Author: KNN IT TEAM

ಬೀದರ್: ಬಿಜೆಪಿ ನಾಯಕರು ಹಿಂದುತ್ವದ ಹೆಸರಿನಲ್ಲಿ ಯುವಕರನ್ನು ಗುಲಾಮರನ್ನಾಗಿ ಮಾಡುತ್ತಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಕೊಲೆ ನಡೆಯಲಿಲ್ಲ. ಬಿಜೆಪಿ ಅವಧಿಯಲ್ಲಿ ಯಾಕೆ ಕೊಲೆಗಳಾಗುತ್ತಿವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. https://kannadanewsnow.com/kannada/bigg-news-you-have-destroyed-karnataka-which-was-like-a-garden-of-peace-for-all-says-former-cm-hdk-against-cm-bommai/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕರಾವಳಿ ಭಾಗದಲ್ಲಿ ಕೊಲೆಯಾದವರ ಮೂವರ ನಿವಾಸಕ್ಕೆ ಭೇಟಿ ನೀಡುತ್ತೇನೆ. ಹಿಂದುತ್ವದ ಹೆಸರಿನಲ್ಲಿ ಯುವಕರನ್ನು ಬಿಜೆಪಿ ನಾಯಕರು ಗುಲಾಮರನ್ನಾಗಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಎನ್​ಐಎಗೆ ಹಸ್ತಾಂತರ ಮಾಡಲಾಗಿದೆ. ಆದರೆ ಅವರಿಗೆ ಕೊಟ್ಟಿರುವ ಈ ಹಿಂದಿನ ಪ್ರಕರಣಗಳು ಐದಾರು ವರ್ಷ ಕಳೆದರೂ ಏನಾಗಿದೆ ಎಂದು ಗೊತ್ತಾಗಿಲ್ಲ. ಹೀಗಿದ್ದಾಗ ಎನ್​ಐಎ ಅಧಿಕಾರಿಗಳಿಗೆ ಪ್ರವೀಣ್ ಕೊಲೆ ಪ್ರಕರಣವನ್ನು ಕೊಟ್ಟರೆ ಅದರ ತನಿಖೆ ಮುಗಿಸಲು ಎಷ್ಟು ವರ್ಷಗಳು ಬೇಕು ಎಂದು ಪ್ರಶ್ನಿಸಿದ್ದಾರೆ. https://kannadanewsnow.com/kannada/kcet-results-2022-yelahanka-national-colleges-unique-first-rank-heres-the-list-of-rank-recipients/

Read More

ಬೆಂಗಳೂರು : ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ. ಇದನ್ನು ಸರ್ವಶನಾಶ ಮಾಡಿದ್ದೀರಿ. ಹಿಂಸೆಯ ಎಂಬ ವಿಷಸರ್ಪದ ಹೆಡೆಯಡಿ ಕಟ್ಟಿರುವ ನಿಮ್ಮ ಸಾಮ್ರಾಜ್ಯ ಹಿಂಸೆಗೇ ಬಲಿ ಆಗುವುದು ಖಚಿತ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. https://kannadanewsnow.com/kannada/kcet-results-2022-yelahanka-national-colleges-unique-first-rank-heres-the-list-of-rank-recipients/ ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ,  ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ. ಇದನ್ನು ಸರ್ವಶನಾಶ ಮಾಡಿದ್ದೀರಿ. ಹಿಂಸೆಯ ಎಂಬ ವಿಷಸರ್ಪದ ಹೆಡೆಯಡಿ ಕಟ್ಟಿರುವ ನಿಮ್ಮ ಸಾಮ್ರಾಜ್ಯ ಹಿಂಸೆಗೇ ಬಲಿ ಆಗುವುದು ಖಚಿತ. ಕಾರ್ಯಕರ್ತರ ನೆತ್ತರಿನ ಮೇಲಿನ ಅಧಿಕಾರದ ಸುಖಕ್ಕೆ ಅದೇ ಕಾರ್ಯಕರ್ತರ ಆಕ್ರೋಶವೇ ಚರಮಗೀತೆ ಬರೆಯಲಿದೆ. ಕರಾವಳಿ ಕೆರಳಿದೆ, ಕರ್ನಾಟಕ ಕೆರಳುವುದು ಬಾಕಿ ಇದೆ ಕಿಡಿಕಾರಿದ್ದಾರೆ. https://twitter.com/hd_kumaraswamy/status/1553217989796777984 https://kannadanewsnow.com/kannada/mumbai-woman-eats-maggi-with-tomatoes-dies/ ರಾಜಧರ್ಮ ಪಾಲಿಸಿ ಎಂದು ಹಿಂದೊಮ್ಮೆ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದರು.ರಾಜಧರ್ಮ ಪಾಲಿಸುವುದಿರಲಿ, ಸ್ವಧರ್ಮವೇ ಹೇಳಿದ ʼಸರ್ವೇ ಜನೋ ಸುಖಿನೋ ಭವಂತುʼ ಎನ್ನುವ ತತ್ತ್ವವನ್ನೂ ಪಾಲಿಸುತ್ತಿಲ್ಲ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಂವಿಧಾನದ ಮೇಲೆ ಗೌರವ ಇಲ್ಲದವರು…

