Subscribe to Updates
Get the latest creative news from FooBar about art, design and business.
Author: KNN IT TEAM
ಸಂಭಾಲ್ (ಉತ್ತರ ಪ್ರದೇಶ): ಆರು ವರ್ಷದ ಬಾಲಕಿಯ ಮೇಲೆ ಧಾರ್ಮಿಕ ಶಿಕ್ಷಕನೋರ್ವ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದಿದೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಪ್ರಕಾರ, ಮಸೀದಿಯಲ್ಲಿ ಆಕೆಯ ಧಾರ್ಮಿಕ ಶಿಕ್ಷಕ ಮಂಗಳವಾರ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಆರೋಪಿಯು ಬಾಲಕಿಯನ್ನು ಮಸೀದಿ ಬಳಿಯ ತನ್ನ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ತಿಳಿಸಿದ್ದಾರೆ. ದೂರಿನ ಮೇರೆಗೆ ಐಪಿಸಿ 376 (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಬುಧವಾರ ಎಫ್‌ಐಆರ್ ದಾಖಲಿಸಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರ ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. https://kannadanewsnow.com/kannada/protesters-storm-iraqi-parliament-in-support-of-cleric-moqtada-al-sadr/ https://kannadanewsnow.com/kannada/another-ambulance-accident-in-tumakuru-a-sick-ambulance-collides-with-a-bridge-driver-hit/ https://kannadanewsnow.com/kannada/breaking-news-bjp-resigns-en-masse-in-bagalkot-koppal-districts-in-the-wake-of-praveen-nettars-murder/
ಬಾಗಲಕೋಟೆ : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಬಾಗಲಕೋಟೆ ಜಿಲ್ಲಾ ಬಿಜೆಪಿಯಲ್ಲಿ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. https://kannadanewsnow.com/kannada/protesters-storm-iraqi-parliament-in-support-of-cleric-moqtada-al-sadr/ ಬಾಗಲಕೋಟೆ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಜಮಖಂಡಿ ಬಿಜೆಪಿ ನಗರ ಮಂಡಲ, ಒಬಿಸಿ ಮೋರ್ಚಾ, ಮಹಿಳೆ ಮತ್ತು ಎಸ್ ಸಿ ಮೋರ್ಚಾ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಜಮಖಂಡಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ ಶಿರಗನ್ನವರ್, ಜಮಖಂಡಿ ನಗರ ಮಂಡಲ ಕಾರ್ಯದರ್ಶಿ ಶಂಕರ್ ಕಾಳೆ, ಜಮಖಂಡಿ ಒಬಿಸಿ ಮೋರ್ಚಾ ಅಧ್ಯಕ್ಷ ಗಣಾಚಾರಿ, ಒಬಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಲಾಗಿದೆ. ಇನ್ನು ಕೊಪ್ಪಳ ಜಿಲ್ಲಾ ಬಿಜೆಪಿಯಲ್ಲೂ ರಾಜೀನಾಮೆ ಪರ್ವ ಮುಂದುವರೆದಿದ್ದು, ಗ್ರಾಮೀಣಾ ಮಂಡಲ ಕೋಷ್ಟಾಧ್ಯಕ್ಷ ಸ್ಥಾನಕ್ಕೆ ಅಣ್ಣಯ್ಯ ಹಿಟ್ನಾಳ್ ರಾಜೀನಾಮೆ ನೀಡಿದ್ದಾರೆ. ಒಲೈಕೆ ರಾಜಕಾರಣ ಮಾಡಬೇಡಿ. ಇನ್ನೂ ಅನೇಕ ಕಾರ್ಯಕರ್ತರು ರಾಜೀನಾಮೆ ನೀಡಲಿದ್ದಾರೆ. ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡುವುದಿಲ್ಲ ಎಂದು ಕಿಡಿಕಾರಿದ್ದಾರೆ. ಚಿತ್ರದುರ್ಗ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ…
ಬಾಗಲಕೋಟೆ: ಬೆಳ್ಳಾರೆ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರುರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಹಿನ್ನೆಲೆ ರಾಜ್ಯ ಸರಾಕರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನಾಕ್ರೋಶ ವ್ಯಕ್ತಪಡಿಸಿದ್ದಾರೆ.ಬಾಗಲಕೋಟೆ ಜಿಲ್ಲೆಯಲ್ಲಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ರಾಜೀನಾಮೆ ನೀಡಿದ್ದಾರೆ. https://kannadanewsnow.com/kannada/praveen-nettaru-murder-7-sdpi-activists-taken-into-police-custody/ ಸಾಮೂಹಿಕ ರಾಜೀನಾಮೆ ಪತ್ರ ಕಳುಹಿಸುತ್ತಿರುವ ಕಳುಹಿಸುತ್ತಿದ್ದಾರೆ. ರಾಜೀನಾಮೆ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲೆ ಪಕ್ಷದ ಕಾರ್ಯಕರ್ತರು ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರ ಕಗ್ಗೊಲೆ ನಡೆಯುತ್ತಿದೆ. ಕಠಿಣ ಕ್ರಮ ಎನ್ನುವ ಸಿದ್ದ ಉತ್ತರ ಕೇಳಿ ಕೇಳಿ ಸಾಕಾಗಿದೆ ಎಂದು ಕಾರ್ಯಕರ್ತರು ಕಿಡಿಕಾರಿದ್ದಾರೆ. ಯುವ ಮೋರ್ಚಾ, ಒಬಿಸಿ ಮೋರ್ಚಾ, ಸಾಮಾಜಿಕ ಜಾಲತಾಣ ಸೇರಿ 12 ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲಗೆ ಪತ್ರ ಕಳುಹಿಸುತ್ತಿದ್ದು, ಸರ್ಕಾರದ ವಿರುದ್ದ, ಬಿಜೆಪಿ ಶಾಸಕರು, ಸಚಿವರು ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಬಾಗ್ದಾದ್ (ಇರಾಕ್): ಪ್ರತಿಸ್ಪರ್ಧಿ ಇರಾನ್ ಬೆಂಬಲಿತ ಪಕ್ಷಗಳಿಂದ ಪ್ರಧಾನಿ ಹುದ್ದೆಗೆ ನಾಮನಿರ್ದೇಶನಗೊಂಡಿರುವುದನ್ನು ವಿರೋಧಿಸಿ ನೂರಾರು ಇರಾಕಿ ಪ್ರತಿಭಟನಾಕಾರರು ಬುಧವಾರ ಬಾಗ್ದಾದ್‌ನಲ್ಲಿ ಸಂಸತ್ತಿನ ಕಟ್ಟಡಕ್ಕೆ ಮುತ್ತಿಗೆ ಹಾಕಿದರು. ಇವರುಗಳ ಪೈಕಿ ಶಿಯಾ ನಾಯಕ ಮುಕ್ತಾದ ಅಲ್-ಸದರ್ ಅವರ ಬೆಂಬಲಿಗರಾಗಿದ್ದಾರೆ. ಪ್ರತಿಭಟನಾಕಾರರು ಮೊಹಮ್ಮದ್ ಶಿಯಾ ಅಲ್-ಸುಡಾನಿ ಪ್ರಧಾನಿ ಹುದ್ದೆಗೆ ಉಮೇದುವಾರಿಕೆಯನ್ನು ವಿರೋಧಿಸಿದ್ದಾರೆ. ಅಲ್-ಸುಡಾನಿ ಮಾಜಿ ಮಂತ್ರಿ ಮತ್ತು ಮಾಜಿ ಪ್ರಾಂತೀಯ ಗವರ್ನರ್ ಆಗಿದ್ದಾರೆ. ಇವರು ಸಮನ್ವಯ ಚೌಕಟ್ಟಿನ ಪರವಾಗಿ ಪ್ರಧಾನ ಮಂತ್ರಿ ಹುದ್ದೆಗೆ ನಾಮನಿರ್ದೇಶನಗೊಂಡಿದ್ದಾರೆ. ಪ್ರತಿಭಟನಾಕಾರರು ಸಂಸತ್‌ನಲ್ಲಿ ಹಾಡುವುದು ಮತ್ತು ನೃತ್ಯ ಮಾಡುವುದನ್ನು ನೋಡಬಹುದು. ಅಷ್ಟೇ ಅಲ್ಲದೇ, ಒಬ್ಬ ವ್ಯಕ್ತಿ ಇರಾಕಿ ಸಂಸತ್ತಿನ ಸ್ಪೀಕರ್‌ನ ಮೇಜಿನ ಮೇಲೆ ಮಲಗಿರುವುದು ಕಂಡುಬಂದಿದೆ. ಈ ವೇಳೆ ಇಲ್ಲಿ ಯಾವುದೇ ಶಾಸಕರು ಹಾಜರಿರಲಿಲ್ಲ. ಪ್ರತಿಭಟನಾಕಾರರು ಒಳಗೆ ನುಗ್ಗಿದ್ದರಿಂದ ಭದ್ರತಾ ಪಡೆಗಳು ಮಾತ್ರ ಕಟ್ಟಡದೊಳಗೆ ಇದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. https://kannadanewsnow.com/kannada/another-ambulance-accident-in-tumakuru-a-sick-ambulance-collides-with-a-bridge-driver-hit/ https://kannadanewsnow.com/kannada/rain-in-karnataka-heavy-rain-throughout-the-night-in-many-parts-of-the-state-water-enters-houses/ https://kannadanewsnow.com/kannada/covid-19-deaths-hospitalisation-witness-globally-in-past-5-weeks-who-cites-alarm/
ಪಾಟ್ನಾ: ಬಿಹಾರ ಪೊಲೀಸರು ಪಾಟ್ನಾದಲ್ಲಿ ಭಯೋತ್ಪಾದಕ ಘಟಕವನ್ನು ಭೇದಿಸಿದ ಎರಡು ವಾರಗಳ ನಂತರ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದೆ. ಮೂವರು ಶಂಕಿತ ಭಯೋತ್ಪಾದಕರಾದ ನೂರುದ್ದೀನ್, ಸನಾವುಲ್ಲಾ ಮತ್ತು ಮುಸ್ತಕೀಮ್ ಅವರ ಮನೆಗಳ ಮೇಲೆ ದಾಳಿ ನಡೆಸಿದೆ. ಮೂವರು ಆರೋಪಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ನ ಸಕ್ರಿಯ ಸದಸ್ಯರಾಗಿದ್ದು, ಈ ಮೂವರಲ್ಲಿ ನೂರುದ್ದೀನ್ ಇತ್ತೀಚೆಗೆ ಲಕ್ನೋದಲ್ಲಿ ಬಂಧನಕ್ಕೊಳಗಾಗಿ ಪಾಟ್ನಾದ ಜೈಲಿನಲ್ಲಿದ್ದಾನೆ. ಆದರೆ ಸನಾವುಲ್ಲಾ ಮತ್ತು ಮುಸ್ತಕೀಂ ಸದ್ಯ ತಲೆಮರೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಮುಂಜಾನೆಯಿಂದಲೇ ಎನ್‌ಐಎಯ ಮೂರು ತಂಡಗಳು ನೂರುದ್ದೀನ್, ಸನಾವುಲ್ಲಾ ಮತ್ತು ಮುಸ್ತಕೀಮ್ ಗ್ರಾಮಗಳಲ್ಲಿ ಹಾಜರಿದ್ದು, ಶೋಧ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ. 