Author: KNN IT TEAM

ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೇಂದ್ರೀಯ ವಿದ್ಯಾಲಯಗಳಲ್ಲಿನ ಹುದ್ದೆಗಳನ್ನ ಭರ್ತಿ ಮಾಡಲು ಆನ್ಲೈನ್ ಅರ್ಜಿ ಪ್ರಕ್ರಿಯೆಯು ಇಂದು (ಜನವರಿ 2) ಕೊನೆಗೊಳ್ಳಲಿದೆ. ಇನ್ನೂ ಅರ್ಜಿ ಸಲ್ಲಿಸದ ಅಭ್ಯರ್ಥಿಗಳು ತಕ್ಷಣ ಅರ್ಜಿ ಸಲ್ಲಿಸಿ. ಯಾಕಂದ್ರೆ, ಈಗಾಗಲೇ ಒಂದು ಬಾರಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನ ವಿಸ್ತರಿಸಲಾಗಿದ್ದು, ಈಗ ಮತ್ತೊಮ್ಮೆ ವಿಸ್ತರಣೆ ಮಾಡುವುದಿಲ್ಲ ಎನ್ನಲಾಗ್ತಿದೆ. ಆದ್ದರಿಂದ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನ ಬಳಸಿಕೊಳ್ಳಬೇಕು. ಇನ್ನು ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನ ಆನ್ಲೈನ್ ಮೂಲಕ ಸಲ್ಲಿಸಬೇಕು. ದೇಶಾದ್ಯಂತ ಕೇಂದ್ರೀಯ ವಿದ್ಯಾಲಯಗಳಲ್ಲಿ (ಕೆವಿ) ಖಾಲಿ ಇರುವ ಹುದ್ದೆಗಳನ್ನ ಭರ್ತಿ ಮಾಡಲು ನವದೆಹಲಿಯಲ್ಲಿ ಕೇಂದ್ರೀಯ ವಿದ್ಯಾಲಯ ಸಂಘಟನೆ (ಕೆವಿಎಸ್) ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ 13,404 ಹುದ್ದೆಗಳನ್ನ ಭರ್ತಿ ಮಾಡಲಾಗುವುದು. ಇವುಗಳಲ್ಲಿ 6990 ಬೋಧಕ ಮತ್ತು ಬೋಧಕೇತರ ಹುದ್ದೆಗಳು ಮತ್ತು 6414 ಪ್ರಾಥಮಿಕ ಶಿಕ್ಷಕರ ಹುದ್ದೆಗಳಿವೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಉದ್ಯೋಗದ ಆಯ್ಕೆಯನ್ನ ಮಾಡಲಾಗುತ್ತದೆ. ಆದಾಗ್ಯೂ, ಈ ಉದ್ಯೋಗಗಳನ್ನ ಭರ್ತಿ ಮಾಡಲು ಆನ್ಲೈನ್ ಅರ್ಜಿ ಪ್ರಕ್ರಿಯೆಯು ಡಿಸೆಂಬರ್ 5ರಿಂದ…