Read More

ಬೆಂಗಳೂರು : 2021-22ನೇ ಸಾಲಿನ ಸಿಇಟಿ (CET) ಪರೀಕ್ಷಾ ಫಲಿತಾಂಶವನ್ನು ಸಚಿವ ಅಶ್ವತ್ಥ್​ ನಾರಾಯಣ ಪ್ರಕಟಿಸಿದ್ದು, ಈ ಬಾರಿ ಸಿಇಟಿಯಲ್ಲಿ ಯುವಕರೇ ಮೇಲುಗೈ ಸಾಧಿಸಿದ್ದಾರೆ. https://kannadanewsnow.com/kannada/bigg-breaking-news-cet-result-declared-this-time-the-youth-will-have-the-upper-hand/ ಇಂಜಿನಿಯರಿಂಗ್ ಕೋರ್ಸ್​ಗೆ 1,71,656 ರ್ಯಾಂಕ್​​​, ಕೃಷಿ ಕೋರ್ಸ್​ಗೆ 1,39,968 ರ್ಯಾಂಕ್, ಪಶುಸಂಗೋಪನೆ 1,42,2820 ಯೋಗ ಮತ್ತು ನ್ಯಾಚುರೋಪತಿ 1,42,750 ರ್ಯಾಂಕ್, ಬಿ.ಫಾರ್ಮ್ ಕೋರ್ಸ್ ಮತ್ತು ಫಾರ್ಮ-ಡಿ ಕೋರ್ಸಿಗೆ 1,74,568 ರ್ಯಾಂಕ್ ಬಂದಿದೆ. Kea.kar.nic.in ಮತ್ತು karesults.nic.in ಫಲಿತಾಂಶ ಪ್ರಕಟ ಮಾಡಲಾಗಿದೆ. ಇಂಜಿನಿಯರಿಂಗ್ ಕೋರ್ಸ್ ನಲ್ಲಿ ಶೇ. 97 ರಷ್ಟು ಅಂಕ ಪಡೆದ ಯಲಹಂಕ ನ್ಯಾಷನಲ್ ಕಾಲೇಜಿನ ಅಪೂರ್ವ ಫಸ್ಟ್ ರ್ಯಾಂಕ್ ಪಡೆದಿದ್ದಾರೆ. Rank ಪಡೆದವರ  ಸಂಪೂರ್ಣ ಪಟ್ಟಿ  

