Subscribe to Updates
Get the latest creative news from FooBar about art, design and business.
Author: KNN IT TEAM
ಜಿನೀವಾ: ಜಾಗತಿಕವಾಗಿ ಮಂಕಿಪಾಕ್ಸ್ (Monkeypox) ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಬಗ್ಗೆ ಹೆಚ್ಚು ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ (WHO) ಬುಧವಾರ ಸಭೆ ನಡೆಸಿತ್ತು. ಈ ವೇಳೆ ಪುರುಷ ಪುರುಷರೊಂದಿಗೆ ಸಂಭೋಗಿಸುವವರಲ್ಲಿ ಹೆಚ್ಚಾಗಿ ಈ ಸೋಂಕು ಕಂಡುಬರುತ್ತಿದೆ ಎಂದು WHO ತಿಳಿಸಿದೆ. ಕಳೆದ ಶನಿವಾರ ಮಂಕಿಪಾಕ್ಸ್ ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸೋಂಕು ತಗುಲದಂತೆ ಎಲ್ಲಾ ಸಂಪರ್ಕಗಳಿಂದ ದೂರ ಇರುವುದೇ ಮಂಕಿಪಾಕ್ಸ್‌ನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಉತ್ತಮ ಮಾರ್ಗವಾಗಿದೆ ಎಂದಿದ್ದಾರೆ. ಪುರುಷರೊಂದಿಗೆ ಸಂಭೋಗಿಸುವ ಪುರುಷರು ತಮ್ಮ ಲೈಂಗಿಕ ಪಾಲುದಾರರ ಸಂಖ್ಯೆಯನ್ನು ಕಡಿಮೆ ಮಾಡುವುದು ಸೇರಿದಂತೆ, ಹೊಸ ಸಂಗಾತಿಯೊಂದಿಗೆ ಲೈಂಗಿಕತೆ ಬೆಳೆಸುವುದನ್ನು ಕಡಿಮೆ ಮಾಡಬೇಕಿದೆ. ನೀವು ಹೊಸ ಯಾವುದೇ ಸಂಗಾತಿಯೊಂದಿಗೆ ಲೈಂಗಿಕ ಸಂಪರ್ಕ ಮಾಡಿದರೆ, ಅವರ ಸಂಪರ್ಕ ವಿವರಗಳನ್ನು ವಿನಿಮಯ ಮಾಡಿಕೊಳ್ಳುವುದು ಉತ್ತಮ. ಇದ್ರಿಂದ, ಅಗತ್ಯವಿದ್ದರೆ ಮುಂದಿನ ಪ್ರಕ್ರಿಯೆಗಳಿಗೆ ಅನುಕೂಲವಾಗಲಿದೆ ಎಂದಿದ್ದಾರೆ. ಮಂಕಿಪಾಕ್ಸ್ ಕಾಯಿಲೆಯು ಪಶ್ಚಿಮ ಮತ್ತು ಮಧ್ಯ ಆಫ್ರಿಕಾದ ದೇಶಗಳಲ್ಲಿ…
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಮಂಕಿಪಾಕ್ಸ್ ಅಪಾಯದಲ್ಲಿರುವ ಪುರುಷರಿಗೆ ಲೈಂಗಿಕ ಸಂಪರ್ಕವನ್ನು ಮಿತಗೊಳಿಸುವಂತೆ ಸಲಹೆ ನೀಡಿದ್ದಾರೆ. https://kannadanewsnow.com/kannada/viral-video-specially-abled-zomato-agent-delivers-food-in-wheelchair-wins-hearts-online-watch/ ಮಂಕಿಪಾಕ್ಸ್ ಆಫ್ರಿಕಾದ ಭಾಗಗಳಲ್ಲಿ ಸ್ಥಳೀಯವಾಗಿದ್ದು, ಅಲ್ಲಿ ಜನರು ಸಣ್ಣ ಪ್ರಾಣಿಗಳ ಕಡಿತದಿಂದ ಸೋಂಕಿಗೆ ಒಳಗಾಗಿದ್ದಾರೆ. ಇದು ಸಾಮಾನ್ಯವಾಗಿ ಜನರಲ್ಲಿ ಸುಲಭವಾಗಿ ಹರಡುವುದಿಲ್ಲ. ಆದರೆ ಈ ವರ್ಷ ಐತಿಹಾಸಿಕವಾಗಿ ಹಲವು ದೇಶಗಳಲ್ಲಿ 15 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಯುಎಸ್ ಮತ್ತು ಯುರೋಪ್ನಲ್ಲಿ ಹೆಚ್ಚಿನ ಸೋಂಕುಗಳು ಪುರುಷರೊಂದಿಗೆ ಸಂಭೋಗಿಸುವ ಪುರುಷರಲ್ಲಿ ಸಂಭವಿಸಿವೆ ಎಂದು ಹೇಳಿದ್ದಾರೆ. ಇದು ಮುಖ್ಯವಾಗಿ ಚರ್ಮದಿಂದ ಚರ್ಮದ ಸಂಪರ್ಕದ ಮೂಲಕ ಹರಡುತ್ತದೆ. ಆದರೆ ಮಂಕಿಪಾಕ್ಸ್ ಹೊಂದಿವವರು ಉಪಯೋಗಿಸಿದ ಲಿನಿನ್‌ಗಳ ಬಳಕೆಯಿಂದ ಹರಡುತ್ತದೆ. ಇದು ಲೈಂಗಿಕವಾಗಿ ಹರಡುವ ಕಾಯಿಲೆಯಂತೆ ಜನಸಂಖ್ಯೆಯ ಮೂಲಕ ಚಲಿಸುತ್ತಿದ್ದರೂ, ಏಕಾಏಕಿ ವಿಸ್ತರಿಸಬಹುದಾದ ಇತರ ರೀತಿಯ ಹರಡುವಿಕೆಯ ಬಗ್ಗೆ ಅಧಿಕಾರಿಗಳು ಪರೀಕ್ಷಿಸುತ್ತಿದ್ದಾರೆ ಎನ್ನಲಾಗುತ್ತಿದೆ. https://kannadanewsnow.com/kannada/breaking-news-21-suspects-arrested-so-far-in-bjp-leader-praveen-nettars-murder-case/ ಮಂಕಿಪಾಖ್ಸ್ನ ರೋಗಲಕ್ಷಣಗಳು ಜ್ವರ, ದೇಹದ ನೋವು, ಶೀತ, ಸುಸ್ತು ಮತ್ತು ದೇಹದ ಭಾಗಗಳಲ್ಲಿ ಗುಳ್ಳೆಗಳಾಗುವುದನ್ನು ಒಳಗೊಂಡಿರುತ್ತದೆ. ಈ ರೋಗವು…
ಬೆಂಗಳೂರು : ರಾಜ್ಯದಲ್ಲಿ ಪಿಎಫ್ ಐ ಸಂಘಟನೆ ನಿಷೇಧ ಮಾಡುವ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಪಿಎಫ್ ಐ ಸಂಘಟನೆ ನಿಷೇಧ ಮಾಡುವಂತೆ ಕುರಿತಂತೆ ಈಗಾಗಲೇ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ. https://kannadanewsnow.com/kannada/breaking-news-21-suspects-arrested-so-far-in-bjp-leader-praveen-nettars-murder-case/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸೂಕ್ಷ್ಮ ವಿಚಾರವಾಗಿರುವುದರಿಂದ ಸೂಕ್ತವಾದ ರೀತಿಯಲ್ಲಿ ನಿಷೇಧವಾಗಬೇಕಿರುವುದರಿಂದ ಎಲ್ಲಾ ರಾಜ್ಯಗಳ ಅಭಿಪ್ರಾಯ ಪಡೆದುಕೊಂಡು ಮಾಡುತ್ತೇವೆ. ಈಗಾಗಲೇ ಪ್ರಕ್ರಿಯೆ ಪ್ರಾರಂಭವಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿರುವ ಮತ್ತು ಕೇಂದ್ರ ಸರ್ಕಾರದ ಕಾನೂನನ್ನು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಪರಿಣಿತರ ಅಭಿಪ್ರಾಯ ಪಡೆದು ಸಂಪೂರ್ಣ ಸಶಜ್ಜಿತ ತಂಡವನ್ನು ತಯಾರು ಮಾಡುತ್ತೇವೆ ಎಂದರು. https://kannadanewsnow.com/kannada/praveens-wife-nutna-demands-nia-probe-praveens-wife-nutana-demands-transfer-of-praveens-murder-case-to-nia/ ಇನ್ನು ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ನನ್ನ ಮನಸ್ಸಿಗೆ ತುಂಬಾ ನೋವು ಉಂಟಾಗಿದೆ. ಇದರಿಂದ ನನ್ನ ಮನಸ್ಸಿಗೆ ಶಾಂತಿ ಅನ್ನೋದೆ ಇರಲಿಲ್ಲ. ಅವರ ಕುಟುಂಬಸ್ಥರ ನೋವು ನೋಡಿ ನನಗೆ ಬಹಳ ಸಂಕಷ್ಟವಾಯಿತು.ಈ ಸಂದರ್ಭದಲ್ಲಿ ಯಾವುದೇ ಕಾರ್ಯಕ್ರಮ ನಡೆಸುವುದು ಸೂಕ್ತ ಅಲ್ಲ ಎಂಬ ಕಾರಣಕ್ಕಾಗಿ ಜನೋತ್ಸವ…
ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಉಪ್ಪು ನಮ್ಮ ಆಹಾರದ ರುಚಿಯನ್ನು ಹೆಚ್ಚಿಸಲು ಕೆಲಸ ಮಾಡುವ ಅಂತಹ ಒಂದು ಅಂಶವಾಗಿದೆ. ಉಪ್ಪು ದೇಹಕ್ಕೆ ಅತ್ಯಗತ್ಯ ಆದರೆ ಅದರ ಪ್ರಮಾಣವನ್ನು ಮಿತಿಗೊಳಿಸಬೇಕು. ಅನೇಕ ಜನರು ತಮ್ಮ ಆಹಾರದಲ್ಲಿ ಹೆಚ್ಚು ಉಪ್ಪನ್ನು ತಿನ್ನುವ ಅಭ್ಯಾಸವನ್ನು ಹೊಂದಿದ್ದಾರೆ. ಆದರೆ ಉಪ್ಪಿನ ಅತಿಯಾದ ಸೇವನೆಯು ನಿಮ್ಮನ್ನು ಅನಾರೋಗ್ಯಕ್ಕೀಡುಮಾಡುವುದು ಮಾತ್ರವಲ್ಲದೆ, ಆಂತರಿಕವಾಗಿ ನಿಮ್ಮನ್ನು ದುರ್ಬಲಗೊಳಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? https://kannadanewsnow.com/kannada/breaking-news-21-suspects-arrested-so-far-in-bjp-leader-praveen-nettars-murder-case/ ಹೆಚ್ಚು ಉಪ್ಪನ್ನು ತಿನ್ನುವುದರಿಂದ ಯಾವ ಸಮಸ್ಯೆಗಳು ಉಂಟಾಗಬಹುದು ಎಂದು ತಿಳಿಯೋಣ – 1. ಹೆಚ್ಚು ಉಪ್ಪನ್ನು ಸೇವಿಸುವುದು ಸ್ನಾಯು ನೋವಿಗೆ ಕಾರಣವಾಗುತ್ತದೆ. ಹೆಚ್ಚು ಉಪ್ಪನ್ನು ಸೇವಿಸುವುದರಿಂದ ಸ್ನಾಯುಗಳ ಸಂಕೋಚನಕ್ಕೆ ಕಾರಣವಾಗುತ್ತದೆ, ಇದು ಅತಿಯಾದ ಕೆಲಸದ ಒತ್ತಡದಿಂದಾಗಿ ಅವುಗಳಲ್ಲಿ ನೋವನ್ನು ಉಂಟುಮಾಡುತ್ತದೆ. 2. ಹೆಚ್ಚು ಉಪ್ಪನ್ನು ತಿನ್ನುವುದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ಹೆಚ್ಚು ಉಪ್ಪನ್ನು ಸೇವಿಸುವುದು ಮೂಳೆಗಳಲ್ಲಿ ಕ್ಯಾಲ್ಸಿಯಂನ ಅವನತಿಗೆ ಕಾರಣವಾಗುತ್ತದೆ. ನೀವು ಸಾಮಾನ್ಯ ಭಾಷೆಯಲ್ಲಿ ಅರ್ಥಮಾಡಿಕೊಂಡರೆ, ಉಪ್ಪು ತಿನ್ನುವುದು ಮೂಳೆಗಳ ತಪ್ಪು. https://kannadanewsnow.com/kannada/breaking-news-21-suspects-arrested-so-far-in-bjp-leader-praveen-nettars-murder-case/ 3. ಅತಿಯಾದ ಉಪ್ಪಿನ ಸೇವನೆಯಿಂದ ದೇಹದ…
ಮಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಈವರೆಗೆ ಒಟ್ಟು 21 ಮಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. https://kannadanewsnow.com/kannada/bigg-news-cm-bommai-reveals-why-janotsavam-programme-was-cancelled/ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಕುರಿತು ಮಾಹಿತಿ ನೀಡಿರುವ ಅವರು, ಪೊಲೀಸ್ ಇಲಾಖೆ ಈವರೆಗೆ ಒಟ್ಟು 21 ಮಂದಿಯನ್ನು ವಶಕ್ಕೆ ಪಡೆದು ತೀವ್ರಿ ವಿಚಾರಣೆ ನಡೆಸುತ್ತಿದ್ದಾರೆ. ವಶಕ್ಕೆ ಪಡೆದವರ ಪೈಕಿ ಕೋಮು ಅಹಿತಕರ ಘಟನೆಗಳು ನಡೆದಾಗ ಸಾಮಾನ್ಯವಾಗಿ ಹೆಸರು ಕೇಳಿಬರುವ ಎಸ್ ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳಿಗೆ ಸೇರಿದವರು ಕೂಡ ಒಳಗೊಂಡಿದ್ದಾರೆ ಎಂದು ಹೇಳಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ತುಂಬಾ ಭೀಕರ ಹತ್ಯೆಯಾಗಿದ್ದು ಸೂಕ್ಷ್ಮ ವಿಚಾರವೂ ಆಗಿದೆ. ಈ ಪ್ರಕರಣದಲ್ಲಿ ಭಾಗಿಯಾದವರನ್ನ ಯಾರನ್ನ ಬಿಡುವುದಿಲ್ಲ ಎಂದು ಹೇಳಿದ್ದಾರೆ. https://kannadanewsnow.com/kannada/viral-video-specially-abled-zomato-agent-delivers-food-in-wheelchair-wins-hearts-online-watch/
ಹರ್ದೋಯಿ: ಉತ್ತರ ಪ್ರದೇಶದ ಹರ್ದೋಯಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯೊಬ್ಬಳು ವಿದ್ಯಾರ್ಥಿಗಳನ್ನು ಮಸಾಜ್ ಮಾಡುವಂತೆ ಒತ್ತಾಯಿಸುವ ವೀಡಿಯೊ ವೈರಲ್ ಆಗಿದೆ. https://kannadanewsnow.com/kannada/partha-chatterjee-should-be-expelled-removed-from-all-posts-says-tmcs-kunal-ghosh/ ವೀಡಿಯೊದಲ್ಲಿ, ವಿದಾರ್ಥಿಯೊಬ್ಬ ಶಿಕ್ಷಕಿಯ ಪಕ್ಕದಲ್ಲಿ ನಿಂತಿರುವುದನ್ನು ಕಾಣಬಹುದು, ಅವರನ್ನು ಊರ್ಮಿಳಾ ಸಿಂಗ್ ಎಂದು ಗುರುತಿಸಲಾಗಿದೆ. ಬೋಧನೆ ಮಾಡುವ ಬದಲು, ಅವಳು ತರಗತಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಳು. ವೀಡಿಯೊ ವೈರಲ್ ಆದ ನಂತರ, ಶಿಕ್ಷಕಿಯನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ಶಿಕ್ಷಕನನ್ನು ವಿಚಾರಿಸಲು ಬಿಎಸ್ಎ ತನಿಖೆಯನ್ನು ಪ್ರಾರಂಭಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. https://kannadanewsnow.com/kannada/partha-chatterjee-should-be-expelled-removed-from-all-posts-says-tmcs-kunal-ghosh/ ಈ ವಿಡಿಯೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ವಿದ್ಯಾರ್ಥಿಗಳಿಂದ ಮಸಾಜ್ ಮಾಡುತ್ತಿದ್ದ ಶಿಕ್ಷಕರು, ಹರ್ದೋಯ್ ಯುಪಿ ಸರ್ಕಾರಿ ಶಾಲೆಯ ವೈರಲ್ ವೀಡಿಯೊ” ಎಂದು ಬರೆದಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ: https://twitter.com/GradingNews/status/1552286155755835394?ref_src=twsrc%5Etfw%7Ctwcamp%5Etweetembed%7Ctwterm%5E1552286155755835394%7Ctwgr%5E%7Ctwcon%5Es1_c10&ref_url=https%3A%2F%2Fwww.india.com%2Fviral%2Fviral-video-teacher-caught-getting-massage-from-student-in-ups-hardoi-suspended-watch-5539198%2F ವೀಡಿಯೊ ವೈರಲ್ ಆಗಿದೆ, ಮತ್ತು ವಿದ್ಯಾರ್ಥಿಗಳು ಇಂತಹ ಕೆಲಸಗಳನ್ನು ಮಾಡುವಂತೆ ಮಾಡಿದ್ದಕ್ಕಾಗಿ ನೆಟ್ಟಿಗರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ದಯವಿಟ್ಟು ವಿದ್ಯಾರ್ಥಿಗಳನ್ನು ಈ ರೀತಿ ಮಾಡಬೇಡಿ” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ, “ಭಾರತದ ಎಲ್ಲಾ ಶಿಕ್ಷಕರು ದಯವಿಟ್ಟು ವಿದ್ಯಾರ್ಥಿಗಳನ್ನುಈ…
ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರುರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಬಿಜೆಪಿ ಜನೋತ್ಸವ ಕಾರ್ಯಕ್ರಮ ರದ್ದು ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. https://kannadanewsnow.com/kannada/viral-video-specially-abled-zomato-agent-delivers-food-in-wheelchair-wins-hearts-online-watch/ ನಗರದಲ್ಲಿ ಮಧ್ಯರಾತ್ರಿ ತುರ್ತು ಸಭೆಯಲ್ಲಿ ಮಾತಾಡಿ ಅವರು, ಇದು ಅತ್ಯಂತ ಅಮಾಯಕ ಯುವಕನ ಕೊಲೆ ಆಗಿದೆ, ಈ ಘಟನೆ ನೋಡಿ ಮನಸ್ಸಿಗೆ ತುಂಬಾ ನೋವು ಉಂಟಾಗಿದೆ. ಇದರಿಂದ ನನ್ನ ಮನಸ್ಸಿಗೆ ಶಾಂತಿ ಅನ್ನೋದೆ ಇರಲಿಲ್ಲ. ಅವರ ಕುಟುಂಬಸ್ಥರ ನೋವು ನೋಡಿ ನನಗೆ ಬಹಳ ಸಂಕಷ್ಟವಾಯಿತು.