Subscribe to Updates
Get the latest creative news from FooBar about art, design and business.
Author: KNN IT TEAM
ಕೆಎನ್ಎನ್ ಡಿಜಿಟಲ್ ಡೆಸ್ಕ್ : ದೇಶದಲ್ಲೆ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗಾಗಿ ಹಲವು ಯೀಜನೆಗಳನ್ನು ನೀಡುತ್ತಿರುತ್ತದೆ. ಯಾವುದೇ ದಾಖಲೆಯಿಲ್ಲದೆ ತನ್ನ ಗ್ರಾಹಕರಿಗೆ 9 ಲಕ್ಷ ರೂ.ಗಳವರಗೆ ಸಾಲವನ್ನು ನೀಡಲಿದೆ. ನಿಮಗೆ ಹಣವೂ ಅಗತ್ಯವಿದ್ದರೆ, ಯಾವುದಾದರು ವ್ಯವಹಾರವನ್ನು ಪ್ರಾರಂಭಿಸಲು ಬಯಸುತ್ತಿದ್ದರೆ ಬ್ಯಾಂಕ್ ನಿಮಗೆ ಯಾವುದೇ ಡಾಕ್ಯುಮೆಂಟ್ ಇಲ್ಲದೆ 50,000 ರೂ.ಗಳಿಂದ 9 ಲಕ್ಷ ರೂ.ಗಳ ಲಾಭವನ್ನು ನೀಡುತ್ತಿದೆ. ಎಸ್‌ಬಿಐ ಮುದ್ರಾ ಸಾಲದ ಮೂಲಕ ನೀವು ಈ ಹಣವನ್ನು ಪಡೆಯಬಹುದು. ಈ ಸಾಲವನ್ನು ಪಡೆಯಲು ನೀವು ಆಧಾರ್ ಕಾರ್ಡ್ ಮಾತ್ರ ಹೊಂದಿರಬೇಕು. ಇದರೊಂದಿಗೆ, ನಿಮ್ಮ ಆಧಾರ್ ಕಾರ್ಡ್ ಅನ್ನು ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಬೇಕು. ಇದರಿಂದ ಪರಿಶೀಲನೆಯಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ನೀವು ಅದನ್ನು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಮೂಲಕ ಅನ್ವಯಿಸಬಹುದು. ಇದರಲ್ಲಿ, ಮುಖಪುಟದಲ್ಲಿ, ನೀವು ಇ-ಮುದ್ರಾ ಸಾಲದೊಂದಿಗೆ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇದರ ನಂತರ, ಹೆಚ್ಚಿನ ಸಂಸ್ಕರಣೆಯ ಮೂಲಕ ನೀವು ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ದೇಶಾದ್ಯಂತ…
ಶಿವಮೊಗ್ಗ : ಸೊರಬ ತಾಲೂಕು ತೋಟಗಾರಿಕೆ ಇಲಾಖೆಯು 2022-23ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಅಳವಡಿಸಲು ಸಹಾಯಧನಕ್ಕಾಗಿ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಂದ ಅಥವಾ ಸೊರಬ ತೋಟಗಾರಿಕೆ ಇಲಾಖೆಯಿಂದ ಜ.02 ರಿಂದ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಜ.25ರೊಳಗಾಗಿ ಸಲ್ಲಿಸುವಂತೆ ಸೊರಬ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಪ್ರೋತ್ಸಾಹಧನ ಯೋಜನೆಯಡಿ ವಿದ್ಯಾರ್ಥಿಗಳಿಂದ ಆನ್‍ಲೈನ್ ಅರ್ಜಿ ಆಹ್ವಾನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2022-23ನೇ ಸಾಲಿಗೆ ಪ್ರತಿಷ್ಠಿತ ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಾದ ಐಐಎಂ, ಐಐಟಿ, ಐಐಎಸ್‍ಸಿ, ಐಐಐಟಿ, ಎನ್‍ಐಟಿ ಮುಂತಾದವುಗಳಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿರುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ)ಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಪ್ರೋತ್ಸಾಹಧನ ಪಡೆಯಲು ಆನ್‍ಲೈನ್ ಅಜಿ ಆಹ್ವಾನಿಸಲಾಗಿದ್ದು, ಆಸಕ್ತರು ಇಲಾಖಾ ವೆಬ್‍ಸೈಟ್ http://bcwd.karnataka.gov.in ರಲ್ಲಿ…
ಬೆಂಗಳೂರು: ಸಂಘಟನೆ, ಕಾರ್ಯಕರ್ತರ ಶ್ರಮದಿಂದ ಶಿವಾಜಿನಗರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದ್ದು, ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಸೀಟು ಪಡೆಯುವುದು ಖಚಿತ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಬೆಂಗಳೂರಿನ ಶಿವಾಜಿನಗರದಲ್ಲಿ ಇಂದು ಬಿಜೆಪಿ ಬೂತ್ ವಿಜಯ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷವು ಬೂತ್ ಮಟ್ಟದ ವಿಜಯ ಸಾಧನೆಗೆ ಈ ಅಭಿಯಾನ ಆರಂಭಿಸಿದೆ. ಶಿವಾಜಿನಗರದಲ್ಲಿ ಬಿಜೆಪಿ ಜೈ ಆದಾಗ ಭಾರತ್ ಮಾತಾಕಿ ಜೈ ಆಗುತ್ತದೆ. ಶಿವಾಜಿನಗರದಲ್ಲಿ ನಾವು ಈ ಹಿಂದೆ ಗೆದ್ದಿದ್ದೆವು. ಅದನ್ನು ಪಕ್ಷದ ಕಾರ್ಯಕರ್ತರು ಮತ್ತೆ ಸಾಧಿಸಿ ತೋರಿಸಬೇಕು. ಸಂಘಟಿತ ಪ್ರಯತ್ನದಿಂದ ಇಲ್ಲಿ ಗೆಲುವು ಸಾಧನೆ ನೂರಕ್ಕೆ ನೂರು ಗ್ಯಾರಂಟಿ. ನಾನು ಈ ಕ್ಷೇತ್ರದ ವಿಜಯಕ್ಕಾಗಿ ಬಂದಿದ್ದೇನೆ ಎಂದು ತಿಳಿಸಿದರು. ಮೆಟ್ರೋ 2 ನೇ ಹಂತ 2024ಕ್ಕೆ ಪೂರ್ಣವಾಗಲಿದೆ. ಮೂರನೇ ಹಂತಕ್ಕೆ ರೂ. 26 ಸಾವಿರ ಕೋಟಿ ಯೋಜನೆಗೆ ರಾಜ್ಯ ಕ್ಯಾಬಿನೆಟ್ ಅನುಮತಿ ಕೊಟ್ಟಿದೆ. ಸಬರ್ಬನ್ ರೈಲು ಆರಂಭಿಸಿದ್ದು, ಕಾವೇರಿ 5ನೇ ಹಂತದ ನೀರು…
ಬೆಂಗಳೂರು : ರಾಜ್ಯ ಸರ್ಕಾರ’ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ನಡೆಸಿದ್ದು, 4 ಹಿರಿಯ ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ರಾಜ್ಯದ 4 ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ 1) ಲಾಬುರಾಮ್, ಐಜಿಪಿ, 2) ಎನ್.