Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು: ಕಾಂಪೌಂಡ್ ಗೋಡೆಯನ್ನು ದುರಸ್ತಿ ನಡೆಸುತ್ತಿದ್ದಂತ ವೇಳೆಯಲ್ಲಿ, ದಿಢೀರ್ ಗೋಡೆ ಕುಸಿತಗೊಂಡ ಪರಿಣಾಮ, ಇಬ್ಬರು ಕಾರ್ಮಿಕರು ಸಾವನ್ನಪ್ಪಿರೋ ಘಟನೆ ನಡೆದಿದೆ. ಬೆಂಗಳೂರಿನ ಭಾರತಿನಗರದ ಎಂಇಜಿ ಅಧಿಕಾರಿಗಳ ಕಾಲೋನಿಯಲ್ಲಿನ ಕಾಂಪೌಂಡ್ ಗೋಡೆಯನ್ನು ದುರಸ್ತಿಗೊಳಿಸೋ ಕಾರ್ಯದಲ್ಲಿ ಕಾರ್ಮಿಕರು ನಿರತರಾಗಿದ್ದರು. ಈ ವೇಳೆ ದಿಢೀರ್ ಗೋಡೆ ಕುಸಿದ ಪರಿಣಾಮ, ಅದರಡಿಯಲ್ಲಿ ಸಿಲುಕಿ ಆಶಮ್ಮ(21) ಹಾಗೂ ಅಕ್ರಮ್ ಉಲ್ ಹಕ್(22) ಮೃತಪಟ್ಟಿರೋದಾಗಿ ತಿಳಿದು ಬಂದಿದೆ. ಮೃತ ಆಶಮ್ಮ ಚಳ್ಳಕೆರೆ ಮೂಲದವರಾಗಿದ್ದರೇ, ಅಕ್ರಮ್ ಉಲ್ ಹಕ್ ಪಶ್ಚಿಮ ಬಂಗಾಳದ ಮೂಲದವರಾಗಿದ್ದಾರೆ. ಈ ಇಬ್ಬರು ಎರಡು ವರ್ಷಗಳಿಂದ ನಗರದಲ್ಲಿ ನೆಲೆಸಿ, ಗಾರೆ ಕೆಲಸ ಮಾಡುತ್ತಿದ್ದರು. ನಿನ್ನೆ ಮರಬಿದ್ದು ಹಾಳಾಗಿದ್ದಂತ ಎಂಇಜಿ ಅಧಿಕಾರಿಗಳ ಕಾಲೋನಿಯ ಕಾಂಪೌಂಡ್ ದುರಸ್ತಿ ವೇಳೆ ಗೋಡೆ ಕುಸಿದು ಸಾವನ್ನಪ್ಪಿದ್ದಾರೆ. https://kannadanewsnow.com/kannada/karnataka-state-govt-to-take-significant-steps-to-curb-covid-19-bf7-testing/ https://kannadanewsnow.com/kannada/pm-narendra-modis-mother-heeraben-passes-away-cm-bommai-and-other-dignitaries-condole-her-death/
ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಟಗಾರ ರಿಷಭ್ ಪಂತ್ ಅವರ ಕಾರು ದೆಹಲಿಯಿಂದ ಮನೆಗೆ ಮರಳುತ್ತಿದ್ದಾಗ ಭಾರಿ ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ. ರೂರ್ಕಿಯ ನರ್ಸನ್ ಗಡಿಯಲ್ಲಿರುವ ಹಮ್ಮದ್ಪುರ್ ಝಾಲ್ ಬಳಿ ಅವರ ಕಾರು ಅಪಘಾತಕ್ಕೀಡಾಯಿತು ಅಂತ ತಿಳಿದು ಬಂದಿದೆ. ಘಟನೆಯಲ್ಲಿ ಗಂಭಿರವಾಗಿ ಗಾಯಗೊಂಡಿದ್ದ ರಿಷಭ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಗೆ ಕಳುಹಿಸಲಾಗಿದೆ ಅಂತ ತಿಳಿದು ಬಂದಿದೆ. ಕಾಲಿಗೆ ಗಾಯ, ಪ್ಲಾಸ್ಟಿಕ್ ಸರ್ಜರಿ : ವೈದ್ಯರ ಪ್ರಕಾರ, ರಿಷಭ್ ಪಂತ್ ಅವರ ಹಣೆ ಮತ್ತು ಕಾಲಿಗೆ ಗಾಯಗಳಾಗಿವೆ ಎನ್ನಲಾಗಿದೆ. ಇನ್ನೂ ಘಟನೆ ಮಾಹಿತಿ ಪಡೆದ ನಂತರ, ಪೊಲೀಸ್ ವರಿಷ್ಠಾಧಿಕಾರಿ ದೇಹತ್ ಸ್ವಪನ್ ಕಿಶೋರ್ ಸಿಂಗ್ ಸ್ಥಳಕ್ಕೆ ತಲುಪಿದ್ದಾರೆ. ಸದ್ಯ ರಿಷಭ್ ಪಂತ್ ಅವರ ಆರೋಗ್ಯ ಸ್ಥಿರವಾಗಿದ್ದು, ಅವರನ್ನು ರೂರ್ಕಿಯಿಂದ ದೆಹಲಿಗೆ ಕಳುಹಿಸಲಾಗುತ್ತಿದೆ ಎಂದು ಸಕ್ಷಮ್ ಆಸ್ಪತ್ರೆಯ ಅಧ್ಯಕ್ಷ ಡಾ.