹೆಚ್ಚು ರಜಾದಿನಗಳನ್ನು ಹೊಂದಿರುತ್ತವೆ. ಆಗಸ್ಟ್ 1 ರಿಂದ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳೋಣ… https://kannadanewsnow.com/kannada/bjp-leader-praveens-murder-it-was-a-pre-planned-act-shobha-karandlaje-outraged/ ಬ್ಯಾಂಕ್ ಆಫ್ ಬರೋಡಾ ಚೆಕ್ ಪಾವತಿ ವ್ಯವಸ್ಥೆ ಈ ಆಗಸ್ಟ್ 1 ರಿಂದ, ಬ್ಯಾಂಕ್ ಆಫ್ ಬರೋಡಾ (ಬಿಒಬಿ) ನಲ್ಲಿ ಚೆಕ್ ಮೂಲಕ ಪಾವತಿಯ ನಿಯಮಗಳು ಬದಲಾಗಲಿವೆ.…

Read More

ಗ್ವಾಲಿಯರ್‌(ಮಧ್ಯಪ್ರದೇಶ): ಮಧ್ಯಪ್ರದೇಶದ ಗ್ವಾಲಿಯರ್‌ ನಿವಾಸಿ ಪ್ರಿಯಾಂಕಾ ಗುಪ್ತಾ ಎಂಬುವರಿಗೆ ಬರೋಬ್ಬರಿ 3,419 ಕೋಟಿ ರೂಪಾಯಿ ವಿದ್ಯುತ್‌ ಬಿಲ್‌ ಬಂದಿದೆ. ಅದನ್ನು ಕಂಡ ಅವರ ಮಾವ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಮಧ್ಯಪ್ರದೇಶ ಸರ್ಕಾರ ನಡೆಸುತ್ತಿರುವ ವಿದ್ಯುತ್ ಕಂಪನಿಯು, ಇದೊಂದು ಮಾನವ ದೋಷವಾಗಿದೆ ಎಂದಿದ್ದು, ಅದರ ತಪ್ಪನ್ನು ಸರಿಪಡಿಸಿ 1,300 ರೂ. ಎಂದು ಪರಿಷ್ಕೃತ ಬಿಲ್‌ ನೀಡಿದೆ. ಆತಂಕದಲ್ಲಿದ್ದ ಗುಪ್ತಾ ಕುಟುಂಬ ಇದೀಗ ಸಮಾಧಾನಗೊಂಡಿದೆ. ಜುಲೈ ತಿಂಗಳ ಮನೆಯ ಬಳಕೆಗಾಗಿ ಬಂದ ವಿದ್ಯುತ್ ಬಿಲ್‌ನಲ್ಲಿ ಇದ್ದ ಮೊತ್ತವನ್ನು ಕಂಡು ನನ್ನ ತಂದೆ ಅನಾರೋಗ್ಯಕ್ಕೆ ಒಳಗಾದರು ಎಂದು ಗುಪ್ತಾ ಅವರ ಪತಿ ಸಂಜೀವ್ ಕಂಕಣೆ ತಿಳಿಸಿದ್ದಾರೆ. ಜುಲೈ 20 ರಂದು ಬಿಡುಗಡೆಯಾದ ಬಿಲ್ ಅನ್ನು ಮಧ್ಯಪ್ರದೇಶ ಮಧ್ಯ ಕ್ಷೇತ್ರ ವಿದ್ಯುತ್ ವಿತ್ರನ್ ಕಂಪನಿಯ (MPMKVVC) ಪೋರ್ಟಲ್ ಮೂಲಕ ಪರಿಶೀಲಿಸಲಾಗಿದ್ದು, ರಾಜ್ಯ ವಿದ್ಯುತ್ ಕಂಪನಿಯು ಬಿಲ್ ಅನ್ನು ಸರಿಪಡಿಸಿದೆ ಎಂದು ಕಂಕಣೆ ಹೇಳಿದರು. ಎಂಪಿಎಂಕೆವಿವಿಸಿ ಜನರಲ್ ಮ್ಯಾನೇಜರ್ ನಿತಿನ್ ಮಾಂಗ್ಲಿಕ್ ಮಾನವ ದೋಷದಿಂದ ಭಾರಿ…

