Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು: ರಾಜ್ಯ ಸರ್ಕಾರದಿಂದ ನೂತನವಾಗಿ 50 ತಾಲೂಕುಗಳನ್ನು ರಚಿಸಿ ಆದೇಶಿಸಿತ್ತು. ಈ ಬೆನ್ನಲ್ಲೇ 8 ತಾಲೂಕುಗಳಲ್ಲಿ ಹೊಸದಾಗಿ ಉಪ ನೋಂದಣಾಧಿಕಾರಿ ಕಚೇರಿ ಪ್ರಾರಂಭಿಸಲು ಆದೇಶಿಸಿದೆ. ಈ ಸಂಬಂಧ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ನೂತನವಾಗಿ ರಚಿಸಲಾಗಿರುವ 50 ತಾಲೂಕುಗಳ ಪೈಕಿ 34 ತಾಲೂಕುಗಳಲ್ಲಿ ಹೊಸದಾಗಿ ಉಪ ನೋಂದಣಿ ಕಚೇರಿಗಳನ್ನು ಪ್ರಾರಂಭಿಸಲು ಪ್ರಸ್ತಾಪಿಸಲಾಗಿರುತ್ತದೆ ಎಂದಿದ್ದಾರೆ. ಪ್ರಸ್ತುತ ಇರುವ ಮಾನದಂಡಗಳನ್ನು ಪೂರೈಸದಿದ್ದರೂ ಸಹ, ಹೊಸದಾಗಿ ರಚನೆಯಾಗಿರುವ ಹೊಸ ಉಪ ನೋಂದಣಿ ಕಚೇರಿಗಳನ್ನು ಪ್ರಾರಂಭಿಸಲು ಅನುಮತಿ ನೀಡುವಂತೆ ಹಾಗೂ ಪ್ರತಿ ಉಪ ನೋಂದಣಿ ಕಚೇರಿಗೆ ಹುದ್ದೆಗಳನ್ನು ಮಂಜೂರು ಮಾಡುವಂತೆ ನೋಂದಣಿ ಮಹಾಪರಿ ವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಕೋರಿರುತ್ತಾರೆ ಎಂದು ಹೇಳಿದ್ದಾರೆ. ಈ ಎಲ್ಲಾ ಪ್ರಸ್ತಾವನೆ ಹಿನ್ನಲೆಯಲ್ಲಿ ಹೊಸದಾಗಿ ರಚಿಸಲಾಗಿರುವ ತಾಲೂಕುಗಳ ಪೈಕಿ 8 ತಾಲೂಕುಗಳಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಹೊಸ ಉಪ ನೋಂದಣಾಧಿಕಾರಿಗಳ ಕಚೇರಿಗಳನ್ನು ಹೊಸದಾಗಿ ಪ್ರಾರಂಭಿಸಲು ಅನುಮೋದನೆ ನೀಡಿ ಆದೇಶಿಸಿದ್ದಾರೆ. ಈ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಕಾಗವಾಡ,…
ಕೆಎನ್ಎನ್ಡಿಜಿಟಲ್ ಡೆಸ್ಕ್ : ಎಲ್ಲಾ ಹಿಟ್ಟಿನ ಭಕ್ಷ್ಯಗಳು, ಬೋಂಡಾ, ವಡಾ, ಪೂರಿಗಳು ಮತ್ತು ಇತರ ತಿಂಡಿಗಳನ್ನ ಕರಿಯಲು ಎಣ್ಣೆಯನ್ನ ಬಳಸುವುದು ಕಡ್ಡಾಯವಾಗಿದೆ. ಆದ್ರೆ, ಕೆಲವರು ಒಮ್ಮೆ ಬಳಸಿದ ನಂತ್ರ ಉಳಿದ ಎಣ್ಣೆಯನ್ನು ಮರುಬಳಕೆ ಮಾಡುತ್ತಾರೆ. ಆದ್ರೆ, ಹಾಗೆ ಬಳಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಈಗಾಗಲೇ ಬಳಸಿದ ಎಣ್ಣೆಯನ್ನ ಮತ್ತೆ ಕರಿಯಲು ಮತ್ತು ಇತರ ಭಕ್ಷ್ಯಗಳನ್ನ ಮಾಡಲು ಬಳಸಲಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗಬಹುದು. ಒಮ್ಮೆ ಬಳಸಿದ ಎಣ್ಣೆಯ ಪುನರಾವರ್ತಿತ ಬಳಕೆಯು ಅನೇಕ ರೀತಿಯಲ್ಲಿ ಆರೋಗ್ಯವನ್ನ ಹಾನಿಗೊಳಿಸುತ್ತದೆ. ಮೇಲಾಗಿ, ಗಂಭೀರ ಕಾಯಿಲೆಗಳು ಬರುವ ಅಪಾಯವೂ ಇದೆ. ಹಾಗಿದ್ರೆ, ಈಗ ಒಮ್ಮೆ ಬಳಸಿದ ಎಣ್ಣೆಯನ್ನ ಮತ್ತೆ ಮತ್ತೆ ಬಳಸುವುದರಿಂದ ಆಗುವ ಅನಾನುಕೂಲಗಳನ್ನ ತಿಳಿಯೋಣ. ಕ್ಯಾನ್ಸರ್.! ವಡಿ ಎಣ್ಣೆಯನ್ನ ಪದೇ ಪದೇ ಬಳಸುವುದರಿಂದ ಕ್ಯಾನ್ಸರ್ ಉಂಟಾಗುತ್ತದೆ. ವಾಸ್ತವವಾಗಿ, ತೈಲದ ಪುನರಾವರ್ತಿತ ತಾಪನವು ಪ್ರಿರಾಡಿಕಲ್’ಗಳನ್ನ ಪ್ರವೇಶಿಸಲು ಕಾರಣವಾಗುತ್ತದೆ. ಹಾಗಾಗಿ ಇದರೊಂದಿಗೆ ಮಾಡಿದ ತಿನಿಸುಗಳನ್ನ ತಿನ್ನುವುದರಿಂದ ಅನಾರೋಗ್ಯ ಕಾಡಬಹುದು. ಆಹಾರದಲ್ಲಿರುವ ಉತ್ಕರ್ಷಣ ನಿರೋಧಕಗಳು ನಾಶವಾಗುತ್ತವೆ. ಇನ್ನು ಕ್ಯಾನ್ಸರ್ ಕೋಶಗಳು…
ನವದೆಹಲಿ: ದೆಹಲಿಯ ಸದರ್ ಬಜಾರ್‌ನಲ್ಲಿರುವ ಕಟ್ಟಡವೊಂದರಲ್ಲಿ ಶಂಕಿತ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ವರದಿಯಾಗಿದೆ. ಇಂದು ಸಂಜೆ 7 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ತೆರಳಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ ಎಂದು ತಿಳಿದು ಬಂದಿದೆ. https://twitter.com/ANI/status/1611744447221633024 ವಿವರಗಳ ಪ್ರಕಾರ, ದೆಹಲಿಯ ಖುರ್ಶೀಡ್ ಮಾರುಕಟ್ಟೆಯ ಪಕ್ಕದಲ್ಲಿರುವ ಸದರ್ ಬಜಾರ್‌ನ ನ್ಯೂ ಪಾರ್ಕಿಂಗ್‌ನಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. https://kannadanewsnow.com/kannada/do-you-know-the-benefits-of-this-plant-if-you-know-about-the-plant-you-will-find-it/ https://kannadanewsnow.com/kannada/breaking-news-mcdonalds-announces-layoffs-directly-impacts-2-lakh-employees-mcdonalds-company/ https://kannadanewsnow.com/kannada/chikkaballapur-festival-a-foreword-to-write-the-future-of-peoples-lives-says-cm-basavaraj-bommai/
