Subscribe to Updates
Get the latest creative news from FooBar about art, design and business.
Author: KNN IT TEAM
ಕೊಪ್ಪಳ : 2021-22ನೇ ಶೈಕ್ಷಣಿಕ ಸಾಲಿನ, 2022ರಲ್ಲಿ ಉತ್ತೀರ್ಣರಾದ ದ್ವಿತೀಯ ಪಿ.ಯು.ಸಿ, 3 ವರ್ಷ ಪಾಲಿಟೆಕ್ನಿಕ್ ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ, ಮೆಡಿಕಲ್, ಇಂಜಿನೀಯರಿಂಗ್, ಮೆಟ್ರಿಕ್ ನಂತರದ ಇತರೆ ಕೋರ್ಸ್ ಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮಂಜೂರಿಸಲು ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. https://kannadanewsnow.com/kannada/praveens-murder-youth-in-car-thrashes-mla-harish-poonja/ ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿದೆ. ವಿದ್ಯಾರ್ಥಿಗಳು ಪರಿಶಿಷ್ಟ ಜಾತಿಯ ಇಲಾಖಾ ವೆಬ್ಸೈಟ್ ಆದ www.sw.kar.nic.in ನಲ್ಲಿ ಹಾಗೂ ಪರಿಶಿಷ್ಟ ವರ್ಗದ ಇಲಾಖಾ ವೆಬ್ಸೈಟ್ ಆದ www.tw.kar.nic.in ನಲ್ಲಿ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕದ ನಂತರ ಸ್ವೀಕೃತವಾಗುವ ಮ್ಯಾನುವಲ್ನ ಯಾವುದೇ ಅರ್ಜಿ/ಕೋರಿಕೆಗಳನ್ನು ಪರಿಗಣಿಸಲು ಅವಕಾಶವಿರುವುದಿಲ್ಲ. https://kannadanewsnow.com/kannada/bigg-news-chandru-harsha-who-else-tomorrow-c-t-praveen-nettaru-murdered-ravis-anger/ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಮತ್ತು ತಾಲ್ಲೂಕಿನ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕುಷ್ಟಗಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು,…
ಫಿಲಿಪೈನ್ಸ್: ಉತ್ತರ ಫಿಲಿಪೈನ್ಸ್‌ನಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಪ್ರಬಲ ಭೂಕಂಪಕ್ಕೆ ನಾಲ್ವರು ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರಾಜಧಾನಿ ಮನಿಲಾದಲ್ಲಿ 300 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಲ್ಲಿರುವ ಎತ್ತರದ ಗೋಪುರಗಳನ್ನು ಅಲುಗಾಡಿಸಿದ 7.1 ತೀವ್ರತೆಯ ಪ್ರಬಲ ಭೂಕಂಪವು 8:43 am (0043 GMT) ಲುಜಾನ್‌ನ ಮುಖ್ಯ ದ್ವೀಪದಲ್ಲಿರುವ ಪರ್ವತ ಪ್ರಾಂತ್ಯದ ಅಬ್ರಾವನ್ನು ಅಪ್ಪಳಿಸಿತು ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಭೂಕಂಪದಿಂದ ಹಲವಾರು ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಿಟಗಿಗಳು ಸಹ ಹೊಡೆದಿವೆ. ಇದರಿಂದ ಗಾಬರಿಗೊಂಡ ಜನರು ತಾವು ವಾಸಿಸುತ್ತಿದ್ದ ಕಟ್ಟಡದಿಂದ ಹೊರಗೆ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಮನಿಲಾದ ಎರಡು ಆಸ್ಪತ್ರೆಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿದ್ದು, ರೋಗಿಗಳು ಮತ್ತು ವೈದ್ಯಕೀಯ ಸಿಬ್ಬಂದಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. https://kannadanewsnow.com/kannada/madhya-pradesh-man-receives-%e2%82%b9-3419-crore-electricity-bill-hospitalised/ https://kannadanewsnow.com/kannada/praveen-nettaru-murder-case-killers-will-be-arrested-soon-minister-sudhakar/ https://kannadanewsnow.com/kannada/azadi-ka-amrit-mahotsav-itbp-troops-wave-the-tiranga-at-12000-feet/
ಚಿಕ್ಕಮಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ಬರ್ಬರ ಹತ್ಯೆ ಖಂಡಿಸಿ, ಬಿಜೆಪಿ ಯುವ ಮೋರ್ಚಾದ ಸದಸ್ಯರು, ಪಕ್ಷದ ವಿರುದ್ದವೇ ಅಕ್ರೋಶ ಹೊರಹಾಕಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. https://kannadanewsnow.com/kannada/praveens-murder-youth-in-car-thrashes-mla-harish-poonja/ ಸುಳ್ಯ ತಾಲೂಕಿನ ಬೆಳ್ಳಾರೆಯ ನೆಟ್ಟಾರು ನಿವಾಸಿ ಪ್ರವೀಣ್ ಅವರ ಹತ್ಯೆಯನ್ನು ಖಂಡಿಸಿ, ಹಾಗೂ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ನೀಡದ ರಾಜ್ಯ ಸರ್ಕಾರದ ವಿರುದ್ಧಆಕ್ರೋಶ ಹೊರಹಾಕಿ, ಸದಸ್ಯರು ಸಾಮೂಹಿಕ ರಾಜೀನಾಮೆ ನೀಡುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. https://kannadanewsnow.com/kannada/praveens-murder-youth-in-car-thrashes-mla-harish-poonja/ ಮಂಗಳವಾರ ರಾತ್ರಿ ಪ್ರವೀಣ್ ಕೋಳಿ ಅಂಗಡಿ ಬಳಿ ಮೂವರು ಅಪರಿಚಿತರು ಬೈಕ್ ನಲ್ಲಿ ಬಂದು ಪ್ರವೀಣ್ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಗಂಭೀರ ಗಾಯೊಗೊಂಡಿದ್ದ ಪ್ರವೀಣ್ ಅವರನ್ನು ಆಸ್ಪತ್ರೆಗೆ ರವಾನಿಸದರೂ ಅವರು ಮೃತಪಟ್ಟಿದ್ದಾರೆ. https://kannadanewsnow.com/kannada/praveens-murder-youth-in-car-thrashes-mla-harish-poonja/ ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ಏಳು ಮಂದಿ ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಕ್ಷಯ ಚಿಕನ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿರುವ ಮಧು ರಾಯನ್ ಅವರು ನೀಡಿದ ದೂರಿನಂತೆ ಕೃತ್ಯವೆಸಗಿದ ಮೂವರು ಅಪರಿಚಿತರ ವಿರುದ್ಧ…
