Subscribe to Updates
Get the latest creative news from FooBar about art, design and business.
Author: KNN IT TEAM
ಮಂಡ್ಯ : ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಮಳೆಯಿಂದಾಗಿ ದಶಪಥ ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿರುವುದರಿಂದ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. https://kannadanewsnow.com/kannada/pakistan-army-helicopter-with-6-senior-officers-on-relief-mission-feared-crashed-in-balochistan-province/ ನೂತನವಾಗಿ ನಿರ್ಮಾಣವಾಗುತ್ತಿರುವ ದಶಪಥ ರಸ್ತೆಯ ಮೇಲೆ ನೀರು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯದಿಂದ ಮದ್ದೂರು ಮಾರ್ಗದ ಸಂಚಾರ ಬಂದ್ ಆಗಿದೆ. ಬೆಂಗಳೂರಿನಿಂದ ಮೈಸೂರಿಗೆ ಹೋಗಲು ಬದಲಿ ಮಾರ್ಗಗಳನ್ನು ಸೂಚನೆ ನೀಡಲಾಗಿದ್ದು, ಬೆಂಗಳೂರು-ಮದ್ದೂರು- ಮಳವಳ್ಳಿ -ಬನ್ನೂರು ಮೂಲಕ ಮೈಸೂರಿಗೆತೆರಳಬೇಕು. ಅಥವಾ ಬೆಂಗಳೂರಿನಿಂದ ನೆಲಮಂಗಲ- ಬೆಳ್ಳೂರು ಕ್ರಾಸ್- ನಾಗಮಂಗಲ-ಪಾಂಡವಪುರ ಶ್ರೀರಂಗಪಟ್ಟಣ ಮೂಲಕ ಮೈಸೂರು ತಲುಪಬೇಕು ಎಂದು ತಿಳಿಸಲಾಗಿದೆ. https://kannadanewsnow.com/kannada/monkeypox-another-case-reported-in-kerala-state-health-minister/ ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ರಾಜ್ಯದ ಹಲವೆಡೆ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಂಗಳೂರು, ಮಂಡ್ಯ, ರಾಮನಗರ, ಹಾಸನ, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ದಾವಣಗೆರೆ, ಶಿವಮೊಗ್ಗ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಜನರು ಪರದಾಡುವಂತಾಗಿದೆ. ಹಾಸನ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ, ಹಾಸನ ನಗರ ಠಾಣೆ ಮುಂಭಾಗದ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಜಲಾವೃತವಾಗಿದೆ, ಅರಸೀಕೆರೆ ತಾಲೂಕಿನಲ್ಲೂ ಭಾರೀ…
ಇಸ್ಲಾಮಾಬಾದ್: XII ಕಾರ್ಪ್ಸ್‌ನ ಉನ್ನತ ಕಮಾಂಡರ್ ಸೇರಿದಂತೆ ಆರು ಹಿರಿಯ ಸೇನಾ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದ ಪಾಕಿಸ್ತಾನ ಸೇನೆಯ ಹೆಲಿಕಾಪ್ಟರ್ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪತನಗೊಂಡಿರುವ ಶಂಕೆ ವ್ಯಕ್ತವಾಗಿದೆ. ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಯಲ್ಲಿದ್ದ ಈ ಹೆಲಿಕಾಪ್ಟರ್ ವಾಯು ಸಂಚಾರ ನಿಯಂತ್ರಣದ ಸಂಪರ್ಕವನ್ನು ಕಳೆದುಕೊಂಡಿದೆ. ಹೆಲಿಕಾಪ್ಟರ್ ಸಂಪರ್ಕ ಕಡಿತಗೊಂಡಾಗ ಬಲೂಚಿಸ್ತಾನದ ಲಾಸ್ಬೆಲಾದಲ್ಲಿ ಹಾರಾಟ ನಡೆಸುತ್ತಿತ್ತು. “ಬಲೂಚಿಸ್ತಾನದ ಲಾಸ್ಬೆಲಾದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಯಲ್ಲಿದ್ದ ಪಾಕಿಸ್ತಾನ ಸೇನೆಯ ವಾಯುಯಾನ ಹೆಲಿಕಾಪ್ಟರ್ ATC ಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿದೆ. ಬಲೂಚಿಸ್ತಾನದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುವ ಕಮಾಂಡರ್ 12 ಕಾರ್ಪ್ಸ್ ಸೇರಿದಂತೆ 6 ವ್ಯಕ್ತಿಗಳು ವಿಮಾನದಲ್ಲಿದ್ದರು. ಹೆಲಿಕಾಪ್ಟರ್‌ಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ” ಪಾಕಿಸ್ತಾನ ಸಶಸ್ತ್ರ ಪಡೆಗಳ ಮಾಧ್ಯಮ ವಿಭಾಗದ ಪ್ರಧಾನ ನಿರ್ದೇಶಕ ಮೇಜರ್ ಜನರಲ್ ಬಾಬರ್ ಇಫ್ತಿಕರ್ ತಿಳಿಸಿದ್ದಾರೆ. Very upset news; The wreckage of the helicopter found, unfortunately nobody survived. Commander 12 Corps Lt. Gen Sarfraz Ali among…
ಕೇರಳ : ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ. ನಿನ್ನೆಯಷ್ಟೆ ಕೇರಳದಲ್ಲಿ ಮಂಕಿಪಾಕ್ಸ್ ಸೋಂಕಿತ ಯುವಕ ಸಾವನ್ನಪ್ಪಿದ್ದ, ಇದರ ಬೆನ್ನಲ್ಲೆ ಇಂದು ಮತ್ತೊಂದು ಪ್ರಕರಣ ವರದಿಯಾಗಿದೆ.30 ವರ್ಷದ ವ್ಯಕ್ತಿಯೊಬ್ಬರು ಮಲಪ್ಪುರಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಯುಎಇಯಿಂದ ಜುಲೈ 27 ರಂದು ಕೋಝಿಕೋಡ್ ವಿಮಾನ ನಿಲ್ದಾಣವನ್ನು ತಲುಪಿದ್ದರು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. https://twitter.com/ANI/status/1554361575687204865
ಬೆಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ಹಾಗೂ ಸುರತ್ಕಲ್ ಫಾಜಿಲ್ ಹತ್ಯೆಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಶೀಘ್ರವೇ ಅಪರಾಧಿಗಳನ್ನು ಕಾನೂನಿ ಕುಣಿಕೆಗೆ ತರಲಿದ್ದಾರೆ ಎಂದು ಗೃಹ ಸಚಿವ ಅರಗಜ್ಞಾನೇಂದ್ರ ಹೇಳಿದ್ದಾರೆ. https://kannadanewsnow.com/kannada/siddaramaiah-has-ruined-the-state-for-five-years-and-is-now-celebrating-siddharamotsava/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಬೆಂಗಳೂರಿನಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಸಹಕರಿಸಿದವರ ಬಂಧನವಾಗಿದೆ, ಹತ್ಯೆ ಮಾಡಿದವರ ಬಂಧನ ಶೀಘ್ರವೇ ನಡೆಯಲಿದೆ. ಶೀಘ್ರವೇ ಅಪರಾಧಿಗಳನ್ನು ಕಾನೂನಿ ಕುಣಿಕೆಗೆ ತರಲಿದ್ದಾರೆ ಎಂದಿದ್ದಾರೆ. https://kannadanewsnow.com/kannada/national-herald-office-searched-days-after-sonia-gandhis-questioning/ ಮಸೂದ್ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಫಾಜಿಲ್ ಹತ್ಯೆಗೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ ಹಾಗೂ ಅಪರಾಧಿಗಳನ್ನು ಬಂಧಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರು: ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ದಿನದಂದು ಸಿದ್ದರಾಮೋತ್ಸವ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಸಿದ್ದರಾಮಯ್ಯ ಅವರು ತಮ್ಮ 5 ವರ್ಷ ರಾಜ್ಯವನ್ನು ಹಾಳು ಮಾಡಿ ಈಗ ಸಿದ್ದರಾಮೋತ್ಸವ ಮಾಡಿಕೊಳ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. https://kannadanewsnow.com/kannada/bbmp-officials-remove-unauthorised-flexes-banners/ ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ 5 ವರ್ಷ ಈ ರಾಜ್ಯದಲ್ಲಿ ಮಾಡಬಾರದ್ದನ್ನು ಮಾಡಿದೆ. ಆದರೆ ಈಗ ಜನರ ಮನಸ್ಸನ್ನು ಏನೋ ಮಾಡ್ತೀವಿ ಅಂತ ತೋರಿಸೋಕೆ ಪೋಸ್ ಕೊಡ್ತಿದ್ದಾರೆ. ಜನ ಯಾರು ಇದನ್ನು ನಂಬೋದಿಲ್ಲ ಎಂದು ಲೇವಡಿ ಮಾಡಿದ್ದಾರೆ. ಲಾ ಅಂಡ್ ಅರ್ಡರ್’ ಪರಿಸ್ಥಿತಿ ಹೇಗೆ ಹಾಳಾಗ್ತಿದೆ ಅಂತ ಈಗ ಗೊತ್ತಾಗುತ್ತಿದೆ. ಅಲ್ಪಸಂಖ್ಯಾತ, ಕೆಲ ಮತಾಂಧರ ಮೇಲೆ ಇದ್ದ ಕೇಸ್‍ಗಳನ್ನ ವಾಪಸ್ ಪಡೆದಿದ್ದರು ಎಂದು ಆರೋಪಿಸಿದ್ದಾರೆ.
Bigg news:ನ್ಯಾಷನಲ್ ಹೆರಾಲ್ಡ್ ಪ್ರಕರಣ : ಸೋನಿಯಾ ಗಾಂಧಿ ವಿಚಾರಣೆ ಬಳಿಕ ನ್ಯಾಷನಲ್ ಹೆರಾಲ್ಡ್ ಕಚೇರಿ ಮೇಲೆ ಇಡಿ ದಾಳಿ
ನವದೆಹಲಿ : ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸಿದ ಕೆಲವೇ ದಿನಗಳ ನಂತರ, ತನಿಖಾ ಸಂಸ್ಥೆ ಇಂದು ಪತ್ರಿಕೆಯ ಕಚೇರಿಗಳು ಸೇರಿದಂತೆ ಸುಮಾರು 10 ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ. https://kannadanewsnow.com/kannada/former-cm-hd-kumaraswamys-convoy-meets-with-an-accident-three-seriously-injured/ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಳೆದ ವಾರ (ಜುಲೈ 27) ಮೂರನೇ ಬಾರಿಗೆ ಇಡಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಮೂರು ಗಂಟೆಗಳ ಕಾಲ ಪ್ರಶ್ನಿಸಿತ್ತು. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲೀಕತ್ವವನ್ನು ಹೊಂದಿರುವ ಕಾಂಗ್ರೆಸ್ ಪ್ರಚಾರದ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್‌ನಲ್ಲಿನ ಹಣಕಾಸಿನ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಲಾಗಿದೆ. ಕಾಂಗ್ರೆಸ್ ನಾಯಕರಾದ ಪವನ್ ಬನ್ಸಾಲ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಡಿ ಈ ಹಿಂದೆ ಪ್ರಶ್ನಿಸಿತ್ತು. ಜೂನ್‌ನಲ್ಲಿ ಐದು ದಿನಗಳ ಕಾಲ 50 ಗಂಟೆಗಳ ಕಾಲ ನಡೆದ ಅಧಿವೇಶನಗಳಲ್ಲಿ ರಾಹುಲ್ ಗಾಂಧಿಯವರನ್ನು ಈ ಪ್ರಕರಣದಲ್ಲಿ ಇಡಿ ಪ್ರಶ್ನಿಸಿತ್ತು.…
