Author: KNN IT TEAM

ತುಮಕೂರು: ತುಮಕೂರು ನಗರದ ಶಿರಾ ಗೇಟ್ ಎಸ್.ಮಾಲ್ ಬಳಿ ಆ್ಯಂಬುಲೆನ್ಸ್‌ ಅಪಘಾತಕ್ಕಿಡಾಗಿದೆ. ಶಿರಾದಿಂದ ತುಮಕೂರು ಜಿಲ್ಲಾಸ್ಪತ್ರೆಗೆ ರೋಗಿಯನ್ನು ಕರೆ ತರುತ್ತಿದ್ದ ಈ ಘಟನೆ ಸಂಭವಿಸಿದೆ. https://kannadanewsnow.com/kannada/up-teacher-suspended-after-video-goes-viral-of-student-massaging/ ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿದ್ದು, ಚಾಲಕನಿಗೆ ಗಾಯವಾಗಿದೆ.ಕಿರಿದಾದ ರಸ್ತೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.ಸೇತುವೆಗೆ ಡಿಕ್ಕಿ ಹೊಡೆದು ಪಲ್ಟಿಯಾದ ಆ್ಯಂಬುಲೆನ್ಸ್‌. ಗಾಯಾಳು ಚಾಲಕನಿಗೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ರಾಜ್ಯಾದ್ಯಂತ ಮತ್ತೆ ಮಳೆ ಅಬ್ಬರ ಶುರುವಾಗಿದ್ದು, ರಾಜ್ಯದ ಹಲವಡೆ ರಾತ್ರಿಯೀಡಿ ಭಾರೀ ಮಳೆಯಾಗಿದ್ದು, ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.  ಜನಜೀವನ ಅಸ್ವಸ್ಥಗೊಂಡಿದೆ. https://kannadanewsnow.com/kannada/up-teacher-suspended-after-video-goes-viral-of-student-massaging/ ಮೈಸೂರು, ದಾವಣಗೆರೆ, ಶಿವಮೊಗ್ಗ, ಹಾಸನ, ಗದಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ತಡರಾತ್ರಿ ಭಾರೀ ಮಳೆಯಾಗಿದ್ದು, ಮನೆಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ.  ಗದಗ ಜಿಲ್ಲೆಯಲ್ಲಿ ರಾತ್ರಿಯಿಡೀ ಭಾರಿ ಮಳೆಸುರಿದಿದ್ದು, ರಾಜಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಮನೆಗಳಿಗೆ ನುಗ್ಗಿದೆ. ಬೆಟಗೇರಿಯ ವಾರ್ಡ್ ನಂಬರ್ 4ರ ಮಂಜುನಾಥ್ ನಗರ, ವಾಲ್ಮೀಕಿ ಅಂಬೇಡ್ಕರ್ ಬಡಾವಣೆಯಲ್ಲಿ ಭಾರಿ ಅವಾಂತರ ಸೃಷ್ಟಿಯಾಗಿದೆ. ಶಿವಮೊಗ್ಗ ನಗರದಲ್ಲಿ ನಿನ್ನೆ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಬಾಪೂಜಿ ನಗರದ ಅನೇಕ ಮನೆಗಳಿಗೆ ನೀರು ನುಗ್ಗಿ ಅವಾಂತರ ಉಂಟಾಗಿದೆ. ಹಾಸನ ಜಿಲ್ಲೆಯಲ್ಲಿ ತಡರಾತ್ರಿ ಭಾರೀ ಮಳೆಯಾಗಿದ್ದು, ಅರಸೀಕೆರೆ ಪಟ್ಟಣದಲ್ಲಿ ಭಾರಿ ಮಳೆಗೆ ಜನಜೀವನ ಅಸ್ವಸ್ಥಗೊಂಡಿದೆ. ಆಹಾರ ಸಾಮಾಗ್ರಿ, ದವಸ ಧಾನ್ಯಗಳು ನೀರುಪಾಲಾಗಿದ್ದು, ನೀರು ಹೊರಹಾಕಲು ನಿವಾಸಿಗಳು ಪರದಾಡುತ್ತಿದ್ದಾರೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲೂ…

