Author: KNN IT TEAM

ಧಾರವಾಡ: ಕಳಸಾ ಬಂಡೂರಿಗೆ ಸಚಿವ ಶಂಕರ್‌ ಪಾಟೀಲ್ ಮುನೇನಕೊಪ್ಪ ಅವರು ಜನರಿಗೆ ಸಿಹಿ ಸುದ್ದಿ ಕೊಡಲಿದ್ದಾರೆ. ಇನ್ನೂ 60 ದಿನಗಳಲ್ಲಿ ಒಂದು ಒಳ್ಳೆ ಸಿಹಿ‌ ಸುದ್ದಿ‌ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಈ‌ ವಿಚಾರವಾಗಿ ಧಾರವಾಡದಲ್ಲಿ ಪ್ರತಿಕ್ರಿಯಿಸಿ, ಕಳಸಾ ಬಂಡೂರಿಗೆ ಕಾಂಗ್ರೆಸ್ ವಿರೋಧ ಮಾಡುತ್ತಲೇ ಬಂದಿದೆ. ಈ ಹಿಂದೆ ಕಳಸಾ‌ ಬಂಡೂರಿಗೆ ಒಂದು ಹನಿ ನೀರು ಬಿಡಲ್ಲ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಳಸಾ‌ ಬಂಡೂರಿ ಬಗ್ಗೆ ಮಾತನಾಡುವಂತದ್ದು‌ ಹಾಗೂ ಸಮಾವೇಶ ಮಾಡುವಂತ ನೈತಿಕತೆ ಕಾಂಗ್ರೆಸ್‌ನವರಿಗೆ ಇಲ್ಲ ಎಂದು ಹೇಳಿದ್ದಾರೆ. https://kannadanewsnow.com/kannada/bmtc-bus-services-extended-to-chikkaballapur-ksrtc-raises-objection/ ಟ್ರಿಬ್ಯುನಲ್ ಸರಿ ಪಡಿಸುವ ಕೆಲಸ ಅವರಿಂದ ಯಾವತ್ತೂ ಆಗಿಲ್ಲ. ರೈತರ ಮೇಲೆ ಗೋಲಿಬಾರ್ ಹಾಗೂ ಲಾಠಿ ಚಾರ್ಜ್ ಮಾಡಿದ್ದು ಕಾಂಗ್ರೆಸ್, ನಾನು ಅದೇ ಭಾಗದಲ್ಲಿ ಹುಟ್ಟಿದ್ದೇನೆ. ನಾವು ಹೋರಾಟದಿಂದ ನೀರು ಪಡೆಯುವಂತಹ ಪರಿಸ್ಥಿತಿ ಬಂದಿದೆ. ನಮ್ಮ ಭಾಗದ ಅನೇಕ ರೈತರಿಗೆ ಚಿತ್ರದುರ್ಗ ಹಾಗೂ ಬಳ್ಳಾರಿ ಜೈಲಿಗೆ ಹಾಕುವಂತೆ…

Read More

ಬೆಂಗಳೂರು: ಏರ್ ಇಂಡಿಯಾ ವಿಮಾನದಲ್ಲಿ ಸಹಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪ ಹೊತ್ತಿರುವ ಶಂಕರ್ ಮಿಶ್ರಾ ಅವರನ್ನು ಬೆಂಗಳೂರಿನಲ್ಲಿ ಬಂಧಿಸಿ ದೆಹಲಿಗೆ ಕರೆತರಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಮಿಶ್ರಾ ಅವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಅಂಥ ಇದೇ ವೇಳೇ ತಿಳಿದು ಬಂದಿದೆ. ಪೈಲಟ್ ಮತ್ತು ಸಹ-ಪೈಲಟ್ ಸೇರಿದಂತೆ ಏರ್ ಇಂಡಿಯಾ ಸಿಬ್ಬಂದಿಗೆ ಶುಕ್ರವಾರ ಸಮನ್ಸ್ ಜಾರಿ ಮಾಡಲಾಯಿತು.