Read More

ನವದೆಹಲಿ: ಈ ವರ್ಷ ಕೆಲವು ಅಡೆತಡೆಗಳ ಹೊರತಾಗಿಯೂ ಭಾರತೀಯ ಇಂಟರ್ನೆಟ್ ಉದ್ಯಮವು ಬೆಳೆಯುವ ನಿರೀಕ್ಷೆಯಿದೆ ಮತ್ತು 2030 ರ ವೇಳೆಗೆ 5 ಟ್ರಿಲಿಯನ್ ಡಾಲರ್ ಮೌಲ್ಯವನ್ನು ತಲುಪಬಹುದು ಎನ್ನಲಾಗಿದೆ. ಅಂದ ಹಾಗೇ 780 ಮಿಲಿಯನ್ ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ಭಾರತವು ವಿಶ್ವದ ಎರಡನೇ ಅತಿದೊಡ್ಡ ಇಂಟರ್ನೆಟ್ ಬಳಕೆದಾರರ ದೇಶವಾಗಿದೆ. ಡಿಜಿಟಲ್ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ, ಭಾರತದ ಇಂಟರ್ನೆಟ್ ಜಿಎಂವಿ (ಮೌಲ್ಯಮಾಪನವಲ್ಲದ) 2030 ರ ವೇಳೆಗೆ ಸುಮಾರು 1 ಟ್ರಿಲಿಯನ್ ಡಾಲರ್ಗೆ ಬೆಳೆಯುತ್ತದೆ ಅಂತ ಹೇಳಲಾಗಿದ್ದು, ಇದು ಸಾರ್ವಜನಿಕ ಮತ್ತು ಖಾಸಗಿ ಮಾರುಕಟ್ಟೆ ಕ್ಯಾಪ್ಗಳಲ್ಲಿ 5 ಟ್ರಿಲಿಯನ್ ಡಾಲರ್ಗೆ ಸಮನಾಗಿರುತ್ತದೆ ಎಂದು ಮಾರುಕಟ್ಟೆ ಗುಪ್ತಚರ ಸಂಸ್ಥೆ ರೆಡ್ಸೀರ್ ಸ್ಟ್ರಾಟಜಿ ಕನ್ಸಲ್ಟೆಂಟ್ಸ್ನ ದತ್ತಾಂಶಗಳು ತಿಳಿಸಿವೆ. ಒಬ್ಬ ಸರಾಸರಿ ಭಾರತೀಯನು ತನ್ನ ಸ್ಮಾರ್ಟ್ಫೋನ್ನಲ್ಲಿ ದಿನಕ್ಕೆ ಸುಮಾರು 7.3 ಗಂಟೆಗಳನ್ನು ಕಳೆಯುತ್ತಾನೆ, ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ. “ಆನ್ಲೈನ್ ಮೆಸೇಜಿಂಗ್, ಸೋಷಿಯಲ್ ಮೀಡಿಯಾ, ಯೂಟ್ಯೂಬ್ ಸ್ಟ್ರೀಮಿಂಗ್, ಒಟಿಟಿ ಕಂಟೆಂಟ್ ಮತ್ತು ಶಾರ್ಟ್-ಫಾರ್ಮ್ ವೀಡಿಯೊಗಳಲ್ಲಿ ಕಳೆದ ಸಮಯವು ಆಸಕ್ತಿದಾಯಕವಾಗಿದೆ. ಹೆಚ್ಚಿನ…

Read More

ಬೆಂಗಳೂರು : ನಮ್ಮ ಕೆಲಸ, ಆಡಳಿತದ ಆಧಾರದ ಮೇಲೆ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಅವರು ಇಂದು ವೈಯ್ಯಾಲಿಕಾವಲ್ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಹಿಂದೂ ಧರ್ಮದಲ್ಲಿ ಪವಿತ್ರವಾದ ದಿನ. ಇಂದು ವೆಂಕಟೇಶ್ವರನ ದರ್ಶನ ಮಾಡಬೇಕೆಂದು ಪ್ರತೀತಿ. ತಿರುಪತಿಗೆ ಹೋಗಲು ಸಾಧ್ಯವಿಲ್ಲ ದಿರುವರರಿಂದ ಟಿ ಟಿ ಡಿ ಯವರ ದೇವಸ್ಥಾನಕ್ಕೆ ಬಂದು ಪುನೀತ ಭಾವನೆ ಮೂಡಿದೆ. ಕರ್ನಾಟಕದ ಜನತೆ ಅಭಿವೃದ್ಧಿ, ಸಮೃದ್ಧಿಯಾಗುವಂತೆ ದೇವರಲ್ಲಿ ಬೇಡಿಕೊಂಡಿದ್ದು, ಖಂಡಿತವಾಗಿ 2023 ರಲ್ಲಿ ವೆಂಕ್ತೇಶ್ವನ ಆಶೀರ್ವಾದ ಇರುತ್ತದೆ. ವೆಂಕಟೇಶ್ವರ ಎಂದರೆ ಅಭಿವೃದ್ಧಿ, ಸಮೃದ್ಧಿಯ ಸಂಕೇತ. ಕರ್ನಾಟಕ ಹಿಂದೆಂದೂ ಕಾಣದ ಅಭಿವೃದ್ಧಿ ಕಾಣಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು. ಕಾನೂನು ಪ್ರಕಾರ ಕ್ರಮ ಉದ್ಯಮಿ ಪ್ರದೀಪ್ ಅವರು ಶಾಸಕ ಅರವಿಂದ ಲಿಂಬಾವಳಿ ಯವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದುಎಫ್.ಐ.ಆರ್ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಪ್ರಕ್ರಿಯೆ ಏನಾಗಬೇಕೋ ಆಗಿದೆ. ಮುಂದೂ ಕೂಡ ಕಾನೂನು ಪ್ರಕಾರವಾಗಿ ಆಗಲಿದೆ ಎಂದರು.…