Read More

ನವದೆಹಲಿ: ಉತ್ತರ ಪ್ರದೇಶದ ಹರ್ದೋಯ್ನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯಿಂದ ಮಸಾಜ್ ಪಡೆಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. https://kannadanewsnow.com/kannada/two-students-of-a-reputed-college-in-bengaluru-have-gone-missing-anxiety-among-parents/ ಹೀಗಾಗಿ ಆ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ. ಹರ್ದೋಯಿಯ ಪೋಖಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕಿಯನ್ನು ಶಾಲೆಯ ಸಹಾಯಕ ಶಿಕ್ಷಕಿ ಊರ್ಮಿಳಾ ಸಿಂಗ್ ಎಂದು ಗುರುತಿಸಲಾಗಿದೆ. ವೈರಲ್ ವೀಡಿಯೊದಲ್ಲಿ, ವಿದ್ಯಾರ್ಥಿನಿ ತರಗತಿಯಲ್ಲಿ ಮಸಾಜ್ ಮಾಡುವಾಗ ಅವಳು ಕುರ್ಚಿಯಲ್ಲಿ ಕುಳಿತಿರುವುದನ್ನು ನೋಡುತ್ತೇವೆ. ಈ ಕೃತ್ಯದ ಸಮಯದಲ್ಲಿ ಇತರ ವಿದ್ಯಾರ್ಥಿಗಳು ಸಹ ತರಗತಿಯಲ್ಲಿ ಹಾಜರಿದ್ದುದು ಕಂಡುಬಂದಿದೆ. ವೀಡಿಯೊ ವೈರಲ್ ಆದ ಕೂಡಲೇ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ. https://kannadanewsnow.com/kannada/two-students-of-a-reputed-college-in-bengaluru-have-gone-missing-anxiety-among-parents/ ನಾನು ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದ ಮೂಲಕ ಸ್ವೀಕರಿಸಿದ್ದೇನೆ. ಮೇಲ್ನೋಟಕ್ಕೆ ಶಿಕ್ಷಕನು ತಪ್ಪಿತಸ್ಥನೆಂದು ಕಂಡುಬಂದಿದೆ. ಅವರ ಅಮಾನತು ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ” ಎಂದು ಹರ್ದೋಯ್ ಮೂಲ ಶಿಕ್ಷಣ ಅಧಿಕಾರಿ ಬಿಪಿ ಸಿಂಗ್ ತಿಳಿಸಿದ್ದಾರೆ. https://twitter.com/GradingNews/status/1552286155755835394?ref_src=twsrc%5Etfw%7Ctwcamp%5Etweetembed%7Ctwterm%5E1552286155755835394%7Ctwgr%5E%7Ctwcon%5Es1_&ref_url=https%3A%2F%2Fwww.india.com%2Futtar-pradesh%2Fup-teacher-suspended-after-video-goes-viral-of-student-massaging-her-in-classroom-5538790%2F

Read More

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಹಿಂದೂ ಪುರಾಣದಲ್ಲಿ ಅನೇಕ ವ್ರತಚಾರಣೆ ಕುರಿತು ಉಲ್ಲೇಖವಿದೆ.ಈ ವ್ರತಚರಣೆಗಳು ತಮ್ಮ ಮನೋಇಷ್ಟರ್ಥವನ್ನು ಸಿದ್ದಿಸಿಕೊಳ್ಳುವ ಒಂದು ಸುಲಭವಾದ ಮಾರ್ಗವಾಗಿದೆ.ಪ್ರತಿಯೊಂದು ವ್ರತ ಆಚರಣೆಯು ತನ್ನದೇ ಆದ ಪದ್ಧತಿಗಳು ಆಚರಣೆ ಹಾಗೂ ಕಥೆ, ಉಪಕಥೆ ಹೀಗೆ ಕಾಣಬಹುದು.ಇಂತಹ ವ್ರತ ಆಚರಣೆಗಳಲ್ಲಿ ಅತ್ಯಂತ ಶ್ರೇಷ್ಠವದಂತಹ ಹಾಗೂ ಮಹತ್ವದಂತಹ ವ್ರತ ಎಂದರೆ ಶ್ರೀ ವರಮಹಾಲಕ್ಷ್ಮಿ ವ್ರತ. ಅಷ್ಟ ಐಶ್ವರ್ಯ ದೇವತೆಯಾದ ಲಕ್ಷ್ಮಿಯನ್ನು ಪೂಜಿಸುವ ಹಾಗೂ ಒಲಿಸಿಕೊಳ್ಳುವಂತಹ ವ್ರತವೇ ಶ್ರೀ ವರಮಹಾಲಕ್ಷ್ಮಿ ವ್ರತ. ನಿತ್ಯ ಶುದ್ಧಳು,ನಿತ್ಯ ಸಿದ್ದಳು ಆಗಿರುವ ಲಕ್ಷ್ಮಿಯನ್ನು ಕ್ಷೀರ ಸಮುದ್ರ ಸಂಭವೆ ಸಮುದ್ರ ರಾಜನ ಪುತ್ರಿ ಚಂದ್ರನ ತಂಗಿ ಯಜ್ಞಕುಂಡದಲ್ಲಿ ಉದ್ಭವ ಆದವಳು ಕಮಲದಲ್ಲಿ ಅವಿರ್ಬವಿಸಿದವಳು ಎಂದು ಹೇಳುವುದನ್ನು ಕಾಣುತ್ತೆವೆ.ಆದರೆ ಈ ಲಕ್ಷ್ಮೀಯು ಸೃಷ್ಟಿಯ ಎಲ್ಲಾ ಸುವಸ್ತುಗಳಲ್ಲಿ ನೆಲೆಸಿರುವಳು ಮತ್ತು ಮಂಗಳ ಸ್ವರೂಪಿಣಿ ಮತ್ತು ಸಂಪತ್ತು ಸ್ವರೂಪಿಣಿ ಎಂದು ಹೇಳುತ್ತಾರೆ. ಜ್ಞಾನ,ಐಶ್ವರ್ಯ, ಸುಖ,ಆರೋಗ್ಯ, ಧನ, ಧಾನ್ಯ, ಜಯ…

Read More

ಜಿನೀವಾ: ಕಳೆದ ಕೆಲವು ವಾರಗಳಲ್ಲಿ ಕೋವಿಡ್-19 ಸೋಂಕಿನಿಂದಾಗಿ ಹೆಚ್ಚುತ್ತಿರುವ ಸಾವಿನ ಸಂಖ್ಯೆ ಮತ್ತು ಆಸ್ಪತ್ರೆಗೆ ದಾಖಲಾದ ಪ್ರಕರಣಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಕಳವಳ ವ್ಯಕ್ತಪಡಿಸಿದ್ದು, ಜಾಗೃತಿ ವಹಿಸುವಂತೆ ಎಚ್ಚರಿಕೆ ನೀಡಿದೆ. ಬುಧವಾರ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ WHO ಮುಖ್ಯಸ್ಥ ಡಾ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್(WHO chief Dr Tedros Adhanom Ghebreyesus), ಕಳೆದ ಐದು ವಾರಗಳಿಂದ ಕೋವಿಡ್-19 ನಿಂದ ಸಾವುಗಳು ಹೆಚ್ಚುತ್ತಿವೆ ಮತ್ತು ಕೆಲವು ದೇಶಗಳು ಆಸ್ಪತ್ರೆಗೆ ದಾಖಲಾಗುವ ಪ್ರವೃತ್ತಿಯನ್ನು ಹೆಚ್ಚಿಸುತ್ತಿವೆ. ಜನರು ತಮ್ಮ ಎಚ್ಚರಿಕೆಯನ್ನು ನಿರಾಸೆಗೊಳಿಸಬಾರದು. ನಾವು ಈಗ ಒಂದು ವರ್ಷದ ಹಿಂದೆ ಇದ್ದ ಪರಿಸ್ಥಿತಿಗಿಂತ ವಿಭಿನ್ನ ಪರಿಸ್ಥಿತಿಯಲ್ಲಿದ್ದೇವೆ. ನಾವು ಹಲವಾರು ಪ್ರಮುಖ ವಿಷಯ, ಪಾಠಗಳನ್ನು ಕಲಿತಿದ್ದೇವೆ. ಎಲ್ಲರೂ ಎಚ್ಚರಿಕೆಯಿಂದಿರುವುದು ಬಹಳ ಮುಖ್ಯ ಎಂದು ಟೆಡ್ರೊಸ್ ಅಭಿಪ್ರಾಯಪಟ್ಟಿದ್ದಾರೆ. ಜೀವಗಳನ್ನು ಉಳಿಸಲು ವ್ಯಾಕ್ಸಿನೇಷನ್ ಅನ್ನು ಅಮೃತವಾಗಿ ಪರಿಗಣಿಸಲಾಗಿದೆ. ಕೆಲವು ದೇಶಗಳು 70 ಪ್ರತಿಶತದಷ್ಟು ವ್ಯಾಕ್ಸಿನೇಷನ್‌ ಪೂರೈಕೆ ವ್ಯಾಪ್ತಿಯನ್ನು ತಲುಪಿದೆ. ಲಸಿಕೆ ಹಾಕಿಸಿಕೊಳ್ಳದಿದ್ದವರಲ್ಲಿ ಸಾವಿನ ಅಪಾಯ ಹೆಚ್ಚಾಗಿ ಸಂಭವಿಸಬಹುದು. ಹೀಗಾಗಿ, ಎಲ್ಲರೂ…

