Author: KNN IT TEAM

ಉತ್ತರ ಪ್ರದೇಶ : ಶಾಲಾ ಬಾಲಕನೋರ್ವನನ್ನು ಕಾರೊಂದು ಒಂದು ಕಿಮೀ ಎಳೆ ಎಳೆದೊಯ್ದ ಘಟನೆ ಉತ್ತರಪ್ರದೇಶದ ಹರ್ದೋಯಿ ಎಂಬಲ್ಲಿ ನಡೆದಿದೆ. ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.   ಸಂತ್ರಸ್ತ ವಿದ್ಯಾರ್ಥಿಯನ್ನು 9ನೇ ತರಗತಿಯನ್ನು ಓದುತ್ತಿರುವ ಕೇತನ್ ಕುಮಾರ್  ಎಂದು ಗುರುತಿಸಲಾಗಿದೆ. ಈತ ಶುಕ್ರವಾರ ಸಂಜೆ ಕೋಚಿಂಗ್ ಕ್ಲಾಸ್‌ಗೆ ಹೋಗುತ್ತಿದ್ದಾಗ ಬಿಳಿ ಕಾರೊಂದು ಬಾಲಕನ ಸೈಕಲ್‌ಗೆ ಡಿಕ್ಕಿ ಹೊಡೆದಿತ್ತು. ಬಾಲಕನ ಕಾಲು ಕಾರಿನ ಹಿಂಭಾಗದಲ್ಲಿ ಸಿಕ್ಕಿಹಾಕಿಕೊಂಡಿತ್ತು. https://twitter.com/KantChhabra/status/1611577554519101440 ಇದನ್ನು ತಿಳಿದ ಕಾರಿನ ಚಾಲಕ ಸ್ಥಳದಿಂದ ಪರಾರಿಯಾಗಲೂ ಕಾರನ್ನು ವೇಗವಾಗಿ ಚಲಾಹಿಸಿದ್ದನು. ಸ್ಥಳೀಯರು ಕಾರು ನಿಲ್ಲಿಸುವಂತೆ ಹೇಳಿದರೂ ಚಾಲಕ ಕಾರಿನ ಜೊತೆಗೆ ಬಾಲಕನನ್ನು ಎಳೆದುಕೊಂಡು ಹೋಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.  ಇನ್ನು ಕಾರು ಜನನಿಬಿಡ ಮಾರುಕಟ್ಟೆ ಪ್ರದೇಶವನ್ನು ತಲುಪುತ್ತಿದ್ದಂತೆ ಸ್ಥಳೀಯರು ಕಾರನ್ನು ನಿಲ್ಲಿಸಿ, ಹುಡುಗನನ್ನು ರಕ್ಷಿಸಿದ್ದಾರೆ. ಘಟನೆಯಿಂದ ಕೋಪಗೊಂಡು ಜನರು ಚಾಲಕನನ್ನು ಹಿಡಿದು ದೊಣ್ಣೆಗಳಿಂದ ಥಳಿಸಿದ್ದು, ಕಾರಿಗೂ ಹಾನಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಗಾಯಗೊಂಡು ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತ ಪೊಲೀಸರು…