ಸತೀಶ್ ಕುಮಾರ್, ಐಜಿಪಿ, ಉತ್ತರ ವಲಯ, 3) ರಮಣಗುಪ್ತಾ, ಡಿಐಜಿ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ 4) ಅನುಪಮ್ ಅಗರ್ವಾಲ್, ಡಿಐಜಿ, ಆಗ್ನೇಯ ವಲಯ ನೇರ ನೇಮಕಾತಿ ಮತ್ತು ಮುಂಬಡ್ತಿ ಪ್ರಕ್ರಿಯೆಗೆ ನೀಡಲಾಗಿದ್ದ ಸುತ್ತೋಲೆ ವಾಪಸ್ ರಾಜ್ಯ ಸರ್ಕಾರವು ನೇರ ನೇಮಕಾತಿ ಮತ್ತು ಮುಂಬಡ್ತಿ ಪ್ರಕ್ರಿಯೆಗೆ ಇಲಾಖಾ ಮುಂಬಡ್ತಿ ಸಭೆ ಆಯೋಜಿಸದಂತೆ ಸೂಚನೆ ನೀಡಲಾಗಿದ್ದ ಸುತ್ತೋಲೆಯನ್ನು ಹಿಂಪಡೆದಿದೆ.ಈ ಕುರಿತು ಸುತ್ತೋಲೆ ಹೊರಡಿಸಿರುವ ರಾಜ್ಯ ಸರ್ಕಾರ, ನೇರ ನೇಮಕಾತಿ ಮತ್ತು ಮೀಸಲಾತಿ ಅನ್ವಯವಾಗುವ ವೃಂದಗಳಿಗೆ ನೀಡಲಾಗುವ ಮುಂಬಡ್ತಿ ಪ್ರಕ್ರಿಯೆಗೆ ಇಲಾಖಾ ಮುಂಬಡ್ತಿ ಸಮಿತಿ ಸಭೆಯನ್ನು ಆಯೋಜಿಸದಂತೆ ಎಲ್ಲಾ ನೇಮಕಾತಿ ಪ್ರಾಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದ್ದು, ಸದರಿ ದಿನಾಂಕ: 18.11.2022ರ ಸುತ್ತೋಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.…
ನವದೆಹಲಿ : ಬರವಣಿಗೆಯಲ್ಲಿ ಆಸಕ್ತಿ ಹೊಂದಿರುವ ಯುವಕರಿಗೆ ಕೇಂದ್ರ ಸರ್ಕಾರ ಬಂಪರ್ ಆಫರ್ ನೀಡಿದ್ದು, ಪಿಎಂ ಯುವ 2.0 ಯೋಜನೆ(PM Yuva 2.0 Yojana)ಗೆ ಚಾಲನೆ ನೀಡಲಾಗುತ್ತಿದೆ. ಇದರ ಅಡಿಯಲ್ಲಿ ಯುವ ಬರಹಗಾರರಿಗೆ ವಿವಿಧ ವಿಷಯಗಳ ಕುರಿತು ಬರೆಯಲು ಅವಕಾಶ ಕಲ್ಪಿಸುವುದರ ಜೊತೆಗೆ ಆಕರ್ಷಕ ಸಂಬಳ ನೀಡಲಿದೆ. ಹೌದು, ಇದರಲ್ಲಿ ಆಯ್ಕೆಯಾದ ಯುವ ಬರಹಗಾರರಿಗೆ ಮಾಸಿಕ 50 ಸಾವಿರ ವಿದ್ಯಾರ್ಥಿ ವೇತನ ನೀಡಲಾಗುವುದು. ಅದ್ರಂತೆ, 30 ವರ್ಷದೊಳಗಿನ ಯುವಕರು ಯೋಜನೆಯಲ್ಲಿ ಭಾಗವಹಿಸಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜನವರಿ 15 ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿದೆ. ಉದಯೋನ್ಮುಖ ಬರಹಗಾರರಿಗೆ ಉತ್ತಮ ಅವಕಾಶ.! ಪಿಎಂ ಯುವ ಯೋಜನೆಯ ಮೊದಲ ಆವೃತ್ತಿಗೆ ಅಭೂತಪೂರ್ವ ಪ್ರತಿಕ್ರಿಯೆ ದೊರಕಿದ್ದು, ಭಾರತೀಯ ಭಾಷೆಗಳು ಮತ್ತು ಇಂಗ್ಲಿಷ್ನಲ್ಲಿ ಯುವ ಮತ್ತು ಉದಯೋನ್ಮುಖ ಬರಹಗಾರರು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿದರು. ಸಧ್ಯ ಯುವ 2.0 ಗಾಗಿ ಈಗ ಯುವಕರಿಂದ ಅರ್ಜಿಗಳನ್ನ ಕೋರಲಾಗಿದೆ. ದೇಶದಲ್ಲಿ ಓದುವುದು, ಬರವಣಿಗೆ ಮತ್ತು ಪುಸ್ತಕ ಸಂಸ್ಕೃತಿಯನ್ನ ಉತ್ತೇಜಿಸಲು 30…