Read More

ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559…

Read More

ಕಲಬುರಗಿ : ತಾಲೂಕಿನ ಹಾವನೂರು ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಮಧ್ಯಾಹ್ನದ ಬಿಸಿಯೂಟ ಸೇವಿಸಿ 46 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. https://kannadanewsnow.com/kannada/good-news-good-news-for-sc-st-community-from-state-govt-cm-bommai-to-launch-75-unit-free-power-scheme-today/ 46 ವಿದ್ಯಾರ್ಥಿಗಳಲ್ಲಿ 8 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸ್ಥಳಾಂತರಿಸಲಾಗಿದೆ. ಶಾಲೆಯಲ್ಲಿ 158 ವಿದ್ಯಾರ್ಥಿಗಳಿದ್ದು, ಅದರಲ್ಲಿ 46 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಪೋಷಕರು ಮತ್ತು ಶಿಕ್ಷಕರು ತಕ್ಷಣ ಅಸ್ವಸ್ಥ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಗೊಬ್ಬೂರು (ಬಿ) ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಮಧ್ಯಾಹ್ನದ ಬಿಸಿಯೂಟ ಜಿಲ್ಲಾ ಅಧಿಕಾರಿ ಭರತಜ್ ಸಾವಳಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರತ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಕಿರಣ್ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. https://kannadanewsnow.com/kannada/two-students-of-a-reputed-college-in-bengaluru-have-gone-missing-anxiety-among-parents/

Read More

ಬೆಂಗಳೂರು: ರಾಜ್ಯದ 3.78 ಲಕ್ಷಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ( Scheduled Castes and Scheduled Tribes ) ಕುಟುಂಬಗಳಿಗೆ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ರಾಜ್ಯ ಸರ್ಕಾರದ ವಿನೂತನ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಇಂದು ಉದ್ಘಾಟಿಸಲಿದ್ದಾರೆ. ರಾಜ್ಯದ ಎಲ್ಲಾ ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಿಪಿಎಲ್ ಕಾರ್ಡ ( BPL Card ) ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಳ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ಉಚಿತ ವಿದ್ಯುತ್ ( 75 units of free electricity ) ನೀಡುವ ಯೋಜನೆ ಇದಾಗಿದೆ. ಯೋಜನೆ ಕುರಿತು ರಾಜ್ಯದ ಎಲ್ಲಾ ಎಸ್ಕಾಂಗಳು ಎಸ್ ಸಿ-ಎಸ್ ಟಿ ಗ್ರಾಹಕರಿಗೆ ಅರಿವು ಮೂಡಿಸಿದ್ದು ವಿದ್ಯುತ್ ಮೀಟರ್ ಮಾಪಕರು ಮತ್ತು ಗ್ರಾಮ ವಿದ್ಯುತ್ ಪ್ರತಿನಿಧಿಗಳು ಮನೆ ಮನೆಗೆ ತೆರಳಿ ಈ ಯೋಜನೆಯ ಕುರಿತು ಕರ ಪತ್ರಗಳನ್ನು ಹಂಚಿದ್ದಾರೆ.…

