Subscribe to Updates
Get the latest creative news from FooBar about art, design and business.
Author: KNN IT TEAM
ಬ್ರೆಜಿಲ್: ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಬ್ರೆಜಿಲ್ ದಂತಕತೆ ಪೀಲೆ ತಮ್ಮ 82 ನೇ ವಯಸ್ಸಿನಲ್ಲಿ ನಿಧನರಾದರು. ಅವರ ನಿಧನದ ಸುದ್ದಿಯನ್ನು ಅವರ ಮಗಳು ಗುರುವಾರ ತಡರಾತ್ರಿ ಇನ್ಸ್ಟಾಗ್ರಾಮ್ನಲ್ಲಿ ದೃಢಪಡಿಸಿದ್ದಾರೆ. ಕೀಮೋಥೆರಪಿ ಚಿಕಿತ್ಸೆಗೆ ಸ್ಪಂದಿಸುವುದನ್ನು ನಿಲ್ಲಿಸಿದ ನಂತರ ಬ್ರೆಜಿಲ್ನ ಮಾಜಿ ಫುಟ್ಬಾಲ್ ಆಟಗಾರ ಪೀಲೆ ಕರುಳಿನ ಕ್ಯಾನ್ಸರ್ನಿಂದ ನಿಧನರಾದರು. ಅವರ ಕ್ಯಾನ್ಸರ್ ಚಿಕಿತ್ಸೆಯ ಚಿಕಿತ್ಸೆಗಾಗಿ ಈ ತಿಂಗಳ ಆರಂಭದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲದೇ ಅವರು ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದರು. ಪೀಲೆ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ತನ್ನ ಕರುಳಿನಲ್ಲಿ ಉಂಟಾಗಿದ್ದಂತ ಕ್ಯಾನ್ಸರ್ ಗಡ್ಡೆಯನ್ನು ತೆಗೆದುಹಾಕಲಾಗಿತ್ತು. ಅಂದಿನಿಂದ ನಿಯಮಿತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಅವರು ನಿಧನರಾಗಿರೋದಾಗಿ ತಿಳಿದು ಬಂದಿದೆ. ಪೀಲೆ ಆಟದ ಇತಿಹಾಸದ ಶ್ರೇಷ್ಠ ಫಾರ್ವರ್ಡ್ ಗಳಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟ ಬ್ರೆಜಿಲಿಯನ್ ತನ್ನ 16 ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು ಮತ್ತು ತಂಡದ ಸಾರ್ವಕಾಲಿಕ ಪ್ರಮುಖ ಗೋಲ್ ಸ್ಕೋರರ್ ಆಗಿ ತಮ್ಮ…
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸ್ವಂತ ವ್ಯವಹಾರಗಳನ್ನು ಪ್ರಾರಂಭಿಸಲು ಮತ್ತು ಸ್ವಯಂ ಉದ್ಯೋಗಿಗಳಾಗಲು ಬಯಸುವ ಸರ್ಕಾರಿ ವಲಯದಲ್ಲಿ ಕೆಲಸ ಮಾಡುವ ನಾಗರಿಕರಿಗೆ ವರ್ಷಪೂರ್ತಿ ವೇತನ ಸಹಿತ ರಜೆಯನ್ನು ಜಾರಿಗೊಳಿಸಲು ಪ್ರಾರಂಭಿಸುವುದಾಗಿ ಯುಎಇ (UAE) ಘೋಷಿಸಿದೆ ಎಂದು ವರದಿಯೊಂದು ತಿಳಿಸಿದೆ. ಈ ಕ್ರಮವು ಜನವರಿ 2,2023 ರಿಂದ ಪ್ರಾರಂಭವಾಗಲಿದೆ ಎಂದು ದಿ ಖಲೀಜ್ ಟೈಮ್ಸ್ ವರದಿ ತಿಳಿಸಿದೆ. ದುಬೈನ ಆಡಳಿತಗಾರ, ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನ ಮಂತ್ರಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಹೆಚ್ಚಿನ ವ್ಯವಹಾರಗಳನ್ನು ಉತ್ತೇಜಿಸುವ ಉದ್ದೇಶದಿಂದ ದೇಶದ ಕ್ಯಾಬಿನೆಟ್ ಈ ಉಪಕ್ರಮವನ್ನು ಅನುಮೋದಿಸಿದೆ ಎಂದು ಘೋಷಿಸಿದರು. ಇಂದು, ಕೌನ್ಸಿಲ್‌ನಲ್ಲಿ, ಸ್ವಂತ ವ್ಯವಹಾರವನ್ನು ನಡೆಸಲು ಬಯಸುವ ಸರ್ಕಾರದಲ್ಲಿ ಕೆಲಸ ಮಾಡುವ ನಾಗರಿಕರಿಗೆ ನಾವು ವಿಶ್ರಾಂತಿ ರಜೆಯನ್ನು ನಿರ್ಧರಿಸಿದ್ದೇವೆ. ರಜೆಯು ಪೂರ್ಣ ವರ್ಷದವರೆಗೆ ಇರುತ್ತದೆ. ಅರ್ಧದಷ್ಟು ಸಂಬಳವನ್ನು ನೀಡಲಾಗುತ್ತದೆ. ಯುವಜನರು ನಮ್ಮ ರಾಷ್ಟ್ರೀಯ ಆರ್ಥಿಕತೆ ನೀಡುವ ಬೃಹತ್ ವ್ಯಾಪಾರ ಅವಕಾಶಗಳ ಲಾಭವನ್ನು ಪಡೆದುಕೊಳ್ಳಲು ಪ್ರೋತ್ಸಾಹಿಸವುದು ನಮ್ಮ ಗುರಿಯಾಗಿದೆ ಎಂದು…
ಬೆಂಗಳೂರು : ರಾಜ್ಯದ ಕಬ್ಬು ( Sugar Cane) ಬೆಳೆಗಾರರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದು , ಪ್ರತೀ ಮೆಟ್ರಿಕ್ ಟನ್ ಗೆ 100 ರೂ. ಹೆಚ್ಚು ಪಾವತಿಸಲು ಸೂಚನೆ ನೀಡಲಾಗಿದೆ. ಮೊಲ್ಯಾಸಿಸ್ ಮಾರಾಟದಿಂದ ಕಾರ್ಖಾನೆಗಳಿಗೆ ಬರುವ ಲಾಭಾಂಶವನ್ನು ರೈತರಿಗೆ ವರ್ಗಾಯಿಸಲು ಸಕ್ಕರೆ ಕಾರ್ಖಾನೆಗಳಿಗೆ ಆದೇಶ ನೀಡಲಾಗಿದ್ದು, ಎಫ್ಆರ್ಪಿ ದರ ಹೊರತುಪಡಿಸಿ, ಪ್ರತೀ ಮೆಟ್ರಿಕ್ ಟನ್ಗೆ 100 ರೂಪಾಯಿ ಹೆಚ್ಚು ಪಾವತಿಸಲು ಸರ್ಕಾರ ಸೂಚನೆ ನೀಡಿದೆ. ಇತ್ತೀಚೆಗೆ ರಾಜ್ಯದ ಕಬ್ಬು ಬೆಳೆಗಾರರಿಗೆ ಪ್ರತಿ ಮೆಟ್ರಿಕ್ ಟನ್ ಗೆ 50 ರೂ.ಹೆಚ್ಚುವರಿ ಪಾವತಿಗೆ ಸರ್ಕಾರ ಆದೇಶ ಹೊರಡಿಸಿತ್ತು. ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದ ಕಬ್ಬು ಬೆಳೆಗಾರರ ಹೋರಾಟಕ್ಕೆ ಸರ್ಕಾರ ಸ್ಪಂದಿಸಿದೆ. ಕಬ್ಬಿನ ಉಪ ಉತ್ಪನ್ನಗಳ ಲಾಭಾಂಶ ಸೇರಿ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ಬಾಗಲಕೋಟೆ ಸೇರಿ ಹಲವು ಕಡೆ ಕಬ್ಬು ಬೆಳೆಗಾರರು ಭಾರೀ ಪ್ರತಿಭಟನೆ ನಡೆಸಿದ್ದರು. ಡಿ.5 ರಂದು ಕಬ್ಬು ನಿಯಂತ್ರಣ ಮಂಡಳಿ ಸಭೆಯಲ್ಲಿ ಪ್ರತಿ ಮೆಟ್ರಿಕ್ ಟನ್…
ಜೆರುಸಲೇಂ: ಇಸ್ರೇಲ್ ಇತಿಹಾಸದಲ್ಲಿಯೇ ಬಲಪಂಥೀಯ ಸರ್ಕಾರವನ್ನು ತಂದ ನಂತರ ಸಂಸತ್ತಿನಲ್ಲಿ ಗುರುವಾರ ನಡೆದ ಮತದಾನದ ನಂತರ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್‌ನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ನೇತನ್ಯಾಹು ಅವರ ಹೊಸ ಸರ್ಕಾರವನ್ನು ಅನುಮೋದಿಸಿದ ಕೆಲವೇ ನಿಮಿಷಗಳಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 