Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು : ರಾಜ್ಯದಲ್ಲಿ ಮಳೆಯ ಆರ್ಭಟ ಮತ್ತೆ ಶುರುವಾಗಿದ್ದು, ಇಂದಿನಿಂದ ಮುಂದಿನ 4 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. https://kannadanewsnow.com/kannada/bigg-news-state-government-issues-guidelines-for-control-of-monkeypox-infection-compliance-of-these-rules-mandatory/ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಇಂದಿನಿಂದ ಮುಂದಿನ ನಾಲ್ಕು ದಿನ ಭಾರೀ ಮಳೆಯಾಗಲಿದೆ. ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇಂದಿನಿಂದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನದಲ್ಲಿ ಮೂರು ದಿನ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಆಗಸ್ಟ್ 3, 4ರಂದು ಮಳೆಯಾಗಲಿದೆ. ಮಂಡ್ಯ ಮತ್ತು ರಾಮನಗರದಲ್ಲಿ ಆಗಸ್ಟ್ 4ರಂದು ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಉತ್ತರ ಕರ್ನಾಟಕದ ಧಾರವಾಡ, ಗದಗ, ಬಳ್ಳಾರಿ ಬಾಗಲಕೋಟೆ, ವಿಜಯಪುರ ಮತ್ತು ಕಲಬುರಗಿಯಲ್ಲಿ ಆಗಸ್ಟ್ 4 ರವರೆಗೆ ಮಳೆಯಾಗಲಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ಮೈಸೂರು, ಆಗಸ್ಟ್ 4ರಂದು ಯೆಲ್ಲೋ…
BIGG NEWS : ‘ಮಂಕಿಪಾಕ್ಸ್ ಸೋಂಕು’ ನಿಯಂತ್ರಣಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ
ಬೆಂಗಳೂರು: ವಿಶ್ವದಾದ್ಯಂತ ಕೊರೋನಾ ಬಳಿಕ, ಈಗ ಮಂಕಿಪಾಕ್ಸ್ ಸೋಂಕು ( Monkeypox Case ) ಆರ್ಭಟಿಸುತ್ತಿದೆ. ನೆರೆಯ ಕೇರಳದಲ್ಲಿ ಮಂಕಿಪಾಕ್ಸ್ ಕೇಸ್ ಪತ್ತೆಯಾದ ನಂತ್ರ, ರಾಜ್ಯ ಸರ್ಕಾರದಿಂದ ಕರ್ನಾಟಕದಲ್ಲಿ ಸೋಂಕಿ ನಿಯಂತ್ರಣಕ್ಕಾಗಿ ಮಾರ್ಗಸೂಚಿ ಕ್ರಮಗಳನ್ನು ಪ್ರಕಟಿಸಲಾಗಿದೆ. ಆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ. https://kannadanewsnow.com/kannada/holiday-announcement-for-schools-and-colleges-of-dakshina-kannada-district/ ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಮಂಕಿಪಾಕ್ಸ್ ಸರ್ವೇಕ್ಷಣೆಗಾಗಿ ಹೆಚ್ಚಿನ ಮಟ್ಟದ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಲು ಈ ಕೆಳಕಂಡ ಮಾರ್ಗಸೂಚಿ ಕ್ರಮಗಳನ್ನು ಕೂಡಲೇ ಕೈಗೊಂಡಿರುವುದನ್ನು ಖಚಿತ ಪಡಿಸಿಕೊಳ್ಳಲು ಸೂಚನೆಯನ್ನು ನೀಡಲಾಗಿದೆ ಎಂದಿದ್ದಾರೆ. ಇನ್ನೂ ಹೆಚ್ಚಿನ ಸರ್ವೇಕ್ಷಣೆಯನ್ನು ಜಿಲ್ಲೆಗಳು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿ, ಈ ಕೆಳಕಂಡ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದ್ದಾರೆ. ಮಂಕಿಪಾಕ್ಸ್ ಪ್ರತಿಯೊಂದು ಪ್ರಕರಣವನ್ನು ವರದಿಯಾಡುವುದು ತ್ವರಿತ ಪ್ರಕ್ರಿಯಾತಂಡದ ವಿವರವಾದ ತನಿಖೆ, ಮಾದರಿ ಸಂಗ್ರಹ ಮತ್ತು ಐಹೆಚ್ಐಪಿ ಪೋರ್ಟಲ್ ನಲ್ಲಿ ವರದಿ ಮಾಡಿದ ನಂತ್ರ ರಾಜ್ಯಕ್ಕೆ ವರದಿ ಮಾಡತಕ್ಕದ್ದು ಪ್ರಕರಣ ವರದಿ ಮಾಡುವ ಪ್ರಪತ್ರವನ್ನು ಸಂಪೂರ್ಣ ಭರ್ತಿ ಮಾಡಲಾಗಿದೆ…
ದಕ್ಷಿಣ ಕನ್ನಡ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನದಿಗಳು ತುಂಬಿ ಹರಿಯುತ್ತಿದ್ದು, ರಸ್ತೆಗಳು ಜಲಾವೃತಗೊಂಡಿವೆ. ಹೀಗಾಗಿ, ಜಿಲ್ಲೆಯ ಸುಳ್ಯ, ಕಡಬ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆ, ಇಂದು ಸುಳ್ಯ, ಕಡಬ ತಾಲೂಕಿನ ಅಂಗನಾವಾಡಿ ಸೇರಿದಂತೆ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಆದೇಶ ಹೊರಡಿಸಿದ್ದಾರೆ. https://kannadanewsnow.com/kannada/cwg-2022-weightlifter-harjinder-kaur-wins-bronze-in-womens-71kg/ https://kannadanewsnow.com/kannada/al-qaeda-chief-ayman-al-zawahiri-killed-in-drone-strike-by-us-report/ https://kannadanewsnow.com/kannada/we-are-a-national-party-nationalism-is-our-stand-cm-bommai/
ಬರ್ಮಿಂಗ್ಹ್ಯಾಮ್: ಸೋಮವಾರ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ 2022ರ ಮಹಿಳೆಯರ 71 ಕೆಜಿ ವಿಭಾಗದ ಫೈನಲ್ನಲ್ಲಿ ಭಾರತದ ವೇಟ್ಲಿಫ್ಟರ್ ಹರ್ಜಿಂದರ್ ಕೌರ್ 212 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ. ವೇಟ್ಲಿಫ್ಟರ್ ಹರ್ಜಿಂದರ್ ಕೌರ್ ಕಂಚಿನ ಪದಕ ಗೆದ್ದಿದ್ದಾರೆ. ಈ ಮಾಲಕ 2022 ರ ಕಾಮನ್ವೆಲ್ತ್ ಗೇಮ್ಸ್ನ ವೇಟ್ಲಿಫ್ಟಿಂಗ್ನಲ್ಲಿ ಇದು ಭಾರತಕ್ಕೆ 7ನೇ ಪದಕವಾಗಿದೆ. 9️⃣th medal for 🇮🇳 at @birminghamcg22 🤩🤩 After high voltage 🤯 drama India’s #HarjinderKaur bags 🥉 in Women’s 71kg Final with a total lift of 212Kg 🏋♂️ at #B2022 Snatch- 93kg Clean & Jerk- 119kg With this #TeamIndia🇮🇳 wins its 7️⃣th Medal in 🏋♀️🏋♂️ 💪💪#Cheer4India🇮🇳 pic.twitter.com/D13FqCqKYs — SAI Media (@Media_SAI) August 1, 2022 ಕ್ಲೀನ್ ಮತ್ತು ಜರ್ಕ್ ಸುತ್ತಿನ ಮೊದಲ ಪ್ರಯತ್ನದಲ್ಲಿ…
