Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು: ರಾಷ್ಟ್ರೀಯ ಯುವ ಜನೋತ್ಸವದ ಲೋಗೋ, ಮಸ್ಕಟ್‌ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣ ಗೌಡ ಅವರು ಬಿಡುಗಡೆಗೊಳಿಸಿದರು. ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಲೋಗೋ, ಮಸ್ಕಟ್‌ನ್ನು ಬಿಡುಗಡೆಗೊಳಿಸಲಾಯಿತು. ಕೇಂದ್ರ ಸರ್ಕಾರದ ಯುವಜನ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ವರ್ಚುವಲ್ ಮೂಲಕ ಭಾಗಿಯಾಗಿದ್ದರು.ಲೋಗೋ ಬಿಡುಗಡೆ ಬಳಿಕ ಅನುರಾಗ್ ಸಿಂಗ್ ಠಾಕೂರ್ ನೇತೃತ್ವದಲ್ಲಿ ಸ್ಟೀರಿಂಗ್ ಕಮಿಟಿ ಸಭೆ ನಡೆಸಲಾಯಿತು. https://kannadanewsnow.com/kannada/there-is-no-difference-between-hinduism-and-hindutva-rahul-gandhi-plays-a-drama-by-applying-kumkum-pralhad-joshi/ ರಾಷ್ಟ್ರೀಯ ಯುವ ಜನೋತ್ಸವ ಯಶಸ್ವಿಗೊಳಿಸುವ ಸಂಬಂಧಿಸಿದಂತೆ ಉದ್ಘಾಟನೆ, ಸಿದ್ಧತೆ ಸೇರಿದಂತೆ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು.ಜನವರಿ 12-16 ರವರೆಗೂ ಹುಬ್ಬಳ್ಳಿ- ಧಾರವಾಡದಲ್ಲಿ ರಾಷ್ಟ್ರೀಯ ಯುವ ಜನೋತ್ಸವ ನಡೆಯಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ.
ಬೆಂಗಳೂರು : ರಾಷ್ಟ್ರೀಯ ಯುವ ಜನೋತ್ಸವದ ಲೋಗೋ, ಮಸ್ಕಟ್‌ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಬಿಡುಗಡೆಗೊಳಿಸಿದರು. ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಲೋಗೋ, ಮಸ್ಕಟ್‌ನ್ನು ಬಿಡುಗಡೆಗೊಳಿಸಲಾಯಿತು. ಕೇಂದ್ರ ಸರ್ಕಾರದ ಯುವಜನ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ವರ್ಚುವಲ್ ಮೂಲಕ ಭಾಗಿಯಾಗಿದ್ದರು. ಲೋಗೋ ಬಿಡುಗಡೆ ಬಳಿಕ ಅನುರಾಗ್ ಸಿಂಗ್ ಠಾಕೂರ್ ನೇತೃತ್ವದಲ್ಲಿ ಸ್ಟೀರಿಂಗ್ ಕಮಿಟಿ ಸಭೆ ನಡೆಸಲಾಯಿತು. ರಾಷ್ಟ್ರೀಯ ಯುವ ಜನೋತ್ಸವ ಯಶಸ್ವಿಗೊಳಿಸುವ ಸಂಬಂಧಿಸಿದಂತೆ ಉದ್ಘಾಟನೆ, ಸಿದ್ದತೆ ಸೇರಿದಂತೆ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ಜನವರಿ 12-16 ರವರೆಗೂ ಹುಬ್ಬಳ್ಳಿ ಧಾರವಾಡದಲ್ಲಿ ರಾಷ್ಟ್ರೀಯ ಯುವ ಜನೋತ್ಸವ ನಡೆಯಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. https://kannadanewsnow.com/kannada/mandya-three-leopards-captured-at-one-place-in-the-same-village-villagers-in-fear/ https://kannadanewsnow.com/kannada/more-than-75-mlas-join-jds-in-mandyas-malavalli/ https://kannadanewsnow.com/kannada/there-is-no-difference-between-hinduism-and-hindutva-rahul-gandhi-plays-a-drama-by-applying-kumkum-pralhad-joshi/
ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿ ಒಂದೇ ಗ್ರಾಮದ ಒಂದೇ ಸ್ಥಳದಲ್ಲಿ ಮೂರು ಚಿರತೆಗಳು ಸೆರೆಯಾಗಿವೆ. ಮೂರು ಚಿರತೆ ಸೆರೆಯಾಗಿದ್ದರಿಂದ ಗ್ರಾಮಸ್ಥರು ನಿಟ್ಟುಸಿರಿನ ಜೊತೆಗೆ, ಅಚ್ಚರಿಯನ್ನು ಪಟ್ಟಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಒಂದೇ ತಿಂಗಳಿನಲ್ಲಿ ಒಂದೇ ಸ್ಥಳದಲ್ಲಿ ಮೂರು ಚಿರತೆಗಳು ಬೋನಿಗೆ ಬಿದ್ದಿದ್ದಾವೆ. ಚಿಕ್ಕಕೊಪ್ಪಲು ಗ್ರಾಮದ ಬಳಿಯಲ್ಲಿ ಚಿರತೆಗಳು ಓಡಾಡುತ್ತಿರೋದನ್ನು ಕಂಡಿದ್ದಂತ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಮಾಹಿತಿಯ ಮೇರೆಗೆ ಗ್ರಾಮದ ಬಳಿಯ ಶಿವರಾಮ್ ಎಂಬ ರೈತರ ತೋಯದಲ್ಲಿ ಚಿರತೆ ಸೆರೆಗಾಗಿ ಬೋನನ್ನು ಇರಿಸಲಾಗಿತ್ತು. ಕಳೆದ ಡಿಸೆಂಬರ್ 12ರಂದು ಒಂದು ಚಿರತೆ ನಾಯಿಯನ್ನು ತಿನ್ನೋದಕ್ಕೆ ಬಂದು ಬೋನಿಗೆ ಬಿದ್ದಿತ್ತು. ಈ ಬಳಿಕ ಡಿಸೆಂಬರ್ 27ರಂದು ಅಲ್ಲಿಯೇ ಇದ್ದಂತ ಬೋನಿಗೆ ಮತ್ತೊಂದು ಚಿರತೆ ಬಿದ್ದಿದೆ. ಇದು ಬೆಳಗಿನ ಜಾವ ಮತ್ತೊಂದು ಚಿರತೆ ಸೆರೆಯಾಗಿರೋದು ಅಚ್ಚರಿಯನ್ನು ಉಂಟು ಮಾಡಿದೆ. ಇನ್ನೂ ಸೆರೆ ಸಿಕ್ಕ ಚಿರತೆಯನ್ನು ಮಹದೇಶ್ವರ ಬೆಟ್ಟದ ಕಾಡಿಗೆ ಬಿಡಲು ಅರಣ್ಯ ಇಲಾಖೆಯ ಅಧಿಕಾರಿಗಳು ಕೊಂಡೊಯ್ದಿದ್ದಾರೆ. ಈಗ ಚಿಕ್ಕಕೊಪ್ಪಲು…
ಹುಬ್ಬಳ್ಳಿ: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ವಿವಿಧ ಪಕ್ಷಗಳ ನಾಯಕರಿಂದ ಆರೋಪ – ಪ್ರತ್ಯಾರೋಪ ಮುಂದುವರೆದಿದೆ. ಇದೀಗ ಪ್ರಹ್ಲಾದ್ ಜೋಶಿ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. https://kannadanewsnow.com/kannada/indias-first-rapid-road-cracked-within-a-month-of-cms-inauguration-in-bengaluru/ ನಗರದಲ್ಲಿ ಮಾತನಾಡಿದ ಅವರು, ನಾನು ಹಿಂದೂ ಆಚರಣೆಗಳನ್ನು ಮಾಡುತ್ತೇನೆ ಆದರೆ ಹಿಂದುತ್ವವಲ್ಲ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿ, ಹಿಂದೂ ಹಾಗೂ ಹಿಂದುತ್ವಕ್ಕೆ ಏನು ವ್ಯತ್ಯಾಸವಿಲ್ಲ ಎಂದು ಹೇಳಿದ್ದಾರೆ. ಹಿಂದು ದ್ವೇಷಿ ಸಿದ್ದರಾಮಯ್ಯ ಸನಾತನ ಧರ್ಮ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ರಾಹುಲ್ ಗಾಂಧಿ , ಸಿದ್ದರಾಮಯ್ಯನವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ ಅವರೇ ಕುಂಕುಮ ಹಚ್ಚಿಕೊಂಡು ನಾಟಕ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯ: ಜೆಡಿಎಸ್ ಪಕ್ಷದ ( JDS Party ) ಪಂಚರತ್ನ ರಥಯಾತ್ರೆಯ ಬಳಿಕ, ಕಾಂಗ್ರೆಸ್ ಪಕ್ಷಕ್ಕೆ ( Congress Party ) ಬಿಗ್ ಶಾಕ್ ಎನ್ನುವಂತೆ ಇಂದು ಕೈ ತೊರೆದು, 75ಕ್ಕೂ ಹೆಚ್ಚು ಮಂದಿ ಜೆಡಿಎಸ್ ಪಕ್ಷವನ್ನು ಮಂಡ್ಯದ ಮಳವಳ್ಳಿಯಲ್ಲಿ ಸೇರ್ಪಡೆಯಾಗಿದ್ದಾರೆ. ಮಂಡ್ಯದ ಮಳವಳ್ಳಿ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆದಿದೆ. ಇಂದು ಧನಗೂರು ಗ್ರಾಮದಲ್ಲಿ ನಡೆದಂತ ಜೆಡಿಎಸ್ ಕಾರ್ಯಕ್ರಮದಲ್ಲಿ ಶಾಸಕ ಡಾ.ಕೆ ಅನ್ನದಾನಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ 75ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ತೊರೆದು ಸೇರ್ಪಡೆಯಾದರು. ಈ ವೇಳೆ ಮಾತನಾಡಿದಂತ ಶಾಸಕ ಅನ್ನದಾನಿ ಅವರು, ನಾನು ಎಂಎಲ್ಎ ಆದ ನಂತ್ರ ಎರಡು ವರ್ಷ ಕೊರೋನಾ ಇತ್ತು. ಆದರೂ ಎದೆಗುಂದದೇ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ, ಪುಡ್ ಕಿಟ್ ಕೊಟ್ಟಿದ್ದೇನೆ. ಕ್ವಾರಂಟೈನ್ ನಲ್ಲಿ ಇದ್ದವರನ್ನು ಹಾಡಿನ ಮೂಲಕ ಖುಷಿ ಪಡಿಸಿದ್ದೇನೆ ಎಂದರು. ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಸರಿಯಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಆಗುತ್ತಿಲ್ಲ. ಅವರ ಬಳಿ…
ಬೆಂಗಳೂರು: ಬೆಂಗಳೂರಿನಲ್ಲಿ ನಿರ್ಮಿಸಿದ್ದ ದೇಶದ ಪ್ರಥಮ ರ‍್ಯಾಪಿಡ್ ರಸ್ತೆಯಲ್ಲಿ ಬಿರುಕು ಬಿಟ್ಟಿದೆ. ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ ಒಂದೇ ತಿಂಗಳಲ್ಲೆ ರ‍್ಯಾಪಿಡ್ ರಸ್ತೆಯಲ್ಲಿ ಬಿರುಕು ಬಿಟ್ಟಿದೆ. ಬೆಂಗಳೂರಿನ ಹಳೇ ಮದ್ರಾಸ್ ರಸ್ತೆಯಲ್ಲಿ ರ‍್ಯಾಪಿಡ್ ರಸ್ತೆ ನಿರ್ಮಿಸಲಾಗಿತ್ತು. ಕೋಟ್ಯಂತರ ಹಣ ಖರ್ಚು ಮಾಡಿ ರ‍್ಯಾಪಿಡ್ ರಸ್ತೆಯನ್ನು ಬಿಬಿಎಂಪಿ ನಿರ್ಮಿಸಿತ್ತು. ಆದರೆ ಇದೀಗ ಕಳಪೆ ಕಾಮಗಾರಿಯಿಂದ ರ‍್ಯಾಪಿಡ್ ರಸ್ತೆಯಲ್ಲಿ ಬಿರುಕು ಬಿಟ್ಟಿದೆ ಎಂದು ಆರೋಪ ಕೇಳಿಬಂದಿದೆ. ಹಳೇ ಮದ್ರಾಸ್ ರಸ್ತೆಯಲ್ಲಿ 337.5 ಮೀಟರ್ ರಸ್ತೆಯನ್ನು ‘ಪ್ರೀಕಾಸ್ಟ್ ಪೋಸ್ಟ್ ಟೆನ್ಷನಿಂಗ್ ಕಾಂಕ್ರೀಟ್ ಪೇವ್‌ಮೆಂಟ್’ ತಂತ್ರಜ್ಞಾನದ ‘ರ‍್ಯಾಪಿಡ್ ರಸ್ತೆ’ಯನ್ನು ಪ್ರಾಯೋಗಿಕವಾಗಿ ನಿರ್ಮಿಸಲಾಗಿದೆ. ಈ ‘ರ‍್ಯಾಪಿಡ್ ರಸ್ತೆ’ ಮೂರ್ನಾಲ್ಕು ಕಡೆ ಬಿರುಕು ಬಿಟ್ಟಿದೆ. ಪ್ರೀಕಾಸ್ಟ್ ಪ್ಯಾನೆಲ್ ನಿರ್ಮಾಣದಲ್ಲಿ ಗುಣಮಟ್ಟದ ಸಿಮೆಂಟ್ ಮಿಶ್ರಣ ಇಲ್ಲದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಕ್ಷಿಪ್ರವಾಗಿ ರಸ್ತೆ ನಿರ್ಮಾಣವಾಗುತ್ತದೆ ಎಂದು ಸಂತಸದಲ್ಲಿದ್ದ ನಾಗರಿಕರು ಇದೀಗ ಕಳಪೆ ಕಾಮಗಾರಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. https://kannadanewsnow.com/kannada/bird-flu-background-in-keralas-kottayam-district-chamarajanagar-on-high-alert/
ಚಾಮರಾಜನಗರ: ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಹಕ್ಕಿಜ್ವರ ಶುರುವಾಗಿದೆ ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. https://kannadanewsnow.com/kannada/teacher-from-mandya-who-had-come-for-kannada-sahitya-sammelana-dies-of-heart-attack/ ಹಕ್ಕಿಜ್ವರ ಹರಡದಂತೆ ಚಾಮರಾಜನಗರ ಜಿಲ್ಲೆಯಲ್ಲಿ ಮುನ್ನಚ್ಚರಿಕೆ ಕ್ರಮ ವಹಿಸಲಾಗಿದೆ. ಚಾಮರಾಜನಗರ ಜಿಲ್ಲೆಗೆ ಬರುತ್ತಿರುವ ಕೇರಳ ವಾಹನಗಳ ತಪಾಸಣೆ ಮಾಡಲಾಗಿದೆ. ಎಲ್ಲಾ ವಾಹನಗಳಿಗೂ ಸೋಡಿಯಂ ಹೈಪ್ಲೋರೈಡ್ ದ್ರಾವಣ ಸಂಪಡಣೆ ಮಾಡಲಾಗಿದೆ. ಮೂಲೆಹೊಳೆ ಬಳಿ ಚೆಕ್ ಪೋಸ್ಟ್ ತೆರೆದ ಪಶುಸಂಗೋಪನೆ ಇಲಾಖೆ ಕ್ರಮ ಕೈಗೊಂಡಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆಯಲ್ಲಿ ಚೆಕ್ ಪೋಸ್ಟ್ ಮಾಡಲಾಗಿದೆ. ಕೇರಳದಿಂದ ಬರುವ ವಾಹನಗಳ ತಪಾಸಣೆಯನ್ನು ಇಲಾಖೆ ಮಾಡುತ್ತಿದೆ. ಉಪ ನಿರ್ದೇಶಕ ಡಾ. ಶಿವಣ್ಣ ಮಾರ್ಗದರ್ಶದಲ್ಲಿ ವಾಹನಗಳ ತಪಾಸಣೆ ಮಾಡಲಾಗಿದೆ. https://kannadanewsnow.com/kannada/teacher-from-mandya-who-had-come-for-kannada-sahitya-sammelana-dies-of-heart-attack/
ಹಾವೇರಿ: ಹಾವೇರಿಯಲ್ಲಿ ನಡೆಯುತ್ತಿರುವ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎರಡನೇ ದಿನಕ್ಕೆ ಕಾಲಿಟ್ಟಿದೆ. ಈ ವೇಳೆ ಸಮ್ಮೇಳನಕ್ಕೆ ಬಂದಿದ್ದ ಶಿಕ್ಷಕರೊಬ್ಬರು ಹೃದಯಾಘಾತದಿಂದ ನಿಧನಹೊಂದಿದ್ದಾರೆ. 34 ವರ್ಷದ ಸಂಗನಗೌಡ ಶಿಕ್ಷಕರು ಮೃತಪಟ್ಟಿದ್ದಾರೆ. ನಿನ್ನೆ ರಾತ್ರಿ ಅವರಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಶಿಕ್ಷಕ ಸಂಗನ ಗೌಡ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯ ಮತ್ತಿಕೇರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಅವರು ಹಾವೇರಿಯ ಎಳೆಯರ ಬಳಗ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದೆ. https://kannadanewsnow.com/kannada/we-will-give-good-news-to-kalasa-bandur-in-another-60-days-shankar-patil-munenakoppa-promises/
BIGG NEWS: 2ಎ ಮೀಸಲಾತಿ ವಿಚಾರ; ಯಾವುದೇ ವ್ಯಕ್ತಿಯ ಹೋರಾಟ ಅಲ್ಲ, ಇದು ಸಮುದಾಯದ ಹೋರಾಟ; ಬಸವ ಜಯಮೃತ್ಯುಂಜಯ ಸ್ವಾಮೀಜಿ
ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದಾರೆ. ಆದರೆ ಇದು ಯಾವ ವ್ಯಕ್ತಿಯ ಹೋರಾಟ ಅಲ್ಲ, ಇದು ಸಮುದಾಯದ ಹೋರಾಟ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಸಭೆ ನಡೆಸಿ ಹೋರಾಟದ ಬಗ್ಗೆ ಚರ್ಚಿಸುತ್ತೇನೆ. ಈಗಾಗಲೇ ಶಿಗ್ಗಾಂವಿಯಲ್ಲಿ ನಾವು ಒಂದು ಬಾರಿ ಹೋರಾಟ ಮಾಡಿದ್ದೇವೆ. ವಿನಾಕಾರಣ ವಿಳಂಬ ಮಾಡಲು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕ್ತಿದ್ದಾರೆ ಅನಿಸುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮನಸ್ಸಿನಲ್ಲಿ ಮೀಸಲಾತಿ ಕೊಡಬೇಕು ಅಂತಾನೇ ಇದೆ. ಯಾರ್ಯಾರು ಏನು ಮಾಡುತ್ತಿದ್ದಾರೆ ಅಂತಾ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ರಾಜಕೀಯ ಏನೇ ಮಾಡಲಿ, ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟ ಮಾಡಬಾರದು ಎಂದರು. https://kannadanewsnow.com/kannada/we-will-give-good-news-to-kalasa-bandur-in-another-60-days-shankar-patil-munenakoppa-promises/ ಮೀಸಲಾತಿ ನೀಡದಿದ್ದರೆ ಚುನಾವಣೆಯಲ್ಲಿ ಪರಿಣಾಮ ಬೀರುತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಬಾಯಿ ಬಿಟ್ಟು ಹೇಳಲು ಹೋಗಲ್ಲ. ಅದರ ಪರಿಣಾಮ ಸರ್ಕಾರಕ್ಕೆ ಗೊತ್ತಿದೆ. ಈಗಾಗಲೇ ಸಮಾಜ ನಿರಾಸೆಗೊಂಡಿದ್ದು ಅವರಿಗೆ ಗೊತ್ತಿದೆ.…
ನವದೆಹಲಿ: ಅಯೋಧ್ಯೆಯ ರಾಮ ಮಂದಿರದ ಉದ್ಘಾಟನಾ ದಿನಾಂಕವನ್ನು ಘೋಷಿಸಿದ್ದಕ್ಕಾಗಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಇದೇ ವೇಳೇ ಅವರು ಮತ್ತು ಗೃಹ ಸಚಿವರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ. ಹರ್ಯಾಣದ ಪಾಣಿಪತ್ನಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಭಾರತ್ ಜೋಡೋ ಯಾತ್ರೆ ತಲುಪಿದ್ದು, ಅಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಅಮಿತ್ ಶಾ ಅವರು ದೇಶದ ಭದ್ರತೆಯನ್ನು ಖಾತ್ರಿಪಡಿಸುವ ಬದಲು ದೇವಾಲಯಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೇ ಅವರು ಮಾತನಾಡುತ್ತ “ತ್ರಿಪುರಾದಲ್ಲಿ ಚುನಾವಣೆ ಇದೆ. ಅಮಿತ್ ಶಾ ಅಲ್ಲಿಗೆ ಹೋಗಿ ರಾಮ ಮಂದಿರವನ್ನು ನಿರ್ಮಿಸಲಾಗುತ್ತಿದೆ ಮತ್ತು ಅದರ ಉದ್ಘಾಟನೆ ಜನವರಿ 1, 2024 ರಂದು ನಡೆಯುತ್ತಿದೆ ಎಂದು ಹೇಳುತ್ತಾರೆ. ಪ್ರತಿಯೊಬ್ಬರಿಗೂ ದೇವರ ಮೇಲೆ ನಂಬಿಕೆ ಇದೆ, ಆದರೆ ನೀವು ಅದನ್ನು ಚುನಾವಣಾ ಸಮಯದಲ್ಲಿ ಏಕೆ ಘೋಷಿಸುತ್ತಿದ್ದೀರಿ? ಅಂಥ ಪ್ರಶ್ನೆ ಮಾಡಿದರು. https://twitter.com/kharge/status/1611357811598065666