ಈ ಸಂದರ್ಭದಲ್ಲಿ ಯಾವುದೇ ಕಾರ್ಯಕ್ರಮ ನಡೆಸುವುದು ಸೂಕ್ತ ಅಲ್ಲ ಎಂಬ ಕಾರಣಕ್ಕಾಗಿ ಜನೋತ್ಸವ ರದ್ದು ಗೊಳಿಸಲಾಗಿದೆ. https://kannadanewsnow.com/kannada/cwg-2022-opening-ceremony-today/ ಮಂಗಳವಾರ ರಾತ್ರಿ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಅವರ ತಾಯಿ ಮತ್ತು ಪತ್ನಿ ದುಃಖಸಾಗರದಲ್ಲಿ ಮುಳುಗಿರುವಾಗ ಮತ್ತು ಶಿವಮೊಗ್ಗದ ಹರ್ಷನ ತಾಯಿಯ ಇನ್ನೂ ವೇದನೆ ಅನುಭವಿಸುತ್ತಿರುವಾಗ ಇಂಥ ಕಾರ್ಯಕ್ರಮ ನಡೆಸುವುದು ಸರಿಯಲ್ಲ ಎಂದು ಹೇಳಿದರು.
Zomato ದಲ್ಲಿ ಕೆಲಸ ಮಾಡುವ ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಯೊಬ್ಬರು ಗಾಲಿಕುರ್ಚಿಯಲ್ಲಿ ಆಹಾರವನ್ನು ತಲುಪಿಸಲು ಹೋಗುತ್ತಿರುವ ವೀಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಗ್ರೂಮಿಂಗ್ ಬುಲ್ಸ್ ಎಂಬ ಪೇಜ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ಇದರಲ್ಲಿ”ಸ್ಫೂರ್ತಿಯ ಅತ್ಯುತ್ತಮ ಉದಾಹರಣೆ” ಎಂದು ಶೀರ್ಷಿಕೆ ಬರೆಯಲಾಗಿದೆ. View this post on Instagram A post shared by Grooming bulls (@groming_bulls_) ಡೆಲಿವರಿ ಏಜೆಂಟ್ಅನ್ನು ಚೆನ್ನೈ ಮೂಲದ 7 ವರ್ಷದಗಣೇಶ್ ಮುರುಗನ್ ಎಂದು ಗುರುತಿಸಲಾಗಿದೆ. ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಕಳೆದ ತಿಂಗಳು ಗಣೇಶ್ ಮುರುಗನ್ ಅವರ ಕಥೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಗಣೇಶ್ ಭಾರತದ ಮೊದಲ ಗಾಲಿಕುರ್ಚಿ ಆಹಾರ ವಿತರಣಾ ಪಾಲುದಾರ. ಇವರು ಐಐಟಿ ಮದ್ರಾಸ್‌ನ ಸ್ಟಾರ್ಟ್‌ಅಪ್‌ನಿಂದ ವಿನ್ಯಾಸಗೊಳಿಸಲಾದ ಅವರ ಟು-ಇನ್-ಒನ್ ವೀಲ್‌ಚೇರ್ ಅನ್ನು ಆಹಾರ ವಿತರಣೆಗಾಗಿ ಹೋಗಲು ಬಳಸುತ್ತಾರೆ. ಇದರಲ್ಲಿ ಬಹಳ ಸುಲಭವಾಗಿ ಸಾಗುವಂತೆ ಮೋಟಾರೀಕರಿಸಲಾಗಿದೆ. ಈ ವೀಲ್‌ಚೇರ್‌ನಲ್ಲಿ ಒಂದು ಬಟನ್‌ನನ್ನು ಒತ್ತಿದರೆ ವಾಹನವಾಗಿ ಪರಿವರ್ತಿಸಬಹುದು ಮತ್ತು ಹಿಂದಿನ ಭಾಗವು ಸರಳವಾದ ಗಾಲಿಕುರ್ಚಿಯಾಗಿ…
