Author: KNN IT TEAM

ಕೆಎನ್ಎನ್ಡಿಜಿಟ್ ಡೆಸ್ಕ್ : ಅಮೆರಿಕದಲ್ಲಿ 100 ದಶಲಕ್ಷಕ್ಕೂ ಹೆಚ್ಚು ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಬುಧವಾರ ನವೀಕರಿಸಿದ ಸಿಡಿಸಿ ದತ್ತಾಂಶದ ಪ್ರಕಾರ, ಡಿಸೆಂಬರ್ 21 ರವರೆಗೆ ದೇಶದಲ್ಲಿ 100,216,983 ದೃಢಪಡಿಸಿದ ಕೋವಿಡ್ -19 ಪ್ರಕರಣಗಳು ಕಂಡುಬಂದಿವೆ. ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ವಿಶ್ವದಾದ್ಯಂತ 100 ಮಿಲಿಯನ್ ಕೋವಿಡ್ -19 ಪ್ರಕರಣಗಳನ್ನ ದಾಖಲಿಸಿದ ಮೊದಲ ದೇಶ ಅಮೆರಿಕವಾಗಿದೆ. ಮನೆಯಲ್ಲಿ ಪರೀಕ್ಷೆ ಮಾಡುವ ಜನರು ತಮ್ಮ ಫಲಿತಾಂಶಗಳನ್ನ ಸಾರ್ವಜನಿಕ ಆರೋಗ್ಯ ಇಲಾಖೆಗೆ ಕಳುಹಿಸುವುದಿಲ್ಲ ಮತ್ತು ಅನೇಕ ಜನರು ಪರೀಕ್ಷೆಗೆ ಒಳಗಾಗುವುದಿಲ್ಲವಾದ್ದರಿಂದ ನಿಜವಾದ ಸಂಖ್ಯೆ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ. 1.08 ದಶಲಕ್ಷಕ್ಕೂ ಹೆಚ್ಚು ಜನರು ಸಾವು.! ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಯುಎಸ್ನಲ್ಲಿ ಕೋವಿಡ್ -19 ನಿಂದ 1.08 ದಶಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಸಿಡಿಸಿ ದತ್ತಾಂಶವು ತೋರಿಸುತ್ತದೆ. ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (AAP)ಯ ಹೊಸ ವರದಿಯ ಪ್ರಕಾರ, ಡಿಸೆಂಬರ್ 22ಕ್ಕೆ ಕೊನೆಗೊಂಡ ವಾರದಲ್ಲಿ ಯುಎಸ್’ನಲ್ಲಿ ಸುಮಾರು 48,000 ಮಕ್ಕಳು ಕೋವಿಡ್ -19 ಪ್ರಕರಣಗಳನ್ನ…

Read More

ಬೆಳಗಾವಿ : ಇದೀಗ ಸುವರ್ಣಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ಆರಂಭವಾಗಿದೆ. ಪಂಚಮಸಾಲಿ ಮತ್ತು ಒಕ್ಕಲಿಗರ ಮೀಸಲಾತಿ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಪಂಚಮಸಾಲಿ ಮೀಸಲಾತಿ’ ಗೆ ಒತ್ತಾಯಿಸಿ ಪಂಚಮಸಾಲಿ ಸಮುದಾಯದ ಮುಖಂಡರು ಭಾರೀ ಪ್ರತಿಭಟನೆ ನಡೆಸಿದ್ದು, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಬೊಮ್ಮಾಯಿ ಮಹತ್ವದ ನಿರ್ಧಾರ ಘೋಷಿಸಲಿದ್ದಾರೆ. ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಕ್ಕೆ ಪ್ರತ್ಯೇಕ ಪ್ರವರ್ಗ ರಚಿಸಿ ಮೀಸಲಾತಿ ನೀಡುವ ಸಂಬಂಧ ಚರ್ಚೆ ನಡೆಯುವ ಸಾಧ್ಯತೆ ಇದೆ.ಇನ್ನು ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಭೀತಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. 3ಎ ಅಡಿಯಲ್ಲಿ ಒಕ್ಕಲಿಗ, ರೆಡ್ಡಿ, ಬಲಿಜ, ಬಂಟ, ಕೊಡವ ಸೇರಿ 12 ಜಾತಿಗಳಿವೆ. 3ಬಿ ಅಡಿಯಲ್ಲಿ ವೀರಶೈವ ಮತ್ತು ಲಿಂಗಾಯತ ಸಮುದಾಯಗಳು ಮತ್ತು ಉಪಜಾತಿಗಳನ್ನು ಶಿಫ್ಟ್ ಮಾಡುವ ಚಿಂತನೆ ನಡೆಯುತ್ತಿದೆ. ಇಡಬ್ಲ್ಯುಎಸ್ ಅಡಿ ರಾಜ್ಯಗಳಿಗೆ ಇರುವ ಅಧಿಕಾರ ಚಲಾಯಿಸಿ,…