ಸುಶೀಲ್ ನಗರ್ ಹೇಳಿದ್ದಾರೆ. ರಿಷಬ್ ಕಾರು ರೈಲಿಂಗ್ ಗೆ ಡಿಕ್ಕಿ : ಪ್ರತ್ಯಕ್ಷದರ್ಶಿಗಳ ಪ್ರಕಾರ, ರಿಷಭ್ ಅವರ ಕಾರು ರೈಲಿಂಗ್ಗೆ ಡಿಕ್ಕಿ ಹೊಡೆದಿದೆ, ನಂತರ…
ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ದೇಶದಲ್ಲಿಯೇ ರಸ್ತೆ ಅಪಘಾತದಿಂದ ಉಂಟಾಗಿರುವಂತ ಸಾವಿನ ಸಂಖ್ಯೆಯಲ್ಲಿ 3ನೇ ಸ್ಥಾನದಲ್ಲಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಹಿತಿ ಬಿಡುಗಡೆ ಮಾಡಿದ್ದು, 2021ರಲ್ಲಿ ಸಂಭವಿಸಿದಂತ ರಸ್ತೆ ಅಪಘಾತದಲ್ಲಿ ( Road Accident ) ಸಾವನ್ನಪ್ಪಿದವರ ಸಂಖ್ಯೆಯಲ್ಲಿ ನವದೆಹಲಿ ಮೊದಲು, ಚೆನ್ನೈ 2ನೇ ಸ್ಥಾನದಲ್ಲಿದ್ದರೇ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಅಂದಹಾಗೇ ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ 2021ರ ವರ್ಷದಲ್ಲಿ 3,214 ಅಪಘಾತಗಳು ಉಂಟಾಗಿವೆ. ಈ ಅಪಘಾತದಲ್ಲಿ 654 ಮಂದಿ ಸಾವನ್ನಪ್ಪಿದ್ದಾರೆ. ಇದು 2020ರಲ್ಲಿ 646 ಆಗಿತ್ತು. ಇನ್ನೂ ರಸ್ತೆ ಅಪಘಾತಗಳ ಸಾವಿನಲ್ಲಿ ನಂ.1 ಸ್ಥಾನದಲ್ಲಿರುವಂತ ದೆಹಲಿಯಲ್ಲಿ ಒಟ್ಟು 4,720 ಅಪಘಾತಗಳು ಸಂಭವಿಸಿವೆ. ಇವುಗಳಲ್ಲಿ 1,239 ಮಂದಿ ಸಾವನ್ನಪ್ಪಿದ್ದಾರೆ. 2ನೇ ಸ್ಥಾನದಲ್ಲಿರುವ ಚೆನ್ನೈನಲ್ಲಿ 5,034 ಅಪಘಾತಗಳು ಸಂಭವಿಸಿದ್ದರೇ, 998 ಮಂದಿ ಸಾವನ್ನಪ್ಪಿದ್ದಾರೆ. 2021ರಲ್ಲಿ ಕರ್ನಾಟಕದಲ್ಲಿ ಒಟ್ಟು 34,647 ಅಪಘಾತಗಳು ಸಂಭವಿಸಿವೆ. ಹೀಗೆ ಉಂಟಾದಂತ ರಸ್ತೆ ಅಪಘಾತದಲ್ಲಿ 10,038 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯ ರಸ್ತೆ ಅಪಘಾತಗಳ ಸಾವಿನ…
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರು ತಮ್ಮ 100 ನೇ ವಯಸ್ಸಿನಲ್ಲಿ ನಿಧನರಾದರು. ಈ ನಡುವೆ ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರ ಪಾರ್ಥಿವ ಶರೀರವನ್ನು ಅಂತಿಮ ವಿಧಿವಿಧಾನಗಳಿಗಾಗಿ ಕೊಂಡೊಯ್ಯಲಾಗುತ್ತಿದೆ. ಈ ವೇಳೇ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ತಾಯಿ ಪಾರ್ಥಿವ ಶರೀರಕ್ಕೆ ಹೆಗಲುಕೊಟ್ಟರು. ಈ ಸುದ್ದಿ ಈಗಷ್ಟೇ ಬಂದಿದೆ ಹೆಚ್ಚಿನ ಮಾಹಿತಿ ಪಡೆದ ತಕ್ಷಣ, ನಾವು ಈ ಪುಟದಲ್ಲಿ ಹೆಚ್ಚಿನ ಮಾಹಿತಿಯನ್ನು ನವೀಕರಣ ಮಾಡುತ್ತೇವೆ, ಸ್ವಲ್ಪ ಸಮಯದ ನಂತರ ಪುನಃ ಈ ಪುಟಕ್ಕೆ ಭೇಟಿ ನೀಡಿ https://twitter.com/ANI/status/1608657708382826498
ಬೆಂಗಳೂರು: ರಾಜ್ಯ ಸರ್ಕಾರದಿಂದ ಮೊಲಾಸಿನ್ ಮಾರಾಟದಿಂದ ಕಾರ್ಖಾನೆಗಳಿಗೆ ಬರುವಂತೆ ಲಾಭಾಂಶವನ್ನು ರೈತರಿಗೆ ವರ್ಗಾಯಿಸುವಂತೆ ಸಕ್ಕರೆ ಕಾರ್ಖಾನೆಗಳಿಗೆ ಆದೇಶಿಸಲಾಗಿದೆ. ಈ ಮೂಲಕ ಹೊಸ ವರ್ಷಕ್ಕೆ ಕಬ್ಬು ಬೆಳೆಗಾರರಿಗೆ ಲಾಭಾಂಶದ ಹಣ ಸಿಗುವ ಮೂಲಕ, ಸಿಹಿಸುದ್ದಿ ಸಿಗಲಿದೆ. ಈ ಕುರಿತಂತೆ ಕಬ್ಬು ನಿಯಂತ್ರಣ ಮಂಡಳಿ ಹಾಗೂ ಸಕ್ಕರೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಎಫ್ ಆರ್ ಪಿ ದರ ಹೊರತುಪಡಿಸಿ, ಪ್ರತಿ ಮೆಟ್ರಿಕ್ ಟನ್ ಗೆ ರೂ.100 ಹೆಚ್ಚು ಪಾವತಿಸಲು ಆದೇಶದಲ್ಲಿ ತಿಳಿಸಲಾಗಿದೆ. ರಾಜ್ಯ ಸರ್ಕಾರದ ಈ ಮೊದಲು ಎಥೆನಾಲ್ ನಿಂದ ಬರುವ ಲಾಭಾಂಶದಲ್ಲಿ ಮೆಟ್ರಿಕ್ ಟನ್ ಗೆ 50 ರೂ ಗಳಂತೆ ಒಟ್ಟು 204 ಕೋಟಿ ರೂ ಪಾವತಿಸಲು ಆದೇಶಿಸಿತ್ತು. ಈ ಬಳಿಕ ಈಗ ಮೊಲಾಸಿನ್ ಮಾರಾಟದಿಂದ ಬರುವಂತ ಲಾಭಾಂಶವನ್ನು ರೈತರಿಗೆ ಪಾವತಿಸಲು ಆದೇಶಿಸಲಾಗಿದೆ. https://kannadanewsnow.com/kannada/job-alert-1458-vacancies-in-central-reserve-police-force-if-you-have-a-puc-you-will-get-a-salary-of-rs-92000-crpf-recruitment-2022/ https://kannadanewsnow.com/kannada/karnataka-state-govt-to-take-significant-steps-to-curb-covid-19-bf7-testing/ https://kannadanewsnow.com/kannada/pm-narendra-modis-mother-heeraben-passes-away-cm-bommai-and-other-dignitaries-condole-her-death/