120 ರಲ್ಲಿ 63 ನಿಯೋಗಿಗಳು ಆಡಳಿತದ ಪರವಾಗಿ ಮತ ಚಲಾಯಿಸಿದರು. ನೆತನ್ಯಾಹು ಅವರು ಅಲ್ಟ್ರಾ-ಆರ್ಥೊಡಾಕ್ಸ್ ಪಕ್ಷಗಳು ಮತ್ತು ಬಲಪಂಥೀಯ ಪಕ್ಷಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದ ನಂತರ ತಮ್ಮ ಸರ್ಕಾರವನ್ನು ರಚಿಸಿದರು. https://kannadanewsnow.com/kannada/good-news-for-the-people-of-the-state-for-the-new-year-the-state-government-has-ordered-to-reduce-electricity-rates/
ಬೆಂಗಳೂರು : ವಿಧಾನಸಭಾ ಚುನಾವಣೆ ಸಮೀಪದ ಬೆನ್ನಲ್ಲೇ ಮತದಾರರನ್ನು ಸೆಳೆಯಲು ಬಿಜೆಪಿ ಪ್ಲ್ಯಾನ್ ಮಾಡುತ್ತಿದ್ದು, ಹಲವಾರು ಜನಪರ ಯೋಜನೆಗಳನ್ನು ಘೋಷಣೆ ಮಾಡುತ್ತಿದೆ. ಇದರ ನಡುವೆ ರಾಜ್ಯ ಸರ್ಕಾರ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಬೆಸ್ಕಾಂ, ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ದರ ಇಳಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಇಂಧನ ಸಚಿವ ಸುನಿಲ್ ಕುಮಾರ್ ಬೆಸ್ಕಾಂ ಹಾಗೂ ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಹೊಂದಾಣಿಕೆ ವೆಚ್ಚ ಕಡಿತ ಮಾಡುವ ನಿರ್ಧಾರ ತೆಗದುಕೊಳ್ಳಲಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 37 ಪೈಸೆ ಹಾಗೂ ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 39 ಪೈಸೆ ಕಡಿತ ಮಾಡಲಾಗಿದ್ದು, ಇದರ ಪ್ರಯೋಜನ ನೇರವಾಗಿ ಗ್ರಾಹಕರಿಗೆ ಲಭಿಸಲಿದೆ ಎಂದು ಟ್ವೀಟ್ ಮಾಡಿದ್ದಾರೆ. ವಿದ್ಯುತ್ ದರ ಏರಿಕೆ ಮಾಡಿದ ಹಿನ್ನೆಲೆ ಸರ್ಕಾರದ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದರು. ಇದೀಗ ಸರ್ಕಾರ ಜನರಿಗೆ ನೆಮ್ಮದಿ ಸುದ್ದಿ ನೀಡಿದೆ. https://twitter.com/karkalasunil/status/1608449591506272256 https://kannadanewsnow.com/kannada/covid-cases-in-india-mansukh-madaviya-reviews-medicine-stocks-in-meet-with-pharma-firms/ https://kannadanewsnow.com/kannada/application-invitation-for-class-6-admission-in-residential-schools-for-the-year-2023-24/