ಕೆಎನ್ಎನ್ಡಿಜಿಟಲ್ ಡೆಸ್ಕ್ : ಫಾಸ್ಟ್ ಫುಡ್ ಕಂಪನಿ ಮೆಕ್ಡೊನಾಲ್ಡ್ಸ್ ಕೂಡ ತನ್ನ ಉದ್ಯೋಗಿಗಳನ್ನ ಕೆಲಸದಿಂದ ತೆಗೆದುಹಾಕುವುದಾಗಿ ಘೋಷಿಸಿದೆ. ಈ ಮಾಹಿತಿಯನ್ನ ಕಂಪನಿಯ ಸಿಇಒ ಕ್ರಿಸ್ ಕೆಂಪ್ಜಿನ್ಸ್ಕಿ ನೀಡಿದ್ದು, ಅದರ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ. ಕರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ, ಕಂಪನಿಯು ಉತ್ತಮ ಗಳಿಕೆಯನ್ನು ಗಳಿಸಿದೆ ಎಂದು ನಾವು ನಿಮಗೆ ಹೇಳುತ್ತೇವೆ ಏಕೆಂದರೆ ಆ ಸಮಯದಲ್ಲಿ ಕಂಪನಿಯು ಹೆಚ್ಚಿನ ಸಂಖ್ಯೆಯ ಆರ್ಡರ್ಗಳನ್ನು ವಿತರಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಅನೇಕ ದೊಡ್ಡ ಅಮೇರಿಕನ್ ಕಂಪನಿಗಳು ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನ ವಜಾಗೊಳಿಸುವ ಬಗ್ಗೆ ಮಾತನಾಡಿದಾಗ, ಮೆಕ್ಡೊನಾಲ್ಡ್’ನ ಈ ವಜಾದ ಸುದ್ದಿ ಬೆಳಕಿಗೆ ಬಂದಿದೆ. ಸುದ್ದಿ ಏನು.? ಮಾಧ್ಯಮ ವರದಿಗಳ ಪ್ರಕಾರ, ಮೆಕ್ಡೊನಾಲ್ಡ್ ಶೀಘ್ರದಲ್ಲೇ ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನ ಕೆಲಸದಿಂದ ತೆಗೆದುಹಾಕಬಹುದು. ಅಂತಹ ಪರಿಸ್ಥಿತಿಯಲ್ಲಿ, ಅದರ ಪ್ರಕ್ರಿಯೆಯೂ ಪ್ರಾರಂಭವಾಗಿದೆ, ಈ ವರ್ಷದ ಏಪ್ರಿಲ್’ನಲ್ಲಿ ಕೆಲಸದಿಂದ ತೆಗೆದುಹಾಕುವ ಬಗ್ಗೆ ಮಾತುಕತೆ ನಡೆಯುತ್ತಿದೆ. ವಾಲ್ ಸ್ಟ್ರೀಟ್ ಜರ್ನಲ್’ಗೆ ನೀಡಿದ ಸಂದರ್ಶನದಲ್ಲಿ, ಸಿಇಒ ಕ್ರಿಸ್ ಇದನ್ನ ಬಹಿರಂಗಪಡಿಸಿದ್ದಾರೆ ಮತ್ತು…
ಚಿಕ್ಕಬಳ್ಳಾಪುರ : ಬಯಲುಸೀಮೆಯ ಭಾಗ, ಐತಿಹಾಸಿಕ ತಾಣಗಳ ಕೇಂದ್ರವಾದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶನಿವಾರ, ಚಿಕ್ಕಬಳ್ಳಾಪುರ ಉತ್ಸವಕ್ಕೆ ಅದ್ದೂರಿಯ ಚಾಲನೆ ದೊರೆಯಿತು. ಕಲೆ, ಕ್ರೀಡೆ, ಆಹಾರ, ಉದ್ಯೋಗಾವಕಾಶ, ಆರೋಗ್ಯ ಮೇಳ ಮೊದಲಾದವುಗಳನ್ನೊಳಗೊಂಡ ಉತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಹಾಗೆಯೇ, ಚಿಕ್ಕಬಳ್ಳಾಪುರದ ಪುಣ್ಯಭೂಮಿಯು ಜನರ ಬದುಕಿನ ಭವಿಷ್ಯವನ್ನು ಬರೆಯಲು ʼಚಿಕ್ಕಬಳ್ಳಾಪುರ ಉತ್ಸವʼವು ಮುನ್ನುಡಿಯಾಗಲಿದೆ ಎಂದು ಮುಖ್ಯಮಂತ್ರಿಗಳು ಹಾರೈಸಿದರು. ಜನವರಿ 7 ರಿಂದ 14 ವರೆಗೆ ಚಿಕ್ಕಬಳ್ಳಾಪುರ ಉತ್ಸವ ನಡೆಯಲಿದೆ. ಈ ವಿಜೃಂಭಣೆಯ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಚಿಕ್ಕಬಳ್ಳಾಪುರದ ಪುಣ್ಯಭೂಮಿಯು ಜನರ ಬದುಕಿನ ಭವಿಷ್ಯವನ್ನು ಬರೆಯಲು ʼಚಿಕ್ಕಬಳ್ಳಾಪುರ ಉತ್ಸವʼವು ಮುನ್ನುಡಿಯಾಗಲಿದೆ. ಪ್ರಖ್ಯಾತ ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ, ವಿಜ್ಞಾನದಲ್ಲಿ ಸಾಧನೆ ಮಾಡಿದ ಸಿಎನ್‌ಆರ್ ರಾವ್ ಇಲ್ಲಿಯವರೇ ಆಗಿದ್ದಾರೆ. ಹೀಗೆ ಇಬ್ಬರು ಭಾರತರತ್ನಗಳನ್ನು ಈ ಜಿಲ್ಲೆ ನೀಡಿದೆ. ಇತಿಹಾಸ ಪ್ರಸಿದ್ಧ ಭೋಗನಂದೀಶ್ವರ ದೇವಸ್ಥಾನ ಇಲ್ಲೇ ಇದೆ. ಇಂತಹ ವಿಶಿಷ್ಟ ಜಿಲ್ಲೆಯನ್ನು ಈಗ ಫಲ ಪುಷ್ಪ ಗಿರಿಧಾಮ ನಾಡು ಎಂದು ಕರೆಯಲಾಗಿದೆ. ಈ ಹೆಸರನ್ನು…
ಬೆಳಗಾವಿ: ಜಿಲ್ಲೆಯ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷರ ಮೇಲೆ ಇಂದು ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆಸಲಾಗಿದೆ. ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವಂತ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಆಸ್ಪತ್ರೆಗೆ ದಾಖಲಾಗಿರೋದಾಗಿ ತಿಳಿದು ಬಂದಿದೆ. ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಬಳಿಯಲ್ಲಿ ರೋಡ್ ಹಂಮ್ಸ್ ಬಳಿಯಲ್ಲಿ ಕಾರು ನಿಧಾನ ಮಾಡಿದಂತ ಸಂದರ್ಭದಲ್ಲಿ, ಬೆಳಗಾವಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆಸಲಾಗಿದೆ. ಕಾರಿನ ಮೇಲೆ ದಿಢೀರ್ ಗುಂಡಿನ ದಾಳಿಯಿಂದಾಗಿ ಬೆಳಗಾವಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಗಲ್ಲಕ್ಕೆ ತಗುಲಿರುವಂತ ಗುಂಡು, ಆ ಬಳಿಕ ಚಾಲಕನ ಕೈಗೆ ತಗುಲಿದೆ. ಅಲ್ಲಿಂದ ತಪ್ಪಿಸಿಕೊಂಡು ಕಾರಿನಿಂದ ಜೋರಾಗಿ ತೆರಳಿದಂತ ವೇಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವಂತ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಹಾಗೂ ಚಾಲಕ ಸಮೀಪದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. https://kannadanewsnow.com/kannada/man-loses-wallet-containing-valuable-documents-while-walking-its-exciting-to-find-it-read-this-news/ https://kannadanewsnow.com/kannada/good-news-an-important-decision-by-the-central-government-good-news-for-taxpayers-extension-of-time-limit-income-tax/ https://kannadanewsnow.com/kannada/26-people-tested-positive-for-coronavirus-in-the-state-today-taking-the-number-of-active-cases-to-235/
ಕೆಎನ್ಎನ್ಡಿಜಿಟಲ್ ಡೆಸ್ಕ್ : ಪ್ರಸ್ತುತ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳು ವಯಸ್ಸಿನ ಭೇದವಿಲ್ಲದೇ ಎಲ್ಲಾ ವಯೋಮಾನದವರನ್ನ ಕಾಡುತ್ತಿವೆ. ಇದಕ್ಕೆ ಮುಖ್ಯ ಕಾರಣ ಅವರ ಆಹಾರ ಪದ್ಧತಿ ಮತ್ತು ಜೀವನಶೈಲಿ ಎಂದು ಹೇಳಬಹುದು. ಆದ್ರೆ, ಆಯುರ್ವೇದ ತಜ್ಞರು ಹೇಳುವಂತೆ ಎಲ್ಲಾ ರೀತಿಯ ಸಮಸ್ಯೆಗಳಿಗೂ ವೈದ್ಯರ ಅವಶ್ಯಕತೆ ಇರುವುದಿಲ್ಲ. ಅಲ್ಲದೇ ವೈದ್ಯರು ನೀಡುವ ಔಷಧಗಳನ್ನ ಬಳಸುವುದು ದೇಹಕ್ಕೆ ಒಳ್ಳೆಯದಲ್ಲ. ಯಾಕಂದ್ರೆ, ಅವುಗಳಲ್ಲಿನ ರಾಸಾಯನಿಕಗಳು ಸ್ವಲ್ಪ ಸಮಯದ ನಂತರ ನಮ್ಮ ದೇಹದ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮಗಳನ್ನ ತೋರಿಸುವ ಸಾಧ್ಯತೆಯಿದೆ. ಬದಲಿಗೆ ಆಯುರ್ವೇದವನ್ನ ಅವಲಂಬಿಸುವಂತೆ ಸೂಚಿಸುತ್ತಾರೆ. ಆಯುರ್ವೇದದ ಮೂಲಕವೂ ನಮ್ಮ ಆರೋಗ್ಯ ಸಮಸ್ಯೆಗಳನ್ನ ನಿವಾರಿಸಿಕೊಳ್ಳಬಹುದು ಎನ್ನುತ್ತಾರೆ. ಆದ್ರೆ, ಈ ಔಷಧಿಗಳನ್ನ ಬಳಸುವಾಗ ಆಯುರ್ವೇದ ವೈದ್ಯರ ಮೇಲ್ವಿಚಾರಣೆಯನ್ನ ಹೊಂದಿರುವುದು ಬಹಳ ಅವಶ್ಯಕ. ಈ ಔಷಧಿಗಳನ್ನ ತಿಳಿಯದೆ ಬಳಸಿದ್ರೆ, ಇತರ ಆರೋಗ್ಯ ಸಮಸ್ಯೆಗಳ ಸಾಧ್ಯತೆಯಿದೆ. ನಮ್ಮ ಸುತ್ತಮುತ್ತ ಹಲವಾರು ರೀತಿಯ ಗಿಡಗಳನ್ನ ನೋಡುತ್ತಲೇ ಇರುತ್ತೇವೆ. ಆದ್ರೆ, ಕೆಲವು ಸಸ್ಯಗಳು ವಿಷಕಾರಿ ಮತ್ತು ಕೆಲವು ಸಸ್ಯಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕುಪ್ಪಿಗಿಡ…
