Subscribe to Updates
Get the latest creative news from FooBar about art, design and business.
Author: KNN IT TEAM
ಮೂಲ ಕೊಳ್ಳೇಗಾಲದ ವಂಶಪಾರಂಪರಿಕ ಜ್ಯೋತಿಷ್ಯರು, ಶ್ರೀಚೌಡೇಶ್ವರಿ ದೇವಿ, ರಕ್ತೇಶ್ವರಿ, ಸ್ಮಶಾನಕಾಳಿ, ಅಘೋರಿ ಸ್ಮಶಾನತಾರ ದೇವತೆ, ಕಾಡುದೇವರ ಆರಾಧಕರು, ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಕೊಳ್ಳೇಗಾಲದ ಮಹಾಕಾಳಿ ಮಂತ್ರ ಶಕ್ತಿಯಿಂದ ಕೇವಲ 4 ದಿನದಲ್ಲಿ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ. Call/WhatsApp Ph:- 9480512091 ಪ್ರಧಾನ ಗುರುಗಳು ಪಂಡಿತ್: ಶ್ರೀ ವಿನಯ್ ಕುಮಾರ್ ಶಾಸ್ತ್ರಿಗಳು ರಾಜ್ಯ ಹಾಗೂ ಹೊರರಾಜ್ಯದ ಜನರ ಸಮಸ್ಯೆಗಳಿಗೆ ಪರಿಹಾರ ನೀಡಿರುವ ಏಕೈಕ ಮಾಂತ್ರಿಕರು ನಿಮ್ಮ ಸಮಸ್ಯೆಗಳನ್ನು ಅಷ್ಟಮಂಗಲ ಪ್ರಶ್ನೆ, ಆರೂಢ ಪ್ರಶ್ನೆ, ತಾಂಬೂಲ ಪ್ರಶ್ನೆ, ದೈವ ಪ್ರಶ್ನೆ, ಕವಡೆ ಪ್ರಶ್ನೆ ಮುಖಲಕ್ಷಣ, ಜನ್ಮ ದಿನಾಂಕ, ಹಸ್ತರೇಖೆ, ಪಂಚಪಕ್ಷಿ, ರಮಲ ಶಾಸ್ತ್ರ ಮೂಲಕ ಪರಿಶೋದಿಸಿ ನೋಡುತ್ತಾರೆ. ನಿಮ್ಮ ಜೀವನದ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವಿವಾಹ ವಿಳಂಬ , ಮಾಟ ಮಂತ್ರ, ಶತ್ರುಕಾಟ , ಸ್ತ್ರೀ-ವಶೀಕರಣ, ಪುರುಷ-ವಶೀಕರಣ,ಅತ್ತೆ-ಸೊಸೆ ಕಿರಿಕಿರಿ, ಸಂತಾನ ಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಸಾಲ ಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ದುಷ್ಟ…
ಹಾಸನ: ತಾಲೂಕಿನ ಅಂಕಪುರ ಗ್ರಾಮದ ಬಳಿ ಇಂದು ಬೆಳಗ್ಗೆ ಕಾಲು ಜಾರಿ ರೈಲ್ವೆ ಹಳಿ ಮೇಲೆ ಬಿದ್ದ ವಿದ್ಯಾರ್ಥಿನಿ ಮೇಲೆ ರೈಲು ಹರಿದಿರುವ ಘಟನೆ ನಡೆದಿದೆ. ಇದರ ಪರಿಣಾಮ ಸ್ಥಳದಲ್ಲೇ ವಿದ್ಯಾರ್ಥಿನಿ ಧಾರುಣವಾಗಿ ಸಾವನ್ನಪ್ಪಿದ್ದಾಳೆ. https://kannadanewsnow.com/kannada/hdk-reveals-explosive-information-about-masoods-killing/ ಗುಡ್ಡೆ ತೆರಣ್ಯ ಗ್ರಾಮದ ಪ್ರೀತಿ ಮೃತಪಟ್ಟ ವಿದ್ಯಾರ್ಥಿನಿ.