Read More

ಇರಾನ್ : ಇರಾನ್​ನಲ್ಲಿ ಭಾರಿ ಮಳೆಯಾಗುತ್ತಿದ್ದು, ಭೂಕುಸಿತ ಮತ್ತು ಪ್ರವಾಹ ಸಂಭವಿಸಿದೆ. ಇದರಲ್ಲಿ 53 ಜನರು ಸಾವನ್ನಪ್ಪಿದ್ದು, ಕಾಣೆಯಾದವರಿಗಾಗಿ ರಕ್ಷಾಣ ಕಾರ್ಯಾಚರಣೆ ಮುಂದುವರೆದಿದೆ ಎನ್ನಲಾಗುತ್ತಿದೆ. ಎರಡು ದಿನಗಳ ಪ್ರವಾಹದಲ್ಲಿ 16 ಜನರು ಇನ್ನೂ ಕಾಣೆಯಾಗಿದ್ದಾರೆ. ಇರಾನ್​ನ 31 ಪ್ರಾಂತ್ಯಗಳ ಪೈಕಿ 18 ನಗರದಲ್ಲಿ ಸುಮಾರು 400 ಪಟ್ಟಣಗಳು ​​ಮತ್ತು ಹಳ್ಳಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ ಎಂದು ರೆಡ್ ಕ್ರೆಸೆಂಟ್ ಸೊಸೈಟಿಯ ತುರ್ತು ಕಾರ್ಯಾಚರಣೆಯ ಮುಖ್ಯಸ್ಥ ಮೆಹದಿ ವಲಿಪೋರ್ ತಿಳಿಸಿದ್ದಾರೆ. ರಾಜಧಾನಿ ಟೆಹ್ರಾನ್‌ನ ಈಶಾನ್ಯದಲ್ಲಿರುವ ಅಲ್ಬೋರ್ಜ್ ಪರ್ವತಗಳ ತಪ್ಪಲಿನಲ್ಲಿ ಶುಕ್ರವಾರ 10 ಜನರು ಸಾವನ್ನಪ್ಪಿದ್ದು, ಸುಮಾರು ಆರು ಜನರು ನಾಪತ್ತೆಯಾಗಿದ್ದಾರೆ. ಎಚ್ಚರಿಕೆ ಹೊರತಾಗಿಯೂ ಚಾರಣಿಗರು ಇನ್ನೂ ಫಿರೋಜ್ ಕೂಹ್ ಕಡೆಗೆ ಹೋಗುತ್ತಿದ್ದಾರೆ ಎಂದು ಟೆಹ್ರಾನ್ ಗವರ್ನರ್ ಮೊಹ್ಸೆನ್ ಮನ್ಸೌರಿ ರಾಜ್ಯ ಟಿವಿಗೆ ತಿಳಿಸಿದ್ದಾರೆ. ಟೆಹ್ರಾನ್‌ನ ವಾಯುವ್ಯದಲ್ಲಿರುವ ಇಮಾಮ್ಜಾದೆ ದಾವೂದ್ ಗ್ರಾಮದಲ್ಲಿ ಪ್ರವಾಹದಿಂದ ಉಂಟಾದ ಭೂಕುಸಿತ ಮತ್ತು ಅಲ್ಲಿನ ಧಾರ್ಮಿಕ ಮಂದಿರಕ್ಕೆ ಹಾನಿಯಾದ ನಂತರ 14 ಜನರು ಕಾಣೆಯಾಗಿದ್ದಾರೆ ಎಂದು ರಾಜ್ಯ ಮಾಧ್ಯಮಗಳು…

Read More

ಬೆಂಗಳೂರು : 2021-22ನೇ ಸಾಲಿನ ಸಿಇಟಿ (CET) ಪರೀಕ್ಷಾ ಫಲಿತಾಂಶವನ್ನು ಸಚಿವ ಅಶ್ವತ್ಥ್​ ನಾರಾಯಣ ಪ್ರಕಟಿಸಿದ್ದು, ಈ ಬಾರಿ ಸಿಇಟಿಯಲ್ಲಿ ಯುವಕರೇ ಮೇಲುಗೈ ಸಾಧಿಸಿದ್ದಾರೆ. https://kannadanewsnow.com/kannada/abvp-outrage-broke-out-in-front-of-araga-gyanendra-niwas-protesters-in-police-custody/ ಇಂಜಿನಿಯರಿಂಗ್ ಕೋರ್ಸ್​ಗೆ 1,71,656 ರ್ಯಾಂಕ್​​​, ಕೃಷಿ ಕೋರ್ಸ್​ಗೆ 1,39,968 ರ್ಯಾಂಕ್,  ಬಿ.ಫಾರ್ಮ್ ಕೋರ್ಸ್ ಮತ್ತು ಫಾರ್ಮ-ಡಿ ಕೋರ್ಸಿಗೆ 1,74,568 ರ್ಯಾಂಕ್, ಪಶುಸಂಗೋಪನೆ 1,42,2820 ಯೋಗ ಮತ್ತು ನ್ಯಾಚುರೋಪತಿ 1,42,750 ರ್ಯಾಂಕ್ ಬಂದಿದೆ. Kea.kar.nic.in ಮತ್ತು karesults.nic.in ಫಲಿತಾಂಶ ಪ್ರಕಟ ಮಾಡಲಾಗಿದೆ.