ಬೆಂಗಳೂರು : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (NIA) ತನಿಖೆಗೆ ನೀಡಬೇಕು ಎಂದು ಪ್ರವೀಣ್ ಪತ್ನಿ ನೂತನಾ ಆಗ್ರಹಿಸಿದ್ದಾರೆ. https://kannadanewsnow.com/kannada/partha-chatterjee-should-be-expelled-removed-from-all-posts-says-tmcs-kunal-ghosh/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವೀಣ್ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ನೀಡಬೇಕು. ಆಗ ಮಾತ್ರ ನನಗೆ ನ್ಯಾಯ ಸಿಗುವ ವಿಶ್ವಾಸವಿದೆ. ನನ್ನ ಪತಿ ತುಂಬಾ ಒಳ್ಳೆಯವರು. ಸಣ್ಣಪುಟ್ಟ ಕೋಪ ತಾಪಗಳಿತ್ತು. ಆದರೆ ಅವರಿಗೆ ಯಾರ ಮೇಲೂ ದ್ವೇಷವಿರಲಿಲ್ಲ. ಆದರೂ ಅವರನ್ನು ಹತ್ಯೆ ಮಾಡಲಾಗಿದೆ. ಅವರಿಗೆ ಆದ ರೀತಿ ಮತ್ಯಾರಿಗೂ ಆಗಬಾರದು. ಅದಕ್ಕೆ ಬೇಕಾದ ಶಿಕ್ಷೆಯನ್ನು ಕಾನೂನಿನ ಮೂಲಕ ಆಗಬೇಕು ಎಂದು ಹೇಳಿದ್ದಾರೆ. https://kannadanewsnow.com/kannada/good-news-for-consumers-gold-prices-fall-on-bhima-amavasya-day-check-here/
ಬರ್ಮಿಂಗ್‌ಹ್ಯಾಮ್ : ಪ್ರಪಂಚದ ಅತಿದೊಡ್ಡ ಕ್ರೀಡಾಕೂಟವಾದ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಇಂದು ಅದ್ಧೂರಿ ಚಾಲನೆ ಸಿಗಲಿದೆ. ಇಂದಿನಿಂದ ಆಗಸ್ಟ್ 8ರವರಗೆ ಈ ಬೃಹತ್ ಕ್ರೀಡಾಕೂಟ ನಡೆಯಲಿದ್ದು, ಇಂದು ವರ್ಣರಂಜಿತ ಚಾಲನೆ ಸಿಗಲಿದೆ. https://kannadanewsnow.com/kannada/metro-commuters-note-token-to-use-station-lift-from-now-on/ ಇಂಗ್ಲೆಂಡಿನ ಹೃದಯ ಎಂದೇ ಕರೆಯಲ್ಪಡುವ ಸುಂದರ ನಗರ ಬರ್ಮಿಂಗ್‌ಹ್ಯಾಮ್, ಈ ಬಾರಿಯ ಕ್ರೀಡಾಕೂಟವನ್ನು ಆಯೋಜಿಸುತ್ತಿದೆ. ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ವಿವಿಧ ಕ್ರೀಡೆಗಳು ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದೆ. ಕ್ರೀಡಾಪಟುಗಳು ಪ್ರದರ್ಶನ ನೀಡಲು ತುದಿಗಾಲಿನಲ್ಲಿ ನಿಂತಿದ್ದು, ಪ್ರಪಂಚದ ಎಲ್ಲಾ ಕ್ರೀಡಾ ಪ್ರೇಮಿಗಳನ್ನು ಸ್ವಾಗತಿಸಲು ಬರ್ಮಿಂಗ್‌ಹ್ಯಾಮ್ ಕಾಯುತ್ತಿದೆ.