Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಜನರಿಗೆ ಮತ್ತೆ ಚಿರತೆ ಭಯ ಶುರುವಾಗಿದೆ. ಬೆಂಗಳೂರಿನ ಸಿದ್ದನಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಸಿದ್ದನಪಾಳ್ಯದ ಬಿಎಂ ಕಾವಲು ಅರಣ್ಯ ಪ್ರದೇಶದ ಬಳಿ ನಿನ್ನೆ ರಾತ್ರಿ ಮನೆಯೊಂದರ ಕೊಟ್ಟಿಗೆಯಲ್ಲಿದ್ದ ಕರುವನ್ನು ಚಿರತೆ ತಿಂದು ಹಾಕಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ನೈಸ್ ರಸ್ತೆಯ ತುರುಹಳ್ಳಿಯಲ್ಲಿ ಚಿರತೆ ದಾಳಿ ನಡೆಸಿತ್ತು, ಇದೀಗ ಮತ್ತೆ ಚಿರತೆ ಆತಂಕ ಮನೆ ಮಾಡಿದೆ. ಕೆಲವು ತಿಂಗಳಿನಿಂದ ರಾಜ್ಯದ ಹಲವು ಕಡೆ ಚಿರತೆ ಹಾವಳಿ ಉಂಟಾಗಿದ್ದು, ಜನರು ಭಯದಲ್ಲೇ ಮನೆಯಿಂದ ಹೊರಗೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. https://kannadanewsnow.com/kannada/india-will-not-compromise-on-national-security-for-good-relations-with-neighbours-rajnath-singh/ https://kannadanewsnow.com/kannada/terrible-car-accident-in-yadgiri-two-died-on-the-spot/
ಯಾದಗಿರಿ : ಕಾಲುವೆ ತಡೆಗೋಡೆಗೆ ಕಾರು ಡಿಕ್ಕಿಯಾಗಿ ಇಬ್ಬರ ದುರ್ಮರಣಕ್ಕೀಡಾದ ಘಟನೆ ಹುಣಸಗಿ ತಾಲೂಕಿನ ರಾಜನಕೂಳೂರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಮಲ್ಲಿಕಾರ್ಜುನ(35) ಪರಶುರಾಮ್ (32) ಎಂದು ಗುರುತಿಸಲಾಗಿದೆ. ಮಲ್ಲಿಕಾರ್ಜುನ್ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬರಲು ಹೋಗುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಕಾಲುವೆ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಕಾಮನಟಗಿಯಿಂದ ನಾರಾಯಣಪುರಕ್ಕೆ ತೆರಳುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿದೆ. ಕೊಡೆಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/india-will-not-compromise-on-national-security-for-good-relations-with-neighbours-rajnath-singh/ https://kannadanewsnow.com/kannada/senior-ips-officer-of-karnataka-r-dilip-passed-away/
ಕೆಎನ್ಎನ್ಡಿಜಿಟಲ್ ಡೆಸ್ಕ್ : ತನ್ನ ಮಗು ನನ್ನಂತಿಲ್ಲ, ನನ್ನ ಗಂಡನಂತೆಯೂ ಇಲ್ಲ, ಕನಿಷ್ಟ ಪಕ್ಷ ಕಣ್ಣುಗಳು ಕೂಡ ಒಂದಕ್ಕೊಂದು ಹೋಲಿಕೆಯಾಗ್ತಿಲ್ಲ. ಇದಕ್ಕೆ ಕಾರಣವೇನಿರಬೋದು ಅನ್ನೋ ಅನುಮಾನ ಮಹಿಳೆಯೊಬ್ಬಳಿಗೆ ಕಾಡಿದ್ದು, ತಕ್ಷಣ ವೈದ್ಯರನ್ನ ಸಂಪರ್ಕಿಸಿದ್ದಾಳೆ. ಅದ್ರಂತೆ, ‘ತಮ್ಮ ಮಗುವಿಗೆ ನಮ್ಮಿಬ್ಬರ ಹೋಲಿಕೆಯಿಲ್ಲ, ಕಾರಣವೇನು.? ಎಂದು ಪ್ರಶ್ನಿಸಿದ್ದಾರೆ. ನಂತ್ರ ಆ ಮಗುವಿಗೆ ಕೆಲವು ಪರೀಕ್ಷೆಗಳನ್ನ ಮಾಡಿ್ದು, ಆ ಪರೀಕ್ಷೆಗಳಲ್ಲಿ ಹಲವು ಆಘಾತಕಾರಿ ಸತ್ಯಗಳು ಬಯಲಾಗಿವೆ. ಹನ್ನಾ ಡಾಯ್ಲ್ ಎಂಬ ಮಹಿಳೆ ತನ್ನ ಪತಿಯೊಂದಿಗೆ UKಯ ಯಾರ್ಕ್ಷೈರ್ನಲ್ಲಿ ವಾಸಿಸುತ್ತಾಳೆ. ಮೂರು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ ಈಕೆ, ಮಗುವಿಗೆ ಕ್ಸಾಂಡರ್ ಎಂದು ಹೆಸರಿಟ್ಟಿದ್ದಾಳೆ. ಕ್ಸಾಂಡರ್ ಹುಟ್ಟುವಾಗ ಸ್ವಲ್ಪ ವಿಭಿನ್ನವಾಗಿ ಕಂಡಿದ್ದಾದ್ರು ಹನ್ನಾ ಅದನ್ನ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಮಗು ಹುಟ್ಟಿದಾಗ ಕತ್ತಿನ ಹಿಂಭಾಗದಲ್ಲಿ ಗಡ್ಡೆ ಕಾಣಿಸಿಕೊಂಡಿತು. ಆತಂಕಗೊಂಡ ಹನ್ನಾ ವೈದ್ಯರ ಗಮನಕ್ಕೆ ತಂದರು. ಆದ್ರೆ, ವೈದ್ಯರು ಮಗುವಿಗೆ ಯಾವುದೇ ಅಪಾಯವಿಲ್ಲ ಎಂದು ಹೇಳಿದರು. ಆದ್ರೆ, ಪ್ರತಿದಿನ ಹನ್ನಾ ಮಗುವಿನಲ್ಲಿ ಬದಲಾವಣೆಗಳನ್ನ ಗಮನಿಸಿದ್ದು, ಏನೋ ಸಮಸ್ಯೆಯಾಗಿದೆ…
ತಿರುವನಂತಪುರಂ: ಭಾರತವು ತನ್ನ ನೆರೆಹೊರೆಯವರೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಲು ಮತ್ತು ನಿರ್ವಹಿಸಲು ಬಯಸುತ್ತದೆ. ಆದರೆ ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಇಲ್ಲಿನ ಶಿವಗಿರಿ ಮಠದ 90ನೇ ವಾರ್ಷಿಕ ಯಾತ್ರೆಯಲ್ಲಿ ಮಾತನಾಡಿದ ಸಿಂಗ್, ನಾವು ಸ್ನೇಹಿತರನ್ನು ಬದಲಾಯಿಸಬಹುದು. ಆದರೆ ನಮ್ಮ ನೆರೆಹೊರೆಯವರನ್ನಲ್ಲ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೇಳಿಕೆಯನ್ನು ಸ್ಮರಿಸಿದರು. ನಮ್ಮ ನೆರೆಹೊರೆಯವರೊಂದಿಗೆ ನಮಗೆ ಉತ್ತಮ ಮತ್ತು ಸೌಹಾರ್ದ ಸಂಬಂಧದ ಅಗತ್ಯವಿದೆ. ಆದಾಗ್ಯೂ, ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ನಾವು ರಾಷ್ಟ್ರೀಯ ಭದ್ರತೆಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ನಮ್ಮ ರಾಷ್ಟ್ರೀಯ ಭದ್ರತೆಯ ವೆಚ್ಚದಲ್ಲಿ ನಾವು ಯಾರೊಂದಿಗೂ ಉತ್ತಮ ಸಂಬಂಧವನ್ನು ಬಯಸುವುದಿಲ್ಲ ಎಂದು ಹೇಳಿದರು. ಕೇರಳ ಮೂಲದ ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಅವರ ಬೋಧನೆಗಳ ಬಗ್ಗೆ ಮಾತನಾಡಿದ ಸಿಂಗ್, ‘ಉದ್ಯಮದ ಮೂಲಕ ಸಮೃದ್ಧಿ’ ಆಲೋಚನೆಯೂ ಭಾರತೀಯ ಸರ್ಕಾರದ ‘ಆತ್ಮ ನಿರ್ಭರ’ ನೀತಿಯ ಆಧಾರವಾಗಿದೆ. ಇದರ ಪರಿಣಾಮವಾಗಿ ನಾವು ವಿಶ್ವದ ಅಗ್ರ…