ದಕ್ಷಿಣಕನ್ನಡ : ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಪ್ರಕರಣ ಸಂಬಂಧಿಸಿ ಪ್ರವೀಣ್ ಪಾರ್ಥೀವ ಶರೀರದ ಮೆರವಣಿಗೆ ವೇಳೆಯಲ್ಲಿ ಯಾರು ಕೂಡ ಆಸ್ಪತ್ರೆಗೆ ಬಂದಿಲ್ಲ ಎಂದು ವ್ಯಕ್ತಿಯೊಬ್ಬನಿಂದ ಶಾಸಕರಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿದ್ದ ಪ್ರವೀಣ್, ಆಗಿದ್ದರೂ ಆಸ್ಪತ್ರೆಗೆ ನೋಡೋದಕ್ಕೆ ಯಾರು ಬಿಜೆಪಿ ಕಾರ್ಯಕರ್ತ ಬಂದಿಲ್ಲ. ಸಚಿವರು ಬಂದಿಲ್ಲ. ಈಗ ನಮ್ಮದೇ ಸರ್ಕಾರ ಇರುವುದು ಈ ಘಟನೆ ಮತ್ತೆ ಮತ್ತೆ ನಡೆಯಬಾರದು. ʻಇಂತಹ ಕೃತ್ಯ ಇಲ್ಲಿಗೆ ನಿಲ್ಲಬೇಕು, ನಿಮ್ಮಿಂದ ಮಾತ್ರ ಸಾಧ್ಯ. ಕೊಲೆಗಳಿಗೆ ಇದಕ್ಕೆ ನೀವೆ ಮುಂದೆ ನಿಂತೂ ನಿಲ್ಲಿಸಬೇಕೆಂದು ಕಾರಿನಲ್ಲಿದ್ದ ಯುವಕನಿಂದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಚಿಕ್ಕಮಗಳೂರು: ಮಂಗಳೂರು ಜಿಲ್ಲೆ ಪುತ್ತೂರಿನ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರುರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಯಾಗಿದ್ದ ಹಿನ್ನೆಲೆ ಚಿಕ್ಕಮಗಳೂರಿನ ಬಿಜೆಪಿ ಯುವ ಮೋರ್ಚಾ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. https://kannadanewsnow.com/kannada/scuffle-breaks-out-between-congress-mps-cops-at-vijay-chowk-women-workers-detained/ ಈ ವೇಳೆ ಬಿಜೆಪಿ ಸರ್ಕಾರದ ವಿರುದ್ಧವೇ ಸದಸ್ಯರು ಆಕ್ರೋಶ ಹೊರಗೆ ಹಾಕಿದ್ದಾರೆ. ಬಿಜೆಪಿ ಕಾರ್ಯಕರ್ತರ ರಕ್ಷಣೆ ನೀಡದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲಾಧ್ಯಕ್ಷ ಸಂದೀಪ್ ಅರವಿನಗಂಡಿ, ಪ್ರಧಾನ ಕಾರ್ಯದರ್ಶಿ ಸಂತೋಷ್, ಗಗನ್ ಕಡೂರು, ಉಪಾಧ್ಯಕ್ಷ ಸಚಿನ್, ಶಶಿ ಜಿಲ್ಲಾ ಕಾರ್ಯದರ್ಶಿ, ಮಂಡಲ ಅಧ್ಯಕ್ಷ ರು ರಾಜೇಶ್, ಕಾಂಚನ್ ಗೌಡ ಸೇರಿದಂತೆ 30ಕ್ಕೂ ಹೆಚ್ಚು ಕಾರ್ಯಕರ್ತರು ರಾಜೀನಾಮೆ ನೀಡಲಿದ್ದಾರೆ.
ಲಡಾಖ್: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಪಡೆಗಳು ಲಡಾಖ್‌ನಲ್ಲಿ 12,000 ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ. 75ನೇ ಸ್ವಾತಂತ್ರ್ಯ ಮಹೋತ್ಸವದ ಹೊತ್ತಲ್ಲಿ ಐಟಿಬಿಪಿ ಪಡೆಗಳು ಲಡಾಖ್‌ನಲ್ಲಿ ಸಮುದ್ರ ಮಟ್ಟದಿಂದ 12,000 ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಇದರ ವಿಡಿಯೋವನ್ನು ಐಟಿಬಿಪಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಯೋಧರು ‘ಭಾರತ್ ಮಾತಾ ಕಿ ಜೈ’ ಎಂದು ಕೂಗುವುದನ್ನು ನೋಡಬಹುದು. ಅಷ್ಟೇ ಅಲ್ಲದೇ, ಸೈನಿಕರು ಸಣ್ಣ ಗುಡ್ಡದ ಮೇಲೆ ಕುಳಿತು ಹೆಮ್ಮೆಯಿಂದ ರಾಷ್ಟ್ರಧ್ವಜವನ್ನು ಪ್ರದರ್ಶಿಸುತ್ತಿರುವುದನ್ನು ನೋಡಬಹುದು. भारत माता की जय ! ITBP troops with Tricolour at 12 K feet in Ladakh with the message of ‘Har Ghar Tiranga’ to urge the citizens to hoist the Tricolour or display it in the homes between 13 to 15 August, 2022.#HarGharTiranga #AzadiKaAmrtiMohotsav pic.twitter.com/NpvS5coZY7 — ITBP (@ITBP_official)…