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಜನರು ಹೊಸ ವರ್ಷಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ನೂತನ ವರ್ಷದ ಸಂಭ್ರಮಕ್ಕಾಗಿ ವಿವಿಧ ರೀತಿಯಲ್ಲಿ ಪಾರ್ಟಿಗೆ ಪ್ಲಾನ್ ಕೂಡ ಮಾಡಿಕೊಂಡಿದ್ದಾರೆ. ದೇಶದಲ್ಲಿ ಕೆಲವರು ಯುಗಾದಿ ಹೊಸ ವರ್ಷವೆಂದು ಪರಿಗಣಿಸುತ್ತಾರೆ. ಅಧಿಕ ಸಂಖ್ಯೆಯ ಜನರು ಡಿಸೆಂಬರ್ 31 ರ 12 ಗಂಟೆಗೆ ಹೊಸ ವರ್ಷವೆಂದು ಪರಿಗಣಿಸಯತ್ತಾರೆ. ವಿಶೇಷವೆಂದರೆ ನಮ್ಮಗಿಂತ ಮೊದಲು ಕೆಲವು ದೇಶಗಳಲ್ಲಿ ಹೊಸ ವರ್ಷವನ್ನು ಬರ ಮಾಡಿಕೊಳ್ಳುತ್ತವೆ. ಇಲ್ಲಿ 12 ಗಂಟೆಗಿಂತ ಮೊದಲೇ ನೂತನ ವರ್ಷಾರಣೆಯ ಸಂಭ್ರಮವಿರುತ್ತದೆ. ಭಾರತಕ್ಕಿಂತ ಮೊದಲು ಹೊಸ ವರ್ಷವನ್ನು ಆಚರಿಸುವ ದೇಶಗಳು ಯಾವುವು ಎಂಬುದರ ಕುರಿತಂತೆ ಮಾಹಿತಿ ಇಲ್ಲಿದೆ ಹೊಸ ವರ್ಷಾಚರಣೆ ಮೊದಲು ನಡೆಯುವ ದೇಶಗಳಿವು ನಮ್ಮ ದೇಶದ ಬಗ್ಗೆ ಹೇಳುವುದಾದರೆ, ಡಿಸೆಂಬರ್ 31 ರ ಮಧ್ಯರಾತ್ರಿ 12 ಗಂಟೆಯ ನಂತರ ಹೊಸ ವರ್ಷದ ಆಚರಣೆ ಪ್ರಾರಂಭವಾಗುತ್ತದೆ. ಆದರೆ, ಜಗತ್ತಿನಲ್ಲಿ ಮೊದಲ ಹೊಸ ವರ್ಷಾರಣೆ ದ್ವೀಪ ‘ಕಿರಿಬಾತಿ’ಯಲ್ಲಿ ನಡೆಯುತ್ತದೆ. ಭಾರತದ ಕಾಲದ ಪ್ರಕಾರ, ನಮ್ಮ ದೇಶದಲ್ಲಿ ಡಿಸೆಂಬರ್…