Read More

ಬೆಂಗಳೂರು: ಸದ್ಯ ಬಿಎಂಟಿಸಿ ಬಸ್‌ ಬೆಂಗಳೂರು ನಗರ , ಗ್ರಾಮಾಂತರ ಜಿಲ್ಲೆಗಳಿಗೆ ಮಾತ್ರ ಓಡಾಡುತ್ತಿತ್ತು. ಆದರೆ ಇದೀಗ ಚಿಕ್ಕಬಳ್ಳಾಪುರಕ್ಕೂ ಬಿಎಂಟಿಸಿಬಸ್‌ ವಿಸ್ತರಣೆಯಾಗಿದೆ. ಚಿಕ್ಕಬಳ್ಳಾಪುರ ಜನರ ಬೇಡಿಕೆಗೆ ಸ್ಪಂದಿಸಿ, BMTC ಬೋರ್ಡ್ ಅನುಮತಿ ನೀಡಿದ್ದಾರೆ. ಆದ್ರೆ ಇದರಿಂದ ಎಚ್ಚೆತ್ತ ಕೆಎಸ್​ಆರ್​ಟಿಸಿ ಆಕ್ಷೇಪ ವ್ಯಕ್ತಪಡಿಸಿದೆ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಸುಮಾರು 60 ಕಿ.ಮೀ ಅಂತರವಿದೆ. ಹೀಗಾಗಿ ಬಸ್ ಸಂಚಾರ ವಿಸ್ತರಿಸಲು ಅವಕಾಶ ಇಲ್ಲ ಎಂದು ಕೆಎಸ್​​ಆರ್​ಟಿಸಿ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. https://kannadanewsnow.com/kannada/karnatakas-tableau-wont-be-in-republic-day-parade-this-time/ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾತ್ರ ಬಿಎಂಟಿಸಿ ಸಂಚಾರಕ್ಕೆ ಅನುಮತಿ ಇದೆ. ಆದರೆ ಚಿಕ್ಕಬಳ್ಳಾಪುರಕ್ಕೂ ಸಂಚಾರ ವಿಸ್ತರಣೆ ಮಾಡಿರುವ ಹಿನ್ನಲೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಕೆಎಸ್​ಆರ್​ಟಿಸಿ ಅಧಿಕಾರಿಗಳು BMTC ನಡೆ ಖಂಡಿಸಿ ಸರ್ಕಾರಕ್ಕೆ ಪತ್ರ ಬರೆಯಲು ಮುಂದಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಬಿಎಂಟಿಸಿ ಸಂಚಾರ ಮಾಡಿದರೆ KSRTCಗೆ ಆದಾಯಕ್ಕೆ ಹೊಡೆತ ಬೀಳುವ ಭೀತಿ ಹಿನ್ನಲೆ ಪತ್ರ ಬರೆಯಲು ಮುಂದಾಗಿದ್ದಾರೆ. https://kannadanewsnow.com/kannada/karnatakas-tableau-wont-be-in-republic-day-parade-this-time/