Read More

ಕೋಲ್ಕತ್ತಾ: ಬಂಧಿತ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಕೋಲ್ಕತ್ತಾದ ಎರಡನೇ ಫ್ಲಾಟ್‌ನಿಂದ ಸುಮಾರು 29 ಕೋಟಿ ರೂ. ನಗದು ಮತ್ತು ಐದು ಕೆಜಿ ಚಿನ್ನಾಭರಣ ಪತ್ತೆಯಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಕೋಲ್ಕತ್ತಾದ ಬೆಲ್‌ಘಾರಿಯಾ ಪ್ರದೇಶದಲ್ಲಿರುವ ಅರ್ಪಿತಾ ಮುಖರ್ಜಿ ಅವರ ಮನೆಯಿಂದ ತನಿಖಾ ಸಂಸ್ಥೆ ಅಧಿಕಾರಿಗಳು ಇಂದು ಮುಂಜಾನೆ 10 ಟ್ರಂಕ್‌ಗಳೊಂದಿಗೆ ತೆರಳಿದ್ದಾರೆ. ಮುಖರ್ಜಿ ಅವರ ಎರಡನೇ ಫ್ಲಾಟ್‌ನಿಂದ ವಶಪಡಿಸಿಕೊಂಡ ನಿಖರವಾದ ಹಣವನ್ನು ತಿಳಿಯಲು ಇಡಿ ಅಧಿಕಾರಿಗಳು ಮೂರು ನೋಟು ಎಣಿಕೆ ಯಂತ್ರಗಳನ್ನು ಬಳಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಗರದ ಉತ್ತರದ ಅಂಚಿನಲ್ಲಿರುವ ಬೆಲ್ಘಾರಿಯಾದಲ್ಲಿನ ಅವರ ನಿವಾಸದ ಮೇಲೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು, ಒಂದು ಕೊಠಡಿಯಲ್ಲಿ ಈ ನೋಟುಗಳ ರಾಶಿ ಪತ್ತೆಯಾಗಿದೆ. ಇಡಿ ಅಧಿಕಾರಿಗಳು ತಮ್ಮ ತನಿಖೆಯ ಭಾಗವಾಗಿ ಮನೆ ಮೇಲೆ ದಾಳಿ ನಡೆಸಿದ್ದರು. ವಿಚಾರಣೆ ವೇಳೆ ಅರ್ಪಿತಾ ಮುಖರ್ಜಿ ತನ್ನ ಎಲ್ಲಾ ಆಸ್ತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅವಳು…

Read More

ಅವಿನಾಶ್ ಆರ್ ಭೀಮಸಂದ್ರ, ಜೊತೆ ವಸಂತ ಬಿ ಈಶ್ವರಗೆರೆ ಬೆಂಗಳೂರು: ರಾಜ್ಯ ಸರ್ಕಾರದಿಂದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶಿಸಿದೆ. 31 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಿಸಿ ಆದೇಶಿಸಿದೆ. ಈ ಬಗ್ಗೆ ರಾಜ್ಯದ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಅಭಿವೃದ್ಧಿ ಯೋಜನಾ ಕಾರ್ಯಗಳ ಜಾರಿ ಮತ್ತು ಪರಿಶೀಲನೆ ಹಾಗೂ ಅಹವಾಲುಗಳ ವಿಚಾರಣೆ, ಅನಿರೀಕ್ಷಿತ ತಪಾಸಣೆ ಕುರಿತು ಪರಿಶೀಲನೆ ಮಾಡಿ, ಸರ್ಕಾರಕ್ಕೆ ವರದಿ ಮಾಡಲು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳನ್ನು ವಿವಿಧ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ ಎಂದಿದ್ದಾರೆ. ಹೀಗಿದೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಪಟ್ಟಿ ಡಾ.ಎನ್ ಮಂಜುಳ – ಬೆಂಗಳೂರು ನಗರ ಕೆಪಿ ಮೋಹನ್ ರಾಜ್ – ಬೆಂಗಳೂರು ಗ್ರಾಮಾಂತರ ಡಾ.ಜೆ ರವಿಶಂಕರ್ – ರಾಮನಗರ ಡಾ.ಪಿಸಿ ಜಾಫರ್ – ಚಿತ್ರದುರ್ಗ ಉಮಾ ಮಹಾದೇವನ್ – ಕೋಲಾರ ಎಲ್ ಕೆ…

Read More