ವಾಷಿಂಗ್ಟನ್ (ಯುಎಸ್): ಅಫ್ಘಾನಿಸ್ತಾನದಲ್ಲಿ ಭಾನುವಾರ ನಡೆದ ಯುಎಸ್ ಡ್ರೋನ್ ದಾಳಿಯಲ್ಲಿ ಅಲ್-ಖೈದಾ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿ(Ayman al-Zawahiri) ಸಾವನ್ನಪ್ಪಿದ್ದಾರೆ ಎಂದು ಸೋಮವಾರ (ಸ್ಥಳೀಯ ಕಾಲಮಾನ) ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಟ್ವಿಟರ್ನಲ್ಲಿ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಅವರು, ಅಲ್-ಖೈದಾ ಅವರ ಈ ಮುಷ್ಕರವನ್ನು ದೃಢಪಡಿಸಿದ್ದಾರೆ. ಜುಲೈ 31 ರಂದು ಕಾಬೂಲ್ ನಗರದ ಶೆರ್ಪುರ್ ಪ್ರದೇಶದ ವಸತಿ ಗೃಹದ ಮೇಲೆ ವೈಮಾನಿಕ ದಾಳಿ ನಡೆಸಿದೆ. ಘಟನೆಯ ಸ್ವರೂಪವು ಮೊದಲಿಗೆ ಸ್ಪಷ್ಟವಾಗಲಿಲ್ಲ. ಆದರೆ, ಇಸ್ಲಾಮಿಕ್ ಎಮಿರೇಟ್ನ ಭದ್ರತೆ ಮತ್ತು ಗುಪ್ತಚರ ಸೇವೆಗಳು ಘಟನೆಯ ಬಗ್ಗೆ ತನಿಖೆ ನಡೆಸಿತು. ಈ ವೇಳೆ ಆರಂಭಿಕ ಸಂಶೋಧನೆಗಳು ಅಮೆರಿಕದ ಡ್ರೋನ್ನಿಂದ ದಾಳಿ ನಡೆಸಲಾಗಿದೆ ಎಂದು ನಿರ್ಧರಿಸಿದೆ. ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ ಈ ದಾಳಿಯನ್ನು ಬಲವಾಗಿ ಖಂಡಿಸುತ್ತದೆ ಮತ್ತು ಇದು ಅಂತರರಾಷ್ಟ್ರೀಯ ತತ್ವಗಳು ಮತ್ತು ದೋಹಾ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಮುಜಾಹಿದ್ ಹೇಳಿದರು. ಈ ಬಗ್ಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಸೋಮವಾರ ಸ್ಪಷ್ಟನೆ ನೀಡಿದ್ದು, ಅಲ್-ಖೈದಾ…
ಕೆಎನ್ಎನ್ಡಿಜಿಟಲ್ಡೆಸ್ಕ್: ಹಿಂದೂಗಳು ಶ್ರಾವಣ ಮಾಸದಲ್ಲಿ ಶುಕ್ಲ ಪಕ್ಷದ ಪಂಚಮಿಯಂದು ನಾಗರ ಪಂಚಮಿಯನ್ನು ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್ ನಲ್ಲಿ ಆಚರಿಸುತ್ತಾರೆ. ಈ ಹಬ್ಬದಲ್ಲಿ, ಭಾರತ ಮತ್ತು ನೇಪಾಳದ ದೇವಾಲಯಗಳಲ್ಲಿ ಹಾವುಗಳನ್ನು ಪೂಜಿಸಲಾಗುತ್ತದೆ. ಈ ದಿನದಂದು ಹಾವುಗಳನ್ನು ಪೂಜಿಸುವವನು ಸರ್ಪಗಳ ಭಯವನ್ನು ತೊಡೆದುಹಾಕುತ್ತಾನೆ ಎಂದು ನಂಬಲಾಗಿದೆ. ನಾಗರ ಪಂಚಮಿ ದಿನಾಂಕ ಮತ್ತು ಪೂಜಾ ಸಮಯ ಈ ವರ್ಷ, ನಾಗರ ಪಂಚಮಿಯನ್ನು ಆಗಸ್ಟ್ 2, 2022 ರಂದು ಆಚರಿಸಲಾಗುವುದು. ತಿಥಿಯು ಆಗಸ್ಟ್ 2 ರಂದು ಬೆಳಿಗ್ಗೆ 5:13 ರಿಂದ ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ 3 ರಂದು 5:41 ಕ್ಕೆ ಕೊನೆಗೊಳ್ಳುತ್ತದೆ. ನಾಗರ ಪಂಚಮಿಯ ಪೂಜಾ ಅವಧಿ ಆಗಸ್ಟ್ 2 ರಂದು ಬೆಳಿಗ್ಗೆ 05:43 ರಿಂದ 08:25 ರವರೆಗೆ ಇರುತ್ತದೆ. ಈ ಹಬ್ಬಕ್ಕೆ ಸಂಬಂಧಿಸಿದಂತೆ ಹಲವಾರು ಕಥೆಗಳಿವೆ. ಒಂದು ನಂಬಿಕೆಯ ಪ್ರಕಾರ, ಭಗವಾನ್ ಕೃಷ್ಣನು ಯಮುನಾ ನದಿಯ ಬಳಿ ಆಟವಾಡುತ್ತಿದ್ದಾಗ, ಚೆಂಡು ಒಳಗೆ ಬಿದ್ದಿತು. ಅವನು ನೀರಿಗೆ ಇಳಿಯುತ್ತಿದ್ದಂತೆ, ಕೃಷ್ಣನ ಮೇಲೆ ಕಾಲಿಯಾ ನಾಗ್ ದಾಳಿ…