Read More

ಕೆಎನ್ಎನ್ಡಿಜಿಟಲ್ ಡೆಸ್ಕ್ : ನಿಯಮಗಳಿಲ್ಲದೇ ಮನುಷ್ಯ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲ. ಸ್ಥಿರ ಸಮಾಜಕ್ಕೆ ಕೆಲವು ನಿಯಮಗಳ ಅಗತ್ಯವಿದೆ. ಪ್ರತಿಯೊಂದು ಧರ್ಮ ಮತ್ತು ಜಾತಿ ಕೂಡ ತನ್ನದೇ ಆದ ಪದ್ಧತಿಗಳು, ನಿಯಮಗಳು ಮತ್ತು ಚೌಕಟ್ಟಿನೊಳಗೆ ಬದುಕುತ್ತವೆ. ಈ ನಿಯಮಕ್ಕೆ ಬಂದಾಗ ಮುಟ್ಟಿನ ಮಹತ್ವವೂ ಇದೆ. ಮಹಿಳೆಯರಲ್ಲಿ ಮುಟ್ಟು ನೈಸರ್ಗಿಕ ಪ್ರಕ್ರಿಯೆ. ಪ್ರಾಚೀನ ಕಾಲದಿಂದಲೂ ಈ ಮುಟ್ಟಿನ ಬಗ್ಗೆ ಅನೇಕ ನಂಬಿಕೆಗಳು ಮತ್ತು ಪದ್ಧತಿಗಳಿವೆ. ಹಿಂದೂ ಧರ್ಮದಲ್ಲಿ, ಮಹಿಳೆಯರು ಮುಟ್ಟಿನ ಸಮಯದಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡದಿರುವುದು ಅಥವಾ ಪೂಜಾದಿ ಕಾರ್ಯಗಳಲ್ಲಿ ಭಾಗವಹಿಸದಿರುವುದು ವಾಡಿಕೆ. ಭಾರತ ಆಧುನಿಕತೆಯತ್ತ ಸಾಗುತ್ತಿದೆ. ಮುಟ್ಟಿನ ಬಗ್ಗೆ ಹಾಗೂ ಸ್ವಚ್ಛತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಈ ಸಮಯದಲ್ಲಿಯೂ ಸಹ, ಅನೇಕ ಸ್ಥಳಗಳಲ್ಲಿ ತನ್ನ ಅವಧಿಯನ್ನ ಹೊಂದಿರುವ ಮಹಿಳೆಯನ್ನ ಅಶುದ್ಧವೆಂದು ಪರಿಗಣಿಸಲಾಗುತ್ತದೆ. ಆಕೆಗೆ ಯಾವುದೇ ಸೌಲಭ್ಯಗಳನ್ನ ನೀಡುತ್ತಿಲ್ಲ. ದೇವಸ್ಥಾನ, ಪೂಜೆ, ನದಿಯಲ್ಲಿ ಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ. ಋತುಮತಿಯಾದ ಮಹಿಳೆ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಬಾರದು ಎಂಬ ವೈಜ್ಞಾನಿಕ ಕಾರಣಗಳನ್ನು ಇಲ್ಲಿ ತಿಳಿಯೋಣ.…

Read More

ಕೆಎನ್ಎನ್ಡಿಜಿಟಲ್ ಡೆಸ್ಕ್ : ಹೈದರಾಬಾದ್’ನಲ್ಲಿ ಶನಿವಾರ ನಡೆದ ‘ಇಂಡಿಯನ್ ಪೊಲೀಸ್ ಫೋರ್ಸ್’ ವೆಬ್ ಸರಣಿಯ ಚಿತ್ರೀಕರಣದ ವೇಳೆ ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದ ಹೊರವಲಯದಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕರ ಕೈಗೆ ಗಾಯವಾಗಿದೆ. ಅವರನ್ನು ಕಾಮಿನೇನಿ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ವೈದ್ಯರು ಸಣ್ಣ ಶಸ್ತ್ರಚಿಕಿತ್ಸೆ ನಡೆಸಿದರು ಎನ್ನಲಾಗ್ತಿದೆ. https://kannadanewsnow.com/kannada/a-wife-who-killed-her-husband-with-her-lover-in-front-of-her-children-two-arrested/ https://kannadanewsnow.com/kannada/forget-google-drive-backup-soon-transfer-your-whatsapp-data-using-qr-code/ https://kannadanewsnow.com/kannada/do-you-sleep-for-less-than-8-hours-beware-a-shocking-fact-revealed-from-the-study/