ಬೆಂಗಳೂರು ; ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ. https://kannadanewsnow.com/kannada/scuffle-breaks-out-between-congress-mps-cops-at-vijay-chowk-women-workers-detained/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಹಾದಿ ಮಾನಸಿಕತೆಗೆ ಕೊನೆ ಇಲ್ವಾ ಎಂಬ ಪ್ರಶ್ನೆ ಕಾಡುತ್ತಿದೆ. ಈ ವಿಚಾರವಾಗಿ ಸಿಎಂ ಭೇಟಿ ಮಾಡಲು ಹೋಗುತ್ತಿದ್ದೇನೆ. ಚಂದ್ರು, ಹರ್ಷ, ನಾಳೆ ಇನ್ಯಾರೋ? ನಾವು ಕೇವಲ ಅಧಿಕಾರ ಮಾಡುವುದಕ್ಕೆ ಬಂದಿಲ್ಲ. ಕಾರ್ಯಕರ್ತರ ಭಾವನೆಗಳ ಜೊತೆಗೂ ನಾವಿದ್ದೇವೆ. ಜಿಹಾದ್ ವಿರುದ್ಧ ಹೋರಾಡಲು ವ್ಯವಸ್ಥೆ ಸಿದ್ಧಗೊಳಿಸಬೇಕು. ಜಿಹಾದ್ ಕಿತ್ತುಹಾಕಲು ನಾವು ಬದ್ಧರಿದ್ದೇವೆ ಎಂದು ಹೇಳಿದ್ದಾರೆ. https://kannadanewsnow.com/kannada/customers-note-these-rules-will-change-from-august-1/ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಜರಂಗದಳದ ಮುಖಂಡ, ಅಕ್ಷಯ ಕೋಳಿ ಅಂಗಡಿ ಮಾಲೀಕ ಪ್ರವೀಣ್ ನೆಟ್ಟಾರು (32) ಎಂಬುವರನ್ನು ನಿನ್ನೆ ರಾತ್ರಿ ಹತ್ಯೆ ಮಾಡಲಾಗಿದೆ.
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಮೂರನೇ ದಿನವಾದ ಬುಧವಾರವೂ ಇಡಿ ಅಧಿಕಾರಿಗಳು ಸೋನಿಯಾ ಗಾಂಧಿ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.ಇತ್ತ, ಕಾಂಗ್ರೆಸ್ ಪಕ್ಷದ ‘ಸತ್ಯಾಗ್ರಹ’ ಮತ್ತಷ್ಟು ಉಲ್ಬಣಗೊಂಡಿದೆ. https://kannadanewsnow.com/kannada/people-in-raichur-have-an-allergy-problem-after-drinking-contaminated-water-villagers-protest-against-officials/ ಸಂಸತ್ತಿನಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾಂಗ್ರೆಸ್ ಸಂಸದರನ್ನು ದೆಹಲಿ ಪೊಲೀಸರು ವಿಜಯ್ ಚೌಕ್ ನಲ್ಲಿ ತಡೆ ಹಿಡಿದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಘರ್ಷಣೆ ಉಂಟಾಗಿದೆ.ಮೂಲಗಳ ಪ್ರಕಾರ. ಘರ್ಷಣೆ ವೇಳೆ ಕೆಲವು ಜನರಿಗೆ ಗಾಯಗಳಾಗಿವೆ ಎಂದು ತಿಳಿದಬಂದಿದೆ. ಅಕ್ಬರ್ ರಸ್ತೆಯಲ್ಲಿರುವ ಎಐಸಿಸಿ ಕಚೇರಿಯ ಹೊರಗೆ ಧರಣಿ ನಡೆಸುತ್ತಿದ್ದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. https://twitter.com/ANI/status/1552193775006789632?ref_src=twsrc%5Etfw%7Ctwcamp%5Etweetembed%7Ctwterm%5E1552193775006789632%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Findia%2Fstory%2Fnational-herald-case-live-updates-sonia-gandhi-ed-day-3-questioning-congress-protest-rahul-gandhi-1980385-2022-07-27