Read More

ರಾಮನಗರ : ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ವಲಯದಲ್ಲಿ ರಾಜಕೀಯ ಕಸರತ್ತುಗಳು ಆರಂಭವಾಗಿದೆ. ಬಿಜೆಪಿ ಸೇರ್ಪಡೆ ಕುರಿತು ಸಂಸದೆ ಸುಮಲತಾ ಜೊತೆ ಪಕ್ಷದ ವರಿಷ್ಠರು ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಎಂಎಲ್ಸಿ ಸಿ ಪಿ ಯೋಗೇಶ್ವರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಸುಮಲತಾ ಮಾನಸಿಕವಾಗಿ ಬಿಜೆಪಿ ಜೊತೆಗೆ ಇದ್ದಾರೆ ಅನ್ನಿಸುತ್ತಿದೆ, ಹಳೇ ಮೈಸೂರು ಭಾಗದ ಹಲವು ಮುಖಂಡರು ಬಿಜೆಪಿ ಸೇರ್ತಾರೆ ಎಂದು ಹೇಳಿದರು. ಆಪರೇಷನ್ ಕಮಲದ ಕುರಿತು ಬಿಜೆಪಿ ಎಂಎಲ್ಸಿ ಸಿ ಪಿ ಯೋಗೇಶ್ವರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಶೀಘ್ರದಲ್ಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಹಲವು ಮುಖಂಡರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದ್ದಾರೆ.ಎರಡೂ ಪಕ್ಷದದಿಂದ ಮುಖಂಡರು ಬರಲಿದ್ದಾರೆ, ನಾವು ಹೇಳೋದಕ್ಕಿಂತ ಮಾಡಿ ತೋರಿಸುತ್ತೀವಿ, ಕಾದು ನೋಡಿ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಸಿ ಪಿ ಯೋಗೇಶ್ವರ್ ಹೇಳಿದ್ದಾರೆ. https://kannadanewsnow.com/kannada/my-priority-is-to-give-compensation-to-the-farmers-and-not-to-pay-the-contractors/ https://kannadanewsnow.com/kannada/application-date-for-char-dham-yatra-subsidy-extended-till-jan-31/

Read More

ನವದೆಹಲಿ : ಚುನಾವಣಾ ಆಯೋಗವು ದೇಶೀಯ ವಲಸೆ ಮತದಾರರಿಗಾಗಿ ಹೊಸ ಸೌಲಭ್ಯವನ್ನು ಪ್ರಾರಂಭಿಸಲಿದೆ. ಇದರ ಅಡಿಯಲ್ಲಿ ಈಗ ಚುನಾವಣೆಯ ಸಮಯದಲ್ಲಿ, ವಲಸೆ ಮತದಾರರು ಮತ ಚಲಾಯಿಸಲು ತವರು ರಾಜ್ಯಕ್ಕೆ ಹೋಗಬೇಕಾಗಿಲ್ಲ. ಚುನಾವಣಾ ಆಯೋಗ ರಿಮೋಟ್ ವೋಟಿಂಗ್ ವ್ಯವಸ್ಥೆಯನ್ನ ಆರಂಭಿಸಲಿದ್ದು, ರಿಮೋಟ್ ಇವಿಎಂ ಮಾದರಿಯನ್ನ ಸಿದ್ಧಪಡಿಸಿದೆ. ಆಯೋಗವು ತನ್ನ ಲೈವ್ ಡೆಮೊವನ್ನು ಎಲ್ಲಾ ಪಕ್ಷಗಳಿಗೆ ಜನವರಿ 16ರಂದು ಇರಿಸಿದೆ. ದೇಶೀಯ ವಲಸೆ ಮತದಾರರಿಗಾಗಿ ಬಹು-ವಿಭಾಗದ ರಿಮೋಟ್ ಇವಿಎಂಗಳನ್ನ ಸಿದ್ಧಪಡಿಸಿರುವುದಾಗಿ ಚುನಾವಣಾ ಆಯೋಗ ಗುರುವಾರ ತಿಳಿಸಿದೆ. ಇದು ಒಂದೇ ದೂರದ ಮತಗಟ್ಟೆಯಿಂದ 72 ಕ್ಷೇತ್ರಗಳನ್ನು ನಿಭಾಯಿಸಬಲ್ಲದು. ಪಕ್ಷಗಳಿಂದ ಸಲಹೆ ಕೇಳಿದ ಆಯೋಗ.! ಚುನಾವಣಾ ಆಯೋಗವು ಎಲ್ಲಾ ರಾಜಕೀಯ ಪಕ್ಷಗಳನ್ನ ಜನವರಿ 16ರಂದು ಲೈವ್ ಡೆಮೊಗಾಗಿ ಕರೆದಿದೆ. ಎಲ್ಲಾ ಪಕ್ಷಗಳು ಮತ್ತು ಮಧ್ಯಸ್ಥಗಾರರ ಪ್ರತಿಕ್ರಿಯೆ ಮತ್ತು ಮೂಲಮಾದರಿಯ ಪ್ರದರ್ಶನದ ಆಧಾರದ ಮೇಲೆ, ಚುನಾವಣಾ ಆಯೋಗವು ರಿಮೋಟ್ ಮತದಾನ ವ್ಯವಸ್ಥೆಯನ್ನ ಅಳವಡಿಸುವ ಪ್ರಕ್ರಿಯೆಯೊಂದಿಗೆ ಮುಂದುವರಿಯುತ್ತದೆ. ಇದನ್ನು ಅನುಷ್ಠಾನಗೊಳಿಸುವಲ್ಲಿ ಕಾನೂನು, ಆಡಳಿತಾತ್ಮಕ ಮತ್ತು ತಾಂತ್ರಿಕ ಸವಾಲುಗಳ ಕುರಿತು ರಾಜಕೀಯ…

