Subscribe to Updates
Get the latest creative news from FooBar about art, design and business.
Author: KNN IT TEAM
ನವದೆಹಲಿ: ನೈಜೀರಿಯಾದ ವ್ಯಕ್ತಿಯೊಬ್ಬರಿಗೆ ದೆಹಲಿಯಲ್ಲಿ ಮಂಕಿಪಾಕ್ಸ್ ಸೋಂಕು ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ದೆಹಲಿಯಲ್ಲಿ ಮಂಕಿಪಾಕ್ಸ್ ಪ್ರಕರಣಗಳ ಸಂಖ್ಯೆ 2ಕ್ಕೆ ಏರಿಕೆಯಾದ್ರೇ, ದೇಶದಲ್ಲಿ 6ಕ್ಕೇರಿದೆ. ವಿಶ್ವದ ಹಲವೆಡೆ ತಲ್ಲಣವನ್ನು ಸೃಷ್ಠಿಸಿರುವಂತ ಮಂಕಿಪಾಕ್ಸ್ ಸೋಂಕಿನ ಪ್ರಕರಣಗಳು ಭಾರತಕ್ಕೂ ಕಾಲಿಟ್ಟಿವೆ. ಈಗಾಗಲೇ ಕೇರಳ, ದೆಹಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. https://kannadanewsnow.com/kannada/verification-of-itr-timeline-reduced-to-30-days-from-120/ ಇದೀಗ ದೆಹಲಿಯಲ್ಲಿ ನೈಜೀರಿಯದ ವ್ಯಕ್ತಿಗೆ ಮಂಕಿಪಾಕ್ಸ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಿಗದೆ. ಈ ಮೂಲಕ ನಗರದಲ್ಲಿ 2ನೇ ಪ್ರಕರಣ ಇದಾಗಿದೆ. ಅಲ್ಲದೇ ಭಾರತದಲ್ಲಿ ಪ್ರಕರಣಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ಕೇರಳದಲ್ಲಿ ಮಂಕಿಪಾಕ್ಸ್ ಸೋಂಕಿತ ಲಕ್ಷಣಗಳನ್ನು ಹೊಂದಿದ್ದಂತ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೇ ನಿನ್ನೆ ಸಾವನ್ನಪ್ಪಿದ್ದರು. ಅವರ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರ ವರದಿಯ ಪ್ರಕಾರ ಅವರಿಗೂ ಮಂಕಿಪಾಕ್ಸ್ ಸೋಂಕು ದೃಢಪಟ್ಟಿದ್ದು, ಇದು ದೇಶದಲ್ಲಿಯೇ ಮಂಕಿಪಾಕ್ಸ್ ನ ಮೊದಲ ಸಾವು ಎಂಬುದಾಗಿ ತಿಳಿದು ಬಂದಿದೆ. https://kannadanewsnow.com/kannada/good-news-for-bmtc-employees-mou-with-jayadeva-hospital-for-heart-check-up/
ನವದೆಹಲಿ: ಆದಾಯ ತೆರಿಗೆ ಇಲಾಖೆಯು ( Income Tax department ) ತೆರಿಗೆದಾರರು ( taxpayers ) ರಿಟರ್ನ್ಸ್ ಸಲ್ಲಿಸಿದ ನಂತರ ಐಟಿಆರ್-ವಿಯ ಇ-ಪರಿಶೀಲನೆ ಅಥವಾ ಹಾರ್ಡ್ ಕಾಪಿ ಸಲ್ಲಿಕೆಯ ( e-verification or hard copy submission ) ಸಮಯದ ಮಿತಿಯನ್ನು ಆಗಸ್ಟ್ 1 ರಿಂದ 30 ದಿನಗಳಿಗೆ ಇಳಿಸಿದೆ. ಇಲಾಖೆಯು ಜುಲೈ 29ರಂದು ಅಧಿಸೂಚನೆಯನ್ನು ಹೊರಡಿಸಿ ಕಾಲಮಿತಿಯ ಬದಲಾವಣೆಯನ್ನು ಘೋಷಿಸಿದೆ. ಐಟಿಆರ್ನ ಇ-ವೆರಿಫಿಕೇಶನ್ ರಿಟರ್ನ್ ಫೈಲಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ ಮತ್ತು ಅದನ್ನು ನಿಗದಿತ ಸಮಯದೊಳಗೆ ಮಾಡದಿದ್ದರೆ, ಐಟಿಆರ್ ಅನ್ನು ಅಸಿಂಧುವೆಂದು ಪರಿಗಣಿಸಲಾಗುತ್ತದೆ. https://kannadanewsnow.com/kannada/good-news-for-air-passengers-bmtc-to-start-bus-services-from-this-route-to-the-airport/ “ಈ ಅಧಿಸೂಚನೆಯ ದಿನಾಂಕದಂದು ಅಥವಾ ನಂತರ ರಿಟರ್ನ್ ಡೇಟಾದ ಯಾವುದೇ ವಿದ್ಯುನ್ಮಾನ ಪ್ರಸರಣಕ್ಕೆ ಸಂಬಂಧಿಸಿದಂತೆ, ಇ-ಪರಿಶೀಲನೆ ಅಥವಾ ಐಟಿಆರ್-ವಿ ಸಲ್ಲಿಕೆಯ ಸಮಯ-ಮಿತಿಯು ಈಗ ರಿಟರ್ನ್ ಡೇಟಾವನ್ನು ವಿದ್ಯುನ್ಮಾನವಾಗಿ ವರ್ಗಾಯಿಸುವ / ಅಪ್ಲೋಡ್ ಮಾಡುವ ದಿನಾಂಕದಿಂದ 30 ದಿನಗಳ ನಂತರ ಇರುತ್ತದೆ” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈ ಆದೇಶವು ಆಗಸ್ಟ್ 1 ರಿಂದ ಜಾರಿಗೆ ಬರಲಿದೆ ಎಂದು…
ಬೆಂಗಳೂರು: ವೀರಶೈವ ಲಿಂಗಾಯತ ಸಮುದಾಯದ ಗುರು ಸ್ಥಾನದಲ್ಲಿರುವ ಬೇಡ ಜಂಗಮರು ಪರಿಶಿಷ್ಟ ಜಾತಿಗೆ ಸೇರಿದವರಲ್ಲ. ಅವರಿಗೆ ಎಸ್.ಸಿ ಸರ್ಟಿಫಿಕೇಟ್ ಅನ್ನು ರಾಜ್ಯ ಸರ್ಕಾರ ನೀಡಬಾರದು ಎಂದು ಅನುಸೂಚಿತ ಜಾತಿ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ. ಎಂ.ಪಿ.ಕುಮಾರಸ್ವಾಮಿ ಎಂದು ಹೇಳಿದ್ದಾರೆ. https://kannadanewsnow.com/kannada/resident-of-bengaluru-now-google-maps-will-share-speed-limit-information-with-you/ ಈ ಕುರಿತಂತೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಎಸ್.ಸಿ.ಎಸ್.ಟಿ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವುದು, ಸಮಾಜಿಕವಾಗಿ ಮೇಲುಸ್ತರದಲ್ಲಿರುವ ಮೇಲ್ವರ್ಗಗಳು ನಮ್ಮನ್ನು ಎಸ್.ಸಿ.ಎಸ್.ಟಿಗೆ ಸೇರಿಸಿ ಎಂದು ಒತ್ತಡ ಹಾಕುವುದು ಪ್ರಬಲರು ದುರ್ಬಲರ ಮೇಲೆ ನಡೆಸುವ ದೌರ್ಜನ್ಯವಷ್ಟೆ ಅಲ್ಲ . ಎಸ್.ಸಿ.ಎಸ್.ಟಿ ಗಳ ಮೇಲೆ ಎಸಗುವ ಹೊಸ ಮಾದರಿಯ ರೂಪಾಂತರಿ ಅಟ್ರಾಸಿಟಿ ಪ್ರಕರಣವಾಗಿದೆ ಎಂದು ವ್ಯಾಖ್ಯಾನ ಮಾಡಿದ್ದಾರೆ. https://kannadanewsnow.com/kannada/rs10-cr-grant-for-gavisiddeshwara-mutt-cm-hands-over-the-order-copy/ ವೀರಶೈವ ಲಿಂಗಾಯತ ಸಮುದಾಯ ಅನಾದಿಕಾಲದಿಂದಲೂ ಸಮಾಜಕ್ಕೆ ನ್ಯಾಯ ನೀತಿ ಧರ್ಮ ಬೋದಿಸುವುದರ ಜತೆಗೆ ದೀನದಲಿತರ ಮತ್ತು ಬಡವರ ಮಕ್ಕಳಿಗೆ ಉಚಿತ ಅನ್ನ ದಾಸೋಹ ಮತ್ತು ವಿದ್ಯಾಧಾನ ಮಾಡುತ್ತಿರುವ ಸಮುದಾಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಸಮುದಾಯದಲ್ಲಿ ಮೇಲಿನ ಗುರು ಸ್ಥಾನದಲ್ಲಿರುವ…
