Subscribe to Updates
Get the latest creative news from FooBar about art, design and business.
Author: KNN IT TEAM
ಕೆಎನ್ಎನ್ಡಿಜಿಟಲ್ ಡೆಸ್ಕ್ : ಅಬಿಯಾದಲ್ಲಿ ಮಹಿಳಾ ಶಾಂತಿಪಾಲನಾ ಪಡೆಯನ್ನ ಭಾರತ ನಿಯೋಜಿಸುತ್ತಿದೆ. ವಿಶ್ವಸಂಸ್ಥೆಯ ಶಾಂತಿಪಾಲನೆಯಲ್ಲಿ ಭಾರತವು ಅತಿದೊಡ್ಡ ಪಡೆಗಳಲ್ಲಿ ಒಂದಾಗಿದೆ. ಭಾರತವು 2007 ರಿಂದ ವಿಶ್ವಸಂಸ್ಥೆಯ ಮಿಷನ್ನಲ್ಲಿ ದೇಶದ ಅತಿದೊಡ್ಡ ಮಹಿಳಾ ವಿಭಾಗವಾದ ನೀಲಿ ಹೆಲ್ಮೆಟ್ಗಳನ್ನ ನಿಯೋಜಿಸುತ್ತಿದೆ. ಈ ಕ್ರಮವು ಶಾಂತಿಪಾಲನಾ ಪಡೆಯಲ್ಲಿ ಮಹಿಳೆಯರ ಸಂಖ್ಯೆಯನ್ನ ಗಮನಾರ್ಹವಾಗಿ ಹೆಚ್ಚಿಸುವ ಭಾರತದ ಉದ್ದೇಶವನ್ನ ಪ್ರತಿಬಿಂಬಿಸುತ್ತದೆ. ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು ಪ್ಲಟೂನ್’ನ ಫೋಟೋವನ್ನು ಪೋಸ್ಟ್ ಮಾಡಿ, “ಅಬಿಯಾದಲ್ಲಿ ವಿಶ್ವಸಂಸ್ಥೆಯ ಮಿಷನ್ ಅಡಿಯಲ್ಲಿ ನಮ್ಮ ಬೆಟಾಲಿಯನ್’ನ ಭಾಗವಾಗಿ ಭಾರತವು ಮಹಿಳಾ ಶಾಂತಿಪಾಲನಾ ಪ್ಲಟೂನ್ ನಿಯೋಜಿಸುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಶಾಂತಿಪಾಲನಾ ಪಡೆಗಳ ಅತಿದೊಡ್ಡ ನಿಯೋಜನೆಯಾಗಿದೆ. ಅವರಿಗೆ ಶುಭ ಹಾರೈಕೆಗಳು” ಎಂದಿದ್ದಾರೆ. ಜನವರಿ 6, 2023 ರಂದು ವಿಶ್ವಸಂಸ್ಥೆಯ ಮಧ್ಯಂತರ ಭದ್ರತಾ ಪಡೆ, ಎಬಿವೈ (ಯುನಿಸ್ಫಾ) ಯಲ್ಲಿ ಭಾರತೀಯ ಬೆಟಾಲಿಯನ್ನ ಭಾಗವಾಗಿ ಅಬಿಯಾದಲ್ಲಿನ ಮಹಿಳಾ ಶಾಂತಿಪಾಲನಾ ಪಡೆಯನ್ನ ನಿಯೋಜಿಸಲಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಮಿಷನ್…
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇಂದಿನ ದಿನಗಳಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರು ಕಣ್ಣಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅತಿಯಾದ ಮೊಬೈಲ್ , ಲ್ಯಾಪ್ ಟಾಪ್ ಬಳಕೆ, ಟಿವಿ ನೋಡುವುದು ಕಣ್ಣಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಸಮಸ್ಯೆಯನ್ನು ಕಡಿಮೆ ಮಾಡಲು ಉತ್ತಮವಾದ ಆಹಾರ ಅಗತ್ಯವಾಗಿದೆ. ಆಹಾರದಲ್ಲಿ ಕೆಲವು ವಸ್ತುಗಳನ್ನು ಸೇರಿಸುವ ಮೂಲಕ ದೃಷ್ಟಿಯನ್ನು ಕಾಪಾಡಿಕೊಳ್ಳಬಹುದು. ದೃಷ್ಟಿಗಾಗಿ ನೀವು ಆಹಾರದಲ್ಲಿ ಯಾವ ವಿಷಯಗಳನ್ನು ಸೇರಿಸಿಕೊಳ್ಳಬಹುದು ಎಂಬುದನ್ನು ತಿಳಿಯಿರಿ. ಆಮ್ಲಾ(ನೆಲ್ಲಿಕಾಯಿ) ಆಮ್ಲಾವನ್ನು ಕಣ್ಣುಗಳಿಗೆ ವರವೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ವಿಟಮಿನ್-ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳಿದ್ದು, ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ. ಕಣ್ಣಿನ ಆರೋಗ್ಯಕ್ಕಾಗಿ ನೀವು ಆಮ್ಲಾವನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಇದರ ಜೊತೆಗೆ ನೆಲ್ಲಿಕಾಯಿ ರಸವನ್ನು ಕುಡಿಯಬಹುದು. ಬಾದಾಮಿ ವಿಟಮಿನ್-ಇ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳು ಬಾದಾಮಿಯಲ್ಲಿವೆ. ದೃಷ್ಟಿ ಹೆಚ್ಚಿಸಲು ಇದು ಪ್ರಯೋಜನಕಾರಿ. ಕಣ್ಣಿನ ಆರೋಗ್ಯಕ್ಕಾಗಿ ಪ್ರತಿದಿನ ನೆನೆಸಿದ ಬಾದಾಮಿಯನ್ನು ಸೇವಿಸಬಹುದು. ಕ್ಯಾರೆಟ್ ಕ್ಯಾರೆಟ್ ಅನ್ನು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿಯಾದ ತರಕಾರಿಯಾಗಿದೆ. ಇದರಲ್ಲಿರುವ ಬೀಟಾ-ಕ್ಯಾರೋಟಿನ್ ದೃಷ್ಟಿಯನ್ನು ಹೆಚ್ಚಿಸಲು…
ಬೆಂಗಳೂರು: ಖಾಸಗೀ ಶಾಲೆಗಳು ವಿಧಿಸುವಂತ ಶುಲ್ಕದ ಬಗ್ಗೆ ಸರ್ಕಾರವು ಶಾಲಾ ಶುಲ್ಕ ನಿಗಧಿ ಪಡಿಸುವಂತ ಅಧಿಕಾರವಿಲ್ಲ. ಶುಲ್ಕ ಮಿತಿ ಉಲ್ಲಂಘಿಸಿದರೇ ಶಿಕ್ಷೆ ವಿಧಿಸುವಂತಿಲ್ಲ ಎಂಬುದಾಗಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಮೂಲಕ ಖಾಸಗಿ ಶಾಲೆಗಳಿಗೆ ಬಿಗ್ ರಿಲೀಫ್ ನೀಡಿದೆ. ಕರ್ನಾಟಕ ಹೈಕೋರ್ಟ್ ಗೆ, ಕರ್ನಾಟಕ ಶಿಕ್ಷಣ ಕಾಯ್ದೆಯ ನಿಯಮಗಳನ್ನು ಪ್ರಶ್ನಿಸಿ, ಖಾಸಗೀ ಶಿಕ್ಷಣ ಸಂಸ್ಥೆಗಳಿಂದ ರಿಟ್ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆಯನ್ನು ಇಂದು ಹೈಕೋರ್ಟ್ ಏಕ ಸದಸ್ಯ ಪೀಠವು ನಡೆಸಿತು. ಶಾಲಾ ಶುಲ್ಕ ನಿಗದಿ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಶುಲ್ಕ ಮಿತಿ ಉಲ್ಲಂಘಿಸಿದರೇ ಶಿಕ್ಷಿ ವಿಧಿಸುವಂತಿಲ್ಲ ಎಂಬುದಾಗಿ ಹೇಳಿತು. ಅಲ್ಲದೇ ಹೀಗೆ ಶಿಕ್ಷೆ ವಿಧಿಸುವುದು ಕರ್ನಾಟಕ ಶಿಕ್ಷಣ ಕಾಯ್ದೆ ಸೆಕ್ಷನ್ 2(11)ಎ ವಿಧಿಗೆ ವಿರುದ್ಧವಾಗಿದೆ. ಅಲ್ಲದೇ ಸಂವಿಧಾನದ 14ನೇ ವಿಧಿಯ ವಿರುದ್ಧವಾಗಿದೆ ಎಂಬುದಾಗಿ ಹೇಳಿತು. ಮಕ್ಕಳ ಸುರಕ್ಷತೆ ನಿಯಮ ಉಲ್ಲಂಘನೆಗೆ ಶಿಕ್ಷೆ ಸಹ ಕಾನೂನು ಬಾಹಿರವಾಗಿದೆ ಎಂಬುದಾಗಿ ಹೇಳುವ ಮೂಲಕ ಖಾಸಗಿ ಅನುದಾನಿತ ಶಾಲೆಗಳಿಗೆ ಬಿಗ್ ರಿಲೀಫ್ ಅನ್ನು ಹೈಕೋರ್ಟ್…