Read More

ನವದೆಹಲಿ: ಗಣರಾಜ್ಯೋತ್ಸವದಲ್ಲಿ ಈ ಬಾರಿ ಕರ್ನಾಟಕದ ಸ್ಥಬ್ದ ಚಿತ್ರ ಇರೋಲ್ಲ ಎನ್ನಲಾಗಿದೆ. ಬೇರೆ ಬೇರೆ ರಾಜ್ಯಗಳಿಗೆ ಅವಕಾಶ ನೀಡುವ ನೀಡುವ ನಿಟ್ಟಿನಲ್ಲಿ ಈ ಬಾರಿ ಕೇಂದ್ರ ಸರ್ಕಾರದ ಅಧಿಕಾರಿಗಳು ಕರ್ನಾಟಕದ ಸ್ಥಬ್ದ ಚಿತ್ರ ಮೆರವಣಿಗೆ ಅವಕಾಶ ನೀಡಿಲ್ಲ ಎನ್ನಲಾಗಿದೆ. ಈ ಬಾರಿ ಕರ್ನಾಟಕದಿಂದ ನಾರಿ ಶಕ್ತಿಯನ್ನು ಒಳಗೊಂಡ ಸ್ಥಬ್ದ ಚಿತ್ರವನ್ನು ಗಣರಾಜ್ಯೋತ್ಸವದಲ್ಲಿ ಭಾಗವಹಿಸಲಿತ್ತು ಎನ್ನಲಾಗಿದೆ. ಸಹಜವಾಗಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ಥಬ್ದ ಚಿತ್ರ ಅನುತಿ ನಿರಾಕರಣೆ ಮಾಡಿರುವುದು ಕನ್ನಡಿಗರಿಗೆ ಬೇಸರ ಮೂಡಿಸಿದೆ. ಅಂದ ಹಾಗೇ ಕಳೆದ 13 ವರ್ಷಗಳಿಂದ ಕರ್ನಾಟಕದ ಸ್ಥಬ್ದ ಚಿತ್ರಗಳು ಗಣರಾಜ್ಯೋತ್ಸವದ ವೇಳೇಯಲ್ಲಿ ಭಾಗವಹಿಸುತ್ತಿದ್ದವು. ಹಲವು ಬಾರಿ ಬಹುಮಾನಗಳನ್ನು ಕೂಡ ಪಡೆದುಕೊಂಡಿದೆ. ಈ ನಡುವೆ ಸ್ಥಬ್ದ ಚಿತ್ರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡದ ಹಿನ್ನಲೆಯಲ್ಲಿ, ಕನ್ನಡ ಪರ ಸಂಘಟನೆಗಳು ಕೇಂದ್ರದ ವಿರುದ್ದ ಕಿಡಿಕಾರಿದ್ದು, ಅನುಮತಿ ನೀಡದೇ ಹೋದ್ರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ಕೂಡ ನೀಡಿದೆ.

Read More

ಬೆಂಗಳೂರು: ಸುಮಾರು 13 ವರ್ಷಗಳಿಂದ ಗಣರಾಜ್ಯೋತ್ಸವ ಪರೇಡ್‍ನಲ್ಲಿ ರಾಜ್ಯದ ಸಂಸ್ಕೃತಿ ಮತ್ತು ಪರಂಪರೆಯನ್ನು ಸ್ಥಬ್ಧಚಿತ್ರ ಪ್ರದರ್ಶನಗೊಳ್ಳುತ್ತಿತ್ತು. ಆದರೆ ಈ ಬಾರಿ ಬೇರೆ ರಾಜ್ಯಗಳಿಗೂ ಅವಕಾಶ ಕೊಡವ ಹಿನ್ನೆಲೆಯಲ್ಲಿ ಕರ್ನಾಟಕ ಈ ಬಾರಿ ಅವಕಾಶವನ್ನು ಕಳೆದುಕೊಂಡಿದೆ. ರಾಜ್ಯ ಸರ್ಕಾರದ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. 2023ರ ಗಣರಾಜ್ಯೋತ್ಸವದಂದು ಕರ್ನಾಟಕವು ರಾಗಿ ವೈವಿಧ್ಯತೆಯ ಕುರಿತು ಪ್ರದರ್ಶನ ನೀಡುವುದಾಗಿ ಸಲ್ಲಿಸಿದ್ದ ಪ್ರಸ್ತಾಪವನ್ನು ಕೇಂದ್ರವು ತಿರಸ್ಕರಿಸಿದೆ. ಇದರ ಪರಿಣಾಮವಾಗಿ ಜನವರಿ 26ರಂದು ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ವರ್ಣರಂಜಿತ ಗಣರಾಜ್ಯೋತ್ಸವ ದಿನದಂದು ಪರೇಡ್‍ನಲ್ಲಿ ಕರ್ನಾಟಕ 13 ವರ್ಷಗಳ ನಂತರ ಪ್ರತಿನಿಧಿಸುತ್ತಿಲ್ಲ ಎಂದು ತಿಳಿಸಿದ್ದಾರೆ.ತಜ್ಞರ ಸಮಿತಿಯ ಮೊದಲ ಕೆಲವು ಸುತ್ತಿನ ಮೌಲ್ಯಮಾಪನದಲ್ಲಿ ಕರ್ನಾಟಕ ಪ್ರತಿನಿಧಿಸಿದ್ದ ವಿಷಯಾಧಾರಿತ ವಿನ್ಯಾಸ ಹಾಗೂ ಸಂಗೀತವು ಮೆಚ್ಚುಗೆಯನ್ನು ಪಡೆದಿತ್ತು. https://kannadanewsnow.com/kannada/inhuman-act-in-koppal-boy-beaten-up-for-not-repaying-his-fathers-debt/ ಆದರೆ ಕೊನೆಯ ಸುತ್ತಿನಲ್ಲಿ ಕರ್ನಾಟಕದ ಸ್ಥಬ್ಧಚಿತ್ರನ್ನು ತಿರಸ್ಕರಿಸಲಾಗಿದೆ. ಅಲ್ಲದೇ ಇತರ ರಾಜ್ಯಗಳು ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ. ಹಲವು ವರ್ಷಗಳಿಂದ ಕೆಲವೇ ರಾಜ್ಯಗಳಿಗೆ ಅವಕಾಶವನ್ನು ನೀಡುತ್ತಿದ್ದಾರೆ ಎಂದು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ ಎಂದು ಮಾಹಿತಿ…