ಈಕೆ ಮೊಸಳೆಹೊಸಳ್ಳಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇಂದು ಬೆಳಗ್ಗೆ ಕಾಲೇಜಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ನವದೆಹಲಿ: ಭೂಮಿಯು ಅದರ ಸಾಮಾನ್ಯ ವೇಗಕ್ಕಿಂತ ಹೆಚ್ಚಾಗಿ ತಿರುಗುತ್ತಿದೆ. ಇತ್ತೀಚೆಗೆ ಜುಲೈ 29 ರಂದು, ಭೂಮಿಯು ಕಡಿಮೆ ದಿನದಲ್ಲಿ ತನ್ನ ದಾಖಲೆಯನ್ನು ಮುರಿದಿದೆ. ಅದು ತನ್ನ ಪ್ರಮಾಣಿತ 24 ಗಂಟೆಗಳ ತಿರುಗುವಿಕೆಗಿಂತ ಕಡಿಮೆ ಸಮಯದಲ್ಲಿ ಸ್ಪಿನ್ ಅನ್ನು ಪೂರ್ಣಗೊಳಿಸಿದೆ. ವಿಜ್ಞಾನಿಗಳ ಭೂಮಿಯು ಪೂರ್ಣ ಸ್ಪಿನ್ 1.59 ಮಿಲಿಸೆಕೆಂಡುಗಳು 24 ಗಂಟೆಗಳಿಗಿಂತ ಚಿಕ್ಕದಾಗಿದೆ. ಆದಾಗ್ಯೂ, ಇದು ತನ್ನ ವೇಗವನ್ನು ಹೆಚ್ಚಿಸಿದೆ ಎಂದಿದ್ದಾರೆ. https://kannadanewsnow.com/kannada/bihar-student-gets-151-out-of-100-in-political-science-exam/ ವರದಿಗಳ ಪ್ರಕಾರ, 1960ರ ದಶಕದಲ್ಲಿ ಭೂಮಿಯೂ ಕಡಿಮೆ ಅವಧಿಯಲ್ಲಿ ತನ್ನ ತಿರುಗುವಿಕೆಯ ವೇಗವನ್ನು ಹೆಚ್ಚಿಸಿತ್ತು. ಇದೀಗ 2020ರ ಅದೇ ದಾಖಲೆಯಾಗಿದೆ. 2020ರ ಜುಲೈ 19ರಲ್ಲಿ ಭೂಮಿಯು 24 ಗಂಟೆಗಳ ಅವಧಿಯಲ್ಲಿ 1.47 ಮಿಲಿಸೆಕೆಂಡ್ಗಳನ್ನು ಪೂರ್ಣಗೊಳಿಸಿದೆ ಎನ್ನಲಾಗುತ್ತಿದೆ. ಮುಂದಿನ ವರ್ಷ, ಗ್ರಹವು ಸಾಮಾನ್ಯವಾಗಿ ಹೆಚ್ಚಿದ ದರದಲ್ಲಿ ತಿರುಗಬಹುದು. ಆದರೆ ಅದು ಯಾವುದೇ ದಾಖಲೆಗಳನ್ನು ಮುರಿಯವುದಿಲ್ಲ. ಆದಾಗ್ಯೂ, ಆಸಕ್ತಿದಾಯಕ ಎಂಜಿನಿಯರಿಂಗ್ (ಐಇ) ಪ್ರಕಾರ, 50 ವರ್ಷಗಳ ಕಡಿಮೆ ದಿನಗಳು ಇದೀಗ ಪ್ರಾರಂಭವಾಗಬಹುದು ಎನ್ನಲಾಗುತ್ತಿದೆ. ಭೂಮಿಯು ಏಕೆ ವೇಗವಾಗಿ ತಿರುಗುತ್ತಿದೆ? ಭೂಮಿಯ ತಿರುಗವಿಕೆಯು…
ಬಹ್ರೈಚ್(ಯುಪಿ): ಉತ್ತರಪ್ರದೇಶದಲ್ಲೊಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಈ ಹಿಂದೆ ಮಹಿಳೆಯೊಬ್ಬರು ಕೊಲೆಯಾಗಿದ್ದರು ಎನ್ನಲಾಗಿತ್ತು. ಈ ಆರೋಪದ ಮೇರೆಗೆ ಪತಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದ್ರೆ, ಇದೀಗ ಪತ್ನಿ ಆಕೆಯ ತಂಗಿ ಮನೆಯಲ್ಲಿ ಪತ್ತೆಯಾಗಿದ್ದು, ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಏನಿದು ಘಟನೆ? 2006 ರಲ್ಲಿ ಜಮಾಪುರ ಗ್ರಾಮದ ನಿವಾಸಿ ಕಂಧಾಯ್ ಅವರು ರಾಮಾವತಿ ಅವರನ್ನು ವಿವಾಹವಾಗಿದ್ದರು. ನಂತ್ರ, 2009 ರಲ್ಲಿ ರಾಮಾವತಿ ನಿಗೂಢವಾಗಿ ನಾಪತ್ತೆಯಾದರು. ಕುಟುಂಬ ಸದಸ್ಯರು ನ್ಯಾಯಾಲಯದ ಮೊರೆ ಹೋಗಿ ಕಂಧಾಯ್ ವಿರುದ್ಧ ಅಪಹರಣ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿದರು. ಈ ಬಗ್ಗೆ ವಿಚಾರಣೆ ನಡೆದಿದ ನ್ಯಾಯಾಲಯ 2017 ರಲ್ಲಿ ಕಂಧಾಯ್‌ಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ನಂತರ, ಕಂಧಾಯ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು. ನಂತ್ರ, ಆರು ತಿಂಗಳ ಕಾಲ ಜೈಲು ವಾಸದ ಬಳಿಕ ಜಾಮೀನು ಪಡೆದಿದ್ದರು. ಈ ಮಧ್ಯೆ, ಸಂಬಂಧಿಯೊಬ್ಬರು ಶನಿವಾರ ರಮಾವತಿಯನ್ನು ಆಕೆಯ ಸೋದರಮಾವನ ಮನೆಯಲ್ಲಿ ನೋಡಿ ಪತಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.…
ಬೆಂಗಳೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ನಿಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸದಂತೆ ಇದುವರೆಗೂ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ. ಖಚಿತ ಮಾಹಿತಿ ಆಧರಿಸಿ ಅಖಾಡಕ್ಕೆ ಇಳಿದಿದ್ದ ಪೊಲೀಸರ ಸ್ಪೆಷಲ್ ಟೀಂ, ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದು, ಬೆಂಗಳೂರಿನಲ್ಲಿ ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ದಾರೆ. ಈ ಮೂಲಕ ಜಾಕೀರ್ ಮತ್ತು ಶಫೀಕ್ ಬಳಿಕ ಮತ್ತಿಬ್ಬರು ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರು: ಬೆಳ್ಳಾರೆಯಲ್ಲಿ ಮಸೂದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮನೆಗೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಈ ವೇಳೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಐದು ಲಕ್ಷ ಪರಿಹಾರ ಘೋಷಿಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಅವರ ಬೇಜವಾಬ್ದಾರಿತನ ಕಾಣುತ್ತಿದೆ ಎಂದು ಬೆಳ್ಳಾರೆಯಲ್ಲಿ ಹೆಚ್ ಡಿಕೆ ಕಿಡಿಕಾರಿದ್ದಾರೆ. https://kannadanewsnow.com/kannada/hdk-visits-praveen-nettarus-house-rs-5-lakh-to-family-solution-at-this-point-nutana-cried/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃತ ಪ್ರವೀಣ್ ಮನೆಗೆ ಭೇಟಿ ನೀಡಿದ್ದರು. ಆದರೆ ಅವರು ಮಸೂದ್ ಮನೆಗೆ ಬರಲಿಲ್ಲ . ಮಸೂದ್ ಹತ್ಯೆಯಲ್ಲಿ ವಿಚಿತ್ರ ಸನ್ನಿವೇಶವಿದೆ. ಅವರ ಸಾವಿಗೆ ಕಾರಣ ಏನು ಅಂತ ನನಗೆ ಗೊತ್ತಿದೆ. ಈ ಬಗ್ಗೆ ನಾನು ಪೊಲೀಸರ ಗಮನಕ್ಕೆ ತರುತ್ತೇನೆ ಎಂದರು. ಮಸೂದ್ ಹತ್ಯೆ ಹಿಂದೆ ಯಾವುದೇ ಸಂಘಟನೆ ಮತ್ತು ರಾಜಕೀಯ ಪಕ್ಷದ ಸಂಪರ್ಕವಿಲ್ಲ. ಆದರೆ ಹಿಂದೂ ಸಮುದಾಯದವರಿಂದಲೇ ಮಸೂದ್ ಹತ್ಯೆ ಸ್ಕೆಚ್ ನಡೆದಿದೆ. ಹೀಗಾಗಿ ಅವರ ಕೊಲೆಯ ಸತ್ಯಾಸತ್ಯತೆ ಹೊರಗೆ ಬರಬೇಕು ಎಂದು ಹೆಚ್ ಡಿಕೆ ಆಗ್ರಹಿಸಿದ್ದಾರೆ.