ಬೆಂಗಳೂರು: ಮೀಸಲಾತಿ ಹೆಚ್ಚಳಕ್ಕಾಗಿ ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯದಿಂದ ಸರ್ಕಾರಕ್ಕೆ ಮನವಿ, ಪ್ರತಿಭಟನೆಯ ಬಿಸಿ ಮುಟ್ಟಿಸಲಾಗಿತ್ತು. ಇದಲ್ಲದೇ ಪಂಚಮಸಾಲಿ ಮೀಸಲಾತಿಗೆ ಹೆಡ್ ಲೈನ್ ಕೂಡ ಕೊಟ್ಟಿತ್ತು. ಈ ಎಲ್ಲಾ ಕಾರಣದಿಂದಾಗಿ ರಾಜ್ಯ ಸರ್ಕಾರದಿಂದ ಎರಡು ಸಮುದಾಯಕ್ಕೆ ಬಂಫರ್ ಗಿಫ್ಟ್ ನೀಡಲಾಗಿದೆ. ಅದೇ 2ಸಿ, 2ಡಿ ಮೀಸಲಾತಿ ನೀಡುವುದಾಗಿ ಘೋಷಣೆ ಮಾಡಿದೆ. ನಿನ್ನೆಯ ಗುರುವಾರದಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಪ್ರವರ್ಗ 2ಎ ಮತ್ತು 2ಡಿ ಹಾಗೂ 2ಡಿಯನ್ನು ಹೊಸದಾಗಿ ರಚಿಸಿ, ರಾಜ್ಯದ ಎರಡು ಪ್ರಬಲ ಸಮುದಾಯಗಳಾದಂತ ಒಕ್ಕಲಿಗ, ಲಿಂಗಾಯತರ ಬೇಡಿಕೆ ಈಡೇರಿಸೋ ನಿರ್ಧಾರವನ್ನು ಪ್ರಕಟಿಸಿದೆ. ಸರ್ಕಾರದ ನಿರ್ಧಾರದಂತೆ 2ಎ ಮತ್ತು 2ಬಿ ಜೊತೆಗೆ ಹೊಸದಾಗಿ ರಚನೆಯಾಗುವ 2ಸಿ ಮತ್ತು 2ಡಿ ಪ್ರವರ್ಗಕ್ಕೆ 3ಎ ಮತ್ತು 3ಬಿನಲ್ಲಿರುವ ಸಮುದಾಯಗಳನ್ನು ವರ್ಗಾಯಿಸಲಾಗುತ್ತದೆ. ಅಂದರೇ 3ಎನಲ್ಲಿರುವ ಒಕ್ಕಲಿಗರು 2ಸಿಗೂ, 3ಬಿನಲ್ಲಿರುವಂತ ಲಿಂಗಾಯತರನ್ನು 2ಡಿಗೂ ವರ್ಗಾಯಿಸಲು ಸಂಪುಟ ಸಭೆ ತಾತ್ವಿಕ ಒಪ್ಪಿಗೆಯನ್ನು ನೀಡಿದೆ. ಇದಲ್ಲದೇ 2ಎ…
ಬೆಂಗಳೂರು: ಗುಜರಾತ್ ನ ಅಹಮದಾಬಾದ್ ನಲ್ಲಿನ ಯುಎಸ್ ಮೆಹ್ತಾ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದಂತ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೇನ್ ಮೋದಿ (100) ಇಂದು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. https://kannadanewsnow.com/kannada/job-alert-1458-vacancies-in-central-reserve-police-force-if-you-have-a-puc-you-will-get-a-salary-of-rs-92000-crpf-recruitment-2022/ ಈ ಬಗ್ಗೆ ಟ್ವಿಟ್ ಮಾಡಿರುವಂತ ಸಿಎಂ ಬೊಮ್ಮಾಯಿ ಅವರು, ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಪೂಜ್ಯ ತಾಯಿ ಹೀರಾಬೆನ್ ಅವರು ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಅತ್ಯಂತ ಬೇಸರವಾಯಿತು. ದೇಶಕ್ಕೆ ಹೆಮ್ಮೆ ತಂದ ಪುತ್ರನಿಗೆ ಜನ್ಮ ನೀಡಿದ ಮಹಾತಾಯಿಗೆ ಸದ್ಗತಿ ಕೋರುತ್ತೇನೆ. ಪ್ರಧಾನಿಯವರಿಗೆ, ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದಿದ್ದಾರೆ. https://twitter.com/BSBommai/status/1608635033555959808 ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು, ಈ ದೇಶಕ್ಕೆ ಮಹಾನ್ ನಾಯಕನನ್ನು ನೀಡಿದಂತಹ ಭಾರತೀಯರೆಲ್ಲರಿಗೂ ಮಾತೃ ಸ್ವರೂಪಿಯಾದ ಶ್ರೀಮತಿ ಹೀರಾ ಬೆನ್ ಅವರ ನಿಧನದಿಂದ ಭಾರತ ಹಿರಿಯ ಚೇತನವೊಂದನ್ನು ಕಳೆದುಕೊಂಡಿದೆ. ಭಾರತವನ್ನು…