ದಾವಣಗೆರೆ :ನಮ್ಮದು ರಾಷ್ಟ್ರೀಯ ಪಕ್ಷ. ರಾಷ್ಟ್ರೀಯತೆಯೇ ನಮ್ಮ ನಿಲುವುವಾಗಿದೆ. ಯಾರಿಗೂ ಬೇಧ-ಭಾವ ಮಾಡುವ ಪ್ರಶ್ನೆಯಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ದಾವಣಗೆರೆಯಲ್ಲಿ ಇಂದು ಮಾತನಾಡಿದಂತ ಅವರು, ಅಂಥ ವಿಚಾರಗಳು ಹಿಂದಿನ ಸರ್ಕಾರಗಳು ಅವರ ಕಾಲದಲ್ಲಿ ಏನೇನು ಮಾಡಿದ್ದಾರೆ ಅದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. https://kannadanewsnow.com/kannada/applications-invited-for-skill-training/ ಸಿದ್ದರಾಮೇಶ್ವರ ವಜ್ರ ಮಹೋತ್ಸವಕ್ಕೆ ಗುರುಗಳು ಆಹ್ವಾನ ನೀಡಿದ್ದ ಮೇರೆಗೆ ಇಲ್ಲಿಗೆ ಬಂದಿದ್ದೇನೆ. ನಂತರ ಕೊಪ್ಪಳ್ಳಕ್ಕೆ ಹೋಗಲಿದ್ದೇನೆ ಎಂದರು. ಹಿಂದೂ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿದೆ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಪ್ರತಿಭಟನೆ ಕಡಿಮೆಯಾಗಿದೆ. ನಾವು ಈಗಾಗಲೇ ಕಾರ್ಯಾಚರಣೆ ಮಾಡುತ್ತಿರುವುದರಿಂದ ಎಲ್ಲರಿಗೂ ಕೂಡ ವಿಶ್ವಾಸ ಬಂದಿದೆ. ಖಂಡಿತವಾಗಿಯೂ ನಮ್ಮ ಪೊಲೀಸರು ಯಾರು ಕೊಲೆಗಡುಕರಿದ್ದಾರೆ ಅವರನ್ನು ಪತ್ತೆ ಹಚ್ಚುತ್ತಾರೆ ಎನ್ನುವ ವಿಶ್ವಾಸ ನನಗೆ ಇದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಭದ್ರತೆ ಸಮಸ್ಯೆ ಇಲ್ಲ ಗೃಹ ಸಚಿವರ ಮನೆಗೆ ಭದ್ರತೆ ಸಮಸ್ಯೆಯಿಲ್ಲ. ಪ್ರತಿಭಟನಾಕಾರರು ಬಂದ ಸಂದರ್ಭದಲ್ಲಿ ಭದ್ರತೆಯ ಸಮಯದಲ್ಲಿ ಯಾರು ಇರಬೇಕಿತ್ತೋ ಅವರು ಇರಲಿಲ್ಲ.…
ಶಿವಮೊಗ್ಗ : ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ ಹಾಗೂ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮಗಳ ವತಿಯಿಂದ 2022-23ನೇ ಸಾಲನ ಕೌಶಲ್ಯ ತರಬೇತಿ ಯೋಜನೆಯಡಿ ಟಿಲಿವಿಷನ್ ಜರ್ನಲಿಸಂ ತರಬೇತಿ, ವಿಡಿಯೋ ಜರ್ನಲಿಸಂ, ಕ್ಯಾಮರಾಮನ್, ನಿರೂಪಣೆ, ವರದಿಗಾರಿಕೆ/ಕಾಫಿ ಎಡಿಟರ್, ಬುಲೆಟಿಂಗ್ ಪ್ರೋಡ್ಯೂಸರ್ ತರಬೇತಿಗಳಿಗೆ ಆಸಕ್ತ ಅರ್ಹ ವಿದ್ಯಾವಂತ ನಿರುದ್ಯೋಗಿ ಯುವಕ/ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. https://kannadanewsnow.com/kannada/commonwealth-games-2022-judoka-vijay-kumar-yadav-wins-bronze/ ನಿಗಧಿತ ನಮೂನೆ ಅರ್ಜಿಯನ್ನು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಆಗಸ್ಟ್ 