Read More

ಬೆಂಗಳೂರು : ಚಾರ್ ಧಾಮ್ ಯಾತ್ರೆಯನ್ನು ಕೈಗೊಂಡ ರಾಜ್ಯದ ಯಾತ್ರಾರ್ಥಿಗಳಿಗೆ ನೀಡಲಾಗುವ ಸರ್ಕಾರದ ಸಹಾಯಧನವನ್ನು ಪಡೆಯಲು ಅರ್ಜಿ ಸಲ್ಲಿಕೆಯ ದಿನಾಂಕವನ್ನ ಹಜ್ ಮತ್ತು ವಕ್ಪ್ ಸಚಿವರಾದ ಶಶಿಕಲಾ ಜೊಲ್ಲೆ ಅವರ ಸೂಚನೆಯ ಮೇರೆಗೆ ಜನವರಿ 31, 2023 ರ ವರೆಗೆ ವಿಸ್ತರಿಸಲಾಗಿದೆ. ಕರ್ನಾಟಕ ರಾಜ್ಯದಿಂದ ಪ್ರಪ್ರಥಮ ಬಾರಿಗೆ ಚಾರ್ಧಾಮ್ ಯಾತ್ರೆಯನ್ನು ಕೈಗೊಂಡ ಯಾತ್ರಾರ್ಥಿಗಳಿಗೆ ತಲಾ 20 ಸಾವಿರದಂತೆ ಸರಕಾರದ ಸಹಾಯಧನವನ್ನ ನೀಡಲಾಗುತ್ತದೆ. ಇದಕ್ಕೆ ಡಿಸೆಂಬರ್ 1 ರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆದರೆ, ಈ ಬಾರಿ ಚಾರ್ಧಾಮ್ ಯಾತ್ರೆಯನ್ನು ಕೈಗೊಳ್ಳುವ ಸಂಧರ್ಭದಲ್ಲಿ ಜನಸಂಧಣಿ ಹೆಚ್ಚಾಗಿದ್ದರಿಂದ ಹಾಗೂ ತಾಂತ್ರಿಕ ಕಾರಣಗಳಿಂದ ಯಾತ್ರಾರ್ಥಿಗಳು ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಅರ್ಜಿ ಸಲ್ಲಿಕೆಗೆ ಅಗತ್ಯ ದಾಖಲೆಗಳನ್ನ ಪಡೆದುಕೊಳ್ಳುವುದಕ್ಕೆ ಅವಕಾಶ ನೀಡುವಂತೆ ಬೆಳಗಾವಿಯ ಅಧಿವೇಶನದಲ್ಲಿ ಹಲವಾರು ಶಾಸಕರು ಮಾನ್ಯ ಸಚಿವರಿಗೆ ಮನವಿ ಮಾಡಿದ್ದರು. ಹೆಚ್ಚಿನ ಜನರು ಅರ್ಜಿ ಸಲ್ಲಿಸಲಿ ಎನ್ನುವ ಉದ್ದೇಶದಿಂದ, ಹಾಗೂ ಅಗತ್ಯ ದಾಖಲೆಗಳನ್ನ ಕ್ರೋಢೀಕರಿಸಲು ಅವಕಾಶ ನೀಡುವಂತೆ ಇಲಾಖೆ ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.…

