Author: KNN IT TEAM

ಕೊಪ್ಪಳ: ಕೊಪ್ಪಳದಲ್ಲಿ ಬೂತ್ ವಿಜಯ ಅಭಿಯಾನ ಕಾರ್ಯಕ್ರಮಕ್ಕೆ ಸಚಿವ ಆನಂದ್ ಸಿಂಗ್ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು,ಇದಿಗ ಚುನಾವಣೆ ಯಾವ ರೀತಿ ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರನ್ನು ಗುರುತಿಸಬೇಕು. ಮತದಾರರನ್ನು ಗುರುತಿಸಬೇಕು ಎಂದು ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, 150 ಸ್ಥಾನ ಗೆಲ್ಲಲು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಕರೆ ನೀಡಿದ್ದಾರೆ ಎಂದರು. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಬಂದ ನಂತರ ಬಿಜೆಪಿ ಸಂಘಟನೆ ಬಲವಾಗಿದೆ. ಕಟ್ಟ ಕಡೆಯ ಕಾರ್ಯಕರ್ತನ ಧ್ವನಿಯೂ ಗೆದ್ದು ಬರುವ ವ್ಯಕ್ತಿಗೆ ಗೊತ್ತಾಗಬೇಕು. https://kannadanewsnow.com/kannada/farmer-seriously-injured-in-wild-elephant-attack-in-chamarajanagar-increased-anxiety-among-villagers/ ಬೂತ್ ವಿಜಯ ಅಭಿಯಾನ ದೇಶದ ಹಾಗೂ ರಾಜ್ಯದಲ್ಲಿ ನಡೆದಿದೆ.ಕಾರ್ಯಕರ್ತನ ಕೂಗು ಮೇಲ್ಮಟ್ಟದಲ್ಲಿ ಮುಟ್ಟುವಂತ ಗಟ್ಟಿತನದಲ್ಲಿ ಪಕ್ಷ ಮಾಡಿದೆ. ಬೇರೆ ಪಕ್ಷದಲ್ಲಿ ಈ ರೀತಿಯ ಬೂತ್ ವಿಜಯ ಎನ್ನುವ ಮಾತಿಲ್ಲ. ರಾಜ್ಯದಲ್ಲಿ ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. https://kannadanewsnow.com/kannada/farmer-seriously-injured-in-wild-elephant-attack-in-chamarajanagar-increased-anxiety-among-villagers/

Read More

ವೈರಲ್‌ ನ್ಯೂಸ್‌ :   ಬೈಕ್‌ ಸವಾರಿ ಅಂದ್ರೆನೇ ಕೆಲ ಯುವಕರಿಗೆ ಎಲ್ಲಿಲ್ಲದ ಕ್ರೇಜ್‌.. ಒಂದಷ್ಟು ಜನರು ಯಾರಾದ್ರೂ ತಾವು ಬೈಕ್‌ ಚಾಲಾಯಿಸೋದನ್ನು ನೋಡಬೇಕೆಂದು ಕೊಂಡೆ  ಅಪಾಯಕಾರಿ ಸಾಹಸಗಳನ್ನು ಮಾಡೋದಕ್ಕೆ ಮುಂದಾಗುತ್ತಾರೆ. ಆಗ ಅಪಘಾತಕ್ಕೆ ಒಳಗಾಗುವ ವಿಡಿಯೋ ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಲೇ ಇರುತ್ತದೆ. ಅಂತಹದ್ದೇ ವಿಡಿಯೋ ಇದೀಗ ವೈರಲ್‌ ಆಗಿದೆ.ಇಲ್ಲಿದೆ ನೋಡಿ View this post on Instagram A post shared by Arslaan (@arslaan_99) ಯುವಕನೊಬ್ಬ ಸ್ಕೂಟಿಯಲ್ಲಿ ಸವಾರಿ ಮಾಡುವಾಗ ಸ್ಟಂಟ್ ಮಾಡಲು ಪ್ರಯತ್ನಿಸಿದನು. ಅವರು ಸ್ಟಂಟ್ ಮಾಡಲು ಸ್ವಲ್ಪ ದೂರ ಹೋದ ತಕ್ಷಣ, ಸ್ಕೂಟಿ ನಿಯಂತ್ರಣವನ್ನು ಕಳೆದುಕೊಂಡು ಪಲ್ಟಿಯಾಗಿ ನೆಲ್ಲಕ್ಕೆ ಬಿದ್ದಿದ್ದಾನೆ. ಇದರ ವೀಡಿಯೊ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಯುವಕನೊಬ್ಬ ವೇಗವಾಗಿ ಸ್ಕೂಟಿ ಓಡಿಸುತ್ತಿರುವುದನ್ನು ಕಾಣಬಹುದು. ಘಟನೆಯಲ್ಲಿ ಯುವಕ ಗಾಯಗೊಂಡಿದ್ದಾನೆ ಎಂದು ವರದಿಯಾಗಿದೆ. ವೈರಲ್ ಆಗುತ್ತಿರುವ ವೀಡಿಯೊವನ್ನು ನೋಡಿದ ನಂತರ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

Read More

ಬೆಂಗಳೂರು : ಸಕಾಲ ಸೇವೆ ಅನುಷ್ಠಾನದಲ್ಲಿ ಬೆಂಗಳೂರು ಗ್ರಾಮಾಂತರ ಪ್ರಥಮ ಸ್ಥಾನ ಪಡೆದಿದೆ ಎಂದು ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಸುಧಾಕರ್ ಸಕಾಲ ಸೇವೆ ಅನುಷ್ಠಾನದಲ್ಲಿ ಬೆಂಗಳೂರು ಗ್ರಾಮಾಂತರ ಪ್ರಥಮ ಸ್ಥಾನ ಪಡೆದಿದೆ. ಚಿಕ್ಕಬಳ್ಳಾಪುರ 2ನೇ ಸ್ಥಾನ ಪಡೆದಿದೆ ಎಂದು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ನಿಗದಿತ ಕಾಲಮಿತಿಯೊಳಗೆ ಅರ್ಜಿಗಳು ವಿಲೇವಾರಿಯಾಗುವುದರಿಂದ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಅಲೆಯುವುದು ತಪ್ಪುತ್ತದೆ. ಹಾಗೂ ಆಡಳಿತವು ಪಾರದರ್ಶಕವಾಗಿ ನಡೆಯಲು ಈ ಯೋಜನೆ ಸಹಕಾರಿಯಾಗಿದೆ. https://twitter.com/mla_sudhakar/status/1609868994848370689 https://kannadanewsnow.com/kannada/farmer-seriously-injured-in-wild-elephant-attack-in-chamarajanagar-increased-anxiety-among-villagers/ https://kannadanewsnow.com/kannada/bjp-is-a-party-that-has-left-all-three-congress-lashed-out-in-a-tweet/