Read More

ನವದೆಹಲಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಎಲ್ಲಾ ಕಾರ್ಮಿಕರ ಹಾಜರಾತಿಯನ್ನು ಡಿಜಿಟಲ್ ಆಗಿ ಸೆರೆಹಿಡಿಯುವುದನ್ನು ಸಾರ್ವತ್ರಿಕಗೊಳಿಸಲಾಗಿದೆ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಪ್ರತಿಯೊಂದು ಸ್ಥಳದಲ್ಲಿಯೂ ಬಳಸಲಾಗುವುದು ಎನ್ನಲಾಗಿದ್ದು ಇದು ಜನವರಿ 1, 2023 ರಿಂದ ಜಾರಿಗೆ ಬರಲಿದೆ. ಡಿಸೆಂಬರ್ 23 ರಂದು ಗ್ರಾಮೀಣಾಭಿವೃದ್ಧಿ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ನಿರ್ದೇಶನವನ್ನು ನೀಡಿದೆ. ‘ವೈಯಕ್ತಿಕ ಫಲಾನುಭವಿ ಯೋಜನೆ / ಯೋಜನೆ’ಯನ್ನು ಹೊರತುಪಡಿಸಿ ಎಲ್ಲಾ ಕೆಲಸದ ಸೈಟ್ಗಳು ಮೊಬೈಲ್ ಅಪ್ಲಿಕೇಶನ್ – ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್ (ಎನ್ಎಂಎಂಎಸ್) ನಲ್ಲಿ ಹಾಜರಾತಿಯನ್ನು ನೋಂದಾಯಿಸುವುದು ಕಡ್ಡಾಯವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. https://kannadanewsnow.com/kannada/bengaluru-man-assaults-friend-for-airphone-kills-him/ https://kannadanewsnow.com/kannada/stray-dog-menace-continues-to-haunt-kerala-12-yr-old-girl-among-7-injured/ https://kannadanewsnow.com/kannada/dk-has-no-morals-to-speak-on-reservation-issue-minister-sriramulu-vagdhal/

Read More

ಕೇರಳ : ಕೇರಳದಲ್ಲಿ ಬೀದಿ ನಾಯಿಗಳ ಹಾವಳಿ ಮುಂದುವರೆದಿದೆ. ಕೊಲ್ಲಂನಲ್ಲಿ ದೇವಾಲಯದ ಬಳಿ ನಾಯಿಗಳ ದಾಳಿಗೆ 12 ವರ್ಷದ ಬಾಲಕಿ ಸೇರಿದಂತೆ ಏಳು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ನಿನ್ನೆ ಸಂಜೆ ಕೊಲ್ಲಂನಲ್ಲಿ ದೇವಾಲಯದ ಬಳಿ ಘಟನೆ ನಡೆದಿದ್ದು, ಗಾಯಗೊಂಡ 7 ಜನರಲ್ಲಿ ಅಯ್ಯಪ್ಪ ಭಕ್ತರು ಸೇರಿದ್ದಾರೆ. ಎಲ್ಲಾ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಇಜಾಕಿ ಮತ್ತು ಮಣಿಕಂದನ್ ಎಂಬುವವರನ್ನು ಪುನಲುರ ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ. ದೇವಾಲಯದ ಆವರಣದಲ್ಲಿ ಮತ್ತು ರಸ್ತೆಬದಿಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. https://kannadanewsnow.com/kannada/dk-has-no-morals-to-speak-on-reservation-issue-minister-sriramulu-vagdhal/ https://kannadanewsnow.com/kannada/shocking-incident-in-bangalore-youth-stabbed-by-a-college-student-dies-on-the-spot/ https://kannadanewsnow.com/kannada/bengaluru-man-assaults-friend-for-airphone-kills-him/