10 ರೊಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ರಂಗನಾಥ ನಿಲಯ, ಗಾಂಧಿನಗರ, 6ನೇ ತಿರುವು, ‘ಎ’ ಬ್ಲಾಕ್, ಶಿವಮೊಗ್ಗ, ದೂರವಾಣಿ ಸಂಖ್ಯೆ: 08182-224349 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ. https://kannadanewsnow.com/kannada/shimoga-diesel-subsidy-scheme-rythu-shakti-to-be-implemented/
ನವದೆಹಲಿ: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕಗಳ ಭೇಟೆ ಮುಂದುವರೆದಿದೆ. ಇಂದು 60 ಕೆಜಿ ಪುರುಷರ ಜುಡೋ ಸ್ಪರ್ಧೆಯಲ್ಲಿ ಭಾರತದ ವಿಜಯ್ ಕುಮಾರ್ ಯಾದವ್ ಅವರು ಕಂಚಿನ ಪದಕ ಗೆದ್ದಿದ್ದಾರೆ. https://kannadanewsnow.com/kannada/shimoga-diesel-subsidy-scheme-rythu-shakti-to-be-implemented/ ಪುರುಷರ 60 ಕೆಜಿ ಜೂಡೋ ಕಂಚಿನ ಪದಕದ ಪಂದ್ಯದಲ್ಲಿ ವಿಜಯ್ ಕುಮಾರ್ ಯಾದವ್ ಸೈಪ್ರಸ್ನ ಪೆಟ್ರೋಸ್ ಕ್ರಿಟೊಡೌಲಿಡೆಸ್ ಅವರನ್ನು ಸೋಲಿಸಿದರು. ಬೌಟ್ ಮಿಂಚಿನಂತೆ ಕೊನೆಗೊಂಡಿತು. ಈ ಮೂಲಕ ಭಾರತಕ್ಕೆ ಕಂಚಿನ ಪದಕವನ್ನು ವಿಜಯ್ ಕುಮಾರ್ ಯಾದವ್ ತಂದುಕೊಟ್ಟಿದ್ದಾರೆ.
ಶಿವಮೊಗ್ಗ : 2022-23ನೇ ಸಾಲಿನಲ್ಲಿ ಕೃಷಿ ಇಲಾಖೆ ವತಿಯಿಂದ “ರೈತಶಕ್ತಿ” ಎಂಬ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ಇಂಧನವೆಚ್ಚದ ಭಾರವನ್ನು ಕಡಿಮೆ ಮಾಡಲು ಪ್ರತಿ ಎಕರೆಗೆ 250/- ರೂ.ನಂತೆ ಗರಿಷ್ಟ 5 ಎಕರೆಯವರೆಗೆ 1250/- ರೂ.ಗಳನ್ನು ಡಿಬಿಟಿ ಮೂಲಕ ಡೀಸೆಲ್ ಸಬ್ಸಿಡಿ ನೀಡುವ “ರೈತಶಕ್ತಿ” ಯೋಜನೆ ಇದಾಗಿದೆ. ಈ ಯೋಜನೆಯಡಿ ರೈತರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಗರಿಷ್ಟ 5 ಎಕರೆಯವರೆಗೆ ಫ್ರೂಟ್ಸ್ ಪೋರ್ಟಲ್ನಲ್ಲ್ಲಿ(FRUITS)ನೋಂದಣಿ ಗುರುತಿನ (FID) ಸಂಖ್ಯೆಯಲ್ಲಿ ನಮೂದಿಸಿರುವ ಹಿಡುವಳಿಯ ಆಧಾರದ ಮೇಲೆ ರೈತರಿಗೆ ಡೀಸೆಲ್ ಸಹಾಯಧನ ವರ್ಗಾವಣೆಯಾಗಲಿದೆ. ಜಿಲ್ಲೆಯ ರೈತರು ಈ ಯೋಜನೆಯ ಪ್ರಯೋಜನೆ ಪಡೆಯಲು ಹತ್ತಿರದ ರೈತಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ಗಳ ವಿಸ್ತೀರ್ಣವನ್ನು ಫ್ರೂಟ್ಸ್ ಪೋರ್ಟಲ್ನಲ್ಲಿ ಆಗಸ್ಟ್ 20 ರೊಳಗೆ ನೋಂದಣಿ ಮಾಡಿಸಬೇಕು. https://kannadanewsnow.com/kannada/verification-of-itr-timeline-reduced-to-30-days-from-120/ ಈ ದಿನಾಂಕದವರೆಗೆ ಫ್ರೂಟ್ಸ್ ಪೋರ್ಟಲ್ನಲ್ಲಿ ನೋಂದಾವಣಿಯಾದ ವಿಸ್ತೀರ್ಣಕ್ಕನುಗುಣವಾಗಿ ಡೀಸೆಲ್…