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಚಳಿಗಾಲದಲ್ಲಿ ಮುಖ ಹಾಗೂ ದೇಹದ ಚರ್ಮದ ಬಗ್ಗೆ ಕಾಳಜಿ ವಹಿಸುವುದು ತುಂಬಾನೇ ಮುಖ್ಯವಾಗಿದೆ. ಈ ಸಮಯದಲ್ಲಿ ಚರ್ಮವು ಹೆಚ್ಚು ಒಣಗುತ್ತದೆ. ಇದಕ್ಕೆ ಮಾರುಕಟ್ಟೆಗಳಲ್ಲಿಸ ಸಿಗುವ ದುಬಾರಿ ವಸ್ತುಗಳ ಬಳಸುವ ಬದಲು ಮನೆಯಲ್ಲಿರುವ ಪದಾರ್ಥಗಳಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಸಾಮಾನ್ಯ ಅಡುಗೆ ಮನೆಯಲ್ಲಿ ಸಕ್ಕರೆ ಇದ್ದೆ ಇರುತ್ತದೆ. ಇದನ್ನು ಮೂಖದ ಆರೋಗ್ಯಕ್ಕೆ ಬಳಸಬಹುದು. ಇದು ಮುಖ ಹಾಗೂ ಚರ್ಮವನ್ನು ಆರೋಗ್ಯವಾಗಿರಲು ಸಹಾಯಕವಾಗಿದೆ. ಸಕ್ಕರೆಯ ಸಹಾಯದಿಂದ ನೈಸರ್ಗಿಕ ಸ್ಕ್ರಬರ್‌ಗಳನ್ನು ತಯಾರಿಸಬಹುದು. ಇದು ಮುಖವನ್ನು ಶುದ್ಧೀಕರಿಸುತ್ತದೆ. ಇದನ್ನು ತಯಾರಿಸುವ ವಿಧಾನ ತಿಳಿಯೋಣ. ಗ್ರೀನ್ ಟಿ ಮತ್ತು ಸಕ್ಕರೆ ಹಸಿರು ಚಹಾವು ವಿರೋಧಿ ಆಕ್ಸಿಡೆಂಟ್, ಆಂಟಿ -ಇನ್ಫ್ಲಾಮೇಟರಿ, ವಿರೋಧಿ ಸೂಕ್ಷ್ಮಜೀವಿಯ ಗುಣಲಕ್ಷಣಗಳನ್ನು ಹೊಂದಿದೆ. ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ಸ್ಕ್ರಬ್ ತಯಾರಿಸಲು, ಒಂದು ಟೀಚಮಚ ಗ್ರೀನ್ ಟೀ ಎಲೆಗಳು ಮತ್ತು ಒಂದು ಟೀಚಮಚ ಸಕ್ಕರೆಯನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ. ಅದಕ್ಕೆ ಆಲಿವ್ ಎಣ್ಣೆಯ ಸಹಾಯದಿಂದ ಪೇಸ್ಟ್ ತಯಾರಿಸಿ. ಈ ಮಿಶ್ರಣದಿಂದ…
ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 26 ಮಂದಿಗೆ ಕೊರೋನಾ ಪರೀಕ್ಷೆಯಲ್ಲಿ ( Corona Test ) ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಸಕ್ರೀಯ ಸೋಂಕಿತರ ಸಂಖ್ಯೆ 235ಕ್ಕೆ ಏರಿಕೆಯಾಗಿದೆ. ಈ ಕುರಿತು ರಾಜ್ಯ ಆರೋಗ್ಯ ಇಲಾಖೆ ( Karnataka Health Department ) ಮಾಹಿತಿ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರ 21, ಮೈಸೂರು 2, ಶಿವಮೊಗ್ಗ, ಕೊಡಗು ಮತ್ತು ಬೆಳಗಾವಿಯಲ್ಲಿ ತಲಾ ಒಬ್ಬರು ಸೇರಿದಂತೆ 26 ಮಂದಿಗೆ ಕೋವಿಡ್ ಪಾಸಿಟಿವ್ ( Covid19 Positive ) ಎಂಬುದಾಗಿ ದೃಢಪಟ್ಟಿರೋದಾಗಿ ತಿಳಿಸಿದೆ. ಇಂದು 26 ಮಂದಿಗೆ ಕೊರೋನಾ ಪಾಸಿಟಿವ್ ಬಂದ ಕಾರಣ, ಸೋಂಕಿತರ ಸಂಖ್ಯೆ 40,72,258ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 69 ಸೇರಿದಂತೆ ಈವರೆಗೆ 40,31,715 ಮಂದಿ ಗುಣಮುಖರಾಗಿದ್ದಾರೆ. ಈಗ ರಾಜ್ಯಾಧ್ಯಂತ 235 ಮಂದಿ ಸಕ್ರೀಯ ಸೋಂಕಿತರು ಇರುವುದಾಗಿ ಹೇಳಿದೆ. https://kannadanewsnow.com/kannada/man-loses-wallet-containing-valuable-documents-while-walking-its-exciting-to-find-it-read-this-news/ https://kannadanewsnow.com/kannada/two-killed-in-hit-and-run-at-kr-puram-in-bengaluru-car-driver-arrested/ https://kannadanewsnow.com/kannada/good-news-an-important-decision-by-the-central-government-good-news-for-taxpayers-extension-of-time-limit-income-tax/
ಬೆಂಗಳೂರು: ರಾಜ್ಯದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಿಡಿಸಿದಂತ ಸ್ಯಾಂಟ್ರೋ ರವಿ ಸುದ್ದಿ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಠಿಸಿದೆ. ಇಂದು ಮತ್ತೆ ಸರಣಿ ಟ್ವಿಟ್ ಮಾಡಿರುವಂತ ಜೆಡಿಎಸ್ ಪಕ್ಷವು ಈ ಸ್ಯಾಂಟ್ರೋ ರವಿಗೆ ಕುಮಾರಕೃಪ ಅತಿಥಿ ಗೃಹದಲ್ಲಿ ತಿಂಗಳುಗಳ ಕಾಲ ವಾಸವಿರುವ ವ್ಯವಸ್ಥೆ ಕಲ್ಪಿಸಿದ್ದು ಯಾರು? ಮುಖ್ಯಮಂತ್ರಿ ಬೊಮ್ಮಾಯಿ ಮನೆಯಿಂದ ಕೂಗಳತೆಯಲ್ಲಿ ಇದು ನಡೆದಿದೆ ಎಂಬುದೇ ನಿಮ್ಮ ಆಡಳಿತ ಎಷ್ಟು ಕುಸಿದಿದೆ ಎಂದು ಹೇಳುತ್ತಿದೆ ಎಂದು ವಾಗ್ಧಾಳಿ ನಡೆಸಿದೆ. ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವಂತ ಜೆಡಿಎಸ್ ಪಕ್ಷವು, ಬಿಜೆಪಿಯವರೆ, ದಾಖಲೆಗಳಿಲ್ಲದೆ ಮಾತಾಡುವುದು ಕುಮಾರಸ್ವಾಮಿ ಅವರ ಜಾಯಮಾನವೇ ಅಲ್ಲ. ಸ್ಯಾಂಟ್ರೋ ರವಿ ಯಾರೂ ಅಂತ ಗೊತ್ತೇ ಇಲ್ಲ ಎಂದ ನಿಮ್ಮ ಸಚಿವರನ್ನು ಸಮರ್ಥಿಸಲು ಈಗ ಕಾಗಕ್ಕ-ಗುಬ್ಬಕ್ಕನ ಕಥೆ ಹೇಳುತ್ತಿದ್ದೀರಿ ಎಂದು ಹೇಳಿದೆ. https://twitter.com/JanataDal_S/status/1611731525854453761 ಈ ಸ್ಯಾಂಟ್ರೋ ರವಿಗೆ ಕುಮಾರಕೃಪ ಅತಿಥಿ ಗೃಹದಲ್ಲಿ ತಿಂಗಳುಗಳ ಕಾಲ ವಾಸವಿರುವ ವ್ಯವಸ್ಥೆ ಕಲ್ಪಿಸಿದ್ದು ಯಾರು? ಮುಖ್ಯಮಂತ್ರಿ ಬೊಮ್ಮಾಯಿ ಮನೆಯಿಂದ ಕೂಗಳತೆಯಲ್ಲಿ ಇದು ನಡೆದಿದೆ ಎಂಬುದೇ…