2047 ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಮಾಡ್ಯೂಲ್ ಯೋಜಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯನ್ನು ಗುರಿಯಾಗಿಸುವ ಸಂಚು ಕೂಡ ಇತ್ತು ಎಂದು ವರದಿಗಳು ತಿಳಿಸಿವೆ. ಪ್ರಸ್ತುತ ಪ್ರಕರಣವನ್ನು ಎನ್‌ಐಎ ತನಿಖೆ ನಡೆಸುತ್ತಿದೆ. ಪಾಟ್ನಾ ಟೆರರ್ ಮಾಡ್ಯೂಲ್ ಪ್ರಕರಣವನ್ನು ಪಾಟ್ನಾ ಪೊಲೀಸರಿಂದ ರಾಷ್ಟ್ರೀಯ ತನಿಖಾ…
ಬೆಂಗಳೂರು : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ರಾಜೀನಾಮೆ ನೀಡುತ್ತಿರುವ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಪ್ರವೀಣ್ ಹತ್ಯೆಯಿಂದ ನೋವಾಗಿರುವುದಕ್ಕೆ ಬಿಜೆಪಿ ಕಾರ್ಯಕರ್ತರು ರಾಜೀನಾಮೆ ನೀಡುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. https://kannadanewsnow.com/kannada/praveen-nettaru-murder-7-sdpi-activists-taken-into-police-custody/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಸುಮಾರು ಮೂರ್ನಾಲ್ಕು ಬಾರಿ ಮಾಹಿತಿಯನ್ನು ನೀಡಿದ್ದೇನೆ.ಕಾರ್ಯಕರ್ತರಿಗೆ ನೋವಾಗಿರುವುದಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಈಗಾಗಲೇ ಹತ್ಯೆ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ. ಕಾರ್ಯಕರ್ತರಿಗೆ ನಾವು ಸಮಾಧಾನ ಮಾಡುತ್ತೇವೆ. ರಾಜೀನಾಮೆ ನೀಡುತ್ತಿರುವ ಕಾರ್ಯಕರ್ತರನ್ನು ಮನವೊಲಿಸುತ್ತೇವೆ ಎಂದು ಹೇಳಿದ್ದಾರೆ. https://kannadanewsnow.com/kannada/good-news-for-the-farming-community-agriculture-departments-subsidy-under-this-scheme/
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಕ್ಯಾನ್ಸರ್ ಒಂದು ಅತ್ಯಂತ ಗಂಭೀರವಾದ ಕಾಯಿಲೆಯಾಗಿದ್ದು, ಇದು ಪ್ರತಿ ವರ್ಷ ಲಕ್ಷಾಂತರ ಜನರ ಸಾವಿಗೆ ಕಾರಣವಾಗುತ್ತಿದೆ. ಕ್ಯಾನ್ಸರ್ ನಲ್ಲಿ ಅನೇಕ ವಿಧಗಳಿವೆ, ಅವುಗಳನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಇವುಗಳಲ್ಲಿ ರಕ್ತದ ಕ್ಯಾನ್ಸರ್ ಕೂಡ ಒಂದು, ಇದನ್ನು ಲ್ಯುಕೇಮಿಯಾ ಎಂದೂ ಕರೆಯಲಾಗುತ್ತದೆ. https://kannadanewsnow.com/kannada/check-out-todays-horoscope-predictions-3/?utm_medium=push ರಕ್ತದ ಕ್ಯಾನ್ಸರ್ ನಲ್ಲಿ, ದೇಹವು