Read More

ಬೆಂಗಳೂರು : ಮೀಸಲಾತಿ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಗೆ ಮಾತನಾಡುವ ನೈತಿಕತೆ ಇಲ್ಲ. ಐವತ್ತು ವರ್ಷಗಳಿಂದ ಕಾಂಗ್ರೆಸ್ ಜನರಿಗೆ ಮೋಸ ಮಾಡುತ್ತಾ ಬಂದಿದೆ ಎಂದು ಸಚಿವ ಶ್ರೀರಾಮುಲು ವಾಗ್ಧಾಳಿ ನಡೆಸಿದರು. ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಮ್ಮ ಕಾರ್ಯಕರ್ತರು ಒಗ್ಗಟ್ಟಾಗಿದ್ದಾರೆ, ನಮ್ಮ ಪಕ್ಞದ ಮೇಲೆ ಜೆಡಿಎಸ್ ಸೇರಿದಂತೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು. ಕಾಂಗ್ರೆಸ್ ಮೀಸಲಾತಿ ವಿಚಾರದಲ್ಲಿ ಯಾರಿಗೂ ನ್ಯಾಯ ನೀಡಿಲ್ಲ, ಮೀಸಲಾತಿ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಗೆ ಮಾತನಾಡುವ ನೈತಿಕತೆ ಇಲ್ಲ. ಐವತ್ತು ವರ್ಷಗಳಿಂದ ಕಾಂಗ್ರೆಸ್ ಜನರಿಗೆ ಮೋಸ ಮಾಡುತ್ತಾ ಬಂದಿದೆ ಎಂದು ಸಚಿವ ಶ್ರೀರಾಮುಲು ವಾಗ್ಧಾಳಿ ನಡೆಸಿದರು. https://kannadanewsnow.com/kannada/good-news-railways-recruitment-for-more-than-17000-vacancies-no-exam-no-interview-10th-class-pass-is-enough/ https://kannadanewsnow.com/kannada/shocking-incident-in-bangalore-youth-stabbed-by-a-college-student-dies-on-the-spot/

Read More

ಬಳ್ಳಾರಿ: ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟಿದ ವಿಚಾರವಾಗಿ ಸಾರಿಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ. ಸ್ನೇಹಿತ ಜನಾರ್ದನ ರೆಡ್ಡಿ ಪಕ್ಷ ಪ್ರಭಾವ ಬೀರಲ್ಲಾ. ರಾಮುಲು ಮುಖ ನೋಡಿ ಮತ್ತೊಬ್ಬರ ಮುಖ ನೋಡಿ ಮತ ಹಾಕಬೇಡಿ. ಮೈಸೂರು ಭಾಗ ಅಷ್ಟೇ ಅಲ್ಲಾ ಕಲ್ಯಾಣ ಕರ್ನಾಟಕ ಎಲ್ಲ ಭಾಗದಲ್ಲಿ ಬಿಜೆಪಿ ಪಕ್ಷ ಗೆಲ್ಲಲಿದೆ ಎಂದು ಹೇಳಿದ್ದಾರೆ. https://kannadanewsnow.com/kannada/bloodshed-again-in-kundanagari-a-fight-over-gutkha-ended-in-a-murder/ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಸೇರಿದಂತೆ ಯಾವುದೇ ಪ್ರಾದೇಶಿಕ ಪಕ್ಷ ಪರಿಣಾಮ ಬೀರದು ಎಂದರು.ಯಾವುದೇ ಪ್ರಾದೇಶಿಕ ಪಕ್ಷ ಪರಿಣಾಮ ಬೀರುವ ಮಾತೇ ಇಲ್ಲ. ಸ್ವಂತ ಬಲದಿಂದ ನಾವು 150 ಸ್ಥಾನ ಗೆಲ್ಲುತ್ತೇವೆ. ಪ್ರಮುಖವಾಗಿ ಉತ್ತರ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಪ್ರಭಾವ ಬೀರಲ್ಲ. ಬಳ್ಳಾರಿ ವಿಜಯನಗರ ಅವಳಿ ಜಿಲ್ಲೆಯ ಮೂರು ಸಾಮಾನ್ಯ ಕ್ಷೇತ್ರದಲ್ಲಿ ಆನಂದ್ ಸಿಂಗ್ , ಕರುಣಾಕರ್ ರೆಡ್ಡಿ, ಸೋಮಶೇಖರ್ ರೆಡ್ಡಿ ಗೆಲುತ್ತಾರೆ. ಹೀಗಂತ ಹೇಳುವ ಮೂಲಕ ಸ್ನೇಹಿತ ಜನಾರ್ದನ ರೆಡ್ಡಿ ಬಿಟ್ಟು, ಉಳಿದ ರೆಡ್ಡಿ ಸಹೋದರರ ಕಡೆ ರಾಮಲು…