ಮಂಗಳೂರು : ಮಂಗಳೂರಿನ ಸುರತ್ಕಲ್ ನಲ್ಲಿ ಫಾಜಿಲ್ ಹತ್ಯೆ ಪ್ರಕಣರಣ ಸಂಬಂಧ ಸತತ ಕಾರ್ಯಾಚರಣೆ ಬಳಿಕ ಮಂಗಳೂರು ಸಿಸಿಬಿ ಪೊಲೀಸರು 6 ಆರೋಪಿಗಳನ್ನು ಬಂಧಿಸಿದ್ದಾರೆ. https://kannadanewsnow.com/kannada/garlic-benefits-swallow-two-garlic-buds-on-an-empty-stomach-daily-diseases-will-not-wander-around/ ಮಂಗಳೂರು ಸಿಸಿಬಿ ಪೊಲೀಸರು ಸತತ ಕಾರ್ಯಾಚರಣೆ ಬಳಿಕ ಫಾಜಿಲ್ ಹತ್ಯೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ ಸುಹಾಸ್ ಶೆಟ್ಟಿ, ಮೋಹನ್ ಅಲಿಯಾಸ್ ನೇಪಾಳಿ ಮೋಹನ್, ಗಿರಿಧರ್, ಅಭಿಷೇಕ್, ಶ್ರೀನಿವಾಸ್, ದೀಕ್ಷಿತ್ ಬಂಧಿತರು. ಬಂಧಿತ 6 ಜನ ಆರೋಪಿಗಳು ಫಾಜಿಲ್ ಹತ್ಯೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದರು. ಇಯಾನ್ ಕಾರಿನ ಮಾಲೀಕ ಅಜಿತ್ ನನ್ನು ಈಗಾಗಲೇ ಬಂಧಿಸಲಾಗಿತ್ತು. ಈ ಮೂಲಕ ಫಾಜಿಲ್ ಹತ್ಯೆ ಪ್ರಕರಣದಲ್ಲಿ ಸದ್ಯ ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. https://kannadanewsnow.com/kannada/garlic-benefits-swallow-two-garlic-buds-on-an-empty-stomach-daily-diseases-will-not-wander-around/
ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ಪ್ಲೆಕ್ಸ್ ಬ್ಯಾನರ್ ಗಳನ್ನು ಬಿಬಿಎಂಪಿ ತೆರವು ಮಾಡುತ್ತಿದ್ದಾರೆ. ಅನುಮತಿ ಇಲ್ಲದೆ ನಿರ್ಮಾಣವಾಗಿರುವ ಅಂಗಡಿ ಮತ್ತು ಬ್ಯಾನರ್ ಗಳನ್ನು ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ. https://kannadanewsnow.com/kannada/tax-raids-on-big-names-linked-to-tamil-film-industry/ ನಗರದಲ್ಲಿ ಫ್ಲೆಕ್ಸ್ ಆಳವಡಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.ಫ್ಲೆಕ್ಸ್ ಬ್ಯಾನರ್ ಬಳಕೆ ಮಾಡಬಾರದು ಅಂತಾ ನಿರ್ದೇಶನ ಇದ್ರೂ ಜನಪ್ರತಿನಿಧಿಗಳೇ ಇದನ್ನು ಉಲ್ಲಂಘಿಸುತ್ತಿದ್ದಾರೆ. ಇವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕೋಕೆ ಬಿಬಿಎಂಪಿ ಹಿಂದೇಟು ಹಾಕುತ್ತಿದೆ. ಆದರೆ ಈಗ ಕೊನೆಗೂ ಎಚ್ಚೆತ್ತು ಗಾಂಧಿನಗರದಲ್ಲಿ ಅಕ್ರಮ ಪ್ಲೆಕ್ಸ್ ಬ್ಯಾನರ್ ಅಂಗಡಿಗಳಿಗೆ ಬಿಸಿ ಮುಟ್ಟಿಸಿದೆ.