Read More

ಬೆಂಗಳೂರು ; ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಇಂತಹ ಘಟನೆ ಮುಂದೆ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಳಾಗಿದೆ ಎಂದು ಹೇಳಿದ್ದಾರೆ. https://kannadanewsnow.com/kannada/bjp-leader-praveens-murder-it-was-a-pre-planned-act-shobha-karandlaje-outraged/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಿಗಳ ಬಂಧನಕ್ಕೆ ಐದು ತಂಡ ರಚನೆ ಮಾಡಲಾಗಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಸುಮ್ನೆ ಇಲ್ಲ. ಕೊಲೆಗಡುಕರನ್ನು ಬಂಧಿಸಲಾಗುತ್ತದೆ. ಇವೆಲ್ಲದರ ಹಿಂದೆ ಕೆಲ ಪಕ್ಷಗಳು ಬೆನ್ನಲುಬಾಗಿ ನಿಂತಿವೆ. ಎನ್ ಐಎ ಯಿಂದ ಕೊಲೆ ಪ್ರಕರಣದ ತನಿಖೆಯಾಗಬೇಕು ಎಂದು ಹೇಳಿದ್ದಾರೆ. ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಜರಂಗದಳದ ಮುಖಂಡ, ಅಕ್ಷಯ ಕೋಳಿ ಅಂಗಡಿ ಮಾಲೀಕ ಪ್ರವೀಣ್ ನೆಟ್ಟಾರು (32) ಎಂಬುವರನ್ನು ನಿನ್ನೆ ರಾತ್ರಿ ಹತ್ಯೆ ಮಾಡಲಾಗಿದೆ.

Read More

ಮಂಗಳೂರು : ನಿನ್ನೆ ಸಂಜೆ ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಮಂಗಳೂರು ಪೊಲೀಸರಿಂದ 15 ಶಂಕಿತರು ವಶಕ್ಕೆ ಪಡೆಯಲಾಗಿದೆ.  https://kannadanewsnow.com/kannada/bjp-leader-praveens-murder-8-suspects-arrested-in-connection-with-the-case/ ಬೆಳ್ಳಾರೆಯಲ್ಲೇ 15 ಮಂದಿ ವಶಕ್ಕೆ ಪಡೆದಿದ್ದಾರೆ. ಹತ್ಯೆಗೆ ಸಂಬಂಧಿಸಿದಂತೆ 15  ಮಂದಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಎಡಿಜಿಪಿ ಅಲೋಕ್‌ ಕುಮಾರ್‌ ಮಾಹಿತಿ ತಿಳಿಸಿದ್ದಾರೆ. ಇದೀಗ ನಿನ್ನೆ ಬರ್ಬರವಾಗಿ ಹತ್ಯೆಗೊಂಡ ಪ್ರವೀಣ್ ಫಾರ್ಥಿವ ಶರೀರವನ್ನು ಪುತ್ತೂರಿನಿಂದ ಬೆಳ್ಳಾರೆ ಪೇಟೆಗೆ ಮೆರವಣೆಗೆ ಮಾಡುವ ಮೂಲಕ ರವಾನೆ ಮಾಡಲಾಗುತ್ತಿದೆ. ಕುಟುಂಬಸ್ಥರ ಅಕ್ರಂಧನ ಮುಗಿಲು ಮುಟ್ಟಿದೆ

