Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು: ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆ ಕುಡಿದು ವಾಹನ ಚಾಲನೆ ಮಾಡದಂತೆ ಬೆಂಗಳೂರು ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದರು. ಆದರೂ ಕೂಡ ಜನರು ಕ್ಯಾರೇ ಎನ್ನದೇ ಮದ್ಯ ಸೇವಿಸಿ ವಾಹನ ಚಲಾಯಿಸಿ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಕ್ರಿಸ್ಮಸ್ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ಒಂದೇ ದಿನ 146 ಡ್ರಂಕ್ ಅಂಡ್ ಡ್ರೈವ್ ಕೇಸ್ ದಾಖಲಾದರೆ, ಡಿಸೆಂಬರ್ 31ರ ರಾತ್ರಿ ಕೇವಲ 78 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ. 2022ರ ನವೆಂಬರ್ ತನಕ ನಗರದಲ್ಲಿ ಮದ್ಯ ಸೇವಿಸಿ ವಾಹನ ಓಡಿಸಿದವರ ಸಂಖ್ಯೆ 26,017 ಹಾಗೂ ತಪಾಸಣೆ ವೇಳೆ ಕಟ್ಟಿದ ದಂಡದಿಂದಲೇ ಸುಮಾರು 26 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಇನ್ನೂ, ಜವಾಬ್ದಾರಿಯುತವಾಗಿ ಕುಡಿಯದೇ ವಾಹನ ಚಲಾಯಿಸಿದ ಬೆಂಗಳೂರಿಗರಿಗೆ ಸಂಚಾರಿ ಪೊಲೀಸರು ಧನ್ಯವಾದ ಅರ್ಪಿಸಿದ್ದಾರೆ. ರಾಜ್ಯದಲ್ಲಿ ಭರ್ಜರಿ ಮದ್ಯ ಮಾರಾಟ ಹೊಸ ವರ್ಷ 2023 ರನ್ನು ರಾಜ್ಯದ ಜನರು ಅದ್ದೂರಿಯಾಗಿ ಬರ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಎಂಜಿ ರೋಡ್, ಬ್ರಿಗೇಡ್…
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಜನವರಿ 3 ರಂದು 108 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ (ಐಎಸ್‌ಸಿ) ಯನ್ನು ಉದ್ಘಾಟಿಸಲಿದ್ದು, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ ಎಂದು ಪಿಎಂ ಕಚೇರಿ ತಿಳಿಸಿದೆ. ಕಾರ್ಯಕ್ರಮವು ರಾಷ್ಟ್ರಸಂತ ತುಕಾಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾಲಯ (ಆರ್‌ಟಿಎಂಎನ್‌ಯು) ನಡೆಯಲಿದೆ. ಈ ಬಾರಿ ಮಹಿಳಾ ಸಬಲೀಕರಣದೊಂದಿಗೆ ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಎಂಬ ಕೇಂದ್ರ ವಿಷಯದ ಕುರಿತಂತೆ ಚರ್ಚೆ ನಡೆಯಲಿದೆ. ಬೋಧನೆ, ಸಂಶೋಧನೆ ಮತ್ತು ಉದ್ಯಮದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವ ಮಾರ್ಗಗಳ ಕುರಿತಂತೆ ಚರ್ಚೆಗಳು ನಡೆಯಲಿವೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ ಕ್ಷೇತ್ರಗಳಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವ ಮಾರ್ಗಗಳು ಮತ್ತು ಶಿಕ್ಷಣ, ಸಂಶೋಧನಾ ಅವಕಾಶಗಳು ಹಾಗೂ ಆರ್ಥಿಕ ಭಾಗವಹಿಸುವಿಕೆಯಲ್ಲಿ ಸಮಾನ ಸ್ಥಾನಮಾನ ಕಲ್ಪಿಸುವುದು ಕಾರ್ಯಕ್ರಮದ ಉದ್ದೇಶವಾಗಿರುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಹಿಳೆಯರ ಕೊಡುಗೆಯನ್ನು ಪ್ರದರ್ಶಿಸುವ ವಿಶೇಷ ಕಾರ್ಯಕ್ರಮದಲ್ಲಿ ಪ್ರಸಿದ್ಧ ಮಹಿಳಾ ವಿಜ್ಞಾನಿಗಳು ಉಪನ್ಯಾಸಗಳನ್ನು ನೀಡಲಿದ್ದಾರೆ. 1914 ರಲ್ಲಿ ಮೊದಲ ಬಾರಿಗೆ ನಡೆದ…
ಮೈಸೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ. ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರೋದಿಲ್ಲ. ಕಮಲದ ಆಯಸ್ಸು ಮುಗಿತ್ತಾ ಬಂತು, ಕಮಲ ಮುದುಡುತ್ತಿದೆ. ಜೆಡಿಎಸ್ ಎಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೊ ಎಂಬುದಾಗಿ ಅಮಿತ್ ಶಾ ಹೆದರಿದ್ದಾರೆ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಂಕ್ರಾಂತಿ ನಂತರ ಅಭ್ಯರ್ಥಿಗಳ ಎರಡನೇ ಪಟ್ಟಿ ರಿಲೀಜ್ ಮಾಡುತ್ತೇನೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಜೆಡಿಎಸ್ ಬಗ್ಗೆ ಟೀಕೆ ಮಾಡಿದ್ರು. ನನ್ನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ಯಾವುದಾದರೂ ಒಂದು ಪ್ರಕರಣದಲ್ಲಿ ನಾಡಿನ ಸಂಪತ್ತುನ್ನು ಎಟಿಎಂ ಆಗಿ ದುರ್ಬಳಕೆ ಮಾಡಿಕೊಂಡಿದ್ದರೆ ರಾಜ್ಯದ ಜನತೆ ಮುಂದಿದೆ ಎಂದರು. ಬಿಜೆಪಿಗೆ ಕರ್ನಾಟಕ ಎಟಿಎಂ ಆಗಿದೆ. ಅಮಿತ್ ಶಾ ಮಗ ಜೈ ಶಾಗೆ ಬಿಸಿಸಿಐನಲ್ಲಿ ಸ್ಥಾನ ಕೊಟ್ಟಿದ್ದೀರಲ್ಲ, ಜೈ ಶಾಗೆ ಏನು ಅರ್ಹತೆ ಇದೆ ಎಂದು ಪ್ರಶ್ನಿಸಿದಂತ ಅವರು, ಹೆಚ್.ಡಿ.ದೇವೇಗೌಡರ ಉಗುರಿಗೆ ಸಮ ಆಗಲ್ಲ. ದೇವೇಗೌಡರ ಬಗ್ಗೆ ಮಾರಾಡುವ ನೈತಿಕತೆ ಅಮಿತ್ ಶಾಗೆ ಇಲ್ಲ. ಕನ್ನಡಿಗರ ಎಟಿಎಂನ್ನು ಬಿಜೆಪಿ…
ನವದೆಹಲಿ: ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಭಾರತದಲ್ಲಿ ಹೆಚ್ಚು ಬಳಸಲಾಗುವ ದೈನಂದಿನ ಪಾವತಿ ವಿಧಾನವಾಗಿದೆ. ಡಿಜಿಟಲ್ ಪಾವತಿ ವಿಧಾನವು ಬಹುತೇಕ ಎಲ್ಲೆಡೆ ಪ್ರವೇಶಿಸಬಹುದಾಗಿದೆ ಮತ್ತು ಇದು ನಗದು ಅಥವಾ ವಾಲೆಟ್ ಸಾಗಿಸುವ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಸ್ಮಾರ್ಟ್‌ಫೋನ್‌ನಿಂದ ನೇರವಾಗಿ ಸೇವೆಯನ್ನು ಬಳಸುವ ಸುಲಭತೆಯು Google Pay, PhonePe, Paytm, Amazon