Read More

ಬೆಂಗಳೂರು: ಹೊಸ ಕುಮಾರಕೃಪಾ ಅತಿಥಿಗೃಹದ ವ್ಯವಸ್ಥಾಪಕರಾಗಿ ಕಿರಣ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಆದೇಶ ಹೊರಡಿಸಿದೆ. ಕಿರಣ್ ಕುಮಾರ್ ಹೋಟೆಲ್ ಮಯೂರ ವ್ಯಾಲಿ ವ್ಯೂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಈ ಹಿಂದೆ ಇದ್ದ ಹೆಚ್​. ಎಸ್​ದೇವರಾಜ್ ಸ್ಯಾಂಟ್ರೋ ರವಿಯ ಅಪರಾಧಗಳಿಗೆ ನೆರವು ನೀಡಿದ ಹಿನ್ನೆಲೆ ಎತ್ತಂಗಡಿ ಮಾಡಲಾಗಿದೆ. ಹೀಗಾಗಿ ತೆರವಾದ ಸ್ಥಾನಕ್ಕೆ ಕಿರಣ್ ಕುಮಾರ್​​ನನ್ನು​ ನಿಯೋಜನೆ ಮಾಡಲಾಗಿದೆ. https://kannadanewsnow.com/kannada/a-wife-who-killed-her-husband-with-her-lover-in-front-of-her-children-two-arrested/ ಸ್ಯಾಂಟ್ರೋ ರವಿ ಯುವತಿಯರನ್ನು ನಂಬಿಸಿ ಮೋಸ ಮಾಡುವುದು, ವೇಶ್ಯಾವಾಟಿಕೆ ದಂಧೆಗೆ ಇಳಿಸೋದೆ ಅವನ ಕಾಯಕವಾಗಿದೆ. ಆರೋಪಿ ಸ್ಯಾಂಟ್ರೋ ರವಿ ಮೂಲತಃ ಮಂಡ್ಯದವನು. ವಯಸ್ಸು 52. ಮೈಸೂರಿನ ಇಟ್ಟಿಗೆಗೂಡು ಬಡಾವಣೆಯಲ್ಲಿ‌ ವಾಸವಾಗಿದ್ದನು. ಪಿಯುಸಿ ಡ್ರಾಪ್ ಔಟ್ ಆಗಿದ್ದ ಮಂಜುನಾಥ್​​​​ನ ತಂದೆ ಅಬಕಾರಿ ಇಲಾಖೆಯಲ್ಲಿ ಡಿವೈಎಸ್‌ಪಿ ಆಗಿದ್ದರು. ಈತನಿಗೆ ಮದುವೆಯಾಗಿ ಒಂದು ಹೆಣ್ಣು, ಒಂದು ಗಂಡು ಮಗು ಇದೆ. https://kannadanewsnow.com/kannada/a-wife-who-killed-her-husband-with-her-lover-in-front-of-her-children-two-arrested/

Read More

ಮಂಡ್ಯ: ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ರೌಡಿ ಶೀಟರ್ ಪೈಟರ್ ರವಿ ಕಾಣಿಸಿಕೊಂಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಅಲ್ಲದೇ ರೌಡಿ ಶೀಟರ್ ಜೊತೆ ವೇದಿಕೆಯನ್ನು ಸಚಿವ ಕೆ.ಗೋಪಾಲಯ್ಯ ಹಂಚಿಕೊಂಡಿರೋದು ಮತ್ತಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಇಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಬಗರ್ ಹುಕುಂ ಸಾಗುವಳಿ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವ ಕೆ.ಗೋಪಾಲಯ್ಯ ಕೂಡ ಹಾಜರಿದ್ದರು. ಇಂತಹ ಸಚಿವ ಹಾಗೂ ಸರ್ಕಾರಿ ಅಧಿಕಾರಿಗಳ ಜೊತೆ ವೇದಿಕೆಯನ್ನು ಫೈಟರ್ ರವಿ ಹಂಚಿಕೊಂಡಿರೋದಾಗಿ ತಿಳಇದು ಬಂದಿದೆ. ಇದಷ್ಟೇ ಅಲ್ಲದೇ ಸಚಿವರ ಹಾಗೂ ತಹಶೀಲ್ದಾರ್ ಮಧ್ಯೆ ಕುಳಿತು ಸರ್ಕಾರಿ ಕಡತಗಳನ್ನು ಫೈಟರ್ ರವಿ ಪರಿಶೀಲಿಸಿದ್ದಾರೆ ಎನ್ನಲಾಗಿದೆ. ನಾಗಮಂಗಲ ತಹಶೀಲ್ದಾರ್ ನಂದೀಶ್ ಜೊತೆಗೆ ಫೈಟರ್ ರವಿ ಗುಸುಗುಸು ಮಾತನಾಡಿದ್ದು ಕಂಡು ಬಂದಿದೆ. ಇನ್ನೂ ಇದಲ್ಲದೇ ಅಧಿಕಾರಿಗಳು, ಜನಪ್ರತಿನಿಧಿಗಳ ಜೊತೆಗೂಡಿ ರೌಡಿ ಶೀಟರ್ ಫೈಟರ್ ರವಿ ಜ್ಯೋತಿ ಕೂಡ ಬೆಳಗಿಸಿದ್ದಾರೆ. ಇದು ಈಗ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೀಡು ಮಾಡಿದೆ. ಈ…