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಚಳಿಗಾಲದಲ್ಲಿ ತ್ವಚೆಯ ಆರೈಕೆ ತುಂಬಾ ಮುಖ್ಯವಾಗಿರುತ್ತದೆ. ಚಳಿಗಾಳಿ, ಬಿಸಿಲಿನಿಂದ ಒಣಗಿದ ಮುಖದ ಕಾಂತಿಯನ್ನು ಹೆಚ್ಚಿಸಲು ಕೆಲವು ವಸ್ತುಗಳನ್ನು ಹಚ್ಚುವ ಮೂಲಕ ಹೊಳಪನ್ನು ಪಡೆಯಬಹುದು. ಚಳಿಗಾಲದಲ್ಲಿ ಹೆಚ್ಚಿನ ಜನರು ತಮ್ಮ ಒಣ ತ್ವಚೆಯಿಂದ ತೊಂದರೆಗೊಳಗಾಗುತ್ತಾರೆ. ಏಕೆಂದರೆ ಚಳಿಗಾಲದಲ್ಲಿ ತಾಪಮಾನವು ತುಂಬಾ ಕಡಿಮೆಯಿರುತ್ತದೆ.ಇದರಿಂದಾಗಿ ಚರ್ಮವು ಶುಷ್ಕವಾಗಿರುತ್ತದೆ. ಮುಖಕ್ಕೆ ಎಣ್ಣೆ ಹಚ್ಚುವುದು ಚಳಿಗಾಲದಲ್ಲಿ ನಮ್ಮ ಚರ್ಮ ಒಣಗಿ ನಿರ್ಜೀವವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರಾತ್ರಿ ಮಲಗುವ ಮುನ್ನ ತೆಂಗಿನೆಣ್ಣೆ, ಸಾಸಿವೆ ಮತ್ತು ಬಾದಾಮಿ ಎಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡಬಹುದು. ಬೆಳಗ್ಗೆ ಎದ್ದು ಮುಖವನ್ನು ಸ್ವಚ್ಛಗೊಳಿಬಹುದು. ಮಾಯಿಶ್ಚರೈಸರ್ ಬಳಕೆ ಚಳಿಗಾಲದಲ್ಲಿ, ಚರ್ಮವು ತುಂಬಾ ಒಣಗುತ್ತದೆ. ಈ ಸಂದರ್ಭದಲ್ಲಿ, ಮುಖದ ಮೇಲೆ ಮಾಯಿಶ್ಚರೈಸರ್ ಬಳಸಿ. ಸನ್‌ಸ್ಕ್ರೀನ್ ಸಾಮಾನ್ಯವಾಗಿ ಜನರು ತುಂಬಾ ಬಿಸಿಲು ಇರುವಾಗ ಅಥವಾ ಮನೆಯಿಂದ ಹೊರಗೆ ಹೋಗುವಾಗ ಮಾತ್ರ ಸನ್‌ಸ್ಕ್ರೀನ್ ಅನ್ನು ಅನ್ವಯಿಸಬೇಕು ಎಂದು ಭಾವಿಸುತ್ತಾರೆ. ಆದರೆ ಚಳಿಗಾಲದಲ್ಲಿಯು ಹೊರಗೆ ಹೋಗುವಾಗ ಸನ್‌ಸ್ಕ್ರೀನ್ ಅನ್ನು ಬಳಸಬೇಕು. ಜೇನು ತುಪ್ಪ ಚಳಿಗಾಲದಲ್ಲಿ ಜೇನು ತುಪ್ಪವನ್ನು…

Read More

ಕೆಎನ್ಎನ್ಡಿಜಿಟಲ್ ಡೆಸ್ಕ್ : ಅನೇಕ ಜನರು ಬ್ಯಾಂಕುಗಳಿಂದ ಸಾಲ ಪಡೆಯುತ್ತಾರೆ. ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ, ಹೆಚ್ಚು ಹೆಚ್ಚು ಜನರು ಗೃಹ ಸಾಲಗಳನ್ನ ತೆಗೆದುಕೊಳ್ಳುತ್ತಿದ್ದಾರೆ. ನೀವು ನಿಮ್ಮ ಸ್ವಂತ ಮನೆ ಖರೀದಿಸಲು ಬಯಸಿದ್ರೆ, ಗೃಹ ಸಾಲವನ್ನ ತೆಗೆದುಕೊಳ್ಳುವುದು ಒಳ್ಳೆಯದು. ಮನೆಯನ್ನ ನಿರ್ಮಿಸುವುದು ಮತ್ತು ಖರೀದಿಸುವುದು ಗೃಹ ಸಾಲದೊಂದಿಗೆ, ನೀವು ಸುಲಭವಾಗಿ ಮನೆಯನ್ನ ನಿರ್ಮಿಸಬಹುದು. ಆದಾಗ್ಯೂ, ಬ್ಯಾಂಕುಗಳಿಂದ ಪಡೆದ ಸಾಲಗಳನ್ನ ಪಾವತಿಸದಿದ್ದರೆ ಕೆಲವೊಮ್ಮೆ ಅದು ದೊಡ್ಡ ಸಮಸ್ಯೆಯಾಗಲಿದೆ. ಅವುಗಳ ಮೇಲಿನ ಕಂತುಗಳು ಮತ್ತು ಬಡ್ಡಿಯನ್ನ ಹೆಚ್ಚು ಪಾವತಿಸಬೇಕಾಗುತ್ತದೆ. ಹಾಗಿದ್ರೆ, ನೀವು ಪಾವತಿಸದಿದ್ದರೆ ಏನಾಗುತ್ತದೆ.? ಸಾಮಾನ್ಯವಾಗಿ ಮನೆಯಲ್ಲಿ ಕೆಲವು ಸಮಸ್ಯೆಗಳಿಂದಾಗಿ, ಕೆಲವೊಮ್ಮೆ ಒಂದು ಅಥವಾ ಎರಡು ಇಎಂಐಗಳು ವಿಳಂಬವಾಗುತ್ತವೆ. ಆಗ ನೀವು ಬ್ಯಾಂಕಿನಿಂದ ಒತ್ತಡವನ್ನ ಪಡೆಯುತ್ತೀರಿ. ಆದ್ರೆ, ಸತತ ಮೂರು ತಿಂಗಳು ಇಎಂಐ ಪಾವತಿಯಲ್ಲಿ ಸಮಸ್ಯೆ ಇದ್ದರೆ, ಅದು ಒಂದು ಸಮಸ್ಯೆಯಾಗಿದೆ. ನೋಟಿಸ್ ಜಾರಿ ಮಾಡಲಾಗುವುದು. ಅದರ ನಂತರವೂ ನೀವು ಪ್ರತಿಕ್ರಿಯಿಸದಿದ್ದರೆ, ನಿಮ್ಮನ್ನು ದಿವಾಳಿ ಎಂದು ಘೋಷಿಸಲಾಗುತ್ತದೆ ಮತ್ತು ನೋಟಿಸ್’ಗಳನ್ನ ನೀಡಲಾಗುತ್ತದೆ. ಇದು ಸಂಭವಿಸಿದರೆ, ಸಿಬಿಲ್…