ಬೆಂಗಳೂರು : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ 6ನೇ ತರಗತಿ ಪ್ರವೇಶಕ್ಕೆ ಅಗತ್ಯವಾದ ಪ್ರವೇಶ ಪರೀಕ್ಷೆ ಮತ್ತು ಆನ್ಲೈನ್ ಕೌನ್ಸಿಲಿಂಗ್ ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಸಲಾಗುತ್ತಿದೆ. 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳ ಪೋಷಕರು ತಮ್ಮ ಮಕ್ಕಳನ್ನು 6ನೇ ತರಗತಿಗೆ ವಸತಿ ಶಾಲೆಗಳಿಗೆ ದಾಖಲಿಸಲು, ದಿನಾಂಕ 05-11-2023 ರ ಬೆಳಿಗ್ಗೆ 11.00 ರಿಂದ 22-01-2023 ರಾತ್ರಿ 11.59ರ ವರೆಗೆ ರವರೆಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ / ಕಾಲೇಜುಗಳ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ತಿಳಿಸಿದೆ. ಅಭ್ಯರ್ಥಿಯು ಈಗಾಗಲೇ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶಾಲೆಯಿಂದ SATS ಸಂಖ್ಯೆ,ಇತ್ತೀಚಿನ ಭಾವಚಿತ್ರ ಮತ್ತು ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲಾತಿಗಳನ್ನು ಅಥವಾ ಜೆರಾಕ್ಸ್ ಪ್ರತಿಗಳನ್ನು ತೆಗೆದುಕೊಂಡು ಅರ್ಜಿ ಸಲ್ಲಿಸುವ ಸಮಯದಲ್ಲಿ ಸಂಬಂಧಿಸಿದ ವಸತಿ ಶಾಲೆ / ಕಾಲೇಜಿನ ಮುಖ್ಯಸ್ಥರನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆ ಹೊರಡಿಸಲಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಯಾವ…
ನವದೆಹಲಿ :ಕೊರೊನಾ ಆತಂಕದ ನಡುವೆ ಇಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ದೇಶದ ಎಲ್ಲಾ ದೊಡ್ಡ ಫಾರ್ಮಾ ಕಂಪನಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಮುಂದಿನ ಕೆಲವು ತಿಂಗಳುಗಳಲ್ಲಿ ಔಷಧಿಗಳಲ್ಲಿ ಯಾವುದೇ ವ್ಯತ್ಯಯ ಬರದಿರುವಂತೆ ನೋಡಿಕೊಳ್ಳಲು ಸಂಸ್ಥೆಗಳಿಗೆ ಸೂಚಿಸಿದ್ದಾರೆ. ತಜ್ಞರ ಪ್ರಕಾರ, ಓಮಿಕ್ರಾನ್ ರೂಪಾಂತರ ಜನವರಿ-ಫೆಬ್ರವರಿಯಲ್ಲಿ ಹೆಚ್ಚಳವಾಗುವ ಆತಂಕ ಹೆಚ್ಚಾಗಿದ್ದು, ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸಲಾಗುತ್ತಿದೆ. ವಿಶ್ವದಾದ್ಯಂತ ಕೋವಿಡ್ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲು ಮತ್ತು ಅದಕ್ಕೆ ಅನುಗುಣವಾಗಿ ತಮ್ಮ ಅಗತ್ಯ ಔಷಧಿಗಳ ದಾಸ್ತಾನು ಸಿದ್ಧಪಡಿಸುವಂತೆ, ಯಾವುದೇ ಸಂದರ್ಭದಲ್ಲಿ ಔಷಧಿಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಸಾಕಷ್ಟು ದಾಸ್ತಾನು ಲಭ್ಯವಿರಬೇಕು ಎಂದು ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಅದೇ ಸಮಯದಲ್ಲಿ, ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ದೇಶದಲ್ಲಿ ಕೋವಿಡ್ ಸಮಯದಲ್ಲಿ ತಮ್ಮ ಅಮೂಲ್ಯ ಕೊಡುಗೆಗಾಗಿ ಫಾರ್ಮಾ ಕಂಪನಿಗಳನ್ನು ಶ್ಲಾಘಿಸಿ, ಅಭಿನಂದಿಸಿದರು. ಕೇಂದ್ರ ಆರೋಗ್ಯ ಸಚಿವರಲ್ಲದೆ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಫಾರ್ಮಾ ಕಾರ್ಯದರ್ಶಿ ಎಸ್ ಅಪರ್ಣಾ,…
ಬೆಂಗಳೂರು : ಹೊಸ ವರ್ಷಕ್ಕೆ ಕ್ಷಣಗಣನೆ ಶುರುವಾಗಿದ್ದು, ಎರಡು ವರ್ಷಗಳ ಬಳಿಕ ಈ ಬಾರಿ ಹೊಸ ವರ್ಷಾಚರಣೆಗೆ ಅದ್ಧೂರಿ ಸಿದ್ಧತೆ ಮಾಡಲಾಗಿದೆ.2023 ರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಜನರು ಸಿದ್ದರಾಗಿದ್ದರು. ಆದರೆ ಕೊರೊನಾ ಎಂಬ ಮಹಾಮಾರಿ ಮತ್ತೆ ಜನರನ್ನು ಕಾಡತೊಡಗಿದೆ. ಕೊರೊನಾ ಹಿನ್ನೆಲೆ ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ ಹೊಸ ರೂಲ್ಸ್ ಜಾರಿ ಮಾಡಲಾಗಿದ್ದು, ಕಡ್ಡಾಯವಾಗಿ ಜನರು ಇದನ್ನು ಪಾಲಿಸಲೇಬೇಕಾಗಿದೆ. ಬಿಬಿಎಂಪಿ ರೂಲ್ಸ್ ನಗರದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಬಿಬಿಎಂಪಿ ರೂಲ್ಸ್ ಜಾರಿ ಮಾಡಿದೆ. ಪಿಜಿ, ಹೋಟೆಲ್ , ಬೇಕರಿ ಸೇರಿ ವಾಣಿಜ್ಯ ಚಟುವಟಿಕೆಗೆ ನೋಟಿಸ್ ಜಾರಿ ಮಾಡಿದೆ. ನಿಯ ಪಾಲಿಸುವಂತೆ ಬಿಬಿಎಂಪಿ ಅಧಿಖಾರಿಗಳು ನೋಟಿಸ್ ನೀಡಿದ್ದಾರೆ. ಮಧ್ಯರಾತ್ರಿ ಒಂದು ಗಂಟೆ ವರೆಗೆ ಹೊಸ ವರ್ಷಾಚರಣೆಗೆ ಅವಕಾಶ ನೀಡಲಾಗಿದೆ. ಹೀಗಾಗಿ ವಾಣಿಜ್ಯ ಚಟುವಟಿಕೆ ಸ್ಥಗಿತಗೊಳಿಸುವಂತೆ ಬಿಬಿಎಂಪಿ ನೋಟಿಸ್ ನೀಡಿದೆ. ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ಸ್ಥಗಿತಗೊಳಿಸಲು ನೋಟಿಸ್ ನೀಡಲಾಗಿದೆ. 40 ಅಡಿಗಿಂತ ಕಡಿಮೆ ವಿಸ್ತೀರ್ಣದಲ್ಲಿ ರಸ್ತೆಗಳಲ್ಲಿ ಚಟುವಟಿಕೆಗೆ ನಿಬಂಧ ಹೇರಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದ್ರೆ…