ನವದೆಹಲಿ : ಮಹಿಳಾ ಉದ್ಯೋಗಿ ತಾಯಿಯಾದ್ರೆ, ಆಕೆಗೆ ಹೆರಿಗೆ ರಜೆ ನೀಡಲಾಗುತ್ತದೆ ಎಂದು ನೀವು ಇಲ್ಲಿಯವರೆಗೆ ಕೇಳಿರಬೇಕು. ಆದ್ರೆ, ಈಗ ಒಂದು ಕಂಪನಿಯು ತಂದೆಯಾದ ನಂತರವೂ ತನ್ನ ಪುರುಷ ಉದ್ಯೋಗಿಗೆ ಪಿತೃತ್ವ ರಜೆ ನೀಡಲು ಹೊರಟಿದೆ. ಈ ಕಂಪನಿಯ ಹೆಸರು ಫಿಜರ್ ಇಂಡಿಯಾ. ಇದು ಕಂಪನಿಯಲ್ಲಿ ಪಿತೃತ್ವ ರಜೆ ನೀತಿಯ ಅನುಷ್ಠಾನವನ್ನು ಘೋಷಿಸಿದೆ. ಪಿತೃತ್ವ ರಜೆ ನೀತಿ ಎಂದರೇನು.? ಫಿಜರ್ ಇಂಡಿಯಾ ತನ್ನ ಉದ್ಯೋಗಿಗಳಿಗೆ 12 ವಾರಗಳ ಪಿತೃತ್ವ ರಜೆ ನೀತಿಯನ್ನ ಜಾರಿಗೆ ತಂದಿದೆ. ಈ ನೀತಿಯ ಅಡಿಯಲ್ಲಿ, ತಂದೆಯಾಗುವ ಉದ್ಯೋಗಿಗಳು 2 ವರ್ಷಗಳಲ್ಲಿ ಈ ರಜಾದಿನಗಳ ಲಾಭವನ್ನು ಪಡೆಯಬಹುದು. ಪಿತೃತ್ವ ರಜೆ ತೆಗೆದುಕೊಳ್ಳುವವರು ಒಂದು ಬಾರಿಗೆ ಕನಿಷ್ಠ ಎರಡು ವಾರಗಳ ಮತ್ತು ಗರಿಷ್ಠ 6 ವಾರಗಳ ರಜೆ ಪಡೆಯಬಹುದು. ರಜೆ ಯಾಕೆ ಬೇಕು.? ಕಂಪನಿ ಹೇಳೋದೇನು.? ಫೈಜರ್ ಇಂಡಿಯಾ ಕಂಪನಿಯು ವೈವಿಧ್ಯತೆ ಮತ್ತು ಸೇರ್ಪಡೆಗೆ ಸಂಬಂಧಿಸಿದ ತನ್ನ ಉಪಕ್ರಮಗಳ ಭಾಗವಾಗಿ ಈ ಕ್ರಮವನ್ನ ತೆಗೆದುಕೊಂಡಿದೆ. ಈ ಹೊಸ ನೀತಿಯನ್ನ 1…
ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಭತ್ಯೆ (HRA)ಗೆ ಸಂಬಂಧಿಸಿದ ನಿಯಮಗಳನ್ನ ಹಣಕಾಸು ಸಚಿವಾಲಯ ಬದಲಾಯಿಸಿದೆ. ಹೊಸ ನಿಯಮಗಳ ಪ್ರಕಾರ, ಸರ್ಕಾರಿ ನೌಕರರು ಕೆಲವು ಸಂದರ್ಭಗಳಲ್ಲಿ HRAಗೆ ಅರ್ಹರಾಗಿರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಕೇಂದ್ರ ಸರ್ಕಾರದ ಉದ್ಯೋಗಿಯಾಗಿದ್ದರೆ, ಈ ಷರತ್ತುಗಳು ಯಾವುವು ಎಂದು ನಿಮಗೆ ತಿಳಿದಿರಬೇಕು. ಅವುಗಳನ್ನು ವಿವರವಾಗಿ ತಿಳಿದುಕೊಳ್ಳೋಣ. ಮನೆ ಬಾಡಿಗೆ ಭತ್ಯೆಗೆ (HRA) ಹೊಸ ಷರತ್ತುಗಳು.! 1. ಮೊದಲ ನಿಯಮವೆಂದ್ರೆ, ಉದ್ಯೋಗಿಯು ಇನ್ನೊಬ್ಬ ಸರ್ಕಾರಿ ನೌಕರನಿಗೆ ನಿಗದಿಪಡಿಸಿದ ಸರ್ಕಾರಿ ವಸತಿ ಸೌಕರ್ಯವನ್ನ ಹಂಚಿಕೊಂಡರೆ, ಅವನು ಅದಕ್ಕೆ ಅರ್ಹನಾಗಿರುವುದಿಲ್ಲ. 2. ಇದರ ಹೊರತಾಗಿ, ಉದ್ಯೋಗಿಯ ಪೋಷಕರು, ಮಗ ಅಥವಾ ಮಗಳು ಅವರಲ್ಲಿ ಯಾರಿಗಾದರೂ ಮನೆ ಮಂಜೂರು ಮಾಡಿದ್ದರೆ ಮತ್ತು ಅವರು ಅದರಲ್ಲಿ ವಾಸಿಸುತ್ತಿದ್ದರೆ. ಇವುಗಳಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರ, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಮುನ್ಸಿಪಲ್ ಕಾರ್ಪೊರೇಷನ್, ಪೋರ್ಟ್ ಟ್ರಸ್ಟ್, ರಾಷ್ಟ್ರೀಕೃತ ಬ್ಯಾಂಕ್, ಎಲ್ಐಸಿ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳು ಸೇರಿವೆ. 3. ಮೇಲೆ ತಿಳಿಸಿದ…
ಧಾರವಾಡ: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಜೆಡಿಎಸ್ ಪಕ್ಷ ಅಂದ್ರೇ ಫಾರ್ ದಿ ಫ್ಯಾಮಿಲಿ, ಆಫ್ ದಿ ಫ್ಯಾಮಿಲಿ, ಬೈದಿ ಫ್ಯಾಮಿಲಿ ಥರ ಆಗಿದೆ ಎಂಬುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಇಂದು ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಹೆಸರು ಇಡುವಂತೆ ಒತ್ತಾಯ ಕೇಳಿ ಬಂದಿವೆ ಎಂಬುದಾಗಿ ತಿಳಿದು ಬಂದಿದೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಬಂದಿರೋ ಕಾಮೆಂಟ್ ನೋಡಿದೆ. ಹೆದ್ದಾರಿಗೆ ದೇವೇಗೌಡರ ಹೆಸರಿಡಿ, ಒಂದು ಬದಿಯ ಸರ್ವಿಸ್ ರಸ್ತೆಗೆ ಕುಮಾರಸ್ವಾಮಿ, ಮತ್ತೊಂದಕ್ಕೆ ರೇವಣ್ಣ, ಸೇತುವೆಗೆ ಪ್ರಜ್ವಲ್ ರೇವಣ್ಣ, ಅಂಡರ್ ಪಾಸ್ ಗೆ ನಿಖಿಲ್ ಹೆಸರು, ಫ್ಲೈಓವರ್ ಗೆ ಅನಿತಾ ಕುಮಾರಸ್ವಾಮಿ ಎಂದಿದ್ದಾರೆ ಎಂದು ಹೇಳುವ ಮೂಲಕ ಲೇವಡಿ ಮಾಡಿದರು. ಇದೇ ವೇಳೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಂಬಂಧ ಮಾತನಾಡಿದಂತ ಅವರು, ಈ ಬಗ್ಗೆ ಸಿಎಂ ಬೊಮ್ಮಾಯಿಯವರು ಕ್ಯಾಬಿನೆಟ್ ನಲ್ಲಿ ದೃಢವಾದಂತ…
ಮಣಿಪುರ : ಎರಡು ದಿನಗಳ ಮಣಿಪುರ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸುಮಾರು ರೂ. 1311 ಕೋಟಿ ವೆಚ್ಚದ 21 ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು ಎಂದು ಗೃಹ ಸಚಿವಾಲಯ ತಿಳಿಸಿದೆ. ಇದೇ ವೇಳೆ ಸಚಿವರು , ಸುಮಾರು 165 ಅಡಿ ಎತ್ತರದ ತ್ರಿವರ್ಣ ಧ್ವಜವನ್ನು ಮೊಯಿರಾಂಗ್‌ನಲ್ಲಿರುವ ಐತಿಹಾಸಿಕ ‘ಆಜಾದ್ ಹಿಂದ್ ಫೌಜ್’ ಪ್ರಧಾನ ಕಛೇರಿಯಲ್ಲಿ ಅನಾವರಣಗೊಳಿಸಿದರು. ಇದು ಇಡೀ ಈಶಾನ್ಯ ಪ್ರದೇಶದಲ್ಲಿ ಅತಿ ಎತ್ತರದ ರಾಷ್ಟ್ರಧ್ವಜವಾಗಿದೆ. ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ನೇತೃತ್ವದಲ್ಲಿ ಮಣಿಪುರವು ಅಭಿವೃದ್ಧಿ, ಶಾಂತಿ ಮತ್ತು ಸಮೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಭಯೋತ್ಪಾದನೆ, ಬಂದ್ ಮತ್ತು ದಿಗ್ಬಂಧನದಿಂದ ಸಂಪೂರ್ಣವಾಗಿ ಮುಕ್ತವಾಗಿದೆ ಎಂದು ಎಂದೇಳಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರು ಅತ್ಯಂತ ಜ್ಞಾನ ಮತ್ತು ಪ್ರತಿಭಾವಂತ ರಾಜ ಶ್ರೀ ಭಾಗ್ಯಚಂದ್ರ, ಮಹಾರಾಜ ಕುಲಚಂದ್ರ ಮತ್ತು ಪುಖೋತಿಂಥಂಗ್ ಅವರಿಗೆ ಗೌರವ ಸಲ್ಲಿಸಿದರು. ಈ…
ಬೆಂಗಳೂರು: ಬೆಂಗಳೂರು ವಿವಿ ಆವರಣದಲ್ಲಿ ಇರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಕೂಡ ಸರಕಾರದ ನಿಯಮದಂತೆ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸ್ಥಳೀಯ ಮೀಸಲಾತಿ ಕೊಡಬೇಕು. ಈ ಸಂಬಂಧ ಸರಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರು ಕುಲಪತಿಗೆ ಪತ್ರ ಬರೆದಿದ್ದಾರೆ. ನ್ಯಾಷನಲ್ ಲಾ ಸ್ಕೂಲ್ ಯೂನಿವರ್ಸಿಟಿಯಲ್ಲಿ ಕಳೆದ ಎರಡು ವರ್ಷಗಳಿಂದ ಶೇಕಡ 25ರ ಸ್ಥಳೀಯ ಮೀಸಲಾತಿ ಕೊಡುತ್ತಿಲ್ಲ. ಬದಲಿಗೆ ಅಖಿಲ ಭಾರತ ಕೋಟಾದಡಿ ಮೆರಿಟ್ ಮೇಲೆ ಆಯ್ಕೆಯಾದ ರಾಜ್ಯದ ವಿದ್ಯಾರ್ಥಿಗಳನ್ನೇ ಈ ಮೀಸಲಾತಿ ವ್ಯಾಪ್ತಿಗೆ ತರುತ್ತಿರುವುದು ಸರಕಾರದ ನಿಯಮಗಳ ಉಲ್ಲಂಘನೆಯಾಗಿದೆ. ಇದು ಸಹಜ ನ್ಯಾಯದ ತತ್ವಕ್ಕೆ ವಿರುದ್ಧವಾಗಿದೆ ಎಂದು ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಹೈದರಾಬಾದ್, ಕೋಲ್ಕತ್ತಾ, ತಿರುಚಿನಾಪಳ್ಳಿ, ವಿಶಾಖಪಟ್ಟಣ, ರಾಯ್ ಪುರ ಮುಂತಾದ ಕಡೆಗಳಲ್ಲಿ ಇರುವ ಇಂತಹುದೇ ಸಂಸ್ಥೆಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳ ಮೀಸಲಾತಿಯನ್ನು ಅನುಸರಿಸಲಾಗುತ್ತಿದೆ. ಇದರಂತೆ ಇಲ್ಲಿನ ನ್ಯಾಷನಲ್ ಲಾ ಸ್ಕೂಲ್ ಕೂಡ 2020ರಲ್ಲಿ ಜಾರಿಗೆ ತಂದಿರುವ…
ಬೀದರ್: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ಬಿಜೆಪಿ ಸರ್ಕಾರದಲ್ಲಿ ಸ್ಯಾಂಟ್ರೋ ರವಿ ಮೀಲಕ ಡೀಲ್ ಮಾಡೋ ಬಗ್ಗೆ ಸ್ಪೋಟಕ ಬಾಂಬ್ ಸಿಡಿಸಿದ್ದರು. ಈ ಬಗ್ಗೆ ಸಚಿವ ಎಸ್ ಟಿ ಸೋಮಶೇಖರ್ ಹೆಚ್ ಡಿಕೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಟಾಂಗ್ ನೀಡಿರುವಂತ ಕುಮಾರಸ್ವಾಮಿ, ಸೋಮಶೇಖರ್ ಜೊತೆಗೆ ಸ್ಯಾಂಟ್ರೋ ರವಿ ಇರುವಂತ ವೀಡಿಯೋ ರಿಲೀಸ್ ಮಾಡಿದ್ದಾರೆ. ಇಂದು ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಚಾಂಗಲೇರಾದಲ್ಲಿ ತಮ್ಮ ಮೊಬೈಲ್ ನಲ್ಲಿಯೇ ಸ್ಯಾಂಟ್ರೋ ರವಿ ಜೊತೆಗೆ ಸಚಿವ ಸೋಮಶೇಖರ್ ಇರೋ ವೀಡಿಯೋ ತೋರಿಸಿದರು. ಈ ವೀಡಿಯೋ ವರ್ಗಾವಣೆ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿರುವಂತ ವೀಡಿಯೋ ಆಗಿದೆ ಎನ್ನಲಾಗಿದೆ. ಇದೇ ವೇಳೆ ಸೋಮಶೇಖರ್ ವಿರುದ್ಧ ವಾಗ್ಧಾಳಿ ನಡೆಸಿದಂತ ಅವರು, ಕಳ್ಳನ ಮನಸ್ಸು ಹುಳ್ಳುಳ್ಳಗೆ ಅಂದರೇ ಇವರಿಗ್ಯಾಕೆ ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದರು. https://kannadanewsnow.com/kannada/haveri-kannada-sahitya-sammelana-cm-bommai-announces-legal-framework-for-holistic-language-development-soon/ https://kannadanewsnow.com/kannada/mangaluru-cooker-bomb-blast-case-nia-arrests-one-youth-from-honnali/
ತುಮಕೂರು : ಕೇಂದ್ರ ಸರ್ಕಾರದಿಂದ ತುಮಕೂರು ಸ್ಮಾರ್ಟ್ ಸಿಟಿ ಯೋಜನೆಗೆ ( Smart City Project ) 500 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ತಿಳಿಸಿದರು. ಅವರು ಇಂದು ಭಾರತೀಯ ಜನತಾ ಪಾರ್ಟಿಯ ವತಿಯಿಂದ ಶಿರಾದ ಪ್ರೆಸಿಡೆನ್ಸಿ ಸ್ಕೂಲ್ ಮೈದಾನದಲ್ಲಿ ಆಯೋಜಿಸಿರುವ “ ಸಾರ್ವಜನಿಕ ಸಭೆ”ಯಲ್ಲಿ ಪಾಲ್ಗೊಂಡು ಮಾತನಾಡಿ, ರಾಜ್ಯದಲ್ಲಿ 6000 ಕಿಮೀ ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ಮೇಲ್ಸೆತುವೆ ಹಾಗೂ ಕೆಳಸೇತುವೆಗಳ ನಿರ್ಮಾಣಕ್ಕೆ 1000 ಕೋಟಿ ರೂ. ನೀಡಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ರೈತ ಸಮ್ಮಾನ ಯೋಜನೆಯಡಿ 9,500 ಸಾವಿರ ಕೋಟಿ ರೂ.ಗಳನ್ನು ರೈತರ ಖಾತೆಗೆ ನೀಡಲಾಗಿದೆ. 1 ಕೋಟಿ ಜನರಿಗೆ ಆಯುಷ್ಮಾನ್ ಭಾರತ ಯೋಜನೆ , ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರಧಾನಿ ಮೋದಿಯವರು ಏನು ಮಾಡಿದ್ದಾರೆ ಎಂಬುದಕ್ಕೆ ಇವೆಲ್ಲ ಜನಪರ ಯೋಜನೆಗಳೇ ಉತ್ತರ. ತುಮಕೂರು, ಶಿರಾ , ಚಿತ್ರದುರ್ಗ, ದಾವಣಗೆರೆ ರೈಲ್ವೆ ಯೋಜನೆಗೆ ಅನುಮೋದನೆಯನ್ನು ನೀಡಲಾಗಿದೆ.…