Read More

ಚಾಮರಾಜನಗರ: ಜಿಲ್ಲೆಯ ಬೆಟ್ಟದಮಾದನಹಳ್ಳಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಇದೀಗ ಕಾಡಾನೆ ದಾಳಿಯಿಂದ ವ್ಯಕ್ತಿಯ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ. ರೈತ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡಾನೆಯೊಂದು ಏಕಾಏಕಿ ದಾಳಿ ಮಾಡಿದೆ. ಪರಿಣಾಮ​ ದೇವರಾಜ್​ ಗಂಭೀರವಾಗಿ ಗಾಯಗೊಂಡಿದ್ದಾರೆ.ದಾಳಿ ಮಾಡಿದ ಬಳಿಕವು ಆನೆ ಬೈಕ್ ಮೇಲೆ ಮುಗಿಬಿದ್ದು ಬೈಕ್​ ಸಂಪೂರ್ಣ ಜಖಂ ಮಾಡಿದೆ.ಸದ್ಯ ಬೆಟ್ಟದಮಾದಹಳ್ಳಿ ಗ್ರಾಮದ ಗುರು ಎಂಬವರ ಬಾಳೆತೋಟದಲ್ಲಿ ಸಲಗ ಬೀಟು ಬಿಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.ಸತತವಾಗಿ ಕಾಡಾನೆ ದಾಳಿ ಮಾಡುತ್ತಿದ್ದು, ಆನೆಗಳು ಜಮೀನಿನತ್ತ ನುಗ್ಗಿ ಬರುತ್ತಿವೆ ಎಂದು ರೈತರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. https://kannadanewsnow.com/kannada/do-you-drink-cold-water-in-winters-so-this-risk-is-high/