Read More

ಬೆಂಗಳೂರು: ನಗರದಲ್ಲಿ ಹೊಸ ವರ್ಷದಂದೇ ಬೆಚ್ಚಿ ಬೀಳಿಸೋ ಘಟನೆ ನಡೆದಿರುವುದು ಈಗ ತಡವಾಗಿ ಬೆಳಕಿಗೆ ಬಂದಿದೆ. ಸ್ನೇಹಿತನನ್ನೇ ಏರ್ ಪೋನ್ ಗಾಗಿ ಹಲ್ಲೆ ಮಾಡಿ, ಕೊಲೆ ಮಾಡಿರೋ ಘಟನೆ ನಡೆದಿದೆ. ಬೆಂಗಳೂರಿನ ದೊಡ್ಡನಾಗಮಂಗಲದ ಬಳಿಯಲ್ಲಿ ಡಿಸೆಂಬರ್ 31ರಂದು ಸ್ನೇಹಿತರೆಲ್ಲಾ ಸೇರಿಕೊಂಡು ನ್ಯೂ ಇಯರ್ ಪಾರ್ಟಿ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ಏರ್ ಪೋನ್ ಗಾಗಿ ಉಂಟಾದಂತ ಜಗಳ ತಾರಕ್ಕೇರಿ, ಸ್ನೇಹಿತ ಕಾರ್ತಿಕ್ (27) ಎಂಬಾತನ ಮೇಲೆ ಹಲ್ಲೆ ನಡೆಸಲಾಗಿದೆ. ನಾಲ್ವರು ಸ್ನೇಹಿತರಿಂದ ತೀವ್ರವಾಗಿ ಹಲ್ಲೆಗೊಳಗಾದಂತ ಕಾರ್ತಿಕ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. https://kannadanewsnow.com/kannada/upi-limit-daily-upi-transaction-limit-on-google-pay-phonepe-paytm-and-amazon-pay/ https://kannadanewsnow.com/kannada/huge-sales-of-liquor-for-the-new-year-do-you-know-how-much-revenue-the-excise-department-has-flowed-into-the-treasury/