Read More

ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಕೆ.ಹೊಸೂರು ಗ್ರಾಮದಲ್ಲಿ ತಂದೆ ಮಾಡಿದ ಸಾಲ ತೀರಿಸಿಲ್ಲ ಎಂಬ ಕಾರಣಕ್ಕೆ ಮಗನಿಗೆ ಶಿಕ್ಷೆ ಕೊಟ್ಟಿದ್ದಾರೆ. ಸಾಲ ಮರು ಪಾವತಿ ಮಾಡದಿರುವುದರಿಂದ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿರುವ ಅಮಾನುಷ ಘಟನೆ ನಡೆದಿದೆ. 14 ವರ್ಷದ ಬಾಲಕನಿಗೆ ದೊಡ್ಡ ಬಸಪ್ಪ ಮಡಿವಾಳರ ಥಳಿಸಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಲ್ಲ. ಇದರಿಂದ ಥಳಿತಕ್ಕೆ ಒಳಗಾದ ಬಾಲಕನ ತಾಯಿ ಮಂಜುಳಾ ಡಿ.31 ರಂದು ಎಸ್‍ಪಿಗೆ ದೂರು ನೀಡಿದ್ದು, ತಡವಾಗಿ ಬೆಳಕಿಗೆ ಬಂದಿದೆ.ತಂದೆ ಮರಿಯಪ್ಪ ಮಡಿವಾಳರ ಮಾಡಿದ ಸಾಲ ತೀರಿಸಿಲ್ಲ ಎಂದು ಸಾಲ ಕೊಟ್ಟವರು ನನ್ನ ಮಗನಿಗೆ ಥಳಿಸಿದ್ದಾರೆ. https://kannadanewsnow.com/kannada/siddaramaiah-has-decimated-the-congress-stop-playing-pranks-and-know-about-rss-ks-eshwarappa/ ಇದೀಗ ಈ ಬಗ್ಗೆ ಕನಕರಾಯ ಮಡಿವಾಳರ, ರಾಜೇಶ್ವರಿ ಮಡಿವಾಳರ, ವೀರಭದ್ರಪ್ಪ ಮಡಿವಾಳರ, ಗಂಗಮ್ಮ ಮಡಿವಾಳರ, ನಿರುಪಾದೆಪ್ಪ ಮಡಿವಾಳರ, ಬಸವರಾಜ ಮಡಿವಾಳರ ಎನ್ನುವವರ ವಿರುದ್ಧ ಬಾಲಕನ ತಾಯಿ ಮಂಜುಳಾ ದೂರು ನೀಡಿದ್ದಾರೆ.ಮರಿಯಪ್ಪ ಮಡಿವಾಳರ ಎಂಬಾತ 40 ಸಾವಿರ ರೂಪಾಯಿ ಸಾಲ ಪಡೆದಿದ್ದನಂತೆ. ನಂತರ…