ಬೆಂಗಳೂರು: ರಾಜ್ಯ ಸರ್ಕಾರದಿಂದ ಬಿಪಿಎಲ್ ಕಾರ್ಡ್ ದಾರರು ಅಲ್ಲದೇ ಸಹಕಾರಿ ಸಂಘಗಳಲ್ಲಿನ ಸದಸ್ಯರಿಗೂ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ವಿಸ್ತರಣೆ ಮಾಡಿದ್ದು. ಈ ಯೋಜನೆಯ ಅಡಿಯಲ್ಲಿ ಸದಸ್ಯರ ನೋಂದಣಿಗೆ ನೀಡಲಾಗಿದ್ದಂತ ಅವಧಿಯನ್ನು ಜನವರಿ 31ರವರೆಗೆ ವಿಸ್ತರಿಸಿ ಸರ್ಕಾರ ಆದೇಶಿಸಿದೆ. ಈ ಮೂಲಕ ಸಹಕಾರಿ ಸಂಘಗಗಳ ಸದಸ್ಯರಿಗೆ ಗುಡ್ ನ್ಯೂಸ್ ನೀಡಿದೆ. ಈ ಸಂಬಂಧ ಸಹಕಾರ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, 2022-23ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಲು ಹಾಗೂ ಹೊಸ ಸದಸ್ಯರನ್ನು ನೋಂದಾಯಿಸುವ ಅವಧಿಯನ್ನು ದಿನಾಂಕ 01-11-2022 ರಿಂದ ದಿನಾಂಕ 31-12-2022ರವರೆಗೆ ನಿಗದಿಗೊಳಿಸಿ ಆದೇಶಿಸಲಾಗಿತ್ತು ಎಂದಿದ್ದಾರೆ. ಆದ್ರೇ ಅನೇಕ ಸಹಕಾರ ಸಂಘಗಳ ಸದಸ್ಯರು, ಸಹಕಾರಿಗಳು ಸೇರಿದಂತೆ ಹಲವರು ಯೋಜನೆಯ ನೋಂದಣಿ ದಿನಾಂಕವನ್ನು ವಿಸ್ತರಿಸುವಂತೆ ಕೋರಿದ್ದರು. ಈ ಹಿನ್ನಲೆಯಲ್ಲಿ 2022-23ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಲು ಹಾಗೂ ಹೊಸ ಸದಸ್ಯರನ್ನು ನೋಂದಾಯಿಸುವ ಅವಧಿಯನ್ನು ದಿನಾಂಕ 31-01-2023ರವರೆಗೆ ವಿಸ್ತರಿಸಿ ಆದೇಶಿಸಿರೋದಾಗಿ ತಿಳಿಸಿದ್ದಾರೆ. ವರದಿ:…
ಕೆಎನ್ ಎನ್ ನ್ಯೂಸ್ ಡೆಸ್ಕ್ : ಮದುವೆಯಾದ ಹೆಣ್ಮುಕ್ಕಳಿಗೆ ಅತ್ತೆ, ಮಾವ, ಗಂಡ ಚಿಕ್ಕ ಪ್ರಪಂಚವಾಗಿರುತ್ತದೆ. ಆದರೆ ಒಂದೇ ಮನೆಯಲ್ಲಿ ಇದ್ದಾಗ ಸಣ್ಣ ಪುಟ್ಟ ಮನಸ್ತಾಪಗಳು ಬರುವುದು ಸಹಜ. ಅದರಲ್ಲೂ ಮುಖವಾಗಿ ಅತ್ತೆ- ಸೊಸೆ ನಡುವೆ ಕಿರಿಕಿರಿ ಆಯ್ತು ಅಂದರೆ ಜೀವನನೇ ಬೇಸರ ಅನಿಸಿಬಿಡುತ್ತದೆ. ಅತ್ತೆ-ಸೊಸೆ ನಡುವೆ ಸ್ವಲ್ಪ ಬಿರುಕು ಮೂಡಿದರೂ ದೀರ್ಘಕಾಲ ಮನಸ್ಸಿನಲ್ಲಿ ದ್ವೇಷ ಉಳಿದುಹೋಗಿ ಪ್ರತಿದಿನ ಜಗಳವಾಗುತ್ತದೆ. ಮನೆಯ ನೆಮ್ಮದಿ ಹಾಳಾಗುತ್ತದೆ. ಅತ್ತೆಯಾದವರು ತಾಯಿಯಂತೆ ಸೊಸೆಯ ಜೊತೆ ಹೇಗಿರಬೇಕು ಹಾಗೂ ಸೊಸೆಯಾದವರು ಅತ್ತೆ ಜೊತೆ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳೋಣ * ಅತ್ತೆ-ಸೊಸೆ ಜಗಳದಲ್ಲಿ ಪುರುಷರ ತಲೆ ಹಾಳಾಗುತ್ತದೆ. ಹೆಂಡತಿ ಮತ್ತು ತಾಯಿಯಿಂದ ಬರುವ ಒತ್ತಡದಿಂದಾಗಿ ಪುರುಷರು ರೋಸತ್ತು ಹೋಗುತ್ತಾರೆ. * ಒರಟಾದ ಅತ್ತೆಯನ್ನು ಮೃದುವಾಗಿ ಮಾತನಾಡಿಸುವ ಕಲೆ ಸೊಸೆಗೆ ಇರಬೇಕು. ಹಾಗೆಯೇ ಸೊಸೆ ತುಂಬಾ ಜೋರಿದ್ದರೆ ಆಕೆಯನ್ನು ಅತ್ತೆ ಪ್ರೀತಿಯಿಂದ ಸರಿಪಡಿಸಬೇಕು. * ಗಂಡ-ಹೆಂಡತಿ-ಮಕ್ಕಳು ಶಾಪಿಂಗ್ಗೆ ಹೋದಾಗ ಸೊಸೆಯಾದವರು ಅತ್ತೆಗಾಗಿಯೂ ಏನಾದರೂ ತರಬೇಕು. ಅತ್ತೆಯೂ ಕೂಡ ಸೊಸೆ ನೀಡುವ…