ಬಿಳಿ ರಕ್ತ ಕಣಗಳನ್ನು ತಯಾರಿಸಲು ಅಸಮರ್ಥವಾಗಿರುತ್ತದೆ, ಇದು ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಈ ರೋಗದ ಚಿಕಿತ್ಸೆ ಸಾಧ್ಯವಿದೆ ಆದರೆ ಅದನ್ನು ಸಕಾಲದಲ್ಲಿ ಗುರುತಿಸಬೇಕು. ಇಂದು ಈ ಸಂಚಿಕೆಯಲ್ಲಿ ನಾವು ನಿಮಗೆ ರಕ್ತದ ಕ್ಯಾನ್ಸರ್ ಕಡೆಗೆ ಸೂಚಿಸುವ ರೋಗಲಕ್ಷಣಗಳ ಬಗ್ಗೆ ಹೇಳಲಿದ್ದೇವೆ. ಇವುಗಳನ್ನು ತಿಳಿದುಕೊಂಡು, ಸಮಯಕ್ಕೆ ಸರಿಯಾಗಿ ಜಾಗರೂಕರಾಗಿರುವಾಗ ವೈದ್ಯರಿಂದ ಸರಿಯಾದ ಸಮಾಲೋಚನೆಯನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ರಕ್ತದ ಕ್ಯಾನ್ಸರ್ ನ ಈ ರೋಗಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ. ಆಗಾಗ್ಗೆ ಸೋಂಕುಗಳು ರಕ್ತದ ಕ್ಯಾನ್ಸರ್ ನಿಂದಾಗಿ, ಒಬ್ಬ ವ್ಯಕ್ತಿಯು ಪದೇ ಪದೇ ಸೋಂಕಿಗೆ ಬಲಿಯಾಗುತ್ತಾನೆ. ವಾಸ್ತವವಾಗಿ, ರಕ್ತದ ಕ್ಯಾನ್ಸರ್ ನಲ್ಲಿ,…
ಮೂಲ ಕೊಳ್ಳೇಗಾಲದ ವಂಶಪಾರಂಪರಿಕ ಜ್ಯೋತಿಷ್ಯರು, ಶ್ರೀ ಚೌಡೇಶ್ವರಿ ದೇವಿ,ರಕ್ತೇಶ್ವರಿ, ಸ್ಮಶಾನಕಾಳಿ, ಅಘೋರಿ ಸ್ಮಶಾನತಾರ ದೇವತೆ, ಕಾಡುದೇವರ ಆರಾಧಕರು, ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಕೊಳ್ಳೇಗಾಲದ ಮಹಾಕಾಳಿ ಮಂತ್ರ ಶಕ್ತಿಯಿಂದ ಕೇವಲ 4 ದಿನದಲ್ಲಿ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ. Call/WhatsApp Ph:- 9480512091 ಪ್ರಧಾನ ಗುರುಗಳು ಪಂಡಿತ್: ಶ್ರೀ ವಿನಯ್ ಕುಮಾರ್ ಶಾಸ್ತ್ರಿ ಗಳು ರಾಜ್ಯ ಹಾಗೂ ಹೊರರಾಜ್ಯದ ಜನರ ಸಮಸ್ಯೆಗಳಿಗೆ ಪರಿಹಾರ ನೀಡಿರುವ ಏಕೈಕ ಮಾಂತ್ರಿಕರು ನಿಮ್ಮ ಸಮಸ್ಯೆಗಳನ್ನು ಅಷ್ಟಮಂಗಲ ಪ್ರಶ್ನೆ, ಆರೂಢ ಪ್ರಶ್ನೆ, ತಾಂಬೂಲ ಪ್ರಶ್ನೆ, ದೈವ ಪ್ರಶ್ನೆ, ಕವಡೆ ಪ್ರಶ್ನೆ ಮುಖಲಕ್ಷಣ, ಜನ್ಮ ದಿನಾಂಕ, ಹಸ್ತರೇಖೆ, ಪಂಚಪಕ್ಷಿ, ರಮಲ ಶಾಸ್ತ್ರ ಮೂಲಕ ಪರಿಶೋದಿಸಿ ನೋಡುತ್ತಾರೆ. ನಿಮ್ಮ ಜೀವನದ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವಿವಾಹ ವಿಳಂಬ , ಮಾಟ ಮಂತ್ರ, ಶತ್ರುಕಾಟ , ಸ್ತ್ರೀ-ವಶೀಕರಣ, ಪುರುಷ-ವಶೀಕರಣ,ಅತ್ತೆ-ಸೊಸೆ ಕಿರಿಕಿರಿ, ಸಂತಾನ ಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಸಾಲ ಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ,…
ಮಂಗಳೂರು: ಬೆಳ್ಳಾರೆ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರುರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಎಸ್ ಡಿಪಿಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. https://kannadanewsnow.com/kannada/another-ambulance-accident-in-tumakuru-a-sick-ambulance-collides-with-a-bridge-driver-hit/ ಶಂಕೆಯ ಹಿನ್ನೆಲೆಯಲ್ಲಿ ತಡರಾತ್ರಿ ಎಸ್.ಡಿ.ಪಿ.ಐ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ತಡರಾತ್ರಿ ಕಾರ್ಯಕರ್ತರ ಮನೆಗೆ ನುಗ್ಗಿ ಪೊಲೀಸರ ಕಾರ್ಯಾಚರಣೆ ನಡೆಸಿ, ವಶಕ್ಕೆ ಪಡೆದಿದ್ದಾರೆ. ಪೊಲೀಸರು ಅಮಾಯಕರನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಅಂತಾ ಆರೋಪಿಸಿದ್ದಾರೆ.
ಚಿಕ್ಕಬಳ್ಳಾಪುರ : 2022-23ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿರುವಂತೆ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ಇಂದನ ವೆಚ್ಚದ ಭಾರವನ್ನು ಕಡಿಮೆ ಮಾಡಲು ಪ್ರತಿ ಎಕರೆಗೆ ರೂ.250/- ಗಳಂತೆ ಗರಿಷ್ಠ ಐದು ಎಕರೆಗೆ ಡೀಸೆಲ್ ಸಹಾಯಧನವನ್ನು ನೀಡಲು “ರೈತ ಶಕ್ತಿ” ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. https://kannadanewsnow.com/kannada/another-ambulance-accident-in-tumakuru-a-sick-ambulance-collides-with-a-bridge-driver-hit/ ರೈತ ಶಕ್ತಿ ಯೋಜನೆಯನ್ನು ಕೃಷಿ ಇಲಾಖೆಯ ಇತರೆ ಯೋಜನೆಗಳಂತೆ FRUITS (Farmer Registration and Unified Beneficiary Information System) ಗುರುತಿನ ಸಂಖ್ಯೆ ಬಳಸಿ ಕೆ-ಕಿಸಾನ್ ತಂತ್ರಾಂಶ ಬಳಸಿ ನೇರ ನಗದು ವರ್ಗಾವಣೆ(DBT) ಮೂಲಕ ಅನುಷ್ಠಾನ ಮಾಡಲಾಗುವುದು. FRUITS ಪೋರ್ಟಲ್‌ನಲ್ಲಿ ನೋಂದಣಿಗೊಂಡ ತಾಲ್ಲೂಕಿನ ಎಲ್ಲಾ ರೈತರು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ಈ ಯೋಜನೆಯ ಅರ್ಹತಾಧಾರಿತ ಯೋಜನೆಯಾಗಿರುವುದರಿಂದ ಯಾವುದೇ ರೈತರು ವೈಯಕ್ತಿಕ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ ದಾಖಲೆಗಳ ಪರಿಶೀಲನೆಯನ್ನು ಸರ್ಕಾರದ FRUITS ಪೋರ್ಟಲ್‌ನಲ್ಲಿ ಲಭ್ಯವಿರುವ ದತ್ತಾಂಶಗಳ ಆಧಾರದ ಮೇಲೆ ಮಾಡುವುದು. https://kannadanewsnow.com/kannada/rain-in-karnataka-heavy-rain-throughout-the-night-in-many-parts-of-the-state-water-enters-houses/ FRUITS ಪೋರ್ಟಲ್‌ನಲ್ಲಿ ನಮೂದಿಸಿದ ಹಿಡುವಳಿಯ ವಿಸ್ತೀರ್ಣದ…