ಕೊಪ್ಪಳ : ಜಿಲ್ಲೆಯ ಪ್ರಸಿದ್ಧ ಗವಿಸಿದ್ದೇಶ್ವರ ಮಠಕ್ಕೆ 10 ಕೋಟಿ ರೂ. ಮಂಜೂರಾತಿ ಆದೇಶದ ಪ್ರತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಸ್ತಾಂತರ ಮಾಡಿದರು. ಇಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ ನಂತರ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗವಿಸಿದ್ದೇಶ್ವರ ಮಠದ ಶ್ರೀಗಳು ಅಪಾರವಾದ ಸೇವೆಯನ್ನು ಮಾಡುತ್ತಿದ್ದಾರೆ. ಅವರಿಗೆ ಸಹಾಯ ಆಗಲಿ ಎಂದು ನಾವು ಸರ್ಕಾರದಿಂದ 10 ಕೋಟಿ ರೂ. ಕೊಟ್ಟಿದ್ದೇವೆ ಎಂದು ತಿಳಿಸಿದರು. https://kannadanewsnow.com/kannada/good-news-for-bmtc-employees-mou-with-jayadeva-hospital-for-heart-check-up/ ಈ ಭಾಗದಲ್ಲಿ ಪರಮಪೂಜ್ಯರು ಮಾಡುತ್ತಿರುವ ವಿದ್ಯೆ ಮತ್ತು ಅನ್ನ ದಾಸೋಹ ಸೇವೆ ಬಹಳ ವರ್ಷಗಳಿಂದ ನಡೆದಿದೆ. ಬಡ ಜನರಿಗೆ, ವಿದ್ಯಾರ್ಥಿಗಳಿಗೆ ಆಶ್ರಯವಾಗಿದೆ. ಈ ಭಾಗದ ಜನರ ವಿದ್ಯೆಗೆ ನಂದಾದೀಪವಾಗಿದೆ. ಅಂತಹ ಅಮೋಘವಾಗಿರುವ ಕೆಲಸವನ್ನು ಪರಮಪೂಜ್ಯರು ಮಾಡುತ್ತಿರುವಂತಹದ್ದು, ನಮ್ಮ ನಾಡಿನ ಸೌಭಾಗ್ಯವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು. ಈ ಬಾರಿ ಎರಡು ವರ್ಷ ಕೋವಿಡ್ ಆಗಿರುವುದರಿಂದ ಒಂದೇ ಬಾರಿಗೆ 2,000 ಕ್ಕಿಂತ ಹೆಚ್ಚುವರಿಯಾಗಿ ಮಕ್ಕಳು ಬಂದಿದ್ದಾರೆ. 3,500 ಮಕ್ಕಳು ಈಗಾಗಲೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರಿಗೆಲ್ಲರಿಗೂ ಕೂಡ ವಸತಿ…
ಬೆಂಗಳೂರು: ವಿಮಾನ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ, ಬಿಎಂಟಿಸಿಯಿಂದ ( BMTC ) ಹೊಸದಾಗಿ ರೇಷ್ಮೆ ಸಂಸ್ಥೆಯಿಂದ ವಿಮಾನ ನಿಲ್ದಾಣಕ್ಕೆ ಬಸ್ ಸಂಚಾರವನ್ನು ಆರಂಭಿಸಿದೆ. ಈ ಮೂಲಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳೋರಿಗೆ ಗುಡ್ ನ್ಯೂಸ್ ನೀಡಿದೆ. https://kannadanewsnow.com/kannada/resident-of-bengaluru-now-google-maps-will-share-speed-limit-information-with-you/ ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ. ವಿಮಾನ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಮಾರ್ಗ ಸಂಖ್ಯೆ ಕೆಐಎ-5ಡಿ ಅನ್ನು ರೇಷ್ಮೆ ಸಂಸ್ಥೆ ಅಂದ್ರೇ ಸಿಲ್ಕ್ ಇನ್ಟಿಟ್ಯೂಟ್ ಮೆಟ್ರೋ ನಿಲ್ದಾಣದಿಂದ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಣನಕುಂಟೆ ಕ್ರಾಸ್ ಮೂಲಕ ಆರಂಭಿಸಲಾಗಿದೆ ಎಂದು ತಿಳಿಸಿದೆ. https://kannadanewsnow.com/kannada/good-news-for-bmtc-employees-mou-with-jayadeva-hospital-for-heart-check-up/ ಬನಶಂಕರಿ ಟಿಟಿಎಂಸಿ, ಜಯನಗರ 4ನೇ ಬ್ಲಾಕ್, ಶಾಂತಿನಗರ ಟಿಟಿಎಂಸಿ, ಆರ್ ಎಂ ಗುಟ್ಟಹಳ್ಳಿ, ಹೆಬ್ಬಾಳ ಮಾರ್ಗವಾಗಿ 4 ಹವಾನಿಯಂತ್ರಿತ ವಾಯುವಜ್ರ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಿದೆ. https://kannadanewsnow.com/kannada/no-question-of-india-getting-into-stagflation-or-recession-fm-nirmala-sitharaman-in-lok-sabha/ ಹೀಗಿದೆ.. ಬಿಎಂಟಿಸಿ ಹೊಸ ಮಾರ್ಗದ ಸಂಖ್ಯೆಯ ಬಸ್ ಸಂಚಾರ ವೇಳಾಪಟ್ಟಿ
ಬೆಂಗಳೂರು: ಗೂಗಲ್ ಬೆಂಗಳೂರು ಮತ್ತು ಚಂಡೀಗಢದ ಸಂಚಾರ ಪೊಲೀಸ್ ಇಲಾಖೆಗಳೊಂದಿಗೆ ( traffic police ) ಪಾಲುದಾರಿಕೆ ಹೊಂದಿದ್ದು, ಇದರ ಅಡಿಯಲ್ಲಿ ಟೆಕ್ ದೈತ್ಯ ವೆಬ್ ಮ್ಯಾಪಿಂಗ್ ಪ್ಲಾಟ್ಫಾರ್ಮ್ ಗೂಗಲ್ ಮ್ಯಾಪ್ಸ್ ( Google Maps ) ತನ್ನ ಬಳಕೆದಾರರಿಗೆ ಸಂಚಾರ ಪ್ರಾಧಿಕಾರಗಳು ಹಂಚಿಕೊಳ್ಳುವ ವೇಗ ಮಿತಿಯ ಮಾಹಿತಿಯನ್ನು ಪ್ರದರ್ಶಿಸುತ್ತದೆ. https://kannadanewsnow.com/kannada/chitradurga-t-kavitha-elected-unopposed-as-president-of-maradihalli-gram-panchayat-in-hiriyur-taluk/ ಸದ್ಯಕ್ಕೆ, ಈ ವೈಶಿಷ್ಟ್ಯವು ಮೇಲೆ ತಿಳಿಸಿದ ಎರಡು ನಗರಗಳಲ್ಲಿ ಮಾತ್ರ ಲಭ್ಯವಿದೆ. ಆದಾಗ್ಯೂ ವರದಿಯ ಪ್ರಕಾರ, ಕಂಪನಿಯು ಮುಂಬರುವ ತಿಂಗಳುಗಳಲ್ಲಿ, ಈ ಪ್ರಾಯೋಗಿಕ ಯೋಜನೆಯನ್ನು ಕೋಲ್ಕತ್ತಾ ಮತ್ತು ಹೈದರಾಬಾದ್ಗೂ ವಿಸ್ತರಿಸಲಿದೆ. https://kannadanewsnow.com/kannada/no-question-of-india-getting-into-stagflation-or-recession-fm-nirmala-sitharaman-in-lok-sabha/ ಈ ವೈಶಿಷ್ಟ್ಯದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿಷಯಗಳು ಇಲ್ಲಿವೆ (1.) ನಗರದ ಸಂಚಾರ ನಿರ್ವಹಣಾ ವ್ಯವಸ್ಥೆಯನ್ನು ಸುಧಾರಿಸಲು ಗೂಗಲ್ ನೊಂದಿಗೆ ಒಪ್ಪಂದ ಮಾಡಿಕೊಂಡ ದೇಶದ ಮೊದಲ ನಗರ ಬೆಂಗಳೂರು. ದೇಶದ ಐಟಿ ರಾಜಧಾನಿಯಲ್ಲಿ ಪ್ರಯಾಣಿಕರು ಆಗಾಗ್ಗೆ ಅನುಭವಿಸಬೇಕಾದ ಕುಖ್ಯಾತ ಸಂಚಾರ ಅವ್ಯವಸ್ಥೆಯನ್ನು ಸುಧಾರಿಸಲು ಬೆಂಗಳೂರು ಸಂಚಾರ ಪೊಲೀಸರು ಗೂಗಲ್ ನ ಎಐ ಅನ್ನು ಬಳಸುತ್ತಾರೆ.…