ನವದೆಹಲಿ : ಸದನದಲ್ಲಿ ಅಶಿಸ್ತಿನ ವರ್ತನೆಗಾಗಿ ಆಮ್ ಆದ್ಮಿ ಪಕ್ಷದ ಸದಸ್ಯ ಸಂಜಯ್ ಸಿಂಗ್ ಅವರನ್ನು ರಾಜ್ಯಸಭಾ ಅಧಿವೇಶನದಿಂದ ಅಮಾನತು ಮಾಡಲಾಗಿದೆ. ಕುರ್ಚಿ ಮೇಲೆ ಪೇಪರ್ ಎಸೆದ ಆರೋಪ ಕೇಳಿಬಂದಿದ್ದು, ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ಮುಂಗಾರು ಅಧಿವೇಶನದಲ್ಲಿ ಸುಮಾರು 24 ಸಂಸದರು ಅಮಾನತುಗೊಂಡಿದ್ದಾರೆ. https://kannadanewsnow.com/kannada/gold-prices-today-fall-for-3rd-day-in-a-row-down-%e2%82%b95000-in-4-months/ ನಿನ್ನೆ ಮಧ್ಯಾಹ್ನ 3:42 ಕ್ಕೆ ಸದನ ಮತ್ತೆ ಸಮಾವೇಶಗೊಂಡಾಗ, ಸಂಜಯ್ ಸಿಂಗ್ ಮತ್ತು ಇತರ ಕೆಲವು ಸದಸ್ಯರು ಘೋಷಣೆಗಳನ್ನು ಕೂಗುತ್ತಿದ್ದರು.ಕುರ್ಚಿ ಹಿಂತಿರುಗುವಂತೆ ಮನವಿ ಮಾಡಿದಾಗ, ಅವರು ಕಾಗದಗಳನ್ನು ಹರಿದು ಕುರ್ಚಿಯತ್ತ ಎಸೆದರು ಎನ್ನಲಾಗುತ್ತಿದೆ. ಸದನವು ಮಧ್ಯಾಹ್ನ 12 ಗಂಟೆಗೆ ಪ್ರಶ್ನೋತ್ತರ ಅವಧಿಗೆ ಸಭೆ ಸೇರಿದ ಕೂಡಲೇ, ಉಪ ಸಭಾಪತಿ ಹರಿವಂಶ್ ಅವರು ನಿಯಮ 256 ಅನ್ನು ಆಹ್ವಾನಿಸಿ ಸಿಂಗ್ ಅವರನ್ನು ಹೆಸರಿಸಿದರು. ಅವರ ಕ್ರಮವು ನಿಯಮಗಳು ಮತ್ತು ಅಧ್ಯಕ್ಷರ ಅಧಿಕಾರವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಹೇಳಿದರು. ನಂತರ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ಶ್ರೀ ಸಿಂಗ್ ಅವರನ್ನು…
ರಾಯಚೂರು: ಜಿಲ್ಲೆಯಲ್ಲಿ ಕಲುಷಿತ ನೀರಿನ ಸಮಸ್ಯೆ ಬಗೆಹರಿಯವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಜಿಲ್ಲೆಯ ಸಿಂಧನೂರು ತಾಲೂಕಿನ ಕಲುಷಿತ ನೀರು ಸೇವಿಸಿ ಜನರು ಹೈರಾಣು ಆಗಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ಚರ್ಮದ ಸಮಸ್ಯೆ ,ಅಲರ್ಜಿ ಸಮಸ್ಯೆ ಉಂಟಾಗುತ್ತಿದೆ. https://kannadanewsnow.com/kannada/section-144-imposed-in-puttur-amid-protests-against-bjp-workers-murder/ ಇಂತಹ ತುರಿಕೆಗೆ ಜನರು ಹೈರಾಣಾಗಿದ್ದಾರೆ. ಕೆರೆಯ ಕಲುಷಿತ ನೀರು ಕುಡಿಯಲು ಬಳಕೆ ಮಾಡುತ್ತಿದ್ದು,ಅದರದಲ್ಲೂ ಸ್ನಾಹ, ಅಡುಗೆ ಬಳಸುತ್ತಿದ್ದೀವಿ.ಹೀಗೆ ಇದ್ದರೂ ಜನಪ್ರತಿನಿಧಿ ಮಾತ್ರ ಇತ್ತ ಸುಳಿಯುವುದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನೀರಿನಿಂದ ಮಕ್ಕಳು ತುರಿಕೆ ತಾಳಲಾರದೆ ಗೋಳಾಡುತ್ತಿದ್ದಾರೆ. ಸದ್ಯ ಸುಮಾರು 30 ಕ್ಕೂ ಹೆಚ್ಚು ಜನರಿಗೆ ಅಲರ್ಜಿ ಕಾಣಸಿಕೊಂಡಿದೆ.ಇದೀಗ ಗ್ರಾಮಸ್ಥರು ಅಧಿಕಾರಿಗಳು, ಪನಪ್ರತಿನಿಧಿನಗಳ ವಿರುದ್ಧ ಆಕ್ರೋಶ ಹೊರಗೆ ಹಾಕಿದ್ದಾರೆ.