Subscribe to Updates
Get the latest creative news from FooBar about art, design and business.
Author: KNN IT TEAM
ಕೆಎನ್ಎನ್ಡಿಜಿಟಲ್ ಡೆಸ್ಕ್ : ಭೂಮಿಯ ಮೇಲೆ ಯಾವುದು ಹುಟ್ಟುತ್ತದೆಯೋ ಅದು ಬೆಳೆಯುತ್ತದೆ. ಯಾವುದು ಬೆಳೆಯುತ್ತದೆಯೋ ಅದು ಸಾಯುತ್ತದೆ ಅನ್ನೋ ಮಾತಿದೆ. ಇದಕ್ಕೆ ಮನುಷ್ಯನು ಹೊರತಾಗಿಲ್ಲ. ಅಂದ್ಹಾಗೆ, ಸಾವಿನ ನಂತ್ರ ಏನಾಗುತ್ತೆ.? ಅನ್ನೋ ಬಗ್ಗೆ ವಿಜ್ಞಾನಿಗಳು ಶತಮಾನಗಳಿಂದ ಸಂಶೋಧನೆ ನಡೆಸುತ್ತಿದ್ದಾರೆ. ಸಾವಿನ ಪ್ರಕ್ರಿಯೆಯಲ್ಲಿ ಏನಾಗುತ್ತದೆ.? ಅನ್ನೋದನ್ನ ಇತ್ತೀಚಿನ ಸಂಶೋಧನೆಯಲ್ಲಿ ಆಸಕ್ತಿದಾಯಕ ವಿಷಯಗಳು ಬಹಿರಂಗವಾಗಿವೆ. ಒಬ್ಬ ವ್ಯಕ್ತಿಯು ಸತ್ತಾಗ ಮೆದುಳು ಏನಾಗುತ್ತದೆ ಎಂದು ನೀವು ಎಂದಾದರೂ ಊಹಿಸಿದ್ದೀರಾ..? ಅಸಲಿಗೆ ವ್ಯಕ್ತಿ ಸಾಯುವ ಅಂತಿಮ ಕ್ಷಣದಲ್ಲಿ ಆತನ ಮೆದುಳು ಆತನ ಇಡೀ ಜೀವನದ ಕ್ಷಣಗಳನ್ನ ಅವನ ಕಣ್ಣುಗಳ ಮುಂದೆ ತರುತ್ತದೆ. ಇನ್ನು ಸಾವು ಮತ್ತು ಸಾವಿನ ನಂತರದ ಅನುಭವಗಳ ತನಿಖೆಯ ಸಮಯದಲ್ಲಿ ಮೆದುಳಿನಲ್ಲಿ ಏನಾಗುತ್ತದೆ ಎಂಬುದು ಶತಮಾನಗಳಿಂದ ನರವಿಜ್ಞಾನಿಗಳನ್ನ ಗೊಂದಲಕ್ಕೀಡುಮಾಡುವ ಪ್ರಶ್ನೆಯಾಗಿದೆ, ಫ್ರಾಂಟಿಯರ್ಸ್ ಇನ್ ಏಜಿಂಗ್ ನ್ಯೂರೋಸೈನ್ಸ್ ಜರ್ನಲ್ ಇತ್ತೀಚೆಗೆ ಪ್ರಮುಖ ಅಧ್ಯಯನದ ವಿಷಯಗಳನ್ನ ಪ್ರಕಟಿಸಿದೆ. ಮರಣದ ಮೊದಲು, ನಮ್ಮ ಮೆದುಳು ಸಕ್ರಿಯವಾಗಿರುತ್ತದೆ ಮತ್ತು ಸಾವಿನ ಸಮಯದಲ್ಲಿ ಸಮನ್ವಯದಿಂದ ಕೆಲಸ ಮಾಡುತ್ತದೆ ಎಂದು ಹೇಳಲಾಗುತ್ತದೆ. ಈ…
ಕೆಎನ್ ಎನ್ ನ್ಯೂಸ್ ಡೆಸ್ಕ್ : ದೇಹಕ್ಕೆ ನೀರಿನ ಪ್ರಮಾಣ ಹೆಚ್ಚು ಇರಬೇಕು. ಹಾಗಾಗಿ ವೈದ್ಯರು ನೀರು ಜಾಸ್ತಿ ಕುಡಿಯಿರಿ ಎಂದು ಸಲಹೆ ನೀಡುತ್ತಾರೆ. ಸಾಕಷ್ಟು ನೀರು ಕುಡಿಯುವುದರಿಂದ ದೇಹವು ಅಗತ್ಯ ಕಾರ್ಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಪ್ರತಿದಿನ 8 ಗ್ಲಾಸ್ ನೀರನ್ನು ಕುಡಿಯಲು ಹೇಳುವುದನ್ನ ಕೇಳಿರಬೇಕು. ಕೆಲವರು ಚಳಿಗಾಲದಲ್ಲಿಯೂ ತಣ್ಣೀರು ಕುಡಿಯುತ್ತಾರೆ. ಆದರೆ ಇದನ್ನು ಮಾಡಬಾರದು. ಏಕೆಂದರೆ ಚಳಿಗಾಲದಲ್ಲಿ ತಣ್ಣೀರು ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಹಾನಿ ಉಂಟಾಗುತ್ತದೆ. ಚಳಿಗಾಲದಲ್ಲಿ ತಣ್ಣೀರು ಕುಡಿಯುವುದರಿಂದ ಪರಿಣಾಮಗಳೇನು ಗೊತ್ತೆ ಇಲ್ಲಿದೆ ತಿಳಿದುಕೊಳ್ಳಿ. ಗಂಟಲು ಕೆರತ ಶೀತ ಮತ್ತು ಗಂಟಲು ನೋವಿನ ಸಮಸ್ಯೆಗಳು ಹೆಚ್ಚಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ನೀವು ತಣ್ಣೀರು ಕುಡಿದರೆ ಈ ಸಮಸ್ಯೆಗಳು ಉಲ್ಬಣಗೊಳ್ಳಬಹುದು.ಇಷ್ಟೇ ಅಲ್ಲ, ತಣ್ಣೀರು ಕುಡಿಯುವುದರಿಂದ ನಿಮ್ಮ ಉಸಿರಾಟದ ವ್ಯವಸ್ಥೆಯಲ್ಲಿ ಲೋಳೆಯು ಉಂಟಾಗುತ್ತದೆ. ಇದರಿಂದಾಗಿ ಅನೇಕ ಉಸಿರಾಟದ ಸೋಂಕುಗಳು ಸಂಭವಿಸಬಹುದು. https://kannadanewsnow.com/kannada/these-people-should-not-consume-garlic-as-it-can-affect-health/ ಕೊಬ್ಬು ಕರಗಲು ಕಷ್ಟವಾಗುತ್ತದೆ ಚಳಿಗಾಲದಲ್ಲಿ ಒಡೆಯುವುದು ಕಷ್ಟ. ನೀವು ತಣ್ಣೀರನ್ನು ಸೇವಿಸಿದರೆ, ದೇಹವು ಅದನ್ನು…
ಮೈಸೂರು : ಜೆಡಿಎಸ್ ರಾಜ್ಯದ ಆರೂವರೆ ಕೋಟಿ ಜನರ ಎಟಿಎಂ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ. ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಿಎ ಕುಮಾರಸ್ವಾಮಿ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿದರು. ದೇವೇಗೌಡರ ಕುಟುಂಬವು ನಾಡಿನ ಸಂಪತ್ತನ್ನು ಕೂಟಿ ಮಾಡಿದ ಒಂದೇ ಒಂದು ನಿದರ್ಶನವಿದ್ದರೆ ತೋರಿಸಲಿ, ಜೆಡಿಎಸ್ ರಾಜ್ಯದ ಆರೂವರೆ ಕೋಟಿ ಜನರ ಎಟಿಎಂ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ. ಭ್ರಷ್ಟಾಚಾರದಲ್ಲೇ ಮುಳುಗಿ ಹೋಗಿರುವ ಬಿಜೆಪಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ಏನು ನೈತಿಕತೆ ಇದೆ. ಬಿಜೆಪಿಯಲ್ಲಿ ಯಡಿಯೂರಪ್ಪರನ್ನೇ ಮೂಲೆ ಗುಂಪಾಗಿ ಮಾಡಲಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಭ್ರಷ್ಟಾಚಾರದಿಂದ ಕೂಡಿದ ಪಾರ್ಟಿ ಹಾಗೂ ಕುಟುಂಬ ರಾಜಕಾರಣ ಮಾಡುವ ಪಾರ್ಟಿ ಎಂದು ಬಿಜೆಪಿ ಚಾಣಕ್ಯ ಅಮಿತ್ ಶಾ ಮಂಡ್ಯದಲ್ಲಿ ಭಾಷಣ ಮಾಡಿದ್ದರು. ಮಂಡ್ಯದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಅಮಿತ್ ಶಾ ಭಾಷಣ ಮಾಡಿದ್ದು, ಜೆಡಿಎಸ್ ಯಾವಾಗಲೂ ಹೇಗೆ ಒಂದು ಕುಟುಂಬವನ್ನು ಅಭಿವೃದ್ದಿ ಮಾಡಬೇಕು ಎಂದು…