ನವದೆಹಲಿ : 2023ರಲ್ಲಿ ಕನಿಷ್ಠ ಎರಡು ಮುಕ್ತ ವ್ಯಾಪಾರ ಒಪ್ಪಂದಗಳಿಗೆ (FTAs) ಸಹಿ ಹಾಕಲಾಗುವುದು ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಗುರುವಾರ ಭರವಸೆ ವ್ಯಕ್ತಪಡಿಸಿದ್ದಾರೆ. ಯುಕೆ, ಯುರೋಪಿಯನ್ ಯೂನಿಯನ್ ಮತ್ತು ಕೆನಡಾದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಗೋಯಲ್ ಇಲ್ಲಿ ನಡೆದ ಸಮಾರಂಭದಲ್ಲಿ ಹೇಳಿದರು. ಭಾರತ ಇಂದು ಶಕ್ತಿಯುತವಾಗಿ ಮಾತನಾಡುತ್ತಿದೆ. ನಾವು ವಿಶ್ವಾಸದಿಂದ ಮಾತುಕತೆ ನಡೆಸುತ್ತೇವೆ. ”ಈ ವರ್ಷ ದೇಶವು ಕನಿಷ್ಠ ಎರಡು ಎಫ್ಟಿಎಗಳಿಗೆ ಸಹಿ ಹಾಕಲಿದೆ ಎಂದು ಅವರು ಹೇಳಿದರು. ವಿದೇಶದಲ್ಲಿ ಅವರ ಸಹವರ್ತಿಗಳ ನಡುವೆ ಅನೇಕ ಸಭೆಗಳು.! ಈ ವರ್ಷದ ಎಪ್ರಿಲ್ನಲ್ಲಿ ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಆಯೋಜಿಸಲಾದ ಸಮಾರಂಭದಲ್ಲಿ ಗೋಯಲ್, ಭಾರತೀಯ ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ಮತ್ತು ವಿದೇಶದಲ್ಲಿರುವ ಅವರ ಸಹವರ್ತಿಗಳ ನಡುವೆ ಜನವರಿಯಲ್ಲಿ ಹಲವಾರು ಸಭೆಗಳನ್ನ ನಡೆಸಲಾಗುವುದು ಎಂದು ಹೇಳಿದರು. ಪ್ರಮಾಣಪತ್ರ ಹಸ್ತಾಂತರಿಸಿದ ನಂತರ ಮೊದಲ ಭಾರತೀಯ ಸರಕುಗಳ ಮೂಲ, ಎಫ್ಟಿಎ ಜವಳಿ, ರತ್ನಗಳು ಮತ್ತು ಆಭರಣಗಳು ಮತ್ತು ಮಾಹಿತಿ…
ಬೆಂಗಳೂರು : ಮದುವೆ ಗಂಡಾಗಿದ್ದ ಈಶ್ವರಪ್ಪ ವೈರಾಗ್ಯ ಮೂಡಿ ಮದುವೆ ಆಸೆಯನ್ನೇ ಕೈಬಿಟ್ಟಂತಿದೆ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ವ್ಯಂಗ್ಯವಾಡಿದೆ. ನಾನು ಹಿರಿಯ, ನಾನೂ ಸಿಎಂ ಸ್ಥಾನದ ಆಕಾಂಕ್ಷಿ ಎನ್ನುತ್ತಿದ್ದ ಈಶ್ವರಪ್ಪನವರು ಈಗ ಸಚಿವ ಸ್ಥಾನಕ್ಕೂ ಕಣ್ಣೀರು ಸುರಿಸುವ ಸ್ಥಿತಿ ಒದಗಿದೆ, ಮುಂದೆ ಟಿಕೆಟ್ ಕೂಡ ಸಿಗದೆ ಮಾರ್ಗದರ್ಶಕ ಮಂಡಳಿಯ ಸ್ಥಾನ ಸಿಗುವ ಕಾಲ ದೂರವಿಲ್ಲ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ. ಇನ್ನೂ ಕೂಡ ಸಚಿವ ಸಂಪುಟ ವಿಸ್ತರಣೆ ನಿಗದಿಯಾಗದ ಹಿನ್ನೆಲೆ ಕಾಂಗ್ರೆಸ್ ಈಶ್ವರಪ್ಪ ಕಾಲೆಳೆದಿದೆ. ಸಚಿವ ಸ್ಥಾನಕ್ಕಾಗಿ ಈಶ್ವರಪ್ಪ, ರಮೇಶ್ ಜಾರಕಿಹೊಳಿ ಕಾದು ಕುಳಿತಿದ್ದಾರೆ. ಸಂಪುಟ ವಿಸ್ತರಣೆ ಸದ್ಯ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ನಿರಾಸೆ ಮೂಡಿದೆ. https://twitter.com/INCKarnataka/status/1608474167669555201 https://kannadanewsnow.com/kannada/coconut-fall-down-in-bengaluru/ https://kannadanewsnow.com/kannada/announcement-of-2d-reservation-for-panchamasali-community-what-did-jayamruthyunjaya-swamiji-say/