Pay ಮತ್ತು ಇತರವುಗಳಂತಹ ವಿವಿಧ ಅಪ್ಲಿಕೇಶನ್‌ಗಳ ಮೂಲಕ ಸೇವೆಯನ್ನು ಬಳಸಲು ಅದರ ವ್ಯಾಪಕ ಅಳವಡಿಕೆ ಮತ್ತು ಆಯ್ಕೆಯಲ್ಲಿ ಸಹಾಯ ಮಾಡಿದೆ. ಸಣ್ಣ ಮಾರಾಟಗಾರರು ಮತ್ತು ವ್ಯಾಪಾರ ಮಾಲೀಕರಿಗೆ ಪಾವತಿಗಳನ್ನು ಸ್ವೀಕರಿಸಲು ಸಹಾಯ ಮಾಡಿದೆ. ಆದರೆ, ಯುಪಿಐ ಮೂಲಕ ನೀವು ವಹಿವಾಟು ನಡೆಸಬಹುದಾದ ಮೊತ್ತಕ್ಕೆ ಮಿತಿ ಇದೆ ಎಂದು ನಿಮಗೆ ತಿಳಿದಿದೆಯೇ?. ಹೌದು, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಪ್ರಕಾರ, ಬಳಕೆದಾರರು ಒಂದು ದಿನದಲ್ಲಿ UPI ಮೂಲಕ 1 ಲಕ್ಷದವರೆಗೆ ಮಾತ್ರ ವರ್ಗಾಯಿಸಬಹುದು. ಇದರ ಹೊರತಾಗಿ ಒಂದು ದಿನದಲ್ಲಿ ನೀವು UPI ಮೂಲಕ ವರ್ಗಾಯಿಸಬಹುದಾದ ಮೊತ್ತವು ನಿಮ್ಮ…
ಬೆಂಗಳೂರು : ಹೊಸ ವರ್ಷ 2023 ರನ್ನು ರಾಜ್ಯದ ಜನರು ಅದ್ದೂರಿಯಾಗಿ ಬರ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಎಂಜಿ ರೋಡ್, ಬ್ರಿಗೇಡ್ ರೋಡ್ ಸೇರಿ ಹಲವು ರಸ್ತೆಗಳಲ್ಲಿ ಜನ ಜಂಗುಳಿ ನೆರೆದಿತ್ತು. ಇನ್ನೂ, ಇಯರ್ ಎಂಡ್ ಹಿನ್ನೆಲೆ ರಾಜ್ಯದಲ್ಲಿ ಭರ್ಜರಿ ಮದ್ಯ ಮಾರಾಟವಾಗಿತ್ತು, ಅಬಕಾರಿ ಇಲಾಖೆಗೆ ಭಾರೀ ಆದಾಯ ತಂದುಕೊಟ್ಟಿದೆ. ಡಿಸೆಂಬರ್ 27 ರಂದು 3.57 ಲಕ್ಷ ಲೀಟರ್ ಮದ್ಯ ಹಾಗೂ 2.41 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಡಿಸೆಂಬರ್ 28 ರಂದು 2.31 ಲಕ್ಷ ಲೀಟರ್ ಮದ್ಯ , 1.67 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಡಿಸೆಂಬರ್ 29 ರಂದು 2.31 ಲಕ್ಷ ಲೀಟರ್ ಮದ್ಯ, 1.93 ಲಕ್ಷ ಲೀಟರ್ ಬಿಯರ್ , ಡಿಸೆಂಬರ್ 30 ರಂದು .93 ಲಕ್ಷ ಲೀಟರ್ ಮದ್ಯ, 2.59 ಲಕ್ಷ ಲೀಟರ್ ಬಿಯರ್ , ಇನ್ನೂ 2022 ರ ಕೊನೆಯ ದಿನವಾದ ಡಿಸೆಂಬರ್ 31 ರಂದು 3 ಲಕ್ಷ ಲೀಟರ್ ಮದ್ಯ ಹಾಗೂ 2.41 ಲಕ್ಷ…
ಮೈಸೂರು: ಈಗಾಗಲೇ ಜೆಡಿಎಸ್ ಪಕ್ಷದಿಂದ ( JDS Party ) ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. 93 ಅಭ್ಯರ್ಥಿಗಳ ಪಟ್ಟಿಯ ಬಳಿಕ, ಈಗ ಎರಡನೇ ಪಟ್ಟಿ ಬಿಡುಗಡೆಗೂ ಪಕ್ಷ ಸಿದ್ಧವಾಗಿದೆ. ಈ ಕುರಿತಂತೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ಸಕ್ರಾಂತಿ ಬಳಿಕ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದರು. ರಾಜ್ಯದಲ್ಲಿ ಚುನಾವಣೆಗೂ ಮುನ್ನವೇ ಬಿಜೆಪಿಯಿಂದ ಆಪರೇಷನ್ ಕಮಲ ಆರಂಭಿಸಲಾಗಿದೆ. ಆದ್ರೇ ಈ ಬಾರಿ ಸಮ್ಮಿಶ್ರ ಸರ್ಕಾರ ಬರುವುದಿಲ್ಲ. ಬಹುಮತದ ಪಡೆದಂತ ಕನ್ನಡಿಕರ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದರು. ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಲು ಜೆಡಿಎಸ್ ಪಣ ತೊಟ್ಟಿದೆ. ನಾವು ಕೇವಲ 35 ಸೀಟ್ ಗೆಲ್ಲುವುದಿಲ್ಲ. 135 ಸ್ಥಾನವನ್ನು ಗೆಲ್ಲುತ್ತೇವೆ. ಈ ಮೂಲಕ ಕರ್ನಾಟಕದಲ್ಲಿ ಕನ್ನಡಿಕರ ಪಕ್ಷ ಅಧಿಕಾರಕ್ಕೆ ಬರೋದು ಶತಸಿದ್ಧ ಎಂದು ಹೇಳಿದರು. ದೇವೇಗೌಡರ ಕುಟುಂಬವನ್ನು ಭ್ರಷ್ಟರು ಎಂದು ಅಮಿತ್ ಶಾ ಹೇಳಿದ್ದಾರೆ. ಆ ಮೂಲಕ ತಮ್ಮ ಗುಂಡಿಯನ್ನು ತಾವೇ ತೋಡಿಕೊಂಡಿದ್ದಾರೆ. ನಮ್ಮ…
ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅನಿಗೋಳ ಗ್ರಾಮದಲ್ಲಿ ಗುಟ್ಕಾ ವಿಚಾರಕ್ಕೆ ಶುರುವಾಗ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. https://kannadanewsnow.com/kannada/siddeshwara-swamijis-health-is-stable-a-slight-fluctuation-in-the-pulse-of-the-seer-dr-moolimani-clarifies/ ೪೫ ವರ್ಷದ ಮಂಜುನಾಥ್ ಸುಣಗಾರ ಕೊಲೆಯಾದ ವ್ಯಕ್ತಿ. ಅಜಯ್ ಹಿರೇಮಠ ಎಂಬಾತಕೊಂದು ಪರಾರಿಯಾಗಿದ್ದಾನೆ. ಅವರಿಬ್ಬರು ಕುಡಿದು ಪಾನ್ ಶಾಪ್ ಬಳಿ ನಿಂತಿದ್ದರು. ಗುಟ್ಕಾ ತಿಂದು ಉಗುಳಿದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಉಂಟಾಗಿದೆ. ಈ ವೇಳೆ ಜಗಳ ವಿಕೋಪಕ್ಕೆ ಹೋಗಿ ಅಜಯ್ ಹಿರೇಮಠ ಮಂಜುನಾಥ್ ಅವರನ್ನು ಅಟ್ಟಾಡಿಸಿದ್ದಲ್ಲದೆ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಈ ವೇಳೆ ಮಂಜುನಾಥ್ ಬಿದ್ದು ಒದ್ದಾಡಿದ್ದಾನೆ. ಸ್ಥಳದಿಂದ ಆರೋಪಿ ಅಜಯ್ ಪರಾರಿಯಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ. ಈ ಸಂಬಂಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ : 2022ನೇ ಸಾಲಿಗೆ ವಿಕಲಚೇತನರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್‍ಗಳ ವಿತರಣೆ/ ನವೀಕರಣವನ್ನು 2022ನೇ ಸಾಲಿನಲ್ಲಿ ವಿತರಿಸಲಾಗಿರುವ ಬಸ್ ಪಾಸ್‍ಗಳನ್ನು 2023ರ ಫೆ.28 ರೊಳಗೆ ನವೀಕರಿಸಿಕೊಳ್ಳಲು ಅನುಮತಿಸಲಾಗಿದೆ. https://kannadanewsnow.com/kannada/airline-employee-dies-after-getting-sucked-into-plane-engine/ 2023ನೇ ಸಾಲಿನಲ್ಲಿ ಹೊಸದಾಗಿ ವಿಕಲಚೇತನರ ಬಸ್ ಪಾಸ್ ಪಡೆಯಲು/ನವೀಕರಣಕ್ಕೆ ಫಲಾನುಭವಿಗಳು ಸರ್ಕಾರ ನಿಗದಿಪಡಿಸಿರುವ ಸೇವಾಸಿಂಧು ಆನ್‍ಲೈನ್ ಪೋರ್ಟಲ್ https://sevasindhu.karnataka.gov.in ನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತೆ. 