Read More

ಬೆಳಗಾವಿ: ನಮ್ಮ ಪ್ರಥಮ ಆದ್ಯತೆ ರೈತರಿಗೆ ಪರಿಹಾರ ನೀಡುವುದೇ ಹೊರತು ಗುತ್ತಿಗೆದಾರರಿಗೆ ಹಣ ಕೊಡುವುದು ಅಲ್ಲ. ನಾನು ನೀರಾವರಿ ಸಚಿವನಾದ ಮೇಲೆ ನಾಲ್ಕು ನಿಗಮದಲ್ಲಿ ರಿವಾಲ್ವಿಂಗ್ ಪದ್ಧತಿಯಲ್ಲಿ ಹಣ ಇಟ್ಟಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ವಿಧಾನ ಪರಿಷತ್‌ನಲ್ಲಿ ನಡೆದ ಪ್ರಶ್ನೋತ್ತರ ವೇಳೆ ಸದಸ್ಯ ಸೂರಜ್ ರೇವಣ್ಣ ಅವರು ಹಾಸನ ಜಿಲ್ಲೆಯ ಹೇಮಾವತಿ ಯೋಜನೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ರೈತರಿಗೆ ಪರಿಹಾರ ನೀಡಲು ವಿಳಂಬವಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸೂರಜ್ ರೇವಣ್ಣ ಅವರು ತಾತನ ರೀತಿಯಲ್ಲಿ ಸರಿಯಾಗೇ ತಯಾರಾಗಿ ಬಂದಿದ್ದಾರೆ. ಈ ಭೂಸ್ವಾಧೀನ ಸಮಸ್ಯೆಗಳು ಹಾಸನ ಜಿಲ್ಲೆಯಲ್ಲಿದ್ದಷ್ಟು ಯಾವುದೇ ಜಿಲ್ಲೆಯಲ್ಲಿಲ್ಲ. ಸ್ಕೀಂಗಳು ಆಗಬೇಕು, ರೈತರಿಗೆ ಸೌಲಭ್ಯಗಳು ಸಿಗಬೇಕು, ನೀರಾವರಿ ಯೋಜನೆಗಳು ಆಗಬೇಕು ಅಂತಾ ಹೇಳ್ತಾರೆ. ಆದ್ರೆ, ಒಂದಿಂಚೂ ನೆಲವನ್ನು ಬಿಟ್ಟುಕೊಡಲ್ಲ ಎಂದರು. ರೈತರಿಗೆ ಪರಿಹಾರ ಕೊಡಲು ನಿಮ್ಮಲ್ಲಿ ಹಣ ಇಲ್ಲ ಎಂದು ಆರೋಪಿಸಿದ್ದಾರೆ. ಆದರೆ, ನಾನು ನೀರಾವರಿ ಸಚಿವನಾದ ಮೇಲೆ ನಾಲ್ಕು ನಿಗಮದಲ್ಲಿ ರಿವಾಲ್ವಿಂಗ್ ಪದ್ಧತಿಯಲ್ಲಿ…