ಬೆಂಗಳೂರು : ಕರ್ನಾಟಕದ ಹಿರಿಯ ಐಪಿಎಸ್ (IPS) ಅಧಿಕಾರಿ ಆರ್. ದಿಲೀಪ್ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಸಿಐಡಿ ಆರ್ಥಿಕ ಅಪರಾಧ ವಿಭಾಗದಲ್ಲಿ ಡಿಐಜಿಯಾಗಿದ್ದ ಆರ್ ದಿಲೀಪ್ ಅನಾರೋಗ್ಯದ ಹಿನ್ನೆಲೆ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ. https://kannadanewsnow.com/kannada/indonesia-scraps-mask-mandate-finally-ending-covid-pandemic-restrictions/ https://kannadanewsnow.com/kannada/conspiracy-case-against-muruga-shri-soubagya-basavarajan-granted-bail/
ಕೆಎನ್ಎನ್ಡಿಜಿಟಲ್ ಡೆಸ್ಕ್ : ಮಧುಮೇಹಿಗಳು ತಮ್ಮ ಆಹಾರದಲ್ಲಿ ಏನು ತಿನ್ನಬೇಕು.? ಏನು ತಿನ್ನಬಾರದು.? ಕೆಳಗಿನವುಗಳಿಗೆ ಹೆಚ್ಚಿನ ಗಮನ ನೀಡಬೇಕು. ಸಣ್ಣ ತಪ್ಪು ಕೂಡ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು. ದೀರ್ಘಕಾಲದವರೆಗೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ಅಧಿಕವಾಗಿದ್ದರೆ, ಶ್ವಾಸಕೋಶ, ಮೂತ್ರಪಿಂಡ ಮತ್ತು ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಈ ಕ್ರಮದಲ್ಲಿಯೇ ಅನೇಕ ಜನರು ತಮ್ಮ ಆಹಾರದಲ್ಲಿ ಗೋಧಿಯನ್ನ ಸೇರಿಸುತ್ತಾರೆ. ಮಧುಮೇಹವನ್ನ ತಡೆಗಟ್ಟಲು ಹೆಚ್ಚಾಗಿ ಗೋಧಿ ಹಿಟ್ಟಿನಿಂದ ಮಾಡಿದ ಚಪಾತಿಯನ್ನ ತಿನ್ನಲಾಗುತ್ತದೆ. ಗೋಧಿ ಹಿಟ್ಟಿನಿಂದ ಚಪಾತಿ ಮಾಡುವಾಗ ಹಿಟ್ಟನ್ನ ಕಲಸುವ ಅಭ್ಯಾಸ ಎಷ್ಟೋ ಮಂದಿಗಿದೆ. ಹಿಟ್ಟಿನಲ್ಲಿ ಉಳಿದಿರುವುದು ಮೈದಾ ಅನ್ನೋದು ಅನೇಕರಿಗೆ ತಿಳಿದಿಲ್ಲ. ಮಧುಮೇಹಿಗಳಿಗೆ ಇದು ವಿಷವಿದ್ದಂತೆ. ಅಲ್ಲದೆ ಗೋಧಿ ಹಿಟ್ಟು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನ ಹೊಂದಿದೆ. ಈ ಕಾರಣದಿಂದಾಗಿ, ಗೋಧಿ ಹಿಟ್ಟಿನಿಂದ ಮಾಡಿದ ಚಪಾತಿಗಳನ್ನ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವು ವೇಗವಾಗಿ ಹೆಚ್ಚಾಗುತ್ತದೆ. ಆದ್ರೆ, ಮಧುಮೇಹಿಗಳು ಯಾವ ರೀತಿಯ ಹಿಟ್ಟಿನಿಂದ ತಯಾರಿಸಿದ ರೋಟಿ ತಿನ್ನಬೇಕು. ಕಾರ್ನ್ ಫ್ಲೋರ್ : ಮಧುಮೇಹಿಗಳು ಮೆಕ್ಕೆಜೋಳದ ಹಿಟ್ಟಿನಿಂದ ಮಾಡಿದ…
ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಪಿತೂರಿ ಪ್ರಕರಣ ಸಂಬಂಧ ಮಾಜಿ ಶಾಸಕರೂ ಆಗಿರುವ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಅವರ ಪತ್ನಿ ಸೌಭಾಗ್ಯ ಬಸವರಾಜನ್ ಗೆ ಜಾಮೀನು ಮಂಜೂರು ಮಾಡಿ ಕೋರ್ಟ್ ಆದೇಶ ಹೊರಡಿಸಿದೆ. ವಿಚಾರಣೆ ನಡೆಸಿದ ಚಿತ್ರದುರ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಇಂದು (ಡಿ.30) ಎಸ್.