ದೆಹಲಿ : ದೆಹಲಿಯ ರೋಹಿಣಿ ಕೋರ್ಟ್ ಸೋಮವಾರ 20 ವರ್ಷದ ಮಹಿಳೆಯ ಸಾವಿನ ಎಲ್ಲಾ ಐವರು ಆರೋಪಿಗಳನ್ನು 3 ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. https://kannadanewsnow.com/kannada/keep-these-things-in-mind-while-place-new-year-calendar-at-home/ ಭಾನುವಾರ ರಾಷ್ಟ್ರ ರಾಜಧಾನಿಯಲ್ಲಿ ಮಾರುತಿ ಬಲೆನೊದಲ್ಲಿ 20 ವರ್ಷದ ಮಹಿಳೆಯನ್ನು ಐವರು ಪುರುಷರು ಹಲವಾರು ಕಿಲೋಮೀಟರ್‌ಗಳವರೆಗೆ ಎಳೆದೊಯ್ದ ಆಘಾತಕಾರಿ ಘಟನೆ ಹೊಸ ವರ್ಷದ ದಿನದಂದು ದೇಶವನ್ನು ದಿಗ್ಭ್ರಮೆಗೊಳಿಸಿತು. ದೆಹಲಿಯ ಸುಲ್ತಾನ್‌ಪುರಿಯಲ್ಲಿ ಈ ಭಯಾನಕ ಘಟನೆ ನಡೆದಿದ್ದು https://kannadanewsnow.com/kannada/keep-these-things-in-mind-while-place-new-year-calendar-at-home/ ಘಟನೆಗೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗವು ನಗರ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. https://kannadanewsnow.com/kannada/keep-these-things-in-mind-while-place-new-year-calendar-at-home/ “ನಮ್ಮ ತನಿಖೆಯ ಪ್ರಕಾರ, ಇದು ಮಾರಣಾಂತಿಕ ಅಪಘಾತವಾಗಿದೆ. ಕಾರಿನಲ್ಲಿದ್ದ ಎಲ್ಲಾ 5 ಜನರನ್ನು ಬಂಧಿಸಲಾಗಿದೆ. ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಮೃತ ಬಾಲಕಿಯ ಮರಣೋತ್ತರ ಪರೀಕ್ಷೆಯನ್ನು ವೈದ್ಯರ ಮಂಡಳಿಯಿಂದ ನಡೆಸಲಾಗುವುದು, ಸೆಕ್ಷನ್ 304 ಆರೋಪಿಗೆ ಸುಲಭವಾಗಿ ಜಾಮೀನು ಸಿಗದಂತೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೊರ ಜಿಲ್ಲೆ ಡಿಸಿಪಿ ಹರೇಂದ್ರ ಕೆ ಸಿಂಗ್ ಹೇಳಿದ್ದಾರೆ. https://kannadanewsnow.com/kannada/keep-these-things-in-mind-while-place-new-year-calendar-at-home/