ಪುತ್ತೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಇಂದು ಮೃತ ಪ್ರವೀಣ್ ನೆಟ್ಟಾರು ಮತ್ತು ಮಸೂದ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಪ್ರವೀಣ್ ಕುಟುಂಬಸ್ಥರಿಗೆ ಸಂತ್ವಾನ ಹೇಳಿದ ನಂತ್ರ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್‌ಡಿಕೆ, “ಪ್ರವೀಣ್ ನೆಟ್ಟಾರು ಕುಟುಂಬಸ್ಥರನ್ನ ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ಪ್ರವೀಣ್ ಹಂತಕರಿಗೆ ಶಿಕ್ಷೆ ವಿಧಿಸಬೇಕು ಎಂದು ಹೇಳಿದ್ದಾರೆ. ಇನ್ನು ನಾನು ಸರ್ಕಾರಕ್ಕೆ ಹೇಳುತ್ತೇನೆ ಕಾಟಾಚಾರಕ್ಕೆ ತನಿಖೆ ಬೇಡ. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆದ್ರೆ, ಸರ್ಕಾರ ಕಾಟಾಚಾರಕ್ಕೆ ಎನ್‌ಐಎ ತನಿಖೆಗೆ ವಹಿಸಿದ್ದಾರೆ. ನಮ್ಮಲ್ಲೇ ಸಮರ್ಥ ಅಧಿಕಾರಿಗಳಿದ್ದಾರೆ. ತಮ್ಮ ಜವಾಬ್ದಾರಿ ಕಳೆದುಕೊಳ್ಳಲು ಎನ್‌ಐಎಗೆ ವಹಿಸಿದ್ದಾರೆ ಎಂದರು. ಇನ್ನು ನಮ್ಮ ಪಕ್ಷದಿಂದ ಕುಟಂಬಕ್ಕೆ 5 ಲಕ್ಷ ಪರಿಹಾರ ನೀಡಿದ್ದೇವೆ. ಇನ್ನು ಏನೇ ಸಮಸ್ಯೆ ಬಂದ್ರೂ ನನ್ನ ಗಮನಕ್ಕೆ ತರಲು ಹೇಳಿದ್ದೇನೆ” ಎಂದರು. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕಳಂಜೆ ಗ್ರಾಮದ ಮೃತ ಮಸೂದ್ ಮನೆಗೆ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿ ಮಸೂದ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.…
ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರವೀಣ್ ಮನೆಗೆ ಭೇಟಿ ನೀಡಿದ್ದಾರೆ. https://kannadanewsnow.com/kannada/monkeypox-scare-background-in-the-state-cm-bommai-to-hold-meeting-with-health-officials-tomorrow/ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು, ಐದು ಲಕ್ಷ ಪರಿಹಾರ ಘೋಷಿಸಿದ್ದಾರೆ. ಈ ವೇಳೆ ಪ್ರವೀಣ್ ಪತ್ನಿ ನೂತನಾ ಅಳಲು ತೋಡಿಕೊಂಡಿದ್ದಾರೆ. ಹಂತಕರನ್ನು ಬೇಗ ಪತ್ತೆ ಹಚ್ಚಿ ಎನ್ ಕೌಂಟರ್ ಮಾಡಿ ಎಂದಿದ್ದಾರೆ. ಇನ್ನು ಇಲ್ಲಿಯೂ ಬರ್ತಿರಾ… ಮಸೂದ್ ಮನೆಗೂ ಭೇಟಿ ನೀಡಿ ಹೋಗುತ್ತೀರಾ.. ಅವರ ಕೊಲೆಯೇ ಬೇರೆ ಎಂದು ಹೆಚ್ ಡಿಕೆ ಬಳಿ ನೂತನಾ ಬೇಸರ ವ್ಯಕ್ತಪಡಿಸಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ವೇಟ್‌ಲಿಫ್ಟರ್ ʻಅಚಿಂತಾ ಶೆಯುಲಿʼಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ!