ಬೆಂಗಳೂರು: ವಿದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವಂತ ಕೋವಿಡ್ ಬಿಎಫ್.7 ಸೋಂಕಿನ ಅಲೆಯನ್ನು, ಕರ್ನಾಟಕದಲ್ಲಿ ತಡೆಯಲು ರಾಜ್ಯ ಸರ್ಕಾರದ ( Karnataka Government ) ಮಹತ್ವದ ಕ್ರಮ ಕೈಗೊಂಡಿದೆ. ಅದರ ಭಾಗವಾಗಿ ಕೋವಿಡ್ ಪರೀಕ್ಷೆಗಳನ್ನು ( Covid19 Test ) ಹೆಚ್ಚಳ ಮಾಡುವಂತ ನಿರ್ಧಾರಿಸಿದೆ. ಹೌದು ರಾಜ್ಯದಲ್ಲಿ ಕೊರೋನಾ ( Coronavirus ) ರೂಪಾಂತರಿ ಬಿಎಫ್.7 ಸಂಭಾವ್ಯ ಹೊಸ ಅಲೆಯ ತಡೆಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಲಾಗಿದೆ. ಕೊರೋನಾ ದೈನಂದಿನ ಪರೀಕ್ಷೆಯ ಗುರಿಯನ್ನು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ಐದು ಸಾವಿರದಿಂದ 15 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಇದಲ್ಲದೇ ಸಾರಿ, ಐಎಲ್ಐ ಹಾಗೂ ಸೋಂಕಿತರ ಪ್ರಾಥಮಿಕ ಸಂಪರ್ಕಗಳ ಬಗ್ಗೆಯೂ ಆರೋಗ್ಯ ಇಲಾಖೆಯಿಂದ ಹೆಚ್ಚಿನ ನಿಗಾ ವಹಿಸಲಾಗಿದೆ. ಕೋವಿಡ್ ಬಿಎಫ್.7 ಸೋಂಕಿನಿಂದ ಆಗುವಂತ ತೊಂದರೆಯನ್ನು ತಡೆಗಟ್ಟೋ ಸಂಬಂಧ ಜನರು ಮುನ್ನೆಚ್ಚರಿಕೆ ಡೋಸ್ ಲಸಿಕೆಯನ್ನು ಪಡೆಯುವಂತೆಯೂ ಸಲಹೆ ಮಾಡಲಾಗಿದೆ. ಇನ್ನೂ ಕೋವಿಡ್ ಉಲ್ಭಣಗೊಳ್ಳುತ್ತಿರುವ ಕಾರಣ, ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಕೈಗಳನ್ನು…
ಅಹಮದಾಬಾದ್: ಇಲ್ಲಿನ ಯು ಎಸ್ ಮೆಹ್ತಾ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದಾಗಿ ಇಂದು ಪ್ರಧಾನಿ ನರೇಂದ್ರ ಮೋದಿಯವರ ಶತಾಯುಷಿ ತಾಯಿ ಹೀರಾ ಬೇನ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇಂತಹ ಅವರ ಪಾರ್ಥೀವ ಶರೀರವನ್ನು ಅಹಮದಾಬಾದ್ ನ ಗಾಂಧಿನಗರದಲ್ಲಿರುವಂತ ರುದ್ರ ಭೂಮಿಯಲ್ಲಿ ಇಂದು ಅಂತ್ಯಕ್ರಿಯೆ ನೆರವೇರಲಿದೆ. ಈ ಕುರಿತು ಕುಟುಂಬದ ಮೂಲಗಳಿಂದ ಮಾಹಿತಿ ನೀಡಲಾಗಿದ್ದು, ಗುಜರಾತ್ ನ ಅಹಮದಾಬಾದ್ ನಲ್ಲಿರುವಂತ ಗಾಂಧಿನಗರದಲ್ಲಿನ ಸೆಕ್ಟರ್ 30ರ ಸ್ಮಶಾನದಲ್ಲಿ ತಮ್ಮ ತಾಯಿ ಹೀರಾ ಬೇನ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ನೆರವೇರಿಸಲಾಗುವುದಾಗಿ ಹೇಳಿದೆ. ಅಂದಹಾಗೇ ಪುತ್ರ ಪಂಕಜ್ ಮೋದಿಯವರ ಮನೆಯ ಬಳಿಯಲ್ಲಿ ಇಂದು ಬೆಳಿಗ್ಗೆ 8 ಗಂಟೆಯಿಂದ ಹೀರಾ ಬೇನ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಈ ಬಳಿಕ ಅಲ್ಲಿಂದ ಅಂತಿಮ ಯಾತ್ರೆ ಮೂಲಕ ಸೆಕ್ಟರ್ 30ರ ಸ್ಮಶಾನಕ್ಕೆ ಕೊಂಡೊಯ್ದು, ಅಂತ್ಯಕ್ರಿಯೆಯನ್ನು ನೆರವೇರಿಸಲಾಗುತ್ತದೆ. https://kannadanewsnow.com/kannada/job-alert-1458-vacancies-in-central-reserve-police-force-if-you-have-a-puc-you-will-get-a-salary-of-rs-92000-crpf-recruitment-2022/ https://kannadanewsnow.com/kannada/union-home-minister-amit-shah-to-attend-several-programmes-in-mandya-today/
ಬೆಂಗಳೂರು: 2022-23ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಮತ್ತು ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆಗಳು, ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ ಎಂಬುದಾಗಿ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ. ಈ ಕುರಿತಂತೆ ಮಾಹಿತಿ ನೀಡಿರುವಂತ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ದೇಶಕರು, 2022-23ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಮತ್ತು ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ ವೇಳಾಪಟ್ಟಿಗಳನ್ನು ಈ ಕೆಳಕಂಡ ದಿನಾಂಕದೊಳಗೆ ನಡೆಸಲು ಸೂಚಿಸಿದ್ದಾರೆ. ಅಂದಹಾಗ್ 2022-23ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿ ಪರೀಕ್ಷೆಗಳು ದಿನಾಂಕ 06-02-2023 ರಿಂದ 28-02-2023ರವರೆಗೆ ನಡೆಸಲು ನಿಗದಿಪಡಿಸಲಾಗಿದೆ. ಇನ್ನೂ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ದಿನಾಂಕ 23-01-2023ರಿಂದ 04-02-2023ರವರೆಗೆ ನಡೆಯಲಿದ್ದಾವೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ದಿನಾಂಕ 09-03-2023 ರಿಂದ ಆರಂಭಗೊಂಡು 29-03-2023ರಂದು ಕೊನೆಗೊಳ್ಳಲಿದ್ದಾವೆ. ಈ…