Read More

ಬೆಳಗಾವಿ : ಇದೀಗ ಸುವರ್ಣಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ಆರಂಭವಾಗಿದೆ. ಪಂಚಮಸಾಲಿ ಮತ್ತು ಒಕ್ಕಲಿಗರ ಮೀಸಲಾತಿ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಕ್ಕೆ ಪ್ರತ್ಯೇಕ ಪ್ರವರ್ಗ ರಚಿಸಿ ಮೀಸಲಾತಿ ನೀಡುವ ಸಂಬಂಧ ಚರ್ಚೆ ನಡೆಯುವ ಸಾಧ್ಯತೆ ಇದೆ.ಇನ್ನು ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಭೀತಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. 3ಎ ಅಡಿಯಲ್ಲಿ ಒಕ್ಕಲಿಗ, ರೆಡ್ಡಿ, ಬಲಿಜ, ಬಂಟ, ಕೊಡವ ಸೇರಿ 12 ಜಾತಿಗಳಿವೆ. 3ಬಿ ಅಡಿಯಲ್ಲಿ ವೀರಶೈವ ಮತ್ತು ಲಿಂಗಾಯತ ಸಮುದಾಯಗಳು ಮತ್ತು ಉಪಜಾತಿಗಳನ್ನು ಶಿಫ್ಟ್ ಮಾಡುವ ಚಿಂತನೆ ನಡೆಯುತ್ತಿದೆ. ಇಡಬ್ಲ್ಯುಎಸ್ ಅಡಿ ರಾಜ್ಯಗಳಿಗೆ ಇರುವ ಅಧಿಕಾರ ಚಲಾಯಿಸಿ, ಪಂಚಸಾಲಿಗಳಿಗೆ ಶೇ4 ರಷ್ಟು ಮತ್ತು ಒಕ್ಕಲಿಗರಿಗೆ ಶೇ.3 ರಷ್ಟು ಮೀಸಲು ಮರು ಹಂಚಿಕೆ ಮಾಡುವ ಸಾಧ್ಯತೆ ಇದೆ.ಒಟ್ಟಿನಲ್ಲಿ ಸಂಪುಟ ಸಭೆ ಬಹಳಷ್ಟು ನಿರೀಕ್ಷೆ ಮೂಡಿಸಿದೆ. https://kannadanewsnow.com/kannada/bigg-news-%e0%b2%b5%e0%b2%be%e0%b2%b9%e0%b2%a8-bigg-news-beware-of-vehicle-drivers-the-number-of-road-accidents-is-on-the-rise-153972-deaths-in-a-single-year-%e0%b2%8e%e0%b2%9a%e0%b3%8d/…