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಶನಮಾನಗಳಿಂದ ಬೆಳ್ಳುಳ್ಳಿ ಭಾರತೀಯ ಆಹಾರದ ಪ್ರಮುಖ ಭಾಗವಾಗಿದೆ. ಸಾಕಷ್ಟು ಆಹಾರಗಳಲ್ಲಿ ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ದೇಹಕ್ಕೆ ಉಷ್ಣತೆ ಸಿಗುತ್ತದೆ. ಬೆಳ್ಳುಳ್ಳಿ ರೋಗನಿರೋಧಕ ಶಕ್ತಿ ಮತ್ತು ಜೀರ್ಣಕ್ರಿಯೆಗೆ ಪ್ರಯೋಜನಕಾರಿಯಾಗಿದೆ. ಆದರೆ ಕೆಲವು ವರ್ಗದ ಜನರು ಬೆಳ್ಳುಳ್ಳಿ ಸೇವನೆಯಿಂದ ದೂರವಿರಬೇಕು. ಬೆಳ್ಳುಳ್ಳಿ ತಿನ್ನುವುದರಿಂದ ಏನು ಪ್ರಯೋಜನ? ಬೆಳ್ಳುಳ್ಳಿ ಅನೇಕ ಜನರಿಗೆ ಸರಿಹೊಂದುವುದಿಲ್ಲ. ಆದರೆ ಇದರ ಹೊರತಾಗಿಯೂ ಇದು ತುಂಬಾ ಪ್ರಯೋಜನಕಾರಿ ಔಷಧವಾಗಿದೆ. ಇದರ ಸೇವನೆಯು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಹೃದಯದ ಆರೋಗ್ಯದಿಂದ ಹಿಡಿದು ರೋಗನಿರೋಧಕ ಶಕ್ತಿಯವರೆಗೆ ಬೆಳ್ಳುಳ್ಳಿ ಎಲ್ಲಾ ಪ್ರಯೋಜನವನ್ನು ನೀಡುತ್ತದೆ. -ಸೋಂಕಿನ ವಿರುದ್ಧ ಹೋರಾಡುತ್ತದೆ. -ಅಧಿಕ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. -ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. -ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಚಳಿಗಾಲದಲ್ಲಿ ಬೆಳ್ಳುಳ್ಳಿಯನ್ನು ಯಾರು ತಿನ್ನಬಾರದು? -ಗರ್ಭಾವಸ್ಥೆಯಲ್ಲಿ ಬೆಳ್ಳುಳ್ಳಿಯನ್ನು ಅತಿಯಾಗಿ ತಿನ್ನಬಾರದು. ಇದರ ಪರಿಣಾಮವು ಬಿಸಿಯಾಗಿರುತ್ತದೆ. ಇದು ಬಹಳಷ್ಟು ಹಾನಿಯನ್ನುಂಟುಮಾಡುತ್ತದೆ. -ಲಿವರ್…
ಬೆಂಗಳೂರು: ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿರವರನ್ನು ಶೀಘ್ರವೇ ಬಂಧಿಸಿ ತನಿಖೆ ನಡೆಸಬೇಕು ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು. ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, “ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ವಿರುದ್ಧ ಗುತ್ತಿಗೆದಾರ ಸಂತೋಷ್ ಪಾಟೀಲ್ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಪ್ರಕರಣದಲ್ಲಿ ಈಶ್ವರಪ್ಪನವರ ವಿಚಾರಣೆಯನ್ನೂ ನಡೆಸದೇ ಪೊಲೀಸರು ಅವರಿಗೆ ಕ್ಲೀನ್‌ಚಿಟ್ ನೀಡಿದರು. ಈಗ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಪೊಲೀಸರು ಅರವಿಂದ ಲಿಂಬಾವಳಿಯವರನ್ನು ಬಂಧಿಸಿ ವಿಚಾರಣೆ ನಡೆಸದಿದ್ದರೆ ಪ್ರದೀಪ್ ಆತ್ಮಹತ್ಯೆ ಪ್ರಕರಣ ಕೂಡ ಅದೇ ರೀತಿ ಮುಚ್ಚಿಹೋಗುವ ಅಪಾಯವಿದೆ” ಎಂದು ಹೇಳಿದರು. “ಒಂದುವೇಳೆ ಯಾವುದಾದರೂ ಡೆತ್‌ನೋಟ್‌ನಲ್ಲಿ ಜನಸಾಮಾನ್ಯರ ಹೆಸರಿದ್ದರೆ, ಪೊಲೀಸರು ಶೀಘ್ರವೇ ಬಂಧಿಸಿ ವಿಚಾರಣೆ ನಡೆಸುತ್ತಾರೆ. ಆದರೆ ಬಿಜೆಪಿಯ ಸಚಿವರು ಅಥವಾ ಶಾಸಕರ ಹೆಸರಿದ್ದರೆ ಖುಲಾಸೆ ಮಾಡುತ್ತಾರೆ. ರಾಜ್ಯದಲ್ಲಿ ಜನಸಾಮಾನ್ಯರಿಗೆ ಒಂದು ಕಾನೂನು, ಪ್ರಭಾವಿಗಳಿಗೆ ಮತ್ತೊಂದು…
ಬೆಂಗಳೂರು: ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿಯನ್ನು 2024ರೊಳಗೆ ಪೂರ್ಣಗೊಳಿಸುವಂತ ಗುರಿಯನ್ನು ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಫ್ಲೈಓವರ್ ಗಳನ್ನು ನಿರ್ಮಿಸಲಾಗುತ್ತಿದೆ. ಬೃಹತ್ ಬೆಂಗಳೂರಿಗೆ ಅಭಿವೃದ್ಧಿ ಯೋಜನೆ ಮಾಡಲಾಗುತ್ತಿದೆ. ಮೆಟ್ರೋ 2 ನೇ ಹಂತವನ್ನು 2024 ರೊಳಗೆ ಮುಗಿಸಲು ತಿಳಿಸಲಾಗಿದೆ. ಮೆಟ್ರೋ 3ನೇ ಹಂತಕ್ಕೆ 26ಸಾವಿರ ಕೋಟಿ ರೂ. ಯೋಜನೆ ಕೇಂದ್ರದ ಅನುಮೋದನೆ ದೊರೆತ ತಕ್ಷಣ, ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು. ಸಬ್ ಅರ್ಬನ್ ರೈಲು ಯೋಜನೆ 15 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಪ್ರಧಾನಿಯವರು ಯೋಜನೆಗೆ ಅಡಿಗಲ್ಲು ಹಾಕಿದ್ದಾರೆ. ಸ್ಯಾಟಿಲೈಟ್ ಟೌನ್ ರಿಂಗ್ ರೋಡ್, ಬೆಂಗಳೂರು ಹೊರ ವಲಯದ ರಸ್ತೆಗಳ ಕೆಲಸ ಪ್ರಾರಂಭವಾಗಿದೆ. ಫೆರಿಫೆರಲ್ ರಿಂಗ್ ರಸ್ತೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕೆಲಸ ಕೈಗೊಳ್ಳಲಾಗುವುದು. ಕಾವೇರಿ 5 ನೇ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತಿದೆ. ಬಹಳ ವರ್ಷದಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಯೋಜನೆಗಳನ್ನು…
ಬೆಂಗಳೂರು : ತಿಮ್ಮಯ್ಯ ಚಿಕ್ಕಮಗಳೂರು ಬಿಜೆಪಿ ಟಿಕೆಟ್ ಕೇಳಿದ್ದರಲ್ಲಿ ತಪ್ಪೇನಿದೆ ಎಂದು ಶಾಸಕ ಸಿ.ಟಿ.ರವಿ ಪ್ರಶ್ನಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಸಿಟಿ ರವಿ ತಿಮ್ಮಯ್ಯ ಚಿಕ್ಕಮಗಳೂರು ಬಿಜೆಪಿ ಟಿಕೆಟ್ ಕೇಳಿದ್ದರಲ್ಲಿ ತಪ್ಪೇನಿದೆ, ಅವರು ನನ್ನ ಜೊತೆ ಮಾತನಾಡಿಯೇ ಟಿಕೆಟ್ ಕೇಳಿದ್ದಾರೆ ಎಂದು ಸಿ,ಟಿ ರವಿ ಹೇಳಿದರು. ಯಾರೇ ಅಭ್ಯರ್ಥಿಯಾದರೂ ನನಗೆ ಸಂತೋಷವಿದೆ, ನಾನು ಸಂಸದ, ಶಾಸಕನಾಗಬೇಕೇ ಎಂದು ಪಕ್ಷ ತೀರ್ಮಾನಿಸುತ್ತೆ. ಮಾತನಾಡಿದ ಸಿಟಿ ರವಿ ತಿಮ್ಮಯ್ಯ ಚಿಕ್ಕಮಗಳೂರು ಬಿಜೆಪಿ ಟಿಕೆಟ್ ಕೇಳಿದ್ದರಲ್ಲಿ ತಪ್ಪೇನಿದೆ ಎಂದು ಹೇಳಿದರು. ಸಿ.ಟಿ ರವಿ ಕುಡಿದು, ಗಾಂಜಾ ಸೇವಿಸಿ ಮಾತಾಡುತ್ತಾರೆ ಎಂಬ ಬಿ.ಕೆ. ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ತಿರುಗೇಟು ನೀಡಿದ ಸಿ.ಟಿ ರವಿ ವೈಚಾರಿಕವಾಗಿ ನನ್ನನ್ನು ಎದುರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರ ನಾಯಕರನ್ನು ನೋಡಿ ಈ ಮಾತು ಹೇಳುತ್ತಿದ್ದಾರೆ. ನನ್ನ ವಿರುದ್ಧ ಮಾತನಾಡಲು ಬಂದರೆ ಅವರ ಎಲ್ಲ ವಿಚಾರಗಳನ್ನು ಬಿಚ್ಚಿಡುತ್ತೇನೆ ಎಂದು ಹೇಳಿದ್ದಾರೆ. https://kannadanewsnow.com/kannada/state-bank-of-india-customers-will-get-9-lakh-rupees-with-mudra-loan-scheme/ https://kannadanewsnow.com/kannada/major-surgery-from-state-government-to-administrative-machinery-transfer-of-four-ips-officers-ips-officer-transfer/
ನವದೆಹಲಿ : ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನಾಗರಿಕರ ಸೇವೆಗಳ ಬಳಕೆಯನ್ನ ಸುಲಭಗೊಳಿಸಲು ಹೊಚ್ಚ ಹೊಸ AI/ML ಚಾಟ್ಬಾಟ್ ಆಧಾರ್ ಮಿತ್ರವನ್ನ ಪರಿಚಯಿಸಿದೆ. ಚಾಟ್ಬಾಟ್ಗಳು ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಲಭ್ಯವಿದೆ. ಆಧಾರ್ ಮಿತ್ರ ಚಾಟ್ಬಾಟ್ ಸಹಾಯದಿಂದ, ಆಧಾರ್ ಕಾರ್ಡ್ ಹೊಂದಿರುವವರು ಆಧಾರ್ ಕಾರ್ಡ್ಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಸುಲಭವಾಗಿ ಪರಿಹರಿಸಿಕೊಳ್ಳಬೋದು. ಆಧಾರ್ ಮಿತ್ರದಲ್ಲಿ, ನೀವು ದೂರನ್ನ ನೋಂದಾಯಿಸುವ ಆಯ್ಕೆಯನ್ನ ಸಹ ಪಡೆಯುತ್ತೀರಿ, ಅದರ ಸಹಾಯದಿಂದ ನೀವು ಆಧಾರ್ ಕಾರ್ಡ್ಗೆ ಸಂಬಂಧಿಸಿದ ಎಲ್ಲಾ ರೀತಿಯ ದೂರುಗಳಿಗೆ ಪರಿಹಾರಗಳನ್ನ ಪಡೆಯಲು ಸಾಧ್ಯವಾಗುತ್ತದೆ. https://twitter.com/UIDAI/status/1609753975502290945?s=20&t=du79cSO8Jb2PVHp4e1Iaeg https://kannadanewsnow.com/kannada/good-news-for-members-of-co-operative-societies-extension-of-registration-period-for-yashaswini-yojana-till-january-31/ https://kannadanewsnow.com/kannada/should-mother-in-law-daughter-in-law-bond-be-good-so-first-of-all-know-this/ https://kannadanewsnow.com/kannada/state-bank-of-india-customers-will-get-9-lakh-rupees-with-mudra-loan-scheme/
ಕೋಲಾರ: ಕೋಲಾರ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೇ ವಿಚಾರವಾಗಿ, ಮುನಿರತ್ನ ಪ್ರತಿಕ್ರಿಯೆ ನೀಡಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಎಂದು ಅವರು ಘೋಷಣೆ ಮಾಡಲಿ ಮಾಡದೆ ಇರಲಿ, ಅವರು ಬರಲಿ ಬರದೆ ಇರಲಿ, ಅದು ನಮಗೆ ಬೇಡವಾದ ವಿಷಯಚವಾಗಿದೆ. ಆದರೆ ನಾವು ಅಂತೂ ಕೋಲಾರವನ್ನು ಗೆದ್ದೆ ಗೆಲ್ಲುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ಈಗ ರಾಜಕೀಯ ಎನ್ನವುದು ಯಾರೂ ಊಹೆ ಮಾಡಲಾಗುವುದಿಲ್ಲ. ನಮ್ಮಲ್ಲಿ ಈಗಾಗಲೇ ಪ್ರಬಲ ಅಭ್ಯರ್ಥಿ ಇದ್ದಾರೆ, ಯಾರೋ ಒಬ್ಬರು ಗಣ್ಯ ವ್ಯಕ್ತಿ, ಮುಖ್ಯಮಂತ್ರಿಗಳಾಗಿದ್ದವರು ಬಂದು ಗೆಲ್ತಾರೆ ಎನ್ನುವುದು ಭ್ರಮೆ ಎಂದು ಟಾಂಗ್ ನೀಡಿದ್ದಾರೆ. https://kannadanewsnow.com/kannada/should-mother-in-law-daughter-in-law-bond-be-good-so-first-of-all-know-this/ ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿ, ಅದು ಮುಖ್ಯಮಂತ್ರಿಗಳಿಗಿರುವ ಪರಮಾಧಿಕಾರ ಅವರು ಯಾವ ನಿರ್ಧಾರವನ್ನಾದರೂ ತೆಗದುಕೊಳ್ಳಬಹುದು ಜಾರಕಿಹೊಳಿ ಅವರು ಒಳ್ಳೆಯ ವ್ಯಕ್ತಿ, ಶಾಸಕ, ಜಾರಕಿಹೊಳಿ ಹಾಗೂ ಈಶ್ವರಪ್ಪ ಅವರನ್ನ ಸಚಿವ ಸಂಪುಟಕ್ಕೆ ತೆಗೆದುಕೊಳ್ಳಲು ಯಾವುದೇ ವಿರೋಧವಿಲ್ಲ ಕೆಲವು ಘಟನೆಗಳು, ಕುತಂತ್ರದ ಸಂಚು ಹಾಗಾಗಿ ಅವರು…