Read More

ನವದೆಹಲಿ: ಗುರುಗ್ರಾಮದಲ್ಲಿ ಮತ್ತೊಂದು ಭಯನಾಕ ಸಿಸಿಟಿವಿ ದೃಶ್ಯಾವಳಿಗಳು ವೈರಲ್‌ ಆಗಿದೆ. ವೈರಲ್‌ ವಿಡಿಯೋದಲ್ಲಿ ಒಬ್ಬ ಪುರುಷನು ಮಹಿಳೆಗೆ ಹೆಲ್ಮೆಟ್ ನಿಂದ ಹೊಡೆಯುವುದನ್ನು ಕಾಣಬಹುದಾಗಿದೆ. ಮಹಿಳೆ ತನ್ನ ಬೈಕಿನಲ್ಲಿ ಕುಳಿತುಕೊಳ್ಳಲು ನಿರಾಕರಿಸಿದ್ದರಿಂದ ಆ ವ್ಯಕ್ತಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. “ಕಮಲ್ ಎಂಬ ವ್ಯಕ್ತಿಯು ತನ್ನ ಬೈಕಿನಲ್ಲಿ ತನ್ನೊಂದಿಗೆ ಸವಾರಿ ಮಾಡಲು ನಿರಾಕರಿಸಿದ ಕಾರಣ ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಮಹಿಳೆಯನ್ನು ಹೆಲ್ಮೆಟ್ ನಿಂದ ಹೊಡೆದಿದ್ದಾನೆ” ಎಂದು ಗುರುಗ್ರಾಮದ ಎಸಿಪಿ ಮನೋಜ್ ಕೆ ಸುದ್ದಿ ಸಂಸ್ಥೆ ಗೆ ತಿಳಿಸಿದ್ದಾರೆ. ಐಪಿಸಿಯ ವಿವಿಧ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಎಸಿಪಿ ಮನೋಜ್ ಕೆ ಹೇಳಿದ್ದಾರೆ. https://twitter.com/ANI/status/1611376444718059520  

Read More

ಶಿವಮೊಗ್ಗ: ಆರ್‌ ಎಸ್‌ ಎಸ್‌ ಒಂದು ದೇಶ ಭಕ್ತ ಸಂಘಟನೆ;ಸಿದ್ದರಾಮಯ್ಯ ಕಪಿಚೇಷ್ಟೆ ಮಾಡುವುದನ್ನು ಬಿಟ್ಟು ರಾಷ್ಟ್ರೀಯ ಸ್ವಯಂಸೇವಕ ಸಂಘಟನೆ ಏನು ಮಾಡಿದೆ ಎಂದು ತಿಳಿದುಕೊಳ್ಳಬೇಕು. ಆರ್​ಎಸ್ಎಸ್ ಬಗ್ಗೆ ಮಾತನಾಡಿದ್ರೆ ಪ್ರಚಾರ ಸಿಗಬಹುದು ಎಂದು ರೀತಿ ಮಾತನಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕೆ.ಎಸ್‌ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿ ಅವರು, ಸಿದ್ದರಾಮಯ್ಯ ಕಾಂಗ್ರೆಸ್‌ ಅನ್ನು ಧೂಳಿಪಟ ಮಾಡುತ್ತಿದ್ದಾರೆ. ಅದು ಗೊತ್ತಿದ್ದರೂ ಕೂಡ ರಾಷ್ಟ್ರ ಭಕ್ತ ಸಂಘಟನೆ ಬಗ್ಗೆ ಹೀಗೆ ಮಾತನಾಡುತ್ತಿದ್ದಾರೆ‌. ಇದರಿಂದ ಅವರು ಇನ್ನೂ ಧೂಳಿಪಟವಾಗುತ್ತಾರೆ‌ ಎಂದರು. ಪ್ರಪಂಚದಲ್ಲಿ ಇಂತಹ ಯಾವುದೇ ಸಂಘಟನೆ ಇಲ್ಲ. ಭಯೋತ್ಪಾದಕ ಸಂಘಟನೆಗಳಿಗೆ ಸಪೋರ್ಟ್ ಮಾಡುತ್ತಿರುವುದು‌ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ. ಪಿಎಫ್ಐ ಬ್ಯಾನ್ ಆಯ್ತು, ಅದು ಯಾಕೆ ಬ್ಯಾನ್ ಆಯ್ತು?‌, ರಾಷ್ಟ್ರದ್ರೋಹಿ ಕೆಲಸಗಳನ್ನು ಮಾಡ್ತಾ ಇದೆ ಎಂದು ಬ್ಯಾನ್ ಮಾಡಲಾಯಿತು. https://kannadanewsnow.com/kannada/big-news-complainant-dies-after-he-says-he-will-watch-it-in-court-in-the-style-of-a-kanthara-movie/ ಇಂತಹ ಸಂಘಟನೆಯನ್ನು ಬೆಳೆಸಿದವರು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಎಂದು ಆರೋಪಿಸಿದರು.ಪ್ರಪಂಚದಲ್ಲಿ ಇಂತಹ ಯಾವುದೇ ಸಂಘಟನೆ ಇಲ್ಲ. ಭಯೋತ್ಪಾದಕ ಸಂಘಟನೆಗಳಿಗೆ ಸಪೋರ್ಟ್ ಮಾಡುತ್ತಿರುವುದು‌…