ನವದೆಹಲಿ: ಇಂದು ಲೋಕಸಭೆಯಲ್ಲಿ ( Lok Sabha ) ಬೆಲೆ ಏರಿಕೆ ಕುರಿತ ಚರ್ಚೆಗೆ ಉತ್ತರಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ( Finance Minister Nirmala Sitharaman), ಜಾಗತಿಕ ಏಜೆನ್ಸಿಗಳ ಮೌಲ್ಯಮಾಪನದಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ಪ್ರತಿಪಾದಿಸುತ್ತಾ, ಭಾರತವು ಆರ್ಥಿಕ ಹಿಂಜರಿತ ಅಥವಾ ಆರ್ಥಿಕ ಹಿಂಜರಿತಕ್ಕೆ ( no question of India getting into stagflation or recession ) ಒಳಗಾಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ನಿರ್ಮಲಾ ಸೀತಾರಾಮನ್ ಅವರು ಸದನದಲ್ಲಿ ಉತ್ತರಿಸುತ್ತಿದ್ದಂತೆ ಕಾಂಗ್ರೆಸ್ ಸಂಸದರು ಲೋಕಸಭೆಯಿಂದ ಹೊರನಡೆದರು ( Congress MPs walked out ) ಎಂದು ಎಎನ್ಐ ವರದಿ ಮಾಡಿದೆ. https://kannadanewsnow.com/kannada/chitradurga-t-kavitha-elected-unopposed-as-president-of-maradihalli-gram-panchayat-in-hiriyur-taluk/ ಈ ರೀತಿಯ ಸಾಂಕ್ರಾಮಿಕ ರೋಗವನ್ನು ನಾವು ಎಂದಿಗೂ ನೋಡಿಲ್ಲ. ನಾವೆಲ್ಲರೂ ನಮ್ಮ ಕ್ಷೇತ್ರಗಳಲ್ಲಿನ ಜನರಿಗೆ ಹೆಚ್ಚಿನ ಸಹಾಯವನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆವು. ಸಂಸದರು ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ನಾನು ಗುರುತಿಸುತ್ತೇನೆ.…
ದಾವಣಗೆರೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತದಾರರ ಪಟ್ಟಿಗೆ ನೋಂದಾಯಿಸಲು ವರ್ಷದಲ್ಲಿ ನಾಲ್ಕು ಬಾರಿ ಅವಕಾಶವಿದ್ದು, ಜನವರಿ 01, ಆಗಷ್ಟ್ 01, ಜುಲೈ 01 ಹಾಗೂ ಅಕ್ಟೋಬರ್ 01 ರಂದು ಒಟ್ಟು ನಾಲ್ಕು ಬಾರಿ ಅವಕಾಶಗಳನ್ನು ನಿಗಧಿಪಡಿಸಲಾಗಿದೆ. ಹಾಗೂ ಗರುಡ ಆ್ಯಪ್ ಮೂಲಕ ಸಾರ್ವಜನಿಕರು ತಾವೇ ತಮ್ಮ ಮತದಾರರ ಗುರುತಿನ ಪತ್ರವನ್ನು ಸ್ವಯಂ ದೃಢಿಕರಣದೊಂದಿಗೆ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು. ಸೋಮವಾರ ಅಪರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮತದಾರರ ಪಟ್ಟಿಯಲ್ಲಿ ಮತದಾರರ ದೃಢೀಕರಣ, ಆಧಾರ್ ಜೋಡಣೆ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಏರ್ಪಡಿಸಲಾದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಮತ್ತು