ನವದೆಹಲಿ : ದಟ್ಟ ಮಂಜು ಮಧ್ಯೆ ಕಾರು ಚಲಾಯಿಸಿ ನಟ ಜೆರ್ಮಿ ರನ್ನರ್‌ಗೆ ಅಪಘಾತ ಸಂಭವಿಸಿದೆ. ಅವರ ಸ್ಥಿತಿ ಚಿಂತಾಜನಕವಾಗಿದ್ದು, ತಕ್ಷಣವೇ ಏರ್ ಲಿಫ್ಟ್ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ https://twitter.com/ani_digital/status/1609809859775721474?ref_src=twsrc%5Etfw%7Ctwcamp%5Etweetembed%7Ctwterm%5E1609809859775721474%7Ctwgr%5E7f760caa96e65b2e8b0c0e8cea7b6fc273a38cbd%7Ctwcon%5Es1_c10&ref_url=https%3A%2F%2Fwww.opindia.com%2F2023%2F01%2Fhawkeye-actor-jeremy-renner-accident-while-plowing-snow-spokesperson-calls-his-condition-critical-but-stable%2F ಅವೇಂಜರ್ಸ್ ಸೀರಿಸ್ ಮೂಲಕ ಜನರ ಮನ ಗೆದ್ದ ನಟ ಜೆರ್ಮಿ ರನ್ನರ್ ನೆವಾಡಾದಲ್ಲಿ ವಾಸಿಸುತ್ತಿದ್ದರು. ಈ ಪ್ರದೇಶದ ಬಹುತೇಕ ಹಿಮಾಗಳಿಂದ ಅವೃತಗೊಂಡಿದೆ. ಈ ಸಂರ್ಭದಲ್ಲಿ ಕಾರು ಚಾಲಾಯಿಸ ಅಪಘಾತಕ್ಕೀಡಾಗಿದ್ದು, ತೀವ್ರ ಗಾಯಗೊಂಡಿದ್ದ ಅವರನ್ನು ರಸ್ತೆ ಸಂಚಾರಕ್ಕೆ ಅನುಕೂಲವಾಗದ ಕಾರಣ ಏರ್ ಲಿಫ್ಟ್ ಮಾಡಲಾಗಿದೆ. ಹಲವು ಈ ಪ್ರದೇಶಗಳಲ್ಲಿ ದಿನಗಳಿಂದ ಹಿಮಪಾತವಾಗುತ್ತಿದೆ. https://kannadanewsnow.com/kannada/state-bank-of-india-customers-will-get-9-lakh-rupees-with-mudra-loan-scheme/ ವಿದ್ಯುತ್ ಕೂಡ ಇಲ್ಲದ ಕಾರಣ ಸಂಚಾರಕ್ಕೆ ಸಾಕಷ್ಟು ಅಡೆತಡೆಗಳು ಉಂಟಾಗಿದೆ. ಈ ಸಂದರ್ಭದಲ್ಲಿ ಜೆರ್ಮಿ ಕಾರು ಚಲಾಯಿಸಿದ್ದಾರೆ. ದಟ್ಟ ಮಂಜು ಇದ್ದ ಕಾರಣಕ್ಕಾಗಿ ರಸ್ತೆ ಕಾಣದೇ ಅಪಘಾತ ಮಾಡಿಕೊಂಡಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ. https://kannadanewsnow.com/kannada/state-bank-of-india-customers-will-get-9-lakh-rupees-with-mudra-loan-scheme/