ನವದೆಹಲಿ: ದಕ್ಷಿಣ ಮಧ್ಯ ರೈಲ್ವೆಯ ಆರ್ಆರ್ಸಿ ಅಪ್ರೆಂಟಿಸ್ ಕಾಯ್ದೆ 1961 ಮತ್ತು ಅಪ್ರೆಂಟಿಸ್ಶಿಪ್ ನಿಯಮಗಳು 1962 ರ ಅಡಿಯಲ್ಲಿ ವಿವಿಧ ಟ್ರೇಡ್ಗಳಲ್ಲಿ ಆಕ್ಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತಿ ಹೊಂದಿರುವ ಆ ಅಭ್ಯರ್ಥಿಗಳು & ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿರುವವರು ಅಧಿಸೂಚನೆಯನ್ನು ಓದಬಹುದು & ಆನ್ ಲೈನ್ ನಲ್ಲಿ ಸಲ್ಲಿಸಬಹುದಾಗಿದೆ. ಎಲ್ಲಾ ಅಭ್ಯರ್ಥಿಗಳಿಗೆ: 100 ರೂ. ಎಸ್ಸಿ / ಎಸ್ಟಿ / ಪಿಡಬ್ಲ್ಯೂಡಿ / ಮಹಿಳಾ ಅಭ್ಯರ್ಥಿಗಳಿಗೆ: ಶೂನ್ಯ ಪಾವತಿ ವಿಧಾನ: ಕ್ರೆಡಿಟ್ ಕಾರ್ಡ್ ಗಳು / ಡೆಬಿಟ್ ಕಾರ್ಡ್ ಗಳು / ನೆಟ್ ಬ್ಯಾಂಕಿಂಗ್ / ಎಸ್ ಬಿಐ ಯುಪಿಐ ಇತ್ಯಾದಿಗಳ ಮೂಲಕ. ಪ್ರಮುಖ ದಿನಾಂಕಗಳು ಹೀಗಿದೆ ಅಧಿಸೂಚನೆ ಪ್ರಕಟಣೆಯ ದಿನಾಂಕ: 30-12-2022 ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಗೆ ಆರಂಭಿಕ ದಿನಾಂಕ: 30-12-2022 17:00 ಗಂಟೆಯಿಂದ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ: 29-01-2023…
ಮಂಗಳೂರು : ಮಂಗಳೂರು ಏರ್ ಪೋರ್ಟ್ ನಲ್ಲಿ ನಾಲ್ಕು ತಿಂಗಳ ಕಾಲ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜನವರಿ 27ರಿಂದ ಮೇ31ರ ನಾಲ್ಕು ತಿಂಗಳ ಅವಧಿಯಲ್ಲಿ ರನ್ ವೇ ದುರಸ್ತಿ ಕಾರ್ಯ ನಡೆಯಲಿದೆ. ಈ ಹಿನ್ನಲೆಯಲ್ಲಿ ಹಗಲು ಹೊತ್ತು ಮಾತ್ರ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಲಿದ್ದು, ರಾತ್ರಿ ವೇಳೆ ಸಂಚಾರ ಯಥಾವತ್ತಾಗಿ ನಡೆಯಲಿದೆ. ಏರ್ಪೋರ್ಟ್ ನಲ್ಲಿ ಬೆಳಗ್ಗೆ 9:30 ರಿಂದ ಸಂಜೆ 6 ಗಂಟೆಯವರೆಗೆ ರನ್ ವೇ ದುರಸ್ತಿ ಕಾಮಗಾರಿ ನಡೆಯಲಿದ್ದು, ಈ ಹಿನ್ನೆಲೆ ಹಗಲು ಹೊತ್ತು ವಿಮಾನ ಹಾರಾಟ ನಿಷೇಧಿಸಲಾಗಿದೆ. ಭಾನುವಾರ ಮತ್ತು ರಾಷ್ಟ್ರೀಯ ರಜಾ ದಿನಗಳಲ್ಲಿ ಕಾಮಗಾರಿ ನಡೆಯುವುದಿಲ್ಲ ಹಾಗಾಗಿ ಅಂತಹ ಸಂದರ್ಭದಲ್ಲಿ ಹಗಲು ಹೊತ್ತು ವಿಮಾನ ಹಾರಾಟ ನಡೆಸಬಹುದಾಗಿದೆ ಎಂದು ಮೂಲಗಳು ಮಾಹಿತಿ ನೀಡಿದೆ. https://kannadanewsnow.com/kannada/there-wasnt-a-single-piece-of-cloth-on-her-body-delhi-victims-mother/ https://kannadanewsnow.com/kannada/60-lakhs-announced-to-bigg-boss-winner-rupesh-shetty-but-how-much-did-he-get/