Read More

ಚೀನಾ : ಚೀನಾದಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿವೆ. ಇದರ ನಡುವೆ ಅಲ್ಲಿನ ಸರ್ಕಾರವು ಕೋವಿಡ್ ನೀತಿಗಳ ಬಗ್ಗೆ ನಿಯಮಗಳ ಬಗ್ಗೆ ಟೀಕೆ ಮಾಡಿದ 1,000 ಕ್ಕೂ ಹೆಚ್ಚು ವಿಮರ್ಶಕರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಅಮಾನತುಗೊಳಿಸಿದೆ ಎಂದು ವರದಿಯಾಗಿದೆ. ಜನಪ್ರಿಯ ಸಿನಾ ವೈಬೊ( Sina Weibo) ಸಾಮಾಜಿಕ ಮಾಧ್ಯಮ ವೇದಿಕೆಯು ತಜ್ಞರು, ವಿದ್ವಾಂಸರು ಮತ್ತು ವೈದ್ಯಕೀಯ ಕಾರ್ಯಕರ್ತರ ಮೇಲಿನ ದಾಳಿಗಳು ಸೇರಿದಂತೆ 12,854 ಉಲ್ಲಂಘನೆಗಳನ್ನು ಗಮನಿಸಿದೆ. ಇದರ ಜೊತೆಗೆ 1,120 ಖಾತೆಗಳ ಮೇಲೆ ತಾತ್ಕಾಲಿಕ ಅಥವಾ ಶಾಶ್ವತ ನಿಷೇಧವನ್ನು ಹೊರಡಿಸಿದೆ ಎಂದು ತಿಳಿದು ಬಂದಿದೆ. ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ತನ್ನ ಕಠಿಣ ಲಾಕ್‌ಡೌನ್‌ಗಳು, ಕ್ವಾರಂಟೈನ್ ಕ್ರಮಗಳು ಮತ್ತು ಸಾಮೂಹಿಕ ಪರೀಕ್ಷೆಗಳನ್ನು ಸಮರ್ಥಿಸಲು ವೈದ್ಯಕೀಯ ಸಮುದಾಯವನ್ನು ಹೆಚ್ಚಾಗಿ ಅವಲಂಬಿಸಿದೆ. ಆದರೆ ಕಳೆದ ತಿಂಗಳು ತನ್ನೆಲ್ಲ ಕೋವಿಡ್ ನಿರ್ಬಂಧಗಳನ್ನು ತೆಗೆದು ಹಾಕಿತ್ತು. ಪರಿಣಾಮ ಕೋವಿಡ್ ಪ್ರರಕಣಗಳು ಉಲ್ಬಣಗೊಂಡಿದ್ದು, ವೈದ್ಯಕೀಯ ಕ್ಷೇತ್ರ ಸಾಕಷ್ಟು ಹೊರೆ ಎದುರಿಸುತ್ತಿದೆ. ಪಕ್ಷವು ಯಾವುದೇ ನೇರ ಟೀಕೆಗೆ ಅವಕಾಶ ನೀಡುವುದಿಲ್ಲ ಮತ್ತು ವಾಕ್…