Read More

ಬೆಂಗಳೂರು : ಹಾಡಹಗಲೇ  ಬೆಂಗಳೂರಿನಲ್ಲಿ ಕಾಲೇಜಿನಲ್ಲೇ ವಿದ್ಯಾರ್ಥಿನಿ ಮೇಲೆ ಚಾಕು ಇರಿತ ಸ್ಥಳದಲ್ಲೇ ಸಾವನ್ನಪ್ಪಿದ ದುರಂತ ಘಟನ  ರಾಜಾನುಕುಂಟೆ ಬಳಿ  ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಡೆದಿದೆ ಎಂದು ಬೆಳಕಿಗೆ ಬಂದಿದೆ.ಈ ಘಟನೆ ತಿಳಿದು ಸಿಲಿಕಾನ್‌ ಸಿಟಿ ಜನರೇ ಬೆಚ್ಚಿ ಬೀಳಿಸುವಂತಾಗಿದೆ. https://kannadanewsnow.com/kannada/good-news-railways-recruitment-for-more-than-17000-vacancies-no-exam-no-interview-10th-class-pass-is-enough/ ವಿದ್ಯಾರ್ಥಿನಿ ಚಾಕು ಇರಿದು ಕೊಂದ ಬಳಿಕ ತಾನು ಚಾಕುವಿನಿಂದ ಇರಿದು ಕೊಂಡಿದ್ದಾನೆ ಎಂಬ ಮಾಹಿತಿ ತಿಳಿದಿದೆ. ಪ್ರೀತಿ ಪ್ರೇಮದ ವಿಚಾರಕ್ಕೆ ಹತ್ಯೆಗೈದು ಆತ್ಯಹತ್ಯೆಗೆ ಯತ್ನಿಸಲಾಗಿದೆ.  ಘಟನಾ ಸ್ಥಳಕ್ಕೆ ರಾಜಾನುಕುಂಟೆ ಪೊಲೀಸರುಭೇಟಿ ಪರಿಶೀಲನೆ ನಡೆಸಿದ್ದಾರೆ https://kannadanewsnow.com/kannada/good-news-railways-recruitment-for-more-than-17000-vacancies-no-exam-no-interview-10th-class-pass-is-enough/ ಇದೀಗ ಬಂದ ಸುದ್ದಿಯಾಗಿದ್ದು, ಹೆಚ್ಚಿನ ಮಾಹಿತಿ ತಿಳಿದ ತಕ್ಷಣ ಅಪ್‌ಡೇಟ್‌ ಮಾಡಲಾಗುತ್ತದೆ https://kannadanewsnow.com/kannada/good-news-railways-recruitment-for-more-than-17000-vacancies-no-exam-no-interview-10th-class-pass-is-enough/

Read More

ಕೆಎನ್ಎನ್ಡಿಜಿಟಲ್ ಡೆಸ್ಕ್ : ರೈಲ್ವೆಯಲ್ಲಿ ಸರ್ಕಾರಿ ಉದ್ಯೋಗದ ಕನಸು ಕಾಣುವ ಯುವಕರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ನೈಋತ್ಯ ರೈಲ್ವೆ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳು 3 ಜನವರಿ 2023 ರಿಂದ ಅಧಿಕೃತ ವೆಬ್ಸೈಟ್ rrcser.co.in ಮೂಲಕ ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಫೆಬ್ರವರಿ 2, 2023 ಆಗಿದೆ. ಖಾಲಿ ಇರುವ ಹುದ್ದೆಗಳೆಷ್ಟು.? ರೈಲ್ವೆ ನೇಮಕಾತಿ ಕೋಶವು ಹೊರಡಿಸಿದ ಅಧಿಸೂಚನೆಯ ಪ್ರಕಾರ, ಈ ಪ್ರಕ್ರಿಯೆಯ ಮೂಲಕ, ನೈರುತ್ಯ ರೈಲ್ವೆಯಲ್ಲಿ ಫಿಟ್ಟರ್, ವೆಲ್ಡರ್, ಎಲೆಕ್ಟ್ರಿಷಿಯನ್, ಕಾರ್ಪೆಂಟರ್, ಡೀಸೆಲ್ ಮೆಕ್ಯಾನಿಕ್, ಮೆಷಿನಿಸ್ಟ್ ಮತ್ತು ಪೇಂಟರ್ ಸೇರಿದಂತೆ ಖಾಲಿ ಇರುವ 1785 ಅಪ್ರೆಂಟಿಸ್ ಹುದ್ದೆಗಳನ್ನ ಭರ್ತಿ ಮಾಡಲಾಗುವುದು. ಇನ್ನು ಈ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳನ್ನ 10ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ನಿಯಮಗಳ ಪ್ರಕಾರ, ಸ್ಟೈಫಂಡ್ ಸಹ ಪಡೆಯುತ್ತಾರೆ. ವಿದ್ಯಾರ್ಹತೆ ಮತ್ತು ವಯೋಮಿತಿ.? ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಕನಿಷ್ಠ ವಯಸ್ಸು…

Read More