ನವದೆಹಲಿ: ಇಂದು ಭಾರತದ ರಾಷ್ಟ್ರಧ್ವಜದ ವಿನ್ಯಾಸಕ ʻಪಿಂಗಲಿ ವೆಂಕಯ್ಯ(Pingali Venkayya)ʼ ಅವರ ಜನ್ಮದಿನ. ಈ ದಿನದ ಅಂಗವಾಗಿ ಕೇಂದ್ರ ಸರ್ಕಾರ ಇಂದು ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪಿಂಗಲಿ ವೆಂಕಯ್ಯ ಜನ್ಮದಿನಕ್ಕೆ ಶುಭಕೋರಿದ್ದಾರೆ. “ಮಹಾನ್ ಪಿಂಗಲಿ ವೆಂಕಯ್ಯ ಅವರ ಜನ್ಮದಿನದಂದು ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ. ನಾವು ಹೆಮ್ಮೆಪಡುವ ತ್ರಿವರ್ಣ ಧ್ವಜವನ್ನು ನಮಗೆ ನೀಡುವ ಅವರ ಪ್ರಯತ್ನಕ್ಕೆ ನಮ್ಮ ದೇಶವು ಅವರಿಗೆ ಎಂದೆಂದಿಗೂ ಋಣಿಯಾಗಿದೆ. ರಾಷ್ಟ್ರದ ಪ್ರಗತಿಗಾಗಿ ತ್ರಿವರ್ಣ ಧ್ವಜದಿಂದ ಶಕ್ತಿ ಮತ್ತು ಸ್ಫೂರ್ತಿಯನ್ನು ಪಡೆದು ನಾವು ಕೆಲಸ ಮಾಡುವುದನ್ನು ಮುಂದುವರಿಸೋಣ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. I pay homage to the great Pingali Venkayya on his birth anniversary. Our nation will forever be indebted to him for his efforts of giving us the Tricolour, which we are very…
ಹುಬ್ಬಳ್ಳಿ : ರಾಜ್ಯದ ಸರ್ಕಾರಿ ಕಚೇರಿಯಲ್ಲಿ ಪ್ರಿಪೇಡ್ ವಿದ್ಯುತ್ ಮೀಟರ್ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ. https://kannadanewsnow.com/kannada/bigg-news-schools-colleges-to-remain-closed-today-due-to-incessant-rains-in-gadag-district/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಕಚೇರಿಗಳು ವಿದ್ಯುತ್ ಬಿಲ್ ಬಾಕಿ ಇಟ್ಟುಕೊಳ್ಳುತ್ತಿದ್ದು, ಯಾವ್ಯಾವ ಸರ್ಕಾರಿ ಇಲಾಖೆಯಲ್ಲಿ ವಿದ್ಯುತ್ ಬಿಲ್ ಬಾಕಿಯಿದೆ ಎಂದು ಪರಿಶೀಲಿಸಿ, ಅದನ್ನು ಪಾವತಿಸುವಂತೆ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಪ್ರಿಪೇಡ್ ಮೀಟರ್ ಅಳವಡಿಸುವ ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ. ಇನ್ನು ರಾಜ್ಯದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಹೊಸದಾಗಿ ರಾಜ್ಯದ 37 ಕಡೆಗಳಲ್ಲಿ ನೂತನ ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಆದ್ಯತೆ ಮೇರೆಗೆ ಉಪ ಕೇಂದ್ರ ಸ್ಥಾಪನೆ ಕಾರ್ಯ ನಡೆಯುತ್ತಿದೆ. ಮತ್ತಷ್ಟು ಉಪಕೇಂದ್ರ ಸ್ಥಾಪಿಸಲು ಹೆಸ್ಕಾಂ ವ್ಯಾಪ್ತಿಯಲ್ಲಿ ಬೇಡಿಕೆಗಳು ಬರುತ್ತಿವೆ ಎಂದು ಹೇಳಿದ್ದಾರೆ.