ದೆಹಲಿ: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022 ರ ಪುರುಷರ 73 ಕೆಜಿ ವಿಭಾಗದ ಫೈನಲ್‌ನಲ್ಲಿ ಚಿನ್ನದ ಪದಕವನ್ನು ಗೆದ್ದ ವೇಟ್‌ಲಿಫ್ಟರ್ ʻಅಚಿಂತಾ ಶೆಯುಲಿ(Achinta Sheuli)ʼಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಯುವ ಅಥ್ಲೀಟ್ಅನ್ನು ಶ್ಲಾಘಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ʻಪ್ರತಿಭಾವಂತ ಅಚಿಂತಾ ಶೆಯುಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿರುವುದು ಸಂತಸ ತಂದಿದೆ. ಅವರು ಶಾಂತ ಸ್ವಭಾವ ಮತ್ತು ಸ್ಥಿರತೆಗೆ ಹೆಸರುವಾಸಿಯಾಗಿದ್ದಾರೆ. ಈ ವಿಶೇಷ ಸಾಧನೆಗಾಗಿ ಅವರು ತುಂಬಾ ಶ್ರಮಿಸಿದ್ದಾರೆ. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳುʼ ಎಂದಿದ್ದಾರೆ. Delighted that the talented Achinta Sheuli has won a Gold Medal at the Commonwealth Games. He is known for his calm nature and tenacity. He has worked very hard for this special achievement. My best wishes to him for…
ನವದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಪಾಟ್ನಾದಲ್ಲಿ ವಿವಿಧ ಬಿಜೆಪಿ ಮೋರ್ಚಾಗಳ ಎರಡು ದಿನಗಳ ಜಂಟಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, “2024ರಲ್ಲಿ ಬಿಜೆಪಿ-ಜೆಡಿಯು ಒಟ್ಟಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿವೆ, ನರೇಂದ್ರ ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ” ಎಂದು ಹೇಳಿದರು. 2024ರ ಲೋಕಸಭಾ ಚುನಾವಣೆಗೆ, ಪ್ರಧಾನಿ ಅಭ್ಯರ್ಥಿಗಳ ಚರ್ಚೆ ಯಾವಾಗಲೂ ಬಿಸಿ ವಿಷಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವ್ರು ರಾಜಕೀಯದಿಂದ ನಿವೃತ್ತರಾಗುವ ಬಗ್ಗೆ ಮತ್ತು ಹೊಸ ಮುಖಗಳ ಪಟ್ಟಾಭಿಷೇಕದ ಬಗ್ಗೆ ಆಗಾಗ್ಗೆ ಊಹಾಪೋಹಗಳಿವೆ. ಆದ್ರೆ, ಕೇಂದ್ರ ಸಚಿವ ಮತ್ತು ಬಿಜೆಪಿ ಮಾಜಿ ಅಧ್ಯಕ್ಷ ಅಮಿತ್ ಶಾ ಅವರು 2024ರಲ್ಲಿ ನರೇಂದ್ರ ಮೋದಿಯವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ರಹಸ್ಯವನ್ನ ಬಹಿರಂಗಪಡಿಸಿದ್ದಾರೆ. 2024ರಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತೊಮ್ಮೆ ನರೇಂದ್ರ ಮೋದಿಯವರನ್ನ ಪ್ರಧಾನಿ ಎಂದು ಘೋಷಿಸಿದ ಪಾಟ್ನಾದಲ್ಲಿ ನಡೆದ ಬಿಜೆಪಿಯ ಯುನೈಟೆಡ್ ಫ್ರಂಟ್ ರಾಷ್ಟ್ರೀಯ ಕಾರ್ಯಕಾರಿ…