Read More

ಬೆಂಗಳೂರು : ಬಿಜೆಪಿ ಎಂದರೆ ಮೂರೂ ಬಿಟ್ಟಿರುವ ಪಕ್ಷ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ. ಅರವಿಂದ್ ಲಿಂಬಾವಳಿ ವಿಚಾರವಾಗಿ ಕಾಂಗ್ರೆಸ್ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ಕಿಡಿಕಾರಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಬಿಜೆಪಿ ಎಂದರೆ ಮೂರೂ ಬಿಟ್ಟಿರುವ ಪಕ್ಷ , ಬಿಟ್ಟಿರುವ ಮೂರು – ಮಾನ, ಮರ್ಯಾದೆ, ನೈತಿಕತೆ. ಇಟ್ಟುಕೊಂಡಿರುವ ಮೂರು – ಮೋಸ, ವಂಚನೆ, ದ್ರೋಹ. ಉದ್ಯಮಿಗೆ ವಂಚಿಸಿ ಆತ್ಮಹತ್ಯೆಗೆ ಕಾರಣವಾದ ಶಾಸಕ ಅರವಿಂದ್ ಲಿಂಬಾವಳಿ ವಿರುದ್ಧ ಕ್ರಮ ಕೈಗೊಳ್ಳದೆ ನೈತಿಕತೆ ಇಲ್ಲದ ಪಕ್ಷ ಎಂಬುದನ್ನು ತೋರಿಸಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. https://kannadanewsnow.com/kannada/fir-against-former-minister-aravind-limbavali-in-praveen-suicide-case-do-you-know-what-he-said-about-it/ https://twitter.com/INCKarnataka/status/1609826497560473603 https://kannadanewsnow.com/kannada/bigg-news-state-govt-promises-discussion-on-implementation-of-old-pension-end-of-14-day-dharna-satyagraha/

Read More

ಬೆಂಗಳೂರು : ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಡೆತ್‌ ನೋಟ್‌ ನಲ್ಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಹೆಸರು ಸೇರಿದಂತೆ  ಆರು ಜನರ ವಿರುದ್ಧ ಎಫ್‌ ಐಆರ್‌ ದಾಖಲಾದ ಬೆನ್ನಲ್ಲೆ ಇಂದು ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸುದ್ದಿಗೋಷ್ಠಿ ನಡೆಸಿದ್ದಾರೆ https://kannadanewsnow.com/kannada/fir-against-former-minister-aravind-limbavali-in-praveen-suicide-case-do-you-know-what-he-said-about-it/ ಸುದ್ದಿಗಾರರೊಂದಿಗೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಪ್ರದೀಪ್‌ನ ಆತ್ಮಕ್ಕೆ ಶಾಂತಿ ಸಿಗಲಿ  ಆಥ್ಮಹತ್ಯೆಗೆ ಶರಣಾದ ಪ್ರದೀಪ್‌ ನಮ್ಮ ಕಾರ್ಯಕರ್ತನೇ ಆಗಿದ್ದಾನೆ. ಚುನಾವಣೆಯಲ್ಲಿ ಸೋಷಿಯಲ್‌ ಮೀಡಿಯಾ ಗುತ್ತಿಗೆ ತೆಗೆದುಕೊಂಡಿದ್ದನು. ಈತ ವಾರ್ಡ್‌ ಮಟ್ಟದಲ್ಲಿಪ್ರವೀಣ್‌  ಉತ್ತಮ ಕೆಲಸ ಮಾಡುತ್ತಿದ್ದನು. ಜೂನ್‌ ಜುಲೈನಲ್ಲಿ ನಮ್ಮ ಪಕ್ಷದ ಕಚೇರಿಗೆ ಬಂದಿದ್ದನು . ಜನತಾ ದರ್ಶನ ವೇಳೆ ನನ್ನನ್ನು ಭೇಟಿಯಾಗಿದ್ದು ನಿಜ. ನನಗೆ ಸಮಸ್ಯೆಯಾಗಿದೆ ಎಂದು ನನ್ನ ಬಳಿ ಹೇಳಿಕೊಂಡಿದ್ದನು. ಆತ ನೀಡಿದ ಸಂಖ್ಯೆಗೆ ಹಣ ನೀಡುವಂತೆ ಹೇಳಿದ್ದೆನೆ. ಕೊರೊನಾ ಹಿನ್ನೆಲೆ ಸ್ವಲ್ಪ ಸಮಯ ಕಾಯುವಂತೆ ಹೇಳಿದ್ದೆ. ಪರಸ್ಪರ ಕೂತು ಚರ್ಚೆ ಮಾಡಿ ಸಮಸ್ಯೆ ಬಗೆ ಹರಿಸಿಕೊಳ್ಳುವಂತೆ…

