Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು: ವಿವಿಧ ಗಣ್ಯರೊಂದಿಗೆ ಸರ್ಕಾರಿ ಗೃಹದಲ್ಲಿ ಡೀಲ್ ಮಾಡಿದಂತ ವಿಷಯವನ್ನು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸ್ಪೋಟಕ ಬಾಂಬ್ ಸಿಡಿಸಿದ್ದರು. ಸ್ಯಾಂಡ್ರೋ ರವಿ ಸರ್ಕಾರಿ ಗೃಹ ಕಚೇರಿಯನ್ನು ತನ್ನ ಅಡ್ಡೆಯನ್ನಾಗಿ ಮಾಡಿಕೊಂಡ ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಸ್ಯಾಂಟ್ರೋ ರವಿಗೆ ರೂಮ್ ಕೊಡುತ್ತಿದ್ದಂತ ಕುಮಾರಕೃಪಾ ಅತಿಥಿ ಗೃಹದ ಸೀನಿಯರ್ ಮ್ಯಾನೇಜರ್ ವರ್ಗಾವಣಎ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಹೌದು ಸ್ಯಾಂಟ್ರೋ ರವಿಗೆ ರೂಮ್ ಕೊಡ್ತಿದ್ದ ಅಧಿಕಾರಿಗೆ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಗೇಟ್ ಪಾಸ್ ನೀಡಿದೆ. ಕುಮಾರಕೃಪಾ ಗೆಸ್ಟ್ ಹೌಸ್ ನ ಸೀನಿಯರ್ ಮ್ಯಾನೇಜರ್ ಹೆಚ್ ಎಸ್ ದೇವರಾಜ್ ಅವರನ್ನು ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುವಂತೆ ಸೂಚಿಸಿ, ಆದೇಶಿಸಿದೆ. ಅಂದಹಾಗೇ ಹೊಸ ಕುಮಾರಕೃಪಾ ಅತಿಥಿ ಗೃಹದ ಸೀನಿಯರ್ ಮ್ಯಾನೇಜರ್ ಆಗಿದ್ದಂತ ಹೆಚ್ ಎಸ್ ದೇವರಾಜ್ ಅವರು, ಸ್ಯಾಂಟ್ರೋ ರವಿಗೆ ಡೀಲ್ ಕುದುರಿಸೋದಕ್ಕಾಗಿ ಸರ್ಕಾರಿ ಗೆಸ್ಟ್ ಹೌಸ್ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದಷ್ಟೇ ಅಲ್ಲದೇ ಸರ್ಕಾರಿ ಅಥಿತಿ ಗೃಹದಲ್ಲಿ ಸ್ಯಾಂಟ್ರೋ…
ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯುವಕನೊರ್ವ ಪ್ರೀತಿ ಮಾಡುವಂತೆ ಟಾರ್ಚರ್ ಕೊಡುತ್ತಿದ್ದ ಹಿನ್ನೆಲೆಯಲ್ಲಿ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. 22 ವರ್ಷದ ಚೈತ್ರಾ ಆತ್ಮಹತ್ಯೆಗೆ ಶರಣಾದ ಯುವತಿ. ವಡ್ಡರಹಳ್ಳಿ ಪಾಳ್ಯದ ಯುವಕ ಕುಮಾರಸ್ವಾಮಿಯಿಂದ ಈ ಕೃತ್ಯ ನಡೆದಿದೆ. ಕುಮಾರಸ್ವಾಮಿ ಪ್ರತಿದಿನ ಕಾಲ್, ಮೆಸೆಜ್ ಮಾಡಿ ಚೈತ್ರಾಳಿಗೆ ಪ್ರೀತಿಸುವಂತೆ ಕಾಟ ಕೊಡುತ್ತಿದ್ದ. ಅಷ್ಟೇ ಅಲ್ಲದೇ ಆಕೆಯನ್ನು ಫಾಲೋ ಮಾಡುವುದು, ಆಕೆಯ ಮನೆ ಬಳಿ ಬಂದು ಗಲಾಟೆ ಮಾಡುವುದು ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಮನನೊಂದು ಚೈತ್ರಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ವಿರುದ್ಧ ಮೃತ ಚೈತ್ರಾ ಪೋಷಕರು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಕಳೆದ 4 ವರ್ಷಗಳಿಂದಲೂ ನನ್ನ ಲವ್ ಮಾಡು, ನಾನು ನಿನ್ನ ಮದುವೆ ಆಗುತ್ತೇನೆ ಎಂದು ಕಾಡುತ್ತಿದ್ದ. ಕೆಲಸಕ್ಕೆ ಹೋಗುವಾಗ ಬರುವಾಗ ಫಾಲೋ ಮಾಡೋದು ಮಾಡಿ ಕೊಡಬಾರದ ಕಾಟ ಕೊಡ್ತಿದ್ದನಂತೆ. ಇದರಿಂದಲೇ ತಮ್ಮ ಮಗಳು ಮನನೊಂದು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ…
ಕಲಬುರಗಿ: ಕಲಬುರಗಿ ನಗರದಲ್ಲಿ ಹಾಡಹಗಲೇ ಗುಂಡಿನ ದಾಳಿ ನಡೆದಿದೆ. ನಗರದ ಆಳಂದ ಚೆಕ್ ಪೋಸ್ಟ್ ಬಳಿ ಫೈರಿಂಗ್ ನಡೆದಿದೆ. ಚನ್ನವೀರ ಹಾಗೂ ಮತ್ತೊರ್ವನ ಮೇಲೆ ಗುಂಡಿನ ದಾಳಿ ನಡೆದಿದೆ. ಹಳೇ ದ್ವೇಷ ಹಿನ್ನೆಲೆಯಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ. ಬೊಲೆರೋ ವಾಹನದಲ್ಲಿ ಬಂದಿದ್ದ ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದೆ. ಸದ್ಯ ಗಾಯಾಳು ಚನ್ನವೀರ ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಸಂಬಂಧ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/the-step-motherly-attitude-of-the-central-government-is-being-followed-mahesh-joshi/
ಬೆಂಗಳೂರು: ವಿವಿಧ ಗಣ್ಯರೊಂದಿಗೆ ಸರ್ಕಾರಿ ಗೃಹದಲ್ಲಿ ಡೀಲ್ ಮಾಡಿದಂತ ವಿಷಯವನ್ನು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸ್ಪೋಟಕ ಬಾಂಬ್ ಸಿಡಿಸಿದ್ದರು. ಸ್ಯಾಂಡ್ರೋ ರವಿ ಸರ್ಕಾರಿ ಗೃಹ ಕಚೇರಿಯನ್ನು ತನ್ನ ಅಡ್ಡೆಯನ್ನಾಗಿ ಮಾಡಿಕೊಂಡ ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಸ್ಯಾಂಟ್ರೋ ರವಿಗೆ ರೂಮ್ ಕೊಡುತ್ತಿದ್ದಂತ ಕುಮಾರಕೃಪಾ ಅತಿಥಿ ಗೃಹದ ಸೀನಿಯರ್ ಮ್ಯಾನೇಜರ್ ಗೆ ಗೇಟ್ ಪಾಸ್ ನೀಡಿದೆ. ಹೌದು ಸ್ಯಾಂಟ್ರೋ ರವಿಗೆ ರೂಮ್ ಕೊಡ್ತಿದ್ದ ಅಧಿಕಾರಿಗೆ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಗೇಟ್ ಪಾಸ್ ನೀಡಿದೆ. ಕುಮಾರಕೃಪಾ ಗೆಸ್ಟ್ ಹೌಸ್ ನ ಸೀನಿಯರ್ ಮ್ಯಾನೇಜರ್ ಹೆಚ್ ಎಸ್ ದೇವರಾಜ್ ಅವರನ್ನು ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುವಂತೆ ಸೂಚಿಸಿ, ಆದೇಶಿಸಿದೆ. ಅಂದಹಾಗೇ ಹೊಸ ಕುಮಾರಕೃಪಾ ಅತಿಥಿ ಗೃಹದ ಸೀನಿಯರ್ ಮ್ಯಾನೇಜರ್ ಆಗಿದ್ದಂತ ಹೆಚ್ ಎಸ್ ದೇವರಾಜ್ ಅವರು, ಸ್ಯಾಂಟ್ರೋ ರವಿಗೆ ಡೀಲ್ ಕುದುರಿಸೋದಕ್ಕಾಗಿ ಸರ್ಕಾರಿ ಗೆಸ್ಟ್ ಹೌಸ್ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದಷ್ಟೇ ಅಲ್ಲದೇ ಸರ್ಕಾರಿ ಅಥಿತಿ ಗೃಹದಲ್ಲಿ ಸ್ಯಾಂಟ್ರೋ ರವಿ…
ಶಿವಮೊಗ್ಗ: ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ಜ.26 ರಿಂದ ಫೆ. 26ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಷ್ಟ್ರ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ- ಖಾದಿ ಉತ್ಸವ-2023 ಅನ್ನು ಆಯೋಜಿಸಲಾಗಿದೆ. ಖಾದಿ ಪ್ರಿಯರು, ಸಿಬಿಸಿ, ಪಿಬಿಎಸ್, ಪಿಎಂಇಜಿಪಿ, ಸಿಎಂಇಜಿಪಿ ಯೋಜನೆಯ ಸರ್ಕಾರದಿಂದ ಅನುದಾನ ಪಡೆದ ಅರ್ಹ ಫಲಾನುಭವಿಗಳು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳ ಕಚೇರಿಯಿಂದ ಧನಸಹಾಯ ಪಡೆದಿರುವ ಬಗ್ಗೆ ದೃಢೀಕರಣವನ್ನು ಪಡೆದುಕೊಂಡು ವೆಬ್‍ಸೈಟ್ www.khadi.karnataka.gov.in ರಲ್ಲಿ ಜ.21ರೊಳಗಾಗಿ ಅರ್ಜಿ ಸಲ್ಲಿಸುವಂತೆ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಈ ಮಳಿಗೆ ಬಾಡಿಗೆಯು ಒಂದಕ್ಕೆ ರೂ. 35,400/- ಹಾಗೂ ಅರ್ಜಿ ಶುಲ್ಕ ರೂ. 500/- ಗಳನ್ನು ನಿಗದಿಪಡಿಸಿದ್ದು, ಆನ್‍ಲೈನ್ ಮೂಲಕ ಪಾವತಿಸುವುದು. ಅರ್ಜಿ ಸಲ್ಲಿಸಲು ಇಚ್ಛಿಸುವ ಆಸಕ್ತರು ಕೆ. ಗೋವಿಂದಪ್ಪ, ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕಚೇರಿ, ಶಿವಮೊಗ್ಗ, ದೂ.ಸಂ.: 9480825637/ 08182-223273 ರವರನ್ನು ಸಂಪರ್ಕಿಸುವುದು. https://kannadanewsnow.com/kannada/teacher-from-mandya-who-had-come-for-kannada-sahitya-sammelana-dies-of-heart-attack/…
ಹಾವೇರಿ: ಈ ಬಾರಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಸ್ತಬ್ಧಚಿತ್ರಕ್ಕೆ ಕೇಂದ್ರ ಸರ್ಕಾರ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಕನ್ನಡಿಗರನ್ನು ಕೆರಳಿಸುವಂತಿದೆ. https://kannadanewsnow.com/kannada/bomb-email-issue-for-nps-school-in-rajajinagar-the-boy-confessed-that-he-had-done-this-for-fun/ ಈ ಕುರಿತು ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಮಾತನಾಡಿ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತುವುದಾಗಿ ಹೇಳಿದರು. ಸಾಹಿತ್ಯ ಪರಿಷತ್ ಹಿಂದೆ ಯಾವತ್ತೂ ಕೋರ್ಟ್ ಗೆ ಹೋದ ನಿದರ್ಶನಗಳಿಲ್ಲ. ಅದರೆ ತನ್ನ ಅಧಿಕಾರಾವಧಿಯಲ್ಲಿ ಅದು ನಡೆಯಲಿದೆ ಎಂದು ಜೋಶಿ ಹೇಳಿದರು. ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ. ಕರ್ನಾಟಕ , ಕನ್ನಡ ವಿಚಾರದಲ್ಲಿ ಯಾಕೆ ಈ ರೀತಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬುದು ಗೊತ್ತಗಿಲ್ಲ. ಯಾವ ಆಧಾರದಲ್ಲಿ ಕ್ನಾಟಕ ಸ್ತಬ್ಧಚಿತ್ರ ತಿರಸ್ಕರಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ. ನಾನೇ ದೆಹಲಿಗೆ ಹೋಗಿ ಸರಿಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಬೆಂಗಳೂರು : ಉತ್ತಮ ಬೆಂಗಳೂರು, ನೂತನ ಉಪನಗರ, ಬಿಯಾಂಡ್ ಬೆಂಗಳೂರು ಅಭಿವೃದ್ಧಿ ನಮ್ಮ ಯೋಜನೆಯಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಜೆಡಬ್ಲ್ಯೂ ಮ್ಯಾರಿಯಟ್ ಹೊಟೇಲ್ ನಲ್ಲಿ ಆಯೋಜಿಸಿರುವ ಡೆಕ್ಕನ್ ಹೆರಾಲ್ಡ್ ಬೆಂಗಳೂರು – 2040ರ ಸಮ್ಮಿಟ್ ನಲ್ಲಿ ಪಾಲ್ಗೊಂಡು ಮಾತನಾಡಿ, ಭವಿಷ್ಯದ ಬೆಂಗಳೂರು ನಿರ್ಮಿಸಲು ಹಾಗೂ ಹಳೆಯದನ್ನು ಸರಿಪಡಿಸಲು ಎರಡು ಯೋಜನೆಗಳು ಅಗತ್ಯವಿದೆ. ಇದಕ್ಕಾಗಿ ಅಗಾಧ ಹೂಡಿಕೆಯ ಅಗತ್ಯವಿದೆ. ತ್ಯಾಜ್ಯ ನಿರ್ವಹಣೆ, ಒಳಚರಂಡಿ, ರಾಜಕಾಲುವೆ, ರಸ್ತೆ ನಿರ್ವಹಣೆಯ ಸುಧಾರಣೆಯೂ ಆಗಬೇಕು. ಸಂಚಾರ ನಿರ್ವಹಣೆ ಸೇರಿದಂತೆ ಸಾರಿಗೆ, ಉಪನಗರ ರೈಲು, ರಸ್ತೆ, ಸಿಗ್ನಲ್ ಮುಂತಾದವನ್ನು ಇದು ಒಳಗೊಂಡಿದೆ ಎಂದರು. ಸಂಚಾರ ವ್ಯವಸ್ಥೆ ನಿರ್ವಹಣೆ ಸಂಚಾರ ವ್ಯವಸ್ಥೆ ನಿರ್ವಹಣೆಗೆ ಪ್ರತ್ಯೇಕ ಆಯುಕ್ತಾಲಯವನ್ನು ರಚಿಸಲಾಯಿತು. ಇದರಿಂದಾಗಿ ಸಾಕಷ್ಟು ಬದಲಾವಣೆ ತರಲು ಸಾಧ್ಯವಾಗಿದೆ. ಸಿಗ್ನಲ್ ವ್ಯವಸ್ಥೆ ಸುಧಾರಣೆ, ಹೆಚ್ಚುವರಿ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ದಟ್ಟಣೆಯನ್ನು ತಪ್ಪಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.ಇಂಧನ ವಲಯದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ ಎಂದರು. ತ್ಯಾಜ್ಯ ನಿರ್ವಹಣೆಗೆ ತಂತ್ರಜ್ಞಾನ ಬಳಕೆ…
ಬೆಂಗಳೂರು: ರಾಜಾಜಿನಗರದಲ್ಲಿರುವ ಎನ್ಪಿ ಎಸ್ ಶಾಲೆಗೆ ಬಾಂಬ್ ವಿಚಾರಕ್ಕೆ ಸಂಬಂಧಿಸಿದಂತೆ ಇಮೇಲ್ ಸಂದೇಶ ರವಾನಿಸಿರುವುದು ಶಾಲೆಯ ಅಪ್ರಾಪ್ತ ವಿದ್ಯಾರ್ಥಿ ಎಂಬುದು ಬಯಲಾಗಿದೆ. ಗೂಗಲ್ ನಲ್ಲಿ ಎನ್.ಪಿ.ಎಸ್ ಶಾಲೆಯ ಅಧಿಕೃತ ಇಮೇಲ್ ವಿಳಾಸ ಪಡೆದಿದ್ದ ವಿದ್ಯಾರ್ಥಿ, ತಮಾಷೆಗಾಗಿ ಈ ರೀತಿ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ https://kannadanewsnow.com/kannada/cm-releases-national-youth-festival-logo-muscat/ ನೂರಾರು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿರುವ ರಾಜಾಜಿನಗರದ ಎನ್ಪಿಎಸ್ ಶಾಲೆಗೆ ಜನವರಿ 5 ರಂದು ರಾತ್ರಿ 8:30 ರ ಸುಮಾರಿಗೆ ಬಂದಿದ್ದ ಇಮೇಲ್ನಲ್ಲಿ ‘ನನ್ನ ಬಳಿ ನಾಲ್ಕು ಜಿಲೇಟಿನ್ ಕಡ್ಡಿಗಳಿವೆ. ನಾಳೆ ಊಟದ ಸಮಯದಲ್ಲಿ ಬ್ಲಾಸ್ಟ್ ಮಾಡ್ತೀನಿ’ ಎಂದು ಬರೆಯಲಾಗಿತ್ತು. ನಿನ್ನೆ ಬೆಳಗ್ಗೆ ಮೇಲ್ ಪರಿಶೀಲಿಸಿದ ಶಾಲಾ ಆಡಳಿತ ಮಂಡಳಿ ಮುಂಜಾಗ್ರತಾ ಕ್ರಮವಾಗಿ ಕೂಡಲೇ ಶಾಲಾ ಮಕ್ಕಳನ್ನ ತರಗತಿಯಿಂದ ಹೊರಗೆ ಕಳುಹಿಸಿ ತುರ್ತು ರಜೆ ನೀಡಿತ್ತು. ನಂತರ ಈ ಬಗ್ಗೆ ಬಸವೇಶ್ವರ ನಗರ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿತ್ತು. ಮಾಹಿತಿ ಬರುತ್ತಿದ್ದಂತೆ ಕಾರ್ಯಪ್ರವೃತರಾದ ಪೊಲೀಸರು ಬಾಂಬ್ ನಿಷ್ಕ್ರಿಯ ದಳ ಹಾಗೂ…
ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಸಂಘದ ಮನವಿ ಮೇರೆಗೆ ಹಿರಿಯ ಪತ್ರಕರ್ತ ರಾಮಣ್ಣ ಎಚ್.ಕೋಡಿಹೊಸಳ್ಲಿ ಅವರ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 1.35 ಲಕ್ಷ ರೂ ಪರಿಹಾರ ಮಂಜೂರು ಮಾಡಿದ್ದಾರೆ. ಮುಂಗಾರು, ಸಂಯುಕ್ತ ಕರ್ನಾಟಕ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ರಾಮಣ್ಣ ಕೋಡಿಹೊಸಳ್ಳಿ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಗಾಗಿ ಸುಮಾರು ಮೂರು ಲಕ್ಷ ಕ್ಕೂ ಹೆಚ್ಚು ವೆಚ್ಚ ಮಾಡಿಕೊಂಡು ಸಂಕಷ್ಟದಲ್ಲಿರುವ ಬಗ್ಗೆ ನಾಗರಾಜಸ್ವಾಮಿ ಸೇರಿದಂತೆ ಕೆಲ ಪತ್ರಕರ್ತ ಗೆಳೆಯರು ಕೆಯುಡಬ್ಲ್ಯೂಜೆ ಗಮನಕ್ಕೆ ತಂದಿದ್ದರು. ಹಿರಿಯ ಪತ್ರಕರ್ತರಾದ ರಾಮಣ್ಣ ಕೋಡಿಹೊಸಳ್ಳಿ ಅವರ ಚಿಕಿತ್ಸೆಗೆ ನೆರವಾಗುವಂತೆ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಮನವಿ ಮೇರೆಗೆ ಚಿಕಿತ್ಸೆಗಾಗಿ 1.35 ಲಕ್ಷ ರೂ ಪರಿಹಾರವನ್ನು ಮುಖ್ಯಮಂತ್ರಿ ಮಂಜೂರು ಮಾಡಿದ್ದಾರೆ. ಹಿರಿಯ ಪತ್ರಕರ್ತರಾದ ರಾಮಣ್ಣ ಅವರ ಚಿಕಿತ್ಸೆಗಾಗಿ ಮಾನವೀಯ ದೃಷ್ಟಿಯಿಂದ ಪರಿಹಾರ ಮಂಜೂರು ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ)…
ಬೆಂಗಳೂರು: ಕನ್ನಡಕ್ಕೆ ( Kannada ) ಶಾಸ್ತ್ರೀಯ ಸ್ಥಾನಮಾನ ಸಿಕ್ಕಿ 15 ವರ್ಷಗಳೇ ಆಯಿತು.13 ವರ್ಷಗಳಲ್ಲಿ ಕನ್ನಡಕ್ಕೆ ಸಿಕ್ಕಿದ ಅನುದಾನ ಕೇವಲ 3 ಕೋಟಿ ರೂ.!! ತಮಿಳಿಗೆ ಸಿಕ್ಕಿದ್ದು 43 ಕೋಟಿ. ಆದರೆ, ಸಂಸ್ಕೃತಕ್ಕೆ ಇವರು ಕೊಟ್ಟಿದ್ದು ಬರೋಬ್ಬರಿ 643 ಕೋಟಿ!!! ಕನ್ನಡದ ಕಣ್ಣಿಗೆ ಸುಣ್ಣ, ಬೇರೆ ಭಾಷೆಗಳಿಗೆ ಬೆಣ್ಣೆ. ಕನ್ನಡ ತಬ್ಬಲಿ ಮಕ್ಕಳ ಭಾಷೆಯೇ? ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ( Farmer CM HD Kumaraswamy ) ಕಿಡಿಕಾರಿದ್ದಾರೆ. https://twitter.com/hd_kumaraswamy/status/1611594315951923200 ಈ ಬಗ್ಗೆ ಇಂದು ಸರಣಿ ಟ್ವಿಟ್ ( Twitter ) ಮಾಡಿದ್ದು, ಕೇಂದ್ರದಿಂದ ಕನ್ನಡಕ್ಕೆ ಆಗುತ್ತಿರುವ ಅನುದಾನದ ಅನ್ಯಾಯದ ವಿರುದ್ಧ ನಾನು ಅನೇಕ ಸಲ ದನಿ ಎತ್ತಿದ್ದೇನೆ. ಬಿಜೆಪಿ,ಕಾಂಗ್ರೆಸ್ ಪಕ್ಷಗಳ ಆಡಳಿತಕ್ಕೆ ಅದು ಕೇಳಲೇ ಇಲ್ಲ. ಕೇಂದ್ರದಲ್ಲಿ ಬಿಜೆಪಿ ಸರಕಾರ ( BJP Government ) ಬಂದ ಮೇಲೆ ಸಂಸ್ಕೃತ, ಹಿಂದಿ ತುಷ್ಟೀಕರಣದಿಂದ ಕನ್ನಡಕ್ಕೆ ಅದೆಷ್ಟು ವಂಚನೆ ಆಗಿದೆ ಎನ್ನುವುದಕ್ಕೆ ಅನುದಾನದ ತಾರತಮ್ಯವೇ ಸಾಕ್ಷಿ…