ಕೆ.ಬಸವರಾಜನ್ ಅವರ ಪತ್ನಿ ಸೌಭಾಗ್ಯ ಬಸವರಾಜನ್ ಗೆ ಜಾಮೀನು ಮಂಜೂರು ಮಾಡಿ ಕೋರ್ಟ್ ಆದೇಶ ಹೊರಡಿಸಿದೆ. ಇತ್ತೀಚೆಗೆ ಬಸವರಾಜನ್ ಗೆ ಕೂಡ ಜಾಮೀನು ಮಂಜೂರು ಆಗಿತ್ತು. ಸೌಭಾಗ್ಯ ಮಠದ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆಯಾಗಿದ್ದಾರೆ. ಇರನ್ನು ಗುರುವಾರ ಪೊಲೀಸರು ವಶಕ್ಕೆ ಪಡೆದು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇಟ್ಟಿದ್ದರು.ನವೆಂಬರ್ 9 ರಂದು ಮುರುಘಾ ಶ್ರೀ ವಿರುದ್ಧ ಸುಳ್ಳು ದೂರು ದಾಖಲಿಸಲು ಪಿತೂರಿ ನಡೆದಿದೆ ಎಂದು ಮಠದ ಉಸ್ತುವಾರಿ ಬಸವಪ್ರಭು ಶ್ರೀ ಅವರು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ನವೆಂಬರ್ 10 ರಂದು ಬಸವರಾಜೇಂದ್ರ ಬಂಧಿಸಿ ಪೊಲೀಸರ…
ಇಂಡೋನೇಷ್ಯಾ : ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಅನೇಕ ದೇಶಗಳು ಮುನ್ನೆಚ್ಚಾರಿಕಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಇದರ ನಡುವೆ ಇಂಡೋನೇಷ್ಯಾ ಒಳಾಂಗಣಗಳಲ್ಲಿ ಮಾಸ್ಕ್ ಧರಿಸುವ ಹಾಗೂ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಕಡ್ಡಾಯಗೊಳಿದ್ದ ಆದೇಶಗಳನ್ನು ತೆರವುಗೊಳಿಸಿದೆ. ಕೋವಿಡ್ ನಿರ್ಬಂಧಗಳನ್ನು ಸಂಪೂರ್ಣವಾಗಿ ಕೊನೆಗೊಳಿಸಿದ ಕೊನೆಯ ಕೆಲವು ದೇಶಗಳಲ್ಲಿ ಒಂದಾಗಿದೆ. ಹೊಸ ನಿಯಮಗಳು ಶುಕ್ರವಾರದಿಂದ ಜಾರಿಗೆ ಬರಲಿವೆ. ಇಂಡೋನೇಷ್ಯಾದ ಬಹುತೇಕ ಎಲ್ಲಾ ಜನರು ವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧ್ಯಕ್ಷ ಜೋಕೊ ವಿಡೋಡೊ ಹೇಳಿದ್ದಾರೆ. ಕಳೆದ 10 ರಿಂದ 11 ಸತತ ತಿಂಗಳುಗಳಲ್ಲಿ ಸಾಂಕ್ರಾಮಿಕ ತರಂಗವನ್ನು ಅನುಭವಿಸದ ಕೆಲವೇ ದೇಶಗಳಲ್ಲಿ ಒಂದಾಗಿದ್ದೇವೆ. ಸದ್ಯ ಕೋವಿಡ್ ನಿಯಂತ್ರಣದಲ್ಲಿದೆ. ಹೀಗಾಗಿ ನಿಯಮಗಳನ್ನು ಸಡಿಲಗೊಳಿಸಲಾಗಿದೆ ಎಂದ ಅವರು,ಇಂಡೋನೇಷ್ಯಾ ಹೊಸ ಪ್ರಯಾಣದ ನಿರ್ಬಂಧಗಳನ್ನು ವಿಧಿಸುವುದಿಲ್ಲ ಎಂದು ಜೋಕೋವಿ ಪುನರುಚ್ಚರಿಸಿದರು. ಚೀನಾದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಶೀಘ್ರದಲ್ಲೇ ತನ್ನ ಗಡಿಗಳನ್ನು ತೆರೆಯುವ ನಿರೀಕ್ಷೆಯಿದೆ. ಅದೇನೇ ಇದ್ದರೂ, ದೇಶೀಯ…