Read More

ದೆಹಲಿ :  ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಖಂಡಿಸಿ ಮಾತನಾಡಿ  ʻ ಇದೊಂದು ಪೂರ್ವ ನಿಯೋಜಿತ ಕೃತ್ಯ ʼ  ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎನ್‌ಐಎ ತನಿಕೆಗೆ ಪ್ರಕರಣವನ್ನು ಹಸ್ತಾತರಿಸುವಂತೆ ಇಂದು ಸಂಜೆ ಅಮಿತ್‌ ಷಾ ಅವರನ್ನು ಭೇಟಿಯಾಗಿ ಮನವಿ ಮಾಡುತ್ತೇನೆ https://kannadanewsnow.com/kannada/bjp-leader-praveens-murder-8-suspects-arrested-in-connection-with-the-case/ ಪ್ರವೀಣ್‌ ಸಂಘ ಪರಿವಾರದ ಪ್ರಮಾಣಿಕ ಕಾರ್ಯಕರ್ತನಾಗಿದ್ದನು.  ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದೆ. ಕೊಲೆಯ ಹಿಂದಿನ ಕಾರಣ ಗೊತ್ತಗಬೇಕಾಗನಬೇಕು ಇದರ ಹಿಂದಿರುವ ಸಂಘಟನೆ ಹತ್ಯೆಯಾಗಬೇಕು.  ಮಸೂದು ಹತ್ಯೆ ಜೊತೆ ತಳುಕು ಹಾಕುತ್ತಿದ್ದಾರೆ. ಪ್ರವೀಣ್‌ಗೆ ಮಸೂದ್‌ ಗೊತ್ತೇ ಇರಲಿಲ್ಲ ಎಂದು ದೆಹಲಿಯಲ್ಲಿ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ https://kannadanewsnow.com/kannada/bjp-leader-praveens-murder-8-suspects-arrested-in-connection-with-the-case/

Read More

ಬೆಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರುರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಖಂಡಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. https://kannadanewsnow.com/kannada/bigg-news-praveen-nettaru-murder-case-this-is-a-heinous-act-of-fanatic-forces-to-break-the-unity-of-hindus-minister-sunil-kumar/ ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಬಜರಂಗದಳದ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡನೀಯ. ಪೊಲೀಸರು ತಕ್ಷಣ ಕೊಲೆಗಡುಕರನ್ನು ಬಂಧಿಸಿ ಊಹಾಪೋಹಗಳಿಂದ ಶಾಂತಿ-ಸುವ್ಯವಸ್ಥೆ ಕದಡುವುದನ್ನು ತಪ್ಪಿಸಬೇಕು. ಕೊಲೆಗಡುಕರ ಪಕ್ಷ,ಜಾತಿ,ಧರ್ಮವನ್ನು ಲೆಕ್ಕಿಸದೆ ಪೊಲೀಸರು ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. https://twitter.com/siddaramaiah/status/1552165039557459969 ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಜರಂಗದಳದ ಮುಖಂಡ, ಅಕ್ಷಯ ಕೋಳಿ ಅಂಗಡಿ ಮಾಲೀಕ ಪ್ರವೀಣ್ ನೆಟ್ಟಾರು (32) ಎಂಬುವರನ್ನು ಮಂಗಳವಾರ ಹತ್ಯೆ ಮಾಡಲಾಗಿದೆ. https://kannadanewsnow.com/kannada/bjp-leader-praveen-barbara-was-killed-due-to-cruelty-of-fanatics-i-am-shocked-minister-sunil-kumar/