Read More

ಕೀವ್( ಉಕ್ರೇನ್): ಇಂದು ರಷ್ಯಾ ಉಕ್ರೇನ್ ಮೇಲೆ ಬೃಹತ್ ವೈಮಾನಿಕ ದಾಳಿ ಮಾಡಿತ್ತು. ಬರೋಬ್ಬರಿ 100ಕ್ಕೂ ಹೆಚ್ಚಿ ಕ್ಷಿಪಣಿಗಳನ್ನು ಹಾರಿಸಿತ್ತು. ಇನ್ನು ರಷ್ಯಾ ಉಡಾವಣೆ ಮಾಡಿದ 69 ಕ್ಷಿಪಣಿಗಳ ಪೈಕಿ 54 ಕ್ಷಿಪಣಿಗಳನ್ನು ಉಕ್ರೇನ್‌ ವಾಯು ರಕ್ಷಣಾ ಪಡೆ ಗುರುವಾರ ಬೆಳಗ್ಗೆ ಹೊಡೆದುರುಳಿಸಿದೆ ಎಂದು ಉಕ್ರೇನ್ ಸೇನೆ ತಿಳಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ರಷ್ಯಾ ಉಕ್ರೇನ್ ಮೇಲೆ ಒಟ್ಟು 69 ಕ್ಷಿಪಣಿಗಳನ್ನು ಉಡಾಯಿಸಿತ್ತು. ಅದರಲ್ಲಿ 54 ಕ್ಷಿಪಣಿಗಳನ್ನು ಉಕ್ರೇನ್ ವಾಯು ಪಡೆ ಹೊಡೆದುರುಳಿಸಿದೆ ಎಂದು ಉಕ್ರೇನ್ ಕಮಾಂಡರ್-ಇನ್-ಚೀಫ್ ಜನರಲ್ ವ್ಯಾಲೆರಿ ಜಲುಜ್ನಿ ಹೇಳಿದ್ದಾರೆ. ಇಂದು ಬೆಳಗ್ಗೆ ಉಕ್ರೇನ್ ಮೇಲೆ ರಷ್ಯಾ 120 ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿತ್ತು. ಪರಿಣಾಮ ಉಕ್ರೇನ್ ಹಲವು ನಗರಗಳು ಹಾನಿಗೀಡಾಗಿದ್ದು, ವಿದ್ಯುತ್ ಸೇರಿದಂತೆ ಅನೇಕ ಸಮಸ್ಯೆಗಳು ತಲೆದೂರಿವೆ ಎಂದು ಅಧ್ಯಕ್ಷೀಯ ಸಹಾಯಕ ಮೈಖೈಲೊ ಪೊಡೊಲ್ಯಾಕ್ ಹೇಳಿದ್ದರು. https://kannadanewsnow.com/kannada/bigg-news-%e0%b2%b5%e0%b2%be%e0%b2%b9%e0%b2%a8-bigg-news-beware-of-vehicle-drivers-the-number-of-road-accidents-is-on-the-rise-153972-deaths-in-a-single-year-%e0%b2%8e%e0%b2%9a%e0%b3%8d/ https://kannadanewsnow.com/kannada/breaking-news-pgcet-result-declared-check-your-result-this-way-and-karnataka-pgcet-result-2022/ https://kannadanewsnow.com/kannada/permission-for-kalasa-banduri-scheme-congress-tweets-as-bjps-election-gimmick/

Read More

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examinations Authority – KEA) ಇಂದು ಡಿಸೆಂಬರ್ 29 ರಂದು ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (Karnataka Post Graduate Common Entrance Test -PGCET 2022) ಫಲಿತಾಂಶವನ್ನು ಪ್ರಕಟಿಸಿದೆ. ಕರ್ನಾಟಕ ಪಿಜಿಸಿಇಟಿ 2022 ಪರೀಕ್ಷೆ ( Karnataka PGCET 2022 Exam ) ತೆಗೆದುಕೊಂಡ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್ ಮೂಲಕ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. cetonline.karnataka.gov.in. ಪಿಜಿಸಿಇಟಿ 2022 ಫಲಿತಾಂಶವನ್ನು ಪ್ರವೇಶಿಸಲು ಮತ್ತು ಡೌನ್ಲೋಡ್ ಮಾಡಲು, ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್ವರ್ಡ್ನೊಂದಿಗೆ ಲಾಗ್ ಇನ್ ಮಾಡಬೇಕಾಗಿದೆ. ಕೆಇಎ ಎಂಬಿಎ ಪ್ರವೇಶಕ್ಕಾಗಿ ಕರ್ನಾಟಕ ಪಿಜಿಸಿಇಟಿ 2022 ಪರೀಕ್ಷೆಯನ್ನು ನಡೆಸಿದೆ. ಎಂಸಿಎ ಕೋರ್ಸ್ಗಳನ್ನು ನವೆಂಬರ್ 19 ರಂದು ಮತ್ತು ಎಂಟೆಕ್ ಕೋರ್ಸ್ಗಳಿಗೆ ನವೆಂಬರ್ 20 ರಂದು ನಡೆಸಲಾಯಿತು. ಪಿಜಿಸಿಇಟಿ 2022 ರ ತಾತ್ಕಾಲಿಕ ಉತ್ತರ ಕೀಯನ್ನು ಡಿಸೆಂಬರ್ 1 ರಂದು ಬಿಡುಗಡೆ ಮಾಡಲಾಯಿತು ಮತ್ತು ಅಭ್ಯರ್ಥಿಗಳು ಡಿಸೆಂಬರ್ 10, 2022 ರವರೆಗೆ…

Read More