Read More

ಕೆಎನ್ಎನ್ಡಿಜಿಟಲ್ ಡೆಸ್ಕ್ : ರಾತ್ರಿ ಸರಿಯಾಗಿ ನಿದ್ದೆ ಮಾಡದಿದ್ದರೆ ಮರುದಿನ ಪೂರ್ತಿ ನಿಷ್ಕ್ರಿಯರಾಗಿರುತ್ತೀರಿ. ಯಾವುದೇ ಕೆಲಸ ಮಾಡಲು ಸಾಧ್ಯವಾಗೋಲ್ಲ. ಸೋಮಾರಿತನ ಮೇಲುಗೈ ಸಾಧಿಸುತ್ತೆ. ನಿದ್ರಾಹೀನತೆ, ಖಿನ್ನತೆ ಮತ್ತು ಆತಂಕದಂತಹ ಸಮಸ್ಯೆಗಳೂ ಹೆಚ್ಚಾಗುತ್ತವೆ. ಇನ್ನು ನಿದ್ರೆಯ ಕೊರತೆಯು ದೈಹಿಕ ಸಮಸ್ಯೆಗಳನ್ನ ಉಂಟುಮಾಡುತ್ತದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನ ಕಡಿಮೆ ಮಾಡುತ್ತದೆ ಎಂದು ಅನೇಕ ಅಧ್ಯಯನಗಳು ತೋರಿಸುತ್ತವೆ. ದಿನದಿಂದ ದಿನಕ್ಕೆ ನಿದ್ರೆ ಕಡಿಮೆಯಾದ್ರೆ, ದೇಹ ದುರ್ಬಲವಾಗುತ್ತದೆ. ಇದರ ಜೊತೆಗೆ, ಅನೇಕ ರೋಗಗಳು ದೇಹದಲ್ಲಿ ಬೇರುಬಿಡುತ್ತವೆ. ನಿದ್ರೆಯ ಅಭಾವವು ತೀವ್ರವಾಗಿದ್ದಾಗ, ಪ್ರತಿರಕ್ಷಣಾ ವ್ಯವಸ್ಥೆಯು ಕಾಂಡಕೋಶಗಳನ್ನ ಹಾನಿಗೊಳಿಸುತ್ತದೆ. ಪರಿಣಾಮವಾಗಿ, ಉರಿಯೂತ ಮತ್ತು ಹೃದಯದ ತೊಂದರೆಗಳು ಸಹ ಹೆಚ್ಚಾಗುತ್ತವೆ. ನಿದ್ರೆಯ ಕೊರತೆಯು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗುತ್ತದೆ. ಈ ಕಾರಣದಿಂದಾಗಿ, ದೇಹದಲ್ಲಿ ಒತ್ತಡದ ಹಾರ್ಮೋನುಗಳ ಮಟ್ಟವು ಹೆಚ್ಚಾಗುತ್ತದೆ.ಒತ್ತಡದ ಹಾರ್ಮೋನುಗಳು ಸಾಮಾನ್ಯವಾಗಿ ಖಿನ್ನತೆ, ಆತಂಕ ಮತ್ತು ಒತ್ತಡವನ್ನ ಉಂಟು ಮಾಡುತ್ತವೆ. ಆದಾಗ್ಯೂ, ನಿದ್ರೆಯ ಕೊರತೆಯು ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಮುಖ್ಯವಾಗಿ ಹೃದಯದ ಮೇಲೆ…

Read More

ಬೆಂಗಳೂರು: ಗಂಡನನ್ನೇ ಮಕ್ಕಳೆದುರೇ ಪ್ರಿಯಕರನ ಜೊತೆ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಹೆಂಡತಿ ಹಾಗೂ ಪ್ರಿಯಕರನನ್ನ ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿದ ಹೆಂಡತಿ ಅನಿತಾ ಮಕ್ಕಳಿಗೆ ಯಾರಿಗೂ ಹೇಳದಂತೆ ಬಾಯಿ ಮುಚ್ಚಿಸಿ ಹೃದಯಾಘಾತ ಎಂದು ಹೇಳಿದ್ದಾಳೆ. ತಮ್ಮ ಪೋಷಕರೂ ಅನಿತಾ ಮಾತನ್ನು ನಂಬಿದ್ದರು.ಅನಿತಾ 6 ತಿಂಗಳ ಬಳಿ ಮಕ್ಕಳನ್ನ ಬಿಟ್ಟು ಪ್ರಿಯಕರ ರಾಕೇಶ್ ಜೊತೆ ಎಸ್ಕೇಪ್ ಆಗಿದ್ದಳು. ಇದರಿಂದ ಮಕ್ಕಳು ಅಜ್ಜಿ ಮನೆಯಲ್ಲೇ ಉಳಿದುಕೊಂಡಿದ್ದರು. https://kannadanewsnow.com/kannada/site-inspected-for-installation-of-statues-of-basavanna-kempegowda-in-front-of-vidhana-soudha/ ಈ ವೇಳೆ ಮೊಮ್ಮಕ್ಕಳು ಅಜ್ಜಿಯೊಂದಿಗೆ ಅನಿತಾ ಕೊಲೆ ಮಾಡಿರುವ ವಿಚಾರ ಹೇಳಿದ್ದರು. ಇದು ಗೊತ್ತಾದ ಕೂಡಲೇ ಅನಿತಾ ಪೋಷಕರು ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.ಮಕ್ಕಳ ಹೇಳಿಕೆ ಆಧಾರದ ಮೇಲೆ ಕೊಲೆ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಅನಿತಾ ಹಾಗೂ ಪ್ರಿಯಕರ ರಾಕೇಶ್‌ನನ್ನ ಬಂಧಿಸಿದ್ದಾರೆ. ಆರೋಪಿಗಳು ವಿಚಾರಣೆ ವೇಳೆ ಮಲಗಿದ್ದಾಗ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪ್ರಪಂಚದಾದ್ಯಂತ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ (WhatsApp) ಹೊಸ ಹೊಸ ಪೀಚರ್ಸ್ ಗಳನ್ನು ಪರಿಚಹಿಸುತ್ತಿರುತ್ತದೆ. ಈ ಮೂಲಕ ತನ್ನ ಬಳಕೆದಾರರಿಗೆ ನೂತನ ಅನುಭವವನ್ನು ನೀಡುತ್ತಿರುತ್ತದೆ. ಶೀಘ್ರದಲ್ಲೆ ವಾಟ್ಸಾಪ್  ಕ್ಯೂಆರ್ ಕೋಡ್ (QR code) ಮೂಲಕ ಡೇಟಾವನ್ನು ಒಂದು ಸಾಧನದಿಂದ ಇನ್ನೊಂದು ಸಾಧನಕ್ಕೆ ವರ್ಗಾಯಿಸಲು ಹೊಸ ವೈಶಿಷ್ಟ್ಯವನ್ನು ಪರಿಚಹಿಸಲಿದೆ. WaBetaInfo ವರದಿಯ ಪ್ರಕಾರ, ಗೂಗಲ್ ಡ್ರೈವ್ (Google drive)ನಲ್ಲಿ ತಮ್ಮ ಚಾಟ್‌ಗಳು ಮತ್ತು ಫೋಟೋ, ವಿಡಿಯೋಗಳನ್ನು ಬ್ಯಾಕಪ್ ಮಾಡದೆಯೇ ಹೊಸ ಆ್ಯಂಡ್ರಾಯ್ಡ್ ( Android) ಫೋನ್‌ಗೆ ತಮ್ಮ ಡೇಟಾವನ್ನು ವರ್ಗಾಯಿಸಲು ಬಯಸುವವರಿಗೆ ಈ ವೈಶಿಷ್ಟ್ಯವು ಅನುಕೂಲಕರ ಮತ್ತು ಪರಿಣಾಮಕಾರಿ ಪರಿಹಾರವನ್ನು ಒದಗಿಸುತ್ತದೆ ಎಂದೇಳಿದೆ. WaBetaInfo ಎಂಬುದು ಆನ್‌ಲೈನ್ ಪ್ಲಾಟ್‌ಫಾರ್ಮ್ ಆಗಿದ್ದು, ಮೆಟಾ-ಮಾಲೀಕತ್ವದ ಸಂದೇಶ ಅಪ್ಲಿಕೇಶನ್‌ಗೆ ಬರುವ ಹೊಸ ಮತ್ತು ಮುಂಬರುವ ವೈಶಿಷ್ಟ್ಯಗಳನ್ನು ಟ್ರ್ಯಾಕ್ ಮಾಡುತ್ತದೆ. ಮುಂಬರುವ ಪೀಚರ್ ಕ್ಯೂಆರ್ ಕೋಡ್ (QR code) ಮೂಲಕ ಡೇಟಾವನ್ನು ವರ್ಗಾಯಿಸುವ ಪ್ರಕ್ರಿಯೆಯನ್ನು ಹೆಚ್ಚು ಸುವ್ಯವಸ್ಥಿತವಾಗಿ ಮತ್ತು ವೇಗವಾಗಿ ಮಾಡುತ್ತದೆ. ವರದಿಯ…