Read More

ಉಡುಪಿ: ಜಿಲ್ಲೆಯ ಕಾಪು ತಾಲೂಕು ಪಡುಬಿದ್ರಿಯಲ್ಲಿ ಕಾಂತಾರ ಸಿನಿಮಾದಲ್ಲಿ ನಡೆದಿರುವ ಘಟನೆ ನಡೆದಿದೆ. ಹೌದು, 500 ವರ್ಷ ಇತಿಹಾಸ ಇರುವ ಈ ದೈವಸ್ಥಾನದಲ್ಲಿ ಎರಡು ಗುಂಪುಗಳನ್ನು ರಚನೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ವೇಳೇ, ಭಕ್ತ ಸಮಿತಿ ಮತ್ತು ಟ್ರಸ್ಟ್ ಕೋರ್ಟ್ ಮೆಟ್ಟಿಲೇರಿದೆ. ಟ್ರಸ್ಟಿ ಜಯ ಪೂಜಾರಿ ಕೋರ್ಟ್ ಮೆಟ್ಟಿಲೇರಿದ ಮರುದಿನವೇ ಸಾವನ್ನಪ್ಪಿರುವುದು ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಅವರ ಸಾವಿನ ಹಿನ್ನಲೆಯಲ್ಲಿ, ವಾರ್ಷಿಕ ನೇಮೋತ್ಸವವನ್ನು ಮುಂದೂಡಲಾಗಿದೆಯಂತೆ. ಕಾಂತರ ಸಿನಿಮಾ ಶೈಲಿಯಲ್ಲಿ ಕೋರ್ಟ್‍ನಲ್ಲಿ ನೋಡಿಕೊಳ್ತೇನೆಂದ ದೂರುದಾರ ಸಾವಪ್ಪಿರುವ ಹಿನ್ನಲೆಯಲ್ಲಿ ಸ್ಥಳೀಯ ಜನತೆ ನಾನಾ ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

Read More

ಬೆಂಗಳೂರು: ಮಠಕ್ಕೆ ಸೇರಿದ್ದ ಜಮೀನು ಅನ್ನು ಅಕ್ರಮ ಮಾರಾಟ ಆರೋಪದ ಮೇಲೆ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಬೆಂಗಳೂರಿನ 4ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯವು ಬಾಡಿ ವಾರೆಂಟ್‌ ಜಾರಿ ಮಾಡಿದೆ. ಸದ್ಯ ಮುರುಘಾರು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದು, ಅವರನ್ನು, ಚಿತ್ರದುರ್ಗ ಜಿಲ್ಲಾ ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸ್‌, ಫೆಬ್ರವರಿ 9ರಂದು ಕೋರ್ಟ್‌ಗೆ ಹಾಜರುಪಡಿಸಲು ಸೂಚನೆ ನೀಡಲಾಗಿದೆ. ಕೆಂಗೇರಿ ಹೋಬಳಿಯ ಸೂಲಿಕೆರೆ ಗ್ರಾಮದಲ್ಲಿ ಚಿತ್ರದುರ್ಗ ಮುರುಘಾ ಮಠಕ್ಕೆ ಸೇರಿದ 7 ಎಕರೆ 18 ಗುಂಟೆ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪದಲ್ಲಿ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ನಗರದ 4ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯ ಬಾಡಿ ವಾರಂಟ್‌ ಹೊರಡಿಸಿದೆ. https://kannadanewsnow.com/kannada/big-news-peoples-anti-fascist-front-banned-by-central-government-bans-paff/ https://kannadanewsnow.com/kannada/big-news-tennis-star-sania-mirza-to-retire-next-month-sania-mirza/

Read More