ಮತದಾರರ ನೊಂದಣಿ ನಿಯಮಗಳು 1960 ರ ಪ್ರಕಾರ ಮತದಾರರ ನೋಂದಣಿಯ ನಮೂನೆಗಳಲ್ಲಿ ಪ್ರಸ್ತುತ ಬಹಳಷ್ಟು ಮಾರ್ಪಾಡುಗಳನ್ನು ಮಾಡಲಾಗಿದೆ. ಇದರಲ್ಲಿ ನಮೂನೆ 6-ಬಿ ಅನ್ನು ಹೊಸದಾಗಿ ಪರಿಚಯಿಸಲಾಗಿದ್ದು, ಮತದಾರರ ಪಟ್ಟಿಯಲ್ಲಿ ನಮೂದುಗಳನ್ನು ದೃಢೀಕರಿಸಲು ಸಂಬಂಧಪಟ್ಟ…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಮರಡಿಹಳ್ಳಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷೆಯಾಗಿ ಟಿ.ಕವಿತ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮರಡಿಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಯಿತು. ತಹಶೀಲ್ದಾರ್ ಶಿವಕುಮಾರ್ ಅವರು ಚುನಾವಣೆ ಉಸ್ತುವಾರಿಯಾಗಿದ್ದರು. https://kannadanewsnow.com/kannada/good-news-for-bmtc-employees-mou-with-jayadeva-hospital-for-heart-check-up/ ಮರಡಿಹಳ್ಳಿ ಗ್ರಾಮ ಪಂಚಾಯ್ತಿಯ 10 ಜನರ ಪೈಕಿ, 8 ಮಂದಿ ಸದಸ್ಯರು ಟಿ.ಕವಿತ ಪರ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದರು. ಈ ಹಿನ್ನಲೆಯಲ್ಲಿ ಅವಿರೋಧವಾಗಿ ಮತ್ತೊಮ್ಮೆ ಮರಡಿಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿ, ಮುಂದುವರೆಯಲಿದ್ದಾರೆ. ಈ ವೇಳೆ ಸದಸ್ಯರಾದ ಹರೀಶ್, ಸಣ್ಣಹನುಮಪ್ಪ, ಮಂಜು, ಅನಿತಾ, ಲತಾ, ತಿಪ್ಪಮ್ಮ, ಉಮಾದೇವಿ, ಮುಖಂಡರಾದ ಸುನಿಲ್ ಕುಮಾರ್, ಅರವಿಂದಪ್ಪ ವೆಂಕಟೇಶ್ ಇತರರು ನೂತನ ಅದ್ಯಕ್ಷೆಗೆ ಶುಭ ಹಾರೈಸಿದರು. ವರದಿ : ವಸಂತ ಬಿ ಈಶ್ವರಗೆರೆ https://kannadanewsnow.com/kannada/launch-of-electoral-reforms-across-the-country-cs-vandita-sharma/
ಮಂಗಳೂರು: ಪ್ರಿಯಕರನ ಜೊತೆಗೆ ಬೀಚ್ ಗೆ ಬಂದಿದ್ದ ಯುವತಿಯ ಮೇಲೆ ಅತ್ಯಾಚಾರ ನಡೆದಿರೋ ಘಟನೆ ಮಂಗಳೂರಿನಲ್ಲಿ ನಡೆದಿದೆ. ಸುರತ್ಕಲ್ ಎನ್ಐಟಿಕೆ ಬೀಚ್ ನಲ್ಲಿ ಜುಲೈ 27ರಂದು ಈ ಘಟನೆ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮುನಾಜ್ ಅಹ್ಮದ್ ಎಂಬಾತನಿಂದ ಅತ್ಯಾಚಾರವಾಗಿದ್ದು, ಯುವತಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ದೆ. ಅತ್ಯಾಚಾರದ ಬಗ್ಗೆ ವಿದ್ಯಾರ್ಥಿನಿಯು ಪೊಲೀಸ್ ಕಮೀಷನರ್ ಭೇಟಿ ಮಾಡಿ ದೂರು ನೀಡಿದ್ದ ಪರಿಣಾಮ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.