2022ನೇ ಸಾಲಿನಲ್ಲಿ ಹೊಸದಾಗಿ ವಿಕಲಚೇತನರ ಬಸ್‍ಪಾಸ್ ಪಡೆಯಲು ವಿಭಾಗೀಯ ನಿಯಂತ್ರಣಾಧಿಕಾರಿಗಳು ಶಿವಮೊಗ್ಗ ವಿಭಾಗ ಎಂದು ಕೌಂಟರ್ ಆಯ್ಕೆ ಮಾಡುವುದು ಹಾಗೂ 2022ನೇ ಸಾಲಿನಲ್ಲಿ ಬಸ್ ಪಾಸ್ ಪಡೆದಿರುವ ಫಲಾನುಭವಿಗಳು ಪಾಸ್ ನವೀಕರಣಕ್ಕಾಗಿ ಘಟಕ ವ್ಯವಸ್ಥಾಪಕರ ಕೌಂಟರ್ ಆಯ್ಕೆ ಮಾಡಲು ಸೂಚಿಸಿದೆ. https://kannadanewsnow.com/kannada/big-shock-for-egg-lovers-egg-price-suddenly-skyrocketed-rs-6-50-per-1-egg/ ಅರ್ಜಿದಾರರು ಆನ್‍ಲೈನ್‍ನಲ್ಲಿ ತಮ್ಮ ವಿವರಗಳನ್ನು ಭರ್ತಿ ಮಾಡಿ, ಫಲಾನುಭವಿಗಳ ಭಾವಚಿತ್ರದೊಂದಿಗೆ ಅಗತ್ಯ ದಾಖಲಾತಿಗಳಾದ ಯುಡಿಐಡಿ ಕಾರ್ಡ್, ಡಿಸೆಬಲಿಟಿ ಸರ್ಟಿಫಿಕೇಟ್, ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್‍ನ್ನು ಜೆಪಿಜಿ ಅಥವಾ ಪಿಡಿಎಫ್ ನಮೂನೆಯಲ್ಲಿ ಅಡಕಗೊಳಿಸುವುದು. ಫಲಾನುಭವಿಗಳು ಪಾಸ್ ಪಡೆಯಲು ಬರುವಾಗ ಜಿಲ್ಲಾ ವಿಕಲಚೇತನರ…
ಅಮೆರಿಕ: ಡಿಸೆಂಬರ್ 31 ರಂದು ಯುಎಸ್ ವಿಮಾನ ನಿಲ್ದಾಣದಲ್ಲಿ ಏರ್‌ಲೈನ್ ಉದ್ಯೋಗಿಯೊಬ್ಬರು ವಿಮಾನದ ಇಂಜಿನ್‌ಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಲಬಾಮಾದ ಮಾಂಟ್ಗೊಮೆರಿ ಪ್ರಾದೇಶಿಕ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಅಮೆರಿಕನ್ ಏರ್‌ಲೈನ್ಸ್ ಅಂಗಸಂಸ್ಥೆ ಪೀಡ್‌ಮಾಂಟ್‌ಗೆ ಸಂಬಂಧಿಸಿದ ಕೆಲಸಗಾರ ವಿಮಾನದ ಎಂಜಿನ್‌ಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಯುಎಸ್ ಸರ್ಕಾರದ ತನಿಖಾ ಸಂಸ್ಥೆಯಾದ ನ್ಯಾಷನಲ್ ಟ್ರಾನ್ಸ್‌ಪೋರ್ಟೇಶನ್ ಸೇಫ್ಟಿ ಬೋರ್ಡ್ ಹೇಳಿದೆ. ಅಲಬಾಮಾ ಯುಎಸ್‌ಎಯ ಮಾಂಟ್‌ಗೊಮೆರಿ ಪ್ರಾದೇಶಿಕ ವಿಮಾನ ನಿಲ್ದಾಣದಲ್ಲಿ ಉದ್ಯೋಗಿ ರಾಂಪ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಒಂದು ಎಂಜಿನ್ ಚಾಲನೆಯಲ್ಲಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಇದನ್ನು ಮತ್ತೊಂದು ಅಮೇರಿಕನ್ ಏರ್ಲೈನ್ಸ್ ಅಂಗಸಂಸ್ಥೆಯಾದ ಎನ್ವಾಯ್ ಏರ್ ನಿರ್ವಹಿಸುತ್ತಿತ್ತು. ಕೆಲಸಗಾರನ ಗುರುತನ್ನು ಇನ್ನೂ ತಿಳಿಸಲಾಗಿಲ್ಲ. https://kannadanewsnow.com/kannada/4-dead-as-2-helicopters-collide-mid-air-in-australia/ https://kannadanewsnow.com/kannada/siddeshwara-swamijis-health-is-stable-a-slight-fluctuation-in-the-pulse-of-the-seer-dr-moolimani-clarifies/ https://kannadanewsnow.com/kannada/4-dead-as-2-helicopters-collide-mid-air-in-australia/ https://kannadanewsnow.com/kannada/siddeshwara-swamijis-health-is-stable-a-slight-fluctuation-in-the-pulse-of-the-seer-dr-moolimani-clarifies/
ವಿಜಯಪುರ : ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ ಸ್ಥಿರ ವಾಗಿದೆ ಎಂದು ವೈದ್ಯ ಮೂಲಿಮನಿ ಮಾಹಿತಿ ನೀಡಿದ್ದಾರೆ. https://kannadanewsnow.com/kannada/biggi-news-former-cm-siddaramaiah-enquires-about-siddeshwara-sris-health/ ಸಿದ್ದೇಶ್ವರ ಶ್ರೀಗಳ ನಾಡಿಮಿಡಿತದಲ್ಲಿ ಸ್ವಲ್ಪ ಏರುಪೇರು ಆಗಿದೆ. ಉಸಿರಾಟದಲ್ಲಿ ಸ್ವಲ್ಪ ಸಮಸ್ಯೆ ಆಗುತ್ತಿದೆ. ಹೀಗಾಗಿ ಆಕ್ಸಿಜನ್ ಕೊಡಲಾಗುತ್ತಿದೆ. ಸಿದ್ದೇಶ್ವರ ಸ್ವಾಮೀಜಿಯವರ ಪಲ್ಸ್, ಬಿಪಿ, ಸ್ವಲ್ಪ ಕಡಿಮೆಯಾಗಿದೆ. ಅವರು ಬೆಳಗ್ಗೆಯಿಂದಲೂ ಆಹಾರವನ್ನು ಸೇವಿಸಿಲ್ಲ ಎಂದು ಹೇಳಿದ್ದಾರೆ.ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದು, ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ ವಿಚಾರಿಸಿದ್ದಾರೆ. https://kannadanewsnow.com/kannada/biggi-news-former-cm-siddaramaiah-enquires-about-siddeshwara-sris-health/ ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಿದ್ದೇಶ್ವರ ಶ್ರೀಗಳು ಒಬ್ಬ ಮಹಾನ್ ಸಂತ, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ನಾನು ವೈದ್ಯರ ಜೊತೆಗೆ ಮಾತನಾಡಿದ್ದೇನೆ. ಅವರೂ ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಆದಷ್ಟು ಬೇಗ ಶ್ರೀಗಳು ಗುಣಮುಖರಾಗಲೆಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು. ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಯಾಗುತ್ತಿದೆ. ಸದ್ಯಕ್ಕೆ ಸ್ವಾಮೀಜಿಗಳ ಆರೋಗ್ಯ…