Read More

ಬೆಂಗಳೂರು : ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರರ ಸಂಘ ನಗರ ಪ್ರೀಂಡಂ ಪಾರ್ಕ್ ನಲ್ಲಿ ನಡೆಸುತ್ತಿದ್ದ ಪ್ರತಿಭಟನೆ ಅಂತ್ಯವಾಗಿದೆ. ಹಳೆಯ ಪಿಂಚಣಿ ಯೋಜನೆ ಮರು ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ರಾಜ್ಯ ಸರ್ಕಾರ ಭರವಸೆ ನೀಡಿದ ಹಿನ್ನೆಲೆ ಎನ್ ಪಿ ಎಸ್ ನೌಕರರ ಸಂಘ ನಗರ ಪ್ರೀಂಡಂ ಪಾರ್ಕ್ ನಲ್ಲಿ ನಡೆಸುತ್ತಿದ್ದ ಪ್ರತಿಭಟನೆ ಕೈ ಬಿಟ್ಟಿದೆ. ಸಿಎಂ ಬೊಮ್ಮಾಯಿ ಸೂಚನೆಯಂತೆ ಪ್ರತಿಭಟನಾ ಸ್ಥಳಕ್ಕೆ ಸಚಿವ ಸುಧಾಕರ್ ಇಂದು ಆಗಮಿಸಿ ಮಾತನಾಡಿದರು ಎನ್ ಪಿ ಎಸ್ ರದ್ದಿನ ಕುರಿತು ಸಿಎಂ ಸಂಘದ ಪದಾಧಿಕಾರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ ಮತ್ತು ವಿಷಯವನ್ನು ಮುಂದಿನ ಬಜೆಟ್ ಅಧಿವೇಶನದಲ್ಲಿ ಚರ್ಚಿಸುವ ಕುರಿತು ತೀರ್ಮಾನ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆ ಎನ್ ಪಿ ಎಸ್ ನೌಕರರ ಸಂಘ ನಗರ ಪ್ರೀಂಡಂ ಪಾರ್ಕ್ ನಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ನಿಲ್ಲಿಸಿದೆ. ಬಳಿಕ ಸುದ್ದಿಗಾರರ…

Read More

ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರದೀಪ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅವರು ಏನ್ ಹೇಳಿದರು ಅಂತ ಮುಂದೆ ಓದಿ. ಇಂದು ಪ್ರವೀಣ್ ಆತ್ಮಹತ್ಯೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವಂತ ಎಫ್ಐಆರ್ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು, ಪ್ರವೀಣ್ ನಮ್ಮ ಕಾರ್ಯಕರ್ತ ಆಗಿದ್ದಾನೆ. ಆತ ಚುನಾವಣೆಯಲ್ಲಿ ಸೋಷಿಯಲ್ ಮೀಡಿಯಾದ ಗುತ್ತಿಗೆ ತೆಗೆದುಕೊಂಡಿದ್ದನು ಎಂದರು. ಪ್ರವೀಣ್ ವಾರ್ಡ್ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಂತ ಕಾರ್ಯಕರ್ತನಾಗಿದ್ದನು. ಜೂನ್, ಜುಲೈ ನಲ್ಲಿ ನಮ್ಮ ಪಕ್ಷದ ಕಚೇರಿಗೆ ಬಂದಿದ್ದನು. ಜನತಾ ದರ್ಶನದ ವೇಳೆ ನನ್ನನ್ನು ಭೇಟಿಯಾಗಿದ್ದು ನಿಜ. ನನಗೆ ಸಮಸ್ಯೆಯಾಗಿದೆ ಎಂದು ನನ್ನ ಬಳಿ ಹೇಳಿಕೊಂಡಿದ್ದನು ಎಂದು ಹೇಳಿದರು. ಪ್ರವೀಣ್ ನೀಡಿದ್ದ ಸಂಖ್ಯೆಗೆ ಪೋನ್ ಮಾಡಿ ಹಣ ನೀಡುವಂತೆ ಹೇಳಿದ್ದೆನು. ಕೊರೋನಾ ಹಿನ್ನಲೆಯಲ್ಲಿ ಸ್ವಲ್ಪ ಸಮಯ ನೀಡುವಂತೆ ಹೇಳಿದೆ. ಬಳಿಕವೂ ಪೋನ್ ಮಾಡಿ ಕೂಡಲೇ ಹಣ ನೀಡುವಂತೆ ಹೇಳಿದ್ದೆ. ಇದಾದ…

Read More