Read More

ಮಂಗಳೂರು : ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ 8 ಮಂದಿ ಶಂಕಿತರ ಬಂಧಿಸಲಾಗಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇದೀಗ ನಿನ್ನೆ ಬರ್ಬರವಾಗಿ ಹತ್ಯೆಗೊಂಡ ಪ್ರವೀಣ್ ಫಾರ್ಥಿವ ಶರೀರವನ್ನು ಪುತ್ತೂರಿನಿಂದ ಬೆಳ್ಳಾರೆ ಪೇಟೆಗೆ ಮೆರವಣೆಗೆ ಮಾಡುವ ಮೂಲಕ ರವಾನೆ ಮಾಡಲಾಗುತ್ತಿದೆ. ಕುಟುಂಬಸ್ಥರ ಅಕ್ರಂಧನ ಮುಗಿಲು ಮುಟ್ಟಿದೆ https://kannadanewsnow.com/kannada/bjp-leader-praveens-murder-no-one-should-be-a-muslim-if-he-turns-to-murders-muthalik-kidi/ ಬಿಜೆಪಿ ಮುಖಂಡ ಪ್ರವೀಣ್  ಕೋಳಿ ಫಾರಂನಲ್ಲಿ ಇರುವ ಸಂದರ್ಭದಲ್ಲಿ ಆತನ ಚಲನವಲನಗಳನ್ನು ಗಮನಿಸಿಕೊಂಡು ಹತ್ಯೆ ನಡೆಸಿದ್ದಾರೆ.  ಸ್ಥಳೀಯರ ಮಾಹಿತಿ ಮೆರೆಗೆ ನಿನ್ನೆ ಹತ್ಯೆ ನಡೆಸಲಾಗಿದೆ. ಕೇರಳ ರಿಜಿಸ್ಟೇಷನ್‌ ಗಾಡಿ ಬಂದಿತ್ತು. ಈ ಹಿನ್ನೆಲೆ ಪೊಲೀಸರು ತನಿಖೆ ನಡೆಸಿದ್ದರು ಆಗ ಈ ಮಾಹಿತಿ ತಿಳಿದು ಬಂದಿದೆ. https://kannadanewsnow.com/kannada/bjp-leader-praveens-murder-no-one-should-be-a-muslim-if-he-turns-to-murders-muthalik-kidi/ ಕೆಲ ದಿನಗಳ ಹಿಂದಷ್ಟೇ ಬೆಳ್ಳಾರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾಸರಗೋಡು ನಿವಾಸಿ ಮಸೂದ್ ಎಂಬಾತನ ಕೊಲೆಯಾಗಿತ್ತು. ಮಸೂದ್ ಮೇಲೆ ಅಭಿಲಾಷ್, ಸುನೀಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್, ಭಾಸ್ಕರ ಎನ್ನುವವರು ಹಲ್ಲೆ ಮಾಡಿದ್ದರು. ಜುಲೈ 19ರಂದು ಸುಧೀರ್ ಎಂಬಾತನಿಗೆ ಮಸೂದ್…

Read More

ಬೆಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರುರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಪ್ರಕರಣದ ಕುರಿತಂತೆ ಸಚಿವ ವಿ.ಸುನೀಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಮತಾಂಧರ ಕ್ರೌರ್ಯಕ್ಕೆ ಬಲಿಯಾದ ಬಿಜೆಪಿಯ ಯುವನಾಯಕ ಪ್ರವೀಣ್ ನೆಟ್ಟಾರ್ ಬರ್ಬರ ಹತ್ಯೆಯಿಂದ ಆಘಾತಗೊಂಡಿದ್ದೇನೆ ಎಂದು ಹೇಳಿದ್ದಾರೆ. https://kannadanewsnow.com/kannada/money-laundering-arrests-not-arbitrary-supreme-courts-big-order-2/ ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಸರಕಾರ ಹಾಗೂ ಸಮಾಜ ಪ್ರವೀಣ್ ಕುಟುಂಬದ ಜತೆಗಿದೆ. ಹಿಂದುಗಳ ಒಗ್ಗಟ್ಟು ಒಡೆಯುವುದಕ್ಕೆ‌ ಮತಾಂಧ ಶಕ್ತಿಗಳು ನಡೆಸುತ್ತಿರುವ ಇಂಥ ಹೇಯ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಮತಾಂಧರ ಕ್ರೌರ್ಯಕ್ಕೆ ಬಲಿಯಾದ ಬಿಜೆಪಿಯ ಯುವನಾಯಕ ಪ್ರವೀಣ್ ನೆಟ್ಟಾರ್ ಬರ್ಬರ ಹತ್ಯೆಯಿಂದ ಆಘಾತಗೊಂಡಿದ್ದೇನೆ ಎಂದು ಹೇಳಿದ್ದಾರೆ. https://twitter.com/karkalasunil/status/1552126779153715200 https://kannadanewsnow.com/kannada/sonia-gandhi-appears-before-ed-for-third-round-of-questioning-in-money-laundering-case/ ಸರಕಾರ ಹಾಗೂ ಸಮಾಜ ಪ್ರವೀಣ್ ಕುಟುಂಬದ ಜತೆಗಿದೆ. ಹಿಂದುಗಳ ಒಗ್ಗಟ್ಟು ಒಡೆಯುವುದಕ್ಕೆ‌ ಮತಾಂಧ ಶಕ್ತಿಗಳು ನಡೆಸುತ್ತಿರುವ ಇಂಥ ಹೇಯ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ.