ಬೆಂಗಳೂರು : ಕಷ್ಟಕ್ಕೆ ಬರಬೇಡ, ಚುನಾವಣೆಗೆ ಮಾತ್ರ ಬಿಡಬೇಡ ಎಂಬುದು ಬಿಜೆಪಿ ನಡೆಯಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ. ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ : ಕಷ್ಟಕ್ಕೆ ಬರಬೇಡ, ಚುನಾವಣೆಗೆ ಮಾತ್ರ ಬಿಡಬೇಡ ಎಂಬುದು ಬಿಜೆಪಿ ನಡೆಯಾಗಿದೆ ಚುನಾವಣೆಗಾಗಿ ಕರ್ನಾಟಕದತ್ತ ಮುಖ ಮಾಡುತ್ತಿರುವ ಮೋದಿ – ಶಾ ಜೋಡಿ ಕರ್ನಾಟಕ ಸಂಕಷ್ಟ ಎದುರಿಸುತ್ತಿದ್ದಾಗ ನಾಪತ್ತೆಯಾಗಿದ್ದರು. “ಕಷ್ಟಕ್ಕೆ ಬರಬೇಡ, ಚುನಾವಣೆಗೆ ಮಾತ್ರ ಬಿಡಬೇಡ” ಎಂಬಂತಿದೆ ಅವರ ನಡೆ. ಮಂಡ್ಯದಲ್ಲಿ ರೈತರು ಹಲವು ದಿನಗಳಿಂದ ತಮ್ಮ ಬೇಡಿಕೆ ಮುಂದಿಟ್ಟು ಪ್ರತಿಭಟಿಸುತ್ತಿದ್ದಾರೆ, ಬಿಜೆಪಿಗೆ ನೈಜ ಕಾಳಜಿ ಇದ್ದರೆ ಅವರ ಬಳಿ ಹೋಗಲಿ ಎಂದು ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ. https://kannadanewsnow.com/kannada/myanmar-court-finds-suu-kyi-guilty-on-5-counts-of-corruption-jailed-for-seven-years/ https://kannadanewsnow.com/kannada/no-one-else-should-tie-my-neck-except-murthy-a-strange-letter-was-found-in-the-temples-offering-box/ https://twitter.com/INCKarnataka/status/1608759675541127173
ಚಾಮರಾಜನಗರ : ಇತ್ತೀಚೆಗೆ ದೇವಾಲಯದ ಕಾಣಿಕೆ ಹುಂಡಿಗಳಲ್ಲಿ ವಿಚಿತ್ರವಾದ ಹರಕೆ, ಬೇಡಿಕೆಗಳನ್ನಿಟ್ಟುಕೊಂಡು ಪತ್ರಗಳನ್ನು ಹಾಕುವುದು ಹೆಚ್ಚಾಗುತ್ತಿದೆ. ಮನಸ್ಸಿನಲ್ಲಿ ಅದೇನೋ ಹರಕೆ, ಬೇಡಿಕೆಯನ್ನಿಟ್ಟುಕೊಂಡು ಕಾಗದದಲ್ಲಿ ಬರೆದು ಅದನ್ನು ಹುಂಡಿಗೆ ಹಾಕುವುದು ಸಾಮಾನ್ಯವಾಗಿದೆ. ಅದೇ ರೀತಿ ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿ ಮಾಯಮ್ಮ ದೇವಾಲಯದಲ್ಲಿ ಭಕ್ತರೊಬ್ಬರು ವಿಚಿತ್ರ ಬೇಡಿಕೆಯ ಪತ್ರವನ್ನು ಹುಂಡಿಗೆ ಹಾಕಿದ್ದಾರೆ. ‘ದೇವರೇ ನನ್ನ ಮೂರ್ತಿ ಬಿಟ್ಟು ನನ್ನ ಕುತ್ತಿಗೆಗೆ ಬೇರೆ ಯಾರೂ ಕೂಡ ತಾಳಿ ಕಟ್ಟಬಾರದು’ ಎಂದು ಪತ್ರ ಬರೆದು ಹುಂಡಿಗೆ ಹಾಕಿದ್ದಾರೆ. ಸದ್ಯ ಈ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹುಡುಗಿ ಕರುಣಿಸು ದೇವರೇ ಇತ್ತೀಚೆಗೆ ಚಾಮರಾಜನಗರದ ಚಾಮರಾಜೇಶ್ವರ ದೇವಾಲಯ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಈ ಸಂದರ್ಭದಲ್ಲಿ ಯುವಕನೋರ್ವ ನನಗೆ ಹುಡುಗಿ ಕರುಣಿಸು, ಪ್ರೀತಿಯ ದೇವರೆ.. ಶಿವಲಿಂಗದ ಚಿತ್ರ ಬರೆದು ಹುಂಡಿಗೆ ಹಾಕಿ ಭಕ್ತನಿಂದ ಪತ್ರದ ಮೂಲಕ ಬೇಡಿಕೊಂಡಿದ್ದು, ಯುವತಿ ಭಾವಚಿತ್ರ, ಆಹ್ವಾನ ಪತ್ರಿಕೆಗಳು ಕೂಡ ಹುಂಡಿಯಲ್ಲಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿತ್ತು. ಇದೀಗ ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿ…