Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನ ಐಕೆಇಎ ಮಾಲ್‌ನಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೊಳಗಾಗಿ ಕುಸಿದುಬಿದ್ದಿದ್ದರು ಮತ್ತು ಅವರಿಗೆ ಯಾವುದೇ ನಾಡಿ ಮಿಡಿತವಿರಲಿಲ್ಲ, ಅದೃಷ್ಟವಶಾತ್ ವೈದ್ಯರೊಬ್ಬರು ಒಂದು ಕ್ಷಣವೂ ವ್ಯರ್ಥ ಮಾಡದೆ ವ್ಯಕ್ತಿಯ ಜೀವವನ್ನು ಉಳಿಸಿದ ಘಟನೆಯ ವೀಡಿಯೊ ವೈರಲ್ ಆಗಿದೆ. https://twitter.com/rohitdak/status/1608511249440202752?ref_src=twsrc%5Etfw%7Ctwcamp%5Etweetembed%7Ctwterm%5E1608511249440202752%7Ctwgr%5E1b1a82fd4510ee4eaa4b5cb3fe90285c54e8f6a8%7Ctwcon%5Es1_c10&ref_url=https%3A%2F%2Fwww.india.com%2Fviral%2Fviral-video-man-suffers-cardiac-arrest-caught-on-camera-man-suffers-heart-attack-while-shopping-at-ikea-bengaluru-watch-cpr-video-5834130%2F ಈ ವಿಡಿಯೋ ಕಂಡ ನೆಟ್ಟಿಗರು ವೈದ್ಯರನ್ನು ಶ್ಲಾಘಿಸಿದ್ದಾರೆ ಶಾಪಿಂಗ್ ಮಾಡುವಾಗ ವ್ಯಕ್ತಿಯು ಹೃದಯ ಸ್ತಂಭನಕ್ಕೆ ಒಳಗಾದತು ಮತ್ತು ನೆಲದ ಮೇಲೆ ಬೀಳುವ ಮೂಲಕ ಪ್ರಜ್ಞೆ ತಪ್ಪಿತ್ತು ಅದೃಷ್ಟವಶಾತ್, ಅಲ್ಲೇ ಶಾಪಿಂಗ್ ಮಾಡುತ್ತಿದ್ದ ವೈದ್ಯರೊಬ್ಬರು ಆ ವ್ಯಕ್ತಿಯ ರಕ್ಷಣೆಗೆ ಓಡೋಡಿ ಬಂದು ಸಕಾಲದಲ್ಲಿ ಕಾರ್ಡಿಯೋಪಲ್ಮೊನರಿ ರೆಸಸಿಟೇಶನ್ ಅಥವಾ ಸಿಪಿಆರ್ನೊಂದಿಗೆ ಅವನನ್ನು ರಕ್ಷಣೆ ಮಾಡಿದರು. https://kannadanewsnow.com/kannada/businessman-pradeep-commits-suicide-4-30-pm-bjp-mla-aravind-limbavali-addresses-press-conference/ ಇಡೀ ಘಟನೆಯ ವೀಡಿಯೊವನ್ನು ವೈದ್ಯರ ಮಗ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅಂದಿನಿಂದ ವೀಡಿಯೊ ವೈರಲ್ ಆಗುತ್ತಿದ್ದಂತೆ ವೈದ್ಯರು ಆನ್ಲೈನ್ನಲ್ಲಿ ಪ್ರಶಂಸೆಗಳನ್ನು ಪಡೆಯುತ್ತಿದ್ದಾರೆ. ಅವರು ವೀಡಿಯೊವನ್ನು ಹಂಚಿಕೊಂಡಿದ್ದು, “ನನ್ನ ತಂದೆ ಒಂದು ಜೀವವನ್ನು ಉಳಿಸಿದ್ದಾರೆ. ನಾವು ಬೆಂಗಳೂರಿನ ಐಕೆಇಎ ಸ್ಟೋರ್‌ನಲ್ಲಿ ಇದ್ದಾಗ, ಅಲ್ಲಿ ಯಾರೋ ಒಬ್ಬರು ಹೃದಯಾಘಾತಕ್ಕೆ ಒಳಗಾಗಿ ನಾಡಿಮಿಡಿತವನ್ನು…
ಬೆಂಗಳೂರು: ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆತ್ ನೋಟ್ ನಲ್ಲಿ ಪ್ರಬಾವಿ ನಾಯಕ ಹೆಸರು ಇದ್ದು, ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. https://kannadanewsnow.com/kannada/the-new-strain-of-bf7-which-entered-bengaluru-in-september-has-been-released-further-increased-anxiety/ ಡೆತ್ ನೋಟ್ ನಲ್ಲಿ ಶಾಸಕ ಅರವಿಂದ ಲಿಂಬಾಳಿ , ಗೋಪಿ ಕೆ. ಸೋಮಯ್ಯ , ಜಿ ರಮೇಶ್ ರೆಡ್ಡಿ , ಜಯರಾಮ್ ರೆಡ್ಡಿ, ರಾಘವ್ ಭಟ್ ಹೆಸರು ಉಲ್ಲೇಖಿಸಲಾಗಿದ್ದು, ಎಫ್ ಐ ಆರ್ ದಾಖಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಂಜೆ 4.30ಕ್ಕೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. https://kannadanewsnow.com/kannada/the-new-strain-of-bf7-which-entered-bengaluru-in-september-has-been-released-further-increased-anxiety/ ಬೆಂಗಳೂರು ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಲಿದ್ದಾರೆ. ಡೆತ್ ನೋಟ್ ನಲ್ಲಿ ಉದ್ಯಮಿ ಪ್ರದೀಪ್ ಅರವಿಂದ ಲಿಂಬಾವಳಿ ಹೆಸರು ಉಲ್ಲೇಖಿಸಿದ್ದರಉ. ಹೀಗಾಗಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಆರು ಜನರ ವಿರುದ್ಧ ಎಫ್ ಐಆರ್ ಪೊಲೀಸರು ದಾಖಲಿಸಿದ್ದರು. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ …
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಉತ್ತರಾಖಂಡದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡ ಕ್ರಿಕೆಟಿಗ ರಿಷಭ್ ಪಂತ್ ಅವರ ಆರೋಗ್ಯ ಕ್ರಮೇಣ ಸುಧಾರಿಸುತ್ತಿದೆ. ಭಾನುವಾರ ಸಂಜೆ, ಅವರನ್ನು ತೀವ್ರ ನಿಗಾ ಘಟಕದಿಂದ (ಐಸಿಯು) ಖಾಸಗಿ ವಾರ್ಡ್‌ಗೆ ಸ್ಥಳಾಂತರಿಸಗಿದೆ ಎಂದು ತಿಳಿದು ಬಂದಿದೆ. ವರದಿಯ ಪ್ರಕಾರ, ರಿಷಭ್ ಪಂತ್ ಅವರನ್ನು ಅಸ್ಥಿರಜ್ಜು ಚಿಕಿತ್ಸೆಗಾಗಿ ವಿದೇಶಕ್ಕೆ ಸ್ಥಳಾಂತರಿಸಬೇಕೆ ಎಂಬುದರ ಕುರಿತಂತೆ ಬಿಸಿಸಿಐ ನಿಯಂತ್ರಣ ಮಂಡಳಿಯೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಲಿದೆ. ಇತ್ತ ಅವರ ಕುಟುಂಬವು ಗೌಪ್ಯತೆಗಾಗಿ ವಿನಂತಿಸಿದೆ. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಭಾನುವಾರ ಮ್ಯಾಕ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಕ್ರಿಕೆಟರ್ ಆರೋಗ್ಯದ ಕುರಿತಂತೆ ಮಾಹಿತಿ ಪಡೆದಿದರು. ಇದೇ ವೇಳೆ ರಿಷಭ್ ಪಂತ್, ರಕ್ಷಿಸಿದ ಹರಿಯಾಣ ರಸ್ತೆಮಾರ್ಗಗಳ ಬಸ್ ಚಾಲಕ ಸುಶೀಲ್ ಕುಮಾರ್ ಮತ್ತು ಪರಮಜೀತ್ ಅವರಿಗೆ ಸಿಎಂ ಧಮಿ ಧನ್ಯವಾದ ಅರ್ಪಿಸಿದರು. ಕೇಂದ್ರ ಸರ್ಕಾರದ ಉತ್ತಮ ಸಮರಿಟನ್ ಪ್ರಶಸ್ತಿಯಡಿಯಲ್ಲಿ ಇವರಿಬ್ಬರನ್ನು ಗೌರವಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು. ಡಿ.27 ರಂದು ನಡೆದ ಭೀರಕ ಅಪಘಾತದಲ್ಲಿ ರಿಷಭ್…
ಯುಎಸ್: ಮಹಿಳೆಯೊಬ್ಬರು ಮೂರು ವರ್ಷದ ಬಾಲಕಿಯನ್ನು ರೈಲ್ವೇ ಹಳಿಗೆ ತಳ್ಳಿರುವ ಆಘಾತಕಾರಿ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಘಟನೆಯು ಡಿಸೆಂಬರ್ 28 ರಂದು ಯುಎಸ್‌ನ ಒರೆಗಾನ್‌ನ ಈಶಾನ್ಯ ಪೋರ್ಟ್‌ಲ್ಯಾಂಡ್‌ನಲ್ಲಿರುವ ಗೇಟ್‌ವೇ ಟ್ರಾನ್ಸಿಟ್ ಸೆಂಟರ್ ಮ್ಯಾಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ನಡೆದಿದೆ. ಸಿಸಿಟಿವಿ ದೃಶ್ಯಗಳಲ್ಲಿ, 32 ವರ್ಷದ ಮಹಿಳೆ ಪ್ಲಾಟ್‌ಫಾರ್ಮ್‌ನಲ್ಲಿರುವ ಬೆಂಚ್ ಮೇಲೆ ಕುಳಿತಿದ್ದು, ಇದ್ದಕ್ಕಿದ್ದಂತೆ ಎದ್ದು ಅಲ್ಲೇ ನಿಂತಿದ್ದ ಮಗುವನ್ನು ರೈಲ್ವೇ ಹಳಿಗೆ ತಳ್ಳುವುದನ್ನು ನೋಡಬಹುದು. On Dec. 28 at the Gateway Transit Center in Portland, OR, a person shoved a toddler face-first into the train tracks. The suspect was apprehended. Antifa & far-left activists in the city have argued against police patrolling public transport, saying it endangers people. pic.twitter.com/uGBBMIraH1 — The Modern Patriot (@ModernPatriotWi) December 30, 2022 ಅದೃಷ್ಟವಶಾತ್…
ಗದಗ : ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಸಿದ್ದೇಶ್ವರ ಸ್ವಾಮೀಜಿಗಳ ಆಪ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. https://kannadanewsnow.com/kannada/we-dont-trust-delhi-police-family-of-girl-dragged-by-car-in-sultanpuri-suspects-foul-play/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದೇಶ್ವರ ಸ್ವಾಮೀಜಿ ಅವರು ಒಪ್ಪಿಗೆ ಕೊಟ್ಟರೆ ಎಲ್ಲ ರೀತಿಯ ಚಿಕಿತ್ಸೆಗೂ ಸಿದ್ದತೆ ಮಾಡುತ್ತೇವೆ. ಕೇಂದ್ರ ಸರ್ಕಾರದಿಂದ, ರಾಜ್ಯ ಸರ್ಕಾರದಿಂದ ಸ್ವಾಮೀಜಿಗಳಿಗೆ ಚಿಕಿತ್ಸೆಕೊಡಲು ಸಿದ್ದ ಎಂದು ತಿಳಿಸಿದ್ದಾರೆ. ಸಿದ್ದೇಶ್ವರ ಸ್ವಾಮೀಜಿಗಳಿಗೆ ಎಲ್ಲಿ ಬೇಕಾದ್ರೂ ಚಿಕಿತ್ಸೆ ಕೊಡಿಸಲು ತಯಾರಿದ್ದೇವೆ. ಸ್ವಾಮೀಜಿ ಮಹಾವಿಭೂತಿ ಪುರುಷರು ಪುಣ್ಯದ ಜೀವ, ಸ್ಥಳೀಯವಾಗಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ನವದೆಹಲಿ : ದೆಹಲಿಯಲ್ಲಿ ಭಾನುವಾರ 20 ವರ್ಷದ ಯುವತಿಯೊಬ್ಬಳ ಸ್ಕೂಟಿ ಕಾರಿಗೆ ಡಿಕ್ಕಿ ಹೊಡೆದು, ಆಕೆಯ ಬಟ್ಟೆ ಕಾರಿಗೆ ಸಿಲುಕಿದ ಪರಿಣಾಮ ಸುಮಾರು 12 ಕಿಮೀ ವರೆಗೆ ಕಾರು ಎಳದೊಯ್ದ ಪರಿಣಾಮ ಆಕೆ ಸಾವನ್ನಪ್ಪಿರುವ ಘಟನೆ ಕುರಿತಂತೆ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದೆ. ಇತ್ತ ಯುವತಿಯ ಕುಟುಂಬ ದೆಹಲಿ ಪೊಲೀಸರ ತನಿಖೆಯಲ್ಲಿ ವಿಶ್ವಾಸವಿಲ್ಲ ಎಂದೇಳಿದೆ. ಈ ಘಟನೆ ಭಾನುವಾರ ಸುಲ್ತಾನ್‌ಪುರಿಯ ರಾಷ್ಟ್ರೀಯ ರಾಜಧಾನಿಯ ಕಾಂಜವಾಲಾ ಪ್ರದೇಶದಲ್ಲಿ ನಡೆದಿದೆ. ಈ ಕುರಿತಂತೆ ಎಎನ್‌ಐ ಜೊತೆ ಮಾತನಾಡಿರುವ ಮೃತ ಯುವತಿಯ ತಾಯಿ, ನಾನು ಮಗಳೊಂದಿಗೆ ರಾತ್ರಿ 9 ರ ಸುಮಾರಿಗೆ ಮಾತನಾಡಿದ್ದೆ. ಅವಳು ಮುಂಜಾನೆ 3-4 ರ ಹೊತ್ತಿಗೆ ಹಿಂದಿರುಗುತ್ತೇನೆ ಎಂದೇಳಿದ್ದಳು. ನನ್ನ ಮಗಳು ಮದುವೆಗಳಿಗಾಗಿ ಈವೆಂಟ್ ಪ್ಲಾನರ್ ಆಗಿ ಕೆಲಸ ಮಾಡುತ್ತಿದ್ದಳು. ಆದರೆ ಮುಂಜಾನೆ ಪೊಲೀಸರು ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ತಿಳಿದು ಆಘಾತವಾಯಿತು ಎಂದೇಳಿದ್ದಾರೆ. https://twitter.com/ANI/status/1609780315652001792 ಇದೇ ವೇಳೆ ಯುವತಿಯ ತಾಯಿ, ಮಗಳನ್ನು ಕೊಲ್ಲುವ ಮೊದಲು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ…
ಬೆಂಗಳೂರು: ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ರೂಪಾಂತರಿ ಬಿಎಫ್. 7 ಬೆಂಗಳೂರಿಗೂ ಬರುವ ಸಾಧ್ಯತೆ ಇದೆ. ಈಗಾಗಲೇ ಮತ್ತೆ ಕೊರೊನಾ ಅಲೆ ಶುರುವಾಗಿದೆ. https://kannadanewsnow.com/kannada/gift-politics-in-belagavi-ex-mla-sanjay-patils-birthday-celebrations-heres-a-gift-for-women/ ಇದರಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದ್ದಾರೆ.ಒಮಿಕ್ರಾನ್ ಬಿಎಫ್ 7ರೂಪಾಂತರಿ ತಳಿ ಬೆಂಗಳೂರಿಗೆ ಜುಲೈ ಕಾಲಿಟ್ಟಿದೆ ಎಂಬ ಮಾತು ಕೇಳಿ ಬಂದಿತ್ತು. ಕಳೆದ ಸೆಪ್ಟಂಬರ್ ನಲ್ಲಿಯೇ ಬೆಂಗಳೂರಿನಲ್ಲಿ ಪ್ರತಿನಿತ್ಯ 200 ರಿಂದ 300 ಸೋಂಕಿತರು ಪತ್ತೆಯಾಗುತ್ತಿದ್ದರು ಎಂದು ಬಿಬಿಎಂಪಿ ಆಯಕ್ತರು ಬಿಎಫ್ 7 ಪತ್ತೆ ಬಗ್ಗೆ ಮಾಹಿತಿ ನೀಡಿದ್ದರು. https://kannadanewsnow.com/kannada/gift-politics-in-belagavi-ex-mla-sanjay-patils-birthday-celebrations-heres-a-gift-for-women/ ಶೇ. 20 ರಷ್ಟು ಅಂದರೆ ಮೂರು ಜನರ ಗಂಟಲು ದ್ರವವನ್ನು ಜಿನೋಮಿಕ್ ಸಿಕ್ವೆನ್ಸಿಂಗ್ ಗೆ ಕಳುಹಿಸಲಾಗಿತ್ತು. ಅದರಲ್ಲಿ 2 ಜನರಿಗೆ ಬಿಎಫ್ 7 ದೃಢಪಟ್ಟಿತ್ತು. ಆದರೆ ಸೋಂಕಿತರು ಆರೋಗ್ಯವಾಗಿದ್ದು, ಯಾವುದೇ ಪ್ರಾಣಪಾಯ ಸಂಭವಿಸಿಲ್ಲ, ವ್ಯಾಕ್ಸಿನೇಷನ್ ಪ್ರಭಾವದಿಂದ ಬಿಎಫ್ ೭ ನಿಂದ ಹಾನಿಯಾಗಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಾರ್ಕಳ : ಬೆಳ್ಳಂಬೆಳಗ್ಗೆ ಶಾಲಾ ಪ್ರವಾಸಕ್ಕೆ ತೆರಳುವ ಬಸ್ ಮಗುಚಿ ಬಿದ್ದು, ಓರ್ವ ಶಿಕ್ಷಕಿ ಸೇರಿ ಹಲವರಿಗೆ ಗಂಭೀರ ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ. https://kannadanewsnow.com/kannada/bigg-news-86th-akhila-bharatha-kannada-sahitya-sammelana-holiday-declared-for-pu-colleges-in-haveri/ ಧರ್ಮಸ್ಥಳ ಮತ್ತು ಕಾರ್ಕಳ ರಾಜ್ಯ ಹೆದ್ದಾರಿಯ ನಲ್ಗೂರು ಸಮೀಪ ಪಾಜೆ ಗುಡ್ಡೆ ತಿರುವಿನಲ್ಲಿ ಶಾಲಾ ಮಕ್ಕಳ ಪ್ರವಾಸದ ಬಸ್ ಮಗುಚಿ ಬಿದ್ದಿದ್ದು ಬಸ್ಸಿನಲ್ಲಿದ್ದ ಓರ್ವ ಶಿಕ್ಷಕಿ ಹಾಗೂ ಹಲವು ಮಕ್ಕಳಿಗೆ ಗಂಭೀರ ಗಾಯವಾಗಿದ್ದು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸಕೋಟೆ ಜಿಲ್ಲೆಗೆ ಸೇರಿದ ಬಸ್ಸು ಇದಾಗಿದ್ದು. ಕರಾವಳಿ ಭಾಗಕ್ಕೆ ಪ್ರವಾಸಕ್ಕೆಂದು ತೆರಳಿದ್ದರು ಮಾರ್ಗ ಮಧ್ಯೆ ಚಾಲಕನ ನಿಯಂತ್ರ ತಪ್ಪಿ ಈ ಅವಘಡ ಸಂಭವಿಸಿದೆ. https://kannadanewsnow.com/kannada/bigg-news-86th-akhila-bharatha-kannada-sahitya-sammelana-holiday-declared-for-pu-colleges-in-haveri/
ಹಾವೇರಿ : ಹಾವೇರಿಯಲ್ಲಿ ಜನವರಿ 6,7 ಮತ್ತು 8 ರಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಜನವರಿ 6 ಮತ್ತು 7 ರಂದು ಹಾವೇರಿಯ ಐದು ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. https://kannadanewsnow.com/kannada/gift-politics-in-belagavi-ex-mla-sanjay-patils-birthday-celebrations-heres-a-gift-for-women/ ಹಾವೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾವೇರಿ, ಗುಡ್ಲೆಪ್ಪ ಹಳ್ಳಿಕೇರಿ ಪದವಿ ಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಎಸ್ ಜೆ.ಎಂ ಪದವಿ ಪೂರ್ವ ಕಾಲೇಜು, ಎಸ್ಎಂಎಸ್ ಪದವಿ ಪೂರ್ವ ಕಾಲೇಜು ಸೇರಿ ಒಟ್ಟು ಐದು ಕಾಲೇಜಿಗೆ ರಜೆ ನೀಡಲಾಗಿದೆ. ಇನ್ನು ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ಷರತ್ತು ಬದ್ಧ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. https://kannadanewsnow.com/kannada/bigg-news-congress-accuses-bjp-government-of-protecting-mla-arvind-limbavali-in-businessman-pradeeps-suicide-case/
ಚೀನಾ : ಚೀನಾದ CRRC ಕಾರ್ಪೊರೇಷನ್ ಲಿಮಿಟೆಡ್ ಇತ್ತೀಚೆಗೆ ತನ್ನ ಮೊದಲ ಹೈಡ್ರೋಜನ್ ಅರ್ಬನ್ ರೈಲನ್ನು ಅನಾವರಣಗೊಳಿಸಿದ್ದು, ಇದು ಏಷ್ಯಾದ ಮೊದಲ ಹೈಡ್ರೋಜನ್ ರೈಲು ಎನ್ನಲಾಗಿದೆ. ಈ ಹೈಡ್ರೋಜನ್ ರೈಲು ಗಂಟೆಗೆ 160 ಕಿಮೀ ವೇಗವನ್ನು ಹೊಂದಿದೆ ಮತ್ತು ಇಂಧನ ತುಂಬಿಸದೆ ಕಾರ್ಯಾಚರಣೆಯ ವ್ಯಾಪ್ತಿಯು 600 ಕಿಮೀ ಆಗಿದೆ. (ಕೆಳೆದ ಸೆಪ್ಟೆಂಬರ್‌ನಲ್ಲಿ ಜರ್ಮನಿಯಲ್ಲಿ ಆಲ್‌ಸ್ಟಾಮ್‌ನ ಕೊರಾಡಿಯಾ ಐಲಿಂಟ್ ಸರಣಿ ರೈಲು 1175 ಕಿಮೀ ದಾಖಲೆಯನ್ನು ಸ್ಥಾಪಿಸಿದೆ). ಮತ್ತೊಂದೆಡೆ, ಭಾರತವು ತನ್ನ ಮೊದಲ ಸ್ವದೇಶಿ ಹೈಡ್ರೋಜನ್ ರೈಲುಗಳನ್ನು ತಯಾರಿಸಲು ಮುಂದಾಗಿದೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ನೀಡಿದ ವಿವಿಧ ಹೇಳಿಕೆಗಳ ಪ್ರಕಾರ, ಭಾರತವು ಈ ವರ್ಷ ತನ್ನ ಮೊದಲ ಹೈಡ್ರೋಜನ್ ರೈಲು ಪಡೆಯಲಿದೆ. ಹೈಡ್ರೋಜನ್ ರೈಲನ್ನು ಫಕ್ಸಿಂಗ್ ಹೈ-ಸ್ಪೀಡ್ ಪ್ಲಾಟ್‌ಫಾರ್ಮ್ ಆಧಾರದ ಮೇಲೆ ಅಭಿವೃದ್ಧಿಪಡಿಸಲಾಗಿದೆ ಮತ್ತು ಅದರೊಂದಿಗೆ 4 ಕಾರುಗಳನ್ನು ಒಳಗೊಂಡಿದೆ. CRRC 2021 ರಲ್ಲಿ ಅಂತಹ ಶಂಟಿಂಗ್ ಲೋಕೋಮೋಟಿವ್ ಅನ್ನು ಪರಿಚಯಿಸಿತು ಮತ್ತು ಹೈಡ್ರೋಜನ್ ಟ್ರಾಮ್‌ಗಳನ್ನು 2010 ರ ದಶಕದ ಮಧ್ಯಭಾಗದಲ್ಲಿ…