Read More

ಮುಂಬೈ: ಆಕಸ್ಮಿಕವಾಗಿ ಇಲಿ ವಿಷ ಬೆರೆಸಿದ ಆಹಾರವನ್ನು ಸೇವಿಸಿ 27 ವರ್ಷದ ಮಹಿಳೆಯೊಬ್ಬರು ಮುಂಬೈನಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮ್ಯಾಗಿ ತಯಾರಿಸುವಾಗ ಮಹಿಳೆ ಆಕಸ್ಮಿಕವಾಗಿ ಇಲಿ ವಿಷ ಬೆರೆಸಿದ ಟೊಮೆಟೊವನ್ನು ಹಾಕಿದ್ದಳು ಎನ್ನಲಾಗುತ್ತಿದೆ. ಮುಂಬೈನ ಮಲಾಡ್‌ನ ಪಾಸ್ಕಲ್ ವಾಡಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಜುಲೈ 21 ರಂದು ಮಹಿಳೆ ರೇಖಾ ನಿಶಾದ್ ಎಂಬಾಕೆ ಮನೆಯಲ್ಲಿ ಇಲಿಗಳನ್ನು ಕೊಲ್ಲಲು ಟೊಮೆಟೊ ಲೇಸ್ ಮಾಡಿದ್ದಳು.ಟಿವಿ ನೋಡುತ್ತಿದ್ದಾಗ ಆಕಸ್ಮಿಕವಾಗಿ ಟೊಮೇಟೊವನ್ನು ತನ್ನ ಆಹಾರಕ್ಕೆ ಸೇರಿಸಿಕೊಂಡಿದ್ದಾಳೆ ಎಂದು ಮಾಲ್ವಾನಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮೂಸಾ ದೇವರ್ಶಿ ಹೇಳಿದ್ದಾರೆ. ಮ್ಯಾಗಿ ತಿಂದ ಕೆಲವೇ ಗಂಟೆಗಳಲ್ಲಿ ವಾಂತಿಯಾಗತೊಡಗಿದಳು. ಆಕೆಯ ಪತಿ ಮತ್ತು ಸೋದರಮಾವ ಅವಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಬುಧವಾರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Read More

ಬೆಂಗಳೂರು :  ಮಂಗಳೂರಿನಲ್ಲಿ ಪ್ರವೀಣ್‌, ಫಾಜಿಲ್‌  ಸರಣಿ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಗೃಹ ಸಚಿವರ ನಿವಾಸ ಎದುರು ಎಸ್‌ಡಿಪಿಐ ಮತ್ತು ಪಿಎಫ್‌ ಐ ( : SDPI & PFI ) ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಎಬಿವಿಪಿ (ABVP )ಕಾರ್ಯಕರ್ತರ ಪ್ರತಿಭಟನೆ ನಡೆಯುತ್ತಿದೆ. https://kannadanewsnow.com/kannada/ed-shock-for-kgf-family-again-babus-wife-summoned-to-attend-hearing-on-monday/ ಜಯಮಹಾಲ್‌ ಬಳಿಯಿರುವ ಗೃಹ ಸಚಿವರ ಸರ್ಕಾರಿ  ನಿವಾಸದ  ಎದುರು ಬೆರಳೆನಿಕೆಯಷ್ಟು ಪೊಲೀಸರು ಮಾತ್ರವಿದ್ದು, ಪ್ರತಿಭಟನೆ ನಿಯಂತ್ರಣಕ್ಕೆ  ಪೊಲೀಸರು ಹರಸಾಹನ ಪಡುತ್ತಿದ್ದಾರೆ.  ಗೃಹ ಸಚಿವರ ನಿವಾಸದ ಗೇಟ್‌ ತಳ್ಳಿ ಬಾಗಿಲು ತೆರೆಯಲು ಒತ್ತಾಯಿಸುತ್ತಿದ್ದಾರೆ. ಈ ವೇಳೆ ABVP ಕಾರ್ಯಕರ್ತರ ವಶಕ್ಕೆ ಪಡೆಯಲಾಗಿದೆ. https://kannadanewsnow.com/kannada/ed-shock-for-kgf-family-again-babus-wife-summoned-to-attend-hearing-on-monday/ ಪ್ರತಿಭಟನಾ ಕಾರರು ಮತ್ತು ಪೊಲೀಸರ ನಡುವೆ ವಾಗ್ವಾದವೇ ನಡೆಯಿತು. ಸಿಎಂ ಹಾಗೂ ಗೃಹ ಸಚಿವರ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ನಿವಾಸದ ಎದುರಿದ್ದ ಹೂ ಕುಂಡುಗಳೆಲ್ಲ ಪುಡಿಪುಡಿಯಾಗಿದೆ.

Read More

ಬೆಂಗಳೂರು :  ಕೆಜಿಎಫ್‌ ಬಾಬು ಕುಟುಂಬಕ್ಕೆ ಇದೀಗ ಮತ್ತೊಮ್ಮೆ ಇಡಿ ಶಾಕ್‌ ನೀಡಿದ್ದು, ಕೆಜಿಎಫ್‌ ಬಾಬು ಪತ್ನಿಗೆ ಸೋಮವಾರ ಆಗಸ್ಟ್‌ 1ರಂದು ವಿಚಾರಣೆಗೆ ಹಾಜರಾಗುವಂತೆ  ಇಡಿ ಸಮನ್ಸ್‌ ನೀಡಲಾಗಿದೆ. https://kannadanewsnow.com/kannada/mortal-remains-of-pilot-of-mig-21-jet-that-crashed-in-rajasthan-to-be-brought-home-today/ ಕೆಜಿಎಫ್‌ ಬಾಬು ಕುಟುಂಬ ಸಮೇತ ದೆಹಲಿಗೆ ಬಂದಿದ್ದಾರೆ. ನಾನು ಎಂಎಲ್‌ಸಿ ಚುನಾವಣೆಗೆ ನಿಂತಿದ್ದೇ ತಪ್ಪಾಯ್ತು.ಇದನ್ನೇ ಸವಾಲಾಗಿ ತೆಗೆದುಕೊಂಡು ಚುನಾವಣೆಗೆ ಸ್ಪರ್ಧಿಸ್ತೇನೆ. ಚಿಕ್ಕಪೇಟೆಯಲ್ಲಿ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದೇನೆ. 50 ಸಾವಿರ ಕುಟುಂಬಗಳಿಗೆ 5 ಸಾವಿರ ರೂಪಾಯಿ ಕೊಡುತ್ತೇನೆ ಎಂದು ಬಾಬು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Read More