Read More

ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ಸಂವಹನ ಕೌಶಲವನ್ನು ಹೆಚ್ಚಿಸಿ ಅವರ ಉದ್ಯೋಗಾವಕಾಶಗಳನ್ನು ವಿಸ್ತರಿಸಲು ಆಧುನಿಕ ತಂತ್ರೋಪಕರಣಗಳ ನೆರವಿನಿಂದ ತರಬೇತಿ ಕೊಡಲು ಒತ್ತು ನೀಡಲಾಗಿದೆ ಎಂದು ಕೌಶಲಾಭಿವೃದ್ಧಿ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ ಶನಿವಾರ ಹೇಳಿದರು. ಮಲ್ಲೇಶ್ವರದ 13ನೇ ಕ್ರಾಸ್ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕೌಶಲಾಭಿವೃದ್ಧಿ ನಿಗಮದ ವತಿಯಿಂದ ‘ಸಂಕಲ್ಪ್’ ಉಪಕ್ರಮದಡಿ ಸ್ಥಾಪಿಸಿರುವ ಭಾಷಾ ಪ್ರಯೋಗಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿ, ರಾಜ್ಯದಲ್ಲಿ 2022ರ ಜನವರಿಯಿಂದ ಈಚೆಗೆ 6 ಕಡೆಗಳಲ್ಲಿ ಇಂತಹ ಭಾಷಾ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಈ ಸಾಲಿನಲ್ಲಿ ಇದುವರೆಗೆ ಈ ಪ್ರಯೋಗಾಲಯಗಳಲ್ಲಿ 784 ವಿದ್ಯಾರ್ಥಿಗಳಿಗೆ ತರಬೇತಿ ಕೊಡಲಾಗಿದೆ ಎಂದು ವಿವರಿಸಿದರು. ಈ ಪ್ರಯೋಗಾಲಯಗಳಲ್ಲಿ ಹೆಡ್ ಸೆಟ್, ಮೈಕ್ರೋಫೋನ್, ಪ್ರೊಜೆಕ್ಟರ್ ಇತ್ಯಾದಿಗಳನ್ನು ಬಳಸಿ ಇಂಗ್ಲಿಷ್ ಸಂವಹನ ಕಲಿಸಲಾಗುವುದು. ಇಂಗ್ಲಿಷ್ ಉಚ್ಚಾರಣೆ ಸೇರಿದಂತೆ ಹಲವು ಅಂಶಗಳಿಗೆ ಗಮನ ಕೊಡಲಾಗುತ್ತದೆ. ನಮ್ಮ ಮಾತೃಭಾಷೆ ಕನ್ನಡದಂತೆಯೇ ವಿದ್ಯಾರ್ಥಿಗಳು ಇಂಗ್ಲೀಷ್ ನಲ್ಲಿಯೂ ಹಿಡಿತ ಸಾಧಿಸಬೇಕೆಂಬ ಆಶಯದೊಂದಿಗೆ ತರಬೇತಿಯನ್ನು ಕೊಡಲಾಗುತ್ತದೆ ಎಂದರು. ಈ ಕೇಂದ್ರವನ್ನು ಹೊರತುಪಡಿಸಿ ಚಳ್ಳಕೆರೆ, ಕೊಪ್ಪಳ, ಯಾದಗಿರಿಗಳಲ್ಲಿರುವ…

Read More