Read More

ನವದೆಹಲಿ: ಮಹತ್ವದ ತೀರ್ಪಿನೊಂದಿಗೆ ಜಾರಿ ನಿರ್ದೇಶನಾಲಯವನ್ನು ಬೆಂಬಲಿಸಿದ ಸುಪ್ರೀಂ ಕೋರ್ಟ್, ತನಿಖೆಯನ್ನು ಪ್ರಾರಂಭಿಸುವುದು, ಬಂಧಿಸುವ, ಶೋಧಿಸುವ ಮತ್ತು ವಶಪಡಿಸಿಕೊಳ್ಳುವ ಅಧಿಕಾರ ಸೇರಿದಂತೆ ಹಲವು ನಿಬಂಧನೆಗಳಿಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯ ವಿರುದ್ಧ ಎತ್ತಿರುವ ಬಹುತೇಕ ಎಲ್ಲಾ ಆಕ್ಷೇಪಣೆಗಳನ್ನು ಇಂದು ತಿರಸ್ಕರಿಸಿದೆ. ಪಿಎಂಎಲ್‌ಎ ಕಾಯಿದೆಯಡಿ ಇಡಿಗೆ ಆರೋಪಿಗಳನ್ನು ಬಂಧಿಸುವ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಬಹುತೇಕ ಎಲ್ಲಾ ಕಠಿಣ ನಿಬಂಧನೆಗಳನ್ನು ಉನ್ನತ ನ್ಯಾಯಾಲಯ ಎತ್ತಿ ಹಿಡಿದಿದೆ. ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ನೇತೃತ್ವದ ಪೀಠವು ತನಿಖಾ ಸಂಸ್ಥೆಯ ಅಧಿಕಾರವನ್ನು ಮತ್ತಷ್ಟು ಬಲಪಡಿಸಿದೆ. ಬಂಧನದ ಆಧಾರ ಅಥವಾ ಸಾಕ್ಷ್ಯವನ್ನು ತಿಳಿಸದೆ ಆರೋಪಿಗಳನ್ನು ಬಂಧಿಸುವ ಅನಿಯಂತ್ರಿತ ಅಧಿಕಾರವು ಅಸಾಂವಿಧಾನಿಕ ಎಂದು ಅರ್ಜಿದಾರರು ವಾದಿಸಿದ್ದರು. ವಿಚಾರಣೆಯ ಸಮಯದಲ್ಲಿ ಆರೋಪಿಯಿಂದ ದೋಷಾರೋಪಣೆಯ ಹೇಳಿಕೆಗಳನ್ನು ಇಡಿ ದಾಖಲಿಸಿಕೊಳ್ಳುವುದು, ಮಾಹಿತಿಯನ್ನು ತಡೆಹಿಡಿಯಲು ದಂಡ ವಿಧಿಸಲಾಗುವುದು ಎಂದು ಅರ್ಜಿದಾರರು ಹೇಳಿದ್ದರು. ಆದ್ರೆ, ಈ ವಾದಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಇಸಿಐಆರ್ (Enforcement…

Read More

ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರುರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಪ್ರಕರಣ ಖಂಡಿಸಿ ಪುತ್ತೂರಿನಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಈಗಾಗಲೇ ಸುತ್ತಮುತ್ತ ಪೊಲೀಸ್‌ ಬಿಗಿ ಭದ್ರತೆ ಕೈಗೊಂಡಿದ್ದಾರೆ. https://kannadanewsnow.com/kannada/the-menace-of-stray-dogs-is-increasing-day-by-day-in-hassan-dog-bites-boy-while-playing/ ಈ ಘಟನೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಮಂಗಳೂರು ಮತ್ತು ಉಡುಪಿಯಿಂದ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಸಹ ಕಳುಹಿಸಲಾಗಿದೆ. ಇನ್ನು ಪುತ್ತೂರು ಸುಳ್ಯ ಹಾಗೂ ಕಡಬ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಇನ್ನು ಆರೋಪಿಗಳನ್ನ ಬಂಧಿಸಿ, ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಹಿಂದೂ ಮುಖಂಡರು ಒತ್ತಾಯಿಸಿದ್ದಾರೆ.

Read More