ನವದೆಹಲಿ: ಈ ವಾರದ ಆರಂಭದಲ್ಲಿ ಮಾಧ್ಯಮ ಸಂದರ್ಶನವೊಂದರಲ್ಲಿ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು “ರಾಷ್ಟ್ರಪತ್ನಿ” ಎಂದು ಕರೆದಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ನೀವು ಹೊಂದಿರುವ ಸ್ಥಾನವನ್ನು ವಿವರಿಸಲು ತಪ್ಪು ಪದವನ್ನು ಬಳಸಿದ್ದಕ್ಕಾಗಿ ವಿಷಾದ ವ್ಯಕ್ತಪಡಿಸಲು ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಇದು ನಾಲಿಗೆ ಹೊರಳಿ ಈ ರೀತಿ ಕರೆದಿದ್ದೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಇದಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಮತ್ತು ಅದನ್ನು ಸ್ವೀಕರಿಸಲು ವಿನಂತಿಸುತ್ತೇನೆ ಎಂದು ಚೌಧರಿಯವರು ರಾಷ್ಟ್ರಪತಿ ಅಧ್ಯಕ್ಷ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ತಮ್ಮ ಪಕ್ಷದ ನಾಯಕ ಹೇಳಿಕೆ ನೀಡಿದ ನಂತರ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿತ್ತು. ಲೋಕಸಭೆಯಲ್ಲಿ ಕಾಂಗ್ರೆಸ್‌ನ ನಾಯಕರಾದ ಚೌಧರಿಯವರು ಹಲವು ವಿಷಯಗಳ ಕುರಿತು ತಮ್ಮ ಪಕ್ಷದ ಪ್ರತಿಭಟನೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ “ರಾಷ್ಟ್ರಪತ್ನಿ” ಹೇಳಿಕೆ ನೀಡಿದ್ದರು. ಇದು ನಾಲಿಗೆಯ ಸ್ಲಿಪ್ ಅಲ್ಲ. ನೀವು ಕ್ಲಿಪ್ ಅನ್ನು ನೋಡಿದರೆ, ಅಧೀರ್ ರಂಜನ್ ಚೌಧರಿಯವರು…

Read More

ದಕ್ಷಿಣಕನ್ನಡ :  ಮಂಗಳೂರಿನ ಫಾಜಿಲ್‌ ಹತ್ಯೆ ಸಂಬಂಧಿಸಿ ಆರೋಪಿ ತನಿಖೆ ವಿಚಾರವಾಗಿ ಮಂಗಳೂರಿನ ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ಪ್ರತಿಕ್ರಿಯೆ ನೀಡಲಾಗಿದೆ.  https://kannadanewsnow.com/kannada/mortal-remains-of-pilot-of-mig-21-jet-that-crashed-in-rajasthan-to-be-brought-home-today/ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದೆ, ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ. ಶ್ರೀಘ್ರದಲ್ಲೇ ಕೊಲೆ ಆರೋಪಿಗಳನು ಬಂಧಿಸಲಾಗುವುದು. ಸೂಕ್ಷ್ಮ ಪರಿಸ್ಥಿತಿ ಹಿನ್ನೆಲೆ ಹೆಚ್ಚುವರಿ ಪೋಲೀಸರ ನಿಯೋಜನೆ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲಾಗಿದೆ. ಕಮೀಷನರೇಟ್‌ ವ್ಯಾಪ್ತಿಯಲ್ಲಿ 19ಚೆಕ್‌ ಪೋಸ್ಟ್‌ ಸ್ಥಾಪನೆ ಮಾಡಲಾಗಿದೆ. https://kannadanewsnow.com/kannada/mortal-remains-of-pilot-of-mig-21-jet-that-crashed-in-rajasthan-to-be-brought-home-today/ ಪ್ರತಿಚೆಕ್‌ ಪೋಸ್ಟ್‌ನಲ್ಲಿ 7ರಿಂದ 8 ಸಿಬ್ಬಂದಿ ಇರಲಿದ್ದಾರೆ. ಚೆಕ್‌ ಪೋಸ್ಟ್‌ನಲ್ಲಿ ಸಿಬ್ಬಂದಿ 24×7 ಕಾರ್ಯನಿರ್ವಹಿಸ್ತಾರೆ. ಭಯಹೋಗಲಾಡಿಸಲು ಪೊಲೀಸರಿಂದ ಪಥಸಂಚಲನ  ನಡೆಸಲಾಗುವುದು. ಮಂಗಳೂರಿನ ಪೊಲೀಸ್‌ ಎನ್‌.ಶಶಿಕುಮಾರ್‌ ಪ್ರತಿಕ್ರಿಯೆ

Read More